Wednesday, March 26, 2014

Daily Crime Reports 26-03-2014

ದೈನಂದಿನ ಅಪರಾದ ವರದಿ.
ದಿನಾಂಕ 26.03.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
1
ವಂಚನೆ ಪ್ರಕರಣ       
:
1
ಮನುಷ್ಯ ಕಾಣೆ ಪ್ರಕರಣ
:
2
ಇತರ ಪ್ರಕರಣ
:
0



























1.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಆನಂದ ಸುವರ್ಣ ರವರು ದಿನಾಂಕ 24-03-2014 ರಂದು ರಾತ್ರಿ ಅವರು ಕೆಲಸ ಮಾಡುವ ಸಸಿಹಿತ್ಲುವಿನ ಬೀಚ್ ಹೌಸ್ ಎಂಬ ಗೆಸ್ಟ್ ಹೌಸ್ ನಲ್ಲಿರುವ ಸಮಯ ರಾತ್ರಿ 11-00 ಗಂಟೆಗೆ ಗೆಸ್ಟ್ ಹೌಸ್ಪಕ್ಕದ ಮನೆಯ ಶ್ರೀಧರ್ ಮತ್ತು ಅವರ ಮನೆಯಲ್ಲಿದ್ದ ಕೆಲವು ಯುವಕರು ಪಿರ್ಯಾದಿದಾರರು ಇದ್ದ ಗೆಸ್ಟ್ ಹೌಸ್ ಗೆ ಬಂದು ಅವಾಚ್ಯ ಶಬ್ದಗಳಿಂದ "ನಮ್ಮ ಮನೆಯ ಮಾಡಿಗೆ ಬಾಟ್ಲಿ ಬಿಸಾಕುತ್ತಿಯಾ" ಎಂಬುದಾಗಿ ಅನಾವಶ್ಯಕವಾಗಿ ಬೈದು ಕಲ್ಲಿನಿಂದ ಹಾಗೂ ಕೈಯಿಂದ ಪಿರ್ಯಾದಿದಾರರ ಮುಖಕ್ಕೆ ಮತ್ತು ಶರೀರಕ್ಕೆ ಹಿಗ್ಗಾಮಗ್ಗಾವಾಗಿ ಹೊಡೆದು ಕಾಲಿನಿಂದ ತುಳಿದಿದ್ದು ಘಟನೆಯಿಂದ ಮುಖಕ್ಕೆ, ಕಿವಿಗೆ, ಮೂಗಿಗೆ ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿದ್ದು, ಆಪಾದಿತ ಶ್ರೀಧರವರ ಮನೆಯಲ್ಲಿ ರಾತ್ರಿ ಪಾರ್ಟಿ ನಡೆಯುತ್ತಿದ್ದು ಅವರ ಮನೆಗೆ ಯಾರೋ ಬಾಟ್ಲಿ ಬಿಸಾಡಿದ್ದರಿಂದ ಪಿರ್ಯಾದಿದಾರರೇ ಬಿಸಾಡಿರುವುದಾಗಿ ಆರೋಪಿಗಳು ತಪ್ಪು ತಿಳಿದು ಸಮಾನ ಉದ್ದೇಶದಂತೆ ಹಲ್ಲೆನಡೆಸಿರುವುದಾಗಿದೆ.

