Wednesday, February 25, 2015

Daily Crime Reports : 24-02-2015

ದೈನಂದಿನ ಅಪರಾದ ವರದಿ.
ದಿನಾಂಕ 24.02.201508:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
3
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
2
 
 
 
 
 
 
 
 
 
 
 
 
 
 
 
 
 
 
 
 
 
 



1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಮನೋಹರ ಹೆಗ್ಡೆ ರವರು ಕೆ. 19 ಝೆಡ್‌ 8945 ನಂಬ್ರದ ಮಾರುತಿ 800 ಕಾರಿನ ಮಾಲಕರಾಗಿರುತ್ತಾರೆ. ದಿನಾಂಕ 15-02-2015 ರಂದು ಮಗಳ ಮದುವೆ ನಿಶ್ಚಯಿಸಿದ್ದುದರಿಂದ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಕಾರನ್ನು ಬಳಸುತ್ತಿದ್ದರು. ದಿನಾಂಕ 04-02-2015 ರಂದು ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ರಾತ್ರಿ ಸುಮಾರು 9-00 ಗಂಟೆಗೆ ಕಾರನ್ನು ಪ್ರತಿನಿತ್ಯ ನಿಲ್ಲುಸುತ್ತಿದ್ದ ಲೇಡಿಹಿಲ್ಚರ್ಚ್‌‌ನ ಗೇಟಿನ ಬಳಿಯಿರುವ ಖಾಲಿ ಸ್ಥಳದಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದು ದಿನಾಂಕ 05-02-2015 ರಂದು ಬೆಳಿಗ್ಗೆ 05-30 ಗಂಟೆಗೆ ವಾಕಿಂಗ್ತೆರಳಲು ಮನೆ ಹೊರಗಡೆ ಬಂದು ನೋಡಿದಾಗ ಕಾರು ನಿಲ್ಲಿಸಿದ ಸ್ಥಳದಲ್ಲಿ ಇದ್ದಿರುವುದಿಲ್ಲ. ಸುತ್ತಮುತ್ತ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ದಿನಾಂಕ 15-02-2015 ರಂದು ಮಗಳಿಗೆ ಮದುವೆ ಇದ್ದುದರಿಂದ ಫಿರ್ಯಾಧಿದಾರರು ಆ ಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ ದಿನಾಂಕ 23-02-2015 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
 
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-02-2015 ರಂದು  ಪಿರ್ಯಾದಿದಾರರು ಅವರ ಇತರ 4 ಮಂದಿ ಸ್ನೇಹಿತೆಯರೊಂದಿಗೆ ಗೋವಿಂದ ದಾಸ ಕಾಲೇಜಿನ ಕ್ಲಾಸ್ ರೂಮಿನಲ್ಲಿ ಕುಳಿತುಕೊಂಡಿರುವ  ಸಮಯ ಅದೇ ಕಾಲೇಜಿನ ಮಹಮ್ಮದ್ ಸ್ವಾಲಿ ಎಂಬಾತನು ಅವರ ಕಾಲ ಮೇಲೆ ಇರುವ ಫೋಟೋವನ್ನು ವಿನೀತ್ ಎಂಬಾತನು ತೆಗೆದಿದ್ದು, ಸದ್ರಿ ಪೋಟೋವನ್ನು ಪಿರ್ಯಾದಿದಾರರು ಅವರ ಲ್ಯಾಪ್ ಟಾಪ್ಗೆ ಅಪ್ ಲೋಡ್ ಮಾಡಿರುತ್ತಾರೆ. ಅದೇ  ಫೋಟೋವನ್ನು ಯಾರೋ  ವ್ಯಕ್ತಿಗಳು ದಿನಾಂಕ 20-02-2015 ರ ನಂತರ ವಾಟ್ಸಪ್ ಹಾಗೂ ಫೇಸ್ ಬುಕ್ ಗೆ ಹಾಕಿ ಅದನ್ನು ಎಡಿಟ್ ಮಾಡಿ ದುರ್ಬಳಿಕೆ ಮಾಡಿರುವುದಾಗಿದೆ.
 
