ದಿನಾಂಕ 08.02.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಶ್ರಫ್ ರವರ ಮಾವ ಮಂಗಳೂರು ನಗರದ ಕರಂಗಲ್ಪಾಡಿಯ ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದವರ ಆರೈಕೆಗೆ ಬಂದ ಪಿರ್ಯಾದಿ ಹಾಗೂ ಭಾವ ಮಹಮ್ಮದ್ ಶರೀಪ್ ರವರು ನಿನ್ನೆ ದಿನ ದಿನಾಂಕ:07.02.2014 ರಂದು ಸಂಜೆ ಸುಮಾರು 6-20 ಗಂಟೆಗೆ ಆಸ್ಪತ್ರೆಯಿಂದ ವಾಕ್ ಗೆ ಹೊರಟವರು 6-30 ಗಂಟೆಯ ಸುಮಾರಿಗೆ ಕರಂಗಲ್ಪಾಡಿಯ ಶ್ರೀ ಸುಬ್ರಮಣ್ಯ ಸಭಾ ಹಾಲ್ ರಸ್ತೆಯ ಬಲಬದಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ಬಂದ ಅಪರಿಚಿತ ಮೂರು ಜನರು ಪಿರ್ಯಾದಿಯನ್ನು ಉದ್ದೇಶಿಸಿ ಸೈಡ್ ನಿಂದ ಹೋಗಲಿಕೆ ಆಗುವುದಿಲ್ಲ ಎಂದು ಹೇಳಿ ತಡೆದು ನಿಲ್ಲಿಸಿ ಮೂರು ಜನರ ಪೈಕಿ ಒಬ್ಬಾತ ಪಿರ್ಯಾದಿಯ ಮುಖಕ್ಕೆ ಕೈಯಿಂದ ಹೊಡೆದನು ಅದೇ ಸಮಯ ಹಿಂದಿನಿಂದ ಒಬ್ಬ ಅಪರಿಚಿತ ವ್ಯಕ್ತಿ ಕೈಯಲ್ಲಿದ್ದ ತನ್ನ ಹೇಲ್ಮೆಟ್ ನಿಂದ ಬಲವಾಗಿ ತಲೆಗೆ ಹೊಡೆದಿದ್ದು ಇದರ ಪರಿಣಾಮ ರಕ್ತ ಬರುವ ಗಾಯವಾಗಿರುತ್ತದೆ, ಅಲ್ಲದೇ ಉಳಿದವರು ಪಿರ್ಯಾದಿ ಮತ್ತು ಪಿರ್ಯಾದಿ ಭಾವ ಶರೀಪ್ ರವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಅವಾಚ್ಯ ಶಬ್ದದಿಂದ ಬೈದು ಜೀವಕ್ಕೆ ಬೆದರಿಕೆ ಹಾಕಿರುತ್ತಾರೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ ಸೈಡ್ ಕೊಡದೇ ಇರುವ ವಿಚಾರದಿಂದಾಗಿ ಈ ಕೃತ್ಯ ನಡೆದಿರುವುದಾಗಿದೆ.
