Saturday, February 22, 2014

Daily Crime Reports 22-02-2014

ದೈನಂದಿನ ಅಪರಾದ ವರದಿ.
ದಿನಾಂಕ 22.02.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
2
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
6
ವಂಚನೆ ಪ್ರಕರಣ       
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
2

























1.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2014 ರಂದು ಫಿರ್ಯಾದುದಾರರಾದ ಶ್ರೀ ಪ್ರದ್ಯುಮ್ ರವರು ರಾತ್ರಿ ಸುಮಾರು 11-45 ಗಂಟೆಗೆ ತನ್ನ ಮಾಲಕತ್ವದ  ದ್ವಿಚಕ್ರ ವಾಹನವನ್ನು ಎಂದಿನಂತೆ ಮನೆಯ ಕಟ್ಟಡದ ಎದುರು ಹ್ಯಾಂಡ್ಲಾಕ್‌‌ ಮಾಡಿ ಪಾರ್ಕ್ಮಾಡಿ  2ನೇ ಅಂತಸ್ತಿನಲ್ಲಿರುವ ತನ್ನ ಮನೆಗೆ ಹೋಗಿದ್ದು ಮರುದಿನ ದಿನಾಂಕ 26-01-2014 ರಂದು ಬೆಳಿಗ್ಗೆ 11-00 ಗಂಟೆಗೆ ಬಂದು ನೋಡಿದಾಗ ದ್ವಿಚಕ್ರ ವಾಹನ ನಿಲ್ಲಿಸಿದ ಸ್ಥಳದಲ್ಲಿ ಇರವುದಿಲ್ಲ. ಫಿರ್ಯಾದುದಾರರು ತನ್ನ ಮೊಟಾರು ಸೈಕಲನ್ನು ವರೆಗೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.

2.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-02-2014 ರಂದು ಪಿರ್ಯಾದಿ ಮಂಗಳೂರು ನಗರ ಅಪರಾಧ ಪತ್ತೆ ವಿಭಾಗ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ'ಸೋಜಾ, ರವರಿಗೆ ಕಛೇರಿಯಲ್ಲಿರುವ ಸಮಯ 10:00 ಗಂಟೆಗೆ ಮಂಗಳೂರು ನಗರದ ಬಿಜೈ ನ್ಯೂರೋಡ್ಜಂಕ್ಷನ್ನಲ್ಲಿ ಬಿತ್ತು ಬಾಯಿ ಕಂಪೌಂಡ್ ಜಾರ್ಜ್ಸಿಕ್ವೇರಾರವರ ಬಂದ್ಇರುವ ಅಂಗಡಿಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಬಾತ್ಮಿದಾರರಿಂದ ಬಂದ ಖಚಿತ ವರ್ತಮಾನದಂತೆ ಮೇಲಾಧಿಕಾರಿಯವರಿಗೆ ಮಾಹಿತಿ ನೀಡಿ ಅನುಮತಿ ಸಿಸಿಬಿ ಘಟಕದ ಸಿಬ್ಬಂದಿಗಳಾದ ಹೆಚ್.ಸಿ. 1355 ಶಶಿಧರ್ಶೆಟ್ಟಿ,  ಹೆಚ್.ಸಿ. 1706 ಗಣೇಶ್ ಎಂ.ಪಿ., ಹೆಚ್,ಸಿ 1145 ಗಣೇಶ್ ಕೆ., ಹೆಚ್.ಸಿ. 1848 ವೇಣುಗೋಪಾಲ,  ಪಿಸಿ 858 ಚಂದ್ರಶೇಖರ್ ಹಾಗೂ ಜೀಪು ಚಾಲಕ .ಹೆಚ್.ಸಿ. 83 ತೇಜ ಕುಮಾರ್ ರವರನ್ನು ಜೊತೆಯಲ್ಲಿ ಕರೆದುಕೊಂಡು ಮಂಗಳೂರು ನಗರದ ಬಿಜೈ ನ್ಯೂರೋಡ್ಜಂಕ್ಷನ್ನಲ್ಲಿ ಬಿತ್ತು ಬಾಯಿ ಕಂಪೌಂಡ್ ಜಾರ್ಜ್ಸಿಕ್ವೇರಾರವರ ಬಂದ್ಇರುವ ಅಂಗಡಿಯ ಹತ್ತಿರ ಹೋಗಿ ಆನಂದ ಮನೋಹರ ಪವಾರ್ಪ್ರಾಯ 27 ವರ್ಷ, ತಂದೆ; ಮನೋಹರ್‌, ವಾಸ; ತಮದಡ್ಡಿ ತಾಂಡಾ ಮನೆ, ಶ್ರೀಕಂತ್ಗಿರಣಿ ಅಂಗಡಿ ಬಳಿ, ತಮದಡ್ಡಿ ಗ್ರಮ, ಮುದ್ದೇಬಿಹಾಳ ತಾಲೂಕು, ಬಿಜಾಪುರ ಎಂಬವರನ್ನು ಮಂಗಳೂರು ತಾಲೂಕು  ದಂಡಾಧಿಕಾರಿಗಳು ಮತ್ತು ತಹಶೀಲ್ದಾರರು  ಕೆ.ಮೋಹನ್ರಾವ್ರವರನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ಆರೋಪಿ ಮನೋಹರ ಪವಾರ್ ಜಪ್ತಿ ಮಾಡಲಾಗಿ ಕಪ್ಪು ಬ್ಯಾಗ್ ನಲ್ಲಿದ್ದ ಗಾಂಜಾ ವನ್ನು ತೂಕ ಮಾಡಲಾಗಿ ಸುಮಾರು 1 .ಜಿ. 20 ಗ್ರಾಂ ಅಂದಾಜು ಬೆಲೆ ರೂ. 20,400/- ಹಾಗೂ ಕಾರ್ಬನ್ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್ ನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಸೊತ್ತುಗಳ ಸಮೇತ ಉರ್ವಾ ಪೊಲೀಸ್ ಠಾಣೆಗೆ ನೀಡಿರುವುದಾಗಿದೆ.