3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-02-2015 ರ ರಾತ್ರಿಯಿಂದ ದಿನಾಂಕ 22-02-2015 ರ ಬೆಳಿಗ್ಗೆ ಯ ಮಧ್ಯೆ ಯಾರೋ ಕಿಡಿಗೇಡಿಗಳು ಕುಳಾಯಿ  ಬದ್ರಿಯಾ ಜುಮ್ಮಾಮಸೀದಿಗೆ, ಮಸೀದಿಯ ಬಲಭಾಗದಲ್ಲಿರುವ ಗಾಜಿಗೆ ಕಲ್ಲು ಹೊಡೆದು ಗ್ಲಾಸ್ ಹುಡಿ ಮಾಡಿರುವ ಬಗ್ಗೆ ಸದ್ರಿ ಮಸೀದಿಯ ಅದ್ಯಕ್ಷರಾದ ಶ್ರೀ ಅಬೂಬಕ್ಕರ್ ಮುಬಾರಕ್ ರವರು ನೀಡಿರುವ ದೂರಿನಂತೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.
 
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-02-2015 ರಂದು ಅಪರಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಗಣೇಶ ಎಂಬವರನ್ನು ಮಂಗಳೂರು ತಾಲೂಕು ಚಿತ್ರಾಪು ಗ್ರಾಮದ ಚಿತ್ರಾಪು ಜಂಕ್ಷನ್ ಪವನ್ ಐಸ್ ಕ್ರೀಮ್  ಬಳಿಯಲ್ಲಿ  ಆರೋಪಿಗಳಾದ ಸುಜಯ್, ಭಗತ್ ಹಾಗೂ ಇತರ ಇಬ್ಬರು ಸೇರಿ ತಡೆದು ನಿಲ್ಲಿಸಿ ಕಟೀಲು ಎಂದು ಬರೆದಿರುವ ಆಟೋರಿಕ್ಷಾದಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿ ಅಪಹರಿಸಿಕೊಂಡು ಪಡುಬಿದ್ರೆ ಶಿವನಗರ ಎಂಬಲ್ಲಿಗೆ ಕೊಂಡುಹೋಗಿ ಕೈಯಿಂದ ಹೊಡೆದು, ಕಾಲಿನಿಂದ ಗುಪ್ತಾಂಗಕ್ಕೆ ತುಳಿದು, ಹೊಳೆಗೆ ಹಾಕಿ ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ.
 
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-02-2015 ರಂದು ಸಂಜೆ ಸಮಯ ಸುಮಾರು 17-30 ಗಂಟೆಯಿಂದ ದಿನಾಂಕ: 23-02-2015 ರಂದು ಬೆಳಿಗ್ಗೆ ಸಮಯ ಸುಮಾರು 10-00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಸುನೀಲ್ ಡಿ'ಸೋಜಾ ರವರು ವಾಸವಾಗಿರುವ ಮಂಗಳೂರು ನಗರದ ಫಳ್ನೀರಿನಲ್ಲಿರುವ ಯುನಿಟಿ ಆಸ್ಪತ್ರೆಯ ಡೋರ್.ನಂ.16-6-3993(7) ನೇ ವಸತಿ ಗೃಹದ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ತೆರೆದು ಆ ಮೂಲಕ ಒಳಪ್ರವೇಶಿಸಿ ಬೆಡ್ ರೂಮಿನಲ್ಲಿರುವ ಕಬ್ಬಿಣದ ಕಪಾಟನ್ನು ಅಲ್ಲೇ ಇದ್ದ ಕೀಯ ಸಹಾಯದಿಂದ ತೆರೆದು ಅದರೊಳಗಿರಿಸಿದ್ದ ವಿವಿಧ ನಮೂನೆಯ ಸುಮಾರು ಒಟ್ಟು 156 ಗ್ರಾಂ ತೂಕದ ಚಿನ್ನಾಭರಣ, Canon ಕಂಪನಿಯ ಕೆಮರಾ-1, Lenovo Tab-1 ಹಾಗೂ ಹಾಲ್ ನಲ್ಲಿ ಗೋಡೆಗೆ ಅಳವಡಿಸಿದ್ದ Onida LCD TV-1, ಹೀಗೆ ಒಟ್ಟು 3,55,000/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
 
