Tuesday, February 11, 2014

Daily Crime Reports 11-02-2014

ದೈನಂದಿನ ಅಪರಾದ ವರದಿ.

ದಿನಾಂಕ 11.02.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

3

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

2

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

4

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :   ಪಿರ್ಯಾದಿದಾರರಾದ ಶ್ರೀ ಪ್ರಸಾದ್ ಕುಮಾರ್ ರವರು ಪಂಚಮಿ ಇಲೆಕ್ಟಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಶೋ ರೂಮಿನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಶೋ ರೂಮಿನಲ್ಲಿ  ಸೋನಿ ಕಂಪೆನಿಗೆ ಸಂಬಂದಪಟ್ಟ ವಿವಿಧ ಬಗೆಯ ಇಲೆಕ್ತಾನಿಕ್ಸ್ ಸೊತ್ತುಗಳು ಇದ್ದು, ದಿನಾಂಕ 07-02-2014 ರಂದು ಪಿರ್ಯಾದಿದಾರರು ಈ ಸೊತ್ತುಗಳ ಸ್ಟಾಕ್ ಚೆಕ್ ಮಾಡಿದಾಗ ಈ ಶೋ ರೂಮಿನಲ್ಲಿರುವ ಒಂದು DISPLAY ಯಲ್ಲಿ ವಿವಿಧ ಬಗೆಯ ಕ್ಯಾಮೇರಾಗಳನ್ನು ಆಳವಡಿಸಿದ್ದು ಈ ಬಗ್ಗೆ ಕ್ಯಾಮೇರಾಗಳ ಪೈಕಿ ಸೀನಿ ಕಂಪೆನಿಯ ಹಚ್.ಡಿ.ಆರ್ ಪಿ.ಜೆ.230 /ಬಿ. ಸಿರಿಯಲ್ ನಂಬ್ರ 3472717 ನೇ ಹ್ಯಾಂಡ್ ಕ್ಯಾಮ್ ಕಾಣೆಯಾಗಿದ್ದು, ಇದನ್ನು ಅಲ್ಲೇ ಸುತ್ತಮುತ್ತ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಕಾಣೆಯಾದ ಹ್ಯಾಂಡಿ ಕ್ಯಾಮರಾದ ಅಂದಾಜು 29990/- ಆಗಬಹುದಾಗಿ, ನಂತರ ಶೋ ರೂಮಿನಲ್ಲಿ ಆಳ ವಡಿಸಿದ ಸಿಸಿ ಕ್ಯಾಮೇರ ದಲ್ಲಿ ದಾಖಲಾದ ಚಿತ್ರಿಕರಣದ ಬಗ್ಗೆ ಪರಿಶೀಲಿಸಿದಾಗ ದಿನಾಂಕ 05-02-2014 ರಂದು ಸಂಜೆ ಸುಮಾರು 7-15 ಗಂಟೆಗೆ ಓರ್ವ ಅಪರಿಚಿತ ವ್ಯಕ್ತಿಯು ಗ್ರಾಹಕರ ಸೋಗಿನಲ್ಲಿ ಬಂದು ಈ ಹ್ಯಾಂಡ್ ಕ್ಯಾಮೇರ ವನ್ನು ಕಳವುಮಾಡಿಕೊಂಡು ಹೋಗಿರುವುದಾಗಿದೆ.

 

2.ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಕೊಟ್ಟಾರದಲ್ಲಿರುವ ಇನ್ಫೋಸಿಸ್ ಸಂಸ್ಥೆಯಲ್ಲಿ ಸೆಕ್ಯುರಿಟಿ ಮ್ಯಾನೇಜರ್ ಆದ ಲಿಯೂ ಡಾನಿಯಲ್ ಡಿ'ಸೋಜಾ ರವರು ದೂರ ನೀಡಿದ್ದು, ಅನಿಲ್ ಮೇಲ್ವಿನ್ ಪಿಂಟೋ ಎಂಬವರು ಕಳೆದ 3-4 ತಿಂಗಳಿಂದ ಮಂಗಳೂರು ನಗರದ ಕೊಟ್ಟಾರದಲ್ಲಿರುವ ಇನ್ಪೋಸಿಸ್ ಸಂಸ್ಥೆಯಲ್ಲಿ  ಉದ್ಯೋಗಿ ಎಂದು, ಸಂಸ್ಥೆಯ ನಕಲಿ ಗುರುತಿನ ಚೀಟಿಯನ್ನು ಮಾಡಿ, ಪಿರ್ಯಾದಿದಾರರಿಗೆ ಸದ್ರಿ ಸಂಸ್ಥೆಯ ಅಧಿಕಾರಿ ವರ್ಗದವರ ಪರಿಚಯವಿದೆ ಎಂದು ಸಾರ್ವಜನಿಕರಿಗೆ ಕೆಲಸ ಮಾಡಿಕೊಡುತ್ತೇನೆಂದು ನಂಬಿಸಿ, ಸಾರ್ವಜನಿಕರಿಂದ ಹಣ ಪಡೆದುಕೊಂಡು ಇನ್ಫೋಸಿಸ್ ಸಂಸ್ಥೆಯ ಹೆಸರನ್ನು ಹಾಳುಮಾಡುತ್ತಿರುವುದಾಗಿದೆ.