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಸಂತೋಶ್ ಎಂಬಾತನು ಸರಕಾರಿ ಹುದ್ದೆಯಾದ ಗ್ರಾಮ ಲೆಕ್ಕಾದಿಕಾರಿ ಕೆಲಸವನ್ನು ಅಕ್ರಮವಾಗಿ ಪಡೆಯುವ ಉದ್ದೇಶದಿಂದ ಗ್ರಾಮ ಲೆಕ್ಕಾದಿಕಾರಿ ಹುದ್ದೆಗೆ ಕನಿಷ್ಟ ವಿದ್ಯಾರ್ಹತೆಯಾಗಿರುವ ಪಿಯುಸಿಯ ನಕಲಿ ಅಂಕ ಪಟ್ಟಿಯನ್ನು ತಯಾರಿಸಿ ನೇರ ನೇಮಕಾತಿ ಗ್ರಾಮ ಲೆಕ್ಕಿಗರು ಸುರತ್ಕಲ್ ನಾಡ ಕಛೇರಿ ಇಲ್ಲಿಗೆ ನೇಮಕಾತಿ ಆದೇಶ ಪಡೆದು ಅದರಂತೆ ದಿನಾಂಕ 19-02-2013 ರಂದು ಪೂರ್ವಾಹ್ನ ಮೇಲಿನ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಯವರು ಗ್ರಾಮ ಲೆಕ್ಕಿಗರ ಪಿಯುಸಿ ಪರೀಕ್ಷೆ ಉತ್ತೀರ್ಣರಾದ ಅಂಕ ಪಟ್ಟಿ ಮತ್ತು ಮೂಲ ದಾಖಲೆಗಳ ಪರಿಶೀಲನೆಗಾಗಿ ಮತ್ತು ನೈಜತೆಯ ಬಗ್ಗೆ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರಿಗೆ ಕಳುಹಿಸಿದ್ದು ಆರೋಪಿ ಸಂತೋಷ್ ಖಾರ್ವಿ ಇವರು ನೇರ ನೇಮಕಾತಿಗಾಗಿ ಸಲ್ಲಿಸಿದ ಪಿ.ಯು.ಸಿ ತೇರ್ಗಡೆ ಹೊಂದಿದ ಅಂಕಪಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೀಡಲಾದ ಅಂಕಪಟ್ಟಿಗೆ ತಾಳೆ ಆಗದೇ ಇದ್ದು, ಪರೀಕ್ಷಾರ್ಥಿ ಗ್ರಾಮ ಲೆಕ್ಕಿಗರಾದ ಸಂತೋಷ್ ಖಾರ್ವಿಯವರು ನೇಮಕಾತಿಗಾಗಿ ನಕಲಿ ಅಂಕಪಟ್ಟಿ ಸಲ್ಲಿಸಿ ಸರಕಾರಕ್ಕೆ ವಂಚನೆ ಮಾಡಿ ಅಕ್ರಮವಾಗಿ ಸರಕಾರಿ ಕೆಲಸ ಪಡೆಯುವರೇ ಯತ್ನಿಸಿದ್ದು ಆತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವರೇ ಮಂಗಳೂರು ತಾಲ್ಲೂಕು ತಹಶೀಲ್ದರಾರರು ಪಿರ್ಯಾದಿ ನೀಡರುವುದಾಗಿದೆ.
3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-2014 ರಂದು ಪಿರ್ಯಾದಿದಾರರಾದ ಶ್ರೀ ಯಶೋ ಕುಮಾರ್ ರವರು ತನ್ನ ಬಾಬ್ತು ಬೈಕ್ ನಂಬ್ರ KA 21 R 2868 ನೇದರಲ್ಲಿ ಜಯಂತ್ ಗೋಖಲೆ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು- ಬಿ.ಸಿ. ರೋಡ್ ರಸ್ತೆಯಲ್ಲಿ ಹೋಗುತ್ತಾ ಸಹ್ಯಾದ್ರಿ ಕಾಲೇಜ್ ಗೆ ಹೋಗುವ ಸಲುವಾಗಿ ಬೆಳಿಗ್ಗೆ 8-45 ಗಂಟೆ ವೇಳೆಗೆ ಅಡ್ಯಾರ್ ಸೋಮನಾಥ ಕಟ್ಟೆಯ ಬಳಿ ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ರಸ್ತೆಗೆಬೈಕನ್ನು ಕೊಂಡೊಯ್ಯುವ ಸಲುವಾಗಿ ಬೈಕನ್ನು ಬಲಕ್ಕೆ ತಿರುಗಿಸುವ ಬಗ್ಗೆ ಇಂಡಿಕೇಟರ್ ಹಾಕಿ ಬೈಕನ್ನು ನಿಧಾನಿಸಿದಾಗ ಬಲಬದಿಯಿಂದ ಅಂದರೆ ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬೈಕ್ ನಂಬ್ರ ಕೆಎ 19-ಇಡಿ-2858 ನೇಯದನ್ನುಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ 2ಬೈಕ್ಗಳು ಅಡ್ಡಬಿದ್ದಿದ್ದು ಈ ಅಪಘಾತದಿಂದ ಪಿರ್ಯಾದಿದಾರರ ಬಲಕಾಲು, ಬಲಭುಜಕ್ಕೆ ಮತ್ತು ಜಯಂತ್ ಗೋಖಲೆಯವರ ಬಲಕಾಲಿಗೆ ಮೂಳೆ ಮುರಿತದ ಜಖಂ ಉಂಟಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
No comments:
Post a Comment