6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-02-2015 ರಂದು ರಾತ್ರಿ ಸುಮಾರು 11:30 ಗಂಟೆಗೆ ಮಂಗಳೂರು ನಗರದ ಪಳ್ನೀರು ಪೆಟ್ರೋಲ್ಪಂಪ್ಬಳಿ ಕೆಎ-19-ಎಂಸಿ-7896 ನಂಬ್ರದ ಕಾರನ್ನು ಅದರ ಚಾಲಕನು ಹಂಪನಕಟ್ಟೆ ಕಡೆಯಿಂದ ಕಂಕನಾಡಿ ಕಡೆಗೆ ಕಾಂಕ್ರಿಟ್ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು ಎದುರಿನಿಂದ ಖಾಲಿದ್ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ-19-ಇಎನ್‌‌‌‌‌-1549 ನಂಬ್ರದ ಸ್ಕೂಟರ್ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರ ಖಾಲಿದ್ರವರು ಕಾಂಕ್ರಿಟ್ರಸ್ತೆಗೆ ಬಿದ್ದು ಬಲಕೈ ಮತ್ತು ಬಲಕಾಲಿನ ಮೂಳೆ ಮುರಿತದ ಗುದ್ದಿದ ಗಾಯ, ಮುಖಕ್ಕೆ, ಹಣೆಗೆ, ಬಲಕೈ ಭುಜಕ್ಕೆ, ಎಡಕೈಗೆ, ಎದೆಗೆ ರಕ್ತಗಾಯವಾಗಿದ್ದು, ಗಾಯಾಳು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
 
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಸಿಸ್ಟರ್ ಕಾರ್ಮಿನ್ ರವರ ಬಾಬ್ತು  ಸೈಂಟ್ ಜೋಸೆಫ್ ಪ್ರಶಾಂತ್ ನಿವಾಸ್ ಆಶ್ರಮದ ಮರಿಯಾ ನಿಲಯ ಎಂಬ ಹೆಸರಿನ ಮಾನಸಿಕ ಡಿಪಾರ್ಟ್ ಮೆಂಟ್ ನಲ್ಲಿ ಮಾನಸಿಕ ಅಸ್ವಸ್ಥರಾಗಿದ್ದ ಮಂಗಳೂರು ವಾಮಂಜೂರಿನ ವಾಸಿಯಾದ ಜ್ಯೋತಿ ಕುವೆಲ್ಲೊ ಪ್ರಾಯ 31 ವರ್ಷ ಎಂಬವರು ಸುಮಾರು 9 ತಿಂಗಳಿನಿಂದ ಆಶ್ರಮದಲ್ಲಿ ವಾಸವಾಗಿದ್ದುಕೊಂಡು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದವರು, ದಿನಾಂಕ 23-02-2015 ರಂದು ಸಂಜೆ 3-30 ಗಂಟೆಗೆ ಆಶ್ರಮದಲ್ಲಿ ಯಾರಿಗೂ ಹೇಳದೇ ಅಲ್ಲಿಂದ ಹೊರಟು ಹೋಗಿದ್ದು, ಈ ಬಗ್ಗೆ ಆಕೆಯನ್ನು ಆಶ್ರಮದ ಒಳಗಡೆ ಮತ್ತು ಕ್ಯಾಂಪಸ್ ನಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದು, ಹಾಗೂ ಆಕೆಯ ಮನೆಯಲ್ಲಿ ವಿಚಾರಿಸಿದ್ದಲ್ಲಿ ಅಲ್ಲಿಗೂ ಹೋಗದೇ ಇದ್ದು ಕಾಣೆಯಾಗಿರುವುದಾಗಿದೆ.
 
