Saturday, March 8, 2014

Daily Crime Report 07-3-2014

ದಿನಾಂಕ 07.03.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13-01-2014 ರಂದು ಪಿರ್ಯಾದುದಾರ ಶ್ರೀಮತಿ ಸಹನಾ ಪಿ. ರಾವ್ ರವರು ತಮ್ಮ ಮಗಳು ಕುಮಾರಿ ಪ್ರತೀಕ್ಷಾ ರಾವ್‌‌ರವರೊಂದಿಗೆ ಮಂಗಳೂರು ನಗರದ ಶರವು ದೇವಸ್ಥಾನಕ್ಕೆಂದು ನಡೆದುಕೊಂಡು ಹೋಗುತ್ತಾ, ಶರವು ದೇವಸ್ಥಾನದ ಪ್ರವೇಶದ್ವಾರದ ಎದುರಿಗೆ ಸಂಜೆ ಸಮಯ ಸುಮಾರು 6:10 ಗಂಟೆಗೆ ತಲುಪಿದಾಗ, ಪಿರ್ಯಾದಿದಾರರ ಹಿಂದಿನಿಂದ ಕೆ.-19-ಎಂ.ಬಿ-3122 ನೇ ನಂಬ್ರದ ಕಾರನ್ನು ಅದರ ಚಾಲಕ ಸುಶೀಲ್ಕುಮಾರ್ರವರು ಒಮ್ಮೆಲೇ ಹಿಂದಕ್ಕೆ ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಯ ಮೇಲೆ ಬಿದ್ದುಸದ್ರಿಯವರ ಬಲ ಕೈಯ ಮೊಣಗಂಟಿಗೆ ತೀವ್ರ ತರಹದ ಗಾಯಗೊಂಡವರನ್ನು ಸದ್ರಿ ಕಾರಿನ ಚಾಲಕ ನು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಯೇನೆಪೋಯಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆ ಸಮಯ ಅಪಘಾತವುಂಟು ಮಾಡಿದ ಕಾರಿನ ಚಾಲಕರಾದ ಸುಶೀಲ್ಕುಮಾರ್ರವರು ಚಿಕಿತ್ಸೆಯ ಪೂರ್ಣ ವೆಚ್ವವನ್ನು ಭರಿಸುತ್ತೇನೆಂದು ತಿಳಿಸಿದ್ದು, ಆದರೆ ಈಗ ವೆಚ್ಚ ಭರಿಸಲು ನಿರಾಕರಿಸಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06.03.2014 ರಂದು ಮದ್ಯಾಹ್ನ ಸುಮಾರು 12.05 ಗಂಟೆಗೆ ಆಟೋರಿಕ್ಷಾ ನಂಬ್ರ KA19-B-5421  ನ್ನು ಅದರ ಚಾಲಕ ಅತ್ತಾವರ ಕೆ.ಎಂ.ಸಿ ಆಸ್ಪತ್ರೆ ಕಡೆಯಿಂದ ಅತ್ತಾವರ ಕಟ್ಟೆಯ ಕಡೆಗೆ ತನ್ನ ಬಾಬ್ತು ಆಟೋ ರಿಕ್ಷಾ ದಲ್ಲಿ ಹೇಮಾವತಿ ಮತ್ತು ಜಯಲಕ್ಷ್ಮಿ ಎಂಬುವವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಅತಿ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಹೋಗಿ ಚಕ್ರಪಾಣಿ ದೇವಸ್ತಾನದ ಬಳಿ ಇರುವ ಕೆ.ಕೆ ಸ್ಪೇರ್ ಸ್ಪಾರ್ಟ್ಸ್ ಅಂಗಡಿ ಎದುರು ತಲುಪುವಾಗ ರಿಕ್ಷಾ ಕ್ಕೆ ನಿರ್ಲಕ್ಷತನದಿಂದ ಬ್ರೇಕ್ ಹಾಕಿದ ಪರಿಣಾಮ  ಆಟೋ ರಿಕ್ಷಾ ರಸ್ತೆಯಲ್ಲಿ ಬಲ ಭಾಗಕ್ಕೆ ಮಗುಚಿ ಬಿದ್ದು ಫಿರ್ಯಾದುದಾರರಾದ ಶ್ರೀಮತಿ ಹೇಮಾವತಿ ರವರ ಬಲತೋಳಿಗೆ ಗಂಭೀರ ಗಾಯ ಮತ್ತು ಜಯಲಕ್ಷ್ಮಿ ಹಾಗೂ ಚಾಲಕ ಹರಿಯಪ್ಪ ರವರುಗಳಿಗೆ ಸಾದಾ ಸ್ಚರೂಪದ ಗಾಯ ಉಂಟಾಗಿ ಫಿರ್ಯಾದುದಾರರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಓಳರೋಗಿಯಾಗಿದ್ದು ಜಯಲಕ್ಷ್ಮಿ ಮತ್ತು ಚಾಲಕ ಹರಿಯಪ್ಪ ಹೊರ ರೋಗಿಯಾಗಿ ಚಿಕೆತ್ಸೆ ಪಡೆದುಕೊಂಡಿರುತ್ತಾರೆ.

