ದೈನಂದಿನ ಅಪರಾದ ವರದಿ.
ದಿನಾಂಕ 20.02.2014 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.02.2014 ರಂದು ಪಿರ್ಯಾದುದಾರರಾದ ಶ್ರೀ ನಿಖಿಲ್ ರವರು ತಮ್ಮ ಕೆಲಸದ ನಿಮಿತ್ತ ಮನೆಯಿಂದ KA-19-EJ-4684ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ 7:35 ಗಂಟೆ ಸಮಯಕ್ಕೆ ಮಂಗಳೂರು ನಗರದ ಬಿ.ಜಿ ಸ್ಕೂಲ್ ಜಂಕ್ಷನ್ ಬಳಿ ತಲುಪಿದಾಗ ಪಿವಿಎಸ್ ಕಡೆಯಿಂದ KA-02-B-8273ನೇ ನಂಬ್ರದ ಟೂರಿಷ್ಟ್ ಕಾರನ್ನು ಅದರ ಚಾಲಕ ಶ್ರೀನಿವಾಸ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಅತೀವೇಗವಾಗಿ ಬಲಬದಿಗೆ ತಿರುಗಿಸಿ ಪಿರ್ಯಾದುದಾರರ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಹಣೆಯ ಬಲಬದಿಗೆ, ಗಲ್ಲಕ್ಕೆ, ಬಲಕೈ ರಟ್ಟೆಗೆ, ಕೋಲು ಕೈಗೆ ಗಾಯಗೊಂಡವರನ್ನು ಆರೋಪಿ ಕಾರು ಚಾಲಕರು ಚಿಕಿತ್ಸೆಯ ಬಗ್ಗೆ ನಗರದ ವಿನಯಾ ಆಸ್ಪತ್ರೆಯಲ್ಲಿ ದಾಖಲುಗೊಂಡಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-02-2014 ರಂದು ರಾತ್ರಿ ಸುಮಾರು 9:45 ರ ವೇಳೆಗೆ ಆರೋಪಿ ಲಾರಿ ಚಾಲಕ ಶಬೀರ್ ರವರು ತಾನು ಚಲಾಯಿಸುತ್ತಿದ್ದ ಲಾರಿ KA-31-2121 ನೇ ಯದ್ದನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ನೇ ದರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸುತ್ತಾ ಬಂದು ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಮುಲ್ಕಿಯ ಪುನರೂರು ಪೆಟ್ರೋಲ್ ಪಂಪ್ ಬಳಿ ತಲುಪುವಾಗ್ಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ನವಯುಗ ಕಂಪನಿಯ ಲಾರಿ KA-20-B-9611 ನೇ ಯದ್ದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಲಾರಿ KA-20-B-9611 ನೇ ಯದರ ಚಾಲಕ ಜಿತೇಂದ್ರ ಯಾದವ್ ರವರಿಗೆ ಹಣೆಗೆ, ಬಲಕಣ್ಣಿನ ಬಳಿ, ಬಲಕೈಗೆ, ಬಲಕಾಲಿಗೆ ತೀವ್ರ ರೀತಿಯ ರಕ್ತಗಾಯವಾಗಿದ್ದು, ಪಿರ್ಯಾದಿ ಮೋಹಿತ್ ಸಿಂಗ್ ರವರಿಗೂ ಹಣೆಗೆ, ಗಲ್ಲಕ್ಕೆ, ಬಾಯಿಗೆ, ಹಲ್ಲಿಗೆ ರಕ್ತಗಾಯವಾಗಿದ್ದು, ಆರೋಪಿ ಲಾರಿ ಚಾಲಕ ಶಬೀರ್ ರವರಿಗೆ ತಲೆಗೆ, ಶರೀರದ ಇತರ ಭಾಗಗಳಿಗೆ ರಕ್ತಗಾಯವಾಗಿದ್ದು, ಆರೋಪಿತನ ಲಾರಿಯಲ್ಲಿದ್ದ ರಾಜೇ ಸಾಬ್ ಎಂಬವರಿಗೂ ರಕ್ತಗಾಯವಾಗಿದ್ದು, ಗಾಯಾಳುಗಳು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತೀವ್ರ ತರಹದ ಗಾಯಗೊಂಡಿರುವ ಲಾರಿ ಚಾಲಕ ಜಿತೇಂದ್ರ ಯಾದವ್ ರವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11:15 ರ ವೇಳೆಗೆ ಮೃತಪಟ್ಟಿರುವುದಾಗಿರುವುದಾಗಿದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-02-2014 ರಂದು ಫಿರ್ಯಾದಿದಾರರಾದ ಮಾರುತಿ ರವರು ತನ್ನ ಸ್ನೇಹಿತ ನಾಗರಾಜ ಎಂಬವರ ಮೋಟಾರು ಸೈಕಲ್ KA KA 19 EH 1438 ನೇಯದರಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಕಾವೂರು ಕಡೆಯಿಂದ ಮೂಡುಶೆಡ್ಡೆ ಕಡೆಗೆ ಹೋಗುತ್ತಾ ಸಂಜೆ ಸುಮಾರು 5-30 ಗಂಟೆಗೆ ಜಾರಾ ಎಂಬಲ್ಲಿಗೆ ತಲುಪಿದಾಗ ಮೂಡುಶೆಡ್ಡೆ ಕಡೆಯಿಂದ ಮೋಟಾರು ಸೈಕಲ್ KA 19 EK 1103 ನೇಯದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಸವಾರ ನಾಗರಾಜ ಮತ್ತು ಸಹಸವಾರ ಫಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ಖರ್ಚು ವೆಚ್ಚವನ್ನು ಆರೋಪಿಯು ಭರಿಸುವುದಾಗಿ ಹೇಳಿದ್ದು, ಈಗ ಖರ್ಚು ಅಧಿಕವಾಗುತ್ತದೆಂದು ಹೇಳುತ್ತಾ ಖರ್ಚಿನ ಹಣವನ್ನು ನೀಡಲು ನಿರಾಕರಿಸಿರುತ್ತಾರೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-02-2014 ರಂದು ಪಿರ್ಯಾದಿದಾರರಾದ ಶ್ರೀ ನಳಿನಾಕ್ಷ ರವರು ಸಂಜೆ ವೇಳೆಗೆ ಹೆಂಡತಿ ಹಾಗೂ ಮಗ ಜತೀನ್ ನೊಂದಿಗೆ ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು ಹಿಲ್ಸೈಡ್ ರಸ್ತೆ ಬದಿಯಲ್ಲಿ ಕಚ್ಚಾರಸ್ತೆಯಲ್ಲಿದ್ದ ಸಮಯ ಸಂಜೆ 4-00 ಗಂಟೆಗೆ ಆರೋಪಿ ಮುಸ್ತಾಕ್ ಎಂಬವನು ಕೆ ಎ 09 ಆರ್ 8735 ನೇ ಮೋಟರ್ ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿದ್ದ ಪಿರ್ಯಾದಿದಾರರ ಮಗ ಜತೀನ್ ರವರಿಗೆ ಡಿಕ್ಕಿ ಪಡಿಸಿದ್ದು ಪರಿಣಾಮ ಜತೀನ್ ನ ಬಲಕಾಲಿಗೆ ಗಾಯವಾಗಿ ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.02.2014 ರಂದು ಸಂಜೆ 06.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸಂದೀಪ್ ರವರ ತಂದೆ ವಾಮನ ಪೂಜಾರಿಯವರು ಅಡ್ಯಾರ್ ಸಹ್ಯಾದ್ರಿ ಕಾಲೇಜು ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಅಡ್ಯಾರು ಕಡೆಗೆ ಕೆಎ-91-ಡಬ್ಲ್ಯು 4686 ನೇ ಮೋಟಾರ್ ಸೈಕಲನ್ನು ಅದರ ಚಾಲಕ ತಾರನಾಥ ಎಂಬವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಡಿಕ್ಕಿ ಹೊಡೆದ ಪರಿಣಾಮ ಕಾಲಿಗೆ ಮತ್ತು ತಲೆಗೆ ನೋವುಂಟಾಗಿದ್ದು ಆ ಬಗ್ಗೆ ಪಿರ್ಯಾದಿದಾರರ ತಂದೆಯವರು ಚಿಕಿತ್ಸೆ ಪಡೆಯದೇ ಇದ್ದು ದಿನಾಂಕ: 13.02.2014 ರಂದು ತಲೆಗೆ ಮತ್ತು ಕಾಲಿಗೆ ಆದ ನೋವು ಉಲ್ಬಣಿಸಿದ್ದರಿಂದ ಚಿಕಿತ್ಸೆ ಬಗ್ಗೆ ಮಂಗಳೂರು ಅಥೆನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.12.2013 ರಂದು ಬೆಳಿಗ್ಗೆ ಸುಮಾರು 10.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಲಿಲಾ ಪಾಲ್ ರವರ ಗಂಡನ ಮೊದಲನೇ ಹೆಂಡತಿಯ ಮಕ್ಕಳಾದ ಆರೋಪಿ ಜಿತನ್ ಮತ್ತು ಜೋವೆಲ್ ಎಂಬವರು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದು ಅವರ ಗಂಡ ಮತ್ತು ತಾಯಿ ತಡೆಯಲು ಬಂದಾಗ ದೂಡಿ ಹಾಕಿರುತ್ತಾರೆ, ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲದೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಪಿರ್ಯಾದಿದಾರರ ಮೊಬೈಲ್ ಫೋನ್‌ನ್ನು ಕೊಂಡು ಹೋಗಿರುತ್ತಾರೆ ಮತ್ತು ಪಿರ್ಯಾಧಿದಾರರ ಗಂಡನನ್ನು ಎಳೆದು ಕರೆದುಕೊಂಡು ಹೋಗಿರುತ್ತಾರೆ.
No comments:
Post a Comment