 

3.ಕಾವೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-02-2014 ರಂದು ಲೋಹಿತ್ ರವರು ಸವಾರರಾಗಿ ಚಲಾಯಿಸಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆಎ-19-.ಹೆಚ್-5906 ನೇದರಲ್ಲಿ ಫಿರ್ಯಾಧುದಾರರಾದ ಶ್ರೀ ಅವಿನಾಶ್ ರವರು ಸಹಸವಾರರಾಗಿ ಕುಳಿತುಕೊಂಡು ಕಾವೂರಿನಿಂದ ತನ್ನ ಮನೆಗೆ ಬರುತ್ತಿರುವಾಗ್ಗೆ ಲೋಹಿತ್ ರವರು ಮೋಟಾರು ಸೈಕಲ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ರಾತ್ರಿ 11-30 ಗಂಟೆಗೆ ಗಾಂಧಿನಗರದ ಇಂಡೇನ್ ಗ್ಯಾಸ್ ಎದುರು ತಲುಪುವಾಗ ಒಮ್ಮೆಲೇ ನಿರ್ಲಕ್ಷತನದಿಂದ  ಬ್ರೇಕ್ ಹಾಕಿದಾಗ ಅಲ್ಲಿಯೇ ಮಾರ್ಗದ ಬದಿಯಲ್ಲಿ ನಿಲ್ಲಿಸಿದ್ದ ಆಟೋ ಟೆಂಪೋ ನಂ.ಕೆಎ-19-.-1148 ಕ್ಕೆ ಡಿಕ್ಕಿಯಾಗಿ ಫಿರ್ಯಾಧುದಾರರು ಮತ್ತು ಲೋಹಿತ್ ರವರು ಮೋಟಾರು ಸೈಕಲ್ ಸಮೇತಾ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾಧುದಾರರ ಎಡ ಹಣೆಗೆ, ಎಡಕಣ್ಣಿನ ಬಳಿ, ಗಲ್ಲಕ್ಕೆ, ಕೈಗಳಿಗೆ ತರಚಿದ ಗಾಯವಾಗಿದ್ದು, ಲೋಹಿತ್ ರವರಿಗೆ ಹಣೆಗೆ ಮತ್ತು ದೇಹದ ಒಳಗೆ ಗುದ್ದಿದ ಗಾಯವಾಗಿದ್ದು, ಆಟೋ ಟೆಂಪೋದ ಬಳಿ ಇದ್ದ ಇಮ್ರಾನ್ ಎಂಬವರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