 

3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-03-2014 ರಂದು ಬೆಳಿಗ್ಗೆ ಸುಮಾರು 10-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಪುನರೂರು ಕಟ್ಟಡ ಬದಿಯಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಕೆಎ-42-ಜಿ 166 ನೇ ನಂಬ್ರದ 108 ಅಂಬ್ಯುಲೆನ್ಸ್‌‌ನ್ನು ಅದರ ಚಾಲಕ ಪಕೀರಪ್ಪ ಎಂಬವರು ಯಾವುದೇ ಸೂಚನೆಯನ್ನು ನೀಡದೆ ಒಮ್ಮೆಲೆ ನಿರ್ಲಕ್ಷತನದಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ, ಅಲ್ಲೇ ಆಟವಾಡುತ್ತಿದ್ದ ಪ್ರಾಯ ಸುಮಾರು 3 ವರ್ಷದ ರಾಜೇಂದ್ರ ಎಂಬ ಹೆಸರಿನ ಮಗುವಿಗೆ ಡಿಕ್ಕಿಯಾದ ಪರಿಣಾಮ ತೀವ್ರ ತರದ ಗಾಯಗೊಂಡ ಮಗುವನ್ನು ಚಿಕಿತ್ಸೆ ಬಗ್ಗೆ ಮುಲ್ಕಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡ ಹೋದಲ್ಲಿ, ಚಿಕಿತ್ಸೆಯಲ್ಲಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 2-00 ಗಂಟೆಗೆ ಮೃತಪಟ್ಟಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಭಾರತ್ ಆಟೋ ಕಾರ್ ಪ್ರೈವೇಟ್ ಲಿ. ಸಂಸ್ಥೆ ಮೂಡಬಿದ್ರೆ ಶಾಖೆಯಲ್ಲಿ  ಆರೋಪಿಯಾದ ಪ್ರಶಾಂತ್ ಜೈನ್ ಎಂಬವರು ದಿನಾಂಕ 01-11-2010 ರಂದು ಖಾಯಂ ಕೆಲಸಗಾರನಾಗಿ ವಾಹನದ ಮಾರಾಟ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದು, ಸಂಸ್ಥೆಯ ಗ್ರಾಹಕರನ್ನು ಸಂಪರ್ಕಿಸಿ ಸಂಸ್ಥೆ ಮೂಲಕ ಕಾರನ್ನು ಖರೀದಿಸುವ ಗ್ರಾಹಕರು ನೀಢುವ ಮುಂಗಡ ಹಣಕ್ಕೆ ಸಂಸ್ಥೆಯ ಬಾಬ್ತು ರಶೀದಿಯನ್ನು ನೀಡುವ ಬದಲು ತಾನೇ ರಶೀದಿಯನ್ನು ಪ್ರಿಂಟ್ ಮಾಡಿಸಿ ಅದನ್ನು ಕಂಪೆನಿ ಹೆಸರು ಉಪಯೋಗಿಸಿ ಗ್ರಾಹಕರಿಗೆ ನೀಡಿರುವುದಲ್ಲದೇ ಸಂಸ್ಥೆಯ ಮುಖಾಂತರ ಹೊಸ ಕಾರುಗಳಿಗೆ ನೊಂದಣಿ ಮಾಡಿಕೊಡುವುದಾಗಿ ಗ್ರಾಹಕರಿಂದ ಹಣ ಪಡೆದು ಅದನ್ನು ಸಂಸ್ಥೆಗೆ ಆಗಲೀ ಸಾರಿಗೆ ಕಛೇರಿಗೆ ಆಗಲೀ ಪಾವತಿಸದೇ ಗ್ರಾಹಕರಿಗೆ ಮೋಸ ಮಾಡಿರುತ್ತಾನೆ.

