Monday, February 3, 2014

Daily Crime Reports 02-02-2014

ದೈನಂದಿನ ಅಪರಾದ ವರದಿ.

ದಿನಾಂಕ 02.01.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

3

ಸಾಮಾನ್ಯ ಕಳವು

:

0

ವಾಹನ ಕಳವು

:

3

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

9

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1. ಉರ್ವಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2014 ರಂದು ರಾತ್ರಿ 8-15 ಗಂಟೆಗೆ ಫಿರ್ಯಾದುದಾರರಾದ ಶ್ರೀ ನವೀನ್ ಟಿ.ಕೆ. ರವರು ಕೆಲಸದ ನಿಮಿತ್ತ ಬೆಂಗಳೂರಿಗೆ ಮನೆಯಿಂದ ಹೋಗಿದ್ದು ದಿನಾಂಕ 31-01-2014 ರಂದು ಬೆ 10-30 ಗಂಟೆಗೆ ಬೆಂಗಳೂರಿನಲ್ಲಿರುವ ಸಮಯ ಫಿರ್ಯಾದುದಾರರು ಕೆಲಸ ಮಾಡುತ್ತಿರುವ ಮಂಗಳೂರು ಇನ್ಫೋಸಿಸ್ಕಛೇರಿಯ ಸೆಕ್ಯುರಿಟಿ ಗಾರ್ಡ್ಒಬ್ಬರು ಫೋನ್ ಮಾಡಿ ಫಿರ್ಯಾದುದಾರರು ನೆರಮನೆವಾಸಿಯಾದ ಹೆಮಂತ್ರವರು ಕಛೇರಿಗೆ ಬಂದಿರುವುದಾಗಿ ತಿಳಿಸಿ ಅವರಿಗೆ ಫೋನ್ ನೀಡಿದ್ದು ಅವರು ಮನೆಯ ಬಾಗಿಲಿನ ಚಿಲಕ ಮುರಿದಿದ್ದು ಮನೆಯೊಳಗೆ ಕಳ್ಳತನವಾಗಿರುವ ಬಗ್ಗೆ ಸಂಶಯವಿರುವುದಾಗಿ ತಿಳಿಸಿದ ಮೇರೆಗೆ ಫಿರ್ಯಾದುದಾರರು ಕೂಡಲೇ ಬೆಂಗಳೂರಿನಿಂದ ಹೊರಟು ಮನೆಗೆ ರಾತ್ರಿ 7-30 ಗಂಟೆಗೆ ಬಂದು ನೋಡಿದಲ್ಲಿ ಮನೆಯ ಎದುರು ಬಾಗಿಲಿನ ಚಿಲಕ ಮುರಿದಿದ್ದು ಒಳಗೆ ಹೋಗಿ ನೋಡಲಾಗಿ ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿದ್ದು ಮನೆಯ ಬೆಡ್ರೂಮ್ ನಲ್ಲಿದ್ದ ಕಪಾಟುಗಳ ಬಾಗಿಲುಗಳನ್ನು ತೆರೆದಿರುವುದು ಕಂಡು ಬಂದಿರುತ್ತದೆ. ಅದರಂತೆ ಕಪಾಟಿನಲ್ಲಿಟ್ಟ ವಸ್ತುಗಳನ್ನು ಪರೀಕ್ಷಿಸಿದಲ್ಲಿ 2 ಕ್ಯಾಮರಗಳುಇಂಡಿಯನ್ ಓವರ್ಸಿಸ್   ಬ್ಯಾಂಕ್ಲಾಕರ್ಕೀ, ದಾಖಲಾತಿಗಳನ್ನಿಟ್ಟ ಬ್ಯಾಗ್‌‌ ಮತ್ತು ಅಲ್ಲೇ ಮಂಚದಲ್ಲಿಟ್ಟ ಬೆಳ್ಳಿಯ ಹೂವಿನ ಬುಟ್ಟಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಒಟ್ಟು ಮೌಲ್ಯ ರೂ 24,750/- ಆಗಿರುತ್ತದೆ.

