Monday, February 10, 2014

Daily Crime Reports 10-02-2014

ದೈನಂದಿನ ಅಪರಾದ ವರದಿ.
ದಿನಾಂಕ 10.02.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
2
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ       
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
0


























1.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 9.2.2014  ರಂದು ಸಂಜೆ 16.30 ಗಂಟೆ ಸಮಯಕ್ಕೆ  ಮುಲ್ಕಿ  ಸೈಂಟ್ ಆನ್ಸ್ ನರ್ಸಿಂಗ್ ಸ್ಕೂಲ್ ವಿದ್ಯಾರ್ಥಿಗಳಾದ  ಪ್ರಕಾಶ ಗಾಮಿತ್ , ಜಿಗ್ನೇಶ್  ಕುಮಾರ್, ವಿರಾಲ್, ನಿತೇಶ್, ಸುಮ್ಮರ್ ಲಾಂಗ್  ಹಾಗೂ  ಇತರ ವಿದ್ಯಾರ್ಥಿಗಳು  ಬಪ್ಪನಾಡು ಗ್ರಾಮದ  ಕೊಳಚೆಕಂಬಳ ಎಂಬಲ್ಲಿರುವ ಶಾಂಭವಿ ನದಿಯ ಅಳಿವೆ  ಬಾಗಿಲಿನ  ನೀರಿನಲ್ಲಿ  ಸ್ನಾನ  ಮಾಡುತ್ತಾ  ಆಟ ಆಡುತ್ತಿರುವಾಗ  ನೀರಿನ ಸೆಳೆತಕ್ಕೆ  ಜಿಗ್ನೇಶ್  ಕುಮಾರ್  (18) ಹಾಗೂ  ವಿರಾಲ್ ಎಂಬವರು  ನೀರಿನಲ್ಲಿ  ಕೊಚ್ಚಿ ಹೋಗಿದ್ದು ಪೈಕಿ ವಿರಾಲ್ ನನ್ನು  ಸ್ಥಳೀಯ ಭೋಟ್ ನವರು ಮೇಲಕ್ಕೆ ಎತ್ತಿ ರಕ್ಷಿಸಿದ್ದು ಜಿಗ್ನೇಶ್  ಕುಮಾರ್  ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿರುವುದಾಗಿದೆ.


2.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ    9-2-2014 ರಂದು ಬೆಳಿಗ್ಗೆ 11-00 ಗಂಟೆಯ ಸಮಯಕ್ಕೆ ತನ್ನ ಸ್ನೇಹಿತನೊಂದಿಗೆ ಮಂಗಳೂರು ನಗರದ ಜೆಪ್ಪು ಗುಜ್ಜರಕೆರೆಯ ರಾಘವ ಪೂಜಾರಿ ಎಂಬವರ ಗೂಡಂಗಡಿಯ ಹತ್ತಿರ  ಪಿರ್ಯಾದಿದಾರರಾದ ಶ್ರೀ ಜಯರಾಜ್ ರವರು ನಿಂತು ಕೊಂಡು ಗುರುರಾಜ್ ಎಂಬವರ ಜೊತೆ ಮಾತನಾಡುತ್ತಿದ್ದ ಸಮಯ, ಪಿರ್ಯಾದಿದಾರರಿಗೆ ಪರಿಚಯ ಇರುವ ಧನರಾಜ್, ಪ್ರತಾಪ್ , ಬೆನ್ನ @ ಕಾರ್ತಿಕ್ ಮತ್ತು ಇನ್ನೋರ್ವ  ಅಪರಿಚಿತ ವ್ಯಕ್ತಿಗಳು  ಮೋಟಾರ್ ಸೈಕಲ್ ನಂಬ್ರ ಕೆಎ 19 ಯು 5545 ಮತ್ತು ಇನ್ನೊಂದು ಮೋಟಾರ್ ಸೈಕಲ್ ನಲ್ಲಿ  ಬಂದು, ಪಿರ್ಯಾದಿದಾರರನ್ನು ಕೊಲೆ ಮಾಡುವ  ಉದ್ದೇಶದಿಂದ ಧನರಾಜ್ ನು ಚೂರಿಯನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು, ಇದೇ ಚೂರಿಯಿಂದ ಕುತ್ತಿ ಕೊಲೆ ಮಾಡುತ್ತೇನೆಂದು ಹೇಳಿ ಪಿರ್ಯಾದಿದಾರರ ಎದೆಯ ಭಾಗಕ್ಕೆ ಚೂರಿಯಿಂದ ತಿವಿದಾಗ, ಅದನ್ನು ತಪ್ಪಿಸಲು ಒಂದು ಹೆಜ್ಜೆ ಹಿಂದೆ ಸರಿದಾಗ, ಚೂರಿಯ ಏಟು  ಹೊಟ್ಟೆಯ ಎಡ ಭಾಗಕ್ಕೆ ತಾಗಿ ರಕ್ತ ಗಾಯ ಉಂಟಾಗಿರುವುದಲ್ಲದೇ, ಇತರರು ಪಿರ್ಯಾದಿದಾರರನ್ನು ಹಿಡಿದುಕೊಂಡು ಅವರುಗಳ ಪೈಕಿ ಕೌಶಿಕ್ ಎಂಬಾತನು ಪಿರ್ಯಾದಿದಾರರ ತಲೆಯ ಕೂದಲನ್ನು ಹಿಡಿದು ಬಗ್ಗಿಸಿ,  ಆತನ ಬಲ ಕೈಯ ಮೊಣಗಂಟಿನಿಂದ ಗುದ್ದಿ ಹಲ್ಲೆ ಮಾಡಿದಾಗ, ನೋವನ್ನು ತಡೆಯಲಾಗದೇ ಬೊಬ್ಬೆ ಹೊಡೆದಾಗ, ಇತರರು ಹತ್ತಿರಕ್ಕೆ ಬರುವುದನ್ನು ಕಂಡು ಓಡಿ ಹೋಗುವ ಸಮಯ ಪಕ್ಕದಲ್ಲಿದ್ದ  ರಾಘವ ಎಂಬವರ ಗೂಡಂಗಡಿಗೆ ನುಗ್ಗಿ ಅದರಲ್ಲಿದ್ದ ತಿಂಡಿ ತಿನಿಸುಗಳಿದ್ದ ಭರಣಿಗಳನ್ನು, ಸೋಡ ಬಾಟ್ಲಿಗಳನ್ನು ಹುಡಿ ಮಾಡಿ ಬಳಿಕ ಧನರಾಜ್ ನು ಕೆಂಪು ಬಣ್ಣದ  ರಿಡ್ಜ್ ಕಾರಿನಲ್ಲಿ,  ಮತ್ತು ಇತರರು ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿರುವುದಾಗಿದೆ.


3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09-02-2014 ರಂದು ಪಿರ್ಯಾದಿದಾರರಾದ ಶ್ರೀ ಮನು ಕುಮಾರ್ ರವರು ಪುತ್ತಿಗೆ ಆಳ್ವಾಸ್ ಹಾಸ್ಟೆಲ್ ನಿಂದ ತನ್ನ ಸ್ನೇಹಿತರಾದ ಅಕ್ಷಯ್ ಕುಮಾರ್, ವರುಣ್ , ಪ್ರಜೀತ್ ,ನಿಖಿಲ್, ಕಾರ್ತಿಕ್,ಶ್ರೀಹರಿ ಎಂಬವರೊಂದಿಗೆ ಅಟೋರಿಕ್ಷಾ ನಂ ಕೆ 19 ಎಎ 2630 ನೇಯದರಲ್ಲಿ ಕುಳಿತುಕೊಂಡು ಪುತ್ತಿಗೆಯಿಂದ ಮೂಡಬಿದ್ರೆ ಕಡೆಗೆ ಅದರ ಚಾಲಕ ಇಸ್ಮಾಯಿಲ್ ಶಾಫಿ ಎಂಬವನು ಅತೀ ವೇಗ ಹಾಗೂ ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ಸೂಮಾರು 4.45 ಗಂಟೆಗೆ ಗಾಂಧಿನಗರ ಎಂಬಲ್ಲಿ ರಿಕ್ಷಾ ಮಗುಚಿ ಬಿದ್ದುದರ ಪರಿಣಾಮ ಪಿರ್ಯಾಧಿದಾರರಿಗೆ ಬಲ ಕಣ್ಣಿನ  ಉಬ್ಬಿನ ಮೇಲೆ ಗುದ್ದಿದ ಗಾಯ, ಶ್ರೀಹರಿ ಎಂಬವನಿಗೆ   ಎಡಬುಜಕ್ಕೆ ತೀವೃವಾದ ಗುದ್ದಿದ ಗಾಯ ಎಡಕಾಲಿಗೆ ತರಚಿದ ಗಾಯ ಅಕ್ಷಯ ಕುಮಾರ್ ಎಂಬವನಿಗೆ ಎಡಬುಜಕ್ಕೆ ತರಚಿದ ಗಾಯ ಪ್ರಜೀತ್ ಎಂಬವನಿಗೆ ತಲೆಗೆ ತೀವೃ ಗಾಯ ,ವರುಣ್ ಎಂಬವನಿಗೆ ಎಡಕೈ ಕಂಕುಳಿಗೆ ,ಎಡಕಾಲಿನ ಮೊಣಗಂಟಿನ ರಕ್ತ ಗಾಯ ನಿಖಿಲ್ ಎಂಬವನಿಗೆ  ಕುತ್ತಿಗೆ ಬಳಿ ರಕ್ತ ಗಾಯ ಕಾರ್ತಿಕ್ ಎಂಬವನಿಗೆ ಗುದ್ದಿದ ಗಾಯವಾಗಿರುತ್ತದೆ. ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪ್ರಜೀತ್ ಎಂಬವನು ಜೆ ಅಸ್ಪತ್ರೆಗೆ ದಾಖಲಾಗಿದ್ದು ಉಳಿದವರು ಆಳ್ವಾಸ್ ಅಸ್ಪತ್ರೆಗೆ ದಾಖಲಾಗಿರುವುದಾಗಿದೆ.

