Friday, February 14, 2014

Daily Crime Reports 14-02-2014

ದೈನಂದಿನ ಅಪರಾದ ವರದಿ.

ದಿನಾಂಕ 14.02.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2014 ರಂದು 01:30 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಬಸ್ ನಿಲ್ದಾಣದ ಬಳಿ,  ಪಿರ್ಯಾದಿದಾರರಾದ ಶ್ರೀ ಪ್ರವೀಣ್ ರೊಡ್ರಿಗಸ್ ರವರು ತನ್ನ ಸ್ನೇಹಿತ ಜೋಯಿಸ್ಟರ್ ಎಂಬಾತನೊಂದಿಗೆ ಅಸೈಗೋಳಿಯಲ್ಲಿ ನಡೆಯುತ್ತಿದ್ದ ಕೊರಗಜ್ಜನ ಕೋಲವನ್ನು ನೋಡಿ ಮನೆ ಕಡೆಗೆ ವಾಪಾಸು ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳಾದ ಹರ್ಷರಾಜ್, ಶ್ರೀನಾಥ್, ಕಿಶೋರ್, ಚೇತನ್, ದೀಪಕ್, ಆಶಿತ್ ಎಂಬವರು ಅಕ್ರಮಕೂಟ ಸೇರಿ ಸಮಾನ ಉದ್ದೇಶದಿಂದ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಆರೋಪಿ ಹರ್ಷರಾಜ್ ಎಂಬಾತನು ಪಿರ್ಯಾದಿದಾರರ ಅಂಗಿಯ ಕಾಲರ್ ಪಟ್ಟಿ ಹಿಡಿದು, ಅವ್ಯಾಚ ಶಬ್ದಗಳಿಂದ ಬೈದು, ಕೈಯಿಂದ ಕೆನ್ನೆಗೆ ಹೊಡೆದು, ಹಲ್ಲೆ ನಡೆಸಿದ್ದಲ್ಲದೆ ಉಳಿದ ಆರೋಪಿಗಳೂ ಕೂಡಾ ಕೈಯಿಂದ, ಕಾಲಿನಿಂದ ಹಲ್ಲೆ ನಡೆಸಿ ಮತ್ತು ಆರೋಪಿ ಪೈಕಿ ಶ್ರೀನಾಥ್ ಎಂಬವರು ಬೆದರಿಕೆ ಹಾಕಿರುತ್ತಾರೆ. ಗಾಯಗೊಂಡ ಪಿರ್ಯಾದಿದಾರರು ಮನೆಯಲ್ಲಿ ವಿಶ್ರಾಂತಿ ಪಡೆದು ನೋವು ಮರುಕಳಿಸಿದ್ದರಿಂದ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 10-02-2014 ರಂದು ಪಿರ್ಯಾದುದಾರರಾದ ಶ್ರೀ ನಟರಾಜ್ ರವರು ತಮ್ಮ ಧನಿಯವರಾದ ಪುಷ್ಪರಾಜ್ಜೈನ್ರವರನ್ನು ಅವರ ಕಾರು ನಂಬ್ರ KA-19-MB-9818 ನೇದರಲ್ಲಿ ಕರೆದುಕೊಂಡು ಬೋಳೂರು ಸುಲ್ತಾನ್ಬತ್ತೇರಿ, ಉರ್ವಾಮಾರ್ಕೆಟ್  ಕಡೆಯಿಂದ ಲೇಡಿಹಿಲ್ಕಡೆಗೆ ಚಲಾಯಿಸಿಕೊಂಡು ಬರುತ್ತಾ, ಸಮಯ ರಾತ್ರಿ 21:15 ಗಂಟೆಗೆ ಲೇಡಿಹಿಲ್ಚರ್ಚ್ಎದುರುಗಡೆಗೆ ತಲುಪಿದಾಗ, ಲೇಡಿಹಿಲ್ ಕಡೆಯಿಂದ  ಉರ್ವಮಾರ್ಕೆಟ್ಕಡೆಗೆ   KA-19-EF-8158 ನೇ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಬಾಲಕೃಷ್ಣ ಸನಿಲ್ಎಂಬವರು ಅಮಲು ಪದಾರ್ಥ ಸೇವಿಸಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಎಡಬದಿಯ ಹೆಡ್ಲೈಟ್ಗೆ ಡಿಕ್ಕಿ ಹೊಡೆದು ಮೋಟಾರು ಸೈಕಲ್ಸಮೇತ ರಸ್ತೆಗೆ ಬಿದ್ದು, ಕಾಲಿಗೆ, ಹೊಟ್ಟೆಗೆ, ಕೈಗೆ ಗಾಯವಾದ್ದವರನ್ನು ಪಿರ್ಯಾದಿದಾರರು ಮತ್ತು ಪುಷ್ಪರಾಜ್ಜೈನ್ರವರು ಉಪಚರಿಸಿ ವಿಚಾರಿಸಿದ್ದಲ್ಲಿ, ತನ್ನನ್ನು ಮಠದಕಣಿಯಲ್ಲಿರುವ ಗ್ಲೋಬಲ್ಆಸ್ಪತ್ರೆಗೆ ದಾಖಲು ಮಾಡುವಂತೆ ತಿಳಿಸಿದ್ದರಿಂದ ಸದ್ರಿ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಸದ್ರಿ ಬಾಲಕೃಷ್ಣ ಸನಿಲ್ರವರನ್ನು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು .ಜೆ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ ದಿನ ದಿನಾಂಕ 12-02-2014 ರಂದು   17:45 ಗಂಟೆಗೆ ಮೃತಪಟ್ಟದ್ದಾಗಿರುತ್ತದೆ.