 

2. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ :    ದಿನಾಂಕ 31-01-2014 ರಂದು  ಪಿರ್ಯಾದಿದಾರರಾದ ಶ್ರೀ ಪ್ರವಿಣ್ ಮಸೂರ್ ರವರು ತಮ್ಮ ಸಹೋದ್ಯೋಗಿ ಚೇತನ್ರವರೊಂದಿಗೆ ಕೆಲಸದ ನಿಮಿತ್ತ ಮಂಗಳೂರು ನಗರದ ಕಾರ್ಸ್ರ್ಟೀಟ್ನಲ್ಲಿರುವ ಐ.ಸಿ..ಸಿ.ಐ ಬ್ಯಾಂಕ್ಗೆ ಹೋಗಲೆಂದು ಭಾರತ್‌‌ ಸ್ಕೂಲ್ಬುಕ್ಕಂಪೆನಿಯ ಬಳಿಗೆ ಬಂದು ಎದುರುಗಡೆ ರಸ್ತೆ ಬದಿಯಲ್ಲಿ ನಿಂತು ಕೊಂಡಿದ್ದಾಗ, ಸುಮಾರು ಮದ್ಯಾಹ್ನ 12:30 ಗಂಟೆಗೆ ನ್ಯೂಚಿತ್ರ ಜಂಕ್ಷನ್ಕಡೆಯಿಂದ  ಕೆ.-19-ಡಿ-8338 ನೇ ರೂಟ್ನಂಬ್ರ-13 ನೇ ಭಗವತಿ ಹೆಸರಿನ ಬಸ್ನ್ನು ಅದರ ಚಾಲಕ ಸಂಪತ್ಎಂಬವರು ಅತೀ ವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು, ರಸ್ತೆ ಬದಿಯಲ್ಲಿ  ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಸದ್ರಿಯವರ ಬಲಕಾಲಿನ ಮೊಣಗಂಟಿಗೆ ಗುದ್ದಿದ ನಮೂನೆ ಗಾಯ, ಎಡಕೈಯ ಅಂಗೈಗೆ  ಹಾಗೂ ಎಡಕಾಲಿನ ಪಾದದ ಮೇಲ್ಬಾಗದಲ್ಲಿ ತರಚು ಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ಸದ್ರಿ ಬಸ್ನವರು ಹಾಗೂ ಜೊತೆಯಲ್ಲಿದ್ದ ಚೇತನ್ರವರು ಮಂಗಳೂರಿನ ಯೆನೆಪೋಯಾ ಆಸ್ಪತ್ರೆಗೆ ಆಟೋ ರಿಕ್ಷಾದಲ್ಲಿ ಕೊಂಡೊಯ್ದು ದಾಖಲಿಸಿರುವುದಾಗಿದೆ.

 

3. ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02.02.2014 ರಂದು ಪಿರ್ಯಾದುದಾರರು ತಮ್ಮ ದೊಡ್ಡಮ್ಮ 80 ವರ್ಷ ಪ್ರಾಯದ ವಿರುತಾಂಬಳ್ ಎಂಬವರ ಜೊತೆ ಮಂಗಳೂರು ನಗರದ ಹೊಯಿಗೆ ಬಜಾರ್ ಕಡೆಯಿಂದ ಹಳೇ ಬಂದರಿಗೆ ಕೂಲಿ ಕೆಲಸದ ನಿಮಿತ್ತ ನಡೆದುಕೊಂಡು ಬರುತ್ತಾ ಬೆಳಿಗ್ಗೆ ಸುಮಾರು 6:30 ಗಂಟೆಗೆ ಗೂಡ್ ಶೆಡ್ ಎಂಬಲ್ಲಿಗೆ ತಲುಪಿದಾಗ ಗೂಡ್ ಶೆಡ್ ಒಳಗಿನಿಂದ ಹೊರಗೆ ಡಾಮಾರು ರಸ್ತೆಗೆ ಲಾರಿಯೊಂದನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗೂಡ್ ಶೆಡ್ ಒಳಗಿನಿಂದ ಡಾಮಾರು ಮುಖ್ಯ ರಸ್ತೆಗೆ ಲಾರಿಯನ್ನು ತಿರುಗಿಸುವಾಗ ಸದ್ರಿ ಲಾರಿಯು ಪಿರ್ಯಾದುದಾರರ ಜೊತೆಯಲ್ಲಿದ್ದ ವಿರುತಾಂಬಳ್ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ವಿರುತಾಂಬಳ್ ರವರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮಣಿಗಂಟಿಗೆ ತೀವ್ರ ಮತ್ತು ಬಲಬದಿ ಸೊಂಟದ ಬಳಿ ಗಾಯಗೊಂಡು ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲುಗೊಂಡವರು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 07:05 ಗಂಟೆ ಸಮಯಕ್ಕೆ ಮೃತಪಟ್ಟಿರುವುದು, ಅಲ್ಲದೇ ಅಪಘಾತ ಘಟಿಸಿದ ನಂತರ ಸದ್ರಿ ಲಾರಿ ಚಾಲಕರು ತಮ್ಮ ಲಾರಿಯೊಂದಿಗೆ ಪರಾರಿಯಾಗಿರುವುದಾಗಿದೆ.

 

4. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01.02.2014 ರಂದು ಸಂಜೆ ಸುಮಾರು 07.30 ಗಂಟೆಗೆ KA19-D-1743 ನ್ನು ಅದರ ಚಾಲಕ ಮೊಬೈಲ್ ಪೋನಿನಲ್ಲಿ  ಮಾತನಾಡುತ್ತಾ ಬಿಕರ್ನಕಟ್ಟೆ ಕಡೆಯಿಂದ  ಕಲ್ಪನೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಜಯಶ್ರೀ ಗೇಟ್  ಬಳಿ ಜೀತ್ ಎಂಟರ್ ಪ್ರೈಸಸ್ ಮೊಬೈಲ್ ಶಾಪ್  ಎದುರು ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಿನೇಶ್ ಕುಮಾರ್ ಎಂಬುವವರಿಗೆ ಡಿಕ್ಕಿ ಮಾಡಿದ ಪರಿಣಾಮ ತಲೆಗೆ ,ಕೆನ್ನೆಗೆ ಗಂಭೀರ ಗಾಯಗೊಂಡು SCS ಆಸ್ಪತ್ರೆಯಲ್ಲಿ ಓಳರೋಗಿಯಾಗಿ ದಾಖಾಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

5. ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01.02.2014 ರಂದು ಮದ್ಯಾಹ್ನ ಸುಮಾರು 02.00 ಗಂಟೆಗೆ  ಬಸ್ಸು ನಂಬ್ರ KA19-AA-1115 ನ್ನು ಅದರ ಚಾಲಕ ಕುಲಶೇಖರ ಕಡೆಯಿಂದ  ಬಿಕರ್ನಕಟ್ಟೆ  ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಲ್ಪನೆ ಅಂಚೆ ಕಛೇರಿ  ಬಳಿ ಇರುವ ಬಸ್ಸು ನಿಲ್ದಾಣದ ಎದುರು ತಲುಪುವಾಗ ಮುಂದಿನಿಂದ ಹೋಗುತ್ತಿದ್ದ ಮೋಟರ್ ಸೈಕಲ್ ನಂಬ್ರ KA19-EE- 5644ಕ್ಕೆ   ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರಾದ ವಿಶಾಲ್ ಶೆಟ್ಟಿ  ರಸ್ತೆಗೆ ಬಿದ್ದು ಸಾದಾ ಸ್ವರೂಪದ ಗಾಯಾಗೊಂಡಿರುತ್ತಾರೆ.

 

6. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-01-2014ರ ಬೆಳಿಗ್ಗೆ 07-00 ಗಂಟೆಯಿಂದ ಸಂಜೆ ಸುಮಾರು 18-00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಸೈಯದ್ ಜಬಿಯುಲ್ಲಾ ರವರ ಆರ್.ಸಿ. ಮಾಲಕತ್ವದ KA 19X 3538ನೇ ನೋಂದಣಿ ಸಂಖ್ಯೆಯ 2008ನೇ ಮೊಡೆಲಿನ ಇಂಜಿನ್ ನಂಬ್ರ: JA05EA89A04375, ಚಾಸೀಸ್ ನಂಬ್ರ: MBLJA05EE89A04289ನೇ ಕಪ್ಪು ಬಣ್ಣದ Hero Honda Super Splendor ದ್ವಿ-ಚಕ್ರ ವಾಹವನ್ನು ಮಂಗಳೂರು ನಗರದ ಕಂಕನಾಡಿ ಮಾರ್ಕೇಟ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

7. ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-02-2014 ರಂದು  ಮಂಗಳೂರು ನಗರದ ಪಂಪ್ವೆಲ್ ಕರ್ನಾಟಕ ಬ್ಯಾಂಕ್ ಸಮೀಪದ ಶ್ರೀ ಕೋರ್ದಬ್ಬು ದೈವಸ್ಥಾನದ ಬಳಿಯಿರುವ ನರ್ಸರಿ ಹಿಂಬದಿ ಖಾಲಿ ಜಾಗವಿರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಬಗ್ಗೆ ಬಂದ ಖಚಿತ ವರ್ತಮಾನದಂತೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವ್ ಪಡೀಲ್ ಮತ್ತು ಸಿಬ್ಬಂದಿಯವರುಗಳು ಜುಗಾರಿ ಆಟವಾಡುತ್ತಿದ್ದ ಸ್ಥಳಕ್ಕೆ ಹೋಗಿ ಧಾಳಿ ನಡೆಸಿ  ಜುಗಾರಿ ಆಟದಲ್ಲಿ ನಿರತರಾದ 5 ಮಂದಿ ವಶಕ್ಕೆ ತೆಗೆದುಕೊಂಡು ಇವರಿಂದ ಆಟಕ್ಕೆ ಉಪಯೋಗಿಸುತ್ತಿದ್ದ ಬಿಳಿ ಬಣ್ಣದ ಶೀಟ್-1, ಆಟಿನ್, ಡೈಮಂಡ್, ಕ್ಲವರ್ ಇಸ್ಪೀಟ್ ಎಲೆಗಳು- ಒಟ್ಟು 44 ಮತ್ತು ಈ ಜುಗಾರಿ ಆಟಕ್ಕೆ ಹಣವನ್ನು ಪಣವಾಗಿಟ್ಟ ರೂ. 4575/-ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ.

