Thursday, March 20, 2014

Daily Crime Report 19-03-2014

ದೈನಂದಿನ ಅಪರಾದ ವರದಿ.

ದಿನಾಂಕ 19.03.201417:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

3

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2014 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಕಿನಾನೆ ರವರು ತಾನು ವ್ಯಾಸಂಗ ಮಾಡುತ್ತಿರುವ ಮಂಗಳೂರು ನಗರದ ಶ್ರೀ ದೇವಿ ಕಾಲೇಜಿನಿಂದ ಬಳ್ಲಾಲ್ಬಾಗ್ಕಡೆಗೆ ಎಂ.ಜಿ ರಸ್ತೆಯ 3ನೇ ಅಡ್ಡ ರಸ್ತೆಯ ತೀರಾ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ  ಮದ್ಯಾಹ್ನ 12:00 ಗಂಟೆಗೆ ಸದ್ರಿ ಕಾಲೇಜಿನಲ್ಲಿ ಸೀನಿಯರ್ ಆಗಿರುವ ರೋನಕ್ಪಟೇಲ್ಎಂಬವರು ಅವರ ಬಾಬ್ತು ಮೋಟಾರು ಸೈಕಲ್ನಂಬ್ರ ಕೆ.-19-.-5841 ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯವರಿಗೆ ಡಿಕ್ಕಿ ಹೊಡೆದ  ಪರಿಣಾಮ ಅವರು ರಸ್ತೆಗೆ ಬಿದ್ದು ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ತೀವ್ರ ತರಹದ ಗಾಯಗೊಂಡವರು  ಚಿಕಿತ್ಸೆ ಬಗ್ಗೆ ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲುಗೊಂಡಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-3-2014 ರಂದು ಮದ್ಯಾಹ್ನ ಸುಮಾರು 12.25 ಗಂಟೆಗೆ ಜೀಪ್ ನಂಬ್ರ KA-19-P- 193 ನ್ನು ಅದರ ಚಾಲಕ ಮಹಾವೀರ್ ವೃತ್ತದ ಕಡೆಯಿಂದ ನಂತೂರು ಕಡೆಗೆ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ  ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತಾರೇತೋಟ ಗರೋಡಿ ಸ್ಟೀಲ್ಸ್ ಎದುರು ತಲುಪುವಾಗ   ರಸ್ತೆ ದಾಟುತ್ತಿದ್ದ ಆಭಿಲಾಶ್ ಸುವರ್ಣ ಎಂಬುವವರಿಗೆ ಡಿಕ್ಕಿ ಮಾಡಿದ ಪರಿಣಾಮ ಆಭಿಲಾಶ್ ಸುವರ್ಣ ರಸ್ತೆಗೆ ಬಿದ್ದು ಬಲಕಾಲಿಗೆ ಗಾಯಗೊಂಡು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

3.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.03.2014 ರಂದು ಬೆಳಿಗ್ಗೆ 08:30 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯೆ ಫಿರ್ಯಾದಿದಾರರಾದ ಶ್ರೀ ವಿಶ್ವನಾಥ ಬಂಗೇರಾ ರವರು ವಾಸವಿರುವ ಬಂಟ್ವಾಳ ತಾಲೂಕು ಫಜೀರು ಗ್ರಾಮದ ಕಂಬ್ಲಪದವು ಇನ್ಫೋಸಿಸ್ಹತ್ತಿರ ದನ್ವಿತ್ನಿಲಯ ಎಂಬಲ್ಲಿ ಫಿರ್ಯಾದಿದಾರರು ಹಾಗೂ ಅವರ ಪತ್ನಿ ಮನೆಯಲ್ಲಿ ಇರದ ಸಮಯದಲ್ಲಿ ಯಾರೋ ಕಳ್ಳರು ಯಾವುದೋ ಹರಿತ ಆಯುಧದಿಂದ ಮನೆಯ ಎದುರು ಬಾಗಿಲನ್ನು ಮೀಟಿ ಜಖಂಗೊಳಿಸಿ ಬಾಗಿಲು ತೆರೆದು ಒಳ ಪ್ರವೇಶಿಸಿ ಬೆಡ್ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಬೀಗ ಮುರಿದು ಕಪಾಟಿನ ಸೇಫ್ಲಾಕರಿನಲ್ಲಿದ್ದ ಸುಮಾರು 23,000/- ರೂ ಮೌಲ್ಯದ ಚಿನ್ನಾಭರಣ ಮತ್ತು ರೂ. 200/- ಚಿಲ್ಲರೆ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 