4.ಪಣಂಬೂರು ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸುವರ್ಣಾ ಎಸ್. ಚಿಂಚೊಳ್ಳಿ ರವರ ತಂಗಿಯ ಮಗ ಆನಂದ ಎಂಬವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಕಲಿಯುತ್ತಿರುವ ವೇಳೆ ಆರೋಪಿ ವಿನೀಶ್ ಎಂಬವನು ಕೂಡ ಅದೇ ಕಾಲೇಜಿನಲ್ಲಿ ಕಲಿಯುತ್ತಿದ್ದು, ಇವರಿಬ್ಬರು ಸ್ನೇಹಿತರಾಗಿದ್ದು, ಆನಂದನ ತಂದೆ ನೋರ್ತ್ ವೆಸ್ಟ್ ರೋಡ್ ಟ್ರಾನ್ಸ್ ಪೋರ್ಟ್ ಕಾರ್ಪರೇಶನ್ ನಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿ ಕೆಲಸ ಮಾಡುತ್ತಿದ್ದವರು ನಿವೃತ್ತಿ ಹೊಂದಿದಾಗ ಅವರಿಗೆ ಸಿಕ್ಕಿದ ಹಣವನ್ನು ಮತ್ತು ಪಿರ್ಯಾದಿದಾರರ ಗಂಡನವರು ಎನ್ ಎಂ ಪಿ ಟಿ ಯಲ್ಲಿ ಕೆಲಸ ಮಾಡುತ್ತಿರುವಾಗ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದ ಪರಿಹಾರ ಧನ ದೊರೆತಿದ್ದು, ಆನಂದ ರವರ ನಿವೃತ್ತಿ ನಂತರ ಹಣ ಮತ್ತು ಅಪಘಾತದಿಂದ ದೊರೆತ ಪರಿಹಾರ ಧನ ದೊರೆತ ವಿಚಾರ ತಿಳಿದ ವಿನೀಶ್ ಪಿರ್ಯಾದಿದಾರರ ಗಂಡ ಶಿವಪ್ಪ ಮತ್ತು ಪಿರ್ಯಾದಿದಾರರನ್ನು ಸಂಪರ್ಕಿಸಿ ತಾನು ಬೆಂಗಳೂರು ಮತ್ತು ಮುಂಬೈ ಕಡೆಗಳಲ್ಲಿ ಗ್ರಾನೈಟ್ ವ್ಯವಹಾರ ನಡೆಸುತ್ತಿದ್ದು, ಅದರಲ್ಲಿ ಆನಂದನನ್ನು ಮತ್ತು ಪಿರ್ಯಾದಿದಾರರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವುದಾಗಿಯೂ, ಇದರಿಂದ ಬರುವ ಲಾಭದ ಹಣವನ್ನು ಹಂಚಿಕೊಳ್ಳಬಹುದುಇದಕ್ಕಾಗಿ ಸ್ವಲ್ಪ ಫಿಕ್ಸೆಡ್ ಡೆಪಾಸಿಟ್ ಇಡಬೇಕಾಗುತ್ತದೆಎಂಬುದಾಗಿ ತಿಳಿಸಿದ್ದು, ಅದರಂತೆ ಆನಂದ ತನ್ನ ತಂದೆಯ ನಿವೃತ್ತಿಯ ನಂತರ ಬಂದ ಹಣ ಮತ್ತು ತಂದೆಯ ಅಪಘಾತದಿಂದ ದೊರೆತ ಹಣ ಹಾಗೂ ತನ್ನ ಅಣ್ಣ ಫೈನಾನ್ಸಿನಿಂದ ಸಾಲ ತೆಗೆದುಕೊಟ್ಟ ಹಣ ಎಲ್ಲ ಒಟ್ಟು ಸೇರಿ 1,35,00,000/- (ಒಂದು ಕೋಟಿ ಮೂವತ್ತೈದು ಲಕ್ಷ) ರೂಗಳನ್ನು ವಿನೀಶ್ ನ ಸೂಚನೆಯಂತೆ ಆತನ ತಂದೆ ಮತ್ತು ಅವನ ಸ್ನೇಹಿತ ನಿಶಿತ್ ಮತ್ತು ನಿಶಿತ್ ನ ತಾಯಿ ರೋಹಿಣಿ ಡಿ ಕುಳಾಯಿ ಇವರ ಎಕೌಂಟ್ ಗೆ ಪಾವತಿಸಿದ್ದು, ಅದರ ನಂತರ ವಿನೀಶ್ ಆನಂದನಲ್ಲಿ ಒಡೆನಾಟವನ್ನು ತೊರೆದಿದ್ದುವಿನೀಶ್ ನಂತರ ಮನೆಯಲ್ಲಿ ಇಲ್ಲದೇ ಇದ್ದು, ಆತನ ಮೊಬೈಲ್ ನಂಬ್ರಗಳು ಕೂಡ ಸ್ವಿಚ್ ಆಫ್ ಆಗಿರುತ್ತದೆಮನೆಯವರಲ್ಲಿ ಕೇಳಿದಾಗ ಏನೂ ತಿಳಿಯದವರಂತೆ ಇದ್ದು, ಈಗ ಪಿರ್ಯಾದಿದಾರರು ಮಾಹಿತಿ ಸಂಗ್ರಹಿಸಿದಾಗ ವಿನೀಶ್ ಮತ್ತು ನಿಶಿತ್ ಜೊತೆ ಸೇರಿ ಪಿರ್ಯಾದಿದಾರರಿಗೆ ನಂಬಿಸಿ ಒಂದು ಕೋಟಿ ಮೂವತ್ತೈದು ಲಕ್ಷ ರೂಗಳನ್ನು ಅಪ್ರಾಮಾಣಿಕ ತನದಿಂದ ಪಡೆದು, ಮೋಸ ಮಾಡಿರುತ್ತಾರೆ.

 

5.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.02.2014 17-00 ಗಂಟಯಿಂದ 09-02-2014 23-45 ಗಂಟೆ ಮಧ್ಯೆ ಮಂಗಳೂರು ನಗರದ ಶಿವಭಾಗ್ ನಲ್ಲಿರುವ ಪಿರ್ಯಾದುದಾರರಾದ ಡಾ. ಸುಪ್ರಭಾ ಬಿ.ಎಸ್. ರವರ ವಾಸದ ಮನೆಯ ಕಿಟಕಿಯ ಸರಳುಗಳನ್ನು ಯಾವುದೋ ಹರಿತವಾದ ಆಯುಧ ಉಪಯೋಗಿಸಿ ಮುರಿದು, ತುಂಡರಿಸಿ, ಆ ಮೂಲಕ ಒಳ ಪ್ರವೇಶಿಸಿದ ಯಾರೋ ಕಳ್ಳರು ಮನೆಯ ಒಳಗಿನಿಂದ ACER ಕಂಪನಿಯ LAPTOP-1, TITAN WATCH-1, APPLE IPOD-1, SILVER ORNAMENT, SONY CAMERA-1, NOKIA MOBILE-1 (WITHOUT SIM CARD) ಮುಂತಾದವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಅಂದಾಜು ಮೌಲ್ಯ ರೂ.22,000/- ಆಗಬಹುದು.

