ದೈನಂದಿನ ಅಪರಾದ ವರದಿ.
ದಿನಾಂಕ 17.02.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 3 |
1.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2014ರಂದು ಫಿರ್ಯಾದಿದಾರರಾದ ಶ್ರೀ ವೆಲೆರಿಯನ್ ಡಿ'ಸೋಜಾ ರವರು ಮತ್ತು ದಯಾನಂದರವರಿಗೆ ಬಂಗ್ರಕೂಳೂರು ಗ್ರಾಮದ ಕೋಡಿಕಲ್ ಬಳಿಯ ಕರಾವಳಿ ಕಾಲೇಜಿನ ಶೆಡ್ ಗೆ ಪೈಂಟಿಂಗ್ ಮಾಡುವ ಕೆಲಸವಿದ್ದು ಅವರು ಕೆಲಸ ಮಾಡುತ್ತಿದ್ದ ಸಮಯ ಮದ್ಯಾಹ್ನ 02-00 ಗಂಟೆಯ ವೇಳೆಗೆ ಕೆಲಸದ ಗುತ್ತಿಗೆದಾರರಾದ ರೆಯನಾಲ್ ಡಿಸೋಜಾರವರು ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದು ದಯಾನಂದರಿಗೆ ಅಲ್ಲಿಯೇ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದ್ದದ್ದು ತಿಳಿದು ನಿರ್ಲಕ್ಷ್ಯತನದಿಂದ ಸರಿಯಾಗಿ ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳದೇ ಶೆಡ್ಡಿನ ಶೇಡಿನ ಮೇಲಿದ್ದ ಸುಮಾರು 9 ಅಡಿ ಉದ್ದದ ಕಬ್ಬಿಣದ ರಾಡನ್ನು ತೆಗೆದು ಕೆಳಗೆ ಹಾಕುವರೇ ಹೇಳಿದ್ದು ಅದರಂತೆ ದಯಾನಂದನು ಸದ್ರಿ ರಾಡನ್ನು ತೆಗೆದಾಗ ಸದ್ರಿ ರಾಡ್ ಪಕ್ಕದಲ್ಲಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ನ ವಯರಿಗೆ ತಾಗಿ ಎರಡು ಕೈಗಳಿಗೆ ಕರಂಟ್ ಶಾಕ್ ಹೊಡೆದು ಜಖಂಗೊಂಡು .ಚಿಕಿತ್ಸೆ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮಾರ್ಗರೇಟ್ ಫೆರ್ನಾಂಡಿಸ್ ಎಂಬವರ ಮಗನಾದ ಶ್ರೀ ರೋನಾಲ್ಡ್ ವಿವೇಕ್ ಫೆರ್ನಾಂಡಿಸ್ ರವರು ಎರಡು ವರ್ಷಗಳ ಹಿಂದೆ ಅಂದರೆ ದಿನಾಂಕ 28-06-2011 ರಂದು ತಾನು ಹೊರದೇಶದ ಕೆಲಸಕ್ಕಾಗಿ ಮನೆಯಿಂದ ಪಾಸ್ ಪೋರ್ಟ್ ಆಫೀಸ್ ಕೆಲಸಕ್ಕೆ ಹೋಗುತ್ತೇನೆಂದು ಬೆಂಗಳೂರಿಗೆ ತೆರಳಿದ್ದು, ಈ ವರೆಗೆ ಮರಳಿ ಬಾರದೆ ಕಾಣೆಯಾಗಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15.02.2014 ರಂದು ಸಮಯ ಸುಮಾರು 17.30 ಗಂಟೆಗೆ ಕಾರು ನಂಬ್ರ KA19-C-8924 ನ್ನು ಅದರ ಚಾಲಕ ಬಿಕರ್ನಕಟ್ಟೆ ಕಡೆಯಿಂದ ಕುಲಶೇಖರ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕುಲಶೇಖರ ಬಳಿ ಇರುವ ಕರ್ನಾಟಕ ಬ್ಯಾಂಕ್ ಎದುರು ತಲುಪುವಾಗ ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆಗೆ ಬರುತ್ತಿದ್ದ ಮೋಟರ್ ಸೈಕಲ್ ನಂಬ್ರ KA19-EJ-7018 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟರ್ ಸೈಕಲ್ ಸವಾರನ ವೃಷಣದ ಎಡಭಾಗಕ್ಕೆ ಗುದ್ದಿದ ನೋವು ಉಂಟಾಗಿ ಮೋಟರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಲಾಗಿರುತ್ತಾರೆ.
