Thursday, February 13, 2014

Daily Crime Reports 12-02-2014

ದೈನಂದಿನ ಅಪರಾದ ವರದಿ.

ದಿನಾಂಕ 12.02.201412:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-2014 ರಂದು ಮಧ್ಯಾಹ್ನ 12-00 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ರಾಜೇಶ್ವರಿ ಶೆಟ್ಟಿ ರವರು ತನ್ನ ಮಗಳನ್ನು ಭೇಟಿ ಮಾಡುವರೇ ಬೆಂಗಳೂರಿಗೆ ಹೋಗಿದ್ದು ದಿನಾಂಕ 10-02-2014 ರಂದು ರಾತ್ರಿ 19-00 ಗಂಟೆಗೆ ಮಂಗಳೂರಿಗೆ ಹೊರಟು ಬರುವರೇ ಬೆಂಗಳೂರು ಏರ್‌‌ಪೋರ್ಟ್ಗೆ ಬಂದಾಗ ಅಲ್ಲಿ ಮಂಗಳೂರಿಗೆ ಬರುವ ವಿಮಾನವು ತಡವಾಗಿ ಹೊರಡುವುದಾಗಿ ಹೇಳಿದಂತೆ ಅವರು ತನ್ನ ಅಣ್ಣ ರಾಘವ ಶೆಟ್ಟಿರವರಿಗೆ ಫೋನ್ ಮಾಡಿ ತಾನು ಮನೆಗೆ ಬರುವರೇ ತಡವಾಗುವುದರಿಂದ ಮನೆಗೆ ಹೋಗಿ ಹೊಟೇಲಿನಿಂದ 2 ಊಟ ಪಾರ್ಸೆಲ್ ತೆಗೆದುಕೊಂಡು ಹೋಗಿ ಇಡುವಂತೆ ಹೇಳಿದಂತೆ ರಾತ್ರಿ ಸುಮಾರು 10-00 ಗಂಟೆಗೆ ಫಿರ್ಯಾದಿದಾರರ ಅಣ್ಣ ಫೋನ್ ಮಾಡಿ ಬಾಗಿಲಿಗೆ ಕೀ ಬಳಸಿ ತೆರೆಯಲು ಪ್ರಯತ್ನಿಸಿದಾಗ ಮನೆ ಒಳಗಡೆಯಿಂದ ಚಿಲಕ ಹಾಕಿರುವುದಾಗಿ ಹೇಳಿದರು. ಸಮಯ ಫಿರ್ಯಾದಿದಾರರು ತಮ್ಮ ನರೆಮನೆ ವಾಸಿ ರಾಜೇಶ್ಎಂಬವರಿಗೆ ಫೋನ್ ಮಾಡಿ ತನ್ನಅಣ್ಣ ಮನೆಯ ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಒಳಗಡೆ ಚಿಲಕ ಹಾಕಿದಂತೆ ಕಂಡು ಬರುವುದಾಗಿ ಹೇಳಿದ್ದು ಅವರಲ್ಲಿಗೆ ಹೋಗಿ ಸಹಾಯ ಮಾಡಲು ಹೇಳಿದಂತೆ ರಾಜೇಶ್  ಮತ್ತು ಫಿರ್ಯಾದಿದಾರರ ಅಣ್ಣ ಇಬ್ಬರು ಬಾಗಿಲು ತೆರೆಯಲು ಪ್ರಯತ್ನಿಸಿದಾಗ ಒಳಗಡೆ ಚಿಲಕ ಹಾಕಿದ್ದು ಅವರು ಮನೆಯ ಹಿಂಬದಿಗೆ ಹೋಗಿ ಹಿಂಬಾಗಿಲು ನೋಡಿದಾಗ ಅದು ತೆರೆದಿರುವುದನ್ನು ಕಂಡು ನಂತರ ಫಿರ್ಯಾದಿದಾರರು ಮತ್ತು ಅವರ ಮಗಳ ಬಂದ ನಂತರ ಒಳಗೆ ಹೋಗಿ ನೋಡಿದಾಗ ಸುಮಾರು ರೂ 5,17,000/- ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11-02-2014 ರಂದು ಪಿರ್ಯಾದುದಾರರಾದ ಶ್ರೀ ಗಂಗಾಧರ ಶೆಟ್ಟಿ ರವರು ತಮ್ಮ ಬಾಬ್ತು ಹೊಂಡಾ ಆಕ್ಟಿವಾ ಸ್ಕೂಟರ್ನಂಬ್ರ KA-20-R-3654 ನೇದರಲ್ಲಿ ಕೆಲಸದ ನಿಮಿತ್ತ ಮಂಗಳೂರು ನಗರದ ಬಂದರಿಗೆ ಬಂದಿದ್ದು, ಕೆಲಸ ಮುಗಿಸಿ ವಾಪಾಸು ತನ್ನ ಮನೆಯಾದ ಮಣ್ಣಗುಡ್ಡಕ್ಕೆ ಹೋಗುವರೇ ನ್ಯೂಚಿತ್ರ ಅಳಕೆಯಿಂದಾಗಿ ಉಳ್ಳಾಲ ನರ್ಸಿಂಗ್ಹೋಂ ಬಳಿಗೆ ಸಂಜೆ ಸುಮಾರು 16:10 ಗಂಟೆಗೆ ತಲುಪಿದಾಗ, ಅವರ ಎದುರುಗಡೆಯಿಂದ ಅಂದರೆ ಮಣ್ಣಗುಡ್ಡ ಕಡೆಯಿಂದ  ನ್ಯೂಚಿತ್ರಾ ಕಡೆಗೆ ಒಂದು ಮೋಟಾರು ಸೈಕಲ್ನ್ನು ಅದರ ಸವಾರನು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಟೊರಿಕ್ಷಾವನ್ನು ಓವರ್ಟೆಕ್ಮಾಡುವ ಭರದಲ್ಲಿ ತೀರಾ ಬಲಕ್ಕೆ ಚಲಾಯಿಸಿ, ರಸ್ತೆಯ ತೀರಾ ಎಡಬದಿಯಲ್ಲಿ ವಾಹನ ಚಲಾಯಿಸುತ್ತಿದ್ದ ಪಿರ್ಯಾದಿದಾರರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು  ಸ್ಕೂಟರ್ಸಮೇತ ರಸ್ತೆಗೆ ಬಿದ್ದು  ಎಡಕೈಯ  ರಿಸ್ಟ್ಬಳಿ ಮೂಳೆ ಮುರಿತದ ಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾದ್ದವರನ್ನು ಸಾರ್ವಜನಿಕರು ಹಾಗೂ ಪರಿಚಯಸ್ಥರು ಚಿಕಿತ್ಸೆಯ ಬಗ್ಗೆ ವಿನಯಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ.   ಅಪಘಾತ ನಡೆಸಿದ ಮೋಟಾರು ಸೈಕಲನ್ನು ನಿಲ್ಲಿಸದೇ ಪರಾರಿಯಾಗಿದ್ದು,  ಸದ್ರಿ ಮೋಟಾರು ಸೈಕಲ್ ನಂಬ್ರ KL 7188 ಆಗಿದ್ದು,  ಟಿವಿಎಸ್ಅಪಾಚೆ ಕಂಪೆನಿಯ ಹಳದಿ ಬಣ್ಣದ್ದಾಗಿರುತ್ತದೆ.