 

6.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-14 ರಂದು 13-30 ಗಂಟೆಯಿಂದ 13-40 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯ ಪಕ್ಕದಲ್ಲಿರುವ ನೂರ್ ಮಸೀದಿಯ ಬಳಿ ಪಾರ್ಕಿಂಗ್ ಸ್ಥಳದಲ್ಲಿ ಫಿರ್ಯಾದುದಾರರಾದ ಶ್ರೀ ಅಬೂಬಕ್ಕರ್ ಸಿದ್ದಿಕ್ ರವರು ಪಾರ್ಕ್ ಮಾಡಿದ್ದ, ತಮ್ಮ ಆರ್.ಸಿ ಮಾಲಕತ್ವದ 2012 ನೇ ಮೊಡೆಲ್ ನ ಪರ್ಪಲ್- ಕಪ್ಪು ಬಣ್ಣದ ಅಂದಾಜು ರೂ 36000/- ಬೆಲೆ ಬಾಳುವ KA 19 ಇಜಿ 7490 ನೊಂದಣಿ ಸಂಖ್ಯೆಯ ಹೀರೋ ಕಂಪೆನಿಯ ಸ್ಪ್ಲಂಡರ್ ಪ್ಲಸ್  ದ್ವಿಚಕ್ರವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದ್ವಿಚಕ್ರವಾಹನದ ಟೂಲ್ಸ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂದಪಟ್ಟ R.C ಯ ಝೆರಾಕ್ಸ್ ಹಾಗೂ  Insurance ನ ಮೂಲ  ಪ್ರತಿ ಕೂಡಾ ಇದ್ದು, ಕಳವಾದ ದ್ವಿಚಕ್ರವಾಹವನ್ನು ಕಳವಾದ ದಿನಾಂಕದಿಂದ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

7.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 10-02-2014ರಂದು ಕ್ರೈಂ ಗಸ್ತು ಕರ್ತವ್ಯದಲ್ಲಿದ್ದ ಸಮಯ ಮಂಗಳೂರು ನಗರದ ರೈಲ್ವೆ ನಿಲ್ದಾಣದ ಮುತ್ತಪ್ಪ ಗುಡಿ ಬಳಿ ಕಪ್ಪು ಬಣ್ಣದ ಶರ್ಟ್ ಹಾಗೂ ತಲೆಗೆ ಟೋಪಿ ಧರಿಸಿರುವ ಒರ್ವ ವ್ಯಕ್ತಿ ಕೈಯಲ್ಲಿ ಒಂದು ಬಿಳಿ-ನೇರಳೆ ಬಣ್ಣದ ಚೀಲ ಹಿಡಿದುಕೊಂಡು ತುಂಬಾ ಹೊತ್ತಿನಿಂದ ನಿಂತುಕೊಡಿರುವುದನ್ನು ದೂರದಿಂದ ನೋಡಿ ಆತನ ಮೇಲೆ ಅನುಮಾನ ಬಂದು ಆತನ ಬಳಿಗ್ಗೆ ಹೋಗಿ ಸದ್ರಿ ಸ್ಥಳದಲ್ಲಿ ಇರುವ ಬಗ್ಗೆ ವಿಚಾರಿಸಿದಾಗ ಸರಿಯಾದ ಉತ್ತರ ನೀಡದೇ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಸುಧಾಕರ ಭಂಡಾರು, ಪ್ರಾಯ 41 ವರ್ಷ, ತಂದೆ-ರಾಜದುಗರ್ಾ ರಾವ್, ವಾಸ-ಅಯ್ಯಪ್ಪ ರೈಸ್ ಡಿಪೋ, ಕಲ್ಯಾಣ ನಗರಬಾಲನಗರ, ಮೂಸಾಪೇಟೆ, ರಂಗಾರೆಡ್ಡಿ ಆಂದ್ರಪ್ರದೇಶ, ಎಂಬುದಾಗಿ ನೀಡಿದ್ದು ಆತನ ಕೈಯಲ್ಲಿರುವ ಚೀಲದಲ್ಲಿರರುವ ಸೊತ್ತುಗಳನ್ನು ಹೊರ ತೆಗೆಯುವಂತೆ ತಿಳಿಸಿದಾಗ ಆತನು ತಡವರಿಸುತ್ತಾ ಚೀಲದೊಳಗಡೆಯಿಂದ ಎರಡು ಜುವೆಲ್ಲರಿ ಬಾಕ್ಸ್ ಗಳನ್ನು ಹೊರಗಡೆ ತೆಗೆದು ತೋರಿಸಿದ್ದು ಅದನ್ನು ಕೂಡ ತೆರೆದು ತೋರಿಸುವಂತೆ ತಿಳಿಸಿದಾಗ ಅದನ್ನು ತೆರೆದು ತೋಸಿದ್ದು ಅದನ್ನು ನೋಡಲಾಗಿ ಅದರಲ್ಲಿ ಕೆಲವು ಚಿನ್ನದಂತೆ ತೋರುವ ಆಭರಣಗಳು ಇದ್ದು ಅದರ ಬಗ್ಗೆ ವಿಚಾರಿಸಿದಾಗ ಒಮ್ಮೆ ತನ್ನದಾಗಿರುವುದಾಗಿಯೂ, ಇನ್ನೊಮ್ಮೆ ಅವುಗಳು ನಕಲಿಯಾಗಿರುವುದಾಗಿಯೂ ಹಾಗೂ ಈಗಾಗಲೇ ಕೆಲವು ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ನಂಬಿಸಿ ಜುವೆಲ್ಲರಿ ಅಂಗಡಿಗೆ ಮಾರಾಟ ಮಾಡಿರುವುದಾಗಿಯೂ ಉತ್ತರ ನೀಡಿದ್ದು ಸದ್ರಿಯಾತನಲ್ಲಿರುವ ಚಿನ್ನದಂತೆ ತೋರುವ ಸೊತ್ತುಗಳಿಗೆ ದಾಖಲೆ ಪತ್ರದ ಬಗ್ಗೆ ವಿಚಾರಿಸಿದಾಗ ಹಾಜರುಪಡಿಸಿರುವುದಿಲ್ಲ. ಸದ್ರಿಯಾತನಲ್ಲಿರುವ 12 ಬಳೆಗಳು ಬ್ರಾಸ್ ಲೈಟ್-1, ಸರ-1 ಹಾಗೂ ಆತನಲ್ಲಿರುವ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಂಡಿರುವುದಾಗಿದೆ.

