Tuesday, February 17, 2015

Daily Crime Reports : 17-02-2015

ದೈನಂದಿನ ಅಪರಾದ ವರದಿ.
ದಿನಾಂಕ 17.02.201513:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
0
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
4
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
3
ಇತರ ಪ್ರಕರಣ
:
2






















  








1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಉರ್ವಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರವೀಶ್ ನಾಯ್ಕ್ ರವರು ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂಧಿಯವರೊಂದಿಗೆ ರಾತ್ರಿ ಸುಮಾರು 10:30 ಗಂಟೆಗೆ ಲಾಲ್ಭಾಗ್ನಿಂದ ಬಿಜೈ ಕಡೆಗೆ ಇಲಾಖಾ ವಾಹನ ಕೆ. 19 ಜಿ 682 ರಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣದ ಹತ್ತಿರ ಜೀಪನ್ನು ನಿಲ್ಲಿಸಿದಾಗ ಭಾರತ್ಮಾಲ್ ಕಡೆಯಿಂದ ಧ್ವನಿವರ್ಧಕದ ಜೋರಾಗಿ ಶಬ್ದ ಕೇಳಿಸಿದ್ದು ಕೂಡಲೇ ಚಾಲಕನೊಂದಿಗೆ ಭಾರತ್ಮಾಲಿನ ಧ್ನನಿವರ್ಧಕ ಹಾಕಿದ ನಾಲ್ಕನೇ ಅಂತಸ್ತಿಗೆ ಹೋಗಿ ನೋಡಿದಾಗ ಸುಮಾರು 200 ಜನರು ಧ್ವನಿವರ್ಧಕಕ್ಕೆ ಹೆಜ್ಜೆ ಹಾಕುತ್ತಿದ್ದು, ಧ್ವನಿವರ್ಧಕದ ಶಬ್ದ ತುಂಬಾ ಜೋರಿನಿಂದ ಇದ್ದು, ಧ್ವನಿವರ್ಧಕದ ನಿರ್ವಹಕ ಮತ್ತು ಮಾಲೀನಕನ್ನು ವಿಚಾರಿಸಿದಾಗ ತಮ್ಮ ಹೆಸರು ಸೂರಜ್ ಡಿ'ಸಿಲ್ವಾ ಪ್ರಾಯ 33 ವರ್ಷ, ತಂದೆ: ರಾಬರ್ಟ್ ಡಿ'ಸಿಲ್ವಾ, ವಾಸ: ಗುಡ್ಡೆತೋಟ, ನಾಗೂರಿ, ಕಂಕನಾಡಿ, ಮಂಗಳೂರು ಹಾಗೂ ಧ್ವನಿವರ್ಧಕವನ್ನು ಅಳವಡಿಸುವರೇ ಭಾರತ್ಮಾಲ್ ಮ್ಯಾನೇಜರ್ ಮಲ್ಲಿಕಾರ್ಜುನ, ಹಾಗೂ ಎಂಪೋಸಿಸ್ನ ಸುನೀಲ್  ಡಿ'ಸೋಜಾ ರವರು ಹೇಳಿರುತ್ತಾರೆ. ಅಲ್ಲದೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಿದಾಗ ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಗಳನ್ನು ಕರೆಯಿಸಿ ಹಾಗೂ ಪಂಚರನ್ನು ಸಮಕ್ಷಮ ಪಂಚನಾಮೆ ಮೂಲಕ ಸೊತ್ತುಗಳನ್ನು ಸ್ವಾಧನ ಪಡಿಸಿಕೊಂಡಿರುವುದಾಗಿದೆ.