2.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀಮತಿ ಉಷಾ ರವರ ಗಂಡ ಸುಜಿತ್ಕುಮಾರ್ಎಂಬುವವರು ದಿನಾಂಕ 18-03-2014 ರಂದು ಸಂಜೆ ಸುಮಾರು 6 ಗಂಟೆಗೆ ಮನೆಯಿಂದ ಹೋದವರು ತನಕ ಮನೆಗೆ ವಾಪಸಾಗಿರುವುದಿಲ್ಲ ಹಾಗೂ ಎಲ್ಲಾ ಕಡೆ ಹುಡುಕಾಡಿದರೂ ತನಕ ಪತ್ತೆಯಾಗಿರುವುದಿಲ್ಲ. ಕಾಣೆಯಾದವರ ವಿವರ : ಹೆಸರು: ಸುಜಿತ್ಕುಮಾರ್, ಎತ್ತರ: 5'7" ಪ್ರಾಯ: 36 ವರ್ಷ ಬಿಳಿ ಮೈ ಬಣ್ಣ, ದಪ್ಪ ಮೀಸೆ, ಕಪ್ಪು ಕೂದಲು, ಕನ್ನಡ, ತುಳು, ಇಂಗ್ಲೀಷ, ಹಿಂದಿ ಹಾಗೂ ಮಲಯಾಳಿ ಭಾಷೆ ಮಾತನಾಡುತ್ತಾರೆ.

3.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25.03.2014 ರಂದು ಬೆಳಿಗ್ಗೆ 10.30 ಗಂಟೆಗೆ ವಾಮಂಜೂರು  ಬಸ್ಸ್‌‌‌ ನಿಲ್ದಾಣದ ಸಮೀಪ ರಸ್ತೆ ದಾಟಲೆಂದು ಪಿರ್ಯಾದಿದಾರರಾದ ಶ್ರೀಮತಿ ಪದ್ಮಾವತಿ ರವರ ಗಂಡ ಸುಧಾಕರ ರವರು ನಿಂತಿದ್ದ ಸಮಯ  ವಾಮಂಜೂರು ಜಂಕ್ಷನ್‌‌ ಕಡೆಯಿಂದ ಗುರುಪುರ ಕಡೆಗೆ KA19C4169 ನೇ ಲಾರಿಯನ್ನು ಅದರ ಚಾಲಕ ಕಿಶೋರ್‌‌ ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದುದರಿಂದ  ಸದ್ರಿ  ಲಾರಿಯ ಹಿಂಬದಿ ಎಡಬದಿ ಟಯರು  ರಸ್ತೆಯ ಬದಿಯಲ್ಲಿ ನಿಂತಿದ್ದ  ಪಿರ್ಯಾದಿದಾರರ ಗಂಡನ ಬಲಕಾಲಿನ ಪಾದದ ಮೇಲೆ ಹಾದು ಹೋದ ಪರಿಣಾಮ ಬಲಕಾಲಿಗೆ ತೀವ್ರಗಾಯಗೊಂಡು ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

