Wednesday, February 19, 2014

Daily Crime Reports 18-02-2014

ದೈನಂದಿನ ಅಪರಾದ ವರದಿ.

ದಿನಾಂಕ 18.02.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  17.02.2014 ರಂದು ಸಂಜೆ ಸುಮಾರು 7.00 ಗಂಟೆಯ ವೇಳೆಗೆ  ಆರೋಪಿ ಸುರೇಶ್ ಎಂಬವರು  ತಾನು ಚಲಾಯಿಸುತ್ತಿದ್ದ  ಕಾರು ಕೆಎ 20 ಸಿ  6799ನೇದನ್ನು  ಮುಲ್ಕಿ ಕಡೆಯಿಂದ  ಹಳೆಯಂಗಡಿ ಕಡೆಗೆ  ಅತೀ ವೇಗ  ಹಾಗೂ  ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ  ಚಲಾಯಿಸುತ್ತಾ  ಬಂದು  ಕಾರ್ನಾಡು ಗ್ರಾಮದ   ಕೊಲ್ನಾಡು  ಪೆಟ್ರೋಲ್ ಪಂಪ್  ಬಳಿ ತಲುಪುವಾಗ್ಗೆ  ಪ್ರಕರಣದ ಫಿರ್ಯಾದಿ ಆರ್ ಸುರೇಶ್  ಎಂಬವರು ಮಂಗಳೂರು ಕಡೆಯಿಂದ  ಮುಲ್ಕಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ  ಮಾರುತಿ ಓಮಿನಿ ಕಾರು ಕೆಎ 21 645ನೇದಕ್ಕೆ ಢಿಕ್ಕಿ ಹೊಡೆದ  ಪರಿಣಾಮ ಮಾರುತಿ ಓಮಿನಿ ಕಾರು ಚಾಲಕ  ಆರ್ ಸುರೇಶ್ ಎಂಬವರ  ಬಲಕಾಲಿನ  ತೊಡೆಗೆ ಗುದ್ದಿದ  ನಮೂನೆಯ ಗಾಯವುಂಟಾಗಿರುತ್ತದೆ. ಗಾಯಾಳು ಚಿಕಿತ್ಸೆ ಬಗ್ಗೆ  ಮುಕ್ಕಾಶ್ರೀನಿವಾಸ  ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

2.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-02-2014 16-00 ಗಂಟೆಯಿಂದ ದಿನಾಂಕ 17-02-2014ರಂದು 09-00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀಮತಿ ಲೆನೆಟ್ ಮಸ್ಕರನೇಸ್ ರವರ ಬಾಬ್ತು ಮಂಗಳೂರು ನಗರದ ಬೆಂದೂರಿನ ಮರ್ಕರಾ ಹಿಲ್ ರಸ್ತೆಯಲ್ಲಿರುವ ಕ್ರಿಸಿಲ್ ಅಪಾರ್ಟಮೆಂಟಿನ ಫ್ಲಾಟ್ ನಂಬ್ರ 201ನೇದರ ಎದುರಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ಮುರಿದು ತೆರೆದು ಮೂಲಕ ಒಳಪ್ರವೇಶಿಸಿ, ಮಾಸ್ಟರ್ ಬೆಡ್ ರೂಮಿನಲ್ಲಿದ್ದ ಕಪಾಟುಗಳನ್ನು ಮೀಟಿ ತೆರೆದು ಅವುಗಳಲ್ಲಿದ್ದ ವಿವಿಧ ನಮೂನೆಯ ಚಿನ್ನಾಭರಣ, ವಜ್ರಾಭರಣ, ನಗದು ಹಣ ರೂ.2,00,000/- ರೂ ಹಾಗೂ ಭಾರತೀಯ ಮೌಲ್ಯ ಸುಮಾರು 87,000 ಬೆಲೆ ಬಾಳುವ 1,500 ಡಾಲರ್ ಗಳು, ಹೀಗೆ ಒಟ್ಟು ಅಂದಾಜು ರೂ.6,43,000/- ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

