ದೈನಂದಿನ ಅಪರಾದ ವರದಿ.
ದಿನಾಂಕ 25.02.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 1 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 24.02.2014 ರಂದು ಪಿರ್ಯಾದಿದಾರರಾದ ಶ್ರೀಮತಿ ರೋಹಿಣಿ ಕಾಮತ್ ರವರು ತನ್ನ ಬಾಬ್ತು ಕಾರು ನಂಬ್ರ ಕೆಎ.19.ಎಂಎ.3877ನೇಯದನ್ನು ಮಂಗಳೂರು ನಗರದ ಸಾರ್ವಜನಿಕ ರಸ್ತೆಯಾದ ಜಿ.ಹೆಚ್.ಎಸ್ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸಂಜೆ 17.11 ಗಂಟೆಗೆ ಶ್ರೀನಿವಾಸ್ ಹೊಟೇಲ್ ಬಳಿ ತಲುಪಿದಾಗ ಆರೋಪಿ ಕಾರು ಚಾಲಕ ತನ್ನ ಬಾಬ್ತು ಕಾರು ಕೆಎ.19.ಎಂಸಿ.9220ನೇದನ್ನು ಪಿರ್ಯಾದಿದಾರರ ಕಾರಿನ ಹಿಂದುಗಡೆಯಿಂದ ಅಂದರೆ ಜಿ.ಎಸ್ ಹೆಚ್ ರಸ್ತೆಯಿಂದ ಕೆ.ಬಿ.ಕಟ್ಟೆಕಡೆಗೆ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂದುಗಡೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂದುಗಡೆ ಜಖಂ ಆಗಿದ್ದು, ಅಪಘಾತದ ನಂತರ ಸದ್ರಿ ಕಾರು ಚಾಲಕ ಕಾರು ಸಮೇತ ಪರಾರಿಯಾಗಿರುವುದಾಗಿದೆ
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/24.02.2014 ರಂದು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಯಾರಿಗೂ ತಿಳಿಯದಂತೆ ಯಾವುದೋ ದುರುದ್ದೇಶದಿಂದ ಯಾವುದೋ ವಾಹನದಲ್ಲಿ ಬಂದು ಪ್ರಾಯ ಸುಮಾರು 35 ರಿಂದ 40 ವರ್ಷದ ಪ್ರಾಯದ ಅಪರಿಚಿತ ಹೆಂಗಸನ್ನು ಪಡುಪಣಂಬೂರು ಗ್ರಾಮದ ಪಡುಪಣಂಬೂರು ಪೆಟ್ರೋಲ್ ಪಂಪಿನ ಎದುರಿನ ಗುಡ್ಡವನ್ನು ಅಗೆದು ಸಮತಟ್ಟು ಮಾಡಿರುವ ಜಾಗದಲ್ಲಿ ಕೊಲೆ ಮಾಡಿರುವುದಾಗಿದೆ.
ಈ ಮಹಿಳೆಯ ಬಗ್ಗೆ ಮಾಹಿತಿ ಇರುವವರು ಮುಲ್ಕಿ ಪೊಲೀಸ್ ಠಾಣೆ 0824-2290533, ಎಸಿಪಿ ಪಣಂಬೂರು 0824-2220526, ಪೊಲೀಸ್ ಕಂಟ್ರೋಲ್ 0824-2220800 ಗೆ ಮಾಹಿತಿ ನೀಡಲು ಕೋರಲಾಗಿದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀಮತಿ ಜೇಸಿಂತಾ ಡಿ'ಸೋಜಾ (ಮುಖ್ಯ ಶಿಕ್ಷಕರು [ಪ್ರಭಾರ], ದ.ಕ.ಜಿ.ಪಂ.ಮಾ.ಹಿ ಪ್ರಾ. ಶಾಲೆ, ಮರಕಡರವರು ದಿನಾಂಕ 22-02-2014 ಗಂಟೆಗೆ ಮಧ್ಯಾಹ್ನ 1-30 ಗಂಟೆಗೆ ಶಾಲೆಯ ಅಡುಗೆ ಕೋಣೆಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 24-02-2014 ರಂದು ಬೆಳಿಗ್ಗೆ 9-00 ಗಂಟೆಗೆ ಶಾಲೆಗೆ ಬಂದಾಗ ಶಾಲೆಯ ಅಡುಗೆ ಸಿಬ್ಬಂದಿಯಾದ ಶ್ರೀಮತಿ ಗುಣವತಿಯವರು ಪಿರ್ಯಾದಿದಾರರಲ್ಲಿ ದಿನಾಂಕ 24-02-2014 ರಂದು ಬೆಳಿಗ್ಗೆ 8-30 ಗಂಟೆಗೆ ಅಡುಗೆ ಕೋಣೆಗೆ ಹೋದಾಗ ಅಡುಗೆ ಕೋಣೆಯ ಬೀಗ ಮುರಿದ ವಿಷಯ ತಿಳಿಸಿದ ಮೇರೆಗೆ ಅಡುಗೆ ಕೋಣೆ ಯ ಒಳಗೆ ಹೋಗಿ ನೋಡಿದಾಗ ಅಡುಗೆ ಕೋಣೆಯಲ್ಲಿದ್ದ ಸುಮಾರು 2 ತಿಂಗಳ ಹಿಂದೆ ಆಳವಡಿಸಿದ್ದ ಮೂರು ಸ್ಟೀಲ್ ನ ಟ್ಯಾಪ್ ಅಂದಾಜು ಮೌಲ್ಯ ರೂ 650/- ನ್ನು ಯಾರೋ ಕಳ್ಳರು ಅಡುಗೆ ಕೋಣೆಯ ಬೀಗ ಮುರಿದು ಕಳವು ಮಾಡಿರುವುದಾಗಿದೆ.
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/02/2014 ರಂದು 19.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಲೋಕೇಶ್ ರವರು ತನ್ನ ಸ್ನೇಹಿತ ರಾಜೇಶ್ ರವರ ಮನೆಯಾದ ಮಂಗಳೂರು ತಾಲೂಕು ಪಡುಪೆರಾರ ಗ್ರಾಮದ ಸುಂಕದಕಟ್ಟೆ ಎನ್.ಪಿ. ಕಂಪೌಂಡ್ ನಲ್ಲಿ ತನ್ನ ಬಾಬ್ತು HERO HONDA SPENDER PLUS ಮೋಟಾರು ಸೈಕಲ್ ನಂಬ್ರ KA 19EE 9170 ನೇದ್ದನ್ನು ಲಾಕ್ ಮಾಡಿ ಇಟ್ಟಿದ್ದು, ದಿನಾಂಕ 23/02/2014 ರಂದು ಬೆಳಿಗ್ಗೆ 07.00 ರಂದು ಬಂದು ನೋಡಿದಾಗ ಮೋಟಾರು ಸೈಕಲ್ ಇಲ್ಲದೇ ಇದ್ದು, ಸದ್ರಿ ಮೋಟಾರು ಸೈಕಲನ್ನು ದಿನಾಂಕ 22/02/2014 ರ 19.30 ಗಂಟೆಯಿಂದ 23/02/2014 ರ ಬೆಳಿಗ್ಗೆ 07.0 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21.02.2014 ರಂದು 14.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾರಾಯಣ ಗಟ್ಟಿ ರವರು ಜಪ್ಪಿನಮೊಗರು ರಾಹೆ-66 ರ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಎಕ್ಕೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ರೂಟ್ ನಂ: 43 ನೇ ಕೆಎ-19-ಎಎ-5595 ನೇ ಬಸ್ಸನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಅವರಿಗೆ ತಲೆಗೆ ಏಟಾಗಿ ಪ್ರಜ್ಞೆ ತಪ್ಪಿದವರನ್ನು ಇಂಡಿಯಾನಾ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲಿಸಿದ್ದು, ಬಸ್ಸಿನವರು ಚಿಕಿತ್ಸಾ ವೆಚ್ಚ ನೀಡುವುದಾಗಿ ಒಪ್ಪಿದ್ದು ನಂತರ ನೀಡದೇ ಇರುವುದಾಗಿದೆ.
No comments:
Post a Comment