Monday, March 3, 2014

Daily Crime Reports 02-03-2014

ದೈನಂದಿನ ಅಪರಾದ ವರದಿ.

ದಿನಾಂಕ 02.03.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

5

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ರಫೀಕ್ರವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ 2ನೇ ಘಟಕದಲ್ಲಿ ತಾಂತ್ರಿಕ ಸಹಾಯಕನಾಗಿ ಕೆಲಸಮಾಡಿಕೊಂಡಿದ್ದು, ದಿನಾಂಕ 27-02-2014ರಂದು ಬೆಳಿಗ್ಗೆ 08-00 ಗಂಟೆ ಸಮಯಕ್ಕೆ ಎಂದಿನಂತೆ 2ನೇ ಘಟಕಕ್ಕೆ ಕರ್ತವ್ಯದ ಬಗ್ಗೆ ಹೋಗಿದ್ದು, ಬೆಳಿಗ್ಗೆ 11-00 ಗಂಟೆ ತನಕ ಅಲ್ಲಿ ಕರ್ತವ್ಯ ನಿರ್ವಹಿಸಿ, ನಂತರ ಟೈಯರ್ ರಿಪೇರಿಗೆ ಸಂಬಂಧಿಸಿದ ವಾಹನವನ್ನು ತೆಗೆದುಕೊಂಡು ಕೆ.ಎಸ್.ಆರ್‌.ಟಿ.ಸಿ. 1ನೇ ಘಟಕಕ್ಕೆ ಬಂದಿದ್ದು, ಅಲ್ಲಿ ಸದ್ರಿ ವಾಹನದ 6 ಟೈಯರ್ಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸಿ, ಹೊರಡುವಾಗ ಸಂಜೆ ಸುಮಾರು 4-40 ಗಂಟೆ ಸಮಯವಾಗಿದ್ದು, ಅಲ್ಲಿ ಲಾಗ್ಶೀಟ್ಗೆ ಎಂಟ್ರಿ ಮಾಡುವರೇ ಸೆಕ್ಯೂರಿಟಿ ರೂಮಿಗೆ ಹೋಗುತ್ತಾ ಇರುವಾಗ ಹಿಂದುಗಡೆಯಿಂದ ಕೆ..-01 ಎಫ್‌ 8441ನೇ ವೋಲ್ವೋ ಬಸ್ಸನ್ನು ರಿಪೇರಿ ಮಾಡುತ್ತಿದ್ದ ತಾಂತ್ರಿಕ ಸಹಾಯಕ ಸಾಕಿಬ್ ಎಂಬಾತನು ನಿರ್ಲಕ್ಷ್ಯತನದಿಂದ ಸದ್ರಿ ಬಸ್ಸನ್ನು ಯಾವುದೇ ಮುಂಜಾಗರೂಕತೆ ವಹಿಸದೇ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಪಿರ್ಯಾದುದಾರರಿಗೆ  ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಬಲ ಕಾಲಿನ ಪಾದಕ್ಕೆ ತೀವ್ರ ಸ್ವರೂಪದ ರಕ್ತ ಗಾಯವಾಗಿದ್ದು, ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

2.ಬರ್ಕೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪ್ರಕೃತಿ ರೆಮಿಡೀಸ್ಪ್ರೈವೇಟ್ಲಿ ನಲ್ಲಿ ಕೆಲಸಮಾಡಿಕೊಂಡಿದ್ದ ಪಿರ್ಯಾದಿದಾರರಾದ ಶ್ರೀ ಮಹಾರುದ್ರ ಉಲ್ಲಾಸ್ ನಾಯಕ್ ರವರು ಕಂಪನಿನ ವತಿಯಿಂದ ಕಂಪನಿಗೆ ಮಂಗಳೂರಿನ ಬಿಜೈ ಎಂಬಲ್ಲಿನ ಮೆಡಿಟೆಕ್ಪ್ರೈವೇಟ್ಲಿಮಿಟೆಡ್ಕಂಪನಿಯಿಂದ ಬರಬೇಕಾಗಿದ್ದ ರೂಪಾಯಿ 19,00,000 ಹಣವನ್ನು ಸ್ವೀಕರಿಸಲು ದಿನಾಂಕ 28-02-2014ರಂದು ಮದ್ಯಾಹ್ನ 12-00ಗಂಟೆಗೆ ಬಂದಿದ್ದು ಸದ್ರಿ ಕಂಪನಿಯ ಕಛೇರಿಯಲ್ಲಿ ಎಮ್ಡಿಯವರಾದ ಆರೋಪಿತರೊಡನೆ ಹಣದ ಬಗ್ಗೆ ವಿಚಾರಿಸಿದಾಗ ಆರೋಪಿತರು ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಪಿರ್ಯಾದಿದಾರರ ಕುತ್ತಿಗೆ ಹಿಡಿದು ತಡೆದು ಕೈಯಿಂದ ಹೊಡೆದು ಕಾಲಿಂದ ತುಳಿದು ಮುಂದಕ್ಕೆ ಹಣದ ವಿಚಾರದಲ್ಲಿ ಬಂದರೆ ನಿನ್ನ ಕೈ ಕಾಲು ಮುರಿಯುವದಾಗಿ ಬೆದರಿಕೆ ಹಾಕಿರುವದಾಗಿದೆ.