3.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-02-2014 ರಂದು ಸಂಜೆ 7-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರಜೀನಾ ಖಾದರ್ ರವರು ತಮ್ಮ ಬಾಬ್ತು ಇಡ್ಯಾದಲ್ಲಿರುವ ವಿಲ್ಲಾ ಹೆಲನ್ ಮನೆಗೆ ಬೀಗ ಹಾಕಿ ತವರು ಮನೆ ಕದ್ರಿಗೆ ತೆರಳಿದ್ದು ದಿನ  ದಿನಾಂಕ 17-02-2014 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ಮನೆಯ ಒಳಗೆ ಬಂದು ನೋಡಿದಾಗ  ಬೆಡ್ ರೂಮಿನ ಬಾಗಿಲು ತುಂಡಾಗಿದ್ದು ಕಪಾಟಿನೊಳಗಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು  ದಿನಾಂಕ 16-02-2014 ರಂದು ಸಂಜೆ 7-00 ಗಂಟೆಯಿಂದ ದಿನಾಂಕ 17-02-2014 ಬೆಳಿಗ್ಗೆ 10-30 ಗಂಟೆಯ ಮದ್ಯೆ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಮಲಗುವ ಬೆಡ್ ರೂಮಿನ ಕಿಟಕಿಯ ಸರಳನ್ನು ಮುರಿದು ಒಳ ಪ್ರವೇಶಿಸಿ ಕಪಾಟಿನ ಒಳಗಿದ್ದ ಡೈಮಂಡ್ ಬಳೆ-1, ಬಂಗಾರದ ಬಳೆಗಳು-2, ವಾಚು-1, ಕೆಂಪು ಕಲ್ಲು ಅಳವಡಿಸಿದ ನೆಕ್ಲೆಸ್, ಬಳೆ, ಕಿವಿಯ ಓಲೆ-1 ಸೆಟ್ ಹಾಗೂ ನಗದು ಹಣ ರೂ 25,000/- ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 5,00,000/- ಆಗಬಹುದು.

 

4.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-02-2014 ರಂದು ರಾತ್ರಿ 10-45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಮಹಮ್ಮದ್ ಹನೀಫ್ ಎಂಬಾತನನ್ನು  ಆರೋಪಿಗಳಾದ ಸಿನಾನ್ ಮತ್ತು ತಸ್ಲೀಂ ಎಂಬವರುಗಳು ಚೊಕ್ಕಬೆಟ್ಟು ಮಸೀದಿಗೆ ಹೋಗುವ ರಸ್ತೆಯ ಸೆಲೂನ್ ಹತ್ತಿರ ಕರೆದುಕೊಂಡು ಹೋಗಿ ಅವರ ಪೈಕಿ ಸಿನಾನ್ ಎಂಬಾತನು ಪಿರ್ಯಾದಿಗೆ ಕೈಯಿಂದ ಎಢ ಕಣ್ಣಿಗೆ ಎದೆಗೆ ಹಾಗೂ ಬೆನ್ನಿಗೆ ಹೊಡೆದು ತಸ್ಲೀಂಮನು ಸೋಡಾ ಬಾಟಲಿ ಹಾಗೂ ರಾಡಿನಿಂದ ಪಿರ್ಯಾದಿಯ ಎರಡೂ ಕಾಲಿಗೆ ಹೋಡೆದು ರಕ್ತ ಗಾಯಗೊಳಿಸಿದ್ದು ಬಿಡಿಸಲು ಬಂದ ಕಬೀರ್ ಎಂಬಾತನಿಗೂ ಕೂಡಾ ಆರೋಪಿಗಳು ಹಲ್ಲೆ ನಡೆಸಿದ್ದು ನಂತರ ಪಿರ್ಯಾದಿಯನ್ನು ಕಬೀರ್ ಮತ್ತು ಸಂಶುದ್ದೀನ್ ಎಂಬವರುಗಳು ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿರುವುದಾಗಿಯೂ  ಘಟನೆಗೆ ಪಿರ್ಯಾದಿಯು ಹೊಂದಿರುವ ಮಾರುತಿ ಓಮ್ನಿ ಕಾರು ನಂಬ್ರ ಕೆ..19.ಎನ್.7983 ನೇದನ್ನು ಆರೋಪಿ ಪೈಕಿ ಸಿನಾನ್ ಅತ್ತೆ ಮನೆಗೆ ಸಿನಾನ್ ನಲ್ಲಿ ಕೇಳದೇ ಬಾಡಿಗೆಗೆ ಕೊಂಡು ಹೋಗಿರುವ ವಿಚಾರದಲ್ಲಿ ಹಲ್ಲೆ ನಡೆಸಿರುವುದಾಗಿದೆ.

