Wednesday, February 5, 2014

Daily Crime Reports 05-02-2014

ದೈನಂದಿನ ಅಪರಾದ ವರದಿ.

ದಿನಾಂಕ 05.02.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.01.2014 ರಂದು 12:45 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ರಕ್ಷಿತ್ ಪೂಜಾರಿ ರವರ ಗೆಳೆಯ ಬದ್ರಿನಾಥ ಎಂಬವರು ಶರಣ್ ಶೆಟ್ಟಿ ಎಂಬವರ ಜೊತೆ ಮಂಗಳೂರು ನಗರದ ಅಲೋಷಿಯಸ್ ಕಾಲೇಜು ಕಡೆಯಿಂದ ಯೆನೇಪೋಯಾ ಆಸ್ಪತ್ರೆ ಕಡೆಗೆ ರಸ್ತೆ ದಾಟುವ ಸಮಯ KA-19-EE-6410ನೇ ನಂಬ್ರದ ಹೋಂಡಾ ಆಕ್ಟೀವಾ ಸ್ಕೂಟರನ್ನು ಅದರ ಸವಾರ ಅಬ್ದುಲ್ ರಹಿಮಾನ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಗೆಳೆಯ ಬದ್ರಿನಾಥ್ ಎಂಬರಿಗೆ ಢಿಕ್ಕಿ ಹೊಡೆದ ಪರಿಣಾಮ ಬದ್ರಿನಾಥ್ ರವರು ರಸ್ತೆಗೆ ಬಿದ್ದು ಅವರ ತಲೆಗೆ ಗಾಯಗೊಂಡಿರುವುದು.

 

2. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.02.2014 ರಂದು ರಾತ್ರಿ 9:00 ಗಂಟೆಗೆ ಮಂಗಳೂರು ನಗರದ ಲೇಡಿಗೋಷನ್ ಎಂಬಲ್ಲಿ ಸ್ಕೂಟರ್ KA-19-EA-1050ನ್ನು ಅದರ ಚಾಲಕರಾದ ದಿನೇಶ್ ರಾವ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಕಾಶ್ ಎಂಬವರಿಗೆ ಢಿಕ್ಕಿ ಹೊಡೆದು ಆಕಾಶ್ ಎಂಬವರಿಗೆ ತಲೆಗೆ, ಮೂಗಿಗೆ ಗಾಯ ಉಂಟಾಗಿ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಅಂಬೇಡ್ಕರ್ ವೃತ್ತದಲ್ಲಿರುವ ಕೆ.ಎಂ.ಸಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಅಲ್ಲದೇ ಆರೋಪಿ ಸ್ಕೂಟರ್ ಸವಾರರಿಗೂ ಸಣ್ಣಪುಟ್ಟ ಗಾಯವಾಗಿರುವುದಾಗಿದೆ. 

 

3. ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-01-2014 ರಂದು ಮದ್ಯಾಹ್ನ 1-45 ಗಂಟೆ ಸಮಯಕ್ಕೆ , ಜುಮ್ಮಾ ಮಸೀದಿಯ ಒಳಗಡೆ ಹಳೆಯಂಗಡಿ ಇಂದಿರಾ ನಗರದ ನಿವಾಸಿಗಳಾದ ಅಬ್ದುಲ್ ಹಮಿದ್ @ ಅಬ್ಬಿ ಮತ್ತು ಹಾರಿಸ್ ಎಂಬವರು ಲೆಕ್ಕಪತ್ರ ನೋಡಿಕೊಳ್ಳುವ ಕೌಂಟರ್ನ ಒಳಗಡೆ ನುಗ್ಗಿ ಪಿರ್ಯಾದಿದಾರರಾದ ಹಳೆಯಂಗಡಿ ಗ್ರಾಮದ ಬೊಳ್ಳೂರು ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಬಿ.ಎಚ್ ಅಬ್ದುಲ್ ಖಾದರ್ ರವರಿಗೆ ಮತ್ತು ಮಸೀದಿಯ ಕಮಿಟಿಯ ಸದಸ್ಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಒಡ್ಡಿರುವುದಲ್ಲದೆ, ಮಸೀದಿಗೆ ಸಂಬಂಧಪಟ್ಟ ರಶೀದಿ ಪುಸ್ತಕವನ್ನು ಬಲಾತ್ಕಾರದಿಂದ ಕಿತ್ತು ಹರಿದು ಹಾಕಿರುವುದಾಗಿದೆ.