3.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-02-13 ರಂದು ಪಿರ್ಯಾದಿದಾರರಾದ ಶ್ರೀ ಕೆಮು ನಾಯ್ಕ ರವರು ತನ್ನ ಮಗ 8 ವರ್ಷ ಪ್ರಾಯದ ಗಣೇಶ ಎಂಬಾತನೊಂದಿಗೆ ಜೋಕಟ್ಟೆ ಶಾಲೆಯಿಂದ ತನ್ನ ಮನೆಯಾದ ಜೋಕಟ್ಟೆ ಕಾನಾ ಬಳಿಗೆ ಜೋಕಟ್ಟೆ ಕಾನಾ ರಸ್ತೆ ಬದಿಯ ಮಣ್ಣು ರಸ್ತೆಯಿಂದಾಗಿ ನಡೆದುಕೊಂಡು ಹೋಗುತ್ತಾ ಸಂಜೆ ಸುಮಾರು 4 ಗಂಟೆ ಸಮಯಕ್ಕೆ ಜೋಕಟ್ಟೆ ಕ್ರಾಸ್ ನಿಂದ ಸ್ವಲ್ಪ ಮುಂದೆ ತಲುಪಿದಾಗ ಮೋಟಾರು ಸೈಕಲ್ ಕೆಎ-19ಇಬಿ-2513ನೇದನ್ನು ಅದರ ಸವಾರ ಜೋಕಟ್ಟೆ ಕಡೆಯಿಂದ ಕಾನಾ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಗಣೇಶನಿಗೆ ಡಿಕ್ಕಿ ಹೊಡೆದ ಪರಿಣಾಮ ಗಣೇಶನು ರಸ್ತೆಯ ಬದಿಗೆ ಬಿದ್ದು, ಗಣೇಶನ ಬಲಗಾಲಿಗೆ ರಕ್ತ ಹಾಗೂ ಗುದ್ದಿದ ಗಾಯವಾಗಿರುವುದಾಗಿದೆ.