4.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎಂ. ಲಕ್ಷ್ಮಣ ರವರು ಬಾಪೂಜಿ ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್ ಟೆಕ್ನಿಶಿಯನ್ ಮೈಕ್ರೊ ಬಯಾಲಜಿ ಡಿಪಾರ್ಟ್ ಮೆಂಟಿನಲ್ಲಿ ಸುಮಾರು 30 ವರ್ಷ ಕೆಲಸ ಮಾಡಿ ಈಗ ನಿವೃತ್ತಿಗೊಂಡು ಮನೆಯಲ್ಲಿದ್ದು, ನಿವೃತ್ತಿ ಹಣದ ಬಗ್ಗೆ ಮಂಗಳೂರು ನಗರದ ಪಂಪುವೆಲ್ ಎಂಬಲ್ಲಿರುವ  ಕೆನರಾ ಬ್ಯಾಂಕ್ ಶಾಖೆಯಲ್ಲಿ ಎಸ್.ಬಿ ಖಾತೆ ನಂಬ್ರ 307 ರಲ್ಲಿ ವ್ಯವಹಾರ ಮಾಡುತ್ತಿದ್ದು, ವ್ಯವಹಾರದ ಬಗ್ಗೆ ಸದ್ರಿ ಬ್ಯಾಂಕಿಗೆ ಹೋಗುತ್ತಿದ್ದಾಗ ಸದ್ರಿ ಬ್ಯಾಂಕಿನ ಉದ್ಯೋಗಿ ಕೆ.ಪಿ ಜಯಂತ್ ರಾವ್ ಎಂಬುವರ ಪರಿಚಯವಾಗಿದ್ದು, ನಿವೃತ್ತಿಗೊಂಡು ಪಿರ್ಯಾದಿದಾರರಿಗೆ ದೊರೆತಿರುವ ಹಣವು ಇರುವುದನ್ನು ಜಯಂತ್ ರಾವ್ ತಿಳಿದುಕೊಂಡು ಅವರು ಸುಮಾರು ಒಂದೂವರೆ ವರ್ಷಗಳ ಹಿಂದೆ ಪಿರ್ಯಾದಿದಾರರು ಮತ್ತು ಅವರ ಬಾವ ವಾಸುದೇವ್ ಕಾಮತ್ ಮಂಗಳೂರು ಪರಿಸರದಲ್ಲಿ ಮನೆಗಳನ್ನು ಕಟ್ಟಿಸಿ ಮಾರಾಟ ಹಾಗೂ ಮುಂಬಯಿಯಲ್ಲಿ ಹಾಲಿನ ಡೈರಿ ವ್ಯವಹಾರ ಇದ್ದು, ಈ ವ್ಯವಹಾರಕ್ಕೆ ನೀವು ಹಣವನ್ನು ತೊಡಗಿಸಿದರೆ ಹೆಚ್ಚಿಗೆ ಬಡ್ಡಿ ಹಣವನ್ನು ನೀಡುತ್ತೇವೆ ಎಂಬು ನಂಬಿಸಿ ಪಿರ್ಯಾದಿದಾರರಿಂದ 6 ಲಕ್ಷ ರೂಪಾಯಿಯ ವಿಜಯ ಬ್ಯಾಂಕ್ ಚೆಕ್ಕನ್ನು ಪಡೆದುಕೊಂಡು ಅದನ್ನು ಅವರು ನಗದೀಕರಿಸಿದ್ದು, ಪಿರ್ಯಾದಿದಾರರ ಎಕೌಂಟ್ ನಿಂದ ಅವರಿಗೆ ಹಣ ಜಮೆಯಾಗಿರುತ್ತದೆ.  ಪುನಃ ಜಯಂತ್ ರಾವ್ ರವರು ಅವರ ವ್ಯವಹಾರದ ಬಗ್ಗೆ ಹಣ ಪಾವತಿಸುವಂತೆ ವಿನಂತಿಸಿಕೊಂಡಿದ್ದು, ಪಿರ್ಯಾದಿದಾರರು ಅವರ ನಂಬಿಕೆಗೆ ಒಳಗಾಗಿ ಪುನಃ ಒಂದು ವರ್ಷದ ಹಿಂದೆ ರೂಪಾಯಿ 4 ಲಕ್ಷ ನಗದು ಹಣವನ್ನು ಪಂಪುವೆಲ್ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖುದ್ದಾಗಿ ಜಯಂತ್ ರಾವ್ ರವರ ಕೈಯಲ್ಲಿ ನೀಡಿದ್ದು, ಬಳಿಕ ಜಯಂತ್ ರಾವ್ ರವರು ಪಿರ್ಯಾದಿದಾರರನ್ನು ಮರಳು ಮಾಡಿದ ಹಾಗೆ ಇತರರನ್ನು ಮರಳುಮಾಡಿ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡ ವಿಷಯ ತಿಳಿಯಿತು. ಕೂಡಲೇ ಜಯಂತ್ ರವರಲ್ಲಿ ತನ್ನ ಹಣ ಹಿಂತಿರುಗಿಸುವಂತೆ ವಿನಂತಿಸಿಕೊಂಡಿದ್ದು, ಅವರು ಹಣ ನೀಡಲು ವಾಯಿದೆಗಳನ್ನು ನೀಡುತ್ತಾ ಇದ್ದು, ಜಯಂತ್ ರವರು ಪಿರ್ಯಾದಿದಾರರಿಗೆ ಹಾಗೂ ಇತರರಿಗೆ ಮೋಸ ಮಾಡುವ ಉದ್ದೇಶದಿಂದಲೇ ವಿಶ್ವಾಸಕ್ಕೆ ಪಡೆದುಕೊಂಡು ಹಣವನ್ನು ಪಡೆದುಕೊಂಡಿದ್ದಾಗಿರುತ್ತದೆ.  