4.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  17-03-2014 ರಂದು ಸಂಜೆ ಸುಮಾರು 5-30 ಗಂಟೆಗೆ ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಮುಲ್ಕಿ ಬಸ್ನಿಲ್ದಾಣದ ಬಳಿ ಅಯ್ಯಂಗಾರ್ ಬೇಕರಿಯ ಎದುರುಗಡೆ ರಾಹೆ -66 ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ರೀ ದಿವಾಕರ ರವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಶ್ರೀನಿವಾಸ ಪೂಜಾರಿ ಎಂಬವರಿಗೆ ಉಡುಪಿ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ KL-65-C-3267 ನೇ ನಂಬ್ರದ ಲಾರಿ  ಡಿಕ್ಕಿಯಾದ ಪರಿಣಾಮ , ಶ್ರೀನಿವಾಸ ಪೂಜಾರಿ ರವರ ತಲೆಗೆ ತೀವ್ರ ಗಾಯ ಮತ್ತು ಮುಖಕ್ಕೆ ಹಲ್ಲಿಗೆ ಗುದ್ದಿದ ಹಾಗೂ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲಿಲ್ಲದೇ ಇದ್ದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ.

 

5.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಶ್ರೀಮತಿ ಮಾಲತಿ ರವರು ಸ್ವಂತ ಮನೆ ಹೊಂದುವ ಉದ್ದೇಶದಿಂದ 2012 ನೇ ವರ್ಷದಿಂದ ಮೂಡು ಕೋಣಾಜೆ ಗ್ರಾಮದ ಆಚಾರಿ ಬೆಟ್ಟು ಎಂಬಲ್ಲಿ ತನ್ನ ತಾಯಿ ಮನೆಯ ಬಳಿಯಿರುವ ಸರಕಾರಿ ಜಮೀನಿನಲ್ಲಿ 5 ಸೆಂಟ್ಸ್  ಸ್ಧಳವನ್ನು ಅಕ್ರಮಿಸಿ  ಮರದ  ಕಂಬ ಮತ್ತು ಸಿಮೆಂಟ್ ಶೀಟ್  ಮೂಲಕ ಶೆಟ್ ನಿರ್ಮಿಸಿ ಅದರಲ್ಲಿ ಗಂಡ ಮತ್ತು ಮಗುವಿನೊಂದಿಗೆ ವಾಸವಾಗಿದ್ದು  ಸದರಿ ಮನೆಗೆ ಶಿರ್ತಾಡಿ ಪಂಚಾಯತ್ ವತಿಯಿಂದ ಮನೆ ನಂಬ್ರ 6-66 ಪಡೆದು ಮನೆ ತೆರಿಗೆಯನ್ನು ಪಾವತಿಸಿದ್ದು,  ಒಂದು ತಿಂಗಳ ಹಿಂದೆ ಮೂಡು ಕೋಣಾಜೆ ಗ್ರಾಮ, ಗ್ರಾಮ ಲೆಕ್ಕಾಧಿಕಾರಿ ಆರೋಪಿ ಶ್ರೀಮತಿ ಉಷಾ ಮತ್ತು ಗ್ರಾಮ ಸಹಾಯಕ ಆನಂದ,  ರೆವಿನ್ಯೂ ಇನ್ಸ್ ಪೆಕ್ಟರ್  ಬಂದು ಸರಕಾರಿ ಜಾಗದಲ್ಲಿ  ಮನೆ ಕಟ್ಟಿರುವುದನ್ನು  ತೆರವು ಮಾಡಲು ಹೇಳಿದ್ದು, ಸಮಯ ಶಿರ್ತಾಡಿ ಪಂಚಾಯತ್ ನವರು ಮನೆ ನಂಬ್ರ ನೀಡಿ ತೆರಿಗೆ ಪಡೆದ ಬಗ್ಗೆ ಅವರಿಗೆ ತಿಳಿಸಿದ್ದರೂ  ಕೂಡಾ ದಿನ ದಿನಾಂಕ 18-03-2014 ರಂದು ಬೆಳಿಗ್ಗೆ 07-30 ಗಂಟೆಯ  ಸಮಯಕ್ಕೆ ತಹಶೀಲ್ದಾರರು ,ಮೂಡಬಿದ್ರೆ, ರೆವಿನ್ಯೂ ಇನ್ಸ್ ಪೆಕ್ಟರ್ ಮೂಡಬಿದ್ರೆ , ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ಉಷಾ , ಗ್ರಾಮ ಸಹಾಯಕ ಆನಂದ ,ಮತ್ತು ಇತರ ಸರಕಾರಿ ಅಧಿಕಾರಿಗಳು ಪಿರ್ಯಾದಿದಾರರ ಮನೆಯ ಬಳಿಗೆ ಬಂದು  ಮನೆ ತೆರವು ಮಾಡುವಂತೆ  ಸೂಚಿಸಿದಾಗ  ನಿರಾಕರಿಸಿದ ಪಿರ್ಯಾದಿದಾರರನ್ನು  ಗ್ರಾಮ ಲೆಕ್ಕಾಧಿಕಾರಿ ಶ್ರೀಮತಿ ಉಷಾ  ಇನ್ನಿತರ  ಆರೋಪಿಗಳ ಸಹಾಯದಿಂದ ಮನೆಯಿಂದ ಹೊರಗೆ ಎಳೆದು ಕೊಂಡು ಬಂದು ಪಿರ್ಯಾದಿದಾರರಿಗೆ ಹೊಟ್ಟೆಗೆ ತುಳಿದು ಹಲ್ಲೆ ಮಾಡಿ ಮನೆಯನ್ನು ನಾಶ ಮಾಡಿರುತ್ತಾರೆ.