 

8. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-01-2014 ರಂದು ಪಿರ್ಯಾಧಿದಾರರಾದ ಶ್ರೀ ಶ್ರೀಧರ್ ಭಟ್ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA-19-EA-7450 ನೇದರಲ್ಲಿ ತನ್ನ ಮಗಳು ವರ್ಷಿಣಿ ಯನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಮಂಗಳೂರು ತಾಲೂಕು ಸಂಕೋಲಿಗೆ ಭಗವತಿ ಪ್ರೌಢ ಶಾಲೆಯಿಂದ ತನ್ನ ಮನೆ ದೇವಿಪುರಕ್ಕೆ ಕೆ.ಸಿ.ರೋಡ್ ಸಾರ್ವಜನಿಕ ರಸ್ತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಕೆ.ಸಿ.ನಗರ ವಿದ್ಯಾನಗರ ಪಲ್ಹಾ ಪ್ರೌಢ ಶಾಲೆಯ ಬಳಿ ತಲುಪಿದಾಗ ಸಮಯ ಸುಮಾರು ಸಂಜೆ 4:30 ಗಂಟೆಗೆ ಕಿನ್ಯ ಕಡೆಯಿಂದ ಕೆ.ಸಿ.ರೋಡ್ ಕಡೆಗೆ KA-19-P-640 ನೇದರ ಓಮ್ಮಿ ಕಾರಿನ ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಗಳು ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಬಲಕಾಲಿನ ತೊಡೆ ಹಾಗೂ ಕೋಲು ಕಾಲಿಗೆ ಗಂಭೀರ ಸ್ವೂಪದ ಮೂಳೆ ಮುರಿತದ ಗಾಯ ಹಾಗೂ ಬಲಕೈ ಭುಜಕ್ಕೆ, ಬಲ ಎದೆಗೆ ಗುದ್ದಿದ ನೋವುಂಟಾಗಿರುತ್ತದೆ. ಅವರ ಮಗಳು ವರ್ಷಿಣಿಗೆ ಬಲ ಕಾಲಿಗೆ ಗುದ್ದಿದ ನೋವು ಆಗಿರುತ್ತದೆ. ಈ ಘಟನೆಗೆ KA-19-P-640 ನೇ ಓಮ್ಮಿ ಕಾರಿನ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ.

 

9. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-01-2014 ರಂದು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ರಫೀಕ್ ರವರು ತನ್ನ ಹೆಂಡತಿ ಮನೆಯಾದ ಗಂಟಾಲ್ ಕಟ್ಟೆ ಎಂಬಲ್ಲಿಂದ ವಾಪಾಸು ಮನೆಗೆ ಬರುತ್ತಾ ಸಂಜೆ ಸಮಯ ಸುಮಾರು 16:00 ಗಂಟೆಗೆ ಮಂಗಳೂರು ತಾಲೂಕು ಕಲ್ಲಬೆಟ್ಟು ಗ್ರಾಮದ ಗಂಟಾಲ್ ಕಟ್ಟೆ ಶಾಲೆಯ ಬಳಿ ತಲುಪುವಾಗ್ಗೆ, ಗಂಟಾಲ್ ಕಟ್ಟೆ ಕಡೆಯಿಂದ ಸಹಸವಾರರನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದ ಕೆಎ-19-ಇಜೆ-6496 ನೇ ಮೋಟಾರ್ ಸೈಕಲ್ ಸವಾರನು ತನ್ನ ಬಾಬ್ತು ಮೋಟಾರ್ ಸೈಕಲ್ನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಕೆಎ-19-ಇಜೆ-6496 ನೇ ಮೋಟಾರ್ಸೈಕಲಿನಲ್ಲಿದ್ದ ಸಹ ಸವಾರನು ರಸ್ತೆಗೆ ಬಿದ್ದು, ಪರಿಣಾಮ ಪಿರ್ಯಾದಿದಾರರಿಗೆ ಎಡ ಕಣ್ಣಿನ ಹುಬ್ಬಿನ ಮೇಲೆ, ಎಡಕಣ್ಣಿನ ಬದಿಗೆ, ಎಡಕೈಗೆ, ಎಡಕಾಲಿಗೆ ರಕ್ತಗಾಯ, ಎಡ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು, ಸಹಸವಾರರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಅಲ್ಲದೇ ಈ ಅಪಘಾತದಿಂದ ಬೈಕ್ ಸವಾರರಿಗೂ ಗುದ್ದಿದ ಗಾಯವಾಗಿರುತ್ತದೆ.