 

3.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/02/2014 ರಂದು ಭಾನುವಾರ ಪಿರ್ಯಾದಿದಾರರಾದ ಶ್ರೀ ಶಶಿಧರ ಪೈ ರವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಇರುವ ತಮ್ಮ ಬಾಬ್ತು ಮರೂರು ಎಲ್ಯುಮಿನಿಯಂ ಮತ್ತು ಇಂಟೀರಿಯರ್ ಕಂಪೆನಿಯ  ಬಾಗಿಲನ್ನು  ಸಂಜೆ ಸುಮಾರು 6-00 ಗಂಟೆಗೆ ಮುಚ್ಚಿ ಮನೆಗೆ ಹೋಗಿದ್ದು ತಾರೀಕು 10/02/2014 ರಂದು ಬೆಳಿಗ್ಗೆ 09-00 ಗಂಟೆಗೆ ತಮ್ಮ ಸಂಸ್ಥೆಗೆ ಬಂದಾಗ ತಾನು ದಿನಾಂಕ 09/02/2014 ರಂದು ತುಂಡರಿಸಿ ತಮ್ಮ ಸಂಸ್ಥೆಯ ಕಂಪೌಂಡಿನಲ್ಲಿ ಇರಿಸಿದ್ದ 18 mm ಕಬ್ಬಿಣದ ವಯರ್ ರೋಪ್ ಹಾಗೂ 400 Amps ಸುಮಾರು 15 ಮೀಟರಿನ ತಾಮ್ರದ ವೆಲ್ಡಿಂಗ್ ಕೇಬಲ್ ಮತ್ತು 15 ಅಡಿ ಉದ್ದರ ತಾಮ್ರದ ಕೇಬಲ್ ಗಳನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಸೊತ್ತುವಿನ ಮೌಲ್ಯ 18 mm ಕಬ್ಬಿಣದ ವಯರ್ ರೋಪ್ 12000/-, 400 Amps ಸುಮಾರು 15 ಮೀಟರಿನ ತಾಮ್ರದ ವೆಲ್ಡಿಂಗ್ ಕೇಬಲ್ 4500/- ಹಾಗೂ 15 ಅಡಿ ಉದ್ದರ ತಾಮ್ರದ ಕೇಬಲ್ 3500/- ಒಟ್ಟು  20000/- ರೂಪಾಯಿಯಾಗ ಬಹುದು.  