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-02-2015 ರಂದು ಫಿರ್ಯಾದಿದಾರರಾದ ಶ್ರೀ ಸಂಜೀವ ಚಂದ್ರಪ್ಪ ಶಿರಗಾವ್ ರವರು ಪ್ರೇಮನಂದ ಕೊಲ್ಲಾಪುರ ಎಂಬವರ ಬಾಬ್ತು ಲಾರೀ ನೋದಣಿ ಸಂಖ್ಯೆ MH-09-CU-2592 ನೇದರಲ್ಲಿ ತನ್ನ ಊರಾದ ಬಡಕುಂದ್ರಿಯಿಂದ ತನ್ನ ಊರಿನವನೇ ಆಗಿದ್ದ ಭೀಮಪ್ಪ ಭರಮಪ್ಪ ನಾಯಿಕ್ ಎಂಬವನನ್ನು ಲಾರೀ ಕ್ಲಿನರ್ ಆಗಿ ಕರೆದುಕೊಂಡು ಕೆರಳಕ್ಕೆ ಹೋಗಿ ಅಲ್ಲಿಂದ ದಿನಾಂಕ 12-02-2015 ರಂದು ಹೊರಟು ಮಂಗಳೂರಿನ ಬೈಕಂಪಾಡಿಗೆ ದಿನಾಂಕ 13-02-2015 ರಂದು ತಲುಪಿ ಆ ದಿನ ರಾತ್ರಿ  ಊಟ ಮುಗಿಸಿ 10-00 ಗಂಟೆಗೆ ಅದೇ ಲಾರೀಯಲ್ಲಿ ಮಲಗಿದ್ದು ಮರುದಿನ ಮುಂಜಾನೆ ಅಂದರೆ ದಿನಾಂಕ 14-02-2015 ರಂದು 06-00 ಗಂಟೆಗೆ ಫಿರ್ಯಾದಿದಾರರು ಎದ್ದು ನೋಡಿದಾಗ ಅವರೊಂದಿಗೆ ಮಲಗಿದ್ದ ಲಾರೀ ಕ್ಲಿನರ್ ಭೀಮಪ್ಪ ಭರಮಪ್ಪ ನಾಯಿಕ್ ರವರು ಕಾಣೆಯಾಗಿರುತ್ತಾರೆ.

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರವಿಕುಮಾರ್ ರವರು ದಿವ್ಯ ದೀಪ ಆರ್ಕೆಡ್ ಬೆಂದೂರ್ ವೆಲ್ ನಲ್ಲಿ ವಾಚ್ ಮೆನ್ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿಯವರ ಮಗ ಆಕಾಶ್ (17) ನಂತೂರು ಪದವು ಕಾಲೇಜಿನಲ್ಲಿ 1 ನೇ ವರ್ಷದ ಸಿ..ಬಿ.  ಕಲಿಯುತ್ತಿದ್ದು, ದಿನಾಂಕ 30-01-2015 ರಂದು ಮನೆಯಿಂದ ಬೆಳಿಗ್ಗೆ 8-30 ಗಂಟೆಗೆ ಶಾಲೆಗೆ ಹೋಗಿದ್ದು, ಸಂಜೆ 5-30 ಗಂಟೆಯ ಒಳಗೆ ಮನೆಗೆ ಬರುತ್ತಿದ್ದವನು, ಮನೆಗೆ ಬಾರದೇ ಇದ್ದು, ಪಿರ್ಯಾದಿಯವರು ನಂತೂರು ಪದವು ಕಾಲೇಜಿಗೆ ಹೋಗಿ ಕಾಲೇಜಿನ ಪ್ರಿನ್ಸಿಪಾಲರವರಲ್ಲಿ ತಿಳಿಸಿದಾಗ ಶಾಲೆಯ ಮೈದಾನದಲ್ಲಿ ಆಟ ಆಡುತ್ತಿರುವಲ್ಲಿ ನೋಡುವಂತೆ ತಿಳಿಸಿದ್ದುಪಿರ್ಯಾದಿಯವರು  ಶಾಲೆಯ ಆಟದ ಮೈದಾನಕ್ಕೆ ಹೋಗಿ ನೋಡಿದಾಗ ಮಗ ಅಲ್ಲಿಯೂ ಕಾಣದೇ ಇದ್ದು, ಕಾಣೆಯಾದ ಮಗನ ಪತ್ತೆಯ ಬಗ್ಗೆ ಮಗನ ಸ್ನೇಹಿತರಲ್ಲಿ, ಸಂಬಂಧಿಕರ ಮನೆಯಲ್ಲಿ, ಎಲ್ಲಾ ಕಡೆಗಳಲ್ಲಿ ಈ ತನಕ ಹುಡುಕಾಡಿದ್ದು ಪತ್ತೆಯಾಗದೆ ಇರುವುದಾಗಿದೆ.