 

5.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-02-2014 ರಂದು ಸಂಜೆ 6.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಅರುಣ್ ಪ್ರಸಾದ್ ರವರು ತೆಂಕ ಎಕ್ಕಾರು ಗ್ರಾಮದ ನೀರುಡೆ ಎಂಬಲ್ಲಿ ತನ್ನ ಮಾಲಕ ರಮೇಶ ಎಂಬವರಲ್ಲಿ ಆರೋಪಿ ಮಾಡಿದ ಸಾಲವನ್ನ ವಾಪಸ್ಸು ಕೇಳಿದ ಕೋಪದಲ್ಲಿ ಆರೋಪಿ ಧರ್ಮಣ್ಣ ಪೂಜಾರಿ ಎಂಬವರು ತನ್ನ ಸೊಂಟದಲ್ಲಿ ಇಟ್ಟಿದ್ದ ಚೂರಿಯನ್ನು ತೆಗೆದು ತನ್ನ ಹೋಟೆಲ್ ಮಾಲಿಕ ರಮೇಶ ಮತ್ತು ಅವರ ತಮ್ಮ ಸುಂದರ ಎಂಬವರಿಗೆ ತಿವಿದು ರಕ್ತಗಾಯ ಉಂಟು ಮಾಡಿದ್ದಲ್ಲದೇ "ಇವತ್ತಿಗೆ ಬದುಕ್ಕಿದ್ದಿರಿ ಇನ್ನೊಂದು ದಿನ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ" ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.

 

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-02-2014 ರಂದು ಪಿರ್ಯಾದುದಾರರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಕೆಎ 19 ಇಜಿ 6424 ನೇ ನಂಬ್ರದ ಮೋಟಾರು ಸೈಕಲ್ನಲ್ಲಿ ಅನ್ಸಾಪ್ಎಂಬವರನ್ನು ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಕೋಟೆಕಾರಿನಿಂದ ಕೆ.ಸಿ. ರೋಡ್ಕಡೆಗೆ ರಾ.ಹೆ. 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ 14:00 ಗಂಟೆ ಸಮಯಕ್ಕೆ ಉಚ್ಚಿಲ ಸೇತುವೆ ಬಳಿ ತಲುಪುತ್ತಿದ್ದಂತೆ ಅವರ ಹಿಂದಿನಿಂದ ಶೇಖರ್ಎಂಬವರು ಟಿಎನ್‌ 28 ಎಜೆ 5398 ನೇ ಟ್ಯಾಂಕರ್ನ್ನು ಅತೀವೇಗ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆದುದರಿಂದ ಸಹಸವಾರ ಅನ್ಸಾಫ್ಎಂಬವರ ಎಡಕಾಲಿಗೆ ತೀವ್ರ ತರಹದ ಗಾಯವಾಗಿರುತ್ತದೆ. ಆನ್ಸಾಫ್  ಕೆ.ಎಸ್ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

