Wednesday, February 4, 2015

SURATHKAL MUDER CASE : ONE MORE ARREST

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಿಂಜೆ ಜನತಾಬೆಟ್ಟು ಮೈದಾನದಲ್ಲಿ ನಡೆದ ಕೇಶವ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ರೂವಾರಿಯಾದ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಯಾನೆ ಬಾಲಕೃಷ್ಣ ಶೆಟ್ಟಿಯ ಸಹಚರ ಸತೀಶ್ ಯಾನೆ ಸಚ್ಚು ಯಾನೆ ಸತೀಶ್ ಸೂರಿಂಜೆಯನ್ನು ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ.

          ದಿನಾಂಕ 06-01-2015 ರಂದು 06-30 ಗಂಟೆಗೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಸೂರಿಂಜೆ ಜನತಾಬೆಟ್ಟು ಎಂಬಲ್ಲಿರುವ ಮೈದಾನದಲ್ಲಿ ಶಟಲ್ ಆಟ ಆಡುತ್ತಿರುವ ಸಮಯದಲ್ಲಿ ಆರೋಪಿಗಳು ತಲವಾರು ಹಿಡಿದುಕೊಂಡು ಬರುತ್ತಿರುವುದನ್ನು ಕಂಡ ಕೇಶವ ಶೆಟ್ಟಿ ರವರು ಮೈದಾನದ ಹಿಂಬದಿ ಗಿಡಮರಗಳ ಕಡೆಗೆ ಓಡುತ್ತಿರುವಾಗ ಅವರನ್ನು ಬೆನ್ನಟ್ಟಿ ಅವರ ತಲೆಗೆ ಹಾಗೂ ಮುಖಕ್ಕೆ ಹಾಗೂ ಶರೀರಕ್ಕೆ ತಲವಾರಿನಿಂದ ಕಡಿದ ಪರಿಣಾಮ ಕೇಶವ ಶೆಟ್ಟಿ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದರು.

          ಈ ಪ್ರಕರಣದಲ್ಲಿ ಈಗಾಗಲೇ ಸೂರಿಂಜೆಯವರಾದ ಲತೀಶ್ ಶೆಟ್ಟಿ, ಯುವರಾಜ, ಶೋಭರಾಜ್ ಮತ್ತು ಕೃಷ್ಣ ಎಂಬವರನ್ನು ದಸ್ತಗಿರಿ ಮಾಡಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಈ ಪ್ರಕರಣದಲ್ಲಿ ಪ್ರಮುಖ ರೂವಾರಿಯಾದ ಸತೀಶ್ ಸೂರಿಂಜೆ ಎಂಬವನು ತಲೆಮರೆಸಿಕೊಂಡಿದ್ದನು. ಈ ದಿನ ದಿನಾಂಕ:  04-02-2015 ರಂದು ಸತೀಶ್ ಸೂರಿಂಜೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲ್ ತಲಪಾಡಿ ಬಸ್ಸುನಿಲ್ದಾಣದ ಬಳಿ ಇದ್ದ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಆತನನ್ನು ಸಂಜೆ ಸಿಸಿಬಿ ಇನ್ಸ್ಪೆಕ್ಟರ್ ಹಾಗೂ ಪಿಎಸ್ಐ ಮತ್ತು ಸಿಬ್ಬಂದಿಯವರು ದಸ್ತಗಿರಿ ಮಾಡಿರುತ್ತಾರೆ. ಆತನ ಹೆಸರು ವಿಳಾಸ ಈ ಕೆಳಗಿನಂತೆ ಇರುತ್ತದೆ.

      ಸತೀಶ  ಯಾನೆ ಸಚ್ಚು ಯಾನೆ ಸತೀಶ್ ಸೂರಿಂಜೆ, ಪ್ರಾಯ 30/15 ವರ್ಷ, ತಂದೆ : ದಿವಂಗತ ಸೇಸಪ್ಪ, ವಾಸ: ಕೋಟೆ ಮನೆ, ಸೂರಿಂಜೆ ಅಂಚೆ, ಕಾಟಿಪಳ್ಳ, ಮಂಗಳೂರು ತಾಲೂಕು.

          ಸತೀಶ್ ಸೂರಿಂಜೆಯ ಮೇಲೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, 2010 ನೇ ಇಸವಿಯಲ್ಲಿ ಶಿಬರೂರಿನಲ್ಲಿ ಅನ್ಯಕೋಮಿನ ಯುವಕನೊಬ್ಬನಿಗೆ ನಡೆದ ಕೊಲೆಯತ್ನ ಪ್ರಕರಣ, 2012 ರಲ್ಲಿ ಸುರತ್ಕಲ್ನಲ್ಲಿ ನಡೆದ ಮಣಿಕಂಠ ಎಂಬವನ ಕೊಲೆ ಪ್ರಕರಣ, 2013 ರಲ್ಲಿ ಮಡಿಕೇರಿ ಜೈಲಿನಲ್ಲಿ ಬೆದರಿಕೆ ಹಾಕಿದ ಪ್ರಕರಣ, 2013 ರಲ್ಲಿ ಖಡ್ಗೇಶ್ವರಿ ಎಂಬಲ್ಲಿ ನಡೆದ ಕೊಲೆಬೆದರಿಕೆ ಪ್ರಕರಣ, 2013 ರಲ್ಲಿ ಭೂಗತ ಪಾತಕಿ ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿಯ ಆದೇಶದಂತೆ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಲಾಲ್ ಬಾಗ್ ನಲ್ಲಿ ಉದ್ಯಮಿ ವಿಜಯೇಂದ್ರ ಭಟ್ ಎಂಬವರ ಮೇಲೆ ನಡೆದ ಶೂಟೌಟ್ ಪ್ರಕರಣ, ಇತ್ತೀಚೆಗೆ ಕೊಲೆಯಾದ ಕೇಶವ ಶೆಟ್ಟಿ ಎಂಬವರಿಗೆ 2014 ರಲ್ಲಿ ಹಫ್ತಾ ಹಣಕ್ಕಾಗಿ ಬೆದರಿಕೆ ಹಾಕಿದ ಪ್ರಕರಣ, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿಯಲ್ಲಿ ಭೂಗತ ಪಾತಕಿ ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿಯ ಆದೇಶದಂತೆ ಇತರರೊಂದಿಗೆ ಸೇರಿಕೊಂಡು ದರೋಡೆ  ಹಾಗೂ ಭೂಗತ ಪಾತಕಿ ರವಿಪೂಜಾರಿಯ ಸಹಚರನಾದ ಬಿಜೈ ರಾಜ ಕೊಲೆ ಪ್ರಕರಣದ ಆರೋಪಿಯಾದ ಬೆಂಗ್ರೆಯ ಭರತೇಶ್ ಎಂಬವನ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.   ಆರೋಪಿ ಸಚ್ಚು @ ಸತೀಶ್ಯನ್ನು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

          ಪೊಲೀಸ್ ಕಮೀಷನರ್ ಶ್ರೀ.ಎಸ್.ಮುರುಗನ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿ.ಸಿ.ಪಿ ಶ್ರೀ.ಕೆ.ಸಂತೋಷ್ ಬಾಬು ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ವೆಲೆಂಟೈನ್ ಡಿ'ಸೋಜ ಮತ್ತು ಪಿಎಸ್ಐ ಶ್ಯಾಮ್ ಸುಂದರ್.ಹೆಚ್.ಎಂ ಹಾಗೂ ಸಿಸಿಬಿ ಘಟಕದ ಸಿಬ್ಬಂದಿಯವರು ಕಾಯ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

No comments:

Post a Comment