Monday, March 24, 2014

Ravi Poojary Associates Arrested

ಮಂಗಳೂರು ನಗರದ ಬಿಜೈಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿನ ಇಬ್ಬರು ಆರೋಪಿಗಳಾದ   ಭೂಗತ ಪಾತಕಿ ರವಿಪೂಜಾರಿಯ ಸಹಚರರ ಬಂಧನ.
 
 ದಿನಾಂಕ 10-03-2014 ರಂದು ಮಂಗಳೂರು ನಗರದ ಬಿಜೈಯಲ್ಲಿರುವ ಭಾರತಿ ಬಿಲ್ಡರ್ ರವರ ಕಛೇರಿಯಲ್ಲಿ ಶೂಟೌಟ್ ಆಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಮಾಡಲು ಮಂಗಳೂರು ನಗರದ ಪೊಲೀಸ್ ಕಮಿಷನರ್ರವರಾದ ಶ್ರೀ.ಆರ್.ಹಿತೇಂದ್ರವರು ಬೇರೆ ಬೇರೆ ತಂಡವನ್ನು ರಚಿಸಿದ್ದು, ಅದರಲ್ಲಿ ಒಂದು ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಿಕೊಟ್ಟಿರುತ್ತಾರೆ.  ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರದ ಸತಾರದ ಖರದ್  ಪೊಲೀಸ್ ಠಾಣೆಯ ಪೊಲೀಸರ ಸಹಕಾರದೊಂದಿಗೆ  ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆ ಸಮಯದಲ್ಲಿ  ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್ ಮತ್ತು ಒಂದು ಪಿಸ್ತೂಲು  ಹಾಗೂ 3 ರೌಂಡ್ಸಗಳನ್ನು ವಶಪಡಿಸಿಕೊಳ್ಳಲಾಗಿದೆ. ದಸ್ತಗಿರಿಯಾದ ಆರೋಪಿಗಳು  ಗಣೇಶ್  26 ವರ್ಷ ತಂದೆ: ಲಕ್ಷ್ಮಣ ಸಾಕೇತ್, ವಾಸ: ಸತಾರ, ಮಹಾರಾಷ್ಟ್ರ ಮತ್ತು ಇನ್ನೊಬ್ಬ  ಮಹಾರಾಷ್ಟ್ರದ ಮುಕೇಶ್  26 ವರ್ಷ, ತಂದೆ: ಶಿವಾಜಿ ಕಾಂಬ್ಳೆ, ವಾಸ: ಸರ್ವರೋದಯ ಕಾಲೋನಿ, ಸತಾರ, ಮಹಾರಾಷ್ಟ್ರ ಆಗಿರುತ್ತಾರೆ.

 ಅಲ್ಲದೇ ಮಂಗಳೂರು ನಗರದ ಬಿಲ್ಡರ್ನವರ ಮಾಹಿತಿಯನ್ನು ನೀಡುತ್ತಿದ್ದ ಹಾಗೂ ದರೋಡೆ ಮಾಡಲು ಸಂಚು ರೂಪಿಸಿ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿಪೂಜಾರಿ ಹಾಗೂ ಕಲಿಯೋಗಿಶನ ಸಹಚರನಾದ ಆರೋಪಿಯಾದ ಆನಂದ ಕುಮಾರ್ @ ಆಂಟೋ  35ವರ್ಷ, ತಂದೆ: ದಿವಂಗತ ಸ್ವಾಮಿ ಗೌಂಡರ್, ವಾಸ : ನಂ 94/14 ಲೋಹಿತ್ ಬಿಲ್ಡಿಂಗ್, ಹೊಂಗಸಂದ್ರ , ಬೇಗೂರು ರಸ್ತೆ ಬೆಂಗಳೂರು ಎಂಬಾತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಈತನು ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಶಬ್ನಮ್ ಡೆವಲಪ್ಪರ್ಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುತ್ತಾನೆ.

ಪೊಲೀಸ್ ಕಮಿಷನರ್ ಶ್ರೀ.ಆರ್.ಹಿತೇಂದ್ರ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ.ಡಾ:ಜಗದೀಶ್ ಮತ್ತು  ಅಪರಾಧ ವಿಭಾಗದ ಡಿ.ಸಿ.ಪಿಯವರಾದ ಶ್ರೀ. ವಿಷ್ಣುವರ್ಧನ.ಎನ್ರವರ ಮಾರ್ಗದರ್ಶನದಲ್ಲಿ  ಮಂಗಳೂರು ಕೇಂದ್ರ ಉಪ-ವಿಭಾಗದ ಎಸಿಪಿ ಶ್ರೀ.ಕೆ.ತಿಲಕ್ಚಂದ್ರ, ಸಿ.ಸಿ.ಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಉರ್ವ ಠಾಣೆಯ ಇನ್ಸ್ಪೆಕ್ಟರ್ ಆರ್.ಬಿ.ಮಾಲೇದೇವರ್, ಪಿಎಸ್ಐ ರವಿಶಂಕರ್, ಬರ್ಕೆ ಪಿಎಸ್ಐ  ಶರೀಪ್, ಸಿಸಿಬಿ ಘಟಕದ ಸಿಬ್ಬಂದಿಗಳಾದ ಶಶಿಧರ ಶೆಟ್ಟಿ, ಗಣೇಶ್.ಎಂ.ಪಿ, ಗಣೇಶ್ ಕಲ್ಲಡ್ಕ, ವೇಣುಗೋಪಾಲ ಅಮೈ, ಚಂದ್ರಶೇಖರ, ದಿನೇಶ್ ಬೇಕಲ್, ರಾಜೇಂದ್ರ ಪ್ರಸಾದ್, ಸುಧೀರ್, ಅಬ್ದುಲ್ ಜಬ್ಬಾರ್,  ಗಂಗಾಧರ, ಮಣಿ, ತೇಜ ಕುಮಾರ್ರವರುಗಳು ಭಾಗವಹಿಸಿದ್ದರು. 

No comments:

Post a Comment