 

10. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-02-2014 ರಂದು ಪಿರ್ಯಾದಿದಾರರಾದ ಶ್ರೀ ಕೆ. ರಾಮಚಂದ್ರ ಶೆಟ್ಟಿ ರವರು ಹಾಗೂ ಅವರ ಮನೆಯವರು ಕಾವೂರಿನ ಕುಟುಂಬದ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಬೆಳಿಗ್ಗೆ 11:30 ಗಂಟೆಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ರಾತ್ರಿ 10:15 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಒಳಗಿನ ಲೈಟು ಉರಿಯುತ್ತಿದ್ದು, ಪಿರ್ಯಾದಿದಾರರು ಮುಂಬಾಗಿಲು ತೆರೆಯಲು ಪ್ರಯತ್ನಿಸಿದಾಗ ಒಳಗಿನಿಂದ ಚಿಲಕ ಹಾಕಿರುವ ಸ್ಥಿತಿಯಲ್ಲಿ ತಿಳಿದ ಕಾರಣ ನೆರೆಮನೆಯವರ ಟಾರ್ಚ್ಲೈಟು ಪಡೆದು ಮನೆಯ ಹಿಂಬಾಗಿಲಿನ ಕಡೆಗೆ ಹೋದಾಗ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಮೂಲಕ ಒಳಪ್ರವೇಶಿಸಿ ಮನೆಯೊಳಗಿನ ಬೀರುವನ್ನು ಯಾವುದೋ ಆಯುಧದಿಂದ ಒಡೆದು ಬೀರುವಿನಲ್ಲಿದ್ದ ಸುಮಾರು 279 ಗ್ರಾಂ ಚಿನ್ನದ ಒಡೆವೆಗಳು, ವಜ್ರದ ಓಲೆ-1, ಚೇರೋಸ್ ವಾಚ್‌-1, ಸಿಟಿಸನ್ ವಾಚ್‌‌-1 ಇವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಕೃತ್ಯ ಬೆಳಿಗ್ಗೆ 11:30 ಗಂಟೆಯಿಂದ ರಾತ್ರಿ 10:00 ಗಂಟೆಯ ಮದ್ಯೆ ಆಗಿರುತ್ತದೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂ. 6,41,000/- ಆಗಬಹುದು.

 

 

11. ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2014ರಂದು 16-30 ಗಂಟೆಯಿಂದ 20-30 ಗಂಟೆಯ ಮದ್ಯೆ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯ ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಿರ್ಯಾದುದಾರರಾದ ರಮ್ಯಾ ಆಚಾರ್ಯ ರವರು ಪಾರ್ಕ್ ಮಾಡಿದ್ದ  ಪಿರ್ಯಾದುದಾರರ ಆರ್. ಸಿ. ಮಾಲಕತ್ವದ 2007ನೇ ಮೋಡಲ್ ನ ಕಪ್ಪು-ಗ್ರೇ ಬಣ್ಣದ ಅಂದಾಜು ರೂಪಾಯಿ 23000/- ಬೆಲೆ ಬಾಳುವ KA 19 X 287 ನೊಂದಣಿ ಸಂಖ್ಯೆಯ ಹೊಂಡಾ ಆಕ್ಟಿವಾ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನದ ಟೂಲ್ಸ್ ಬಾಕ್ಸ್ ನಲ್ಲಿ ವಾಹನಕ್ಕೆ ಸಂಬಂಧಪಟ್ಟ R.C. ಹಾಗೂ Insurance ನ ಜೇರಾಕ್ಸ್ ಪ್ರತಿ ಕೂಡ ಇದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

12. ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ವಸೀಮ್ ರವರು ಮಂಗಳೂರು ನಗರದ ಕಂದುಕದಲ್ಲಿ ಸುಮಾರು 1 ವರ್ಷದಿಂದ ಗುಜರಿ ಅಂಗಡಿ ಇಟ್ಟುಕೊಂಡು ಕೆಲಸ ಮಾಡಿಕೊಂಡಿದ್ದು,   ಅಗತ್ಯ ಕೆಲಸಕ್ಕೆ ಹೊಂಡಾ ಅಕ್ಟೀವಾ ನಂಬ್ರ ಕೆಎ-19-ಇಡಿ-4476 ನೇದನ್ನು ಉಪಯೋಗಿಸಿಕೊಳ್ಳುತ್ತಿದ್ದು,   ದಿನಾಂಕ 19-01-2014 ರಂದು ರಾತ್ರಿ 10:00 ಗಂಟೆಯ ಸಮಯಕ್ಕೆ ಮಂಗಳೂರು ನಗರದ ಕಂಡತ್ತಪಳ್ಳಿಯಲ್ಲಿರುವ ಮನೆಯ ಕೆಳಗಡೆ ರಸ್ತೆ ಬದಿಯಲ್ಲಿ ತನ್ನ ಬಾಬ್ತು ಸ್ಕೂಟರನ್ನು ಪಾರ್ಕ್ ಮಾಡಿ ನಿಲ್ಲಿಸಿದ್ದು, ಮರು ದಿನ ದಿನಾಂಕ 20-01-2014 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಸ್ಕೂಟರ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ಸ್ಕೂಟರ್ ಕಾಣೆಯಾಗಿದ್ದುಬಳಿಕ ಯಾರಾದರೂ ದೂಡಿಕೊಂಡು ಅಲ್ಲಿ ಎಲ್ಲಿಯಾದರೂ ನಿಲ್ಲಿಸಿರಬಹುದೆಂದು ಸುತ್ತಮುತ್ತಲಿನ ಸ್ಥಳಗಳಲ್ಲಿ ಹಾಗು ಮಂಗಳೂರು ನಗರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಇದನ್ನು ಯಾರೋ ಕಳ್ಳರು ಕಳವು ಮಾಡಿದ್ದಾಗಿದೆ. ಕಳವಾದ ಹೊಂಡಾ ಅಕ್ಟೀವಾದ ಚಾಸೀಸ್ ನಂಬ್ರ ME4JC44GB7005889  ಇಂಜಿನ್ ನಂಬ್ರ JC44E5006216 ಮಾದರಿ 2011, ಬಣ್ಣ : ಕಪ್ಪು ಬೆಲೆ ಅಂದಾಜು ರೂ. 35000/- ಆಗಬಹುದು. ಸದ್ರಿ ಸ್ಕೂಟರ್ನಲ್ಲಿ ಸ್ಕೂಟರ್ಗೆ ಸಂಬಂಧಿಸಿದ ದಾಖಲಾತಿಗಳಾದ ಇನ್ಸೂರೆನ್ಸ್ ದಾಖಲೆಯ ಮೂಲಪ್ರತಿಗಳು ಇದ್ದು, ಇವುಗಳ ಕೂಡಾ ಕಾಣೆಯಾಗಿರುತ್ತದೆ

 

13. ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಾಜೀಬ್ ಕುಮಾರ್ ರವರು ತರ್ಮೊನ್ಹೀಟ್ಟ್ರೇಸರ್ಸ್ಪ್ರೈವೇಟ್ಲಿಮಿಟೆಡ್ನಲ್ಲಿ ಎಲೆಕ್ಟ್ರಿಕಲ್‌‌ ಇಂಜೀನಿಯರ್ಆಗಿ, ಪ್ರಸ್ತುತ ಕಳವಾರು ಎಂಬಲ್ಲಿ ಓಎಮ್ಪಿಎಲ್ಆಫ್ಸೈಟ್ನಲ್ಲಿ ಕೆಲಸ ಮಾಡುತ್ತಿದ್ದು, ಇವರ ಕಂಪೆನಿಯು ಎಲ್ಎಂಡ್ಟಿ ಕಂಪೆನಿಯಿಂದ  ಸಬ್ಕಂಟ್ರಾಕ್ಟರ್ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಕಂಪೆನಿಯ ಕೆಲಸಕ್ಕೆ ಅಲ್ಯುಮೀನಿಯಂ ಶೀಟ್ನ್ನು ಪೈಪ್ನ ಮೇಲ್ಗಡೆ ಅಳವಡಿಸಲು ಎಲ್ಎಂಡ್ಟಿ ಕಂಪೆನಿಯಿಂದ ಅಲ್ಯಮೀನಿಯಂ ಶೀಟನ್ನು ತರಿಸಿಕೊಂಡು ಕೆಲಸ ಮಾಡಿಕೊಂಡಿರುತ್ತಾರೆ. ಇವರು ಕೆಲಸಕ್ಕೆ ಉಪಯೋಗಿಸುವ ಮತ್ತು ಕೆಲಸ ಮುಗಿದು ಉಳಿದ ಅಲ್ಯುಮೀನಿಯಂ ಶೀಟುಗಳನ್ನು ಕಂಟೈನರ್ನಲ್ಲಿ ಇಟ್ಟು ಬೀಗ ಹಾಕುತ್ತಾರೆ. ಅದರಂತೆ ದಿನಾಂಕ 25-01-2014 ರಂದು ಸಂಜೆ ಸುಮಾರು 7-00 ಗಂಟೆಯಿಂದ ದಿನಾಂಕ 26-01-2014 ರಂದು ಬೆಳಿಗ್ಗೆ ಸುಮಾರು 06-15 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರ ಕಂಪೆನಿಯ ಬಾಬ್ತು ಕಂಟೈನರ್ನ ಬೀಗ ಮುರಿದು ಅದರೊಳಗಿದ್ದ 18 ಅಲ್ಯುಮೀನಿಯಂ ಶೀಟ್ಗಳನ್ನು ಕಳ್ಳತನ ಮಾಡಿದ್ದು, ಕಳ್ಳತನ ಆದ ಅಲ್ಯುಮೀನಿಯಂ ಶೀಟ್ಗಳ ಅಂದಾಜು 48 ಸಾವಿರ ರೂಪಾಯಿ ಆಗಬಹುದು.