 

5.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05-03-14 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ದೇಜಪ್ಪ ರವರು ಅವರ ಅತ್ತೆ ಲಕ್ಷ್ಮೀ (ಪ್ರಾಯ 60 ವರ್ಷರವರೊಂದಿಗೆ ಮದ್ಯ ಕಡೆಯಿಂದ ಕಾಟಿಪಳ್ಳ ಕಡೆಗೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು ಸಂಜೆ ಸುಮಾರು 5-00 ಗಂಟೆ ಸಮಯಕ್ಕೆ ಇಂಡಿಯನ್ ಟಿಂಬರ್ ಬಳಿ ತಲುಪುತ್ತಿದ್ದಂತೆ ಕಾಟಿಪಳ್ಳ ಕಡೆಯಿಂದ ಮದ್ಯ ಕಡೆಗೆ ಕೆಎ-19-ಬಿ-8569 ನೇ ಲಾರಿಯನ್ನು  ಅದರ ಚಾಲಕ ಸುಧಾಕರ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಸಂಪೂರ್ಣ ಬಲ ಭಾಗಕ್ಕೆ ಬಂದು ರಸ್ತೆ ಬದಿಯಲ್ಲಿ ಪಿರ್ಯಾದಿದಾರರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಲಕ್ಷ್ಮೀ ರವರಿಗೆ ಢಿಕ್ಕಿ  ಹೊಡೆದ ಪರಿಣಾಮ ಅವರ ತಲೆಯ ಹಿಂಭಾಗಕ್ಕೆ, ಬೆನ್ನಿಗೆ, ಭುಜಕ್ಕೆ ರಕ್ತ ಗಾಯ ಹಾಗೂ ಸೊಂಟಕ್ಕೆ ಜಜ್ಜಿದ ಗಾಯ ಉಂಟಾಗಿದ್ದು  ಚಿಕಿತ್ಸೆಯ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಹೇಮಂತ್ ಕುಮಾರ್ ರವರು ಯೆಯ್ಯಾಡಿಯಲ್ಲಿ ವೆಲ್ಡಿಂಗ್‌‌ ಕೆಲಸ ಮಾಡಿಕೊಂಡಿದ್ದು, ದಿನಾಲು ಮನೆಯಿಂದ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುವುದಾಗಿದ್ದು, ಪಿರ್ಯಾಧಿದಾರರು ಎಂದಿನಂತೆ  ದಿನಾಂಕ: 26.02.2014 ರಂದು ಬೆಳಿಗ್ಗೆ ತನ್ನ ಬಾಬ್ತು ಕೆಎ-19-ಇಡಿ-7156 ನೇ ಬಜಾಜ್‌‌ ಪಲ್ಸರ್‌‌ ಮೋಟಾರ್‌‌ ಸೈಕಲ್ನಲ್ಲಿ  ಕೆಲಸಕ್ಕೆ ಹೋಗಿ ಮರಳಿ  ಸಂಜೆ 6.00 ಗಂಟೆಗೆ ಬಂದು  ದೀಪ ಫ್ರೆಂಡ್ಸ್‌‌ ಸರ್ಕಲ್‌‌ ಬಳಿ ಶಕ್ತಿನಗರ ಪದವು ಗ್ರಾಮ ಎಂಬಲ್ಲಿ ತನ್ನ ಮನೆಯ ಕಂಪೌಂಡಿನ ಒಳಗಡೆ ಮೋಟಾರ್‌‌ ಸೈಕಲನ್ನು  ನಿಲ್ಲಿಸಿದ್ದು, ಮರುದಿನ ದಿನಾಂಕ: 27.02.2014 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವರೇ  ಮೋಟಾರ್‌‌ ಸೈಕಲನ್ನು  ನೋಡಿದಾಗ ಸದ್ರಿ ಮೋಟಾರ್‌‌ ಸೈಕಲ್‌‌ ಕಾಣೆಯಾಗಿದ್ದು ಅದರ  ಪತ್ತೆಯ ಬಗ್ಗೆ  ಅಕ್ಕಪಕ್ಕದಲ್ಲಿ ಮತ್ತು ಮಂಗಳೂರು ನಗರ, ಬಂಟ್ವಾಳ ನಗರ, ಮತ್ತು ಪುತ್ತೂರು ಕಡೆಗಳಲ್ಲಿ ಹುಡುಕಾಡಿದಲ್ಲಿ  ಪತ್ತೆಯಾಗದೇ ಇದ್ದು ಸದ್ರಿ ಮೋಟಾರ್‌‌ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಮೋಟಾರ್‌‌ ಸೈಕಲ್‌‌  ಅಂದಾಜು ಮೊತ್ತ ರೂ 22,000/- ಆಗಬಹುದು.

