ದಿನಾಂಕ 28.02.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಮಂಗಳೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25.02.2014 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕಬೀರ್ ರವರು ತನ್ನ ಬಾವ ಶರೀಫ್ ತೋಡಾರ್ ಎಂಬವರ ಜೊತೆ, ತನ್ನ ಚಿಕ್ಕಪ್ಪ ಚೂರಿ @ ಇಸ್ಮಾಯಿಲ್ ಎಂಬವರ ಆಡನ್ನು ಇಸ್ಮಾಯಿಲ್ ನ ಮಗಳ ಗಂಡ ನಶೀಬ್ ಎಂಬವರು ಉಪ್ಪಿನಂಗಡಿಯ ಅಬ್ದುಲ್ ರಹಿಮಾನ್ ಎಂಬವರಿಗೆ ಮಾರಾಟ ಮಾಡಿದ ಬಗ್ಗೆ ವಿಚಾರಿಸುವರೇ ಮೂಡಬಿದ್ರೆ ಮಾರ್ಕೆಟ್ ಗೆ ಬಂದು ಚೂರಿ @ ಇಸ್ಮಾಯಿಲ್ ರ ಜೊತೆ ನಿಂತು ನಶೀಬ್ ನಲ್ಲಿ ಕೇಳುತ್ತಿದ್ದಾಗ ಅಬ್ದುಲ್ ರಹಿಮಾನ್ ಎಂಬವನು ಹಿಂದಿನಿಂದ ಬಂದು ಚೂರಿಯಿಂದ ಭುಜದ ಬಲಭಾಗಕ್ಕೆ ಗೀರಿದ್ದು, ಅಲ್ಲದೇ ನಶೀಬ್, ನಚ್ಚೆ, ಜುನೈದ್ ಎಂಬವರು ಮೀನಿನ ಬಾಕ್ಸ್ ಗಳಿಂದ ತಲೆಗೆ, ಬೆನ್ನಿಗೆ, ಎದೆಗೆ ಹೊಡೆದಿದ್ದು, ದಿನಾಂಕ 27.02.2014 ರಂದು ನೋವು ಕಾಣಿಸಿಕೊಂಡ ಕಾರಣ ಚಿಕಿತ್ಸೆಯ ಬಗ್ಗೆ ಮೂಡಬಿದ್ರಿ ಆಳ್ವಾಸ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.
2.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೆಲ್ವರಾಜ್ ರವರು ಮಂಗಳೂರು ನಗರ ಪಾಂಡೇಶ್ವರದ ಆರ್.ಟಿ.ಓ. ಕಚೇರಿಯ ಬಳಿಯ ಡಾಕ್ಟರ್ ಎಮ್.ವಿ.ಶೆಟ್ಟಿ ಆಸ್ಪತ್ರೆಯ ಗೇಟಿನ ಹತ್ತಿರ ಇರುವ ಸಾರ್ವಜನಿಕ ರಸ್ತೆಯ ಬಳಿ ಇದ್ದ ಖಾಲಿ ಸ್ಥಳದಲ್ಲಿ ಚಪ್ಪಲಿ ರಿಪೇರಿ ಮಾಡುವ ಮರದ ಗೂಡಂಗಡಿಯನ್ನು ಇಟ್ಟು ಕೊಂಡು ಜೀವನ ಮಾಡುತ್ತಿದ್ದವರು, ದಿನಾಂಕ 27-01-2014 ರಂದು ಮದ್ಯಾಹ್ನ ಸುಮಾರು 12-30 ಗಂಟೆಗೆ ಬಿಎಸ್ಎನ್ಎಲ್ ನವರ ಕೇಬಲ್ ಚರಂಡಿಯ ಮೇಲೆ ತೆರೆದ ರೀತಿಯಲ್ಲಿ ಇದ್ದುದರಿಂದ, ದಿಢೀರನೇ ವಯರ್ ಸ್ಪರ್ಶ ಆಗಿ, ವಯರ್ ನಲ್ಲಿ ಬೆಂಕಿ ಹೊತ್ತಿಕೊಂಡು ಪಿರ್ಯಾದಿದಾರರ ಮರದ ಚಪ್ಪಲಿ ಅಂಗಡಿಗೆ ಬೆಂಕಿ ತಗಲಿ, ಅದರಲ್ಲಿದ್ದ ಸೊತ್ತುಗಳು ಸುಟ್ಟು ಹೋಗಿರುತ್ತದೆ. ಬಳಿಕ ಅದೇ ದಿನ ಸಂಜೆ 6-30 ಗಂಟೆಯ ಸಮಯಕ್ಕೆ ಬಿಎಸ್ಎನ್ಎಲ್ ನ ಅಧಿಕಾರಿ ಮತ್ತು ಸಿಬ್ಬಂದಿಯವರು ಬಂದು ಪಿರ್ಯಾದಿದಾರರ ಗೂಡಂಗಡಿಯಲ್ಲಿ ಸುಟ್ಟು ಉಳಿದಿರುವ ಕಬ್ಬಿಣದ ಅವಶೇಷಗಳನ್ನು ಎತ್ತಿ ದೂಡಿ ಹಾಕಿ ಪುಡಿಗೈದಿರುತ್ತಾರೆ. ಪಿರ್ಯಾದಿದಾರರು "ಯಾಕೆ ದೂಡುತ್ತೀರಿ ಎಂದು ಕೇಳಿದ್ದಕ್ಕೆ, ನಿನ್ನ ಗೂಡಂಗಡಿ ಏನು, ನಮ್ಮ ಲಕ್ಷಗಟ್ಟಲೆಯ ಕೇಬಲ್ ಸುಟ್ಟು ಹೋಗಿದೆ. ನಿನ್ನ ಗೂಡಂಗಡಿ ಮಹಾ ದೊಡ್ಡದೇ ಎಂದು ತುಚ್ಛವಾಗಿ ಮಾತನಾಡಿದಾಗ, ಪಿರ್ಯಾದಿದಾರರು ತನಗೆ ಅನ್ನ ನೀಡುವ ಅಂಗಡಿಯ ಬಗ್ಗೆ ತುಚ್ಛವಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ಅವರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದು, ಇನ್ನು ಮುಂದೆ ಈ ಜಾಗದಲ್ಲಿ ಚಪ್ಪಲಿ ಗೂಡಂಗಡಿ ಇಟ್ಟು ಚಪ್ಪಲಿ ರಿಫೆರಿ ಮಾಡಿದರೆ, ನಿನ್ನ ಕೈಕಾಲು ಮುರಿದು ಸಾಯಿಸುತ್ತೇವೆ ಎಂದು ಬೆದರಿಕೆ ಒಡ್ಡಿರುತ್ತಾರೆ.