4.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-02-12 ರಂದು ಪಿರ್ಯಾದಿದಾರರಾದ ಶ್ರೀ ರಾಘವ ಕೆ. ರವರು ತನ್ನ ಬಾಬ್ತು ಕೆಎ-19ಬಿ-4858ನೇ ಮೋಟಾರು ಸೈಕಲ್ ನಲ್ಲಿ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಎನ್ ಹೆಚ್ - 66 ರಲ್ಲಿ ಹೋಗುತ್ತಾ ಮಧ್ಯಾಹ್ನ ಸುಮಾರು 2-30 ಗಂಟೆಗೆ ಪಣಂಬೂರು ಸರ್ಕಲ್ ಬಳಿಗೆ ತಲುಪುವಾಗಿ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕಾರು ಕೆಎ-19ಎಂಬಿ-7899ನೇದನ್ನು ಅದರ ಚಾಲಕ ನವೀನ್ ರವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆ ಬದಿಗೆ ಬಿದ್ದು, ಪಿರ್ಯಾದಿದಾರರ ಹಣೆ, ಮುಖ, ಕೈ, ಕಾಲುಗಳಿಗೆ ರಕ್ತ ಗಾಯ ಹಾಗೂ ಗುದ್ದಿದ ಗಾಯವಾಗಿ ಮಂಗಳೂರು . ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.

5.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-02-2014 ರಂದು 15-30 ಗಂಟೆಯಿಂದ ದಿನಾಂಕ 21-02-2014 ರಂದು ಬೆಳಿಗ್ಗೆ  10-00  ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಕಡೆಯಿಂದ ರೋಸಾರಿಯೋ ಶಾಲೆ ಕಡೆಗೆ ಹಾದು ಹೋಗಿರುವ ಸೈಂಟ್ ಆನ್ಸ್ ಶಾಲೆಯ ಎದುರುಗಡೆ   ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಫಿರ್ಯಾದುದಾರರಾದ ಶ್ರೀ ವಿನಾಯಕ್ ರವರ ಆರ್.ಸಿ. ಮಾಲಕತ್ವದ 2004 ನೇ ಮೊಡೆಲ್ ಕಪ್ಪು  ಬಣ್ಣದ ಅಂದಾಜು ರೂ 66,500/- ಬೆಲೆ ಬಾಳುವ   REGISTRATION ಎಂಬುದಾಗಿ ನಂಬರ್ ಪ್ಲೇಟಿನಲ್ಲಿ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಿರುವ Chassis No- MD2A11CZ1ECL16637 , Engine No-DHZCEL942702 ನಂಬ್ರದ ಹೊಸ ಬಜಾಜ್ ಪಲ್ಸರ್ ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

6.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-02-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಮನ್ಮತನ್ ರವರ ಬಾಬ್ತು ಕುಳಾಯಿ ದುರ್ಗಾ ಪರಮೇಶ್ವರಿ ಟಯರ್ ವರ್ಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಎಂಬವನು ಆತನ ಬಾಬ್ತು ಕೆನೆಟಿಕ್ ದ್ವಿ ಚಕ್ರ ವಾಹನ ನಂಬ್ರ ಕೆ 19-ಕೆ-6924 ನೇರದರಲ್ಲಿ ಕುಳಾಯಿ ಕಡೆಯಿಂದ ಕಾನ ಕಡೆಗೆ ಹೊರಟಿದ್ದು ಪಿರ್ಯಾದಿದಾರರು ತಮ್ಮ ಪಿಕ್ಅಪ್ ವಾಹನದಲ್ಲಿ ಅವರ ಹಿಂದಿನಿಂದ ಹೋಗುತ್ತಿದ್ದು ರಾತ್ರಿ ಸುಮಾರು 22-30 ಗಂಟೆಗೆ ಶಿವಪ್ರಸಾದನು ಹೊನ್ನಕಟ್ಟೆ ಜಂಕ್ಷನ್ ತಲುಪಿ ರಸ್ತೆ ಕ್ರಾಸ್ ಮಾಡುವರೇ ರಾ ಹೆ 66 ರಲ್ಲಿ ನಿಲ್ಲಿಸಿ ಮುಂದೆ ಚಲಾಯಿಸಿದಾಗ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಮಾರುತಿ ಓಮ್ನಿ ಕಾರು ನಂಬ್ರ ಕೆ 25-ಎಂಬಿ 8111 ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಿವಪ್ರಸಾದರ ಕೆನೆಟಿಕ್ ವಾಹನಕ್ಕೆ ಡಿಕ್ಕಿ  ಹೊಡೆದ ಪರಿಣಾಮ ಅವರ ಎಡ ಕಾಲಿಗೆ, ಬಲ ಭಾಗದ ಸೊಂಟಕ್ಕೆ, ಬಲಕೈಗೆ ಗಾಯ ಉಂಟಾಗಿದ್ದು ಚಕಿತ್ಸೆ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