 

6.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ತಾರಾ ರವರ ಗಂಡ ಗೋವರ್ಧನ ಯಾನೆ ಗೋಪಾಲ ಎಂಬವರು ಕೆಲಸ ಇಲ್ಲದೇ ಮನೆಯಲ್ಲಿದ್ದು ಕೆಲವೊಮ್ಮೆ ಕೊಟ್ಟಾರ ಚೌಕಿಯಲ್ಲಿ ಲಾರಿಯವರಿಗೆ ದಾರಿ ತೋರಿಸುವ ಕೆಲಸ ಮಾಡಿಕೊಂಡಿದ್ದು, ಅಮಲು ಪಧಾರ್ಥ ಸೇವಿಸುವ ಚಟ ಹೊಂದಿದ್ದು, ಹೀಗಿರುತ್ತಾ ದಿನಾಂಕ 16-03-2014 ಸಂಜೆ 05-00 ಗಂಟೆಗೆ ಮನೆಯಿಂದ ಹೊರಟು ಹೋದವರು ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.  

 

7.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ  ಡಾ. ಪ್ರದ್ನಾ ಡಿ. ಶೆಟ್ಟಿ ರವರು ಮಂಗಳೂರು ನಗರದ ಕುಂಟಿಕಾನ .ಜೆ.ಆಸ್ಪತ್ರೆ ಯಲ್ಲಿ MBBS ನ್ನು 2012 ನೇ ಇಸವಿಯಲ್ಲಿ ಕಲಿಯುತ್ತಿರುವ ಸಮಯ ಸ್ನೇಹಿತರ ಮುಖಾಂತರ ಸಂಗೀತ್ ಕುಮಾರ್ ಝಾ ಎಂಬವರ ಪರಿಚಯವಾಗಿ MANAGEMENT POST GRADUATE SEAT ಗೆ  ರೂಪಾಯಿ 30 ಲಕ್ಷ  ಆಗುತ್ತದೆ ಎಂದು  ತಿಳಿಸಿದಂತೆ ಬಗ್ಗೆ AGREEMENT ನ್ನು  ಸಂಗೀತ್ ಕುಮಾರ್ ಝಾ  ರವರ ಮನೆಯಾದ ಪ್ಲಾಟ್ ನಂಬ್ರ 204, ಹರಿ ಬಕ್ತಿ ಅಪಾರ್ಟ್ ಮೆಂಟ್ , ಪಿಂಟೋ ಲೇನ್ , ಕದ್ರಿ ಕಂಬಳ , ಬಿಜೈ ಮಂಗಳೂರು ಇಲ್ಲಿ ಮಾಡಿದ್ದು  ಅದರಂತೆ 2012 ನೇ ಸಪ್ಪೆಂಬರ್ ತಿಂಗಳಿನಲ್ಲಿ ತನ್ನ ತಂದೆಯ ICICI BANK MUBMAI BANK A/C NO 00401833249 ನೇದರಿಂದ  ಸಂಗೀತ್ ಕುಮಾರ್ ಝಾ ಆತನ  ICICI BANK A/C NO 61310101190 ನೇದಕ್ಕೆ ರೂಪಾಯಿ 30 ಲಕ್ಷ ವನ್ನು ವರ್ಗಾವಣೆ ಮಾಡಿದ್ದು  ಇದೇ ರೀತಿ ಪಿರ್ಯಾದುದಾರರ ಸ್ನೇಹಿತರಾದ ಡಾ.ಅಜರ್ ,  ಡಾ. ಶ್ರೀಮತಿ ನಜ್ರೀನ್ ಕೆ ಕಬೀರ್, ಡಾ. ಬ್ರಣೇಶ್ ಇವರು ಕೂಡಾ MANAGEMENT POST GRADUATE SEAT ಗೆ ಹಣವನ್ನು ನೀಡಿದ್ದು ನಂತರದ ಸಮಯದಲ್ಲಿ ಸಂಗೀತ್ ಕುಮಾರ್ ಝಾ ನೂ MANAGEMENT POST GRADUATE SEAT ನ್ನು ಕೊಡಿಸದೆ, ನೀಡಿದ ಹಣವನ್ನು ವಾಪಸ್ಸು ಹಿಂತಿರುಗಿಸದೆ ಇಲ್ಲಿಯ ವರೆಗೆ  ಮೋಸ ಮಾಡಿ ತಲೆಮರೆಸಿಕೊಂಡಿರುವುದಾಗಿದೆ.

 

