Tuesday, February 4, 2014

Daily Crime Reports 03-02-2014

ದೈನಂದಿನ ಅಪರಾದ ವರದಿ.

ದಿನಾಂಕ 03.02.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

10

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

3

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಚಂದ್ರಕಾಂತ್ ಎನ್. ಮೊರಾ ರವರು ತನ್ನ ಬಾಬ್ತು ಕೆಎ 19-ಯು-7106ನೇ ನಂಬ್ರದ ಟಿವಿಎಸ್  ಸ್ಟಾರ್ ಸಿಟಿ ಮೋಟಾರು  ಸೈಕಲ್‌‌ನ್ನು ದಿನಾಂಕ 16-01-2014 ರಂದು ರಾತ್ರಿ 09-30 ಗಂಟೆಗೆ ತನ್ನ ಅಪಾರ್ಟ್ಮೆಂಟ್ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ಮಾಡಿದ್ದು ಮರು ದಿನ ದಿನಾಂಕ 17-01-2014 ರಂದು ಬೆಳ್ಳಿಗ್ಗೆ 08-30 ಗಂಟೆಗೆ ಬಂದು ನೋಡಿದಾಗ ಪಾರ್ಕ್  ಮಾಡಿದ ಮೋಟಾರ್ಸೈಕಲ್  ಇಲ್ಲದೇ  ಇದ್ದು ಸದ್ರಿ ಮೋಟಾರ್ರ್ ಸೈಕಲ್‌‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ  ಮೋಟಾರ್‌‌ ಸೈಕಲಿನ ಅಂದಾಜು ಮೌಲ್ಯ ರೂ 14000/- ಆಗಬಹುದು.

 

2. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-02-2014 ರಂದು ಬೆಳಿಗ್ಗೆ 09:45 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ರೆಂಜಾಡಿ ತಿರುವು ರಸ್ತೆಯಲ್ಲಿ ದೇರಳಕಟ್ಟೆಯಿಂದ ರೆಂಜಾಡಿ ಕಡೆಗೆ ಬಸ್ಸು ನಂಬ್ರ ಕೆಎ-19-ಬಿ-3067 ಚಾಲಕ ಕೃಷ್ಣ ಪ್ರಕಾಶ್ ನಾಯಕ್ರವರು ಅತೀವೇಗದಿಂದ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ತಿರುವು ರಸ್ತೆಯಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬಸ್ಸು ನೇರ ಹೋಗಿ ಬಲ ಮಗ್ಗುಲಾಗಿ ಹೊಂಡಕ್ಕೆ ಮಗುಚಿ ಬಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಜೆರಾಲ್ಡ್ ಡಿ'ಸೋಜಾರವರಿಗೆ ಎಡ ಕಾಲಿನ ಪಾದಕ್ಕೆ ಬಸ್ಸಿನ ಸೀಟಿನ ರಾಡ್ ತಾಗಿ ರಕ್ತ ಗಾಯವಾಗಿದ್ದು, ಇತರೆ ಪ್ರಯಾಣಿಕರಿಗೆ ಕೂಡಾ ಗಾಯವಾಗಿರುತ್ತದೆ. ಜೆರಾಲ್ಡ್ ಡಿ'ಸೋಜಾರವರು ಕೆ. ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ದಾಖಲಾಗಿರುತ್ತಾರೆ.

 

3. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2014 ರಂದು ಬೆಳಿಗ್ಗೆ 07:30 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆ ಗಲ್ಫ್ ಹೋಟೆಲ್ ಬಳಿಯಲ್ಲಿ, ಬಸ್ ನಂಬ್ರ ಕೆಎ-19-ಎಬಿ-489 ರೂಟ್ ನಂಬ್ರ 51 ಡಿ ನೇ ಬಸ್ ಚಾಲಕ ರಮೇಶ ಎಂಬಾತನು ಬಸ್ಸನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ, ಮೆಸ್ಕಾಂ ಇಲಾಖೆ ವತಿಯಿಂದ ಅಳವಡಿಸಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಂತರ ಪಕ್ಕದಲ್ಲಿದ್ದ ಅಬ್ದುಲ್ ಹಮೀದ್ ಎಂಬವರ ಗುಜರಿ ಅಂಗಡಿಗೆ ಕೂಡಾ ಢಿಕ್ಕಿ ಹೊಡೆದಿರುತ್ತಾರೆ. ಅಪಘಾತದಿಂದ ವಿದ್ಯುತ್ ಕಂಬಕ್ಕೆ ಜಖಂ ಆಗಿ ಸರಕಾರಿ ಇಲಾಖೆಯಾದ ಮೆಸ್ಕಾಂಗೆ ಸುಮಾರು 14,500/- ರೂ ನಷ್ಟ ಉಂಟಾಗಿರುತ್ತದೆ ಹಾಗೂ ಅಂಗಡಿಯವರಿಗೂ ಕೂಡಾ ನಷ್ಟ ಉಂಟಾಗಿರುತ್ತದೆ.

 

4. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01.02.2014 ರಂದು ಸಂಜೆ ಸುಮಾರು 05.00 ಗಂಟೆಗೆ ಮೋಟಾರ್ ಸೈಕಲ್ ನಂಬ್ರ KA19-EE-9627 ನ್ನು ಅದರ ಸವಾರ ಕೆ.ಪಿ.ಟಿ  ಜಂಕ್ಷನ್ ಕಡೆಯಿಂದ ಕುಂಟಿಕಾನದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಲ್ಯಾಂಡ್ ಮಾರ್ಕ್ ಕ್ರಾಸ್ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಅಪರಿಚಿತ ಪಾದಾಚಾರಿ ವ್ಯಕ್ತಿಗೆ ಡಿಕ್ಕಿ ಮಾಡಿದ ಪರಿಣಾಮ ಪಾದಾಚಾರಿ ರಸ್ತೆಗೆ ಬಿದ್ದು ಎಡಕಾಲಿಗೆ ಗಂಭೀರ ಸ್ವರೊಪದ ಮೂಳೆ ಮುರಿತದ ಗಾಯವುಂಟಾಗಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

5. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02/02/2014 ರಂದು ಸಮಯ ಸುಮಾರು 19:30 ಗಂಟೆಗೆ ಪದವು ಜಂಕ್ಷನ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಪಿಕಪ್ ವಾಹನ ನಂಬ್ರ KA-34-A-3826 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಂತೂರು ಜಂಕ್ಷನನಲ್ಲಿ ರಸ್ತೆ ದಾಟಲು ನಿಂತ್ತಿದ್ದ ನಾಗಪ್ಪ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ನಾಗಪ್ಪನವರು ರಸ್ತೆಗೆ ಬಿದ್ದು ಹಣೆಗೆ ರಕ್ತ ಗಾಯ ಹಾಗೂ ಬಲಕಾಲಿನ ಬೆರಳಿಗೆ ರಕ್ತ ಗಾಯ ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

6. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2014 22-00 ಗಂಟೆಯಿಂದ ದಿನಾಂಕ 03-02-2014 05-00 ಗಂಟೆಯ ಮಧ್ಯೆ ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಜೊಯ್ಸ್ ಡಿ'ಸೋಜಾ ರವರ ಬಾಬ್ತು ವಾಸ್ತವ್ಯದ ಮನೆಯ ಎದುರಿನ ಕಿಟಕಿಯ ಗ್ರಿಲ್ ನ್ನು ಯಾವುದೋ ಹರಿತವಾದ ಆಯುಧದಿಂದ ಕತ್ತರಿಸಿ ಬೆಂಡ್ ಮಾಡಿ ಮೂಲಕ ಒಳಪ್ರವೇಶಿಸಿದ ಯಾರೋ ಕಳ್ಳರು ಮನೆಯ ಒಂದನೇ ಮಹಡಿಯ ಮಾಸ್ಟರ್ ಬೆಡ್ ರೂಮಿನ ಕಪಾಟನ್ನು ಬಲಾತ್ಕಾರವಾಗಿ ಮೀಟಿ ತೆರೆದು ಅಂದಾಜು ಮೌಲ್ಯ ರೂ. 1,90,000/- ಬೆಲೆ ಬಾಳುವ ವಿವಿಧ ನಮೂನೆಯ ಚಿನ್ನಾಭರಣ ಮತ್ತು ವಿವಿಧ ಕಂಪನಿಯ 3 ವಾಚ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

7. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01-02-2014 ರಂದು ಫಿರ್ಯಾದಿದಾರರಾದ ಜೆರೋಮ್ ಪಿಂಟೋ ರವರು ತನ್ನ ಅಣ್ಣ ರಾಜೇಶ್ ಎಂಬವರ ಮೋಟಾರು ಸೈಕಲ್ ನಂ: ಕೆಎ 19 ಇಹೆಚ್ 4912 ರಲ್ಲಿ ಸಹಸವಾರರಾಗಿ , ರಾಜೇಶ್ ರವರು ಮೋಟಾರು ಸೈಕಲನ್ನು ಸವಾರಿ ಮಾಡುತ್ತಾ ತೆಂಕ ಎಡಪದವು ಕಡೆಯಿಂಧ ತನ್ನ ಮನೆಯಾದ ಒಡ್ಡೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ  ರಾತ್ರಿ 10-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ, ತೆಂಕ ಎಡಪದವು ಗ್ರಾಮದ , ಕುಂದೋಡಿ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಅಂದರೆ, ಕುಪ್ಪಪದೆವು ಕಡೆಯಿಂದ ತೆಂಕ ಎಡಪದವು ಕಡೆಗೆ ಮೋಟಾರು ನಂ: ಕೆಎ 19 ಇಜಿ 3455 ನೇದ್ದನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಹೋಗುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ, ಫಿರ್ಯಾದಿದಾರರು ಮತ್ತು ಅವರ ಅಣ್ಣ  ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಗಾಯಗೊಂಡಿದ್ದು, ಸದ್ರಿಯವರು ಚಿಕಿತ್ಸೆಯ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

8. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದೂಜಾ ರವರ ಮಗ ಆದಪ್ಪ 45 ವರ್ಷ ಎಂಬವರು ದಿನಾಂಕ 30/01/2014 ರಂದು ಬೆಳಿಗ್ಗೆ 07.00 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲುಕು ತೆಂಕುಳಿಪಾಡಿ ಗ್ರಾಮದ ಮುಲ್ಲಗುಡ್ಡೆ ಮನೆ ಎಂಬಲ್ಲಿಂದ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೋದವರು ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಕಾಣೆಯಾದವರ ಚಹರೆ ವಿವರ : ಹೆಸರು : ಆದಪ್ಪ, ಪ್ರಾಯ : 45 ವರ್ಷ, ಎತ್ತರ : 5 ಅಡಿ 2 ಇಂಚು, ಸಾದಾರಣ ಶರೀರ, ಗೋಧಿ ಮೈಬಣ್ಣ, ಧರಿಸಿದ ಬಟ್ಟೆ : ನೀಲಿ ಬಣ್ಣದ ಶರ್ಟ್ ಹಾಗೂ ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.  

9. ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ಬೆಂಗಳೂರಿನ ಜಯನಗರದ ದಾಸರಿ ಬಿಲ್ಡರ್ಸ್ ನವರ ಬಾಬ್ತು ಬ್ಯಾಂಕ್ ಆಫ್ ಬರೋಡಾ, ಜಯನಗರ ಬೆಂಗಳೂರಿಗೆ ಸಂಬಂಧಿಸಿದ ಚೆಕ್ಕ್ನಂಬ್ರ 11195ನ್ನು ನಕಲಿಯಾಗಿ ರೂ. 8,92,000/- ನಗದು ನಮೂದಿಸಿ ತಯಾರಿಸಿ ಅದನ್ನು ಮುಂಬೈ ಥಾಣೆಯ ಕಾರ್ಪೋರೇಶನ್ ಬ್ಯಾಂಕಿನ ಅಕೌಂಟ್ ನಂಬ್ರ 0764040000005 ನೇಯದ್ದರಲ್ಲಿ ಕಾರ್ಪೋರೇಶನ್ ಬ್ಯಾಂಕ್ ಎಂ.ಜಿ. ರಸ್ತೆ, ಮಂಗಳೂರು ಶಾಖೆಯ ಮುಖೇನ ನಗದೀಕರಿಸಲು ಹಾಕಿದ್ದು, ಬಗ್ಗೆ ನಗದು ಹಣವನ್ನು ಹಂಪನ್ಕಟ್ಟೆ ಬ್ಯಾಂಕ್ಆಫ್ ಬರೋಡಾ ಶಾಖೆಯಿಂದ ಸಿ.ಟಿ.ಎಸ್. ಸಿಸ್ಟಮ್ಮುಖೇನ ಎಂ.ಜಿ. ರಸ್ತೆಯ ಕಾರ್ಪೋರೇಶನ್ ಬ್ಯಾಂಕ್ ಮೂಲಕ ಮುಂಬೈಯ ಥಾಣೆಯ ಕಾರ್ಪೋರೇಶನ್ ಬ್ಯಾಂಕ್ ಖಾತೆಗೆ ಜಮಾವಣೆಗೊಳಿಸಿದಾಗ ಸದ್ರಿ ಚೆಕ್ಕ್‌‌ ನೈಜ್ಯತೆಯ ಬಗ್ಗೆ ಸಂಶಯಬಂದಂತೆ ನಗದನ್ನು ತಡೆಹಿಡಿದಿರುವುದಾಗಿದೆ. ಆರೋಪಿತನಾದ ಸತೀಶ್ ಅರೋನ್ಹಾ ನು ಉದ್ದೇಶಪೂರ್ವಕವಾಗಿ ರೀತಿ ಚೆಕ್ಕ್ನ್ನು ನಗದೀಕರಿಸಲು ಪ್ರಯತ್ನಿಸಿ ಮೋಸಮಾಡಿರುವುದಾಗಿದೆ.

 

10. ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಸಚಿನ್ ಪೈ ಎಂಬವರು ಅವರ ಬಾಬ್ತು ಕಾರು ನಂಬ್ರ ಕೆಎ-19-ಎಂಬಿ-2431 ನೇದರಲ್ಲಿ ಬರುತ್ತಾ ಬೊಂದೇಲ್ ಕೆ.ಎಚ್.ಬಿ ಕ್ರಾಸ್ ರಸ್ತೆಯ ಬಳಿ ತಲಿಪಿದಾಗ ಸಂಜೆ ಸುಮಾರು 5-40 ಗಂಟೆಗೆ ಡಿವೈಡರ್ ಮಧ್ಯೆ ಇರುವ ಅಂತರದಲ್ಲಿ ಕಾರನ್ನು ಬೊಂದೇಲ್ ಕಡೆ ತಿರುಗಿಸಲು ನಿಲ್ಲಿಸಿದಾಗ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಬೊಂದೇಲ್ ಕಡೆಯಿಂದ ಟೆಂಪೋ ನಂಬ್ರ ಕೆಎ-19-ಸಿ-3274 ನೇದರ ಚಾಲಕನು ಕಾರಿನ ಹಿಂಬದಿಗೆ ಡಿಕ್ಕಿ ಮಾಡಿ ಪಿರ್ಯಾದಿದಾರರ ಕಾರು ತಿರುಗಿ ನಿಂತಿದ್ದು, ಟೆಂಪೋದ ಹಿಂಬದಿಗೆ ಬಸ್ಸು ನಂಬ್ರ ಕೆಎ-34-9954 ನೇಯದನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಮುಂದುವರಿದು ಪಿರ್ಯಾದಿದಾರರ ಕಾರಿಗೆ ಡಿಕ್ಕಿಯಾಗಿ ಪಿರ್ಯಾದಿದಾರರ ಕಾರು ಸಂಪೂರ್ಣ ಜಖಂ ಗೊಂಡಿರುವುದಾಗಿದೆ.  