5.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಪ್ರವೀಣ್ ಶೆಟ್ಟಿ ರವರ ತಮ್ಮ ಪ್ರಶಾಂತ್ಶೆಟ್ಟಿ ಎಂಬವನು ಖಾಸಗಿ ಕಂಪನಿಯಲ್ಲಿ ಸಿವಿಲ್ಇಂಜಿನಿಯರ್ಆಗಿದ್ದು, ದಿನಾಲು ಬೆಳಿಗ್ಗೆ 8-00 ಗಂಟೆಗೆ ಕೆಲಸಕ್ಕೆ ಹೋಗಿ ರಾತ್ರಿ 7-8 ಗಂಟೆಗೆ ವಾಪಾಸು ಮನೆಗೆ ಬರುವುದು ವಾಡಿಕೆ, ದಿನಾಂಕ 24-03-2014 ರಂದು ಆತನು ಮಧ್ಯಾಹ್ನವೇ ಕೆಲಸದಿಂದ ವಾಪಾಸ್ಸು ಮನೆಗೆ ಬಂದಿದ್ದು ಬಗ್ಗೆ ಪಿರ್ಯಾದಿದಾರರ ತಾಯಿಯವರು ವಿಚಾರಿಸಿದಾಗ ಹುಶಾರಿಲ್ಲವೆಂದು ತಿಳಿಸಿ ಮನೆಯಲ್ಲಿಯೇ ಮಲಕೊಂಡಿದ್ದು, ಬಹಳ ಚಿಂತೆಯಿಂದ ಇದ್ದವನು, ದಿನಾಂಕ 25-03-2014 ರಂದು ಬೆಳಿಗ್ಗೆ 6-00 ಗಂಟೆಗೆ ತನ್ನ ಮನೆಯಿಂದ ಆತನ ಕಂಪನಿ ನೀಡಿದ ಬೈಕ್ನಂಬ್ರ ಕೆಎ 19 ಇಸಿ 8004 ನೇದರಲ್ಲಿ ಮನೆಯಲ್ಲಿ ಯಾರಿಗೂ ಏನು ಹೇಳದೆ ಆತನ ಬಾಬ್ತು ಮೊಬೈಲ್ಪರ್ಸ್ಎಲ್ಲಾ ಮನೆಯಲ್ಲಿಯೇ ಬಿಟ್ಟು ಹೋದವನು ರಾತ್ರಿಯಾದರೂ ಮನೆಗೆ ಬಾರದಿದ್ದು ಇದರಿಂದ ಗಾಬರಿಗೊಂಡು ಪಿರ್ಯಾದಿದಾರರು ಮತ್ತು ಮನೆಯವರು ಗೆಳೆಯರು ಸೇರಿ ಎಲ್ಲಾ ಕಡೆಗಳಲ್ಲಿ ಹುಡುಕುತ್ತಾ ಗುರುಪುರ ಸೇತುವೆ ಬಳಿಗೆ ತಲುಪಿದಾಗ ಅಲ್ಲಿ ಸದ್ರಿ ಪ್ರಶಾಂತ್ಶೆಟ್ಟಿಯು ಬೆಳಿಗ್ಗೆ ಚಲಾಯಿಸಿಕೊಂಡು ಹೋದ ಬೈಕ್ನಿಲ್ಲಿಸಿದ ರೀತಿಯಲ್ಲಿ ಕಂಡು ಬಂದಿದ್ದು, ಅಲ್ಲಿ ಆಸುಪಾಸಿನಲ್ಲಿ ಹುಡುಕಾಡಿದ್ದಲ್ಲಿ ಎಲ್ಲೂ ಪತ್ತೆಯಾಗದೇ ಇರುವುದಾಗಿದೆ.

No comments:

Post a Comment