 

4.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2014 ರಂದು ಪಿರ್ಯಾದಿದಾರರಾದ ಶ್ರೀ ಚಂದ್ರಹಾಸ ರವರು ತನ್ನ ಬೈಕ್ ನಂಬ್ರ ಕೆಎ-19-ಇಇ-9442 ನೇ ದರಲ್ಲಿ ತನ್ನ ಬಾವ ಚಂದ್ರಹಾಸರವರನ್ನು ಕೂರಿಸಿಕೊಂಡು ಮಂಗಳೂರಿನಿಂದ ರಾತ್ರಿ ಸುಮಾರು 10-15 ಗಂಟೆಗೆ ಹೊರಟು ಬಾವನವರನ್ನು ಕುಳಾಯಿಯಲ್ಲಿರುವ ಅವರ ಮನೆಗೆ ಬಿಟ್ಟು ಬರಲು ಹೊರಟಿದ್ದು ರಾತ್ರಿ ಸುಮಾರು 11-00 ಗಂಟೆಗೆ ಬೈಕಂಪಾಡಿ ಓವರ್ ಬಿಡ್ಜ್ ರಾ.ಹೆ. 66 ರಲ್ಲಿ ಸಾಗುತ್ತಿದ್ದಂತೆ ಪಿರ್ಯಾದಿದಾರರ ಬೈಕ್  ಮುಂದೆ ಸ್ವಲ್ಪ ದೂರದಲ್ಲಿ ಸ್ಕೂಟರ್ ಒಂದು ರಸ್ತೆಯ ಎಡಬದಿಯಲ್ಲಿ ಬೈಕಂಪಾಡಿ ಕಡೆಗೆ ಹೋಗುತ್ತಿದ್ದು ಅದರ ಎದುರು ಬದಿಯಿಂದ ಬರುತ್ತಿದ್ದ ಲಾರಿಯ ಚಾಲಕ ಮುಂದೆ ಹೋಗುವ ಇತರೆ ವಾಹನವನ್ನು ಓವರ್ ಟೇಕ್ ಮಾಡುವ ಬರದಲ್ಲಿ ಅತೀ ವೇಗಾ ಹಾಗೂ ಅಜಾಗರುಕತೆಯಿಂದ ತೀರ ಬಲ ಬದಿಗೆ ಬಂದು ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಯ ಬಲಬದಿಗೆ ಅಡ್ಡವಾಗಿ ಬಿದ್ದಿದ್ದು ಕೂಡಲೆ ಲಾರಿ ಚಾಲಕ ಲಾರಿಯನ್ನು ಎಡ ಬದಿಗೆ ತೆಗೆದುಕೊಂಡಿದ್ದು ಅಪಘಾತದಿಂದ ಸ್ಕೂಟರ್ ಸವಾರನ ತಲೆಯ ಹಿಂಬದಿಗೆ ಗುದ್ದಿದಂತಹ ಹಾಗೂ ಬಲ ಕಾಲಿಗೆ ರಕ್ತ ಬರುವ ಗಾಯವಾಗಿದ್ದು ಅಪಘಾತವನ್ನು ಉಂಟು ಮಾಡಿದ ಲಾರಿ ಚಾಲಕ ಲಾರಿಯನ್ನು ಮುಂದೆ ಹೋಗಿ ನಿಲ್ಲಿಸಿ ಅಪಘಾತವಾಗಿರುವುದನ್ನು ಕಂಡು ಅಲ್ಲಿಂದ ಮುಂದಕ್ಕೆ ಚಲಾಯಿಸಿಕೊಂಡು ಪರಾರಿಯಾಗಿದ್ದು ಲಾರಿ ನಂಬ್ರ ಟಿಎನ್-28/3376 ಆಗಿದ್ದು ಅಪಘಾತಕ್ಕೆ ಒಳಗಾದ ಸ್ಕೂಟರಿನ ನಂಬ್ರ ಕೆಎ-19/ಇಹೆಚ್-2920 ಆಗಿರುತ್ತದೆ. ಅಪಘಾತದಿಂದ ಗಾಯಗೊಂಡ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಆಟೋ ರಿಕ್ಷ  ಒಂದರಲ್ಲಿ ಆಸ್ಪತ್ರೆಗೆ ಕಳುಹಿಸಿದ್ದು ಆಪಘಾತ  ಉಂಟು ಮಾಡಿದ ಲಾರಿ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡದೆ ಪರಾರಿಯಾಗಿರುವುದಾಗಿದೆ.