3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19-02-14 ರಂದು ಸಂಜೆ ವೇಳೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ತೌಫಿಕ್ ರವರು ಅವರ ಪರಿಚಯದ ಇಬ್ರಾಹಿಂ ಅಶ್ಪಕ್ ರವರೊಂದಿಗೆ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಬಿ-5596 ನೇದರಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಮನೆ ಕಡೆಯಿಂದ ಸುರತ್ಕಲ್ ಮಾರ್ಕೆಟ್ ಕಡೆ ಬರುತ್ತಿದ್ದು ಸಂಜೆ ಸುಮಾರು 5-15 ಗಂಟೆ ಸಮಯಕ್ಕೆ ಚೊಕ್ಕಬೆಟ್ಟು ಎಂಜಿಎಂ ಹಾಲ್ ಬಳಿ ತಲುಪುತ್ತಿದ್ದಂತೆ ಇಬ್ರಾಹಿಂ ಅಶ್ಪಕ್ ರವರು ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡ ಕಾಲಿನ ಬೆರಳಿಗೆ ರಕ್ತ ಬರುವ ಗಾಯ ಹಾಗೂ ತೊಡೆಯ ಮೇಲೆ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-02-2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಶೀನಾ ಕೊರಗ ರವರು ಕೆಲಸಕ್ಕೆ ಹೋಗಿದ್ದು ಅವರ ಹೆಂಡತಿ ಮನೆಯಲ್ಲಿ ಒಳಗೆ ಇರುವ ಸಮಯ ಅವರ ಮಗನಾದ ಸುಮಾರು 16 ವರ್ಷ ಪ್ರಾಯದ ರವಿ ಎಂಬಾತನು ಬೆಳಿಗ್ಗೆ ಸಮಯ ಸುಮಾರು 11-00 ಗಂಟೆಗೆ ಮನೆಯಿಂದ ಯಾರಲ್ಲಿಯೂ ಹೇಳದೇ ಮನೆ ಬಿಟ್ಟು ಹೋಗಿದ್ದು ಈ ತನಕ ಮನೆಗೆ ವಾಪಾಸು ಬಾರದೇ ಇದ್ದು ಕಾಣೆಯಾಗಿದ್ದು, ಕಾಣೆಯಾದ ರವಿಯ ಚಹರೆ: ಎತ್ತರ 5 ಅಡಿ, ಗೋಧಿ ಮೈ ಬಣ್ಣ, ಭಾಷೆ: ಕನ್ನಡ, ತುಳು, ಹಸಿರು ಗೆರೆಗಳುಳ್ಳ ಬಿಳಿ ಬಣ್ಣದ ಟಿ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-02-2014 ರಂದು ಪಿರ್ಯಾದಿದಾರರಾದ ಶ್ರೀ ಎಂ. ಭಾಸ್ಕರ್ ಪೂಜಾರಿ ರವರು ಅವರಿಗೆ ಪರಿಚಯವಿರುವ ಹಾಗೂ ಅವರೊಂದಿಗೆ ಕೆಲಸ ಮಾಡುವ ಗಣೇಶ್ ರವರ ಬಾಬ್ತು ಬೈಕ್ ನಂಬ್ರ KA19W7637 ನೇದರಲ್ಲಿ ಪಿರ್ಯಾದಿದಾರರ ಮನೆಗೆ ಹೋಗುವರೇ ಬೈಕಿನಲ್ಲಿ ಸಹಸವಾರರಾಗಿ ಕುಳಿತುಕೊಂಡು ಮಂಗಳೂರು ತಾಲೂಕು ಕನೀರುತೋಟ ಕೊಲ್ಯ ಎಂಬಲ್ಲಿಂದ ಹೊರಟು ಕಿನ್ಯ ಕೈಕಂಬ ಪೇಪರ್ ಮಿಲ್ ಬಳಿ ತಲುಪುವಾಗ ಸಮಯ ಸುಮಾರು ಮದ್ಯಾಹ್ನ 1:30 ಗಂಟೆಗೆ ಸವಾರ ಗಣೇಶ್ ರವರು ತನ್ನ ಬಾಬ್ತು ಬೈಕನ್ನು ನಿರ್ಲಕ್ಷತನ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬೈಕ್ ಸ್ಕಿಡ್ ಅಗಿ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕೈ ಬುಜಕ್ಕೆ ಮೂಳೆ ಮುರಿತವಾಗಿರುತ್ತದೆ. ಸವಾರ ಗಣೇಶ್ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಅಪಘಾತಕ್ಕೆ ಮೋಟಾರು ಸೈಕಲಿನ ಸವಾರ ಗಣೇಶ್ ರವರ ಅತೀವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನ ಚಾಲನೇ ಕಾರಣವಾಗಿರುತ್ತದೆ.
No comments:
Post a Comment