 

 

11. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  2.2.2014  ರಂದು ರಾತ್ರಿ 8.00 ಗಂಟೆಯ ಸಮಯಕ್ಕೆ ಫಿರ್ಯಾದಿ ರೋಹಿತ್ ಶೆಟ್ಟಿಯವರು ತನ್ನ  ಬಾಬ್ತು  ಮೋಟಾರ್ ಸೈಕಲ್ ಕೆಎ 19 ED 8161ನೇದರಲ್ಲಿ  ಎಸ್.ಕೋಡಿ ಕಡೆಯಿಂದ  ಪಕ್ಷಿಕೆರೆ  ಕಡೆಗೆ   ಸವಾರಿ ಮಾಡಿಕೊಂಡು ಹೋಗುತ್ತಿರುವಾಗ   ಪಕ್ಷಿಕೆರೆ  ಕಡೆಯಿಂದ ಎಸ್.ಕೋಡಿ ಕಡೆಗೆ ಆರೋಪಿ   ಗಣೇಶ್ ಎಂಬವರು ತಾನು ಸವಾರಿ ಮಾಡುತ್ತಿದ್ದ  ಮೋಟಾರ್ ಸೈಕಲ್ ಕೆಎ 19  EG 0610 ನೇದನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ  ಬಂದು  ಫಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  ಮೋಟಾರ್ ಸೈಕಲಿಗೆ  ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಎರಡು ಮೋಟಾರ್  ಸೈಕಲ್ ಸವಾರರು ರಸ್ತೆಗೆ  ಬಿದ್ದಿದ್ದು  ಫಿರ್ಯಾದಿದಾರರ ಎಡ ಬದಿಯ ಹಣೆಗೆ  ರಕ್ತ ಗಾಯ  ಮೊಣಕಾಲಿಗೆ  ರಕ್ತಗಾಯ ಹಾಗೂ ಬಲಭುಜ ಎದೆಗೆ  ಗುದ್ದಿದ   ನೋವುಂಟಾಗಿದ್ದು ಆರೋಪಿ ಮೋಟಾರ್ ಸೈಕಲ್ ಸವಾರನಿಗೂ ರಕ್ತಗಾಯವಾಗಿದ್ದು ಗಾಯಾಳುಗಳಿಬ್ಬರು  ಚಿಕಿತ್ಸೆಯ ಬಗ್ಗೆ  ಮಂಗಳೂರು .ಜೆ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. 

 

12. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03/02/2014 ರಂದು ಬೆಳಗ್ಗೆ ಸುಮಾರು 10:45 ಗಂಟೆಗೆ ಕಾರು ನಂಬ್ರ KL-14-H-9424 ನ್ನು ಅದರ ಚಾಲಕ ರಿಯಾಸ್ K H ಎಂಬುವರು ನಂತೂರು ಜಂಕ್ಷನ ಕಡೆಯಿಂದ ಮಹಾವೀರ ವೃತ್ತದ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಕರ್ನಾಟಕ ಬ್ಯಾಂಕ ಹೆಡ್ ಆಫಿಸ್ ತಲುಪುವಾಗ ಮುಂದಿನಿಂದ ಹೊಗುತ್ತಿದ್ದ ಮೋಟರ್ ಸೈಕಲ್ ನಂಬ್ರ KA-19-EJ-2849 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸವಾರರಾಗಿದ್ದ ಫಿರ್ಯಾದುದಾರರಾದ ಶ್ರೀ ಎಂ. ನರಸಿಂಹ ಐತಾಳ್ ರವರು ರಸ್ತೆಗೆ ಬಿದ್ದು ಗಾಯಗೊಂಡು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

13. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಮಚಂದ್ರ ಧರ್ಮರಾವ್ ಪುರೋಹಿತ್ ರವರ ಮಗನಾದ ಸಚಿನ್ ಪುರೋಹಿತ್  (23) ಎಂಬವರು ಮಂಗಳೂರಿನ ಮದಿಮೆ ಎಂಬ ಶೂಟಿಂಗ್ ನಲ್ಲಿ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಮಾಡುತ್ತಿದ್ದು ದಿನಾಂಕ 01-02-2014 ರಂದು  ಪಿರ್ಯಾದಿಯ ತಮ್ಮನಾದ ಲಕ್ಷ್ಮಣನು ಸಚಿನ್ ಪುರೋಹಿತ್ ಗೆ ಮಂಗಳೂರಿನ ಪಿ.ಪಿ.ಎಸ್ ಬಳಿಯ ಪಂಚ್ ಮಹಲ್ ಹೋಟೆಲ್ ರೂಂ ನಂಬ್ರ 108 ರಲ್ಲಿರುವಾಗ ತಡವಾಗಿ ಏಳುವುದರ ಬಗ್ಗೆ ಜೋರು ಮಾಡಿದ್ದು ಇದರಿಂದ ಬೇಸರಗೊಂಡ ಸಚಿನ್ ಪುರೋಹಿತ್  ರಾತ್ರಿ 11.00 ಗಂಟೆಗೆ  ಪಿರ್ಯಾದುದಾರರ ಮೋಬೈಲ್ ಗೆ ಪೋನ್ ಮಾಡಿ "ನಾನು ಎಷ್ಟೇ ಕೆಲಸ ಮಾಡಿದರೂ ಬೈಯುತ್ತೀರಿ , ನನಗೆ ಸಹಿಸಲು ಆಗುತ್ತಿಲ್ಲ " ಎಂದು ಹೇಳಿ ಮೋಬೈಲ್ ಸ್ವಿಚ್ ಆಪ್ ಮಾಡಿ ನಂತರ ಕಾಣೆಯಾಗಿರುತ್ತಾನೆ.

 

14. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-02-2014 ರಂದು 8-30 ಗಂಟೆಗೆ ಪಿರ್ಯಾದುದಾರರಾದ ರೂಪಾ ಒಲಿವರ್ ರವರು ಮಂಗಳೂರು ತಾಲೂಕು, ಕೋಟೆಕಾರು ಗ್ರಾಮದ, ಯೆನೆಪೋಯ ಆಸ್ಪತ್ರೆಯ ಬಳಿ, ಡಾಮಾರು ರಸ್ತೆ ದಾಟಿ, ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಕೆಎ 21 ಆರ್‌ 5265 ನೇ ಮೋಟಾರು ಸೈಕಲ್ಸವಾರ ಅವಿನಾಶ್ಎಂಬವರು ಮೋಟಾರು ಸೈಕಲ್ನ್ನು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದುದರಿಂದ ರಸ್ತೆಗೆ ಬಿದ್ದ ಪಿರ್ಯಾದುದಾರರ ಎಡಕೈಗೆ ಗುದ್ದಿದ ಹಾಗೂ ತರಚಿದ ಗಾಯ, ಎಡಕಾಲಿಗೆ ಮತ್ತು ಪಾದಕ್ಕೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಾಳು ಪಿರ್ಯಾದುದಾರರು ಯೆನೆಪೋಯ ಮೆಡಿಕಲ್ಕಾಲೇಜ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

 

15. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದದಾರರಾದ ಶ್ರೀಮತಿ ಶಕುಂತಲಾ ರವರ ಗಂಡನವರು ಹೊಟೇಲ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 8 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥರಾಗಿದ್ದು, ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಇರುವುದಾಗಿದೆ. ದಿನಾಂಕ 19-01-2014 ರಂದು ಫಿರ್ಯಾದಿದಾರರ ಅತ್ತೆಯವರು ಮೃತ ಪಟ್ಟ ಬಗ್ಗೆ ಕುದ್ರೋಳಿಯ ಮನೆಗೆ ಹೋಗಿದ್ದು, ಬಳಿಕ ಅಲ್ಲಿ ನಿಲ್ಲದೇ ಬಂದರಿನಲ್ಲಿರುವ ಕೃಷ್ಣ ಪ್ರಸಾದ್ ಹೊಟೇಲಿನಲ್ಲಿ ಕೆಲಸ ಮಾಡುತ್ತೇನೆಂದು ಹೋಗಿದ್ದು, ಬಳಿಕ ಸದ್ರಿ ಹೊಟೇಲಿನಲ್ಲಿ ವಿಚಾರಿಸಿದಾಗ ದಿನಾಂಕ 20-01-2014 ಹಾಗೂ 21-01-2014 ರಂದು ಕೆಲಸ ಮಾಡಿ ಗಲಾಟೆ ಮಾಡಿ ಹೋಗಿರುತ್ತಾರೆ ಎಂದು ಹೊಟೇಲಿನವರು ತಿಳಿಸಿದ್ದು, ಬಳಿಕ ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಗಂಡಸಿನ ಚೆಹರೆ: ಹೆಸರು: ರಘುವೀರ್ , ಪ್ರಾಯ: 50 ವರ್ಷ, ತಂದೆ: ದಿ. ರಾಮ್ ದಾಸ್ ಶೇಟ್, ಬಣ್ಣ: ಕಪ್ಪು ಮೈ ಬಣ್ಣ, ಎತ್ತರ: 5 ಅಡಿ, ಸಾಧಾರಣ ಮೈ ಕಟ್ಟು, ಕನ್ನಡ, ತುಳು, ಕೊಂಕಣಿ ಭಾಷೆ ಮಾತನಾಡುತ್ತಾರೆ ಧರಿಸಿದ ಬಟ್ಟೆ: ಕಪ್ಪು ಬಣ್ಣದ ಪ್ಯಂಟು, ಕಪ್ಪು ಮತ್ತು ಬಿಳಿ ಗೆರೆಗಳಿರುವ ಟೀ ಶರ್ಟು, ಕಪ್ಪು ತಲೆಕೂದಲು, ಬಲ ಕೈ ನಡುಗುತ್ತಿರುತ್ತದೆ.

 

16. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರಹ್ಲಾದ್ ರಾವ್ ರವರು ದಿನಾಂಕ 02-02-2014 ರಂದು ಮದ್ಯಾಹ್ನ ಪತ್ನಿಯೊಂದಿಗೆ ಚಿತ್ರಾಪುರ ದೇವಸ್ಥಾನಕ್ಕೆ ಹೋಗುವರೇ ಕುಳಾಯಿ ಗ್ರಾಮದ ಚಿತ್ರಾಪುರ ದ್ವಾರದ ಬಳಿ ರಾ ಹೆ  66 ಬದಿಯಲ್ಲಿ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ 12-30 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆ 36-ಎಲ್-7451 ನೇ ಮೋಟಾರು ಸೈಕಲ್ ನ್ನು ಅದರ ಸವಾರ ಮೆಹುಲ್ ಪಟೆಲ್ ಎಂಬವರು ಏಕ ಮುಖ ರಸ್ತೆಗೆ ವಿರುದ್ದವಾಗಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ರಟ್ಟಿ ಬಿದ್ದಿದ್ದು ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರ ಮೋಟಾರು ಸೈಕಲ್  ಸಮೇತ ಕೆಳಗೆ ಬಿದ್ದಿದ್ದು ಅಪಘಾತದಿಂದಾಗಿ ಪಿರ್ಯಾದಿದಾರರ ಎಡಕಾಲಿನ ಹಿಂಬದಿಗೆ ಗಂಬೀರ ಗಾಯವಾಗಿದ್ದು ಅಪಘಾತ ಪಡಿಸಿದ ಮೋಟಾರು ಸೈಕಲ್  ಸವಾರನಿಗೆ ಅಲ್ಲ ಸ್ವಲ್ಪ ನೋವುಂಟಾಗಿದ್ದು ಸಹ ಸವಾರನಿಗೆ ತಲೆಗೆ, ಕೈಗೆ ಗಾಯವಾಗಿದ್ದು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

No comments:

Post a Comment