 

5.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 11-02-2014ರಂದು ಬೆಳಿಗ್ಗೆ ಸುಮಾರು 05-00ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಗೇಶ್ ಅರುಣ್ ರವರು ತನ್ನ ಮನೆಯಿಂದ ಬೈಕ್ ನಂಬ್ರ ಕೆಎ-19/ಇಆರ್-9429 ನೇ ದರಲ್ಲಿ ಬೈಕಂಪಾಡಿಯಲ್ಲಿರುವ ತನ್ನ ಮಾವ ನಾರಾಯಣರ ಮನೆಗೆ ಅಗತ್ಯ ಕೆಲಸದ ಮೇರೆಗೆ ಹೋಗುತ್ತಿದ್ದು ಸಮಯ ಸುಮಾರು 05-30 ಗಂಟೆಗೆ ನವ ಮಂಗಳೂರು ಬಂದರು ಮುಖ್ಯ ದ್ವಾರದ ಎದುರು ರಾ.ಹೆ. 66 ಸಾಗುತ್ತಿದ್ದಂತೆ ಮುಂದೆ ಸುಮಾರು 50 ಅಡಿ ದೂರದಲ್ಲಿ ರಸ್ತೆಯ ಎಡಬದಿಯಲ್ಲಿ ಸಾಗುತ್ತಿದ್ದ ಅಟೋ ರಿಕ್ಷ ಒಂದಕ್ಕೆ ಹಿಂದಿನಿಂದ ಬರುತ್ತಿದ್ದ ಲಾರಿಯ ಚಾಲಕ ಒಮ್ಮೆಲೆ ಲಾರಿಯನ್ನು ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ರಿಕ್ಷದ ಹಿಂಬದಿಗೆ ಡಿಕ್ಕಿ ನಡೆಸಿದ್ದು  ಪರಿಣಾಮ ಅಟೋ ರಿಕ್ಷ ಒಮ್ಮೆಲೆ ಮುಂದೆ ಹೋಗಿ ರಸ್ತೆಯ ಎಡ ಬದಿಇದ್ದ ತೋಡಿಗೆ ಅದರ ಮುಂಭಾಗ ಹೋಗಿ ಗುದ್ದಿದ್ದು ಡಿಕ್ಕಿ ನಡೆಸಿದ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದು ಕತ್ತಲೆ ಇದ್ದುದ್ದರಿಂದ ಲಾರಿ ನಂಬ್ರ ನೋಡಲಾಗಲಿಲ್ಲ.  ಲಾರಿ ಬೈಕಂಪಾಡಿ ಕಡೆಗೆ ಹೋಹಿತು ಗಾಯಗೊಂಡ ರಿಕ್ಷ ಚಾಲಕನನ್ನು ಉಪ ಚರಿಸಿದ್ದು ಆತನ ಹೆಸರು ಬಿಜು ಮೋನು ಎಂದು ತಿಳಿಸಿದ್ದು ಇತರ ವಾಹನ ಪ್ರಯಾಣಿಕರು ಮತ್ತು ಆಸು ಪಾಸು ಜನರು ಬಂದು ಅಂಬ್ಯೂಲೆನ್ಸ್ ನಲ್ಲಿ ರಿಕ್ಷ ಚಾಲಕನನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಅಪಘಾತದಿಂದ ರಿಕ್ಷ ಚಾಲಕನ ತಲೆಯ ಹಿಂಬದಿಗೆ ಬಲ ಹಣೆಗೆ ಮತ್ತು ಕೈಗೆ ಮತ್ತು ಮುಖಕ್ಕೆ ತರಚಿದ ಗಾಯವಾಗಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಬೆಳಕಿನಿಂದ ರಿಕ್ಷವನ್ನು ನೋಡಲಾಗಿ ಅದರ ನಂಬ್ರ ಕೆಎ-19/ಸಿ-6897 ಆಗಿತ್ತು.  ಅಪಘಾತಕ್ಕೆ ಲಾರಿ ಚಾಲಕನ ಅತೀ ವೇಗಾ ಹಾಗೂ ಅಜಾಗರುಕತೆಯೇ ಕಾರಣವಾಗಿರುತ್ತದೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸದೆ ಮತ್ತು ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡದೆ ಅಪಘಾತ ಉಂಟು ಮಾಡಿ ಪರಾರಿಯಾಗಿರುವುದಾಗಿದೆ.

 

