Monday, February 2, 2015

Daily Crime Reports : 02-02-2015

ದೈನಂದಿನ ಅಪರಾದ ವರದಿ.
ದಿನಾಂಕ 02.02.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
1
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
2





























 
1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಮಿತ್ ರೈ ರವರು ತನಗೆ ಪರಿಚಯದ ಸಾಗರ್ ಎಂಬವರ ತಾಯಿ ಪುಷ್ಪಲತಾ ಡಿ ಅಮೀನ್ ಎಂಬವರ ಹೆಸರಿನಲ್ಲಿರುವ ಕೆ ಎ 19 ಇ ಕೆ 9120 ನಂಬ್ರದ ಮೋಟಾರ್ ಸೈಕಲ್ ನ್ನು ಪಡೆದು ತನ್ನ ಸ್ನೇಹಿತ ದಿಕ್ಷೀತ್ ರವರೊಂದಿಗೆ ಐ ಒ ಸಿ ಹಿಂದೆ ತಣ್ಣೀರು ಬಾವಿ ಬೀಚ್ ಬಳಿ 13.30 ಗಂಟೆಗೆ ಬಂದು ಮೋಟಾರ್ ಸೈಕಲ್ ನ್ನು ಪಾರ್ಕ್ ಮಾಡಿ ತನ್ನ ಸ್ನೇಹಿತನೊಂದಿಗೆ ಬೀಚ್ ಕಡೆಗೆ ಹೋಗಿ ವಾಪಾಸ್ 13.40 ಗಂಟೆಗೆ ಮೋಟಾರ್ ಸೈಕಲ್ ಪಾರ್ಕ್ ಮಾಡಿದ ಸ್ಥಳದಲ್ಲಿ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರದೆ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ, ಈ ಮೋಟಾರ್ ಸೈಕಲ್ ನ ಅಂದಾಜು ಬೆಲೆ 1,40,000/-ರೂ ಆಗಿರಬಹುದಾಗಿಯೂ, ಪಿರ್ಯಾದಿದಾರರು ತನ್ನ ಸ್ನೇಹಿತರನ್ನು ವಿಚಾರಿಸಿ, ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಈವರೆಗೆ ಪತ್ತೆಯಾಗಿರುವುದಿಲ್ಲ.

2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರಕಾಶ್ ಪೂಜಾರಿ ರವರ ತಮ್ಮ ಹರೀಶನು ಕದ್ರಿ ಹಿಲ್ಸ್ ವೃಂದಾವನ ಹೋಟೇಲ್ ನಲ್ಲಿ ಸಪ್ಲರ್ ಆಗಿ ಕೆಲಸ ಮಾಡಿಕೊಂಡಿದ್ದು, ಮಂಗಳೂರು ನಗರದ ವ್ಯಾಸನಗರದಲ್ಲಿ ವಾಸ ಮಾಡಿಕೊಂಡಿದ್ದು ದಿನಾಂಕ: 23-01-2015 ರಂದು ತನ್ನ ರೂಮ್ ನಿಂದ ತನ್ನ ಸ್ವಂತ ಮನೆ ಸೂಡಾ ಗ್ರಾಮಕ್ಕೆ ಹೋಗುತ್ತೇನೆಂದು ತನ್ನ ಹೋಟೆಲಿನ ಮಾಲಿಕ ಹಾಗೂ ಇತರೆ ಸಿಬ್ಬಂದಿಗಳಲ್ಲಿ ಹೇಳಿ ಹೋದವನು ಈತನಕ ಮನೆಗೂ ಬಾರದೇ, ಸಂಬಂದಿಕರ ಮನೆಗೂ ಹೋಗದೇ, ದೂರವಾಣಿ ಸಂಪರ್ಕಕ್ಕೆ ಸಿಗದೇ ಕಾಣೆಯಾಗಿರುತ್ತಾನೆ, ಸದ್ರಿ ಈ ತನಕ ಹರೀಶನನ್ನು ಪಿರ್ಯಾದಿದಾರರು ಹುಡುಕಾಡಿದಲ್ಲಿ ಸಿಗದೇ ಇದ್ದುದರಿಂದ ದಿನಾಂಕ 01-02-2015 ರಂದು ಠಾಣೆಗೆ ಬಂದು ದೂರನ್ನು ನೀಡಿರುವುದಾಗಿದೆ.