4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶಂಕರ ಭಟ್ ಎಂಬವರ ಸ್ಥಿರ ದೂರವಾಣಿ ಸಂಖ್ಯೆ 0824-2212552 ನೇದಕ್ಕೆ ಅಪರಿಚಿತ ವ್ಯಕ್ತಿಯೊರ್ವರು ದಿನಾಂಕ 14-02-2014ರಂದು ರಾತ್ರಿ 10-30 ಗಂಟೆಗೆ ಪಿರ್ಯಾದುದಾರರು ಮನೆಯಲ್ಲಿರುವ ಸಮಯ ಪೋನ್ ಕರೆ ಮಾಡಿ ನಾನು ಎಕ್ಸ್ಚೇಂಜ್ ಅಫೀಸರು ಪ್ರಭಾಕರ್ ರಾವ್ ಮಾತಾನಾಡುತ್ತಿದ್ದೇನೆ, ಇದು ಎಲ್ಲಿ ಆಯಿತು ಮಂಗಳೂರ ಎಂದು ವಿಚಾರಿಸಿ ಕೂಡಲೇ ಮನೆಯ ಹೆಂಗಸರ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತಾನಾಡಿ ಫಿರ್ಯಾದುದಾರರಿಗೆ ನಿನ್ನನ್ನು ಕೊಲ್ಲುತ್ತೇನೆ ಎಂಬುದಾಗಿ ಬೆದರಿಕೆ ಒಡ್ಡಿದ್ದು ಇದೇ ವ್ಯಕ್ತಿಯು ಈ ಹಿಂದೆಯು ಕೂಡಾ ಹಲವು ಬಾರಿ ಅಶ್ಲೀಲವಾಗಿ ಪೋನ್ ಮಾಡಿ ಬೆದರಿಕೆ ಒಡ್ಡಿರುವುದಾಗಿದೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14.02.2014 ರಂದು ಸಮಯ ಸುಮಾರು 15.15 ಗಂಟೆಗೆ ಬಸ್ಸು ನಂಬ್ರ KA19-AA-2489 ನೇದನ್ನು ಅದರ ಚಾಲಕ ಜ್ಯೋತಿ ಬಳಿ ಇರುವ ಮಹಾರಾಜ ಹೋಟೆಲ್ ನ ಎದುರು ಇರುವ ಬಸ್ಸು ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಿ ಫಿರ್ಯಾದುದಾರರಾದ ಶ್ರೀ ಇಸುಬ ರವರು ಬಸ್ಸಿನಿಂದ ಇಳಿಯುತ್ತಿರುವ ಸಮಯ ನಿರ್ವಾಹಕನ ಸೂಚನೆಗೆ ಕಾಯದೇ ನಿರ್ಲಕ್ಷತನದಿಂದ ಒಮ್ಮೆಲೇ ಮುಂದಕ್ಕೆ ಚಲಾಯಿಸಿದ ಪರಿಣಾಮ ಫಿರ್ಯಾದುಧಾರರು ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಎರಡೂ ಕೈಗಳ ಮೊಣಗಂಟಿಗೆ ಮತ್ತು ತಲೆಯ ಹಿಂಭಾಗಕ್ಕೆ ರಕ್ತಗಾಯ ಉಂಟಾಗಿ SCS ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.