8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-02-2015ರಂದು ಪಿರ್ಯಾಧಿದಾರರಾದ ಶ್ರೀ ವಿಶ್ವನಾಥ ಬಂಗೇರ ಎಂಬವರು ರತ್ನ ವರ್ಮ ಜೈನ್ ಎಂಬವರ ಬಾಬ್ತು ಆಟೋ ರಿಕ್ಷಾ ನಂಬ್ರ ಕೆಎ-19-ಬಿ-2494ನೇದರಲ್ಲಿ ಕಾರ್ನಾಡು ಭಾರತ್ ಬೀಡಿ ಕಂಪೆನಿಗೆ ಬೀಡಿ ತೆಗೆದುಕೊಂಡು ಪಡುಪಣಂಬೂರುನಿಂದ ಕಾರ್ನಾಡು ಕಡೆಗೆ ಹೋಗುತ್ತಾ ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ರಾ.ಹೆ-66ರಲ್ಲಿ ಕಾರ್ನಾಡು ಬೈಪಾಸಿಗೆ ತಿರುಗುವರೇ ರಿಕ್ಷಾವನ್ನು ಅದರ ಚಾಲಕ ಸಿಗ್ನಲ್ ಕೊಟ್ಟು ತಿರುಗಿಸುತ್ತಿದ್ದ ಸಂದರ್ಭ ಸುರತ್ಕಲ್ ಕಡೆಯಿಂದ  ಕಾರು ನಂಬ್ರ ಕೆಎ-20-ಪಿ-8411ನೇಯದನ್ನು ಅದರ ಚಾಲಕ ತಹಮೀನ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಹಿಂದಿನಿಂದ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ರಿಕ್ಷಾ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದು, ರಿಕ್ಷಾ ಜಖಂಗೊಂಡು ಪಿರ್ಯಾಧಿದಾರರ ತಲೆಗೆ, ಕೈ ಕಾಲಿಗೆ ಮತ್ತು ರಿಕ್ಷಾ ಚಾಲಕರಿಗೆ ತಲೆಗೆ, ಕಾಲಿಗೆ ರಕ್ತ ಗಾಯವಾಗಿದ್ದು, ಈ ಬಗ್ಗೆ ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
 
9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-02-2015 ರಂದು ಸಂಜೆ 06-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕೃಷ್ಣಪ್ಪ ಎಂಬವರು ತಾನು ಟ್ಯಾಂಕರ್ ಚಾಲಕನಾಗಿದ್ದು ತನ್ನ ಟ್ಯಾಂಕರನ್ನು ಐ ಓ ಸಿ ಯಲ್ಲಿ ಸರದಿ ಸಾಲಿನಲ್ಲಿ ನಿಲ್ಲಲು ಹೋಗುತ್ತಿರುವಾಗ, ಪಣಂಬೂರು-ತಣ್ಣೀರುಬಾವಿ ಕಡೆಗೆ ಬರುತ್ತಾ ಕೆ ಐ ಓ ಸಿ ಎಲ್ ದಾಟಿ  ತಣ್ಣೀರುಬಾವಿ ರಸ್ತೆಗೆ ಬರುತ್ತಿದ್ದಂತೆ ಎದುರಿನಿಂದ ಅಂದರೆ ತಣ್ಣೀರುಬಾವಿ ಕಡೆಯಿಂದ ಕೆಎ- 20 ಈಡಿ- 8306 ನೇ ಬೈಕ್ ನ್ನು ಅದರ ಸವಾರ ಪ್ರತೀಕ ನಾಯ್ಕ್ ಎಂಬವರು ಸಹಸವಾರ ವೈಭವ ಸಾಯಿನಾಥ ಶೆಟ್ಟಿ ಎಂಬವರೊಂದಿಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬೈಕ್ ಸವಾರ ಪ್ರತೀಕ ನಾಯ್ಕ್ ತನ್ನ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಕಾಂಕ್ರೀಟ್ ನ ಬದಿಗೆ ತಾಗಿ ಸಹಸವಾರ ವೈಭವ್ ಸಾಯಿನಾಥ ಶೆಟ್ಟಿಯವರು ಗಂಭೀರವಾಗಿ ಗಾಯಗೊಂಡಿದ್ದು, ಆಪಾದಿತ ಬೈಕ್ ಸವಾರ ಪ್ರತೀಕ ನಾಯ್ಕ್ ರವರು ಕೂಡ ಗಂಭೀರ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿ ಇಲ್ಲದವರನ್ನು ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಎ ಜೆ ಆಸ್ಪತ್ರೆಗೆ ಕೊಂಡು ಹೋಗಿರುತ್ತಾರೆ. ನಂತರ ಪಿರ್ಯಾದಿದಾರರು ಕಿರಣ್ ಎಂಬವರೊಂದಿಗೆ ಎ ಜೆ ಆಸ್ಪತ್ರೆಗೆ ಹೋಗಿ ನೋಡಿದಾಗ ಸಹಸವಾರರಾದ ವೈಭವ್ ಸಾಯಿನಾಥ ಶೆಟ್ಟಿಯವರು ಮೃತಪಟ್ಟಿದ್ದು, ಪ್ರತೀಕ್ ಎಂಬವರು ಮಾತನಾಡಲಾಗದ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡಿರುತ್ತಾರೆ.
 