3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಶೇಖಬ್ಬ ರವರು  ಕಾರ್ಯದರ್ಶಿಯಾಗಿ ಕೆಲಸ ಮಾಡುವ ಮೂಡುಶೆಡ್ಡೆಯ ಬದ್ರಿಯಾ ಮಸೀದಿಗೆ ಎಂದಿನಂತೆ ಬಾಂಗ್ ಕೊಡಲು ಮಸೀದಿಯ ಗುರುಗಳಾದ ಉಮರ್ ಮುಸ್ಲಿಯಾರ್ ರವರೊಂದಿಗೆ ಬೆಳಿಗ್ಗೆ 5-30 ಗಂಟೆಗೆ ಮಸೀದಿಗೆ ಹೋಗಿ ಮಸೀದಿಯ ಮುಖ್ಯಧ್ವಾರದ ಒಳಗೆ ಹೋದಂತೆ ಒಂದು ಹಿಡಿ ಗಾತ್ರದ ಕಲ್ಲು ಕಂಡು ಬಂದಿದ್ದು, ಸುತ್ತ ಮುತ್ತ ನೋಡಿದಾಗ ಮಸೀದಿಯ ಎಡಭಾಗದಲ್ಲಿರುವ ಸಣ್ಣ ಕಿಟಿಕಿಯ ಸಣ್ಣ ಗಾಜೊಂದು ಒಡೆದು ಕಲ್ಲು  ಒಳಗೆ ಬಂದಿರುವುದು ಕಂಡು ಬಂದಿದ್ದು, ಈ ಕೃತ್ಯವು ದಿನಾಂಕ:31-01-2015 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 01-02-2015 ರಂದು ಬೆಳಗ್ಗೆ 05-30 ಗಂಟೆಯೊಳಗೆ ಯಾರೋ ಕಿಡಿಗೇಡಿಗಳು ಕನ್ನಡಿಗೆ ಕಲ್ಲು ಹೊಡೆದು ರೂ.500/- ಗಳ ನಷ್ಟ ಉಂಟು ಮಾಡಿರುತ್ತಾರೆ.

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 30-01-2015 ರಂದು ಸಂಜೆ ಸುಮಾರು 4.30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಗಣೇಶ್ ನಾಯಕ್ಎಂಬವರು ತನ್ನ ಅಣ್ಣ ಪ್ರವೀಣ್ ಎಂಬವರ ಜೊತೆಯಲ್ಲಿ ಬೈಕ್ನಂಬ್ರ ಕೆಎ 19 ಇಜೆ 3638 ನೇಯದರಲ್ಲಿ ಸಹಸವಾರನಾಗಿ ಮೂಡಬಿದ್ರೆ ಕಡೆಯಿಂದ ಒಂಟಿಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಮಾರ್ಪಾಡಿ ಗ್ರಾಮದ ನಾಗರಕಟ್ಟೆ ಎಂಬಲ್ಲಿಗೆ ತಲುಪುವಾಗ್ಯೆ ತನ್ನ ಮುಂದುಗಡೆಯಿಂದ ಅಂದರೆ ಒಂಟಿಕಟ್ಟೆ ಕಡೆಯಿಂದ ಅಪಾದಿತ ಕಿಶೋರ್ ಎಂಬವರು ತನ್ನ ಬಾಬ್ತು ಬೈಕ್ನಂಬ್ರ ಕೆಎ 19 ಇಜೆ 5048 ನೇಯದ್ದನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ ಪರಿಣಾಮ ಪಿರ್ಯಾದಿದಾರರ ಬಲ ಕಣ್ಣಿನ ಬಳಿ ರಕ್ತಗಾಯ ಹಾಗೂ ದೇಹಕ್ಕೆ ಗುದ್ದಿದ ನಮೂನೆಯ ಗಾಯವಾಗಿದ್ದು ಪಿರ್ಯಾದಿ ಅಣ್ಣ ಬೈಕ್ಸವಾರ ಪ್ರವೀಣ್ ಎಂಬವರಿಗೆ ಗುದ್ದಿದ ನಮೂನೆಯ ನೋವು ಆಗಿದ್ದರಿಂದ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ.