 

8.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅರುಣ್ ಪ್ರಕಾಶ್ ರವರು ಕಳೆದ ಒಂದು ವರ್ಷದಿಂದ ಸುನೀಲ್ ಎಂಬವರ ಮಾಲಕತ್ವದ ಕೆಎ-19-ಡಿ-2676 ನೇ ಪದ್ಮಾವತಿ ಬಸ್ಸಿನಲ್ಲಿ ಚಾಲಕರಾಗಿದ್ದು, ದಿನಾಂಕ 10-02-2014 ರಂದು ಮದ್ಯಾಹ್ನ 12:15 ಗಂಟೆಗೆ ಮೂಡಬಿದ್ರೆಯಿಂದ ಮಂಗಳೂರು ಗೆ ಬರುತ್ತಾ ಮದ್ಯಾಹ್ನ 13:15 ಗಂಟೆಗೆ ಬಲ್ಮಠ ದಾಟಿ ಮಿಲಾಗ್ರೀಸ್ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುತ್ತಿದ್ದಾಗ ಬಸ್ಸಿನ ಎದುರುಗಡೆಯಿಂದ ಟಿವಿಎಸ್ ಸ್ಕೂಟರ್ ನಂಬ್ರ ಕೆಎ-19-ಇಹೆಚ್.-7686 ನೇದರನ್ನು ಅದರ ಸವಾರರು ನಿಲ್ಲಿಸಿ ಪಿರ್ಯಾದಿದಾರರ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಪಿರ್ಯಾದಿದಾರರ ತಲೆಯ ನೆತ್ತಿಗೆ ಹೊಡೆದು ಹಾಗೂ ಇನ್ನೊಂದು ಕೈಯಿಂದ ಚಾಲಕನ ಬಲ ಬದಿಯ ಬಾಗಿಲನ್ನು ತೆಗೆದು ಪಿರ್ಯಾದಿದಾರರನ್ನು ಎಳೆದು ಹಾಕಲು ಪ್ರಯತ್ನಿಸಿದ್ದು, ಅಲ್ಲದೇ ಬಲಗಡೆ ಇರುವ ಸೈಡ್ ಗ್ಲಾಸ್ ನ್ನು ಹೆಲ್ಮೆಟ್ ನಿಂದ ಹೊಡೆದು ಹುಡಿ ಮಾಡಿದ್ದು, ಇದರಿಂದ ಸುಮಾರು ಒಂದು ಸಾವಿರ ರೂಪಾಯಿ ನಷ್ಟ ಉಂಟಾಗಿದ್ದು, ನಂತರ ಆರೋಪಿಯು ಸ್ಕೂಟರ್ ನಲ್ಲಿ ಪರಾರಿಯಾಗಿದ್ದು, ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.