4.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-2014 ರಂದು ಬೆಳಿಗ್ಗೆ 10-00 ಗಂಟೆಯಿಂದ  ದಿನಾಂಕ 09-02-2014 ರಾತ್ರಿ 8-30 ಗಂಟೆಯ ಮಧ್ಯೆ ಮಂಗಳೂರು ನಗರದ ಬಿಜೈ, ಪಿಂಟೋಸ್ ಲೇನ್ ನಲ್ಲಿರುವ ಆರ್.ಜಿ. ಕೃಪಾ  ಎಂಬ  ಪಿರ್ಯಾದಿದಾರರಾದ ಶ್ರೀ ಎಸ್. ಕುಮಾರ್ ಶೇಟ್ ರವರ ವಾಸ್ತವ್ಯದ ಮನೆಯ  ವಾಸ್ತವ್ಯದ ಒಂದನೆ ಮಹಡಿಯ ಹಾಲ್ ಬಾಗಿಲಿನ ಒಂದು ಹಲಗೆಯನ್ನು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಮೂಲಕ  ಒಳ ಪ್ರವೇಶಿಸಿದ ಯಾರೋ ಕಳ್ಳರು ಮನೆಯ ಬೆಡ್ ರೂಮಿನಲ್ಲಿ ಇರಿಸಿದ್ದ  ಮರದ ಹಾಗೂ ಕಬ್ಬಿಣದ ಕಪಾಟನ್ನು ಹರಿತವಾದ ಆಯುಧದಿಂದ ಬಲಾತ್ಕಾರವಾಗಿ ಮೀಟಿ ತೆರೆದು ಕಪಾಟಿನಲ್ಲಿದ್ದ ಬಟ್ಟೆಗಳನ್ನು ಚೆಲ್ಲಾ ಪಿಲ್ಲಿ ಯಾಗಿ ಬೆಡ್ ಮೇಲೆ ಹಾಕಿ ಬೆಲೆಬಾಳುವ ಸೊತ್ತುಗಳಿಗಾಗಿ ಹುಡುಕಾಡಿ ಮಾಸ್ಟರ್ ಬೆಡ್ ರೂಮಿನ ಲಾಕರ್ ನಲ್ಲಿರಿಸಿದ  ವಿವಿಧ ನಮೂನೆಯ ಸುಮಾರು 180 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ. 5,90,000/- ಆಗಬಹುದು.

