ದೈನಂದಿನ ಅಪರಾದ ವರದಿ.
ದಿನಾಂಕ 26.02.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 0 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-02-2014 ರಂದು ಪಿರ್ಯಾದಿದಾರರಾದ ಶ್ರೀ ಹರೀಶ್ ರವರ ಅಣ್ಣನಾದ ಮೋಹನ್ ಪ್ರಾಯ 47 ವರ್ಷ ತಂದೆ: ದಿ' ರಾಘವ ಪೂಜಾರಿ ಎಂಬವರು ಮಧ್ಯಾಹ್ನ ಊಟಮಾಡಿ ಸಮಯ ಸುಮಾರು 15:00 ಗಂಟೆಗೆ ತಾಯಿಯಲ್ಲಿ ನಾನು ಹೋರಗೆ ಹೋಗಿ ಬರುತ್ತೇನೆಂದು ಹೋದವರು ರಾತ್ರಿಯಾದರೂ ಮನೆಗೆ ಬಾರದೆ ಇದ್ದುದರಿಂದ ಈ ಬಗ್ಗೆ ನಾವು ಎಲ್ಲಾ ಕಡೆ ಹುಡುಕಾಡಿದರೂ ಅತನ ಇರುವಿಕೆ ಮಾಹಿತಿ ಸಂಗ್ರಹಿಸುವರೇ ಪ್ರಯತ್ನಿಸಿದಲ್ಲಿ ಈ ತನಕ ಪತ್ತೆಯಾಗದೆ ನಾಪತ್ತೆಯಾಗಿರುತ್ತಾನೆ. ಕಾಣೆಯಾದ ವ್ಯಕ್ತಿಯ ಚಹರೆ ವಿವರ : ಹೆಸರು – ಮೋಹನ(47), ಮೈ ಬಣ್ಣ - ಎಣ್ಣೆ ಕಪ್ಪು, ಎತ್ತರ- 5.5 ಅಡಿ, ಕೋಲು ಮುಖ, ಸಪೂರ ಶರೀರ, ಧರಿಸಿರುವ ಬಟ್ಟೆ- ಕಂದು ಬಿಳಿ ಗೆರೆಗಳ್ಳುಳ್ಳ ಟೀ ಶರ್ಟ್, ಬಿಳಿ ಪಂಚೆ, ಭಾಷೆ- ತುಳು, ಕನ್ನಡ ಮಾತನಾಡುತ್ತಾರೆ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25/01/2014 ಪಿರ್ಯಾದಿದಾರರಾದ ಶ್ರೀ ಸಂತೋಷ್ ಕುಮಾರ್ ರವರು ತನ್ನ ಸ್ನೇಹಿತ ಧನರಾಜ್ ಎಂಬವರಿಂದ ವ್ಯವಹಾರ ನಿಮಿತ ಪಡೆದುಕೊಂಡಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ-19/ಇಜಿ-4915 ನೇಯದನ್ನು ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಬೈಕಂಪಾಡಿ ಪೆಟೆಯಲ್ಲಿ ಇರುವ ಮುಬಾರಕ್ ಹೋಟೆಲ್ ನ ಬಳಿ ರಸ್ತೆಯ ಬದಿ ರಾತ್ರಿ 9-00 ಗಂಟೆಗೆ ನಿಲ್ಲಿಸಿ ಊಟ ಮಾಡಲು ಹೋದವರು ಊಟಾ ಮುಗಿಸಿ ವಾಪಾಸು ಹೋಟೆಲ್ ನಿಂದ ಹೊರಗೆ ಬಂದಾಗ ಪಿರ್ಯಾದಿದಾರರು ನಿಲ್ಲಿಸಿದ್ದ ಸ್ಥಳದಲ್ಲಿ ಮೋಟಾರ್ ಸೈಕಲ್ ಇಲ್ಲದೇ ಇದ್ದುದರಿಂದ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದರು ಮೋಟಾರ್ ಸೈಕಲ್ ಪತ್ತೆಗದೆ ಇದ್ದುದರಿಂದ ಹಾಗೂ ಪಿರ್ಯಾದಿದಾರರ ಸ್ನೇಹಿತ ಮೋಟಾರು ಸೈಕಲಿನ ಮಾಲಿಕ ಧನರಾಜ್ ರವರು ತುರ್ತು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಮೋಟಾರು ಸೈಕಲ್ ಕಾಣೇಯಾದ ವಿಚಾರ ಅವರಿಗೆ ತಿಳಿಸಲು ಪಿರ್ಯಾದಿದಾರರಿಗೆ ಅಸಾದ್ಯವಾಗಿರುವುದರಿಂದ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಬಂದ ಬಳಿಕ ಅವರಿಗೆ ವಿಷಯ ತಿಳಿಸಿ ಅವರ ಅನುಮತಿ ಪಡೆದು ಠಾಣೆಗೆ ಬಂದು ದೂರನ್ನು ನೀಡಿದ್ದು, ಕಾಣೆಯಾದ ಮೋಟಾರು ಸೈಕಲ್ ಹೋಂಡಾ ಕಂಪನಿಗೆ ಸೇರಿದ ಯುನಿಕಾರ್ನ್ ಹೆಸರಿನ ಮೋಟಾರ್ ಸೈಕಲ್ ಆಗಿದ್ದು ಇದರ ನೊಂದಾಣಿ ಸಂಖ್ಯೆ. ಕೆಎ-19/ಇಜಿ 4915 ಆಗಿದ್ದು ಇದರ ಇಂಜೀನ್ ನಂಬ್ರ KC09E6376132 ಆಗಿದ್ದು ಚೇಸಿಸ್ ನಂಬ್ರ ME4KC09CLC8368241 ಆಗಿರುತ್ತದೆ. ಇದರ ಬಣ್ಣ P S RED (ಕೆಂಪು) ಆಗಿರುತ್ತದೆ. ಹಾಗೂ ಇದರ ಅಂದಾಜು ಮೌಲ್ಯ ರೂ. 45,000/- ಆಗಬಹುದು.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25/02/2014 ರಂದು ಮಂಗಳೂರು ತಾಲೂಕು ಕಾವೂರು ಗ್ರಾಮದ ಪಂಜಿಮೊಗರು ಎಂ.ವಿ. ಶೆಟ್ಟಿ ಕಾಲೇಜಿನ ಬಳಿ ಮಾಲಾಡಿ ಕೋರ್ಟ್ ಕಡೆಗೆ ಹಾದುಹೋಗುವ ಡಾಮರು ರಸ್ತೆಯ ಪೂರ್ವ ಬದಿಯಲ್ಲಿರುವ ಕಾಡುಗಿಡ ಪೊದೆಗಳ ಮಧ್ಯೆ ಇರುವ ಖಾಲಿ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಕಾವೂರು ಠಾಣಾ ಪಿಎಸ್ಐ ಶ್ರೀ ಉಮೇಶ್ ಕುಮಾರ್ ಎಂ.ಎನ್. ರವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಮಧ್ಯಾಹ್ನ 14-00 ಗಂಟೆಗೆ ಧಾಳಿ ನಡೆಸಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ (ಉಲಾಯಿ ಪಿದಾಯಿ) ಎಂಬ ನಸಿಬಿನ ಜೂಜಾಟ ಆಡುತ್ತಿದ್ದ ಆರೋಪಿಗಳಾದ ವಸಂತ, ಲತೀಶ, ಪದ್ಮನಾಭ, ಕಿರಣ್ ಡಿಲೀಮಾ, ಅನಿಲ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿದ್ದ ಒಟ್ಟು ರೂಪಾಯಿ 2470/-, 52 ಇಸ್ಪೀಟ್ ಎಲೆಗಳು ಹಾಗೂ ನೆಲದ ಮೇಲೆ ಹಾಸಿದ್ದ ಪ್ಲಾಸ್ಟಿಕ್ ಚೀಲಗಳನ್ನು ಮುಂದಿನ ಕ್ರಮದ ಸ್ವಾಧೀನಪಡಿಸಿಕೊಂಡಿರುವುದಾಗಿದೆ.
No comments:
Post a Comment