 

3.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2014 ರಂದು ರಾತ್ರಿ 9:30 ಗಂಟೆಯಿಂದ 10:30 ಗಂಟೆಯ ಮಧ್ಯೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಡ್ಕರೆ ಮಾರಿಯಮ್ಮ ದೇವಸ್ಥಾನದ ಬಳಿ ಪಿರ್ಯಾದಿದಾರರಾದ ಶ್ರೀ ಮೈಕಲ್ ಡಿ'ಸೋಜಾ ರವರ ಹೆಂಡತಿಯ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಜಿ-6447 ನ್ನು ಪಿರ್ಯಾದಿದಾರರು ನಿಲ್ಲಿಸಿ ಅವರ ಮಾವನಿಗೆ ಊಟವನ್ನು ನೀಡಿ ವಾಪಾಸು ಬರುವಷ್ಟರಲ್ಲಿ ಸದ್ರಿ ಮೋಟಾರ್ ಸೈಕಲ್ ಕೆಎ-19-ಇಜಿ-6447 ಶಾರ್ಟ್ ಸರ್ಕ್ಯೂಟ್ನಿಂದ ಸುಟ್ಟು ಹೋಗಿದ್ದು, ಇದರಿಂದ ಪಿರ್ಯಾದಿದಾರರಿಗೆ ಸುಮಾರು 55,000/- ರೂ ನಷ್ಟವುಂಟಾಗಿರುತ್ತದೆ.

 

4.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.02.2014 ರಂದು ಪಿರ್ಯಾದುದಾರರಾದ ಶ್ರೀ ಶಶಿಧರ ರವರು ತಮ್ಮ ಮಾವನವರಾದ ಕೃಷ್ಣನ್ ಎಂಬವರ ಜೊತೆ ಅವರ ಮನೆಯ ಕಡೆಗೆ ಹೋಗುವರೇ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ರಾತ್ರಿ ಸಮಯ ಸುಮಾರು 21:30 ಗಂಟೆಗೆ ಮಂಗಳೂರು ನಗರದ ಪೂಂಜಾ ಹೋಟೆಲ್ ಎದುರುಗಡೆ ಅಂದರೆ ಹಳೇಯ ಬಸ್ಸು ನಿಲ್ದಾಣಕ್ಕೆ ಹೋಗುವ ರಸ್ತೆಯ ಮಧ್ಯ ಭಾಗಕ್ಕೆ ತಲುಪಿದಾಗ ಹಂಪನಕಟ್ಟೆ ಕಡೆಯಿಂದ KA-51-B-725ನೇ ನಂಬ್ರದ ಸುಗಮ ಟೂರಿಷ್ಟ್ ಕಂಪೆನಿಗೆ ಸೇರಿದ ಬಸ್ಸನ್ನು ಅದರ ಚಾಲಕರು ಅತೀವೇಗ ಮತ್ತು ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪೂಂಜಾ ಹೋಟೆಲ್ ಎದುರುಗಡೆ ಇರುವ ತಿರುವಿನಲ್ಲಿ ಒಮ್ಮೆಲೆ ಬಸ್ಸನ್ನು ವೇಗವಾಗಿ ತಿರುಗಿಸಿ ಪಿರ್ಯಾದುದಾರರ ಹಿಂದುಗಡೆಯಿಂದ ನಡೆದುಕೊಂಡು ಬರುತ್ತಿದ್ದ ಪಿರ್ಯಾದುದಾರರ ಮಾವ ಕೃಷ್ಣನ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಕೃಷ್ಣನ್ ರವರು ರಸ್ತೆಗೆ ಬಿದ್ದು ಸದ್ರಿ ಬಸ್ಸಿನ ಬಲ ಬದಿಯ ಮುಂಭಾಗದ ಟಯರ್ ಕೃಷ್ಣನ್ ರವರ ಎರಡೂ ಕಾಲುಗಳ ಮೇಲೆ ಹಾದು ಹೋಗಿ ಎಡ ಕಾಲಿನ ಪಾದ ಸಂಪೂರ್ಣ ತುಂಡಾದುದಲ್ಲದೇ ಬಲಕಾಲಿನ ಸೊಂಟದಿಂದ ಕೋಲು ಕಾಲಿನ ತನಕ ತೀವ್ರ ತರಹದ ಜಖಂಗೊಂಡವರನ್ನು ಪಿರ್ಯಾದುದಾರರು ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ನಗರದ .ಜೆ ಆಸ್ಪತ್ರೆಯಲ್ಲಿ ದಾಖಲುಗೊಳಿಸಿರುವುದಲ್ಲದೇ ಸದ್ರಿ ಅಪಘಾತ ಸಂಭವಿಸಿದ ಬಳಿಕ ಬಸ್ಸಿನ ಚಾಲಕರು ಬಸ್ಸನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುವುದು.