6.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-02-2014 ರಂದು ಬೆಳಿಗ್ಗೆ 10-30 ಗಂಟೆಗೆ  ಪಿರ್ಯಾದಿದಾರರಾದ ಶ್ರೀಮತಿ ಯಶೋದಾ ರವರು ವಾಸವಾಗಿರುವ  ಮಂಗಳೂರಿನ ಜೆಪ್ಪು  ಅರೆಕೆರೆ ಬೈಲು ಪರಿಶಿಷ್ಟ ಜಾತಿಯ ಕಾಲನಿಗೆ,  ಹಿಂದೂ ಜಾಗರಣ ವೇದಿಕೆಯ ಯುವಕರು ಮತ್ತು ಮಹಿಳೆಯರು ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು  ಸಾರ್ವಜನಿಕವಾಗಿ ಕಾಲನಿಯಲ್ಲಿರುವ ಪಿರ್ಯಾದಿದಾರರನ್ನು ಮತ್ತು ಇತರರನ್ನು ಉದ್ದೇಶಿಸಿ, ಇವರ ಪೈಕಿ ಜ್ಯೋತಿ, ಪುಷ್ಪ,ಕಲಾವತಿ , ಪ್ರವೀಣ ಯಾನೆ ಮುನ್ನ ಎಂಬವರುಗಳು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ಕೈಕಾಲು ಮುರಿದು ಹಾಕುವುದಾಗಿಯೂ, ಇವರ ಪೈಕಿ ರಾಹುಲ್ ಮೊಕದ್ದಮೆ ದಾಖಲಿಸಿದರೆ, ದಾಖಲಿಸಲಿ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿರುತ್ತಾರೆ.   ಘಟನೆಗೆ ಕಾರಣವೇನೆಂದರೆ, ದಿನಾಂಕ 08-02-2014 ರಂದು ಗೋರಕ್ಷದಂಡು ಜೆಪ್ಪು ಪ್ರದೇಶದ ಹಿಂದೂ ಜಾಗರಣ ವೇದಿಕೆಯ ಕೆಲವು ಯುವಕರಿಗೆ ಮತ್ತು ಬೇರೆ ಪ್ರದೇಶದ ಯುವಕರೊಳಗೆ ಜಗಳವಾಗಿರುತ್ತದೆ. ಜಗಳವನ್ನೆ ನೆಪಮಾಡಿಕೊಂಡು ಕೃತ್ಯ ವೆಸಗಿರುವುದಾಗಿದೆ.

 

7.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮರ್ಝಕ್ ಮಹಮ್ಮದ್ ಮತ್ತು ತನ್ನ ಸ್ನೇಹಿತ ಮೊಹಮ್ಮದ್ ಸಾಹೀಲ್ ಎಂಬವರು ಸುಮಾರು 3 ತಿಂಗಳಿನಿಂದ ಮಂಗಳೂರು ನಗರದ ಅಳಕೆಯಲ್ಲಿರುವ ಬಾಡಿ ಟೋನ್ ಎಂಬ ಜೀಮ್ ದಿನಾಲೂ ಸಂಜೆ ಸಮಯದಲ್ಲಿ ಹೋಗಿ ವ್ಯಾಯಾಮ ಮಾಡಿ ಬರುತ್ತಿದ್ದು, ದಿನಾಂಕ 10-02-2014 ರಾತ್ರಿ ಸುಮಾರು 8:00 ಗಂಟೆಗೆ ಪಿರ್ಯಾದಿದಾರರು ಮತ್ತು ಸ್ನೇಹಿತ ಮೊಹಮ್ಮದ್ ಸಾಹೀಲ್ ರವರು ಬಾಡಿ ಟೋನ್ ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತಿದ್ದಾಗ ರಾತ್ರಿ ಸುಮಾರು 8:45 ಗಂಟೆಗೆ ಕುದ್ರೋಳಿಯ ಪರಿಚಯದವರಾದ ಸುನೀರ್, ಕೈಸಲ್, ಅಬ್ದುಲ್ಲಾ ಮತ್ತು ಸಮೀರ್ ಎಂಬವರು ಜಿಮ್ ಗೆ ಬಂದು ನಿಮ್ಮಲ್ಲಿ ಮಾತನಾಡಲಿಕ್ಕಿದೆ ಎಂದು ಕರೆದಿದ್ದು, ಆಸಮಯ ಪಿರ್ಯಾದಿದಾರರು ಮತ್ತು ಮೊಹಮ್ಮದ್ ಸಾಹೀಲ್ ರವರು ಜಿಮ್ ಹೊರಗೆ ಬಂದಿದ್ದು, ಹೊರಗೆ ಬರುತ್ತಿದ್ದಂತೆ ಸುನೀರ್ ಎಂಬವರು ಏಕಾಏಕಿಯಾಗಿ ಪಿರ್ಯಾದಿದಾರರ ಮುಖಕ್ಕೆ ಹಾಗೂ ತಲೆಯ ಹಿಂಬದಿಗೆ ಕಲ್ಲಿನಿಂದ ಗುದ್ದಿದ್ದು, ಉಳಿದವರು ಕೈಗೆ ಬೆನ್ನಿಗೆ ಕೈಯಿಂದ ಹೊಡೆದು, ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದಿದ್ದು, ಗಲಾಟೆ ಬಿಡಿಸಲು ಬಂದ ಮೊಹಮ್ಮದ್ ಸಾಹೀಲ್ ರವರನ್ನು ದೂಡಿ ಕೈಯಿಂದ ಹೊಡೆದಿದ್ದು, ಅಷ್ಟರಲ್ಲಿ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಜನರು ಬರುವುದನ್ನು ಕಂಡು ಸುನೀರ್ ನು "ಬೆವರ್ಷಿ" ಎಂದು ಅವಾಚ್ಯ ಶಬ್ದದಿಂದ ಬೈದು, "ನೀನು ನನ್ನನ್ನು ಬಾರಿ ದೃಷ್ಠಿಸಿ ನೋಡುತ್ತಿಯಾ, ಮುಂದಕ್ಕೆ ನೋಡಿದರೆ ನಿನ್ನನ್ನು ನೋಡಿಕೊಳ್ಳುತ್ತೇನೆ" ಎಂದು ಜೀವ ಬೆದರಿಕೆಯೊಡ್ಡಿದ್ದು, ಅಲ್ಲದೇ "ಕಂಪ್ಲೇಟ್ ಕೊಟ್ರೆ ನಿನ್ನ ಮನೆಗೆ ನುಗ್ಗಿ ಹೊಡೆಯುತ್ತೇನೆ" ಎಂದು ಬೆದರಿಸಿದ್ದು, ನಂತರ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