8.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ಫಿರ್ಯಾದಿದಾರರಾದ ಶ್ರೀ ಕೆ.ಎನ್. ಮಹೇಶ್ ರವರು ದಿನಾಂಕ 02-01-2014 ರಂದು ಮಂಗಳೂರಿನ ಜಿ.ಹೆಚ್.ಕ್ರಾಸ್ ರಸ್ತೆಯಲ್ಲಿರುವ ಪ್ರಮೋದ್ , ಶ್ರೀನಿವಾಸ್, ವಾಣಿಶ್ರೀ ಮಾಲಕತ್ವದಲ್ಲಿರುವ ಶ್ರೀ ವಾಣಿ ಜುವೆಲ್ಲರ್ಸ್ ಅಂಗಡಿಯಲ್ಲಿ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶ್ರೀ ಶಂಕರ್ ಇವರ ಬಳಿ ಚಿನ್ನದ ಎಳೆ ಕರಿ ಮಣಿ ಸರವನ್ನು ಮಾಡಲು 32.50 ಗ್ರಾಂ ಚಿನ್ನವನ್ನು ನೀಡಿದ್ದು, ದಿನಾಂಕ 22-01-2014 ರಂದು ಶ್ರೀ ಶಂಕರ್ ರವರು ಹೃದಯಾಘಾತದಿಂದ ಮೃತ ಪಟ್ಟಿರುತ್ತಾರೆ. ಫಿರ್ಯಾದಿದಾರರು ನೀಡಿರುವ ಚಿನ್ನದ ತೂಕ ಹಾಗು ಆರ್ಡರ್ ವಿಷಯವನ್ನು ಶ್ರೀ ವಾಣಿ ಜುವಲ್ಲರ್ ರಿಜಿಸ್ಟರ್ ಪುಸ್ತಕದಲ್ಲಿ ನಮೂದಿಸಿದ್ದು, ಬಗ್ಗೆ ಮಾಲಿಕರಲ್ಲಿ ಹಾಗೂ ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ಚಿನ್ನವನ್ನು ಮರಳಿಸುವುದಾಗಿ ಹಾಗೂ ಮೌಲ್ಯ ಪಾವತಿ ಮಾಡಿಸುವುದಾಗಿ ತಿಳಿಸಿರುತ್ತಾರೆ. ಬಳಿಕ ಆರೋಪಿಗಳು ಫಿರ್ಯಾದಿದಾರರ ಸಂಪರ್ಕಕ್ಕೆ ಬಾರದೇ ಮೋಸಮಾಡಿರುತ್ತಾರೆ, ಆರೋಪಿಗಳು 1) ಶ್ರೀಮತಿ ಯಶೋಧ ಇವರಿಂದ 10.7 ಗ್ರಾಂ ಚಿನ್ನ ಹಾಗೂ ನಗದು ರೂ. 31850/-, 2) ಶ್ರೀದೇವಿ ಇವರಿಂದ ನಗದು ರೂ. 