 

5. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-02-2014 ರಂದು ಬೆಳಿಗ್ಗೆ ಸುಮಾರು 07-40 ಗಂಟೆಗೆ ಕೆ.ಎಸ್.ಅರ್.ಟಿ.ಸಿ ಓಲ್ವೊ ಬಸ್ಸು ನಂಬ್ರ KA-01-FA-2109 ನೇದನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಹಂಪನ್ ಕಟ್ಟೆಯಿಂದ .ಬಿ ಶೆಟ್ಟಿ ವೃತ್ತದ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿ ಕೊಂಡು ಬರುತ್ತಾ ಹಂಪನ್ ಕಟ್ಟೆ ಕರ್ನಾಟಕ ಬ್ಯಾಂಕ್ ಎದುರು ತಲುಪುವಾಗ ಕರ್ನಾಟಕ ಬ್ಯಾಂಕ್ ಎದುರುಗಡೆಯಿಂದ ರಸ್ತೆಯ ಇನ್ನೊಂದು ಬದಿಗೆ ರಸ್ತೆ ದಾಟುತ್ತಿದ್ದ  ಶ್ರೀಮತಿ ರಾಧ  ಎಂಬವರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು, ತಲೆಗೆ  ಕುತ್ತಿಗೆಗೆ ಗಂಭೀರ ಗಾಯ ಹಾಗೂ ಭುಜಕ್ಕೆ, ಎದೆಗೆ ಗುದ್ದಿದ ಗಾಯ ಗೊಂಡು ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2014 ರಂದು ಸಂಜೆ ಸುಮಾರು 7-45 ಗಂಟೆಗೆ ಸ್ಕೂಟರು ನಂಬ್ರ KA-18-A-9626 ನೇದರ ಸವಾರ ಕುಂಟಿಕಾನ ಕಡೆಯಿಂದ .ಜೆ ಅಸ್ಪತ್ರೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು .ಜೆ. ಅಸ್ಪತ್ರೆಯ ಮೈನ್ ಗೇಟ್ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಪಾದಾಚಾರಿ ಐತ್ತಪ್ಪರವರಿಗೆ ಸ್ಕೂಟರು ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು, ಬಲಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಬಲಕೈಯ ಕಿರುಬೆರಳಿಗೆ ರಕ್ತಗಾಯ ಮತ್ತು ಎದೆಗೆ ಗುದ್ದಿದ ಗಾಯವಾಗಿ .ಜೆ.ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

7.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-02-2014 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ಬಸ್ಸು ನಂಬ್ರ KA-19-AC-33 ನೇದರ ಚಾಲಕನ್ನು ಹಂಪನ್ ಕಟ್ಟೆ ಯಿಂದ ಫಳ್ನೀರು ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಮಲಬಾರ್ ಗೋಲ್ಡ್ ಎದುರು ಒಮ್ಮಲೇ ನಿರ್ಲಕ್ಷತನದಿಂದ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನಲ್ಲಿ ಪ್ರಾಯಾಣಿಕರಾಗಿದ್ದ ಶ್ರೀಮತಿ ವಿನಯ ಹೆಗ್ಡೆ ರವರು ಬಸ್ಸಿನ ಬಾಗಿಲಿನಿಂದ ರಸ್ತೆಗೆ  ಬಿದ್ದು,  ಎಡಕಣ್ಣಿನ ಮೇಲ್ಗಡೆ, ತೀವ್ರ ಸ್ವರೂಪದ ಗುದ್ದಿದ ಗಾಯ ಮತ್ತು ಹಣೆಗೆ ಗುದ್ದಿದ ಗಾಯ ಆಗಿ ಬಲಕಿವಿಯಿಂದ ರಕ್ತ ಬಂದು ಮಂಗಳಾ ಅಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