 

7.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರವಿ ಎನ್.ಪಿ. ರವರು ಎಂಫಾರ್ ಕನ್‌‌ಸ್ಟ್ರಕ್ಷನ್‌‌ನಲ್ಲಿ  ಮ್ಯಾನೇಜರ್ ಆಗಿ ಸುಮಾರು ಒಂದು ವರ್ಷದಿಂದ ಕೆಲಸ  ಮಾಡಿಕೊಂಡಿದ್ದು, ಸದರ್ಇ ಕಂಪೆನಿಯ ಬಾಬ್ತು ಯಾರ್ಡ್ಸುಮಾರು 3 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಪಿರ್ಯಾದಿದಾರರು ಪ್ರತಿದಿನ ಬೆಳಿಗ್ಗೆ 8-00 ಗಂಟೆಗೆ ಬಂದು ಸಂಜೆ ಸುಮಾರು 6-00 ಗಂಟೆಗೆ ವಾಪಸ್ಸು ಹೋಗುತ್ತಿದ್ದು, ಯಾರ್ಡ್ನಲ್ಲಿ ಕಛೇರಿ ಕೂಡ ಇದ್ದು ಇತರೆ ಸಿಬ್ಬಂದಿಗಳು ಕೂಡ ಇರುತ್ತಾರೆಇದರ ಮುಖ್ಯ ದ್ವಾರದಲ್ಲಿ ಸೆಕ್ಯೂರಿಟಿ ಭದ್ರತೆ ಕೂಡ ಇರುತ್ತದೆದಿನಾಂಕ 21-2-2014 ರಂದು ಪಿರ್ಯಾದಿದಾರರು ಎಂದಿನಂತೆ ಬೆಳಿಗ್ಗೆ ಅಡ್ಯಾರ್‌‌ನಲ್ಲಿರುವ ಸ್ಟಾಕ್‌‌ಯಾರ್ಡ್ಗೆ ಬಂದು ಸಂಜೆ ಸುಮಾರು 6-30 ಗಂಟೆಗೆ ಹೋಗಿದ್ದು ಆ ಸಮಯ ಮೈನ್ಗೇಟ್ಬಲ್ಲಿ  ಸೆಕ್ಯುರಿಟಿ ಇದ್ದು, ಒಳಗಿನಿಂದ ಬೀಗ ಹಾಕಿದ್ದು ಸಂಸ್ಥೆಗೆ ಸಂಬಂಧಪಟ್ಟ ವಾಹನಗಳು ಬಂದಾಗ ಸೆಕ್ಯುರಿಟಿಗಳೇ ಬೀಗ ತೆಗೆದು ಒಳಗೆ/ಹೊರಗೆ ಬಿಡುವುದಾಗಿದ್ದು, ಅದರಂತೆ ದಿನಾಂಕ 22-02-2014 ರಂದು ಬಂದು ನೂಡಿದಾಗ 1ಹೆಚ್ಪಿಯ ಸಬ್ಮರ್ಸಿಬಲ್ರ್ಸಿಬಲ್ ಮೋಟಾರಗಳು-3 ಕಾಣೆಯಾಗಿದ್ದನ್ನು ನೋಡಿ ವರ್ಕ್ಶಾಪ್ಸಂಪೂರ್ಣ ಪರಿಶೀಲಿಸಿ ನೋಡಿದಾಗ ಒಟ್ಟು 1 ಹೆಚ್ಪಿಯ ಸಬ್ಮರ್ಸಿಬಲ್ ಮೋಟರ್ಗಳು-3, 5 ಹೆಚ್ಪಿಯ ಮೋಟಾರುಗಳು -3, 3 ಹೆಚ್ಪಿಯ ಮೋಟಾರುಗಳು-5, 2 ಹೆಚ್ಪಿಯ ಸಬ್ಮರ್ಸಿಬಲ್ ಮೋಟಾರುಗಳು-2, 12 ವೋಲ್ಟ್ ಬ್ಯಾಟರಿಗಳು-4, ಕಾಂಕ್ರಿಟ್ ಬ್ರೇಕರ್ಗಳು-2, ತಾಮ್ರದ ವೈಯರ್ಗಳು  200 ಮೀಟರ್ನದ್ದು, 5  ಬಂಡಲ್ಗಳು ಈ ಎಲ್ಲಾ ಸ್ವತ್ತುಗಳು ದಿನಾಂಕ 21-02-2014 ರಂದು ರಾತ್ರಿ ಸುಮಾರು 12-00 ಗಂಟೆಯಿಂದ ದಿನಾಂಕ 22-02-2014 ರ ಬೆಳಿಗ್ಗೆ 1-30 ಗಂಟೆಯ ಮಧ್ಯೆ ಯಾರೋ ಕಳ್ಳರು ಕಳುವು ಮಾಡಿರುವುದಾಗಿದ್ದು, ಅವುಗಳ ಒಟ್ಟು ಮೌಲ್ಯ 1,05,000/- ಗಳಾಗಬಹುದು.