 

4. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04/02/2014 ರಂದು ಬೆಳಗ್ಗೆ ಸುಮಾರು 11:15 ಗಂಟೆಗೆ ಟ್ರಕ್ ಚಾಸೀಸ್ ನಂಬ್ರ  MAT 412012 D5P11550 ಇಂಜಿನ್ ನಂಬ್ರ 31L84135953 ನ್ನು ಅದರ ಚಾಲಕ ಕಂಕನಾಡಿ ಕಡೆಯಿಂದ ಗೋರಿಗುಡ್ಡೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ವೆಲೆನ್ಸಿಯಾ ಸರ್ಕಲಿನಲ್ಲಿ ಒಮ್ಮೆಲೆ ಎಡಭಾಗಕ್ಕೆ ತಿರುಗಿಸಿ ಮುಂದಕ್ಕೆ ಚಲಾಯಿಸಿದ ಪರಿಣಾಮ ಪಾದಚಾರಿ ಮೊಯ್ದಿನ್ ಕುಂಞ ಯವರಿಗೆ ಟ್ರಕ್ ಡಿಕ್ಕಿಯಾಗಿ ರಸ್ತಗೆ ಬಿದ್ದಾಗ ಟ್ರಕ್ಕನ ಎಡಭಾಗದ ಹಿಂಬಾಗದ ಚಕ್ರ ಹರಿದು ಹೋಗಿ ತಲೆಗೆ ಗಂಭೀರ ಸ್ವರೂಪದ ಗಾಯವುಂಟಾಗಿ ಮೃತ ಪಟ್ಟಿದ್ದಾಗಿದೆ.

 

5. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-14 ರಂದು ಪಿರ್ಯಾದಿದಾರರಾದ ಶ್ರೀ ಶೇಕ್ ಸಮೀರ್ ರವರು ಕೆಎ-06--9203 ನೇ ಟಿಪ್ಪರ್ ಲಾರಿಯಲ್ಲಿ ಕ್ಲೀನರ್ ಜೊತೆಯಲ್ಲಿ ಕೊಣಾಜೆಯಿಂದ ಹೌದಾಲ್ ಕಡೆಗೆ ಮಣ್ಣು ಲೋಡ್ ಕೊಂಡು ಹೋಗುವ ಸಮಯ ಲಾರಿಯಲ್ಲಿದ್ದ ಮಣ್ಣು ಚೆಲ್ಲಿ ಈ ವಿಚಾರವನ್ನು ಇಬ್ಬರು ಬಂದು ಲಾರಿಯಿಂದ ಮಣ್ಣು ಹೊರಗೆ ರಾಚುತ್ತಿದೆ, ನಿಧಾನವಾಗಿ ಚಲಿಸಿ ಎಂದು ಹೇಳಿ ಹೋದವರು ಪಿರ್ಯಾದಿದಾರರು ಮಣ್ಣು ಲೋಡನ್ನು ಅನ್ ಲೋಡ್ ಮಾಡಿ ವಾಪಾಸು ಹೌದಾಲ್ ಬಳಿಗೆ ಪಿರ್ಯಾದಿಯ ಮಾಲೀಕರಾದ ಸದಾನಂದ ಸುವರ್ಣ ಎಂಬವರ ಮನೆಯ ಮುಂದೆ ಬೆಳಿಗ್ಗೆ ಸುಮಾರು 11.45 ಗಂಟೆಗೆ 4 ಜನರು ಬೈಕಿನಲ್ಲಿ ಬಂದು ಬೈಕ್ ನ್ನು ರಸ್ತೆ ಬದಿ ನಿಲ್ಲಿಸಿ 4 ಜನರು ಕೂಡಾ ಪಿರ್ಯಾದಿಯ ಬಳಿಗೆ ಬಂದು ಪಿರ್ಯಾದಿಯನ್ನು ತಡೆದು ನಿಲ್ಲಿಸಿ, ನಿನಗೆ ಲಾರಿಯಲ್ಲಿ ಮಣ್ಣು ಕೊಂಡು ಹೋಗುವ ಸಮಯ ನಿಧಾನವಾಗಿ ಹೋಗಲು ಸಾಧ್ಯವಾಗುವುದಿಲ್ಲವೇ, ಎಂದು ಅವಾಚ್ಯ ಶಬ್ದದಿಂದ ಬೈದು 4 ಜನರೂ ಸೇರಿ ಕೈಯಿಂದ ಪಿರ್ಯಾದಿಯ ಬೆನ್ನಿಗೆ, ಕೈಗೆ, ಕೆನ್ನೆಗೆ ಹೊಡೆದು ಹಲ್ಲೆ ನಡೆಸಿರುತ್ತಾರೆ. ಪಿರ್ಯಾದಿಯು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.