5.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-02-2014 ರಂದು ಮಂಗಳೂರು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ'ಸೋಜಾ, ರವರಿಗೆ ಸಿಸಿಬಿ ಕಛೇರಿಯಲ್ಲಿರುವ ಸಮಯ ಮಂಗಳೂರು ಸೆಂಟ್ರಲ್ ಮಾರ್ಕೆಟ್ ರೂಪವಾಣಿ ಥಿಯೇಟರ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಮೇಲಾಧಿಕಾರಿಯವರಿಗೆ ಮಾಹಿತಿ ನೀಡಿ ಅನುಮತಿ ಪಡೆದು ಸಿಬ್ಬಂಧಿಗಳೊಂದಿಗೆ ಮಂಗಳೂರು ಸೆಂಟ್ರಲ್ ಮಾರ್ಕೆಟ್ ರೂಪವಾಣಿ ಥಿಯೇಟರ್ ಗೆ ಗಾಂಜಾ ಮಾರಟ ಮಾಡುತ್ತಿದ್ದ ಬಬ್ಲು @ ಬಬ್ಲು ಖಾರ್ಜಿ, ಪ್ರಾಯ 33 ವರ್ಷ, ತಂದೆ: ಸತ್ಯ, ವಾಸ: ಬೊಂಡಾವಣಾ ಗ್ರಾಮ, ವಣ್ಣಿವಲಾ ಅಂಚೆ, ಗೋಜಾವತ್ ಜಿಲ್ಲೆ, ಒರಿಸ್ಸಾ ರಾಜ್ಯ ಮತ್ತು ವೆಂಕಟೇಶ್ ಪ್ರಾಯ 33 ವರ್ಷ, ತಂದೆ: ಮುನಿಸ್ವಾಮಿ, ವಾಸ: ಶಿವನಗರ, ಮೂಡುಶೆಡ್ಡೆ, ಮಂಗಳೂರು ಎಂಬವರನ್ನು ದಸ್ತಗಿರಿ ಮಾಡಿ ಸುಮಾರು 2070 ಗ್ರಾಂ ತೂಕದ ಅಂದಾಜು ಬೆಲೆ ರೂ. 41,400/- ಬೆಲೆಬಾಳುವ ಗಾಂಜಾವನ್ನು  ಹಾಗೂ ಆರೋಪಿಗಳ ವಶದಲ್ಲಿದ್ದ ನೋಕಿಯಾ ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್, YXYEL ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಸ್ವಾಧೀನಪಡಿಸಿಕೊಂಡು ಮಂಗಳೂರು ಉತ್ತರ ಠಾಣೆಗೆ ಕ್ರಮ ಕೈಗೊಳ್ಳುವಂತೆ ಲಿಖಿತ ಪಿರ್ಯಾದಿ ನೀಡಿರುವುದಾಗಿದೆ.

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-02-2014 ರಂದು ಪಿರ್ಯಾದಿದಾರರಾದ ಶ್ರೀ ಸುನೀಲ್ ರವರು ತನ್ನ ಬಾಬ್ತು ಬೈಕ್ ನಂಬ್ರ KA-19-EC-4473 ನೇದರಲ್ಲಿ ಅವರ ಗೆಳೆಯ ನವೀನ್ ರವರೊಂದಿಗೆ ತೊಕ್ಕಟ್ಟು ಹೋಗುವರೇ ಹೋಗುತ್ತಾ  ಕೋಟೆಕಾರು ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಸಮಯ ಸುಮಾರು ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರ ಹಿಂದುಗಡೆಯಿಂದ AP-25-W-5360 ನೇದರ ಲಾರಿ ಚಾಲಕನು ತನ್ನ ಲಾರಿಯನ್ನು ಪಿರ್ಯಾದಿದಾರರ ಬೈಕನ್ನು ಎಡಗಡೆಯಿಂದ ಓವರೆಟೇಕ್ ಮಾಡುವ ಸಮಯ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಮೂಲೆ ಮುರಿತದ ಗಾಯವಾಗಿರುತ್ತದೆ. ಅಲ್ಲದೇ ಬಲಕೈಗೆ, ತಲೆಗೆ, ಎಡಕಾಲಿಗೆ ರಕ್ತ ಗಾಯವಾಗಿರುತ್ತದೆ. ಸಹಸವಾರರಾಗಿ ಇದ್ದ ನವೀನ್ರವರಿಗೆ ಲಾರಿಯ ಹಿಂಬದಿಯ ಚಕ್ರ ಹರಿದು ಎರಡು ಕಾಲಿಗೆ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

7. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-02-2014 ರಂದು ಪಿರ್ಯಾದಿದಾರರಾದ ಶ್ರೀ ಜನಾರ್ಧನ ಕುಲಾಲ್ ರವರು ತನ್ನ ಬಾಬ್ತು M – 80 ನಂಬ್ರ KA 19 A 2087 ನೇದನ್ನು ತನ್ನ ಮನೆಯಿಂದ ವಾಮಂಜೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ ಸುಮಾರು  11-00 ಗಂಟೆ ವೇಳೆಗೆ ಪರಾರಿ ಬಳಿ ತಲುಪಿದಾಗ ಎದುರುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಗುರುಪುರ ಕಡೆಗೆ  KA 19 MC 4995 ನೇ ನಂಬ್ರದ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ M – 80 ಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರ ಬಲಕಾಲಿನ ತೊಡೆ, ಕೋಲುಕಾಲಿಗೆ ಎಲುಬು ಮುರಿತದ ಜಖಂ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

No comments:

Post a Comment