10000/-, 3) ನೀಲೇಶ್ ಡಿ ಕಾಮತ್ ಇವರಿಂದ ನಗದು ರೂ 45000/- , 4) ರಾಜೇಶ್ ಡಿ ಕಾಮತ್ ಇವರಿಂದ 17.250 ಗ್ರಾಂ ಚಿನ್ನ , 5) ಚಿತ್ರ ರಾಮರಾವ್ ಇವರಿಂದ 43.500 ಗ್ರಾಂ ಚಿನ್ನ , 6) ಸುಪರ್ಣ ರೈ ಯವರಿಂದ 14 ಗ್ರಾಂ ಚಿನ್ನವನ್ನು ಪಡೆದು ವಾಪಾಸು ಕೊಟ್ಟಿರುವುದಿಲ್ಲ, ಅದರಂತೆ ವಾಣಿ ಜುವಲ್ಲರಿನ ಮಾಲಿಕರಾದ ಪ್ರಮೋದ್ , ಶ್ರೀನಿವಾಸ್, ವಾಣಿಶ್ರೀ ಇವರು ಆಭರಣ ಮಾಡಿಕೊಡುವುದಾಗಿ ಪಡೆದು ಆಭರಣವನ್ನಾಗಲೀ ಅದರ ಮೌಲ್ಯವನ್ನು ಪಾವತಿ ಮಾಡದೇ ಫಿರ್ಯಾದಿದಾರರಿಗೆ ಹಾಗು ಇತರರಿಗೆ ಮೋಸ ಮಾಡಿರುವುದಾಗಿದೆ.

 

9.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪ್ರಶಾಂತ್ ಕುಮಾರ್ ಎಂಬಾತನು ದಿನಾಂಕ:15-10-2010 ರಂದು ಕಾರ್ಪೊರೇಶನ್ ಬ್ಯಾಂಕ್ ಮಂಗಳೂರುಗೆ  ಸೇರ್ಪಡೆಗೊಂಡಿದ್ದು,  ಬಲ್ಮಠದಲ್ಲಿರುವ ಝೋನಲ್ ಆಡಿಟ್ ಆಫೀಸಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ಸಮಯ, ಜುಲೈ 2011 ರಿಂದ ಸೆಪ್ಟೆಂಬರ್ 2013 ಮಧ್ಯೆ ಈತನು ಬಲ್ಮಠದಲ್ಲಿರುವ ಝೋನಲ್ ಆಡಿಟ್ ಆಫೀಸಿಗೆ ದೈನಂದಿನ ಕೆಲಸ ಕಾರ್ಯಕ್ಕೆ ಬೇಕಾದ ಅವಶ್ಯಕ ಸಾಮಾಗ್ರಿಗಳನ್ನು ಖರೀದಿಸಿರುತ್ತೇನೆ ಎಂದು ನಕಲಿ ಬಿಲ್ಲುಗಳನ್ನು ತಯಾರಿಸಿಕೊಂಡು, ಅದಕ್ಕೆ ತಾನೇ ಸಹಿ ಮಾಡಿಕೊಂಡು ನಗದೀಕರಣಕ್ಕಾಗಿ ಕ್ಯಾಶರ್ ರವರಿಗೆ ನೀಡುವ ಸಮಯ ಸಂಬಂಧಪಟ್ಟ ಅಧಿಕಾರಿಗಳ ಸಹಿಯನ್ನು ತಾನೇ ಮಾಡಿಕೊಂಡು ಕಾರ್ಪೊರೇಶನ್ ಬ್ಯಾಂಕ್ ಮುಖ್ಯ ಕಛೇರಿಗೆ ನೀಡಿ ಮೋಸದಿಂದ ಒಟ್ಟು 2,46,284 /- ರೂವನ್ನು ನಗದೀಕರಿಸಿಕೊಂಡು ಕಾರ್ಪೊರೇಶನ್ ಬ್ಯಾಂಕ್ ಗೆ ಮೋಸ ಹಾಗೂ ವಂಚನೆ ಮಾಡಿರುತ್ತಾನೆ.

 

10.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-03-2014 ರಂದು ಮದ್ಯಾಹ್ನ 3-00 ಗಂಟೆಗೆ ಸುರತ್ಕಲ್ ಗ್ರಾಮದ ಮುಕ್ಕ ಪೆಟ್ರೊಲ್ ಪಂಪ್ ಬಳಿ ರಾ ಹೆ 66 ರಲ್ಲಿ ಶ್ರೀನಿವಾಸ ಎಂಬವರು  ಕೆ 19-ಇಕೆ-6799 ನೇ ಸ್ಕೂಟರ್ ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ  ಕೆ -12-ಪಿ-2878 ನೇ ಕಾರನ್ನು ಅದರ ಚಾಲಕ ಡಾ. ಚಿನ್ನಪ್ಪ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್ ನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರ ಎಡಬದಿಗೆ ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಶ್ರೀನಿವಾಸರವರು ರಸ್ತೆಗೆ ಬಿದ್ದು ತಲೆಗೆ ಗಾಯಗೊಂಡಿದ್ದು ಕೂಡಲೇ ಪಿರ್ಯಾದಿದಾರರಾದ ಶ್ರೀ ಪರದೀಶ್ ರವರು ಮತ್ತು ಇತರರು ಸೇರಿ ಶ್ರೀನಿವಾಸರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

11.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27/02/2014 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ 28/02/2014 ಬೆಳಿಗ್ಗೆ 5-00 ಗಂಟೆ ಮಧ್ಯೆ ಮಂಗಳೂರು ತಾಲೂಕು, ಮುನ್ನೂರು ಗ್ರಾಮದ ಮದನಿನಗರ  ಮಸೀದಿ ಬಳಿ, ಪಿರ್ಯಾದುದಾರರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ತನ್ನ ಮಾವನ ಮನೆಯ ಹೊರಗಡೆ ಹ್ಯಾಂಡ್ಲಾಕ್ಹಾಕಿ ನಿಲ್ಲಿಸಿದ್ದ ಕೆಎ 19 ಇಹೆಚ್‌ 0473 ನೇ ನಂಬ್ರ ಬಜಾಜ್ಪಲ್ಸರ್ಮೋಟಾರ್ಸೈಕಲ್ನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಕಳವಾದ ಮೋಟಾರು ಸೈಕಲ್ ಅಂದಾಜು ಮೌಲ್ಯ ರೂಪಾಯಿ 48,000/- ಆಗಬಹುದು.