7.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-02-2014 ರಂದು ಪಿರ್ಯಾದಿದಾರರಾದ ಶ್ರೀ ರಾಮಚಂದ್ರ ಕೊಟ್ಯಾನ್ ರವರು ಬೆಳಿಗ್ಗೆ ತಮ್ಮ ಬಾಬ್ತು ನೋಂದಣಿಯಾಗದ ಹೊಸ ಆಕ್ಟಿವಾ ದ್ವಿಚಕ್ರವಾಹನದಲ್ಲಿ ಹಳೆಯಂಗಡಿ ಸೈಟ್ ನಿಂದ ಸುರತ್ಕಲ್ ಸೂರಜ್ ಹೋಟೆಲ್ ಬಳಿಯ ಸೈಟ್ ಕಡೆಗೆ ಬರುತ್ತಿದ್ದು ಬೆಳಿಗ್ಗೆ ಸುಮಾರು 10-45 ಗಂಟೆಗೆ ಎನ್ ಟಿ ಕೆ ಓವರ್ ಬ್ರಿಡ್ಜ್ ಬಳಿ ತಲುಪಿದಾಗ ಮುಕ್ಕ ಕಡೆಯಿಂದ ಸುರತ್ಕಲ್ ಕಡೆಯಿಂದ ಕೆ 20 ಬಿ 8986ನೇ ನಂಬ್ರದ  ಟಿಪ್ಪರ್ ನ್ನು ಅದರ ಚಾಲಕ ಶಂಕರ್ ದಾಸ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದಿದಾರರ ಆಕ್ಟಿವಾ ದ್ವಿಚಕ್ರವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಎಡ ಕೈಯ ಹಸ್ತಕ್ಕೆ ಹಾಗೂ ಎರಡೂ ಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು ಬಗ್ಗೆ ಯಾವುದೇ ಚಿಕಿತ್ಸೆಯನ್ನು ಪಡೆದುಕೊಂಡಿರುವುದಿಲ್ಲ. ಅಪಘಾತದಿಂದಾಗಿ ಪಿರ್ಯಾಧಿದಾರರ ದ್ವಿ ಚಕ್ರ ವಾಹನ ಮತ್ತು ಟಿಪ್ಪರ್ ಎಡಬದಿಯ ಹಿಂಭಾಗದ ಚಕ್ರ ಜಖಂಗೊಂಡಿರುತ್ತದೆ.

8.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-02-2014 ರಂದು ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಕೆ., ರವರು ಕೆಲಸದ ನಿಮಿತ್ತ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ ಸುಮಾರು 4-35 ಗಂಟೆಗೆ ಹೊಸಬೆಟ್ಟು ರಾ.ಹೆರ 66ರಲ್ಲಿ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟಿ.ವಿ.ಎಸ್  ವಾಹನಕ್ಕೆ ಅದರ ಹಿಂದಿನಿಂದ ಹೋಗುತ್ತಿದ್ದ ವಿಶಾಲ್ ಬಸ್ಸು ನಂಬ್ರ ಕೆ..20,ಬಿ.8459 ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಮುಂದಿನಿಂದ ಹೋಗುತ್ತಿದ್ದ ಟಿ.ವಿ.ಎಸ್. ವಾಹನಕ್ಕೆ ಡಿಕ್ಕಿ ಹೊಡೆದು ಸವಾರ ಎಂ. ಹುಸೈನ್ ರವರ ತಲೆಗೆ ಮತ್ತು ಕೈಕಾಲುಗಳಿಗೆ  ತೀರ್ವ ಸ್ವರೂಪದ ಗಾಯ ಉಂಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ.

