Sunday, February 9, 2014

Daily Crime Reports 09-2-2014

ದಿನಾಂಕ 09.02.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಪಿರ್ಯಾದಿದಾರರಾದ ಶ್ರೀಮತಿ ಆಯಿಶಾ ರವರಿಗೆ ಆರೋಪಿ ಉಬೈದ್ ಎಂಬುವವರೊಂದಿಗೆ ದಿನಾಂಕ 9-12-2012 ರಂದು ಪಾಣೆಮಂಗಳೂರಿನ ಸಮುದಾಯ ಭವನದಲ್ಲಿ ಮುಸ್ಲೀಂ ಸಂಪ್ರದಾಯದಂತೆ ವಿವಾಹವಾಗಿದ್ದು, ವಧುವಿನ ಕಡೆಯವರು ವರದಕ್ಷಿಣೆಯಾಗಿ 30 ಪವನ್ ಚಿನ್ನ ಹಾಗೂ 30 ಸಾವಿರ ರೂ ವರದಕ್ಷಿಣೆಯಾಗಿ ವರನ ಕಡೆಯವರಿಗೆ ನೀಡಿದ್ದು, ಮದುವೆಯ ನಂತರ ಪಿರ್ಯಾದಿಯು ಗಂಡನ ಮನೆಯಲ್ಲಿ ವಾಸವಾಗಿದ್ದು, ಆ ಸಮಯ ಇನ್ನು ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದು, ನಂತರ ಪಿರ್ಯಾಧಿದಾರರಿಗೆ ತನ್ನ ತಂದೆ ಮನೆಯಿಂದ 10 ಗ್ರಾಂ ಬಂಗಾರವನ್ನು ನೀಡಿ ಕಳುಹಿಸಿಕೊಟ್ಟಿದ್ದು, ದಿನಾಂಕ 12-10-2013 ರಂದು ಪಿರ್ಯಾದಿದಾರರ ಗಂಡ, ಅತ್ತೆ, ಮೈದುನ ಸೇರಿ ವರದಕ್ಷಿಣೆ ಸಾಲಲಿಲ್ಲ ಎಂದು ಪುನಃ ಮನೆಯಿಂದ ಹೊರಹಾಕಿದ್ದು, ಪಿರ್ಯಾದಿಯು ಪುನಃ 50 ಸಾವಿರ ಹಣವನ್ನು ತನ್ನ ಗಂಡನಿಗೆ ನೀಡಿರುತ್ತಾರೆ, ದಿನಾಂಕ 07-12-2014 ರಂದು ಪಿರ್ಯಾದಿದಾರರು ತನ್ನ ಗಂಡನ ಮನೆಗೆ ಹೋದಾಗ ಗಂಡ ಹಾಗೂ ಅತ್ತೆ ಸೇರಿ ನೀನು ಯಾಕೆ ಚಿನ್ನ ತರದೇ ಇಲ್ಲಿಗೆ ಬಂದೆ ಎಂದು ಕೈಗಳಿಗೆ ಹಾಗೂ ಕುತ್ತಿಗೆಗೆ ಕೈಯಿಂದ ಹೊಡೆದು ಗಾಯವನ್ನುಂಟು ಮಾಡಿ, ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ.

 