 

12.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂತೋಷ್ ಪಿರೇರಾ ರವರು ಕಂಕನಾಡಿಯಲ್ಲಿ ಸ್ಟಾರ್ ಆಫ್ ಬಾಂಬೆ ಕಾಂಪ್ಲೆಕ್ಸ್ ಎಂಬ ಕಟ್ಟಡದ ನೆಲ ಅಂತಸ್ತಿನಲ್ಲಿ ನ್ಯೂ ಮೊಬೈಲ್ ಸಿಟಿ ಎಂಬ ಮೊಬೈಲ್ ಶಾಪನ್ನು ನಡೆಸಿಕೊಂಡಿದ್ದು, ಸದ್ರಿಯವರಲ್ಲಿ ಕೆಎ 19 ಜೆಡ್ 8305 ನಂಬ್ರದ ಟೊಯೊಟ ಇನ್ನೋವ ಕಾರು ಇದ್ದು ಅದನ್ನು ಸ್ವಂತ ಕೆಲಸಕ್ಕಾಗಿ ಉಪಯೋಗಿಸುತ್ತಿದ್ದು, ಮಂಗಳೂರಿನ ಬಜಾಲ್ ಎಂಬಲ್ಲಿ ಕೂಡ ವಾಸದ ಮನೆಯೊಂದಿದ್ದು, ಅದಕ್ಕೆ ಆಗಾಗ ಹೋಗಿ ಬರುತ್ತಿದ್ದು, ದಿನಾಂಕ 04/03/2014 ರಂದು ಸಂಜೆ ಸುಮಾರು 7-00 ಗಂಟೆಗೆ ಪಿರ್ಯಾದಿದಾರರ ಬಾಬ್ತು ಟೊಯೊಟಾ ಇನ್ನೋವ ಕಾರು ಕೆಎ 19 ಜೆಡ್ 8305 ನೇ ವಾಹನವನ್ನು ಗೋರಿಗುಡ್ಡೆ ಯಲ್ಲಿರುವ ಮನೆಯ ಮುಂಭಾಗ ನಿಲ್ಲಿಸಿ ಬಜಾಲ್ ನಲ್ಲಿರುವ ಮನೆಗೆ ತಾಯಿ ಹಾಗೂ ತಂಗಿಯ ಮಗನಾದ 05 ವರ್ಷದ ಅರ್ಷೇನ್ ಎಂಬುವನೊಂದಿಗೆ ಹೋಗಿದ್ದು, ಅಲ್ಲಿ ಎರಡು ದಿನ ಉಳಿದುಕೊಂಡು ದಿನಾಂಕ 06/03/2014 ರಂದು ಬೆಳಿಗ್ಗೆ ಸುಮಾರು 8-00 ಗಂಟೆಗೆ ಗೋರಿಗುಡ್ಡೆಯ ಮನೆಗೆ ಬಂದಾಗ ಮನೆಯ ಮುಂಭಾಗ ದಿನಾಂಕ 04/03/2014 ರೆಂದು ಸಂಜೆ ನಿಲ್ಲಿಸಿ ಹೋಗಿದ್ದ ಟೊಯೊಟಾ ಇನ್ನೋವಾ ಕಾರು  ಕೆಎ 19 ಜೆಡ್ 8305ನೆ ವಾಹನ ಇಲ್ಲದೇ ಇದ್ದು, ಆಸುಪಾಸಿನಲ್ಲಿ ಬಗ್ಗೆ ವಿಚಾರಿಸಿ ನಂತರ ಮಂಗಳೂರು ನಗರ, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದರೆ, ಬಂಟ್ವಾಳ, ಬೆಳ್ತಂಗಡಿ ಹಾಗೂ ಧರ್ಮಸ್ಥಳ ಮುಂತಾದ ಕಡೆ ದಿನದವರೆಗೂ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದಾಗಿದೆ. ಕಳುವಾದ ಟೊಯೊಟಾ ಇನ್ನೋವಾ ಕಾರು simpson red  (ಮೆರೂನ್) ಬಣ್ಣದ್ದಾಗಿದೆ. ಕಳುವಾದ ವಾಹನದ ವಿವರವು ಕೆಳಗಿನಂತಿದೆ. Chassis No: MBJ11JV40071249430808, Engine No: 2KD6072448 Mfg DaTE 03/2008 Model TOYOTA INNOVA 2.5GBS ಇನ್ಸೂರಡ್ ಅಂದಾಜು ಮೌಲ್ಯ 650000/- ಆಗಬಹುದು.

No comments:

Post a Comment