8.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-03-14 ರಂದು ಬೆಳಿಗ್ಗೆ ಸುಮಾರು 11.40 ಗಂಟೆಗೆ ಬಸ್ಸು ನಂಬ್ರ KA-20 C 3399ನ್ನು ಅದರ ಚಾಲಕ ವಿಲಿಯಂ ಡಿ'ಸೋಜಾ ಎಂಬವರು ಬಸ್ಸನ್ನು ಅಂಬೇಡ್ಕರ್ ವೃತ್ತದ ಬಳಿ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯ ಮುಂಭಾಗದ ಗೇಟಿನ ಬಳಿಯಿರುವ ನಗರಪಾಲಿಕೆ ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಿದ್ದು, ಪ್ರಯಾಣಿಕರು ಬಸ್ನಿಂದ ಇಳಿಯುತ್ತಿದ್ದು, ಶ್ರೀಮತಿ ಲಕ್ಷ್ಮಿ ಎಂಬವರು ಬಸ್ಸಿನ ಮುಂಬಾಗಿಲಿನಿಂದ ಇಳಿಯುತ್ತಿರುವಾಗ ನಿರ್ವಾಹಕನ ಸೂಚನೆಗೂ ಕಾಯದೇ ಒಮ್ಮೆಲೇ ಮುಂದಕ್ಕೆ ಚಲಾಯಿಸಿದ ಪರಿಣಾಮ ಶ್ರೀಮತಿ ಲಕ್ಷ್ಮಿರವರು ಕೆಳಗೆ ಬಿದ್ದಾಗ ಬಸ್ಸಿನ ಹಿಂಭಾಗದ ಚಕ್ರ ಎರಡೂ ಕಾಲು ಮತ್ತು ಸೊಂಟದ ಬಲಭಾಗದ ಮೇಲೆ ಹರಿದು ಹೋಗಿ ಗಂಭೀರ ಗಾಯಗೊಂಡು ಅಂಬೇಡ್ಕರ್  ವ್ರತ್ತದ ಬಳಿ ಇರುವ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿದೆ.

 

9.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 21-02-14 ರಂದು ಮಧ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಫಿಲ್ಸನ್ ಡಿ'ಸೋಜಾ ರವರು ತನ್ನ ಮನೆಯಾದ ಕಿನ್ನಿಗೋಳಿಯಿಂದ ಎಂ ಆರ್ ಪಿ ಎಲ್ ಕಡೆಗೆ ಗೆಳೆಯ ಚೇತನ್ ಕುಮಾರ್ ರವರ ಬಾಬ್ತು ಮೋಟಾರು ಸೈಕಲ್ ಕೆಎ-19ಇಎ-7274ನೇದರಲ್ಲಿ ಸಹ ಸವಾರನಾಗಿ ಪ್ರಯಾಣಿಸಿಕೊಂಡು ಮಧ್ಯಾಹ್ನ 2-30 ಗಂಟೆಗೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆಯ ಹೊಸ ಮಸೀದಿಯ ಬಳಿ, ಇಳಿಜಾರು ರಸ್ತೆಯಲ್ಲಿ ಮೋಟಾರು ಸೈಕಲನ್ನು ಅದರ ಸವಾರ ಚೇತನ್ ಕುಮಾರ್ ರವರು  ಅತೀವೇಗದಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಹೊಂಡವನ್ನು ತಪ್ಪಿಸುವ ಸಲುವಾಗಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಸವಾರನ ಹತೋಟಿ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು, ಸವಾರ ಮತ್ತು ಸಹ ಸವಾರರಿಗೆ ತಲೆಯ ಭಾಗಕ್ಕೆ ಮತ್ತು ಎರಡೂ ಕಾಲಿನ ಮೊಣಗಂಟುಗಳಿಗೆ ಸಾಮಾನ್ಯ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ, . ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು , ಅಲ್ಲಿ ಇರವರನ್ನು ಪರೀಕ್ಷಿಸಿದ ವೈದ್ಯಧಿಕಾರಿಯವರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. 