 

3.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11/02/2014 ರಂದು ರಾತ್ರಿ 10-30 ಗಂಟೆ ಸಮಯಕ್ಕೆ ಕೆ. 19/3656 ನಂಬ್ರದ ಮಹೀಂದ್ರ ಮ್ಯಾಕ್ಸಿಕ್ಯಾಬ್ ವಾಹನವನ್ನು ಅದರ ಚಾಲಕ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕುಡೂಂಬೂರು ಕಡೆಯಿಂದ ಬೈಕಂಪಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಕೆ. 19 ಕೆ/8933 ಮೋಟಾರು ಸೈಕಲ್ ಗೆ ತೀರಾ ಎಡ ಬದಿ ಬಂದು ಬಲವಾಗಿ ಡಿಕ್ಕಿಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ರಸ್ತೆಗೆ ಬಿದ್ದು  ಮೋಟಾರು ಸೈಕಲ್ ಸವಾರನ ಎಡ ಕೈ ಮತ್ತು ಎಡ ಕಾಲುಗಳಲ್ಲಿ ಮೊಳೆ  ಮುರಿತದ ರಕ್ತ ಗಾಯ ಮತ್ತು ಎದೆಗೆ ಗುದಿದ್ದ ತರಹದ ಗಾಯ ಉಂಟುಮಾಡಿರುತ್ತಾರೆ.

 