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-02-2015 ರಂದು ಪಿರ್ಯಾದಿದಾರರಾದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಮೋದ್ ರವರು ಮಾನ್ಯ ಪೊಲೀಸ್ ಆಯುಕ್ತರ ಕಛೇರಿಗೆ ಹೋಗಿ ಮರಳಿ ಠಾಣೆಗೆ ಬರುತ್ತಿರುವಾಗ ಸಮಯ ಸಂಜೆ 17-30 ಗಂಟೆಗೆ ಮಂಗಳೂರು ನಗರದ ಕದ್ರಿ ಶಿವಭಾಗ್ ಪೆಟ್ರೋಲ್ ಬಂಕ್ ಬಳಿ ಇರುವ ಬಸ್ ನಿಲ್ದಾಣದ ಬಳಿ KA-19 AA 9900  ಮತ್ತು  KA-19 D 2138 ಸಿಟಿ ಬಸ್ಸುಗಳೆರಡರ ಚಾಲಕರುಗಳು ಬಸ್ಸುಗಳನ್ನು ನಿಲ್ಲಿಸಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟು ಮಾಡಿ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರೆದುರು ಸಾರ್ವಜನಿಕರ ನೆಮ್ಮದಿಗೆ ಉಪದ್ರವವಾಗುವ ರೀತಿಯಲ್ಲಿ ಹೊಡೆದಾಡುತ್ತಿದ್ದುದ್ದನ್ನು ಕಂಡು ಪಿರ್ಯಾದಿಯವರು ಇಬ್ಬರು ಚಾಲಕರನ್ನು ಸಮಯ ಸಂಜೆ 17-45 ಗಂಟೆಗೆ ವಶಕ್ಕೆ ಪಡೆದು ಹೆಸರು ವಿಳಾಸ ವಿಚಾರಿಸಲಾಗಿ ಒಬ್ಬನು ರಾಜೇಶ್ ಕಾವೂರು, ಮತ್ತೊಬ್ಬನು ಗಣೇಶ್ ಸುರತ್ಕಲ್ ಎಂದು ತಿಳಿಸಿದ್ದು, ಮುಂದಿನ ಕ್ರಮದ ಬಗ್ಗೆ ಮಂಗಳೂರು ಪೂರ್ವ ಠಾಣೆಗೆ ಕರೆದುಕೊಂಡು ಬಂದು ಸದ್ರಿ ಇಬ್ಬರು ಬಸ್ಸಿನ ಚಾಲಕರನ್ನು ಹಾಜರುಪಡಿಸಿರುವುದಾಗಿದೆ.

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:16-02-2015 ರಂದು ಬೆಳಿಗ್ಗೆ ಕೆಲಸದ ನಿಮಿತ್ತ ಪಿರ್ಯಾದಾರರ ತಂಗಿ ಮಲ್ಲಿಕಟ್ಟೆ ಎನ್.ಶಂಕರ್ ನ್ಯೂರೋ ಸೆಂಟರ್ ಗೆ ಹೋಗಿದ್ದು ನಂತರ  ಸಮಯ 12-45 ಗಂಟೆಗೆ ತನ್ನ ಫ್ರೇಂಡ್ ನ ಮದುವೆ ನಿಮಿತ್ತ ಮೀಲಾಗ್ರೀಸ್ ಚರ್ಚ್ ಹಾಲ್ ನಲ್ಲಿದೆ ಎಂದು ಡಾಕ್ಟರ್ ಅನುಮತಿ ಪಡೆದು ತಿಳಿಸಿ ಹೋದವಳು, ನಂತರ ಪಿರ್ಯಾದಿಯ ಮೊಬೈಲ್ ದೂರವಾಣಿಗೆ ತನ್ನ  ಮೊಬೈಲ್ ದೂರವಾಣಿ ನಂಬ್ರಿನಿಂದ "ನಾನು ಹುಡುಗನೊಬ್ಬನೊಂದಿಗೆ ಮದುವೆಯಾಗಿ ಅವನ ಊರಿಗೆ ಹೋಗುತ್ತೇನೆ ನನ್ನನ್ನು ಹುಡುಕಾಡಬೇಡಿ" ಎಂದು ಸಂದೇಶವನ್ನು ಮಾಡಿ ಹೊದವಳು ಈ ತನಕ ಸಂಬಂದಿಕರ ಮನೆಗೂ ಹೋಗದೇ, ಮನೆಗೂ ಬಾರದೇ, ಮೊಬೈಲ್ ಪೋನ್ ಸಂಪರ್ಕಕ್ಕೆ ಸೀಗದೇ ಕಾಣೆಯಾಗಿರುತ್ತಾಳೆ.

