ದೈನಂದಿನ ಅಪರಾದ ವರದಿ.
ದಿನಾಂಕ 15.02.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2014 ರಂದು ಪಿರ್ಯಾದಿದಾರರಾದ ಶ್ರೀ ವಿಲ್ಸನ್ ಡಿ'ಸೋಜಾ ರವರು ಮತ್ತು ಅವರ ಅಣ್ಣ ಜೆಫ್ರಿ ಡಿಸೋಜಾ ಎಂಬವರು ಮಂಗಳೂರು ನಗರದ ಕೊಡಿಯಾಲ್‌ಬೈಲ್ ಕರ್ನಾಟಕ ಬ್ಯಾಂಕ್‌ನ ಹತ್ತಿರ ಸಾರ್ವಜನಿಕ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವ ಸಮಯ ಸುಮಾರು 16:10 ಗಂಟೆಗೆ ಆರೋಪಿ ಕಾರು ಚಾಲಕ ಕಾರು ನಂಬ್ರ ಜಿಎ01ಆರ್0510 ನೇದನ್ನು ಕೆ.ಎಸ್.ಆರ್-ನವಭಾರತ್ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪಿರ್ಯಾದಿದಾರರ ಅಣ್ಣ ಜೆಫ್ರಿ ಡಿಸೋಜಾರವರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಜೆಫ್ರಿ ಡಿಸೋಜಾರವರು ಕಾಂಕ್ರೀಟ್ ರಸ್ತೆಯಲ್ಲಿ ಬಿದ್ದು, ತಲೆಯ ಹಿಂಭಾಗದ ಬಲ ಬದಿಗೆ, ಕಣ್ಣಿಗೆ, ಮುಖದ ಬಲಭಾಗಕ್ಕೆ ಮೂಳೆ ಮುರಿತದ ತೀವ್ರ ತರದ ಗಾಯವಾಗಿ ನಗರದ ಯೆನೆಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧುದಾರರಾದ ಶ್ರೀ ಬಾಬು ರವರು ತನ್ನ ಮನೆಯ ಕಡೆ ಹೋಗುವರೆ ದಿನಾಂಕ 13-02-2014 ರಂದು ಸಂಜೆ 6-00 ಗಂಟೆ ಸಮಯಕ್ಕೆ ಕೂಳೂರು 4ನೇ ಮೈಲುಕಲ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಡಭಾಗದಲ್ಲಿ ನಿಂತುಕೊಂಡಿದ್ದಾಗ ಕೂಳೂರುನಿಂದ ಕೊಟ್ಟಾರಚೌಕಿ ಕಡೆಗೆ ಬಂದ ಕೆಎ-19-ಎಎ-1324 ನಂಬ್ರದ ಟಾಟಾ ಏಸ್ ಟೆಂಪೋ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಯಿಸಿಕೊಂಡು ಬಂದು ಪಿರ್ಯಾದಿದಾರಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾಧುದಾರರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು, ಎಡಕಾಲಿಗೆ ರಕ್ತಗಾಯವಾಗಿದ್ದು, ಈ ದಿನ ಬೆಳಿಗ್ಗೆ ನೋವು ಉಲ್ಬಣಗೊಂಡು ಮಂಗಳೂರು ಎ.ಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಕುಸುಮ ಎಂಬವರು ದಿನಾಂಕ 13.02.2014 ರಂದು ಬೆಳಿಗ್ಗೆ ಸಮಯ ಸುಮಾರು 9.30 ಗಂಟೆ ತನ್ನ ಚಿಕ್ಕಮ್ಮನ ಮಗ ದಿನೇಶ ಕುಮಾರ್ ರವರ ಜೊತೆ ಕೆಎ 19 EK 1899ನೇ ಮೋಟಾರ್ ಸೈಕಲಿನಲ್ಲಿ ಕಿನ್ನಿಗೋಳಿ ಕಡೆಯಿಂದ ಹಳೆಯಂಗಡಿ ಕಡೆಗೆ ತನ್ನ ಮನೆಗೆ ಹೋಗುವರೇ ಭಟ್ಟಕೋಡಿ ಎಂಬಲ್ಲಿ ತಲುಪಿದಾಗ ಮೋಟಾರ್ ಸೈಕಲ್ ಸವಾರ ದಿನೇಶ್ ಕುಮಾರ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ನಾನು ಕೆಳಗೆ ರಸ್ತೆ ಬಿದ್ದಿದ್ದು ಪರಿಣಾಮ ನನ್ನ ತಲೆಯ ಹಿಂಬದಿಗೆ ರಕ್ತಗಾಯವಾಗಿದ್ದು ,ಬೆನ್ನಿಗೆ ಗುದ್ದಿದ ಹಾಗೂ ಕೈ ಕಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-02-2014 ರಂದು ಬೆಳಗ್ಗಿನ ಜಾವ 01-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಜಯಪ್ರಸಾದ್ ರವರು ಅವರ ಬಾಬ್ತು ಟ್ರೈಲರ್ ಲಾರಿ ನಂಬ್ರ GJ-1-CY-369 ನೇದರಲ್ಲಿ ಸುಜ್ಲಾನ್ ಕಂಪೆನಿಯಿಂದ ಪಣಂಬೂರಿಗೆ ವಿನ್ ವಿನ್ ಬ್ಲೇಡ್ ಲೋಡ್ ಮಾಡಿಕೊಂಡು ಪಣಂಬೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ ಮುಂಜಾನೆ 02-30 ಗಂಟೆ ಸಮಯಕ್ಕೆ ಎನ್.ಐ.ಟಿ.ಕೆ ಬಳಿ ರಾ.ಹೆ 66ರಲ್ಲಿ ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಒಂದು ಲಾರಿಯನ್ನು ಅದರ ಚಾಲಕರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಲಾರಿಯನ್ನು ಓವರ್ ಮಾಡುವ ಭರದಲ್ಲಿ ಸದ್ರಿ ಲಾರಿಯ ಎಡ ಭಾಗವು ಪಿರ್ಯಾದಿದಾರರ ಲಾರಿಗೆ ಡಿಕ್ಕಿ ಮಾಡಿ ದ ಪರಿಣಾಮ ಲಾರಿಯ ಮೇಲೆ ಲೋಡ್ ಮಾಡಿರುವ ವಿನ್ ವಿನ್ ಬ್ಲೇಡ್ ಜಖಂ ಆಗಿದ್ದು ಆರೋಪಿ ಲಾರಿ ಚಾಲಕನು ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ.
No comments:
Post a Comment