 

10.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-03-2014 ರಂದು ರಾತ್ರಿ 8-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕ ಪಣಂಬೂರು ಗ್ರಾಮದ ಡಿಕ್ಸಿ ಸಿಂಬ್ಲಾ ಟಿಂಬರ್ ಯಾರ್ಡ್ ಸಾರ್ವಜನಿಕ ಸ್ಥಲದಲ್ಲಿ ಆರೋಪಿಗಳಾದ1 ದೇವಿ ಪ್ರಸಾದ್ (31) 2. ಪ್ರಶಾಂತ (32)  3. ಮನ್ಸೂರ್ (42) . 4. ವಾಸು (28) . 5. ಶಂಶುದೀನ್ (55)  ಮತ್ತು ಜಯಾ ಶೆಟ್ಟಿ.(51) ಇವರುಗಳು ಹಣವನ್ನು ಪಣವಾಗಿಟ್ಟು ಉಲೈ ಪಿದೈ ಜುಗಾರಿ ಆಟ ಆಡುತ್ತಿದ್ದವರನ್ನು ಪಣಂಬೂರು ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀಮತಿ ಭಾರತಿ ರವರು ಮತ್ತು ಸಿಬ್ಬಂದಿಗಳಾದ ಹೆಚ್.ಸಿ. 1807.ಪಿ.ಸಿ. 2137. ಪಿ.ಸಿ. 1025, ಪಿ,.ಸಿ. 658. ನೇಯವರೊಂದಿಗೆ ದಾಳಿ ಮಾಡಿ ಜುಗಾರಿ ಆಟಕ್ಕೆ ಉಪಯೋಗಿಸಿದ 12,000 ರೂಪಾಯಿ ಮತ್ತು 52 ಇಸ್ಪೀಟ್ ಎಲೆ , ಪ್ಲಾಸ್ಟಿಕ್ ಚಾಪೆ ಮತ್ತು ಟಾರ್ಚ್ ಲೈಟ್ ನ್ನು ಸ್ವಾದೀನಪಡಿಸಿ ಕ್ರಮ ಜರಗಿಸಿರುವುದಾಗಿದೆ.

 

11.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-03-2014 ಸಂಜೆ  6-00 ಗಂಟೆಯಿಂದ ರಾತ್ರಿ 12 -00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ರವರ ಬಾಬ್ತು ಮಂಗಳೂರು ನಗರದ ವಾಸ್ ಲೇನ್ ನಲ್ಲಿರುವ ಮನೆ  ನಂಬ್ರ 16-5-367/4 ನೇದರ ಎದುರಿನ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ಮುರಿದು ತೆರೆದು ಮೂಲಕ ಒಳಪ್ರವೇಶಿಸಿ, ಡೈನಿಂಗ್ ರೂಮಿನ ಬಳಿ ಇರುವ ಮಾಸ್ಟರ್ ಬೆಡ್ ರೂಮಿನಲ್ಲಿದ್ದ  ಮರದ ಕಪಾಟುಗಳನ್ನು ಅಲ್ಲೇ ಇದ್ದ ಕೀ ಸಹಾಯದಿಂದ  ತೆರೆದು ಅವುಗಳಲ್ಲಿದ್ದ ವಿವಿಧ ನಮೂನೆಯ ಚಿನ್ನಾಭರಣ, ನಗದು ಹಣ ರೂ.10,000/- ರೂ ಹಾಗೂ ಸುಮಾರು 6,000 ರೂ ಬೆಲೆ ಬಾಳುವ ಟೈಟಾನ್ ಕಂಪೆನಿಯ ವಾಚ್ - 3  ಹೀಗೆ ಒಟ್ಟು ಅಂದಾಜು ರೂ.96,000/- ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ

 