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15.02.2015 ರಂದು ಸಮಯ ಸುಮಾರು ರಾತ್ರಿ 8.15 ಗಂಟೆಗೆ ಮೋಟಾರ್ ಸೈಕಲ್ ನಂಬ್ರ KL13-W-6998 ನ್ನು ಅದರ ಸವಾರ ಸಿಟಿ ಆಸ್ಪತ್ರೆ ಕಡೆಯಿಂದ ಬಂಟ್ಸ್ ಹಾಸ್ಟೆಲ್  ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು, ಸಿ ವಿ ನಾಯಕ್ ಹಾಲ್ ಎದುರುಗಡೆ ರಸ್ತೆಯಲ್ಲಿ, ರಸ್ತೆ ದಾಟಲು ನಿಂತಿದ್ದ ಫಿರ್ಯಾದುದಾರರ ಗಂಡ ಪದ್ಮನಾಭ್ ಕಾಮತ್  ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರ ಗಂಡ ಪದ್ಮನಾಭ ಕಾಮತ್ ರವರು ಕಾಂಕ್ರಿಟು ರಸ್ತೆಗೆ ಬಿದ್ದು ಎಡಕಾಲು, ಎಡ ಕೈ ಗೆ ಮೂಳೆ ಮುರಿತದ ಗಾಯ ಹಾಗೂ ತಲೆಗೆ ಗಂಭಿರ ಸ್ವರೋಪದ ಗುದ್ದಿದ ರಕ್ತಗಾಯ, ಕಿವಿಯಲ್ಲಿ ರಕ್ತ ಬರುತ್ತಿದ್ದು ಯೆನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ, ಮತ್ತು ಮೋಟಾರ್ ಸೈಕಲ್ ಸವಾರನು ಬೈಕು ಸಮೇತ ರಸ್ತೆಗೆ ಬಿದ್ದು ,ಗಾಯಗೊಂಡು ಯೆನಪೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16.02.2015 ರಂದು ಬೆಳಿಗ್ಗೆ 09.55 ಗಂಟೆಗೆ ಬಸ್ಸು ನಂಬ್ರ KA20-C-7011 ನ್ನುಅದರ ಚಾಲಕ ಎ.ಜೆ ಆಸ್ಪತ್ರೆ ಕಡೆಯಿಂದ ಕೆಪಿಟಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕೆಪಿಟಿ ಸರ್ಕಲ್ ಬಳಿ ತಲುಪಿದಾಗ ಮುಂದಿನಿಂದ ಹೋಗುತ್ತಿದ್ದ ಪಿರ್ಯಾದುದಾರರಾದ ಶ್ರೀ ರವಿಶಂಕರ್ ರೈ ರವರ  ಕಾರು ನಂಬ್ರ KA21-N-717 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಅಪಘಾತದಿಂಧ ಜನರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ.

8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  16.02.2015 ರಂದು ಮದ್ಯಾಹ್ನ  ಸಮಯ ಸುಮಾರು 12:15 ರಿಂದ 14:40 ಗಂಟೆ ಮದ್ಯೆ  ಮಂಗಳೂರು  ತಾಲೂಕು ಮೂಡುಕೊಣಾಜೆ ಗ್ರಾಮದ ಶಾರಧ ಸಧನ  ಎಂಬ  ಪಿರ್ಯಾದಿದಾರರಾದ ಶ್ರೀ ಸೂರ್ಯಮಣಿ ರವರ  ಮನೆಯಲ್ಲಿ  ಪಿರ್ಯಾದಿದಾರರ  ಹೆಂಡತಿ  ಮತ್ತು  ತಾಯಿ ನೆರೆಮನೆಯಲ್ಲಿ ಸತ್ಯನಾರಯಣ ಪೂಜೆಗೆ ಹೋಗಿದ್ದ ವೇಳೆ ಯಾರೋ  ಕಳ್ಳರು  ಮನೆಯ  ಹಿಂದಿನ  ಬಾತ್ರೂಂನ  ಚಿಲ್ಕವನ್ನು  ಮೀಟಿ  ಒಳ  ಪ್ರವೇಶಿಸಿ  ಮನೆಯ  ಗೋಡ್ರೇಜ್ನಲ್ಲಿ  ಇದ್ದ ಪಿರ್ಯಾದಿಯ  ಹೆಂಡತಿಯ  1) ಮೂರು  ಪವಾನ್ನ ಸರ-1, 2) 2 ಪವಾನ್  ಚೈನ್‌-1, 3) ಹೂವಿನ ಆಕಾರದ ಕಿವಿಯ ಬೆಂಡೊಲೆ 1 ಜೊತೆ, 4)  ¾ ಪವಾನ್ನ ಉಂಗುರ -1, ಹಾಗೂ  ಪಿರ್ಯಾದಿಯ  ಅಜ್ಜಿಯ   3.5 ಪವಾನಿನ ನೆಕ್ಲೇಸ್‌ , ½ ಪವಾನಿನ ಕಿವಿಯ ಕಲ್ಲಿನ  ಬೆಂಡೊಲೆ, ಒಂದು ಪವಾನಿನ 2 ಉಂಗುರಹಾಗೂ  40,000/-  ನಗದನ್ನು  ಯಾರೋ  ಕಳ್ಳರು  ಕಳವು  ಮಾಡಿಕೊಂಡು  ಹೋಗಿರುತ್ತಾರೆ.