4.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಎ.ಕೆ. ಆದಿಲ್ ರವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಇರುವ ತನ್ನ ಬಾಬ್ತು .ಕೆ ಪ್ಲೈವುಡ್ ಕಂಪೆನಿಯ ಗೊಡಾಮಿನಲ್ಲಿ ಪ್ಲೈವುಢನ್ನು ತಯಾರಿಸಿ ಸ್ಟಾಕ್ ಇರಿಸಿದ್ದು,  ಪಿರ್ಯಾದಿದಾರರ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಓರಿಸ್ಸಾ ರಾಜ್ಯದ ಭುನೇಶ್ವರ್ ನಿವಾಸಿಯಾದ ದೀಲಿಫ್ ಕುಮಾರ ಸಾಹು @ ಟುಟು ಎಂಬವರು ಗೋಡಾಮಿನ ಎಲ್ಲಾ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದು ಇವರು ದಿನಾಂಕ 02/02/2014 ರಂದು ಕೆಲಸಕ್ಕೆ ಬಾರದೆ ಇದ್ದು ಮೊಬೈಲ್ ಫೋನ್ ಗಳನ್ನು ಕೂಡಾ ಸ್ವೀಚ್ ಆಫ್ ಮಾಡಿದ್ದು ಇರಿಂದ ಸಂಶಯಗೊಂಡ ಪಿರ್ಯಾದಿದಾರರು ಸ್ಟಾಕ್ ಚೆಕ್ ಮಾಡಿದಾಗ ಕಂಪೆನಿಯಲ್ಲಿ ತಯಾರಿಸಿ ಗೋಡಾಮಿನಲ್ಲಿ ಸ್ಟಾಕ್ ಇರಿಸಿದ್ದ 42000 sqft ಸುಮಾರು 32 ಲಕ್ಷ ರೂಪಾಯಿ ಪ್ಲೈವುಢ್ ಹಾಗೂ ಪ್ಯಾಕ್ಟರಿಯ ಕ್ಯಾಶ ಕೌಂಟರ್ ನಲ್ಲಿ ಇದ್ದ 50000/- ರೂಪಾಯಿಗಳು ಕೂಡಾ ಕಾಣೆಯಾಗಿದ್ದು ಇದನ್ನು ಅವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ  ದೀಲಿಫ್ ಕುಮಾರ ಸಾಹು @ ಟುಟು ಎಂಬವರು ದಿನಾಂಕ 02/02/2014 ಮೊದಲು ಅಪ್ರಮಾಣಿಕ ತನದಿಂದ ಪಿರ್ಯಾದಿದಾರರ ಗಮನಕ್ಕೆ ಬಾರದೆ ಕಳವುಗೈದು  ಮಾರಾಟ ಮಾಡಿ ಕೆಲಸಕ್ಕೆ ಬಾರದೆ ತಪ್ಪಿಸಿಕೊಂಡಿರುತ್ತಾರೆ ಎಂಬುದಾಗಿ ಗುಮಾನಿ ಇರುತ್ತದೆ.

 

5.ಮಂಗಳೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-02-204 ರಂದು ರಾತ್ರಿ ಸುಮಾರು 10-30 ಗಂಟೆಗೆ ಮಂಗಳೂರು ನಗರದ ಕುಲಶೇಖರ ಕೈಕಂಬ ಎಂಬಲ್ಲಿ ಭಾರತ್ ಪೆಟ್ರೋಲ್ ಬಂಕ್ ಬಳಿಯಿರುವ ಟೆಂಟ್ ಹಾಕಿದ ಮನೆಯಲ್ಲಿ ಪಿರ್ಯಾದುದಾರರಾದ ಶ್ರೀ ಗುಂಡಾ ರವರು ಮತ್ತು ಅವರ ಹೆಂಡತಿ ರತ್ನಾಳೊಂದಿಗೆ ಮಾತನಾಡುತ್ತಿರುವ ಸಮಯ ಮನೆಯ ಪಕ್ಕದ ವಾಸಿಗಳಾದ ರಾಜೇಶ್ ಮೀನಾ, ಪುಟ್ಟ, ಅಣ್ಣಿ ಎಂಬವರು ಸೇರಿ ಫಿರ್ಯಾದಿದಾರರಿಗೆ & ಅವರ ಹೆಂಡತಿ ರತ್ನಾಳಿಗೆ ಮರದ ಸೋಂಟೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿರುವುದಾಗಿದೆ.

 

6.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-12-13 ರಂದು 08-30 ಗಂಟೆಯಿಂದ ದಿನಾಂಕ 12-02-2014 ರಂದು ಸಂಜೆ 19-00  ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಎದುರುಗಡೆ ಬಸ್ಸು ನಿಲ್ದಾಣದ ಬಳಿಯಲ್ಲಿ  ಫಿರ್ಯಾದುದಾರರಾದ ಶ್ರೀ ವಿವಿಯನ್ ಡಿ'ಸೋಜಾ ರವರು ಪಾರ್ಕ್ ಮಾಡಿದ್ದ ಫಿರ್ಯಾದುದಾರರ ಆರ್.ಸಿ ಮಾಲಕತ್ವದ 2013 ನೇ ಮೊಡೆಲ್ ಕೆಂಪು ಬಣ್ಣದ ಅಂದಾಜು ರೂ 46000/- ಬೆಲೆ ಬಾಳುವ KA 19 ಇಜೆ 1105 ನೊಂದಣಿ ಸಂಖ್ಯೆಯ ಬಜಾಜ್  ಕಂಪೆನಿಯ ಪಲ್ಸರ್   ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ವಿಚಕ್ರವಾಹನದ ಟೂಲ್ಸ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂದಪಟ್ಟ R.C ಹಾಗೂ  Insurance ಝೆರಾಕ್ಸ್ ಪ್ರತಿ ಕೂಡಾ ಇದ್ದು, ಕಳವಾದ ದ್ವಿಚಕ್ರವಾಹವನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

7.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-12-13 ರಂದು 21-00 ಗಂಟೆಯಿಂದ ದಿನಾಂಕ 17-12-2013 ರಂದು ಬೆಳಿಗ್ಗೆ  10-00  ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿರುವ Nyazik Mobile Shop ಎದುರುಗಡೆ   ಫಿರ್ಯಾದುದಾರರಾದ ಶ್ರೀ ಹಮ್ಜಾ ಎನ್.ಎ. ರವರು ಪಾರ್ಕ್ ಮಾಡಿದ್ದ ಫಿರ್ಯಾದುದಾರರ ಆರ್.ಸಿ. ಮಾಲಕತ್ವದ 2001 ನೇ ಮೊಡೆಲ್ ಹಸಿರು  ಬಣ್ಣದ ಅಂದಾಜು ರೂ 12000/- ಬೆಲೆ ಬಾಳುವ       KA 19 ಎಲ್  5713 ನೊಂದಣಿ ಸಂಖ್ಯೆಯ Suzuki samrai ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ವಿಚಕ್ರವಾಹನದ ಟೂಲ್ಸ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂದಪಟ್ಟ R.C ಹಾಗೂ  Insurance ಝೆರಾಕ್ಸ್ ಪ್ರತಿ ಕೂಡಾ ಇದ್ದು, ಕಳವಾದ ದ್ವಿಚಕ್ರವಾಹವನ್ನು ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ

 

8.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ಕುಂಪಲ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಪಿರ್ಯಾದಿ ಶ್ರೀ. ಭವಾನಿಶಂಕರಶಾಂತಿ ಎಂಬವರು ದಿನಾಂಕ 12/02/2014 ರಂದು ಎಂದಿನಂತೆ ರಾತ್ರಿ 8-00 ಗಂಟೆಗೆ ದೇವಸ್ಥಾನದ ಪೂಜಾ ಕಾರ್ಯಕ್ರಮದ ಬಳಿಕ ಬಾಗಿಲನ್ನು ಮುಚ್ಚಿ ಬೀಗ ಹಾಕಿ ತನ್ನ ಮನೆ ಹೋಗಿದ್ದು, ದಿನಾಂಕ 13/02/2014 ರಂದು ಬೆಳಿಗ್ಗೆ ಸುಮಾರು 5-30 ಗಂಟೆಗೆ ದೇವಸ್ಥಾನಕ್ಕೆ ಬಂದು ಬಾಗಿಲು ತೆರೆದು ಒಳಗೆ ಹೋದಾಗ ದೇವಸ್ಥಾನದ ಶಿವನ ಗುರ್ಭಡಿಯ ಎದುರಿದ್ದ ಕಾಣಿಕೆ ಡಬ್ಬಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗರ್ಭಗುಡಿಯನ್ನು ನೋಡಲಾಗಿ ಶಿವದೇವರ ಬೆಳ್ಳಿಯ ಮುಖವಾಡ, ಕಣ್ಣುಗಳು, ಗಣಪತಿದೇವರ ಗರ್ಭಗುಡಿಯ ದೇವರ ಮೂರ್ತಿಯಲ್ಲಿದ್ದ ಬೆಳ್ಳಿಯ ಮುಖವಾಡ, ಪ್ರಭಾವಳಿ ಮತ್ತು ದುರ್ಗಾದೇವಿಯ ಗರ್ಭಡಿಯಲ್ಲಿ ದೇವರಿಗೆ ತೊಡಿಸಲಾದ ಚಿನ್ನದ ಚೈನು, ಕರಿಮಣಿಸರ, (ಸುಮಾರು ಎರಡುವರೆ ಪವನ್ತೂಕದ್ದು), ಚಿನ್ನ ಲೇಪಿತ ಬೆಳ್ಳಿಯ ಮುಖವಾಡ, ಪ್ರಭಾವಳಿ ಮತ್ತು ಮೇಜಿನ ಡ್ರವರ್ನಲ್ಲಿದ್ದ ನಗದು  ರೂಪಾಯಿ 85000/- ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತಿನ ಒಟ್ಟು ಮೌಲ್ಯ ಅಂದಾಜು 3 ಲಕ್ಷ ರೂಪಾಯಿ ಆಗಬಹುದು.