12.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಭರತ್ ರಾಜ್ @ ಭರತ್ ಎಂಬವರು ಮಂಗಳೂರಿನ ಶ್ರೀ ರಾಮ್ ಪ್ರಸಾದ್ ಅರ್ತ್ ಮೂವ ರ್ಸ್ ಎಂಬ ಕಂಪೆನಿಯಲ್ಲಿ  ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದವರು, ನಿನ್ನೆ ದಿನಾಂಕ 28-02-2014 ರಂದು ಕೆಲಸ ಮುಗಿಸಿಕೊಂಡು ಮಂಗಳೂರಿನ ಅತ್ತಾವರದ ಅಯ್ಯಪ್ಪ ಮಂದಿರದ ಬಳಿ ರಾತ್ರಿ 8-15 ಗಂಟೆಗೆ ನಿಂತು ಕೊಂಡಿದ್ದಾಗ, ಪಿರ್ಯಾದಿದಾರರಿಗೆ ಪರಿಚಯದ ಅಶೋಕ ಎಂಬಾತನು ಅವರು ನಿಂತಿದ್ದಲ್ಲಿಗೆ ಬಂದು, ಅವರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಆತನ ಕೈಯಲ್ಲಿದ್ದ  ಒಂದು ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಲು ಒಮ್ಮೆಲೇ ಮುಂದಾದಾಗ, ಪಿರ್ಯಾದಿದಾರರು ತನ್ನ ಎರಡೂ ಕೈಗಳನ್ನು ಅಡ್ಡ ಹಿಡಿದ ಪರಿಣಾಮ, ಅವರ ಎಡಕೈಗೆ ತೀವ್ರ ತರಹದ ರಕ್ತಗಾಯ, ಎಡಕೈಗೆ ಮೂಳೆ ಮುರಿತದ ಗಾಯವಾಗಿರುವುದಲ್ಲದೇ, ಬಲಕೈಯ ಕಿರು ಬೆರಳಿಗೆ ಕೂಡಾ ರಕ್ತಗಾಯವಾಗಿದ್ದು, ಹಲ್ಲೆ ನಡೆಸಿದ ಬಳಿಕ  ಅಶೋಕನು :ಪಿರ್ಯಾದಿದಾರರನ್ನು ಉದ್ದೇಶಿಸಿ "ನನ ಎನ್ನ ವಿಚಾರಡ್ ಮದ್ಯಗ್ ಬತ್ತ್ ದ್ ತರೆ ಪಾಡ್ಆಂಡಾ ನಿನನ್ ಜೀವ ಸಹಿತ ಬುಡ್ಪುಜಿ" ಎಂಬುದಾಗಿ ಜೀವ ಬೆದರಿಕೆ ಹಾಕಿದ್ದು, ಈ ಘಟನೆಗೆ ಪಿರ್ಯಾದಿದಾರರ ಗೆಳೆಯನಾದ ಶಶಿಕುಮಾರ್ ಎಂಬವರು ಆರೋಪಿ ಅಶೋಕನಿಗೆ  ಸ್ವಲ್ಪ ಹಣ ಕೊಡಲು ಬಾಕಿ ಇದ್ದು, ಹಣದ ವಿಚಾರದಲ್ಲಿ ಪಿರ್ಯಾದಿದಾರರು ಅಶೋಕನಲ್ಲಿ ಶಶಿಕುಮಾರನ ಪರವಾಗಿ ಮಾತನಾಡಿದ ದ್ವೇಷದಿಂದ  ಕೃತ್ಯ ವೆಸಗಿರುವುದಾಗಿದೆ.

 

13.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-02-2014 ರಂದು 14-00 ಗಂಟೆಯಿಂದ 15-30 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಮಂಗಳಾದೇವಿಯಲ್ಲಿರುವ ಪಿರ್ಯಾದಿದಾರರಾದ ಶ್ರೀ ರಾಮಕೃಷ್ಣ ಜೆ. ಸೆರ್ವೆಗರ್ ರವರ ಬಾಬ್ತು "ಸಂದೀಪ್" ಎಂಬ ಹೆಸರಿನ ಡೋರ್ ನಂ. 23-9-569-5 ನಂಬ್ರದ ಮನೆಯ ಕಂಪೌಂಡಿನಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ ಅಂದಾಜು ರೂ. 35000/- ರೂಪಾಯಿ ಬೆಲೆ ಬಾಳುವ ಕಪ್ಪು ಬಣ್ಣದ 2012ನೇ ಮೋಡಲ್ ಕೆಎ 19 ಇಇ 6212 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