6.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-02-2014 ರಂದು ರಾತ್ರಿ ಫಿರ್ಯಾದುದಾರರಾದ ಶ್ರೀ ರಿತೇಶ್ ಶೆಟ್ಟಿ ಯವರು ತನ್ನ ಸ್ನೇಹಿತ ಲತೀಶ್ ಎಂಬವರೊಂದಿಗೆ ಮರಕಡ ಪಾಂಜ ಎಂಬಲ್ಲಿ ನಡೆಯುತ್ತಿದ್ದ ನೇಮೋತ್ಸವಕ್ಕೆ ಮನೆಯಿಂದ ನಡೆದುಕೊಂಡು ಬರುತ್ತಾ ಮರಕಡ ಸೆಲೂನ್ ಬಳಿ ತಲುಪಿದಾಗ ಚರಣ್ ಎಂಬಾತನು ಲತೀಶನ ಬಳಿ ಬಂದು ಬಾಕಿ ಇದ್ದ ಹಣವನ್ನು ಕೇಳಿ, ಲತೀಶನಲ್ಲಿದ್ದ ಮೊಬೈಲ್ ನ್ನು ತೆಗೆದಾಗ ಲತೀಶನು ಸಿಮ್ ನ್ನು ವಾಪಾಸು ಕೇಳಿದಾಗ ಚರಣ್ ನೊಂದಿಗೆ ಇದ್ದ ಇತರರಾದ ಅವಿನಾಶ್, ಪ್ರಸನ್ನ, ಪ್ರಸನ್ನ, ಪ್ರಶಾಂತ್, ರಾಜು @ ಜಪಾನ್, ದೀಕ್ಷಿತ್ ಮತ್ತು ನೆಲ್ಸನ್ ರವರು ಲತೀಶನನ್ನು ದೂಡುತ್ತಿದ್ದಾಗ ತಡೆಯಲು ಹೋದ ಫಿರ್ಯಾಧುದಾರರನ್ನು ಅವರೆಲ್ಲರೂ ನೆಲಕ್ಕೆ ಉರುಳಿಸಿ ಕೈಯಿಂದ ಮತ್ತು ಕಾಲಿನಿಂದ ತುಳಿದು ಫಿರ್ಯಾಧುದಾರರ ತಲೆಯ ಎಡಭಾಗಕ್ಕೆ ಬಿಯರ್ ಬಾಟ್ಲಿಯಿಂದ ಹೊಡೆದು ಫಿರ್ಯಾಧುದಾರರಿಗೆ ಚರಣ್ ಮತ್ತು ಇತರರು ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ತಂಟೆಗೆ ಬಂದರೆ ನಿನ್ನನ್ನು ಬಿಡುವುದಿಲ್ಲ" ಎಂದು ಬೆದರಿಕೆ ಹಾಕಿದ್ದು, ಉರುಡಾಟದಲ್ಲಿ ಫಿರ್ಯಾಧುದಾರರ ಬಂಗಾರದ ಚೈನ್ ಮತ್ತು ಹಣ ಕಳೆದು ಹೋಗಿರುತ್ತದೆ. ಹಲ್ಲೆಯಿಂದ ಫಿರ್ಯಾಧುದಾರರ ತಲೆಯ ಎಡಭಾಗಕ್ಕೆ ರಕ್ತಗಾಯ ಮತ್ತು ಮೈಕೈಗೆ ಗುದ್ದಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-02-2014 ರಂದು ಮದ್ಯಾಹ್ನ 03-45 ಗಂಟೆ ಸಮಯಕ್ಕೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿ ರವರು ಠಾಣೆಯಲ್ಲಿರುವಾಗ ಓರ್ವ ವ್ಯಕ್ತಿಯು ಮಂಕಿಸ್ಟ್ಯಾಂಡ್ 1ನೇ ಕ್ರಾಸ್ ಬಳಿಯಲ್ಲಿ ಪಿಸ್ತೂಲ್ ಹಿಡಿದು ತಿರುಗಾಡುತ್ತಿದ್ದಾನೆ ಎಂಬುದಾಗಿ ಬಂದ ಖಚಿತ ವರ್ತಮಾನದಂತೆ ಮಾನ್ಯ ಪೊಲೀಸ್ ಆಯುಕ್ತರವರಿಗೆ ಮಾಹಿತಿ ನೀಡಿ, ಅವರು ಮಂಗಳೂರು ನಗರದ ಅಪರಾದ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳ ಸಹಾಯ ಪಡೆಯುವಂತೆ ನೀಡಿದ ಮೌಖಿಕ ಆದೇಶದಂತೆ ಪಿರ್ಯಾದಿದಾರರು ಹಾಗೂ ಠಾಣಾ ಸಿಬ್ಬಂದಿಗಳು ಮತ್ತು ನಗರ ಅಪರಾದ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಮಂಕಿ ಸ್ಟ್ಯಾಂಡ್ 1ನೇ ಕ್ರಾಸ್ ಗೆ ಹೋದಾಗ ಓರ್ವ ವ್ಯಕ್ತಿಯು ಪೊಲೀಸ್ ವಾಹನವನ್ನು ಕಂಡು ಓಡಲು ಪ್ರಯತ್ನಿಸಿದ್ದು, ಸಿಬ್ಬಂದಿಗಳು ಪೊಲೀಸ್ ವಾಹನದಿಂದ ಇಳಿದು ಓಡಿ ಆತನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಸೂರ್ಯ ಕುಮಾರ್ @ ಸೂರಿ ಎಂಬುದಾಗಿ ತಿಳಿಸಿದ್ದು, ಆತನ ಸೊಂಟದಲ್ಲಿ ದೊರೆತ ಪಿಸ್ತೂಲಿನ ಬಗ್ಗೆ ವಿಚಾರಿಸಿದಾಗ ಈ ಪಿಸ್ತೂಲನ್ನು ರೌಡಿ ಆಚಂಗಿ ಮಹೇಶನಿಗೆ ತಲುಪಿಸಲು ತನಗೆ ಜೈಲ್ ನಲ್ಲಿ ಪರಿಚಯವಾದ ಸಂತೋಷ್ ಎಂಬವನು ತಿಳಿಸಿದಂತೆ ತಾನು ಮಣಿಪಾಲದ ಬಳಿಯಿಂದ ಓರ್ವ ಅಪರಿಚಿತ ಮಹಿಳೆಯಿಂದ ಈ ಪಿಸ್ತೂಲನ್ನು ಪಡೆದುಕೊಂಡಿರುವುದಾಗಿಯೂ ಈ ಪಿಸ್ತೂಲಿನ ಬಗ್ಗೆ ತನ್ನಲ್ಲಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂಬುದಾಗಿ ತಿಳಿಸಿದ ಮೇರೆಗೆ ಮುಂದಿನ ಕ್ರಮ ಕೈಗೊಂಡದ್ದಾಗಿರುತ್ತದೆ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-02-2014 ರಂದು ಫಿರ್ಯಾದುದಾರರಾದ ಶ್ರೀ ಸಮದ್ ಪಿ.ಕೆ. ರವರು ಹಾಗೂ ಅವರ ಸ್ನೇಹಿತರಾದ ದಿಲೀಪ್ ಹಾಗೂ ತಸ್ಲೀಮ್ ರವರು ಮಂಗಳೂರಿನ ವೀರನಗರದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸು ಊರಿಗೆ ಹೋಗಲು ರೈಲ್ವೆ ಸ್ಟೇಶನ್ ಕಡೆಗೆ ಹೋಗುತ್ತಿರುವಾಗ ಸಂಜೆ ಸುಮಾರು 16-00 ಗಂಟೆಗೆ ಅಖಿಲೇಶ್ ಎಂಬವರ ಪಾನ್ ಬೀಡ ಅಂಗಡಿಗೆ ಹೋಗಿ 5-00 ರೂಪಾಯಿ ಬೆಲೆಯ ಅನ್ಸ್ (ಮಧು) 4 ಪ್ಯಾಕೇಟ್ ಪಡೆದುಕೊಂಡು 20-00 ರೂ ಹಣ ಅಂಗಡಿಯವರಿಗೆ ನೀಡಿದ್ದು, ನಂತರ ಸ್ವಲ್ಪ ಮುಂದೆ ರೈಲ್ವೆ ಸ್ಟೇಶನ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅಂಗಡಿಯ ಮಾಲಕ ಅಖಿಲೇಶ್ ರವರು ಬಂದು ಫಿರ್ಯಾದುದಾರರು ಹಾಗೂ ಅವರ ಸ್ನೇಹಿತರನ್ನು ತಡೆದು ನಿಲ್ಲಿಸಿ ಅನ್ಸ್ ಪ್ಯಾಕೇಟ್ ಗೆ 10-00 ರೂ ಅದರಿಂದ ನೀವು ಇನ್ನೂ 20-00 ರೂ ಕೊಡಬೇಕೆಂದು ಹೇಳಿದ್ದು, ಅದಕ್ಕೆ ಫಿರ್ಯಾದುದಾರರು ಹಾಗೂ ಅವರ ಸ್ನೇಹಿತರು ನೀವು 5-00 ರೂ ಹೇಳಿದ್ದು, ಅದಕ್ಕೆ ನಾವು 20-00 ರೂ ನೀಡಿರುತ್ತೇವೆ ಎಂದು ಹೇಳಿದಾಗ, ಅವರೊಳಗೆ ಮಾತಿನ ಜಗಳವಾಗಿದ್ದು, ಇದನ್ನು ಕಂಡ ಹತ್ತಿರದ ಅಂಗಡಿಯವರು ಹಾಗೂ ಇತರರು ಅಲ್ಲಿಗೆ ಬಂದು ಫಿರ್ಯಾದುದಾರರನ್ನು ಹಾಗೂ ಅವರ ಸ್ನೇಹಿತರನ್ನು ಅವಾಚ್ಯ ಶಬ್ದಗಳಿಂದ ಬೈದು ತಡೆದು ನಿಲ್ಲಿಸಿ ಕೈಯಿಂದ ಹೊಡೆದಿದ್ದು, ಅದರಲ್ಲಿ ಯಾರೋ ಒಬ್ಬ ಫಿರ್ಯಾದುದಾರರ ಕೈಯಲ್ಲಿದ್ದ ಸೋನಿ ಎಕ್ಸ್ ಪ್ರಿಯಾ ಮೊಬೈಲನ್ನು ಕೈಯಿಂದ ಎಳೆದು ನೆಲಕ್ಕೆ ಎಸೆದು ಜಖಂಗೊಳಿಸಿದ್ದು, ಅಂಗಡಿ ಮಾಲಕ ಅಖಿಲೇಶ್ ರವರು ಫಿರ್ಯಾದುದಾರರಿಗೆ ಹಲ್ಲೆ ಮಾಡಿದ ಪರಿಣಾಮ ಎಡ ಕಣ್ಣಿನ ಮೇಲ್ಬಾಗದಲ್ಲಿ ತರಚಿದ ಗಾಯವಾಗಿರುತ್ತದೆ.
9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಈ ದಿನ ದಿನಾಂಕ 15-02-2014 ರಂದು ಮದ್ಯ- ಪೆಡ್ಡಿಯಂಗಡಿ ರಸ್ತೆಯಲ್ಲಿ ಕೆ.ಎ. 19.ಸಿ 6129ನೇ ಬಸ್ಸು ಚಾಲಕ ಮಹಮ್ಮದ್ ಇಕ್ಬಾಲ್ ಎಂಬಾತನು ಅವರ ಬಾಬ್ತು ಸದ್ರಿ ಬಸ್ಸನ್ನು ಅತೀವೇಗ ಹಾಗೂ ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬೆಳಿಗ್ಗೆ 07-30 ಗಂಟೆ ಸಮಯಕ್ಕೆ ಮದ್ಯ ಪಡುಪದವು ಎಂಬಲ್ಲಿ ರಸ್ತೆ ಬದಿ ಇದ್ದ ಮೆಸ್ಕಾಂ ಇಲಾಖೆಗೆ ಸಂಬಂದಿಸಿದ ವಿದ್ಯುತ್ತ್ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ವಿದ್ಯುತ್ತ್ ಲೈನಿನ ಇತರ ಮೂರು ಕಂಬಗಳು ಜಖಂ ಆಗಿ ಸುಮಾರು ರೂ 40000/- ನಷ್ಟು ಉಂಟು ಮಾಡಿರುವುದಾಗಿದೆ.
10.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕಿಲೇಶ್ ಜೆ, ಇವರು ಸುರತ್ಕಲ್ ಆಕ್ಸಿಸ್ ಬ್ಯಾಂಕಿನಲ್ಲಿ ಖಾತೆ ನಂಬ್ರ 008010101893780 ಹೊಂದಿದ್ದು ದಿನಾಂಕ 02-02-2014 ರಂದು ಬೆಳಿಗ್ಗೆ 11-59 ಗಂಟೆಗೆ ಪಿರ್ಯಾದಿದಾರರಿಗೆ ಅವರ ಮೇಲಿನ ಖಾತೆಯಿಂದ ರೂ 37,325.61/- ಕಡಿತಗೊಂಡ ಎಸ್ ಎಮ್ ಎಸ್ ಬಂದಿದ್ದು ಅದೇ ದಿನ 3-19 ನಿಮಿಷಕ್ಕೆ ಪಿರ್ಯಾದಿದಾರರ ಈ ಮೇಲ್ ವಿಳಾಸ khilesh0008@gmail.com ಇದಕ್ಕೆ PUR/SOLOPORTEROS/ ZARAGOZA/ SOLOPORTEROS ಎಂಬ ಶಾಪ್ ನಿಂದ ರೂ 37.325.61/- ಮೊತ್ತದ ಖರೀದಿ ಮಾಡಿದ ಬಗ್ಗೆ ಕಡಿತ ಗೊಂಡಿರುವುದಾಗಿ ಈ ಮೇಲ್ ಸಂದೇಶ ಬಂದಿದ್ದು ಪಿರ್ಯಾದಿದಾರರ ಆಕ್ಸಿಸ್ ಬ್ಯಾಂಕಿನ ಮೇಲಿನ ಖಾತೆ ನಂಬ್ರವನ್ನು ಯಾರೋ ಹ್ಯಾಕ್ ಮಾಡಿ ಪಿರ್ಯಾದಿದಾರರ ಗೋಲ್ಡ್ ಡೆಬಿಟ್ ಕಾರ್ಡ್ ಅನ್ನು ದುರ್ಬಳಕೆ ಮಾಡಿ ಖಾತೆಯಿಂದ ಮೇಲಿನ ಹಣವನ್ನು ಮೋಸದಿಂದ ಪಡೆದಿರುವುದಾಗಿದೆ.
No comments:
Post a Comment