2.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಪ್ರಶಾಂತ್ ಶೆಟ್ಟಿ ರವರಿಗೆ ಕ್ಯಾಂಟೀನ್ ಉದ್ಯೋಗವಾಗಿದ್ದು, ದಿನಾಂಕ 07-02-2014 ರಂದು ಬೆಳಿಗ್ಗೆ 5:30 ಗಂಟೆಗೆ ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ಪೋಟೋ ಫ್ಲಾಶಿನ ಎದುರು ಫಿರ್ಯಾದಿದಾರರ ಬಾಬ್ತು ಕೆಎ-19-.ಹೆಚ್.-5087 ನೇ ಪಲ್ಸಾರ್ ಮೋಟಾರ್ ಬೈಕನ್ನು ಪಾರ್ಕ್ ಮಾಡಿ ಕ್ಯಾಂಟೀನಿಗೆ ಹೋಗಿದ್ದು, ಬಳಿಕ ಬೆಳಿಗ್ಗೆ 7:00 ಗಂಟೆಗೆ ಬಂದು ನೋಡಿದಾಗ ಫಿರ್ಯಾದಿದಾರರು ಪಾರ್ಕ್ ಮಾಡಿ ಹೋಗಿದ್ದ ಬೈಕ್ ಸ್ಥಳದಲ್ಲಿ ಇಲ್ಲದೇ ಇದ್ದು, ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿದಲ್ಲಿ ಬೈಕ್ ಪತ್ತೆ ಯಾಗಿರುವುದಿಲ್ಲ. ಕಳವಾದ ಮೋಟಾರ್ ಸೈಕಲಿನ ಅಂದಾಜು ಬೆಲೆ ರೂ. 45,000/- ಆಗಿದ್ದು, ಕಳವಾದ ಮೋಟಾರ್ ಸೈಕಲಿನ ವಿವರ : KA-19-EH-5087, colour Black, MODEL-2013, CHASIS NO. MD2A11CZODCM90214ENGINE NO. DHZCDM82699, VALUE- Rs 45000/- ಆಗಿರುತ್ತದೆ.

 

3.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಬಿ. ಮಹಮ್ಮದ್ ರವರು ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ 7ನೇ ಬ್ಲಾಕ್ ಮಸೀದಿ ಎದುರು ಇರುವ ಶರೀಪ್ ಹಾಜಿಯವರ ಮಾಲಕತ್ವದ ಕಟ್ಟಡದಲ್ಲಿ 3 ಅಂಗಡಿಗಳನ್ನು ಬಾಡಿಗೆಗೆ ಪಡೆದು ಜಿನಸಿ ಅಂಗಡಿ, ಐಸ್ ಕ್ರೀಂ ಅಂಗಡಿ ಹಾಗೂ ಸ್ಕೂಲ್ ಬುಕ್ ಅಂಗಡಿಗಳನ್ನು ಹೊಂದಿದ್ದು ದಿನಂಪ್ರತಿ ಬೆಳಿಗ್ಗೆ ಸುಮಾರು 07-00 ಗಂಟೆಗೆ ಅಂಗಡಿಗಳ ಬಾಗಿಲು ತೆರೆದು ರಾತ್ರಿ 09-30 ಗಂಟೆ ತನಕ ವ್ಯಾಪಾರ ಮಾಡಿಕೊಂಡು ಬಳಿಕ ಅಂಗಡಿಗಳಿಗೆ ಬೀಗ ಹಾಕಿ ಮನೆಗೆ ತೆರಳುತ್ತಿದ್ದು ನಿನ್ನೆ ದಿನಾಂಕ 07-02-2014 ರಂದು ಬೆಳಿಗ್ಗೆ 07-00 ಗಂಟೆಗೆ ಎಂದಿನಂತೆ ಅಂಗಡಿಗಳ ಬೀಗ ತೆರೆದು ವ್ಯಾಪಾರ ಮಾಡಿಕೊಂಡು ರಾತ್ರಿ ವೇಳೆ ಮಸೀದಿಯಲ್ಲಿ ಕಾರ್ಯಕ್ರಮ ಇದ್ದುದರಿಂದ ರಾತ್ರಿ ಸುಮಾರು 23-00 ಗಂಟೆಗೆ ಬೀಗ ಹಾಕಿ ಮನೆಗೆ ತೆರಳಿದ್ದು ಈ ದಿನ ದಿನಾಂಕ 08-02-2014 ರಂದು ಬೆಳಿಗ್ಗೆ 7-00 ಗಂಟೆಗೆ ಪಿರ್ಯಾದಿದಾರರು ಅಂಗಡಿಯ ಬಳಿ ಬಂದು ನೋಡಿದಾಗ ಐಸ್ ಕ್ರೀಂ ಅಂಗಡಿ ಹಾಗೂ ಸ್ಕೂಲ್ ಬುಕ್ ಅಂಗಡಿಯ ಬೀಗ ಮುರಿದು ಶಟರ್ ಅರ್ಧ ತೆರೆದಿದ್ದು ಅಂಗಡಿಯ ಒಳಗಡೆ ಹೋಗಿ ನೋಡಿದಾಗ ಒಳಗಡೆಯಿದ್ದ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು ಬೆಲೆ ಬಾಳುವ ವಸ್ತುಗಳ ಬಗ್ಗೆ ಹುಡುಕಾಡಿದಂತೆ ಕಂಡು ಬಂದಿದ್ದು ಪರಿಶೀಲಿಸಿದಾಗ ಯಾವುದೇ ವಸ್ತು ಕಳ್ಳತನವಾಗದೇ ಇದ್ದು ಯಾರೋ ಕಳ್ಳರು ಅಂಗಡಿಗಳ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ.