7.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  17-02-2014 ರಂದು ಪಿರ್ಯಾದುದಾರರಾದ ಶ್ರೀ ಮಹಾವೀರ್ ರವರು ಮತ್ತು ಅವರ ತಂದೆ KA 19 EE 1583 ನೇ ನಂಬ್ರದ ಬೈಕಿನಲ್ಲಿ ಬಟ್ಟೆಗಳನ್ನು ಸೇಲ್ಮಾಡಲು ಕುತ್ತಾರ್ಗೆ ಬಂದಿದ್ದು, ಮಧ್ಯಾಹ್ನದ ಸಮಯ ಪಿರ್ಯಾದುದಾರರು ತನ್ನ ತಂದೆಯನ್ನು ರಾಣಿಪುರ ಉಳಿಯ ಬಸ್ಸ್ಟಾಪ್ನಲ್ಲಿ ಕುಳ್ಳಿರಿಸಿ, ಬೈಕಿನಲ್ಲಿ ಕುಂಪಲ ಕಡೆ ಬಟ್ಟೆಗಳನ್ನು ಸೇಲ್ಮಾಡುವರೇ ಹೊರಟು ಕುತ್ತಾರ್ಅಜ್ಜನ ಕಟ್ಟೆ ಬಳಿ 15-30 ಗಂಟೆಗೆ ತಲುಪುತ್ತಿದ್ದಂತೆ ಪರಿಚಯದ ನೀತು ಎಂಬಾತ ಕಾಣಸಿಕ್ಕಿ ತನ್ನನ್ನು ಯೆನೆಪೋಯ ಆಸ್ಪತ್ರೆ ಬಳಿ ಬಿಡುವಂತೆ ಕೇಳಿಕೊಂಡಂತೆ ಪಿರ್ಯಾದುದಾರರು ಆತನನ್ನು ಕುಳ್ಳಿರಿಸಿಕೊಂಡು ಬಗಂಬಿಲ ಗಿಡಪೊದರುಗಳಿರುವ ಜಾಗಕ್ಕೆ ಬಂದು ಬೈಕ್ನಿಲ್ಲಿಸಿದಾಗ ಅಲ್ಲಿ ಓರ್ವ ವ್ಯಕ್ತಿ ಪಿರ್ಯಾದಿಯ ಹಿಂದಿನಿಂದ ಬಂದು ಬಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಫರಜ್ಮತ್ತು ಇತರ 3-4 ಮಂದಿ ಸೇರಿ ಪಿರ್ಯಾದಿಯನ್ನು ಅಲ್ಲೇ ಗಿಡಪೊದರುಗಳಿರುವ ಜಾಗಕ್ಕೆ ಎತ್ತಿಕೊಂಡು ಹೋಗಿ, ನೆಲದ ಮೇಲೆ ಮಲಗಿಸಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದು, ಸಮಯ ನೀತು ಪಿರ್ಯಾದಿಯ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ನ್ನು ಕಸಿಕೊಂಡಿರುತ್ತಾನೆ. ಫರಜ್  ಮತ್ತು ಇತರ 3-4 ಮಂದಿ ಪಿರ್ಯಾದಿಯ ಪ್ಯಾಂಟ್‌‌ ಹರಿದು ಒಳಚಡ್ಡಿಯಲ್ಲಿದ್ದ ನಗದು ಹಣ, ಪ್ಯಾಂಟ್ಕಿಸೆಯಲ್ಲಿದ್ದ ನಗದು ಮತ್ತು ಬುಕ್ನಲ್ಲಿದ್ದ ಹಣ ಸೇರಿ ಒಟ್ಟು 10,000/- ನಗದನ್ನು ಕಿತ್ತುಕೊಂಡರು. ಅಲ್ಲದೇ ಪಿರ್ಯಾದುದಾರರ ಮೊಬೈಲ್ಫೋನ್‌, ಪರ್ಸ್ಮತ್ತು ಅದರಲ್ಲಿದ್ದ ಬ್ಯಾಂಕ್ಡೆಬಿಟ್‌, ಕ್ರೆಡಿಟ್ಕಾರ್ಡ್ ಗಳು ಸೇರಿ ಇತರ ದಾಖಲೆ ಪತ್ರಗಳನ್ನು ಕಸಿದುಕೊಂಡಿರುವುದಲ್ಲದೇ, ಪಿರ್ಯಾದುದಾರರ ಮೋಟಾರು ಸೈಕಲ್ನೊಂದಿಗೆ ಪರಾರಿಯಾಗಿರುತ್ತಾರೆ.

 

8.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:17-02-2014ರಂದು ರಾತ್ರಿ 10-15ಗಂಟೆಗೆ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಮುಡಿಪು ನವೋದಯ ಶಾಲೆಯ ಬಳಿ ಪಿರ್ಯಾದಿದಾರರಾದ ಶ್ರೀ ಚಂದ್ರಶೇಖರನ್ ಸಿ., ರವರು ತನ್ನ ಬಾಬ್ತು ಕಾರಿನಲ್ಲಿ ಮುಡಿಪುನಿಂದ ಪಾತೂರು ಕಡೆಗೆ ಹೋಗುತ್ತಿದ್ದಾಗ ಮುಂದಿನಿಂದ ಹೋಗುತ್ತಿದ್ದ ಮೋಟಾರು ಸೈಕಲ್ ಸವಾರ ಬಾಬ್ತು ಕೆ.ಎಲ್.20- 9165ನೇದನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ತಿರುವಿನಲ್ಲಿ ಹತೋಟಿ ತಪ್ಪಿ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತ ಪಟ್ಟು, ಸಹ ಸವಾರನಿಗೆ  ಗಂಭೀರ ಗಾಯವುಂಟಾಗಿದ್ದು, ಬಗ್ಗೆ ಮೃತ ದೇಹವು ದೇರಳಕಟ್ಟೆ ಆಸ್ಫತ್ರೆಯಲ್ಲಿ, ಹಾಗೂ ಗಾಯಾಳು ನಿರ್ಭಯ್ ಸಿಂಗ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಜಿಲ್ಲಾ ವೆನ್ಲಾಕ್ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No comments:

Post a Comment