 

9.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಹರೀಶ್ ಕುಮಾರ್ ಶೆಟ್ಟಿ ರವರು ಮಂಗಳೂರು ನಗರದ  ಬಲ್ಮಠ ರಸ್ತೆಯಲ್ಲಿರುವ ಸಿ.ಟಿ ಸೆಂಟರ್ನಲ್ಲಿ ವಿಜಯ ಕಮ್ಯೂನಿಕೇಶನ್ ಎಂಬ ಅರಾಮೆಕ್ಸ್ ಕೋರಿಯರ್ಸರ್ವಿಸ್‌  ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದುಫಿರ್ಯಾದಿದಾರರು ಮೊಟಾರು ಸೈಕಲ್  ನಂಬ್ರ ಕೆಎ-19-ಇಇ-0116 ನೇ ಬಜಾಜ್ ಡಿಸ್ಕವರಿಯನ್ನು ಹೊಂದಿದ್ದು, ದಿನಾಂಕ 21-01-2014 ರಂದು ರಾತ್ರಿ 9-00 ಗಂಟೆಯ ಸಮಯಕ್ಕೆ ಮಂಗಳೂರು ನಗರದ ಬಲ್ಮಠ ರಸ್ತೆಯಲ್ಲಿರುವ ಹೊಟೇಲ್ ರೂಪಾದ ಎದುರುಗಡೆ ಇರುವ ಸಿಟಿ ಸೆಂಟರ್ನ ಪಾರ್ಕಿಂಗ್ ಸ್ಥಳದಲ್ಲಿ   ತನ್ನ ಬಜಾಜ್ ಡಿಸ್ಕವರಿ ಮೊಟಾರು ಸೈಕಲನ್ನು ಪಾರ್ಕ್ ಮಾಡಿ ನಿಲ್ಲಿಸಿ, ಕೆಲಸದ ಬಗ್ಗೆ ಹೊರಗೆ ಹೋಗಿದ್ದು, ಬಳಿಕ ದಿನಾಂಕ 23-01-2014 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಮೊಟಾರು ಸೈಕಲ್  ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ಮೊಟಾರು ಸೈಕಲ್ ಕಾಣೆಯಾಗಿದ್ದುಬಳಿಕ ಯಾರಾದರೂ ದೂಡಿಕೊಂಡು ಅಲ್ಲಿ ಎಲ್ಲಿಯಾದರೂ ನಿಲ್ಲಿಸಿರಬಹುದೆಂದು ಸುತ್ತಮುತ್ತಲಿನ ಸ್ಥಳಗಳಲ್ಲಿ ಹಾಗು ಮಂಗಳೂರು ನಗರದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಇದನ್ನು ಯಾರೋ ಕಳ್ಳರು ಕಳವು ಮಾಡಿದ್ದಾಗಿ, ಕಳವಾದ ಬಜಾಜ್ ಡಿಸ್ಕವರಿಯ ಚಾಸೀಸ್ ನಂಬ್ರ MD2DSJZZZUWH38698  ಇಂಜಿನ್ ನಂಬ್ರ JZMBUH50719 ಮಾದರಿ 2011, ಬಣ್ಣ : ಕಪ್ಪು ಬೆಲೆ ಅಂದಾಜು ರೂ. 25,000/- ಆಗಬಹುದು.

 

10.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-02-2014 ರಂದು ರಾತ್ರಿ 8-30 ಗಂಟೆಯ ಸಮಯಕ್ಕೆ ಮಂಗಳೂರು ನಗರದ ಬಲ್ಮಠ ರಸ್ತೆಯಲ್ಲಿರುವ ಡಾನ್ ಬಾಸ್ಕೋದ ಬಳಿ ರಸ್ತೆ ಬದಿಯಲ್ಲಿ   ಪಿರ್ಯಾದಿದಾರರಾದ ಶ್ರೀ ಗಿರೀಶ್ ಕಮಾಲಕರ್ ಶೇಟ್ ರವರು ತನ್ನ ಬಾಬ್ತು ಬಜಾಜ್ ಪಲ್ಸರ್  ಮೊಟಾರು ಸೈಕಲ್  ನಂಬ್ರ ಕೆಎ-19-.ಎಚ್-3222 ನ್ನು ಪಾರ್ಕ್ ಮಾಡಿ ನಿಲ್ಲಿಸಿ ಸ್ನೇಹಿತರೊಂದಿಗೆ ಲಿಕ್ವಿಡ್ ಲಾಂಚ್ಗೆ ಹೋಗಿದ್ದು, ಈ ಸಮಯ ಬೈಕ್ಗೆ ಹ್ಯಾಂಡ್ಲಾಕ್ಹಾಕಲು ಮರೆತುಹೋಗಿರುವುದಾಗಿ, ಬಳಿಕ  ರಾತ್ರಿ ವಾಪಾಸು  11-15 ಗಂಟೆ ಸಮಯಕ್ಕೆ ಮೊಟಾರು ಸೈಕಲ್  ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ಮೊಟಾರು ಸೈಕಲ್ ಕಾಣೆಯಾಗಿದ್ದು, ಬಳಿಕ ಯಾರಾದರೂ ದೂಡಿಕೊಂಡು ಅಲ್ಲಿ ಎಲ್ಲಿಯಾದರೂ ನಿಲ್ಲಿಸಿರಬಹುದೆಂದು ಸುತ್ತಮುತ್ತಲಿನ ಸ್ಥಳಗಳಲ್ಲಿ ಹಾಗು ಮಂಗಳೂರು ನಗರದಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಇದನ್ನು ಯಾರೋ ಕಳ್ಳರು ಕಳವು ಮಾಡಿದ್ದಾಗಿ, ಕಳವಾದ ಬಜಾಜ್ ಪಲ್ಸರ್ನ ಚಾಸೀಸ್ ನಂಬ್ರ MD2A36FZ0DCK61633  ಇಂಜಿನ್ ನಂಬ್ರ JLZCDK57217 ಮಾದರಿ 2013, ಬಣ್ಣ : ನೀಲಿ, ಬೆಲೆ ಅಂದಾಜು ರೂ. 45,000/- ಆಗಬಹುದು.