 

14. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:01/02/2014 ರಂದು ರಾತ್ರಿ 20-55 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಸುಂಕದಕಟ್ಟೆ ಬಳಿ ಮೇಲಿನ ಆರೋಪಿಗಳಾದ ಅಜೀತ್ ಕುಮಾರ್, ಭಾಸ್ಕರ್ ಮೂಲ್ಯ, ಪ್ರಭಾಕರ್ ಅಮೀನ್, ದಯಾನಂದ ಕೆ., ರೊಶನ್ ಲೋರೆಲ್ಹೋ, ಜೊಸೇಫ್ ಐವನ್ ಎಂಬವರು ಸಾರ್ವಜನಿಕ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬದ ಬೆಳಕಿನಲ್ಲಿ ನಗದು ಹಣ ರೂ.1,200/- ಅನ್ನು ಉಪಯೋಗಿಸಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳನ್ನು ಉಳಾಯಿ ಪಿದಾಯಿ ಅದೃಷ್ಠದ ಜುಗಾರಿ ಆಟವನ್ನು ಆಡಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟು ಮಾಡಿದವರ ಮೇಲೆ ಕರ್ಮ ಕೈಗೊಂಡಿದ್ದಾಗಿದೆ. 

 

15. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  31.01.2014 ರಂದು  ಪಿರ್ಯಾದಿದಾರರಾದ ಶ್ರೀ ಸಾಹುಲ್ ಹಮೀದ್ ರವರು ತನ್ನ ಬಾಬ್ತು KL 14 N 8229 ನೇ ಕಾರಿನಲ್ಲಿ  ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ ಹೋಗುತ್ತಿರುವ ಸಮಯ ಮದ್ಯಾಹ್ನ 13:00 ಗಂಟೆ ವೇಳೆಗೆ ಜಪ್ಪಿನಮೊಗರು  ಎಂಬಲ್ಲಿಗೆ ತಲುಪುತ್ತಿದ್ದಂತೆ ತೊಕ್ಕೊಟ್ಟು ಕಡೆಯಿಂದ ಬಸ್ಸು ಬರುವುದನ್ನು  ಕಂಡು  ಕಾರನ್ನು  ಎಡಕ್ಕೆ ತೆಗೆದುಕೊಂಡಾಗ ಮಂಗಳೂರು  ಕಡೆಯಿಂದ KA 01 D 8011 ನೇ ಜಲ್ಲಿ ಮಿಕ್ಸೆಡ್ಲಾರಿಯ ಚಾಲಕ ಸದ್ರಿ  ಲಾರಿಯನ್ನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ ಡಿಕ್ಕಿಯ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ  MESCOM ಗೆ ಸಂಬಂದಿಸಿದ Street Light ಕಂಬಕ್ಕೆ ಡಿಕ್ಕಿ ಹೊಡೆದು  ಕಾರು ಸಂಪೂರ್ಣ ಜಖಂಗೊಂಡಿರುತ್ತದೆ, ಅಲ್ಲದೆ Street Light ಕಂಬ ಕೂಡಾ ಜಖಂಗೊಂಡಿರುತ್ತದೆ. ಯಾರಿಗೂ ಯಾವುದೇ ರೀತಿಯ ಗಾಯ ಆಗಿರುವುದಿಲ್ಲ.. ಈ ಅಪಘಾತಕ್ಕೆ ಲಾರಿ  ಸಂಜಯ್ಮೊಗತ್ತು ಎಂಬವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.   