 

8.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2014 ರಂದು ಅಪರಾಹ್ನ 2-00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಪಾರ್ವತಮ್ಮ ರವರು ಮಂಗಳೂರು ತಾಲೂಕು ಸುರತ್ಕಲ್ ಠಾಣಾ ಸರಹದ್ದಿನ ಸುರತ್ಕಲ್ ಮಾರ್ಕೆಟ್ ಮುಂಬಾಗ ಇರುವ ಬಜ್ಪೆ ಬಸ್ಸು ತಂಗುದಾಣದ ಬಳಿಯ ಗೂಡಂಗಡಿ ಹಿಂಬದಿ ನೆರಳಿನಲ್ಲಿ ಮಲಗಿರುವ ಸಮಯ ಪಶ್ಚಿಮದಿಂದ ಪೂರ್ವ ಕಡೆಗೆ ಅಂದರೆ ದೂಮಾವತಿ ದೈವಸ್ಥಾನದ ಕಡೆಗೆ ಒಂದು ಕಾರಿನ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಪಿರ್ಯಾದಿ ಮಲಗಿರುವಲ್ಲಿಂದ ಹಾಯಿಸಿ ಹೋದ ಪರಿಣಾಮ ಪಿರ್ಯಾದಿಯ ಎಡ ಕಿವಿಯ ಬಳಿ ಕಾರು ತಾಗಿ ಕಿವಿ ಭಾಗವಾಗಿ ತಲೆಗೆ ಗಾಯವಾಗಿದ್ದು ಆರೋಪಿ ಕಾರು ಚಾಲಕನು ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು  ನಂತರ ಪಿರ್ಯಾದಿಯನ್ನು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿ ಅಪಘಾತವನ್ನುಂಟು ಮಾಡಿದ ಕಾರು  ಕೆಂಪು ಬಣ್ಣದಾಗಿದ್ದು ನಂಬ್ರ ವನ್ನು ನೋಡದೇ ಇರುವುದಾಗಿದೆ.

 

9.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-02-2014 ರಂದು ಉತ್ತರ ಉಪವಿಭಾಗದ ಎಸಿಪಿ ರವರಾದ ಶ್ರೀ ರವಿಕುಮಾರ್ ಇವರಿಗೆ ಕುಳಾಯಿಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿರುವುದಾಗಿ ಮಾಹಿತಿ ಬಂದಂತೆ ದಾಳಿ ನಡೆಸುವರೇ ಆದೇಶಿಸಿದಂತೆ ಪಿರ್ಯಾದಿದಾರರಾದ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಕುಮಾರೇಶ್ವರನ್ ಎಂ. ರವರು ಸಿಬ್ಬಂದಿಗಳೊಂದಿಗೆ ಕುಳಾಯಿ ಗ್ರಾಮದ ನಮ್ಮ ಟಿ.ವಿ ಕಟ್ಟಡದ ಹಿಂಬದಿ ಅಪರಾಹ್ನ 1-15 ಗಂಟೆಗೆ ಹೋಗಿ ನೋಡಲಾಗಿ ಅಲ್ಲಿ ನಮ್ಮ ಟಿ.ವಿ ಕಟ್ಟಡದ ಹಿಂಬದಿ ವಿಶಾಲವಾದ ಗದ್ದೆಯ ಒಂದು ಬದಿಯಲ್ಲಿ ಸುಮಾರು 10-15 ಜನರು ಒಟ್ಟಾಗಿ ಸೇರಿ ಕೋಳಿಗಳನ್ನು ಇಟ್ಟು ಜುಗಾರಿ ಆಟ ಆಡುತ್ತಿರುವುದನ್ನು ಕಂಡು ಅಲ್ಲಿಗೆ ದಾವಿಸಿದಾಗ ಸದರಿ ಜನರು ಅಲ್ಲಿಂದ ಓಡಿ ಹೋಗಲು ಸಿಬ್ಬಂದಿಗಳು ಅವರ ಪೈಕಿ 7 ಜನರನ್ನು ಹಾಗೂ 7 ಕೋಳಿಗಳನ್ನು ಹಿಡಿದಿದ್ದು, ಆರೋಪಿಗಳು ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿರುವುದರಿಂದ ಸದ್ರಿಯವರನ್ನು ಅಪರಾಹ್ನ 1-30 ಗಂಟೆಗೆ ವಶಕ್ಕೆ ಪಡೆದು, ಕೋಳಿ ಹಾಗೂ ಕಳದಲ್ಲಿದ್ದ ನಗದು ರೂ 1490/-ನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ.