 

11. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2014 ರಂದು 13:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಜೇಶ್ ಆಳ್ವ ರವರು ಅವರ ಮಿತ್ರ ಮನೋಜ್ ರವರ ಮನೆಯಾದ ಕೊಡಿಕಲ್ನಲ್ಲಿ ಊಟಮಾಡಿಕೊಂಡು ಕುಳಿತುಕೊಂಡ ಸಮಯ ಸುಧೀರ್ ಎಂಬವರು ಮನೆಗೆ ಬಂದು ಅವಾಚ್ಯಾ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಮೂಗಿಗೆ ಕೈ ಮುಷ್ಠಿಯಿಂದ ಬಲವಾಗಿ ಗುದ್ದಿದ್ದು, ಇದರಿಂದ ಮೂಗಿನಲ್ಲಿ ರಕ್ತ ಬರುವ ಗಾಯವಾಗಿದ್ದು, ಕೈಯಲ್ಲಿದ್ದ ಬೀಗದ ಗೊಂಚಲು ತಾಗಿದ ಪರಿಣಾಮ ಗಾಯವಾಗಿರುವುದಾಗಿದೆ. ಅಲ್ಲದೆ ಸುಧೀರನು ಪಿರ್ಯಾದಿದಾರರನ್ನು ಉದ್ದೇಶಿಸಿ  ಜೀವ ಬೇದರಿಕೆ ಹಾಕಿರುತ್ತಾನೆ.

 

12. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:10-02-2014ರಂದು ಪಿರ್ಯಾದಿ ಶ್ರೀ ಅಶ್ರಫ್ ಎಂಬವರು  ಮನೆಯಿಂದ ಮಂಜನಾಡಿ ಗ್ರಾಮದ ಕಲ್ಕಟ್ಟ ಪೇಟೆಗೆ ಸಾಮಾನು ಖರೀದಿಸುವರೇ ಹೊರಡುವ ಸಮಯ ಅವರ ಮಗ ಗಾಯಾಳು ಇಸ್ಮಾಯಿಲ್ ಸೊಹೈಲ್(15) ಕೂಡ ತನ್ನ ಸೈಕಲ್ ನ್ನು ದೂಡಿಕೊಂಡು ತನ್ನೊಂದಿಗೆ ರಸ್ತೆಯ ಎಡಬದಿಯಲ್ಲಿ ಅಂದರೆ ಪಿರ್ಯಾದಿಯ ಬಲಭಾಗದಲ್ಲಿ ಸೈಕಲ್ ನ್ನು ದೂಡಿಕೊಂಡು ನಡೆದುಕೊಂಡು ಹೋಗುತ್ತಿರುವ ಸಮಯ ರಾತ್ರಿ ಸುಮಾರು 8 ಗಂಟೆ ಸಮಯಕ್ಕೆ ನಾಟೆಕಲ್ ಕಡೆಯಿಂದ ತೌಡುಗೋಳಿ ಕ್ರಾಸ್  ಕಡೆಗೆ ಹೋಗುವ ಕೆಎ19-ಸಿ 9699ನೇ ಬಸ್ ನ್ನು ತಿರುವಿನಕಲ್ಲಿ ಅದರ ಚಾಲಕ ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿಯ ಮಗನಿಗೆ ಢಿಕ್ಕಿ ಹೊಡೆದ ಪರಿಣಾಮ ಇಸ್ಮಾಯಿಲ್ ಸೊಹೈಲ್ (15) ರಸ್ತೆಗೆ ಬಿದ್ದ ಪರಿಣಾಮ ಆತನ ಕುತ್ತಿಗೆ ಹಿಂಬದಿಗೆ ಗುದ್ದಿದ ಗಾಯ ಬಲಕೈ ಮೊಣಗಂಟಿನ ಬಳಿ, ಬಲತೋಳಿನ ಬಳಿ ಗುದ್ದಿದ ಗಾಯ ಹಾಗೂ ತರಚಿದ ಗಾಯವಾಗಿದ್ದು ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

 

13.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/11-02-2014 ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜು ಬಿ., ರವರು ರಾತ್ರಿ ಕೇಂದ್ರ ಉಪ ವಿಭಾಗದ ರೌಂಡ್ಸ್ ನೋಡಲ್ ಕರ್ತವ್ಯದಲ್ಲಿದ್ದಾಗ ಮಂಗಳೂರು ನಗರದ ಹಳೆ ಬಸ್ ನಿಲ್ದಾಣದ ಬಳಿ ಹಣವನ್ನು ಪಣವಾಗಿಟ್ಟು ಉಲಾಯಿ ಪಿದಾಯಿ ಎಂಬ ಜುಗಾರಿ ಆಡುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳಾದ ಎಎಸ್ಐ ನಾಗೇಶ್, ಪಿಸಿ 649, ಪಿಸಿ 312, ಪಿಸಿ 329, ಹಾಗೂ ಪಿಸಿ 865 ಹಾಗೂ ಪಂಚರೊಂದಿಗೆ 01:45 ಗಂಟೆಗೆ ದಾಳಿ ಮಾಡಿ ಆರೋಪಿಗಳಾದ 1) ಸುಹಾಸ್, 2) ಹರೀಶ್ ಶೆಟ್ಟಿ, 3) ಕೆ.ಪಿ.ಶರಣ್ ರಾವ್, 4) ಜಗದೀಶ್, 5) ಗೌರೀಶ್ ರವರನ್ನು ದಸ್ತಗಿರಿ ಮಾಡಿ ಆಟಕ್ಕೆ ಉಪಯೋಗಿಸಿದ್ದ ರೂ 1050/, 44 ಇಸ್ಪೀಟ್ ಎಲೆ, ನೆಲಕ್ಕೆ ಹಾಸಿದ್ದ ಪೇಪರನ್ನು ಸ್ವಾಧಿನಪಡಿಸಿದ್ದಾಗಿರುತ್ತದೆ.

 

14. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-02-2014 ರಂದು ರಾತ್ರಿ ಸಮಯ 20-15 ಗಂಟೆಗೆ ಪಿರ್ಯಾದುದಾರರಾದ ಶ್ರೀ ಪ್ರಕಾಶ್ ಪಿಂಟೋ ರವರು ತೊಕ್ಕೊಟ್ಟುವಿನ ವಿನಮ್ರ ಬಾರ್ನ ರಸ್ತೆಯ ಬದಿಯಲ್ಲಿ ನಿಂತಿದ್ದ ಸಮಯ ವಿನಮ್ರ ಬಾರ್ನ ಎದುರುಗಡೆ ಪಿರ್ಯಾದುದಾರರಿಗೆ ಪರಿಚಯವಿರುವ ಕೆರೆಬೈಲ್ನಿವಾಸಿ ಓಸ್ವಾಲ್ಡ ಅಪೋಸ್‌(55) ಎಂಬುವವರು ನಿಂತಿದ್ದರು ಆಗ ಚೆಂಬುಗುಡ್ಡೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ವಾಹನವೊಂದನ್ನು ಅದರ ಚಾಲಕನು ಅತೀ ವೇಗ, ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಓಸ್ವಾಲ್ಡ ಅಪೋಸ್ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಓಸ್ವಾಲ್ಡ ಅಪೋಸ್ರವರ ಎಡ ಕೆನ್ನೆಯ ಬಳಿ ರಕ್ತಗಾಯ, ತಲೆ ಹಿಂಬದಿ ಜಜ್ಜಿದ ಗಾಯ ಹಾಗೂ ಎರಡೂ ಕಾಲುಗಳ ಮೂಳೆ ಮುರಿತದ ಚರ್ಮ ಸುಲಿದ ಗಾಯವಾಗಿರುತ್ತದೆ ನಂತರ ಅವರನ್ನು ಆರೈಕೆ ಮಾಡಿ ಕೂಡಲೇ ವಾಹನವೊಂದರಲ್ಲಿ ಸಮೀಪದ ಸಹಾರ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಒಳಪಡಿಸಿದಾಗ ವೈದ್ಯರು ಅವರನ್ನು ಪರೀಕ್ಷಿಸಿ ಮೃತ ಪಟ್ಟ ವಿಚಾರ ತಿಳಿಸಿರುವುದಾಗಿದೆ. ಅಪಘಾತದ ಸಮಯ ಪಿರ್ಯಾದುದಾರರು ವಾಹನದ ನಂಬ್ರವನ್ನು ನೋಡಲಾಗಿ KA-19-C-5031 ನೇ ಬೊಲೇರೋ ಪಿಕ್ಅಪ್‌‌‌‌ ವಾಹನವಾಗಿದ್ದು ಅದರ ಚಾಲಕನು ರಂಜಿತ್ಎಂಬುದಾಗ ತಿಳಿದಿರುತ್ತದೆ.

No comments:

Post a Comment