14.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜಿ. ವೆಂಕಟರಾಮನ್ ರವರು MANAV Coating & Consultant ಎಂಬ ಹೆಸರಿನ ಚೆನ್ನೈ ಮೂಲದ ಕಂಪನಿಯು ಮಂಗಳೂರಿನಲ್ಲಿ OMPL ನಲ್ಲಿ M/S ತೆರ್ಮ್ಯಾಕ್ಸ್ ಲಿ. ಕಂಪನಿಯ ಪಿ ನಂಬ್ರ 1000020175 & 10000201377 ಪರ್ಚೆಸ್ ಆರ್ಡ್ರ್ ನಂಬ್ರ ಪ್ರಕಾರ fire proofing contract ಮಾಡಿಕೊಂಡಿದ್ದಾಗಿದೆ. ಪಿರ್ಯಾದಿದಾರರ ಮೇಲ್ಕಂಡ ಕಂಪನಿಯ ಹೆಸರು ಹಾಳು ಮಾಡಲು ಹಾಗೂ ಕಂಪನಿಯ ಹಣವನ್ನು ಕಸಿಯಲು ಸದ್ರಿ ಕಂಪನಿಯಲ್ಲಿ ಕನ್ಸ್ಲ್ಟಂಟ್ ಆಗಿರುವ ಆಪಾದಿತ ರಾಜೇಶ್ ಹಾಗೂ ಬಿಜು ವರ್ಗಿಸ್ ರವರ ಸೂಚನೆಯಂತೆ ದಿನಾಂಕ 23-10-2013 ರಂದು ಆಪಾದಿತೆ ಅಲ್ಮನ್ ರೋಬೊ ಎಂಬವರು ಸದ್ರಿ ಕಂಪನಿಯ letter ate ನ್ನು ಉಪಯೋಗಿಸಿ authorized letter ತಯಾರಿಸಿ ಅದರಲ್ಲಿ ಆಪಾದಿತ ಶಿವಾಜಿ ಹೇಟ್ ರವರಿಗೆ ಚೆಕ್ ನೀಡುವಂತೆ M/S ತೆರ್ಮ್ಯಾಕ್ಸ್ ಲಿ.ಕಂಪನಿಗೆ ಮಾಹಿತಿ ನೀಡಿದಂತೆ ಅವರು ನೀಡಿದ ಚೆಕ್ ನಗದು ಹಣ ಸುರತ್ಕಲ್ ಶಾಖೆಯ ಇಂಡಿಯನ್ ಓವರ್ಸಿಸ್ ಬ್ಯಾಂಕಿನಲ್ಲಿ ಠೇವಣಿಯಾಗಿದ್ದು ಮಾಹಿತಿಯನ್ನು M/S ತೆರ್ಮ್ಯಾಕ್ಸ್ ಲಿ. ನೀಡಿರುತ್ತದೆ. ಆಪಾದಿತ ಸುನಿಲ್ ಅಶೋಕ್ ರವರು ದಿನಾಂಕ 13-11-13 ರಂದು ತಾನು MANAV Coating & Consultant ಕಂಪನಿಯ ಪ್ರೊಪ್ರೈಟರ್ ಎಂದು ಕಂಪನಿಯ ನಕಲಿ ಸೀಲ್ ತಯಾರಿಸಿ ಸಹಿ ಮಾಡಿದ ಪ್ರತಿಯನ್ನು ನೀಡಿ ರಂಜಿತ್ ಪರಿಚಯ ಆಗಿ A/C No 43 ನ್ನು ತೆರೆದು ಪಡೆದ ಚೆಕ್ ಅನ್ನು ರಾಜೇಶ್ ಕೆಕೆ ರವರು ನಗದೀಕರಣಗೊಳಿಸಿರುತ್ತಾರೆ.

 

15.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-03-2014 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಮಲ್ಲಿಕಾ ರವರು ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಮನೆಯ ಶೌಚಾಲಯದ ಕಿಟಕಿಯಲ್ಲಿಟ್ಟು  ಕುತ್ತಾರ್ ಎಂಬಲ್ಲಿಗೆ ಹೋಗಿದ್ದು ಅವರ ತಮ್ಮ ಮಿಥೇಶ್ ಇವರು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದಾಗ ಮನೆ ಎದುರಿನ ಬಾಗಿಲನಲ್ಲಿ ಬೀಗದ ಕೀ ಇದ್ದು ಒಳಗೆ ಹೋಗಿ ನೋಡಿದಾಗ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವಾಗಿರುವ ಬಗ್ಗೆ ಕಂಡು ಬಂದಿದ್ದು ಯಾರೋ ಕಳ್ಳರು ದಿನಾಂಕ 01-03-14 ರಂದು ಬೆಳಿಗ್ಗೆ 11-00 ಗಂಟೆಯಿಂದ ಮದ್ಯಾಹ್ನ 1-00 ಗಂಟೆ ಮದ್ಯೆ ಪಿರ್ಯಾದಿದಾರರ ಮನೆಯ ಶೌಚಾಲಯದಲ್ಲಿ ಇಟ್ಟಿದ್ದ ಬೀಗದ ಕೀಯನ್ನು ಬಳಸಿ ಬಾಗಿಲು ತೆಗೆದು ಮನೆಯ ಒಳಗೆ ಹೋಗಿ ಕಪಾಟಿನಲ್ಲಿದ್ದ ಸುಮಾರು 3 ಲಕ್ಷ ಮೌಲ್ಯದ ಸುಮಾರು 125 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