 

6. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-14 ರಂದು 11.00 ಗಂಟೆಗೆ ಪಿರ್ಯಾದಿದಾರರ ಬೈಕಿನಲ್ಲಿ ಮೆಕ್ಯಾನಿಕ್ರನ್ನು ಕರೆದುಕೊಂಡು ಮೂಡುಬಿದ್ರೆಯಿಂದ ಹೌದಾಲ್ಕಡೆಗೆ ಹೋಗುವ ಸಮಯ ಹೌದಾಲ್ಸದಾನಂದ ಪೂಜಾರಿಯವರ ಮನೆಯ ಬಳಿ ಕೆಎ 06 9203 ನೇ ಲಾರಿಯ ಚಾಲಕ ಸಮೀರ್ಎಂಬವನು ಅತೀ ವೇಗದಿಂದ ಚಲಾಯಿಸಿಕೊಂಡು ಬರುವುದನ್ನು ಕಂಡು ರಸ್ತೆಯ ಬದಿಗೆ ಬೈಕನ್ನು ಇಳಿಸಿ ಮಣ್ಣು ರಸ್ತೆಗೆ ಬಿದ್ದ ಬಳಿಕ ಚಾಲಕನಲ್ಲಿ ನಿನಗೆ ನಿಧಾನ ಬರಲು ಆಗುವುದಿಲ್ಲವೇ ಎಂದು ಕೇಳಿದಾಗ ಆರೋಪಿಯು ಪಿರ್ಯಾದಿಯನ್ನು ತಡೆದು ನಿಲ್ಲಿಸಿ "ನಿಮಗೆ ಬಾರಿ ಅಹಂಕಾರ " ಎಂಬುದಾಗಿ ಅವಾಚ್ಯ ಶಬ್ದದಿಂದ  ಬೈದು ನಿಮ್ಮ ಮೇಲೆ ವಾಹನವನ್ನು  ಚಲಾಯಿಸುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ.

 

7. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-01-2014 ರಂದು ಬೆಳಿಗ್ಗೆ ಸುಮಾರು 07-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಹ್ಯಾರಿ ಕುಥಿನ್ ರವರು ತೋಟಕ್ಕ ಹೋಗುತ್ತಿದ್ದ ಸಮಯ ಪಿರ್ಯಾದುದಾರರ ಹೆಂಡತಿ ಮೇರಿ ಕುಟಿನ್ಹಾ, ಮಗ ಸ್ಟೀವನ್ಕುಟೀನ್ಹಾ, ಸೊಸೆ ಅಜಿತ ಮತ್ತು ಮಗಳು ಎಲ್ವೀರಾ ಕುಟೀನ್ಹಾ ಎಂಬುವವರು ಪಿರ್ಯಾದುದಾರರು ಜಾಗವನ್ನು ಹಂಚಿಕೆ ಮಾಡಿರಲಿಲ್ಲವೆಂಬ ಕಾರಣಕ್ಕೆ ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಂತರ ದೂಡಿ ಹಾಕಿರುತ್ತಾರೆ ನಂತರ  ಹರಿತವಾದ ಚೂರಿಯಂತ ಆಯುಧದಿಂದ ಎಡಕೈಗೆ ಹೊಡೆದ ಪರಿಣಾಮ ರಕ್ತಗಾಯವಾಗಿದ್ದು, ನಂತರ ಜೀವ ಬೆದರಿಕೆಯನ್ನು ಹಾಕಿರುತ್ತಾರೆ.