9.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ  ಎ ಬಿ ಶೆಟ್ಟಿ ವೃತ್ತ  ಎಂಬಲ್ಲಿ ದಿನಾಂಕ 16-02-2015 ರಂದು ಮದ್ಯಾಹ್ನ 1.05 ಗಂಟೆಗೆ  ಉಮರ್ ಪಾರೂಕ್ ಎಂಬುವರು ತನ್ನ ಬಾಬ್ತು  ಕೆಎ-19-ಡಬ್ಲ್ಯೂ-2202 ನಂಬ್ರದ ಮೋಟಾರು ಸೈಕಲಿನಲ್ಲಿ ಸ್ಟೇಟ್‌‌ ಬ್ಯಾಂಕ್ಕಡೆಯಿಂದ ಎ.ಬಿ. ಶೆಟ್ಟಿ ವೃತ್ತದ ಕಡೆಗೆ ಹೋಗುತ್ತಿದ್ಧಾಗ ಕೆಎ-19-ಬಿ-1830 ನಂಬ್ರದ  ಟ್ಯಾಂಕರ್ ಲಾರಿಯನ್ನು ಅದರ ಚಾಲಕನು  ಸ್ಟೇಟ್ ಬ್ಯಾಂಕ್ ಕಡೆಯಿಂದ ಎ ಬಿ ಶೆಟ್ಟಿ  ಸರ್ಕಲ್ ಕಡೆಗೆ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಉಮ್ಮರ್ಫಾರೂಕ್ಎಂಬವರು ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಉಮ್ಮರ್ಫಾರೂಕ್ರವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.

10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15-02-2015 ರಂದು ಫಿರ್ಯಾದಿದಾರರಾದ ಶ್ರೀ ಅಬ್ದುಲ್ ರಜಾಕ್ ರವರು ತನ್ನ  ಬಾವನಾದ ಸೈಯ್ಯದ್ ಮಹಮ್ಮದ್ ಎಂಬವರೊಂದಿಗೆ ಮನೆಯಿಂದ ಪೆರ್ಮುದೆ ಪೇಟೆಗೆ ಬಂದು ವಾಪಾಸು ಹೋಗಲುಮಂಗಳೂರು ತಾಲೂಕಿನ, ಪೆರ್ಮುದೆ ಗ್ರಾಮದ, ಪೆರ್ಮುದೆ ಬಾರಿನ  ಎದುರುಗಡೆ ರಸ್ತೆ ಬದಿಯಲ್ಲಿ  ಬಸ್ಸಿಗಾಗಿ ಕಾದು ನಿಂತಿದ್ದಾಗ ರಾತ್ರಿ ಸುಮಾರು 7-30 ಗಂಟೆಗೆ ಕಟೀಲು ಕಡೆಯಿಂದ ಕೆಎ 19 ಎಎ 0063 ನಂಬ್ರದ ಜೈಲೋ ಕಾರನ್ನು ಅದರ ಚಾಲಕ ಜಾಕ್ಷನ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂಧು ಫಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ  ಫಿರ್ಯಾದಿದಾರರು ರಸ್ತೆಗೆ ಬಿದ್ದು, ತಲೆಗೆ, ಎಡಭಾಗದ ಹಣೆಗೆ ಮತ್ತು ಕೈಕಾಲಿಗೆ ಗಾಯಗಳಾಗಿದ್ದು, ಚಿಕಿತ್ಸೆಯ ಬಗ್ಗೆ  ಮಂಗಳೂರು ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.

No comments:

Post a Comment