 

10.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-02-2014 ರಂದು 15-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಅಶೋಕ್ ರವರು ಕೆಎ 19 ಕ್ಯೂ 9402 ನೇ ಮೋಟಾರು ಸೈಕಲ್ನಲ್ಲಿ ಸವಾರಿಮಾಡುತ್ತಾ, ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ರಾಹೆ. 66 ಕೆ.ಸಿ.ರೋಡ್ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಕೆಎ 19 ಎಮ್ಬಿ 7427 ನೇ ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದುದರಿಂದ ರಸ್ತೆಗೆ ಬಿದ್ದ ಪಿರ್ಯಾದುದಾರರ ಬಲಕಾಲಿನ ಮೊಣಗಂಟಿಗೆ ಮತ್ತು ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಪಾದ, ಬಲಕೈ ಮತ್ತು ಶರೀರದ ಇತರ ಕಡೆಗಳಿಗೆ ಗಾಯವಾಗಿರುತ್ತದೆ. ಗಾಯಾಳು ಪಿರ್ಯಾದುದಾರರು ಮಂಗಳೂರು ಸರಕಾರಿ ವೆನ್ಲಾಕ್ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

11.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 10-2-2014 ರಂದು ಮದ್ಯಾಹ್ನ 2-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕಿನ್ಯಾ ಗ್ರಾಮದ ಉಕ್ಕುಡ ರೆಹ್ಮತುಲ್ಲಾ ಇಸ್ಲಾಂ ಮಸೀದಿಯ ಬಳಿ ವಾಸವಾಗಿರುವ ಫಿರ್ಯಾದಿದಾರರಾದ ಶ್ರೀಮತಿ ಮಮ್ತಾಜ್ ರವರ ವಾಸದ ಮನೆಯ ಬಾಗಿಲನ್ನು ಆರೋಪಿ ಸದಖತ್ತುಲ್ಲಾ ರವರು ಬಡಿದು ಶಬ್ದ ಮಾಡಿದ ಬಗ್ಗೆ ಫಿರ್ಯಾದಿದಾರರು ಅವರಲ್ಲಿ ಬಾಗಿಲು ಬಡಿಯ ಬೇಡಿ ಎಂದು ಹೇಳಿದ್ದರು. ನಂತರ ಅದೇ ದಿನ ರಾತ್ರಿ ಸುಮಾರು 8-30 ಗಂಟೆಯ ಸಮಯಕ್ಕೆ ಆರೋಪಿ ಅದಖತುಲ್ಲಾ, ಅವರ ಮಗ ಇರ್ಫಾನ್‌, ಮಗಳು ಅನಿಷಾ, ಮತ್ತು ಹೆಂಡತಿ ಮೈಮುನ ರವರು ಫಿರ್ಯಾದಿದಾರರ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಸದಖತುಲ್ಲಾ ಮತ್ತು ಇರ್ಫಾನ್ ರವರು ಫಿರ್ಯಾದಿದಾರರ ಮೈಗೆ ಕೈಹಾಕಿ ದೂಡಿದಾಗ ಫಿರ್ಯಾದಿದಾರರು ಗೋಡೆಗೆ ತಾಗಿ ಕೆಳಗೆ ಬಿದ್ದ ಪರಿಣಾಮ ಅವರ ಎದೆಗೆ ಗುದ್ದಿದ ಗಾಯವಾಗಿ ಎಡ ಕೈಯ ಮುಂಗೈ ಕೆಳಗೆ ತರಚಿದ ಗಾಯವಾಗಿರುತ್ತದೆ. ನಂತರ ಮೈಮುನ ಮತ್ತು ಅನಿಷಾ ಇವರು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯಶಬ್ದಗಳಿಂದ ಬೈದು ನಿನ್ನ ಮಗನಿಗೆ ಮತ್ತು ನಿನಗೆ ಸೀಮೆ ಎಣ್ಣೆ ಹಾಕಿ ಸುಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗುವಾಗ ಫಿರ್ಯಾದಿದಾರರ ಮನೆಗೆ ಕಲ್ಲು ಬಿಸಾಡಿರುತ್ತಾರೆ.

