Thursday, February 6, 2014

Daily Crime Reports 06-01-2014

ದೈನಂದಿನ ಅಪರಾದ ವರದಿ.

ದಿನಾಂಕ 06.02.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.01.2014 ರಂದು ಫಿರ್ಯಾದಿದಾರರಾದ ಶ್ರೀಮತಿ ನಫೀಸಾ ರವರು ತನ್ನ ಸಣ್ಣ ಮಗ ಅಬೂಬಕ್ಕರ್ರವರ ಜೊತೆ ಮನೆಯಿಂದ ಬಸ್ಸಿನಲ್ಲಿ ಬಂದು ನಾಟೆಕಲ್ನಲ್ಲಿ ಇಳಿದು ತನ್ನ ದೊಡ್ಡ ಮಗನ ಮನೆಯಾದ ನಾಟೆಕಲ್ಸೈಟ್ಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮದ್ಯಾಹ್ನ ಸುಮಾರು 3:00 ಗಂಟೆಯ ಸಮಯಕ್ಕೆ ಕೆಎಲ್‌-14ಜಿ-495 ನೇ ಮೋಟಾರ್ಸೈಕಲ್ನ್ನು ಅದರ ಸವಾರ ಪದ್ಮನಾಭ ಎಂಬಾತನು ನಾಟೆಕಲ್ಜಂಕ್ಷನ್ನಡೆಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಸೊಂಟಕ್ಕೆ ತೀವ್ರ ಸ್ವರೂಪದ ಗುದ್ದಿದ ನೋವುಂಟಾಗಿದ್ದು, ಗಾಯಾಳು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 04.02.2014 ರಂದು ಪಿರ್ಯಾದಿದಾರರು ಗೆಳೆಯನಾದ ಮಹಮ್ಮದ್ಎಂಬವರು ಸಂಬಂದಿಕರ ಮನೆಯಾದ ಕೂಳೂರಿಗೆ ಹೋಗುವಂತೆ  ವಿನಂತಿಸಿದ್ದು, ಅದರಂತೆ ಪಿರ್ಯಾದಿದಾರರು ಅವರ ಗೆಳೆಯನ ಮೋಟಾರು ಸೈಕಲ್ನಂಬ್ರ ಕೆ.-19-ಇಇ-4917 ನೇದರಲ್ಲಿ ಮಹಮ್ಮದ್ರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಾದ ಹರೇಕಳದಿಂದ ಹೊರಟು ಕುಂಟಿಕಾನ ಮಾರ್ಗವಾಗಿ ಕೋಡಿಕಲ್ಕ್ರಾಸ್ಗೆ ಸಮಯ ಸುಮಾರು ಮದ್ಯಾಹ್ನ 3:45 ಗಂಟೆಗೆ ತಲುಪಿದಾಗ, ಕೋಡಿಕಲ್ಕಟ್ಟೆಯ ಕಡೆಯಿಂದ ಕೊಟ್ಟಾರಚೌಕಿ ಕಡೆಗೆ ಒಂದು ಮಿನಿಬಸ್ನಂಬ್ರ ಕೆ.-19-ಡಿ-5457 ನೇದರ ಚಾಲಕರು ತಮ್ಮ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಮುಖ್ಯರಸ್ತೆಗೆ ಬರುವಾಗ ಯಾವುದೇ ಸೂಚನೆ ನೀಡದೆ, ನಿಧಾನಿಸದೆ ಒಮ್ಮೆಲೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರು ಸೈಕಲ್ಸದ್ರಿ ಮಿನಿಬಸ್ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರ ಮೊಹಮ್ಮದ್ರವರು ಡಾಮಾರು ರಸ್ತೆಗೆ ಬಿದ್ದದ್ದರಿಂದ ಪಿರ್ಯಾದಿದಾರರ ಎಡಕಾಲಿನ ಸೊಂಟದ ಬಳಿ ಮೂಳೆಮುರಿತದ ತೀವ್ರಗಾಯ ಹಾಗೂ ಎಡಭಾಗದ ಹಣೆಗೆ, ಬಲಕಾಲಿನ ಕೋಲುಕಾಲಿಗೆ ರಕ್ತಗಾಯ ಉಂಟಾಗಿರುತ್ತದೆ. ಸಹಸವಾರ ಮಹಮ್ಮದ್ರವರಿಗೆ ಎಡಬದಿಯ ತಲೆಗೆ ತೀವ್ರಗಾಯವಾಗಿದ್ದು, ಇಬ್ಬರನ್ನು ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಮಿನಿಬಸ್ನ ಚಾಲಕರು ಸೇರಿಕೊಂಡು ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು, ಸಹಸವಾರ ಮಹಮ್ಮದ್ಸದ್ರಿ ಆಸ್ಪತ್ರೆಯ ಐ.ಸಿ.ಯು ವಿಭಾಗದಲ್ಲಿ ಪ್ರಜ್ಷಾಹೀನ ಸ್ಥಿತಿಯಲ್ಲಿ ಇರುವುದಾಗಿದೆ.