 

8. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-01-14 ರಂದು 22-00 ಗಂಟೆಯಿಂದ ದಿನಾಂಕ 03-02-2014 ರಂದು 05-30 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಎಮ್ಮೆಕೆರೆಯಲ್ಲಿರುವ ಫಿರ್ಯಾದುದಾರರಾದ ಶ್ರೀ ಆಸೀಫ್ ಇಕ್ಬಾಲ್ ಹಮೀದ್ ರವರ ಬಾಬ್ತು ವಾಸ್ತವ್ಯದ ಮನೆಯ ಬಳಿ ಓಣಿಯಲ್ಲಿ ನಿಲ್ಲಿಸಿದ್ದ ಫಿರ್ಯಾದುದಾರರ ಆರ್.ಸಿ ಮಾಲಕತ್ವದ 2009 ನೇ ಮೊಡೆಲ್ ನ ಕಪ್ಪು ಬಣ್ಣದ ಅಂದಾಜು ರೂ 21000/- ಬೆಲೆ ಬಾಳುವ KA 19 EA 4483 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ವಿಚಕ್ರವಾಹನದ ಟೂಲ್ಸ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂದಪಟ್ಟ R.C ಹಾಗೂ  Insurance ನ ಜೆರಾಕ್ಸ್ ಪ್ರತಿ ಕೂಡಾ ಇದ್ದು, ಕಳವಾದ ದ್ವಿಚಕ್ರವಾಹವನ್ನು ಕಳವಾದ ದಿನಾಂಕದಿಂದ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

9. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-02-14 ರಂದು ಪಿರ್ಯಾದಿದಾರರಾದ ಶ್ರೀ ದಿನೇಶ್ ರವರು ಬಸ್ ನಂಬ್ರ ಕೆ ಎ 20 ಬಿ 6778 ನೇದರಲ್ಲಿ ಚಾಲಕರಾದ ಓಡಿಯಪ್ಪರವರೊಂದಿಗೆ ಮದ್ಯಾಹ್ನ 2-24 ಗಂಟೆಗೆ ಮಂಗಳೂರು ಸ್ಟೇಟ್ ಬ್ಯಾಂಕ್ ಕಡೆಯಿಂದ ಮಣಿಪಾಲ ಕಡೆಗೆ ಹೊರಟು ಬಸ್ ಸುರತ್ಕಲ್ ದಾಟಿ ಎನ್ ಐ ಟಿ ಕೆ ಬಸ್ ನಿಲ್ದಾಣಕ್ಕೆ ಬಂದಾಗ ಅವರು ಚಾಲಕನ ಬಳಿ ಇದ್ದ ಸಮಯ ಮದ್ಯಾಹ್ನ 3-10 ಗಂಟೆಗೆ ಸದ್ರಿ ಬಸ್ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಬಸ್ ನಿಲ್ಲುವಂತೆ ಕೈ ಸನ್ನೆ ಮಾಡಿದಾಗ ಚಾಲಕ ಓಡಿಯಪ್ಪ ರವರು ಬಸ್ ನಿಲ್ಲಿಸಿದ ಸಮಯ ಬಸ್ಸಿನ ಮುಂದೆ ಬಿಳಿ ಬಣ್ಣದ ಮಾರುತಿ 800 ಕಾರನ್ನು ಅದರ ಚಾಲಕ ರಸ್ತೆಯ ಪೂರ್ವ ಬದಿ ಕಡೆಯಿಂದ ಚಲಾಯಿಸಿಕೊಂಡು ಬಂದು ಅಡ್ಡ ನಿಲ್ಲಿಸಿದ್ದು ಸದ್ರಿ ಕಾರಿನ ಚಾಲಕ ತಳವಾರು ಕತ್ತಿಯನ್ನು ಹಾಗೂ ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಯು ಪಿಸ್ತೂಲ್ ಹಿಡಿದುಕೊಂಡು ಬಸ್ಸಿನ ಮುಂದಿನ ಬಾಗಿಲಿನಿಂದಲೂ ಪ್ರಯಾಣಿಕರಂತಿದ್ದ ಇಬ್ಬರೂ ವ್ಯಕ್ತಿಗಳು ಬಸ್ಸಿನ ಹಿಂಬದಿ ಬಾಗಿಲನಿಂದ ಒಳಗೆ ಬಂದು ಅವರ ಪ್ಯಾಂಟಿನ ಕಿಸೆಯಲ್ಲಿದ್ದ ಚೂರಿಗಳನ್ನು ತೆಗೆದು ಸದ್ರಿ ಬಸ್ಸಿನ ಹಿಂಬದಿಯ ಎಡ ಬದಿಯಿಂದ 3 ನೇ ಸಾಲಿನ ಸೀಟಿ ನಲ್ಲಿ ಕುಳಿತ್ತಿದ್ದ ಪ್ರಾಯ ಸುಮಾರು 23 ವರ್ಷದ ಪ್ರಕಾಶನನ್ನು ''ಬಲ ಪಿದಾಯಿ'' ಎಂದು ಹೇಳಿ ಚಾಕು ತಲವಾರಿನಿಂದ ತಿವಿದು ಹಾಗೂ ಕಡಿದು ಬಸ್ಸಿನ ಮುಂದಿನಿಂದ ಎಳೆದುಕೊಂಡು ಹೊರಗೆ ರಸ್ತೆಗೆ ಹಾಕಿ ಎಲ್ಲರೂ ತಲವಾರು ಹಾಗೂ ಚೂರಿಯಿಂದ ಕಡಿದಿದ್ದು ಆತ ಬೊಬ್ಬೆ ಹಾಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬಸ್ಸಿನ ಪ್ರಯಾಣಿಕರು ಬೊಬ್ಬೆ ಹಾಕಿದ್ದರಿಂದ ಬಸ್ಸನ್ನು ಮುಂದಕ್ಕೆ ಕೊಂಡು ಹೋಗಿ ಬೇರೆ ಬಸ್ಸಿಗೆ ಕಳುಹಿಸಿಕೊಟ್ಟು ಪಿರ್ಯಾದಿದಾರರು ಠಾಣೆಗೆ ಬಂದ್ದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿದ್ದು ನಂತರ ತಿಳಿದು ಬಂದಿದ್ದು, ಅಲ್ಲದೇ ಸದ್ರಿ ಪ್ರಕಾಶ್ ನಿಗೆ ಆತನ ತಂದೆ ಚಿನ್ನಯ್ಯ ರವರು ಸ್ಟೇಟ್ ಬ್ಯಾಂಕಿನಲ್ಲಿ ಬಸ್ ಹೊರಡುವಾಗ ನೀರಿನ ಬಾಟಲಿಯನ್ನು ತಂದು ಕೊಟ್ಟಿರುವುದನ್ನು ನೋಡಿರುತ್ತೇನೆ. ಹಲ್ಲೆ ನಡೆಸಿದವರ ಪೈಕಿ ಮೂರು ಮಂದಿ ಸಾಧಾರಣ ಮೈಕಟ್ಟು ಒಬ್ಬ ವ್ಯಕ್ತಿ ಸ್ವಲ್ಪ ಪ್ರಾಯವಾಗಿದ್ದು ಉದ್ದ ದಪ್ಪ ಇರುತ್ತಾನೆ.