 

12.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.02.2014 ರಂದು 07.00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಚಂದನ್ ಸಿಂಗ್ ರವರು ತನ್ನ ಬಾಬ್ತು ಕೆಎ-19-ಇಡಿ-3864 ನೇ ಮೋಟಾರ್‌‌ ಸೈಕಲ್ನಲ್ಲಿ ಮಂಗಳೂರು ಕಡೆಯಿಂದ ಸುಳ್ಯ ಕಡೆಗೆ ಹೋಗುತ್ತಾ  ರಾಹೆ-73 ರಲ್ಲಿ ಅಡ್ಯಾರ್‌‌ ಸಹ್ಯಾದ್ರಿ ಕಾಲೇಜ್‌‌ ಕ್ಯಾಂಪಸ್‌‌ ಬಳಿ ತಲುಪಿದಾಗ ಪಿರ್ಯಾದಿದಾರರ ಎಡಬದಿಯಿಂದ ಅಂದರೆ ಮಂಗಳೂರು ಕಡೆಯಿಂದ ಬಿ.ಸಿ ರೋಡ್‌‌ ಕಡೆಗೆ   ಕೆಎ-50-1262 ನೇ ಟಿಪ್ಪರ್‌‌ ಲಾರಿಯನ್ನು ಅದರ ಚಾಲಕ ಸತೀಶ್‌‌ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ  ಸೂಚನೆಯನ್ನು ನೀಡದೆ  ಏಕಾಏಕಿಯಾಗಿ ಎಡದಿಂದ ಬಲಕ್ಕೆ  ಅಂದರೆ ತೆರೆದ ಡಿವೈಡರ್‌‌ ಮೂಲಕ ಸಹ್ಯಾದ್ರಿ ಕಾಲೇಜ್ಕಡೆಗೆ ತಿರುಗಿಸಿದ್ದರಿಂದ ಸದ್ರಿ ಟಿಪ್ಪರ್‌‌ ಲಾರಿಯ ಬಲಬದಿಯು ಪಿರ್ಯಾದಿದಾರರ ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಸದ್ರಿಯವರು ಮೋಟಾರ್‌‌ ಸೈಕಲ್ಸಮೇತ ರಸ್ತೆಗೆ ಬಿದ್ದು  ಅವರ ಎಡಕಾಲಿಗೆ ತೀವ್ರಸ್ವರೂಪದ ಮೂಳೆಮುರಿತದ ಜಖಂ ಮತ್ತು ಬಲಕಾಲಿನ ಮೊಣಗಂಟಿಗೆ, ಎಡಕಾಲು ಪಾದದ ಬಳಿ ಗಾಯವಾಗಿದ್ದು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

13.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11.02.2014  ರಂದು ಮದ್ಯಾಹ್ನ 12.30 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ  ಸುಜಾತ   ಪ್ರಾಯ:27 ವರ್ಷ  ರವರು ತನ್ನ ಬಾಬ್ತು  ಟಿವಿಎಸ್ ಸ್ಕೂಟಿ  ಕೆಎ  19 EF 2430 ನೇದರಲ್ಲಿ ಶ್ರೀಮತಿ ರಾಧಿಕಾ ಎಂಬವರನ್ನು ಸಹಸವಾರರನ್ನಾಗಿಸಿ ಕುಳ್ಳಿರಿಸಿಕೊಂಡು  ಲಿಂಗಪ್ಪಯ್ಯಕಾಡು  ಕಡೆಯಿಂದ  ಬಪ್ಪನಾಡು ಗ್ರಾಮದ  ಮುಲ್ಕಿ ಆರ್.ಆರ್.ಟವರ್ ಗೆ ಹೋಗುವರೇ  ಆರ್.ಆರ್ ಟವರ್ ಬಳಿ ತನ್ನ  ಸ್ಕೂಟರನ್ನು  ಬಲಕ್ಕೆ ತಿರುಗಿಸುವ  ಸಮಯ  ಉಡುಪಿ ಕಡೆಯಿಂದ  ಕೆಎ  19 MC  5649 ನೇ  ಕಾರನ್ನು ಅದರ ಚಾಲಕ  ನವಾಜ್ ಎಂಬಾತನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಬಲಬದಿಗೆ  ಚಲಾಯಿಸಿಕೊಂಡು ಬಂದು  ಫಿರ್ಯಾದಿದಾರರು ಸವಾರಿಮಾಡಿಕೊಂಡು ಹೋಗುತ್ತಿದ್ದ  ಸ್ಕೂಟರ್ ಗೆ ಢಿಕ್ಕಿಪಡಿಸಿದ ಪರಿಣಾಮ  ಫಿರ್ಯಾದಿದಾರರ  ತಲೆಯ ಹಿಂಬದಿಗೆ   ಸೊಂಟಕ್ಕೆ ರಕ್ತಗಾಯವಾಗಿದ್ದು   ಕಾಲಿಗೆ ಎದೆಗೆ ಗುದ್ದಿದ ನೋವುಂಟಾಗಿರುತ್ತದೆ  ಹಾಗೂ ಸಹಸವಾರ ರಾಧಿಕಾರವರಿಗೆ  ಎಡಕೋಲು ಕಾಲಿಗೆ  ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ಮುಕ್ಕಾಶ್ರೀನಿವಾಸ್ ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

No comments:

Post a Comment