 

4.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಗುರುದಾಸ್ ಪ್ರಭು ರವರ ತಾಯಿ ಶ್ರೀಮತಿ ಸುಮತಿ ಪ್ರಭು ಎಂಬಾಕೆಯನ್ನು ದಿನಾಂಕ 08-02-2014 ರಂದು ಸಂಜೆ 4-00 ಗಂಟೆಯಿಂದ ರಾತ್ರಿ 8-00 ಗಂಟೆ ಮದ್ಯೆ ಅವರು ವಾಸ ಮಾಡುತ್ತಿರುವ ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ಕಲದ ಬಳಿ ಇರುವ ಅವರ ವಾಸದ ಮನೆಯಲ್ಲಿ ಯಾರೋ ದುಷ್ಕರ್ಮಿಗಳು (ಇಬ್ಬರು ಬೈಕಿನಲ್ಲಿ ಬಂದವರ ಮೇಲೆ ಗುಮಾನಿ) ಕುತ್ತಿಗೆಗೆ ಚೂರಿಯಿದ ಕೊಯ್ದು ಕೊಲೆ ಮಾಡಿ ಮೈಮೇಲಿದ್ದ ಸುಮಾರು ರೂ 3,80,000/-ಬೆಲೆ ಬಾಳುವ  192 ಗ್ರಾಂ (24 ಪವನ್) ತೂಕದ ಬಂಗಾರದ ಒಡವೆಗಳನ್ನು ದೋಚಿಕೊಂಡು ಹೋಗಿರುವುದಾಗಿದೆ.

 

5ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07-02-2014 ರಂದು ಫಿರ್ಯಾದಿದಾರರಾದ ವೆಂಕಟೇಶ್ ಎಂಬವರು  ತನ್ನ ಗೆಳೆಯ ಸುನಿಲ್ ಎಂಬವರನ್ನು ತನ್ನ ಬಾಬ್ತು ಮೋಟಾರು ಸೈಕಲ್ ನಂ: ಕೆಎ 19 ಇಸಿ 2219 ನೇದರಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಟೀಲು ಕಡೆಯಿಂದ ಬಜಪೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮಂಗಳೂರು ತಾಲೂಕಿನ, ತೆಂಕ ಎಕ್ಕಾರು ಗ್ರಾಮದ ಹುಣ್ಸೆಕಟ್ಟೆ ಬಳಿ ತಲುಪುತ್ತಿದ್ದಂತೇ ಅವರ ಹಿಂದಿನಿಂದ ಮೋಟಾರು ಸೈಕಲ್ ನಂ: ಕೆಎ 19 ಇಜೆ 3605 ನ್ನು ಅದರ ಸವಾರರು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂಧ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರು ಸೈಕಲ್ಗೆ ಹಿಂದಿನಿಂಧ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರಿಗೆ ಮತ್ತು ಅವರ ಮೋಟಾರು ಸೈಕಲ್ ನಲ್ಲಿ ಸಹ ಸವಾರರಾಗಿದ್ದ ಸುನಿಲ್ ರವರು ಗಾಯಗೊಂಡಿದ್ದು, ಸದ್ರಿಯವರು ಚಿಕಿತ್ಸೆಯ ಕುರಿತು ಮಂಗಳೂರು ಕೆ.ಎಂ.ಎಸಿ. ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-2014 ರಂದು ಪಿರ್ಯಾದಿದಾರರಾದ ಶ್ರೀ ಸುರೇಂದ್ರ ಬಿ. ಕಂಬಳಿ ರವರು ಅರ್ಕುಳ ಗ್ರಾಮದ ಅರ್ಕುಳ ದ್ವಾರದ ಬಳಿ ನಿಂತಿದ್ದಾಗ ಅವರ ಪರಿಚಯದ ಕೆ. ಮಹಮ್ಮದ್ಇರ್ಷಾದ್ಎಂಬವರು ಅವರ ಬಾಬ್ತು ಮಾರುತಿ ರಿಟ್ಜ್ಕಾರು ನಂಬ್ರ ಕೆಎ 19 ಎಂಡಿ 1387 ನೇ ಯದನ್ನು ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡುಹೋಗುತ್ತಿದ್ದವರು, ಪಿರ್ಯಾದಿದಾರರನ್ನು ಕಂಡು ಅವರಲ್ಲಿ ಮಾತಾಡುವ ಸಲುವಾಗಿ ಸದ್ರಿ ಕಾರನ್ನು ನಿರ್ಲಕ್ಷ್ಯತನದಿಂದ ಅತೀವೇಗವಾಗಿ ಹಿಂದಕ್ಕೆ ಚಲಾಯಿಸಿಕೊಂಡು ಬಂದದ್ದರಿಂದ ಕಾರಿನ ಹಿಂದಿನಿಂದ ಅಂದರೆ ಫರಂಗಿಪೇಟೆ ಕಡೆಯಿಂದ ಮಂಗಳೂರು ಕಡೆಗೆ ಜಗದೀಶ್ ಎಂಬವರುಚಲಾಯಿಸಿಕೊಂಡು ಬರುತ್ತಿದ್ದ ನೋಂದಣಿ ಸಂಖ್ಯೆ ಇಲ್ಲದ ಪಲ್ಸರ್ಬೈಕಿಗೆ ಡಿಕ್ಕಿ ಹೊಡೆದಪರಿಣಾಮ ಬೈಕ್ಸವಾರ ಜಗದೀಶ್ ಮತ್ತು ಹಿಂಬದಿ ಸವಾರಳಾಗಿದ್ದ ಮಮತಾ ಎಂಬವರು  ಬೈಕ್ಸಮೇತ ರಸ್ತೆಗೆ ಬಿದ್ದು ಇಬ್ಬರಿಗೂ ಮುಖಕ್ಕೆ ತಲೆಗೆ ತೀವ್ರ ಸ್ವರೂಪದ ಗಾಯಗೊಂಡಿದ್ದವರನ್ನು ಪಿರ್ಯಾದಿದಾರರು ಮತ್ತು ಇತರರು ಸೇರಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಸದ್ರಿ ಗಾಯಾಳುಗಳು ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

                                                                                                                                                                                          

7 .ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-02-2014 ರಂದು ಪಿರ್ಯಾದಿದಾರರಾದ ಶ್ರೀ ರಂಗಸ್ವಾಮಿ ರವರು ವಿಜಯ ಬಾನು ಎಂಬವರನ್ನು ತನ್ನ ಬಾಬ್ತು ಬೈಕ್ನಂಬ್ರ KA 19 W 8756 ನೇದರಲ್ಲಿ ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ವಾಮಂಜೂರಿನಿಂದ ನೀರುಮಾರ್ಗ ರಸ್ತೆಯಾಗಿ ವಳಚ್ಚಿಲ್ಶ್ರೀನಿವಾಸ್ಕಾಲೇಜ್ಕಡೆಗೆ ಹೋಗುತ್ತಾ ಸಮಯ ಸುಮಾರು 12-45 ಗಂಟೆ ವೇಳೆಗೆ ಬೊಂಡಂತಿಲ ಗ್ರಾಮದ ಕುಂಟಡ್ಕ ಎಂಬಲ್ಲಿಗೆ ತಲುಪಿದಾಗ ನೀರುಮಾರ್ಗ ಕಡೆಯಿಂದ ತಿರುವು ರಸ್ತೆಯಲ್ಲಿ ರಿಕ್ಷಾ ಟೆಂಪೋ ನಂಬ್ರ KA 19 D 6312 ನೇದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿ ಸವಾರ ಬೈಕ್ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಮೊಣಗಂಟಿಗೆ ಮತ್ತು ವಿಜಯಬಾನುರವರ ಎರಡೂ ಕೈಗಳಿಗೆ ಗಾಯಗಳಾಗಿದ್ದು ಎ,ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No comments:

Post a Comment