 

16. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31.01.2014 ರಂದು 12.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ರವರು ತನ್ನ ಬಾಬ್ತು ಕೆಎ-20-ಎಸ್‌- 8768 ನೇ  ಸ್ಕೂಟರ್ನಲ್ಲಿ ಕಣ್ಣೂರು ಹೈಸಮ್ಸ್ಟೀಲ್‌‌ ಎಂಬ ಕಬ್ಬಿಣದ ಸರಳನ್ನು ಮಾರುವ ಅಂಗಡಿಗೆ ಹೋಗಿ ಮರಳಿ ಮನೆಗೆ ಹೋಗುತ್ತಾ ಸದರಿ ಅಂಗಡಿಯಿಂದ ಸ್ವಲ್ಪ ಮುಂದೆ ತಲುಪಿದಾಗ  ಹಿಂದಿನಿಂದ  ಕೆಎ-21-ಎನ್‌-3860 ನೇ ಕ್ರೇನ್‌‌ ನ್ನು ಅದರ ಚಾಲಕ ಸದಾಶಿವ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್‌‌ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾಧಿದಾರರು ಸ್ಕೂಟರ್ಸಮೇತ ರಸ್ತೆಗೆ  ಬಿದ್ದು  ತಲೆಯ ಹಿಂಭಾಗ ಮತ್ತು ಬಲಭುಜಕ್ಕೆ  ರಕ್ತಗಾಯವಾಗಿರುತ್ತದೆ.

 

17. ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01.02.2014 ರಂದು  ರಾತ್ರಿ ಸಮಯ ಸುಮಾರು 21:00 ಗಂಟೆಗೆ   ಪಿರ್ಯಾದಿದಾರರಾದ ಶ್ರೀ ನಿತೀನ್ ಕುಮಾರ್ ರವರು  ಪೆರ್ಲ ಎಂಬಲ್ಲಿ ತನ್ನ ಮನೆಯ  ಹಿಂಭಾಗ  ಕುಳಿತುಕೊಂಡಿದ್ದ ಸಮಯ  ಕೊಡ್ಡೆಕ್ಕಲ್‌ - ಪೆರ್ಲ ರಸ್ತೆಯಾಗಿ  KA 19  ED 0717 ನೇ  ಮೊಟಾರು  ಸೈಕಲ್ನ್ನು  ಅದರ ಸವಾರ ಸಹ ಸವಾರನ್ನು  ಕುಳ್ಳಿರಿಸಿಕೊಂಡು ಅತೀ ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು  ಪೆರ್ಲ ಎಂಬಲ್ಲಿ  ಇಳಿಜಾರು  ರಸ್ತೆಯಲ್ಲಿ  ಬಲ ತಿರುವ ತೆಗೆದುಕೊಳ್ಳುವ   ಸಮಯ ಹತೋಟಿ ತಪ್ಪಿ ಸ್ಕಿಡ್ಆಗಿ ರಸ್ತೆಯ ಬದಿಯ  ಕಟ್ಟೆಗೆ ಡಿಕ್ಕಿ ಹೊಡೆದು , ಸುಮಾರು 10 ಅಡಿ  ಆಳಕ್ಕೆ ಬಿದ್ದ ಪರಿಣಾಮ  ಬೈಕ್ಸಹ ಸವಾರನಾದ ಸತ್ಯ ನಾರಾಯಣ @ ಸತ್ಯರಾಜ್ಹಾಗು ಬೈಕ್ಚಾಲಕ  ರಮೇಶ್ಎಸ್ರೈ  ಯವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅವರನ್ನು  ಪಿರ್ಯಾದಿದಾರರು  ಮತ್ತು ನೆರೆಯ ರಾಕೇಶ್ಎಂಬವರು ಸೇರಿ ಯಾವುದೋ ಆಟೊ  ರಿಕ್ಷಾದಲ್ಲಿ  ಜ್ಯೋತಿ  ಕೆ.ಎಂ.ಸಿ  ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು   ಸತ್ಯ ನಾರಾಯಣ @ ಸತ್ಯರಾಜ್ಎಂಬವರು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಅಲ್ಲದೆ ಬೈಕ್ಚಾಲಕ  ರಮೇಶ್‌  ಎಸ್ರೈ ಯವರಿಗೆ ಕೂಡಾ ಗಂಬೀರ ಗಾಯವಾಗಿರುತ್ತದೆ.   ಅಪಘಾತಕ್ಕೆ ಬೈಕ್ಚಾಲಕ ರಮೇಶ್ಎಸ್ರೈ  ರವರ ಅತೀ ವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ.

No comments:

Post a Comment