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 22-2-2015 ರಂದು ಬೆಳಿಗ್ಗೆ 9-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ತಲಪಾಡಿ ಗ್ರಾಮದ ನಾರ್ಲ ಪಡಿಲ್ ಎಂಬಲ್ಲಿ ಫಿರ್ಯಾದಿದಾರರಾದ ಶ್ರೀಮತಿ ಧನವಂತಿ ರವರು ವಾಸವಾಗಿರುವ ತನ್ನ ಮನೆಯಲ್ಲಿರುವಾಗ್ಗೆ ಆರೋಪಿಗಳಾದ  ಹಿತೇಶ್, ನಿತಿನ್‌, ಪ್ರದೀಪ್ಶೆಟ್ಟಿ, ಸಚ್ಚಿದಾನಂದ, ಶಿವಪ್ರಸಾದ್, ವಸಂತಿ, ಸುಚಿತ್ರ, ಲಲಿತ, ಶೈಲೇಶ್, ತುಳಸಿಮತ್ತು ಸ್ಟೆಫಿನಾ ಮತ್ತಿತರರು ಅಕ್ರಮ ಕೂಟ ಸೇರಿಕೊಂಡು ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು "ಫಂಡಿನ ಹಣದ ವ್ಯವಸ್ಥೆ ಮಾಡು, ಇಲ್ಲವಾದಲ್ಲಿ ನಿನ್ನನ್ನು ಕೊಂದು ಹಾಕುತ್ತೇವೆ" ಎಂದು ಜೀವ ಬೆದರಿಕೆ ಒಡ್ಡಿದರು. ಆಗ ಫಿರ್ಯಾದಿದಾರರು ಅವರುಗಳಲ್ಲಿ ತನ್ನಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ, ತಾನು ತುಂಬಾ ಬಡವಳು ಎಂದು ಅವರುಗಳಲ್ಲಿ ವಿನಂತಿಸಿಕೊಂಡರೂ ಅವರುಗಳು ಕೇಳದೆ ತುಳಸಿ, ವಸಂತಿ, ನಿತಿನ್‌, ಹಿತೇಶ್‌, ಪ್ರದೀಪ್ಶೆಟ್ಟಿ, ಶೈಲೇಶ್ ರವರು ಕೈಗಳಿಂದ ಫಿರ್ಯಾದಿದಾರರಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ಆಗ ಫಿರ್ಯಾದಿದಾರರು  ನೋವಿನಿಂದ ಜೋರಾಗಿ ಬೊಬ್ಬೆ ಹಾಕಿದಾಗ ಅವರ  ನೆರೆಕೆರೆಯ ವಾಸಿಗಳಾದ ತಲಪಾಡಿ ಪಂಚಾಯತ್ ಸದಸ್ಯೆ ಭಾಗ್ಯಲಕ್ಷ್ಮೀ ರೈ ಮತ್ತು ಅವರ ತಮ್ಮ ಭರತ್ರಾಜ್ ಶೆಟ್ಟಿ, ರವರುಗಳು ಬಂದು ಗಲಾಟೆ ಬಿಡಿಸಿದಾಗ ಆರೋಪಿಗಳು ಫಿರ್ಯಾದಿದಾರರನ್ನು ಉದ್ದೇಶಿಸಿ ಮುಂದಕ್ಕೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಆರೋಪಿಗಳಿಂದ ಮುಂದೆ ಕೂಡಾ ತೊಂದರೆ ಉಂಟಾಗುವ ಸಾಧ್ಯತೆ ಇರುವುದಾಗ ತಡವಾಗಿ ದಿನಾಂಕ 23-2-2015 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
 
