ಮಂಗಳೂರು ನಗರ ಕಮೀಷನರೇಟ್ಗೆ ಸಂಬಂಧಿಸಿ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಈಗಾಗಲೇ ಸಹಿಷ್ಣುತೆ /ದೇಹದಾಢ್ರ್ಯತೆ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಂಗಳೂರು ನಗರದ ವಿವಿಧ ಕಾಲೇಜುಗಳಾದ ಸೈಂಟ್ ಅಲೋಶಿಯಸ್ ಪದವಿ ಕಾಲೇಜು, ಸೈಂಟ್ ಅಲೋಶಿಯಸ್ ಪ್ರೌಢ ