ದೈನಂದಿನ ಅಪರಾದ ವರದಿ.
ದಿನಾಂಕ 21.02.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 2 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.02.2014 ರಂದು ಪಿರ್ಯಾದುದಾರರಾದ ಸಂಚಾರ ಪಶ್ಚಿಮ ಪೊಲೀಸ್ ಠಾಣಾ ಸಿಪಿಸಿ 507ನೇ ಶ್ರೀ ರಾಘವೆಂದ್ರ ರವರು ಠಾಣಾಧಿಕಾರಿಯ ಆದೇಶದಂತೆ ಮಂಗಳೂರು ನಗರದ ಅಜೀಜುದ್ದೀನ್ ರಸ್ತೆ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಕರ್ತವ್ಯಕ್ಕೆ ಹೋಗುವಂತೆ ತಿಳಿಸಿದ ಮೇರೆಗೆ ಸದ್ರಿಯವರು ತಮ್ಮ ಮೋಟಾರ್ ಸೈಕಲಿನಲ್ಲಿ ಹೋಗುತ್ತಾ ಲೇಡಿಗೋಷನ್ ಆಸ್ಪತ್ರೆ ಎದುರು ತಲುಪಿದಾಗ ಪಿರ್ಯಾದುದಾರರ ಮುಂದುಗಡೆಯಿಂದ KA-19-EC-5033ನೇ ನಂಬ್ರದ ಮೊಟಾರ್ ಸೈಕಲನ್ನು ಅದರ ಸವಾರರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಓರ್ವ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿ ಹಾಗೂ ಆರೋಪಿ ಬೈಕ್ ಸವಾರರು ರಸ್ತೆಗೆ ಬಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯ ತಲೆಗೆ ಮತ್ತು ಎಡಕಾಲಿನ ಕೋಲುಕಾಲಿಗೆ ರಕ್ತಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನು ಚಿಕಿತ್ಸೆ ಬಗ್ಗೆ ಪಿರ್ಯಾದುದಾರರು ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲುಗೊಳಿಸಿರುವುದಲ್ಲದೇ ಆರೋಪಿ ಮೋಟಾರ್ ಸೈಕಲ್ ಸವಾರರ ಹಣೆಗೆ ರಕ್ತ ಗಾಯ ಉಂಟಾಗಿರುವುದಾಗಿದೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-02-2014ರ ಬೆಳಿಗ್ಗೆ 10-30 ಗಂಟೆಯಿಂದ 12-30 ಗಂಟೆಯ ಮಧ್ಯೆ ಮಂಗಳೂರು ನಗರದ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿದಾರರಾದ ಶ್ರೀಮತಿ ಅನಿತಾ ಮೆರ್ಲಿನ್ ಡಿ'ಸೋಜಾ ರವರ ಬಾಬ್ತು 2009ನೇ ಮಾಡಲ್ ನ KA-19-Y-6103 ನೇ ನೋಂದಣಿ ಸಂಖ್ಯೆಯ ಇಂಜಿನ್ ನಂಬ್ರ: OG3A92772834, ಚಾಸಿಸ್ ನಂಬ್ರ:MD626DG3092B10638ರ ಅಂದಾಜು ಮೌಲ್ಯ ರೂ.15,516/- ಬೆಲೆ ಬಾಳುವ ಕಪ್ಪು ಬಣ್ಣದ TVS ಕಂಪನಿಯ Scooty Streak ದ್ವಿಚಕ್ರ ವಾಹವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-02-2014 ರಂದು ಫಿರ್ಯಾದಿದಾರರಾದ ಶ್ರೀ ಸುಜೀತ್ ಗೊನ್ಹಾಲೀಸ್ ರವರು ತಮ್ಮನನ್ನು ಅಲೋಶಿಯಸ್ ಕಾಲೇಜಿಗೆ ಬಿಟ್ಟು, ತನ್ನ ಬಾಬ್ತು ಕೆಎ-01-ವಿ-2003 ನೇ ಕೈನೆಟಿಕ್ ಹೊಂಡಾವನ್ನು ಬೆಳಿಗ್ಗೆ 9:00 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಬಳಿ ಇರುವ ಮಸೀದಿಯ ಬಳಿ ಇರುವ ಮರದ ಕೆಳಗೆ ಪಾರ್ಕು ಮಾಡಿ ಹೋಗಿದ್ದು, ಬಳಿಕ ಮಧ್ಯಾಹ್ನ 11:00 ಗಂಟೆಗೆ ಬಂದು ನೊಡಿದಾಗ ಕೈನೆಟಿಕ್ ಹೊಂಡಾ ಸ್ಥಳದಲ್ಲಿ ಇಲ್ಲದೇ ಇದ್ದು, ಕೈನೆಟಿಕ್ ಹೊಂಡಾಗೆ ಹ್ಯಾಂಡ್ ಲಾಕ್ ಹಾಕಿರುವುದಿಲ್ಲವಾಗಿ, ಬಳಿಕ ಎಲ್ಲಾ ಕಡೆ ಹುಡುಕಾಡಿದರೂ ಈ ವರೆಗೆ ಪತ್ತೆಯಾಗಿರುವುದಿಲ್ಲ, ಸದ್ರಿ ಕೈನೆಟಿಕ್ ಹೊಂಡಾವನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಕಳವಾದ ಕೈನೆಟಿಕ್ ಹೊಂಡಾದ ಅಂದಾಜು ಮೌಲ್ಯ ರೂ. 8000/- ಆಗಬಹುದು. ಕಳವಾದ ಕೈನೆಟಿಕ್ ಹೊಂಡಾದ ವಿವರ: KA-01-V-2003, MODEL-2003, COLOUR- GREY , ENGINE- NIEUL290570, CHASE NO- NIFUL293828.
No comments:
Post a Comment