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23.02.2015 ರಂದು ರಾತ್ರಿ ಸುಮಾರು 11.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ವಿನ್ಸೆಂಟ್ಪಿರೇರಾ ರವರು ಮಂಗಳೂರಿನ ಪಂಪ್ವೆಲ್ಸರ್ಕಲ್ಬಳಿ ಇರುವ ಆಮ್ಲೇಟ್ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಂತೆ ಆರೋಪಿ ಕಾವೂರಿನ ಮೋಹನ ಎಂಬವರು ಅಲ್ಲಿಗೆ ಬಂದು ಫಿರ್ಯದಿದಾರರನ್ನು ಉದ್ದೇಶಿಸಿ ದಿನಾಂಕ:22.02.2015 ರಂದು ರಾತ್ರಿ ಪಂಪ್ವೆಲ್ಸರ್ಕಲ್ಬಳಿ ಇರುವ ಆಮ್ಲೆಟ್ಅಂಗಡಿಯ ಒಳಗಿದ್ದ ಪಾತ್ರೆಗಳನ್ನು ಕೆಳಗೆ ಹಾಕಿರುವುದಾಗಿ ಫಿರ್ಯಾದಿದಾರರಿಗೆ ಆರೋಪಿಸಿದಾಗ ಫಿರ್ಯಾದಿದಾರರು ನಾನು ಪಾತ್ರೆಗಳನ್ನು ಕೆಳಗಡೆ ಹಾಕಿಲ್ಲಾ ಎಂಬುದಾಗಿ ತಿಳಿಸಿ ಸ್ವಲ್ಪ ಮುಂದೆ ಇರುವ ಆಮ್ಲೆಟ್ಅಂಗಡಿಯ ಬಳಿ ಹೋಗುತ್ತಿದ್ದಂತೆ ಆರೋಪಿಯು ಫಿಯಾದಿದಾರರನ್ನು ಉದ್ದೇಶಿಸಿ "ದಿನಾಂಕ: 22.02.2015 ರ ರಾತ್ರಿ ಅಮ್ಲೆಟ್ಅಂಗಡಿಯೊಂದರ  ಪಾತ್ರೆಗಳನ್ನು ನೀನೇ ಹೊರಗಡೆ ಹಾಕಿರುವುದಾಗಿ" ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಂಗ್ಪ್ಲೇಯರ್ನಲ್ಲಿ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ಹಲವು ಬಾರಿ ಹೊಡೆದು ರಕ್ತ ಬರುವ ತೀವ್ರ ಸ್ವರೂಪದ ಗಾಯಗೊಳಿಸಿರುವುದಲ್ಲದೆ ದೇಹದ ಅಲ್ಲಲ್ಲಿ ತರಚಿದ ಮತ್ತು ಗೀರಿದ ರಕ್ತ ಗಾಯ ಉಂಟುಮಾಡಿರುವುದಾಗಿದೆ.
 

No comments:

Post a Comment