Friday, March 21, 2014

Daily Crime Reports 21-03-2014

ದೈನಂದಿನ ಅಪರಾದ ವರದಿ.

ದಿನಾಂಕ 21.03.20148:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-03-2014 ರಂದು ರಾತ್ರಿ 08:55 ಗಂಟೆಗೆ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ವಿದ್ಯಾನಗರ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಶರೀಫ್ ರವರ ರಿಕ್ಷಾವನ್ನು  ಆರೋಪಿ ಸಾದಿಕ್ ಮತ್ತು ಇನ್ನೊಬ್ಬರು ಬಾಡಿಗೆ ನೆಪದಲ್ಲಿ   ಹೋಗುತ್ತಿದಾಗ, ಇನ್ನೆರಡು ಆರೋಪಿಗಳು ಬೇರೊಂದು ರಿಕ್ಷಾದಲ್ಲಿ ಬಂದು ಪಿರ್ಯಾದಿದಾರರ ರಿಕ್ಷಾವನ್ನು ಓವರಟೇಕ್ ಮಾಡಿ  ಅಡ್ಡ ನಿಲ್ಲಿಸಿ ಸಮಯದಲ್ಲಿ ಆರೋಪಿ ಸಾದಿಕ್ ಮತ್ತು ಅವನ್ನೊಂದಿಗಿದ್ದ ಆರೋಪಿಗಳು ಕೈಯಿಂದ ಕಲ್ಲಿನಿಂದ ರಾಡ್ ನಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು, ಈ ಘಟನೆಗೆ ಪಿರ್ಯಾದಿದಾರರಿಗೆ ಮತ್ತು ಆರೋಪಿ ಸಾದಿಕ್ ಗೆ ಇದ್ದ ಹಳೇ ದ್ವೇಷವೇ ಕಾರಣವಾಗಿರುತ್ತದೆ ಗಾಯಗೊಂಡ ಪಿರ್ಯಾದಿರಾರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

 

2.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-03-2014 ರಂದು ಕೆ.ಎ.19.ಇಡಿ 4155 ನೇ ಮೋಟಾರು ಸೈಕಲಿನಲ್ಲಿ ನಾಸೀರ್ ಎಂಬವರು ಸವಾರರಾಗಿಯು ಮತ್ತು ಪಿರ್ಯಾದಿದಾರರಾದ ಮಹಮ್ಮದ್ ಶರೀಫ್ ರವರು ಸಹಸವಾರಾಗಿ ಕುಳಿತು, ದೀಪಕ್ ಪೆಟ್ರೋಲ್ ಬಂಕಿನಲ್ಲಿ ಮೋಟಾರು ಸೈಕಲಿಗೆ ಪೆಟ್ರೋಲ್ ಹಾಕಿ ವಾಪಾಸ್ಸು ತಮ್ಮ ಮನೆಯಾದ ಬಜಪೆ ಕಡೆಗೆ ಹೋಗಲು ಪೆಟ್ರೋಲ್ ಬಂಕಿನಿಂದ ಹೊರಗಡೆ ಬರುತ್ತಿದ್ದ ಸಮಯ ಸುಮಾರು 19-15 ವೇಳೆಗೆ ಪೆಟ್ರೋಲ್ ಬಂಕಿನ ಎದುರುಗಡೆ ಇರುವ ಸರ್ವಿಸ ರಸ್ತೆಯಲ್ಲಿ TCE 7299 ಟ್ರೈಲರ್ ಲಾರಿಯನ್ನು ಯಾವುದೇ ಸೂಚನೆಯನ್ನು ನೀಡಿದ ಒಮ್ಮೆಲೆ ಅತೀ ವೇಗ ಹಾಗೂ ಅಜಾಗರು ಕತೆಯಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಸಹಸವಾರರಾಗಿ ಕುಳಿತು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲಿನ ಎದುರಿಗೆ ಬಲವಾಗಿ ಟ್ರೈಲರ್ ಲಾರಿಯ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ಮೋಟರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ ಪಿರ್ಯಾದಿದಾರರ ಗಲ್ಲಕ್ಕೆ, ಎಡ ಕೈತಟ್ಟೆ,  ರಕ್ತ ಗಾಯ ಮತ್ತು ಎದೆಗೆ ಗುದ್ದಿದಂತಹ ಗಾಯ ಹಾಗೂ ಸವಾರ ಅಬ್ದುಲ್ ನಾಸೀರ್ ರವರಿಗೆ ಸಣ್ಣಪುಟ್ಟ ತರಚಿದ ಗಾಯಗಳು ಉಂಟಾಗಿರುತ್ತದೆ.