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-02-2015 ರಂದು  ಮಂಗಳೂರು ನಗರದ ಮೋತಿಮಾಲ್ ಹೋಟೆಲ್ ನ ಬಾಬ್ತು ಹಾಲ್ ನಲ್ಲಿ ಪಿರ್ಯಾದುದಾರರಾದ ಶ್ರೀ ನಾರಾಯಣ ಶೆಟ್ಟಿ ರವರ ಮಗಳು ನವ್ಯ ಎಂಬಾಕೆಯ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದು ಸದ್ರಿ ಕಾರ್ಯಕ್ರಮದ ಬಗ್ಗೆ  ಪಂಜಾಬ್ ರಾಜ್ಯದ ಶುಭಂ ಕುರಾನಾ ಎಂಬ ವರನ ಕಡೆಯವರಿಗೆ ಪಿರ್ಯಾದಿದಾರರು ಶುಭಂ ಹೆಸರಿನಲ್ಲಿ ಮೋತಿಮಾಲ್ ಹೋಟೆಲ್ 302ರಿಂದ 305ರವರೆಗಿನ ರೂಮ್ ಗಳನ್ನು ಬುಕ್ಕ್ ಮಾಡಿದ್ದು ಸದ್ರಿ ರೂಮ್ ಗಳ ಪೈಕಿ 304ನೇ ರೂಮ್ ನಲ್ಲಿ ಪಿರ್ಯಾದಿದಾರ ಮಗಳು ಕುಮಾರಿ ನವ್ಯ  ಮತ್ತು ಕುಮಾರಿ ದ್ರವ್ಯ ಇವರುಗಳು ಹೋಗಿ  ನವ್ಯ ಧರಿಸಿದ್ದ ಸುಮಾರು ರೂಪಾಯಿ 5,06,000 ಮೌಲ್ಯದ ವಿವಿಧ ನಮೂನೆಯ ಚಿನ್ನಾಭರಣಗಳನ್ನು ತೆಗೆದು ಒಂದು ಜುವೆಲ್ಲ್ ಬಾಕ್ಸ್ ನಲ್ಲಿ ಹಾಕಿ ರೂಮ್ ನಲ್ಲಿ ಇದ್ದ ಕ್ಯಾರಿಯರ್ ಬ್ಯಾಗಿನೊಳಗಡೆ ಇಟ್ಟು ಭಧ್ರಪಡಿಸಿ 12-30 ಗಂಟೆಗೆ ರೂಮ್ ನ  ಬಾಗಿಲಿಗೆ ಬೀಗ ಹಾಕಿ ವಾಪಾಸು ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿದ ಬಳಿಕ ವಾಪಾಸು ರೂಮ್ ಗೆ ಬಂದು 15-30 ಗಂಟೆಗೆ ತಮ್ಮ ಕ್ಯಾರಿಯರ್ ಬ್ಯಾಗ್ ನೊಂದಿಗೆ ಹೊಟೇಲ್ ರೂಮ್ ನಿಂದ ಹೊರಟು ಮನೆಗೆ ಹೋಗಿ 16-00 ಗಂಟೆಗೆ ಮನೆಯಲ್ಲಿ ಕ್ಯಾರಿಯರ್ ಬ್ಯಾಗ್ ನ್ನು ತೆರೆದು ನೋಡಿದಾಗ ಬ್ಯಾಗ್ ನಲ್ಲಿ ಇಟ್ಟಿದ್ದ ಚಿನ್ನಾಭರಣಗಳಿರುವ ಜುವೆಲ್ಲ್ ಬಾಕ್ಸ್ ಇಲ್ಲದೇ ಇದ್ದು ಅದನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ.

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-01-2015 ರಂದು ಪಿರ್ಯಾದಿದಾರರಾದ ಶ್ರೀ ರಾಜೇಶ್ ರವರು ತೊಕ್ಕೊಟ್ಟು ಜಂಕ್ಷನ್ನಲ್ಲಿ ಬಸ್ಗಾಗಿ ಕಾಯುತ್ತಿದ್ದ ವೇಳೆ ರಾತ್ರಿ ಸಮಯ ಸುಮಾರು 10-15 ಗಂಟೆಗೆ ಮಂಗಳೂರು ಕಡೆಯಿಂದ ಕೊಣಾಜೆ ಕಡೆಗೆ ಕೆ.ಎಸ್.ಆರ್.ಟಿ.ಸಿ. ಬಸ್ನಂಬ್ರ ಕೆಎ-40-ಎಫ್-908 ನೇದರಲ್ಲಿ  ಫಿರ್ಯಾದಿದಾರರು ಹಾಗೂ ಇತರರು ಬಸ್ಸಿಗೆ ಹತ್ತುತ್ತಿದ್ದಂತೆ ಬಸ್ನ್ನು ಅದರ ಚಾಲಕನು ಒಮ್ಮೆಲೇ ದುಡುಕು ಮತ್ತು ನಿರ್ಲಕ್ಷತೆಯಿಂದ ಮುಂದಕ್ಕೆ ಚಲಾಯಿಸಿದ್ದರಿಂದ ಫಿರ್ಯಾದಿದಾರರು ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು, ಬಸ್ಸಿನ ಹಿಂಭಾಗದ ಎಡ ಬದಿ ಚಕ್ರವು ಫಿರ್ಯಾದಿದಾರರ ಎಡಕಾಲಿನ ಮೇಲೆ ಹಾದು ಹೋಗಿರುವುದರಿಂದ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಆಗ ಅಲ್ಲಿದ್ದ ಜನರು ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಕೊಂಡಿರುತ್ತಾರೆ.