 

8.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ರಮೇಶ್ ರವರು ಜಪ್ಪಿನಮೊಗರು ಎಂಬಲ್ಲಿ ಅಮ್ಮ ಆಟೋ ವಕ್ರ್ಸ್ಎಂಬ ಗ್ಯಾರೇಜ್‌‌ ನಡೆಸುತ್ತಿದ್ದು ಸದ್ರಿ ಗ್ಯಾರೇಜ್ಗೆ ರಿಪೇರಿ ಬಗ್ಗೆ ಬಂದಿದ್ದ ಕೆಎ-30-8424 ನೇ ಬೊಲೆರೋ ಜೀಪ್‌‌ 4 ಟಯರ್ಗಳನ್ನು ಡಿಸ್ಕ್‌‌ ಸಮೇತ ದಿನಾಂಕ: 04.03.2014 ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಟಯರ್‌‌ಗಳ ಅಂದಾಜು ಮೌಲ್ಯ ರೂ 30,000/- ಆಗಬಹುದು.

 

9.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಮೆರಿ ಡಿ'ಸೋಜಾ ರವರ 3ನೇ ಮಗ ಸೋನಾಲ್ಡಿಸೋಜಾ (15) ಎಂಬವನು ಕಂಕನಾಡಿ ಕಪಿತಾನಿಯೋ ಶಾಲೆಯಲ್ಲಿ 9ನೇ ತೆರಗತಿ ವಿದ್ಯಾರ್ಥಿಯಾಗಿದ್ದು, ದಿನಾಂಕ 06-03-2014 ರಂದು ಬೆಳಿಗ್ಗೆ 8-00 ಗಂಟೆಗೆ ಶಾಲೆಗೆಂದು ಮನೆಯಿಂದ  ಹೋದವನು ಸಂಜೆ 5-00 ಗಂಟೆಯಾದರೂ ಮನೆಗೆ ಬಾರದೇ ಇದ್ದುದರಿಂದ ಶಾಲೆಯಲ್ಲಿ ವಿಚಾರಿಸಲಾಗಿ ಶಾಲೆಗೂ ಹೋಗದಿರುವುದು ತಿಳಿದು, ಸಂಬಂಧಿಕರ ಮನೆಗಳಲ್ಲಿ ಮತ್ತು ಆತನ ಗೆಳೆಯರಲ್ಲಿ ವಿಚಾರಿಸಿದ್ದಲ್ಲದೆ ಮಂಗಳೂರು ಪೇಟೆಗಳಲ್ಲಿ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗದಿರುವುದರಿಂದ, ಕಾಣೆಯಾದ ಸೋನಾಲ್ಡಿಸೋಜಾನನ್ನು ಪತ್ತೆಮಾಡಿಕೊಡಬೇಕಾಗಿಯೂ, ಈತನು ಬೆಳಿಗ್ಗೆ ಶಾಲೆಯ ಸಮವಸ್ತ್ರವಾದ ಬ್ಲೂ ಲೈನಿಂಗ್ಸ್ಇರುವ ಅರ್ಧತೋಳಿನ ಶರ್ಟ್ಮತ್ತು ಬ್ಲೂ ಪ್ಯಾಂಟ್ಧರಿಸಿ, ಕಪ್ಪು ಬಣ್ಣದ ಸ್ಕೂಲ್ಬ್ಯಾಗ್ನೊಂದಿಗೆ ಶಾಲೆಗೆ ಹೋಗಿರುತ್ತಾನೆ.

 

No comments:

Post a Comment