9.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-02-2014 ರಂದು ಪಿರ್ಯಾದಿದಾರರಾದ ಶ್ರೀ ಜಾಕ್ಸನ್ ಲೈನಲ್ ಪಿಟೋ ರವರು ತನ್ನ ಸ್ನೇಹಿತ ಸ್ಟೀಫನ್ ರವರ ಮೋಟಾರು ಸೈಕಲ್ ನಂ: KA  19 EA  3735  ರಲ್ಲಿ ಸಹ ಸವಾರರಾಗಿ ಕುಳಿತುಕೊಂಡು, ಸ್ಟೀಫನ್ ರವರು ಮೋಟಾರು ಸೈಕಲನ್ನು ಚಲಾಯಿಸುತ್ತಾ ಬಜಪೆ ಕಡೆಯಿಂದ ಕೈಕಂಬ ಕಡೆಗೆ ಹೋಗುತ್ತಾ  ರಾತ್ರಿ ಸುಮಾರು 21-30 ಗಂಟೆಗೆ ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ಕಿನ್ನಿಕಂಬಳ ತಿರುವು ರಸ್ತೆಯಲ್ಲಿ ಹೋಗುತ್ತಾ ಸ್ಟೀಫನ್ ರವರು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು ಸೈಕಲ್,  ಸವಾರನ ಹತೋಟಿ ತಪ್ಪಿ ರಸ್ತೆಗೆ ಬಿದ್ದು, ಫಿರ್ಯಾದಿದಾರರಿಗೆ ಮುಖಕ್ಕೆ,  ಬಲ ಕಣ್ಣಿನ ಬಳಿ, ಬಲಕಾಲಿನ ಪಾದಕ್ಕೆ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ, ಫಾಃ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

10.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ನಿರೋಸಾ ಬಾನು ರವರಿಗೆ 1ನೇ ಆರೋಪಿಯಾದ ಕೋಟೆಕಾರಿನ ಮಹಮ್ಮದ್ಬಶೀರ್ಎಂಬವನೊಂದಿಗೆ ದಿನಾಂಕ 19-02-2012 ರಂದು ವಿವಾಹವಾಗಿದ್ದು 01 ವರ್ಷದ ಒಂದು ಗಂಡುಮಗು ಇರುವುದಾಗಿದೆ. ಮದುವೆ ಸಂದರ್ಭದಲ್ಲಿ ಪಿರ್ಯಾದಿದಾರರ ತಂದೆಯವರು ಸದ್ರಿಯವರಿಗೆ  ಸುಮಾರು 40 ಪವನ್ಚಿನ್ನಾಭರವನ್ನು ಹಾಕಿದ್ದು, ಅದನ್ನು 01 ನೇ ಆರೋಪಿತನು ಒಂದೇ ವರ್ಷದಲ್ಲಿ ಮಾರಾಟ ಮಾಡಿದ್ದು, ಅದರ ನಂತರ 01 ನೇ ಆರೋಪಿತನು, ತನ್ನ ತಂದೆ ಮತ್ತು ತಾಯಿಯವರೊಂದಿಗೆ ಅಂದರೆ ಎರಡನೇ ಮತ್ತು ಮೂರನೇ ಆರೋಪಿಗಳೊಂದಿಗೆ ಸೇರಿಕೊಂಡು ಪಿರ್ಯಾದಿದಾರರು ಹೆಚ್ಚಿನ ವರದಕ್ಷಿಣೆಯನ್ನು ತರಬೇಕೆಂದು ಹಿಂಸೆ ನೀಡುತ್ತಿದ್ದು, ದಿನಾಂಕ 18-02-2014 ರಂದು ಆರೋಪಿಗಳು ಒಟ್ಟು ಸೇರಿ ಪಿರ್ಯಾದಿದಾರರಿಗೆ 25 ಪವನ್ಚಿನ್ನ ತರಬೇಕೆಂದು, ಇಲ್ಲದಿದ್ದರೆ ಬಿಡುವುದಿಲ್ಲವೆಂದು ಬೆದರಿಸಿದ್ದರಿಂದ ಸದ್ರಿಯವರು ತನ್ನ ತಂದೆಯವರನ್ನು ಬರಮಾಡಿಕೊಂಡು ತನ್ನ ತಂದೆ ಮನೆಯಾದ ವಾಮಂಜೂರಿಗೆ ಬಂದಿದ್ದು, ದಿನಾಂಕ 20-02-2014 ರಂದು ರಾತ್ರಿ ಸುಮಾರು 8-00 ಗಂಟೆ ವೇಳೆಗೆ 01 ನೇ ಆರೋಪಿ ಪಿರ್ಯಾದಿದಾರರ ಮನೆಗೆ ಬಂದು ಚಿನ್ನ ಎಲ್ಲಿ ಎಂದು ಕೇಳಿದಾಗ, ಪಿರ್ಯಾದಿದಾರರು ತನ್ನ ತಂದೆ ತುಂಬಾ ಕಷ್ಟದಲ್ಲಿರುವುದರಿಂದ ಈಗ 25 ಪವನ್ಚಿನ್ನ ಕೊಡಲು ಸಾಧ್ಯವಿಲ್ಲವೆಂದು ಹೇಳಿದಾಗ, ಆರೋಪಿತನು ಪಿರ್ಯಾದಿದಾರರ ಜುಟ್ಟು ಹಿಡಿದು ಕೆನ್ನೆಗೆ ಹೊಡೆದು 25 ಪವನ್ಚಿನ್ನ ಕೊಡದಿದ್ದರೆ ನೀನು ನನ್ನ ಮನೆಗೆ ಬರುವುದು ಬೇಡ ನಾನು ಬೇರೆ ಮದುವೆಯಾಗುವುದಾಗಿ ಹೇಳಿದಾಗ ಪಿರ್ಯಾದಿದಾರರ ತಂದೆಯವರು ಪಿರ್ಯಾದಿದಾರರ ಜುಟ್ಟನ್ನು ಬಿಡಿಸಿ ಆರೋಪಿ ಮಹಮ್ಮದ್ಬಶೀರ್ನನ್ನು ಹೊರಗೆ ಕಳುಹಿಸಿರುವುದಾಗಿದೆ. ಆರೋಪಿಗಳು ಪಿರ್ಯಾದಿದಾರರಿಗೆ ಮದುವೆಯಾದ ದಿನದಿಂದಲೂ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಪ್ರತಿದಿನ ಹಿಂಸೆ ನೀಡುತ್ತಿರುವುದಾಗಿದೆ.