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-02-2015 ರಂದು 17-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಪೆರ್ಮನ್ನೂರು ಗ್ರಾಮದ ಕೆರೆಬೈಲ್‌  ಗುಡ್ಡೆ ಎಂಬಲ್ಲಿರುವ ಪಿರ್ಯಾದುದಾರರಾದ ಶ್ರೀಮತಿ ಜುಬೈದಾ ರವರ ಬಾಬ್ತು ಮನೆಗೆ ಆರೋಪಿತ ಸಂತೋಷ್ಎಂಬಾತನು ಬಂದು, ಪಿರ್ಯಾದುದಾರರನ್ನು ಉದ್ದೇಶಿಸಿ, "ನೀನು ಪೊಲೀಸರಿಗೆ ಕಂಪ್ಲೆಂಟ್ಮಾಡುತ್ತಿಯಾ" ಎಂದು ಅವಾಚ್ಯ ಶಬ್ದಗಳಿಂದ ಬೈದಾಗ, ಪಿರ್ಯಾದುದಾರರು ಪೊಲೀಸರಿಗೆ ದೂರು ನೀಡುವರೇ ತೊಕ್ಕೊಟ್ಟು ರಿಕ್ಷಾ ಪಾರ್ಕಿಗೆ ಬಂದಾಗ ಅಲ್ಲಿಗೂ ಬಂದ ಆರೋಪಿತ ಸಂತೋಷ್‌, ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅಸಭ್ಯವಾಗಿ ವರ್ತಿಸಿರುತ್ತಾನೆ.

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31.01.2015 ರಂದು ಸಮಯ ಸುಮಾರು ಸಂಜೆ 07.00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ನವಾಜ್ ರವರು ತನ್ನ ತಮ್ಮನ ಬಾಬ್ತು KA.19.EC.5492 ರಲ್ಲಿ ಸವಾರನಾಗಿದ್ದುಕೊಂಡು ಬೈಕನ್ನು ನೀರುಮಾರ್ಗದಿಂದ ನಂತೂರು ಕಡೆಗೆ ಬರುವರೆ ಹೊರಟು ಪಾಲ್ದಾನೆ ಕೆಂಬ್ರಿಡ್ಜ್ ಶಾಲೆ ಹತ್ತೀರ ತಲುಪುತ್ತಿದ್ದಂತೆ, ಪಿರ್ಯಾದುದಾರರ ಎದುರುಗಡೆಯಿಂದ ಅಂದರೆ ಬೈತುರ್ಲಿ ಕಡೆಯಿಂದ ನೀರುಮಾರ್ಗ ಕಡೆಗೆ KA.19.EH.4375 ನೇ ಮೋಟಾರು ಸೈಕಲನ್ನು ಅದರ ಸವಾರರು ಹಿಂಬದಿ ಸವಾರ ರೊಬ್ಬ್ರರನ್ನು ಕಳ್ಳಿರಿಸಿಕೊಂಡು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿ ಆಗುವ ರೀತಿಯಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಚಲಾಯಿಸುತ್ತದ್ದ ಬೈಕಿಗೆ ಡಿಕ್ಕಿ ಮಾಡಿದ ಪರಿನಾಮ ಪಿರ್ಯಾದುದಾರರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕಾಲಿನ ಕಿರು ಬೆರಳಿಗೆ ಗುದ್ದಿದ ನೋವು ಉಂಟಾಗಿರುವುದಲ್ಲದೆ, ಪಿರ್ಯಾದುದಾರರು ಚಲಾಯಿಸುತ್ತಿದ್ದ ಬೈಕ್ ಕೂಡಾ ಜಖಂ ಆಗಿರುತ್ತದೆ.

No comments:

Post a Comment