16.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಲೀಶನ್ ಶೇಖ್ ಮೊಹಮ್ಮದ್ ರವರು ತನ್ನ ಮನೆಯಾದ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಒಡ್ಡೂರಿನ ಮತೇರಾ ಮಂಜಿಲ್ ಎಂಬಲ್ಲಿರುವಾಗ  ದಿನಾಂಕ 20/02/2014 ರಂದು 12.13 ಗಂಟೆಗೆ ಮತ್ತು 13.12 ಗಂಟೆಗೆ +128095878 ಮತ್ತು ದಿನಾಂಕ 27/02/2014 ರಂದು 01.14 ಗಂಟೆಗೆ +2774426 ನೇ ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂ. 9964642001 ನೇದಕ್ಕೆ ಪದೇ ಪದೇ ಫೋನ್ ಕರೆಗಳು ಬರುತ್ತಿದ್ದು, ಅದರಲ್ಲಿ ಮಾತನಾಡುವ ವ್ಯಕ್ತಿ ಪಿರ್ಯಾದಿದಾರರಿಗೆ ಮತ್ತು ಅವರ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರಿಗೆ " ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ " ಎಂದು ಜೀವ ಬೆದರಿಕೆ ಒಡ್ಡಿರುವುದಾಗಿದೆ.

 

17.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 1-3-2014 ರಂದು ಸಮಯ ಸುಮಾರು ರಾತ್ರಿ 12-00 ಗಂಟೆಯಿಂದ ಬೆಳಗಿನ ಜಾವ 05-00 ಗಂಟೆಯ ಮಧ್ಯೆ ಉಚ್ಚಿಲ ಗುಡ್ಡೆ ಎಂಬಲ್ಲಿರುವ ರೆಹಮಾನಿಯಾ ಮಸೀದಿಗೆ ಯಾರೋ ಕಿಡಿಗೇಡಿಗಳು ಸೋಡಾ ಬಾಟಲಿಯನ್ನು ಎಸೆದು ಮಸಿದಿಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ ಅಂದಾಜು ಮೌಲ್ಯ ಸುಮಾರು 10,000 ರೂ ಸೊತ್ತನ್ನು ಹಾನಿ ಮಾಡಿರುತ್ತಾರೆ.

 

18.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-03-2014 ರಂದು ಪಿರ್ಯದಿದಾರರಾದ ಶ್ರೀ ಚಂದ್ರಶೇಖರ ಕೆ.ಪಿ. ರವರು ಕೊಂಡಾಣ ಕ್ರಾಸ್ ರಸ್ತೆಯ ಗಟ್ಟಿ ಮನೆಯ ಪಕ್ಕದಲ್ಲಿರುವ ಅವರ ಅಣ್ಣನ ಅಂಗಡಿಯ ಬಳಿ ನಿಂತುಕೊಂಡಿರುವ ಸಮಯ ಸುಮಾರು 3:15 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಪರಿಚಯದ ಕರುಣಾಕರ ರವರು ಅವರ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ರಸ್ತೆಯ ಬದಿಯಲ್ಲಿರುವ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿ ಕಡಿದು ತುಂಡಾಗಿ ನಡೆದುಕೊಂಡು ಹೋಗುತ್ತಿದ್ದ ಕರುಣಾಕರ ರವರ ಮೇಲೆ ಬಿದ್ದು, ಇದರ ಪರಿಣಾಮ ವಿದ್ಯುತ್ ಅವರ ಮೇಲೆ ಹರಿದು ಮೈ ಸುಟ್ಟು ಮೃತಪಟ್ಟಿರುವುದಾಗಿದೆ.  ಕೊಂಡಾಣ ಪರಿಸರದವರು ಹೈಟೆನ್ಸನ್ ವಯರ್ಗಳನ್ನು ಅಳವಡಿಸುವ ಸಮಯ ಮೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ವಯರ್ ತುಂಡಾಗಿ ಪ್ರಾಣ ಹಾನಿ ಸಂಭವಿಸಬಹುದೆಂದು ಹಲವು ಬಾರಿ ತಿಳಿಸಿದರೂ ಮೆಸ್ಕಾಂ ಅಧಿಕಾರಿಗಳ ತೀವ್ರ ನಿರ್ಲಕ್ಷತನದಿಂದ ಘಟನೆ ಸಂಭವಿಸಿರುವುದಾಗಿದೆ.

No comments:

Post a Comment