 

9.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.02.2014 ರಂದು ಪಿರ್ಯಾದಿದಾರರಾದ ಡಾ. ಸತೀಶ್ ಎ.ಪಿ. ರವರ ಪತ್ನಿ ವಿನಯ ಮಾವ ವೆಂಕಟ್ರಮಣ ಭಟ್‌‌ ಅತ್ತೆ ಕಲಾವತಿ ಎಂಬವರು ಮಾರುತಿ ಓಮ್ನಿ ಕಾರು ನಂಬ್ರ: ಕೆಎ-21-ಎಂ-1400 ನೇ ದರಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಹೊರಟಿದ್ದು ಸದ್ರಿ ಕಾರನ್ನು ಚಾಲಕ ಬಾಲಕೃಷ್ಣ ರವರು ಮಧ್ಯಾಹ್ನ 3.15 ಗಂಟೆ ವೇಳೆಗೆ ಅಡ್ಯಾರು ಸಂತೋಷ್ಹೇರ್ಕಟ್ಟಿಂಗ್‌‌ ಸೆಲೂನ್‌‌ ಸಮೀಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಕಾರಿನ ಮೇಲಿನ ಹತೋಟಿ ಕಳೆದುಕೊಂಡು ರಾಹೆ-73 ದಕ್ಷಿಣಬದಿಯಲ್ಲಿರುವ ಕಬ್ಬಿಣದ ತಡೆಬೇಲಿಗೆ ಡಿಕ್ಕಿಹೊಡೆದುದರಿಂದ ಕಾರು ಜಖಂಗೊಂಡಿದ್ದಲ್ಲದೆ ಕಾರಿನಲ್ಲಿದ್ದ ಶ್ರೀಮತಿ ವಿನಯ ರವರಿಗೆ ಸಾಮಾನ್ಯ ಸ್ವರೂಪದ ಮತ್ತು ಕಲಾವತಿಯವರಿಗೆ ಹಾಗೂ ವೆಂಕಟ್ರಮಣ ಭಟ್‌‌ ರವರಿಗೆ  ತೀವ್ರ ಸ್ವರೂಪದ ಗಾಯಗಳಾಗಿದ್ದು ಪೈಕಿ ಗಾಯಾಳು ವೆಂಕಟ್ರಮಣಭಟ್‌‌ ರವರು ಚಿಕಿತ್ಸೆಗೆ ಸ್ಪಂದಿಸದೆ ಸಂಜೆ 4.40 ಗಂಟೆ ವೇಳೆಗೆ ಯುನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಗಾಯಾಳುಗಳಾದ ಶ್ರೀಮತಿ ವಿನಯ, ಕಲಾವತಿ ಮತ್ತು ಚಾಲಕ ಬಾಲಕೃಷ್ಣ ರವರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No comments:

Post a Comment