11.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರ 2 ನೇ ಮಗಳು ಬೆಸೆಂಟ್ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 21-02-2014 ರಂದು ಎಂದಿನಂತೆ ಬೆಳಿಗ್ಗೆ 8-30 ಗಂಟೆಗೆ ಕಾಲೇಜಿನ ಸಮವಸ್ತ್ರ ಧರಿಸಿ ಕಾಲೇಜಿಗೆಂದು ಹೋದವಳು , ಪಿರ್ಯಾದಿದಾರರು ಸಂಜೆ 4-00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿಲ್ಲದೇ ಇದ್ದು , ಸದ್ರಿಯವಳು ತನ್ನ ಮೊಬೈಲ್ಫೋನ್ನಿಂದ ಪಿರ್ಯಾದಿದಾರರ ಮೊಬೈಲ್  ಫೋನಿಗೆ "ತಾನು ಕುಂದಾಪುರದಲ್ಲಿ ಪ್ರಜ್ವಲ್ಎಂಬವನೊಂದಿಗೆ ಮದುವೆಯಾಗಿರುವುದಾಗಿ ತನ್ನನ್ನು ಹುಡುಕಬೇಡಿ" ಎಂಬುದಾಗಿ ಮಸೇಜ್ಮಾಡಿರುವುದಾಗಿಯೂ, ಕಾಣೆಯಾದವಳು 5 ಅಡಿ 4 ಇಂಚು ಉದ್ದವಿದ್ದು,  ಬಿಳಿ ಮೈಬಣ್ಣ ಮುಖದಲ್ಲಿ ಮೊದವೆಗಳಿದ್ದು, ಲೈಟ್ನೀಲಿ ಬಣ್ಣದ ಚೂಡಿದಾರ್ಧರಿಸಿದ್ದು, ಕನ್ನಡ, ತುಳು, ಇಂಗ್ಲೀಷ್‌, ಹಿಂದಿ ಭಾಷೆ ಮಾತಾಡುತ್ತಿದ್ದು, ಕುತ್ತಿಗೆಯಲ್ಲಿ ಚಿನ್ನದ ಚೈನ್ಧರಿಸಿರುವುದಾಗಿದೆ.

No comments:

Post a Comment