ದೈನಂದಿನ ಅಪರಾದ ವರದಿ.
ದಿನಾಂಕ 24.02.2014 ರ 09:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 1 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-02-2014ರಂದು ಸಂಜೆ 5-45 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ವೀಣಾ ವಸಂತ್ ರವರ ಬಾಭ್ತು ಮಂಗಳೂರು ಕೊಡಿಯಾಲ್ ಬೈಲ್ ಬಲ್ಲಾಲ್ ಬಾಗ್ ನ ಮಹೇಶ್ವರಿ ಅಪಾರ್ಟ್ಮೆಂಟ್ ನ ಪ್ಲ್ಯಾಟ್ ನಂಬ್ರ ಎ-1 ನ ಎದುರು ಜಾಗದಲ್ಲಿ ಆರೋಪಿತರು ಕ್ರಿಕೇಟ್ ಆಟ ಆಡುತ್ತಿದ್ದಾಗ ಕ್ರಿಕೇಟ್ ಚೆಂಡು ಪಿರ್ಯಾದುದಾರರ ಬಾಬ್ತು ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಮುಂಬಾಗದ ಗಾಜಿಗೆ ಬಿದ್ದುದನ್ನು ಕಂಡ ಪಿರ್ಯಾದಿದಾರರು ಜಾಗೃತೆಯಿಂದ ಕ್ರಿಕೇಟ್ ಆಡುವಂತೆ ಆರೋಪಿತರಿಗೆ ಹೇಳಿದಾಗ ಉದ್ರಿಕ್ತರಾದ ಆರೋಪಿತರು ಸಮಾನ ಉದ್ದೇಶದಿಂದ ಕ್ರಿಕೇಟ್ ಬ್ಯಾಟ್‌ನ್ನು ಹಿಡಿದು ಪಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ತಡೆದು ಪಿರ್ಯಾದಿದಾರರನ್ನು ಉದ್ದೇಶೀಸಿ ಅವಾಚ್ಯವಾಗಿ ಬೈಯ್ದು ಮನೆಯ ಬಾಗಿಲನ್ನು ಹಾಕಿ ಹೊರಬಂದರೆ ನಿನ್ನ ಕೈಕಾಲು ಮುರಿಯುವದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.02.2014 ರಂದು ಸಂಜೆ ಸಮಯ ಸುಮಾರು 6.30 ಗಂಟೆ ವೇಳೆಗೆ ಮಂಗಳೂರು ತಾಲೂಕು ಮೆನ್ನಬೆಟ್ಟು ಗ್ರಾಮಮ ಉಳ್ಳಂಜೆ ಎಂಬಲ್ಲಿ ಫಿರ್ಯಾದಿದಾರರಾದ ಶ್ರೀ ಕಮಲೇಶ್ ಕುಮಾರ್ ರವರ ಹೆಂಡತಿಯ ಅಕ್ಕ ಶ್ರೀಮತಿ ಬಸಂತಿದೇವಿರವರು ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಕೆಲಸ ಮುಗಿಸಿಕೊಂಡು ಕೆಎ 19 ಡಿ 7699 ನೇ ನಂದಿನಿ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಉಳ್ಳಂಜೆ ಎಂಬಲ್ಲಿ ತಲುಪಿ ಬಸ್ಸಿನಿಂದ ಇಳಿಯುತ್ತಿರುವಾಗ ಬಸ್ಸಿನ ನಿರ್ವಾಹಕರು ಯಾವುದೇ ಸೂಚನೆಯನ್ನು ನೀಡದೇ ಇದ್ದರೂ ಚಾಲಕ ಪುರುಷೋತ್ತಮ ರವರು ನಿರ್ಲಕ್ಷತನದಿಂದ ಬಸ್ಸನ್ನು ಒಮ್ಮೇಲೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಬಸಂತಿದೇವಿರವರು ಹತೋಟಿ ತಪ್ಪಿ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ಅವರ ಎಡ ಕೆನ್ನೆಯ ಬಳಿ ,ಕಣ್ಣಿನ ಬಳಿ, ಶರೀರದ ಅಲ್ಲಲ್ಲಿ ರಕ್ತ ಗಾಯವಾಗಿದ್ದು ಬಲಕೈಯ ತಟ್ಟಿಗೂ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-02-2014 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಆಯಿಷಾ ರಝೀಯಾ ರವರು ಮನೆಗೆ ಬೀಗ ಹಾಕಿ ತನ್ನ ತಂದೆಯ ಮನೆಯಾದ ಪಾಂಡೇಶ್ವರಕ್ಕೆಂದು ಬಂದು ತಂದೆಯ ಮನೆಯಲ್ಲಿದ್ದಾಗ, ದಿನಾಂಕ 23-02-2014 ರಂದು ಬೆಳಿಗ್ಗೆ 10-00 ಗಂಟೆಯ ಸಮಯಕ್ಕೆ ಪಕ್ಕದ ಮನೆಯ ಕುಂಞ ಅಹಮ್ಮದ್ ಎಂಬವರು, ನಿಮ್ಮ ಮನೆಯ ಒಳಗಡೆ ಬಾಗಿಲು ಗೋದ್ರೆಜ್ ಕಪಾಟುಗಳು ತೆರೆದಿರುವುದು ಕಿಟಿಕಿ ಮೂಲಕ ಕಂಡು ಬರುತ್ತದೆ, ಕೂಡಲೇ ಬನ್ನಿ ಎಂದು ಪೋನ್ ಮೂಲಕ ತಿಳಿಸಿದ ಪ್ರಕಾರ ಪಿರ್ಯಾದಿದಾರರು ತನ್ನ ಸಹೋದರ ಹಂಸ ಎಂಬವರೊಂದಿಗೆ ತನ್ನ ಮನೆ ಇರುವ ಕಂದುಕ ಎಂಬಲ್ಲಿಗೆ ಹೋಗಿ, ಮನೆಯ ಬಾಗಿಲನ್ನು ತೆರೆದು ಒಳಗಡೆ ಹೋಗಿ ನೋಡಿದಾಗ, ಯಾರೋ ಕಳ್ಳರು, ಮನೆಯ ಮಾಡಿನ ಹಂಚನ್ನು ತೆಗೆದು ಒಳ ಪ್ರವೇಶಿಸಿ, ಮಲಗುವ ಕೋಣೆಯಲ್ಲಿ ಇದ್ದ ಗೋದ್ರೆಜ್ ಕಪಾಟಿನ ಬಾಗಿಲನ್ನು ತೆರೆದು, ಸಿಕ್ಕಿಸಿ ಇಟ್ಟಿದ್ದ ಸುಮಾರು 3 ಪವನ್ ತೂಕದ 2 ಚಿನ್ನದ ಬಳೆಗಳನ್ನು ಮತ್ತು ಹೊಸ ನೋಕಿಯ-105 ಮೊಬೈಲ್ ಪೋನ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವು ಆದ ಸೊತ್ತುಗಳ ಮೌಲ್ಯ ಅಂದಾಜು ರೂಪಾಯಿ 50,000/- ಆಗಬಹುದು.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 5-2-2014 ರಂದು 09656943556 ನೇದರಲ್ಲಿ ರಜೀಶ್ ಎಮ್ . ಎಂಬವರು ಹಾಗೂ 09037972086 ನೇದರಲ್ಲಿ ಬಶೀರ್ ಎಂಬವರು ಪಿರ್ಯಾದಿದಾರರಾದ ಶ್ರೀಸುಮನ್ ಎಂ. ರವರ ದೂರವಾಣಿ ಸಂಖ್ಯೆ 8762300112 ನೇದಕ್ಕೆ ರಾತ್ರಿ ಸಮಯದಲ್ಲಿ ಬೆದರಿಕೆ ಕರೆಯನ್ನು ಮಾಡಿ, ಕಾಸರಗೋಡಿನಿಂದ ರೌಡಿಗಳನ್ನು ತರಿಸಿ ನಿಮ್ಮನ್ನು ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರ ಬಾಬ್ತು ಕೇರಳದ ಕಣ್ಣೂರಿನಲ್ಲಿರುವ ಮನೆಯಲ್ಲಿ ರಜೀಶ್ ಹಾಗೂ ಆತನ ಮನೆಯವರು ಬಾಡಿಗೆಗೆ ವಾಸವಾಗಿದ್ದು, ದಿನಾಂಕ 31-01-2014 ರಂದು ಆ ಮನೆಯನ್ನು ತೆರವುಗೊಳಿಸಲು ದಿನ ನಿಗದಿಯಾಗಿದ್ದು, ಆದರೂ ಕೂಡಾ ಅವರು ಮನೆಯನ್ನು ತೆರವುಗೊಳಿಸದೇ ಇರುವುದರಿಂದ, ಈ ಕೃತ್ಯ ನಡೆದಿರುವುದಾಗಿರುತ್ತದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-02-2014 ರಂದು 14-30 ಗಂಟೆಯಿಂದ ದಿನಾಂಕ 23-02-2014 ರಂದು 20-30 ಗಂಟೆಯ ಮಧ್ಯಂತರದಲ್ಲಿ ಯಾರೋ ಕಳ್ಳರು ಫಿರ್ಯಾದಿದಾರರಾದ ಶ್ರೀ ಶರಫ್-ಉದ್-ದಿನ್ ರವರ ಮಂಗಳೂರು ಅತ್ತಾವರ ಸ್ಟರಕ್ ರಸ್ತೆಯ ಸೆ-ರೆನೆ ಡೋರ್ ನಂಬ್ರ 18-2-16/21 ನೇ ಮನೆಯ ಎದುರು ಬಾಗಿಲನ್ನು ಬಲತ್ಕಾರವಾಗಿ ಮೀಟಿ ಮುರಿದು ಒಳಗಡೆ ಪ್ರವೇಶಿಸಿ 1ನೇ ಮಹಡಿಯಲ್ಲಿರುವ ಫಿರ್ಯಾದಿದಾರರ ದೊಡ್ಡ ಮಗನ ಬೆಡ್ ರೂಮಿನ ಮರದ ಕಪಾಟಿನ ಬಾಗಿಲು ತೆರೆದು ಲ್ಯಾಪ್ ಟಾಪ್-1, ವಿವಿಧ ನಮೂನೆಯ 7 ವಾಚ್ ಗಳು, ಲ್ಯಾಪ್ ಟಾಪ್ ಬ್ಯಾಗ್ -1 ಹಾಗೂ ಮನೆಯ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಪ್ಪು ಬಣ್ಣದ 2012 ನೇ ಮೊಡೆಲ್ ನ KA 19 MD 755 ನೋಂದಣಿ ಸಂಖ್ಯೆಯ ಚವರ್ ಲೆಟ್ ಕಂಪೆನಿಯ ಕಾರನ್ನು ಮನೆಯ ಒಳಗಡೆ ಕಳವು ಮಾಡಿದ ಕೀಯ ಸಹಾಯದಿಂದ ಕಾರನ್ನು ಕೂಡಾ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ. 9,22,000/- ಆಗ ಬಹುದು.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/02/2014 ರಂದು 03.45 ಗಂಟೆಗೆ ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಚಂದ್ರಹಾಸ ನಗರ ಎಂಬಲ್ಲಿರುವ ಮುಗರೋಡಿ ಕನ್ಸ್ ಸ್ಟ್ರಕ್ಷನ್ ನ ಲೇಬರ್ ಶೆಡ್ಡಿನ ಬಳಿ ಅಕ್ರಮವಾಗಿ 2-3 ಬೈಕ್ ಹಾಗೂ ಒಂದು ಟಾಟಾ ಸುಮೋದಲ್ಲಿ ಬಂದ 10-15 ಮಂದಿ ಅಪರಿಚಿತ ವ್ಯಕ್ತಿಗಳು ಅಲ್ಲಿ ವಾಸವಿದ್ದ ಕಾರ್ಮಿಕರ ಶೆಡ್ಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ, ಅಲ್ಲಿದ್ದ ಕಾರ್ಮಿಕರಿಗೆ ಮರದ ದೊಣ್ಣೆ ಹಾಗೂ ಚೂರಿಯಿಂದ ಹಲ್ಲೆ ಮಾಡಿ, ಜಮೀರುಲ್ಲಾ ಎಂಬವರ ಬ್ಯಾಗಿನಲ್ಲಿದ್ದ 90,000/- ನಗದನ್ನು ಹಾಗೂ 10 ಮೊಬೈಲ್ ಫೋನ್ ಗಳನ್ನು ದರೋಡೆ ಗೈದಿದ್ದು, ಆರೋಪಿತರ ಹಲ್ಲೆಯಿಂದ ಗಾಯಗೊಂಡ ತಾಜಮುಲ್ ಹಕ್, ಕಿಶೋರ್ ರಾಯ್, ರಬೀಯುಲ್, ಸೈಫುದ್ದೀನ್ ಹಕ್ ಎಂಬವರು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/02/2014 ರಂದು ಸಂಜೆ 3.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೋಹನ ಅಂಚನ್ ರವರು ತನ್ನ ಹೆಂಡತಿಯನ್ನು ಸಹ ಸವಾರಳಾಗಿ ಕೂರಿಸಿ ಕೊಂಡು ಕೆ.ಎ. 19 ಇ.ಇ. 9588 ನೇ ಹೋಂಡ ಎವಿಯೇಟರ್ ನಲ್ಲಿ ಕಟೀಲು ದೇವಸ್ಥಾನಕ್ಕೆ ಹೋಗಿ ವಾಪಾಸ್ಸು ಕೋಡಿಕಲ್ ಕಡೆಗೆ ಸವಾರಿಮಾಡಿಕೊಂಡು ಹೊರಟು ಮರವೂರು ಬ್ರಿಡ್ಜ್ ನ ಹಿಂದೆ ತಿರುವಿನಲ್ಲಿ ನಿಲ್ಲಿಸಿದ್ದರು ಅದೇ ಸಮಯಕ್ಕೆ ಪಿರ್ಯಾದಿದಾರರ ಹಿಂದಿನಿಂದ ಸ್ಕೂಟಿ ಪೆಪ್ಪ್ ಕೆ.ಎ. 19 ಇ.ಕೆ. 0733 ನೇಯದನ್ನು ಅದರ ಸವಾರಳು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದ ಪಿರ್ಯಾದಿದಾರರ ಬಾಬ್ತು ಹೊಂಡ ಎವಿಯೇಟರ್ ಗೆ ಡಿಕ್ಕಿ ಹೊಡೆದರು ಅದರ ಪರಿಣಾಮ ಪಿರ್ಯಾದಿದಾರರು ರಸ್ತೆಯ ಬಲಭಾಗಕ್ಕೆ ಬಿದ್ದು ಬಲಕಾಲಿಗೆ ಒಳ ಜಖಂ ಹಾಗೂ ರಕ್ತಗಾಯ ವಾಗಿದ್ದು ಸ್ಕೂಟರ್ ಗಳೆರಡು ಜಖಂ ಆಗಿ ಅಪಘಾತ ಮಾಡಿದ ವಾಹನ ಸವಾರಳಿಗೂ ರಕ್ತಗಾಯ ವಾಗಿದ್ದು ಗಾಯಾಳುಗಳು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-02-2014 ರಂದು ಫಿರ್ಯಾದುದಾರರಾದ ಶ್ರೀ ಶಂಶುದ್ದೀನ್ ರವರು ತಮ್ಮ ಬಾಬ್ತು ಈಚರ್ ಲಾರಿ ನಂಬ್ರ KL 14 N 7251 ನ್ನು ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದು ಸಮಯ ಸುಮಾರು 01-15 ಗಂಟೆಗೆ ತೊಕ್ಕೋಟು ದೋಸಾ ಪಾಯಿಂಟ್ ಬಳಿ ತಲುಪಿದಾಗ ಎದುರುಗಡೆಯಿಂದ ಅಂದರೆ ತಲಪಾಡಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಕಾರು ನಂಬ್ರ KA 19 MD 8049 ನ್ನು ಅದರ ಚಾಲಕರು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ವಿರುದ್ದ ದಿಕ್ಕಿನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಚಲಾಯಿಸಿಕೊಂಡಿದ್ದ ಈಚರ್ ಲಾರಿಗೆ ಒಮ್ಮೆಲೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಲಾರಿಯ ಎದುರಿನ ಬಲಭಾಗದ ಬಂಪರ್, ಸೈಡ್ಶೇಪ್, ಏರ್‌ಪಿಟ್ಟರ್, ಡಿಸೇಲ್ ಪಂಪ್ ಹಾಗೂ ಡಿಸೇಲ್ ಟ್ಯಾಂಕ್ ಜಖಂಗೊಂಡಿದ್ದು ಆರೋಪಿ ಚಲಾಯಿಸಿಕೊಂಡಿದ್ದ ಕಾರು ಸಂಪೂರ್ಣ ಜಖಂಗೊಂಡಿರುವುದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-02-2014 ರಂದು ಪಿರ್ಯದಿದಾರರಾದ ಶ್ರೀಮತಿ ಮೀನಾಕ್ಷಿ ರವರು ಮನೆಗೆ ಸಾಮಾನು ತರುವರೇ ಮನೆಯಿಂದ ಹೊರಟು ತೊಕ್ಕಟ್ಟು ಬಂದು ಸಾಮಾನು ಖರೀದಿ ಮಾಡಿ ತೊಕ್ಕಟ್ಟು ಭಗವತಿ ಬ್ಯಾಂಕ್ನಿಂದ ಹಣವನ್ನು ತೆಗೆದು ತೊಕ್ಕಟ್ಟು ಬಸ್ಟೇಂಡ್ಗೆ ಹೋಗುವರೇ ನಡೆದುಕೊಂಡು ಮದ್ಯಾಹ್ನ 12:00 ಗಂಟೆಗೆ ಸಾಗರ್ ಕಲೆಕ್ಷನ್ ಎದುರು ಎನ್.ಹೆಚ್-66 ರಲ್ಲಿ ರಸ್ತೆಯನ್ನು ದಾಟಿ ಮುಂದೆ ಹೋಗುತ್ತಿದ್ದಾಗ ತೊಕ್ಕಟ್ಟು ಓವರ್ ಬ್ರಿಡ್ಜ್ ಕಡೆಯಿಂದ ಮಂಗಳೂರು ಕಡೆಗೆ ಒಬ್ಬ ಸ್ಕೂಟರ್ ಸವಾರನು ತನ್ನ ಸ್ಕೂಟರ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಎಡಕಾಲು ಪಾದಕ್ಕೆ ರಕ್ತ ಗಾಯವಾಗಿರುತ್ತದೆ. ಡಿಕ್ಕಿ ಹೊಡೆದ ಸ್ಕೂಟರ್ ಹೊಸ ಸ್ಕೂಟರ್ ಆಗಿದ್ದು, ಅದರ ಚಾಸೀಸ್ ನಂಬ್ರ JF50ETD156724 ಹಾಗೂ 4JF501MDT157078 ಆಗಿರುತ್ತದೆ. ಈ ಅಪಘಾತಕ್ಕೆ ಆಕ್ಟಿವಾ ಸ್ಕೂಟರ್ ಸವಾರನ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನವೇ ಕಾರಣವಾಗಿರುತ್ತದೆ.
No comments:
Post a Comment