 

3. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಸಾಗು ಎಂಬಲ್ಲಿರುವ ಪಿರ್ಯಾದಿ ಶ್ರೀಮತಿ ರಮ್ಲಾ ಬೇಗಂ ರವರ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ , ದಿನಾಂಕ 04-02-2014ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 05-02-2014 ರ ರಾತ್ರಿ 01-45 ರ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡುವ ಉದ್ದೇಶದಿಂದ ಮನೆಯ ಹಿಂಬಾಗಿಲಿನ ಬೀಗವನ್ನು ಬಲಾತ್ಕಾರದಿಂದ ಮುರಿದು ಒಳಗೆ ಪ್ರವೇಶಿಸಿ ಒಳಭಗದಲ್ಲಿರುವ ಇನ್ನೊಂದು ಬಾಗಿಲಿನ ಬೀಗವನ್ನು ಬೆಂಕಿಯಿಂದ ಸುಟ್ಟು ಒಳಪ್ರವೇಶಿಸಲು ಪ್ರಯತ್ನಿಸಿದ್ದು, ರಾತ್ರಿ 1-45 ಗಂಟೆಗೆ ಇದರ ಶಬ್ದ ಕೇಳಿದಾಗ ಪಿರ್ಯಾದಿದಾರರು ಎಚ್ಚರಗೊಂಡು ತನ್ನ ತಮ್ಮ ಅಬ್ದುಲ್ ಮಜೀದ್ರವರಿಗೆ ಪೋನ್ ಮಾಡಿ ಕರೆಯಿಸಿದಾಗ   ಕಳ್ಳರು ಪರಾರಿಯಾಗಿರುತ್ತಾರೆ.

 

4. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-14 ರಂದು ರಾತ್ರಿಯಿಂದ ಬೆಳಗಿನ ಜಾವ 06.45 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಪ್ರಾಂತ್ಯ ಗ್ರಾಮದ ಬಡಗಬಸದಿಯ ಮೇಲ್ಭಾಗದ ಕಲ್ಲು ಹಾಸುಗೆಯ ಮೇಲಿಂದ ಹತ್ತಿ ಒಳಗಿನ ಮೆಟ್ಟಿಲಿನಿಂದ ಇಳಿದು ಬಂದು ಬಾಗಿಲನ್ನು ಒಡೆದು ಬಸದಿಯ ಒಳಗೆ ಪ್ರವೇಶಿಸಿ ಒಳಗಡೆಯಿದ್ದ 2 ಕಾಣಿಕೆ ಡಬ್ಬಿಯ ಬೀಗ ಮುರಿದು ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 500/- ರೂ ಕಾಣಿಕೆ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

5. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-2014 ರಂದು 15.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಪಾಲಡ್ಕ ಗ್ರಾಮದ ಕೇಮಾರು ಎಂಬಲ್ಲಿನ ಮೂಡಾಯಿ ಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶಾರದಾ ರವರ ಮನೆಯ ದನವು ಆರೋಪಿ ಚಂದ್ರಹಾಸ. ಕೆಮಾರ, ಪಾಲಡ್ಕಾ ಗ್ರಾಮ, ಮಂಗಳೂರು ಎಂಬವರು ತೋಟಕ್ಕೆ ಹೋಗಿ ಕೃಷಿ ತಿಂದ ಬಗ್ಗೆ ಆರೋಪಿಯು ಪಿರ್ಯಾದಿದಾರರ ಮನೆಯ ಒಳಗೆ ಹೋಗಿ ಮನೆಯೊಳಗಿದ್ದ ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿ ನಿನ್ನನ್ನು ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಎಳೆದಾಡಿರುತ್ತಾನೆ.

No comments:

Post a Comment