 

3.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-03-2014 ರಂದು ಬೆಳಿಗ್ಗೆ 07:45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀಮತಿ ಶಾಂತಾ ಡಿ. ಶೆಟ್ಟಿ ರವರು ತನ್ನ ಮನೆಯ ಕಂಪೌಂಡಿನ ಹೊರಗೆ ಬಂದು ಕಂಪೌಂಡಿನ ಹೊರಗೆ ಬಾಗಿರುವ ಹೂವಿನ ಗಿಡಗಳಿಂದ ಹೂಗಳನ್ನು ಕೊಯ್ಯುತ್ತಿರುವ ಸಮಯ ಒಬ್ಬ ಯುವಕನು ಪಿರ್ಯಾದಿದಾರರ ಬಳಿ ಬಂದು ರಿಜ್ವಾನ್ ಎಂಬಾತನ ಮನೆ ಎಲ್ಲಿ ಎಂದು ಕೇಳಿದಾಗ ಪಿರ್ಯಾದಿದಾರರು ಯಾವ ರಿಜ್ವಾನ್, ಆತನು ಏನು ಕೆಲಸ ಮಾಡುವುದು ಎಂದು ವಿಚಾರಿಸುವ ಸಮಯದಲ್ಲಿ ಆತನು ಒಮ್ಮೇಲೆ ಪಿರ್ಯಾದಿದಾರರ ಮೇಲೆ ಎರಗಿ ಕುತ್ತಿಗೆಗೆ ಕೈ ಹಾಕಿ ಧರಿಸಿದ್ದ ಕರಿಮಣಿ ಸರವನ್ನು ಎಳೆದು ತುಂಡು ಮಾಡಿದಾಗ ಪಿರ್ಯಾದಿದಾರರು ನೆಲಕ್ಕೆ ಬಿದ್ದು ಎಡ ಕೈಗೆ ಗಾಯವಾಗಿ ಜೋರಾಗಿ ಬೊಬ್ಬೆ ಹಾಕಿದಾಗ ಆಸುಪಾಸಿನವರು ಓಡಿ ಬರುವುದನ್ನು ಕಂಡು ಯುವಕನು ಕರಿಮಣಿ ಸರವನ್ನು ಎಳೆದುಕೊಂಡು ಓಡಲು ಪ್ರಯತ್ನಿಸಿದಾಗ ಸಾರ್ವಜನಿಕರು ಹಿಡಿದು ವಿಚಾರಿಸಲಾಗಿ ಕುಂಪಲ ವಾಸಿ ಕಾರ್ತಿಕ್ ಎಂಬುದಾಗಿರುತ್ತದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.03.2014 ರಂದು ಮಧ್ಯಾಹ್ನ ಸುಮಾರು 12.30 ಗಂಟೆಯಿಂದ ಮಧ್ಯಾಹ್ನ ಸುಮಾರು 14.30 ಗಂಟೆಯ ಮಧ್ಯಾವಧಿಯಲ್ಲಿ  ಯಾರೋ ಕಳ್ಳರು ಮಂಗಳೂರು ನಗರದ ಕಂಕನಾಡಿ ಗ್ರಾಮದ ನಾಗೂರಿ  ಗುಡ್ಡೆತೋಟ ಎಂಬಲ್ಲಿರುವ ಪಿರ್ಯಾಧಿದಾರರಾದ ಶ್ರೀ.ಕೃಷ್ಣ ಶೆಟ್ಟಿ ಎಂಬವರ ಮನೆಯ ಬಾಗಿಲಿನ ಬೀಗವನ್ನು ಬಲಾತ್ಕಾರವಾಗಿ ತೆಗೆದು ಒಳ ಪ್ರವೇಶಿಸಿ ಬೆಡ್ರೂಮ್‌‌ಗಳಲ್ಲಿದ್ದ ಒಟ್ಟು ಮೂರು ಕಬ್ಬಿಣದ ಕಪಾಟುಗಳ ಬೀಗಗಳನ್ನು ಕೂಡಾ ಬಲಾತ್ಕಾರವಾಗಿ ತೆಗೆದು ಸೆಲ್ಫ್‌‌‌ಗಳಲಿದ್ದ ರೂಪಾಯಿ 20,000/- ನಗದು ಹಣ ಹಾಗೂ 30 ಗ್ರಾಮ್‌‌‌ ತೂಕದ ಕಿವಿಯ  ಬೆಂಡೋಲೆ, ಉಂಗುರ ಹಾಗೂ ಚಿನ್ನದ ಸರಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಚಿನ್ನಾಭರಣ ಹಾಗೂ ನಗದು ಹಣದ ಒಟ್ಟು ಮೌಲ್ಯ ಸುಮಾರು 95,000 ಆಗಬಹುದು.

No comments:

Post a Comment