Thursday, February 13, 2014

Daily Crime Reports 13-02-2014

ದೈನಂದಿನ ಅಪರಾದ ವರದಿ.

ದಿನಾಂಕ 13.02.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-02-2014 ರಂದು ರಾತ್ರಿ  10.30 ಗಂಟೆಗೆ   ಪಿರ್ಯಾದಿದಾರರಾದ ಶ್ರೀಮತಿ ಮೀನಾ ಕೊರಗ ರವರ ಮನೆಯ ಪಕ್ಕದಲ್ಲಿ  ಟೆಂಟ್ ಹಾಕಿಕೊಂಡು ವಾಸ ಮಾಡಿಕೊಂಡಿರುವ ವಲಸೆಗಾರರಾದ ಚಾಮರಾಜನಗರದ ಗುಂಡ ಮತ್ತು ರತ್ನ ಹಾಗೂ ಇತರರು ಸೇರಿ ಪಿರ್ಯಾದಿದಾರರಿಗೆ ಮತ್ತು ಅವರ ಮಗ ರಾಜೇಶ್ ಮೇಲೆ ಕೈಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿರುವುದಾಗಿದೆ.

 

2.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಆರ್.ಮಹೇಶ್ವರಿ ಎಂಬವರ ಮಗ ಷಣ್ಮುಖನ್ ಪ್ರಾಯ 16 ವರ್ಷ ಎಂಬಾತನು ಮಂಗಳೂರಿನ ನಂದಿಗುಡ್ಡೆ ಎಂಬಲ್ಲಿ  ಗ್ಯಾರೇಜ್ ನಲ್ಲಿ ಸುಮಾರು 20 ದಿನಗಳಿಂದ ಕೆಲಸಕ್ಕೆ ಹೋಗುತ್ತಿದ್ದವನು, ದಿನಾಂಕ 11-02-2014 ರಂದು ಬೆಳಿಗ್ಗೆ 10-30 ಗಂಟೆಗೆ  ಮನೆಯಾದ ಮಂಗಳೂರಿನ ಅತ್ತಾವರದ ಬಾಬುಗುಡ್ಡೆ ಎಂಬಲ್ಲಿಂದ, ಕೆಲಸಕ್ಕೆ ಹೋಗುತ್ತೇನೆಂದು ಹೋದವನು ಈವರೇಗೆ  ವಾಪಾಸು ಮನೆಗೆ ಬಾರದೇ ಇದ್ದು, ಈತನನ್ನು ಎಲ್ಲಾ ಹುಡುಕಾಡಿದರೂ ಆತನ ಸುಳಿವು ಸಿಗದೇ ಇರುವುದಾಗಿದೆ.

 

3.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/02/2014 ರಂದು  KA 19 EA 2885 ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲ್ ನಲ್ಲಿ ಸಹ ಸವಾರರಾಗಿ ಪ್ರವೀಣ್ ಮತ್ತು ಪವನ್ ಎಂಬವರನ್ನು ಕುಳ್ಳಿರಿಸಿಕೊಂಡು ಕೈಕಂಬದಿಂದ ಬಜಪೆ ಕಡೆಗೆ ಬರುತ್ತಿದ್ದಾಗ ರಾತ್ರಿ ಸುಮಾರು 01.30 ಗಂಟೆಗೆ ಮಂಗಳೂರು ತಾಲೂಕು ಪಡುಪೆರಾರ ಗ್ರಾಮದ ಕಿನ್ನಿಕಂಬಳ ಶಾಲೆಯ ಎದುರು ರಸ್ತೆಯಲ್ಲಿ ಬೈಕ್ ಸವಾರನ ಅತೀವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಸವಾರ ಹಾಗೂ ಸಹ ಸವಾರರು ಗಾಯಗೊಂಡಿದ್ದು, ಅವರ ಪೈಕಿ ಪ್ರವೀಣ್ ಎಂಬಾತ ತೀವೃ ತರಹದ ಗಾಯಗೊಳಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವನು ದಿನಾಂಕ 11/02/2014 ರಂದು ರಾತ್ರಿ 8.45 ಗಂಟೆ ಸಮಯಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.02.2014 ರಂದು 08.00 ಗಂಟೆಗೆ ಪಿರ್ಯಾದಿದಾರರಾದ ವೇಣುಕುಮಾರ್‌‌ ಎಂಬವರು ಅವರ ಬಾಬ್ತು ಮಾರುತಿ ಓಮ್ನಿ ಕೆಎ-19-ಎಂಎ-895 ನೇ ವಾಹನವನ್ನು ಮನೆಯ ಸಮೀಪವಾದ ಮರೋಳಿ ಗ್ರಾಮದ ಗಾಂದೊಟ್ಟು ಬಳಿ ನಿಲ್ಲಿಸಿ ಹೋದವರು  ದಿನಾಂಕ 12.02.2014 ರಂದು ಸಂಜೆ ಸುಮಾರು 4.30 ಗಂಟೆಗೆ ಬಂದು ನೋಡಿದಾಗ ಕಾರಿಗೆ ಅಳವಡಿಸಿದ ಡಿಸ್ಕ್‌‌ ಸಮೇತ ನಾಲ್ಕು ಟಯರ್ಗಳನ್ನು ಕಾರಿನೊಳಗಿದ್ದ 2 ಸೀಟುಗಳನ್ನು ಟೂಲ್ಸ್‌‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದಲ್ಲದೆ ಕಾರಿನ ಮುಂಭಾಗದ ಗ್ಲಾಸನ್ನು ಹಾನಿಗೊಳಿಸಿದರುವುದಾಗಿಯೂ ಕಳವಾದ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 23,000/- ಆಗಬಹುದು.

No comments:

Post a Comment