 

10. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-02-2014  ರಂದು ಮಧ್ಯಾಹ್ನ 14-00 ಗಂಟೆಗೆ ಮಂಗಳೂರು ಕಡೆಯಿಂದ ಕೈಕಂಬ ಕಡೆಗೆ ಕೆಎ 19 ಸಿ 8764 ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು, ಮೂಳೂರು ಗ್ರಾಮದ , ಗುರುಪುರ, ಕುಕ್ಕುದಕಟ್ಟೆ ಎಂಬಲ್ಲಿ ಕಿರಣ್ ಪಾಯಸ್ ಎಂಬಾತ ರವಿ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಚಲಾಯಿಸುತ್ತಿದ್ದ ಕೆಎ 19 ಇಸಿ 6188 ನಂಬ್ರದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ  ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ತರದ ಗಾಯಗೊಂಡ ಕಿರಣ್ ಪಾಯಸ್, ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದು, ಸಹ ಸವಾರ ರವಿ ತೀವ್ರ ತರದ ಗಾಯದಿಂದ ಅಭೋದಾವಸ್ಥೆಯಲ್ಲಿ ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ.

 

11. ಮಂಗಳೂರು ಗ್ರಾಮಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.02.2014 ರಂದು 15.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ರವರು ಮಂಗಳೂರಿಗೆ ಹೋಗಿ ವಾಪಾಸು ಬಸ್ಸಿನಲ್ಲಿ ಮನೆಕಡೆಗೆ ಬರುತ್ತಾ  ನಾಗೂರಿ ಗರೋಡಿ ಸಮೀಪ ಬಸ್ಸಿನಿಂದ ಇಳಿದು ರಸ್ತೆ ದಾಟುವರೇ ನಿಂತಿದ್ದ ಸಮಯ ಪಡೀಲ್ಕಡೆಯಿಂದ ಮಂಗಳೂರು ಕಡೆಗೆ KA19AA3081 ನೇ ರಿಕ್ಷಾ ಟೆಂಪೋವನ್ನು ಅದರ ಚಾಲಕ ಇರ್ಷಾದ್‌‌ ಎಂಬಾತನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿ ರಿಕ್ಷಾ ಟೆಂಪೋದ ಮೇಲಿನ ಹತೋಟಿ ತಪ್ಪಿ ಪಿರ್ಯಾಧಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಅವರ ಎಡಬದಿ ಸೊಂಟಕ್ಕೆ, ಎಡಕಾಲು ಮೊಣಗಂಟಿನ ಬಳಿ ತೀವ್ರ ಸ್ವರೂಪದ ಒಳ ಜಖಂ ಉಂಟಾಗಿದ್ದು ಮತ್ತು  ಎಡಗೈ ಮೊಣಗಂಟಿಗೆ ತರಚಿದ ಗಾಯವಾಗಿ ಹೈಲ್ಯಾಂಡ್ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

12. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01.02.2014 ರಂದು ಪಿರ್ಯಾಧಿದಾರರಾದ ಡಾ. ಮಹಮ್ಮದ್ ಸಲೀಂ ರವರು ಪಂಪ್ವೆಲ್ನ ಶಾಫಿ ಆರ್ತೋಡೋಂಟಿಕ್‌‌ ಏಂಡ್‌‌ ಡೆಂಟಲ್‌‌ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಸಂಜೆ ಸುಮಾರು 07.30 ಗಂಟೆಗೆ ಮನೆಗೆ ಹೋಗಿದ್ದು ದಿನಾಂಕ: 02.02.2014 ರಂದು ರಜೆಯಾಗಿದ್ದರಿಂದ ಪಿರ್ಯಾಧಿದಾರರು ಕ್ಲಿನಿಕ್ಗೆ ಬಾರದೇ ಇದ್ದು, ಅದೇ ದಿನ ಮಧ್ಯಾಹ್ನ 12.00 ಗಂಟೆಗೆ ಸದ್ರಿ ಕ್ಲಿನಿಕ್ನ ಪಕ್ಕದ ಅಂಗಡಿಯ ಟೋನಿ ಎಂಬವರು ಪಿರ್ಯಾಧಿದಾರರಿಗೆ ಕರೆ ಮಾಡಿ ಕ್ಲಿನಿಕ್ನ ಶಟರ್‌‌ ಬಾಗಿಲು ಅರ್ಧ ತೆರೆದುಕೊಂಡಿದೆ ಎಂದು ತಿಳಿಸಿದ ಮೇರೆಗೆ ಪಿರ್ಯಾಧಿದಾರರು ಕ್ಲಿನಿಕ್ಗೆ ಬಂದು ನೋಡಿದಾಗ ಕ್ಲಿನಿಕ್ನ ಒಳಗಿದ್ದ ತೋಷಿಬಾ  ಕಂಪೆನಿಯ 22'' ಅಳತೆಯ ಟಿವಿ-1, ಲಿನೋವಾ ಕಂಪೆನಿಯ ಆಲ್‌‌ ಇನ್ವನ್‌‌ ಕಂಪ್ಯೂಟರ್‌, ಮತ್ತು ಅಸೆಂಬಲ್ಡ್‌‌ ಕಂಪ್ಯೂಟರ್ಮತ್ತು ಅದಕ್ಕೆ ಸಂಬಂಧಪಟ್ಟ ಡೆಲ್ಕಂಪೆನಿಯ ಮೊನಿಟರ್ಮತ್ತು ಮೇಜಿನ ಡ್ರಾವರ್ನಲ್ಲಿ ಇರಿಸಿದ್ದ ರೂ 5000/- ವನ್ನು ಕಳವು ಮಾಡಿಕೊಂಡು ಹೋಗಿವುದಾಗಿಯೂ ಕಳಾದ ಸೊತ್ತಿನ ಅಂದಾಜು ಮೌಲ್ಯ 75,000 ಆಗಬಹುದು.

 

13. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಉಲಾಯಿಬೆಟ್ಟು ಕಾಂತರಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಪುಷ್ಪಾ ರವರ ಮತ್ತು ಅವರ ನೆರೆಮನೆಯ ಸಂಶುದ್ದೀನ್ಎಂಬವರ ಜಾಗದ ಮದ್ಯದಲ್ಲಿರುವ ಕಾಟುಮರವಿದ್ದು ಅದರ ಎಲೆಯು ಪಿರ್ಯಾದಿದಾರರ ಹಿತ್ತಲಿಗೆ ಬೀಳುವುದರಿಂದ ಪಿರ್ಯಾಧಿದಾರರು ದಿನಾಂಕ: 26.01.2014 ರಂದು ಕೆಲಸದವರನ್ನು ಕರೆಯಿಸಿ ಸದ್ರಿ ಮರದ  ಗೆಲ್ಲುಗಳನ್ನು ಕಡಿಸಿದ್ದು, ಪಿರ್ಯಾಧಿದಾರರು ಹಾಗೂ ಅವರ ಹೆಂಡತಿ ಮನೆಯ ಅಂಗಳದಲ್ಲಿ ನಿಂತಿದ್ದ ಸಮಯ ಸಂಜೆ ಸುಮಾರು 4.00 ಗಂಟೆಗೆ ನೆರೆಮನೆಯ ಸಂಶುದ್ದೀನ್ಎಂಬವರ ಮಗ ಫಿಯಾ @ ಫಿರೋಜ್‌‌ ಎಂಬವನು ಪಿರ್ಯಾಧಿದಾರರ ಮನೆಯ ಅಂಗಳಕ್ಕೆ ಬಂದು ಪಿರ್ಯಾಧಿದಾರರಿಗೆ ಮತ್ತು ಅವರ ಗಂಡನವರಿಗೆ  ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ನಡೆಸಿದಲ್ಲದೆ ಆರೋಪಿ ಸಂಶುದ್ದೀನ್‌‌  ಎಂಬಾತನು ಪಿರ್ಯಾಧಿದಾರರ ಮರದ ಸೋಂಟೆಯಿಂದ  ಹಲ್ಲೆ ನಡೆಸಿದ್ದು, ಈ ಬಗ್ಗೆ ದೂರು ನೀಡಿದಲ್ಲಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲವೆಂದು ಜೀವಬೆದರಿಕೆ ಹಾಕಿರುತ್ತಾರೆ.

No comments:

Post a Comment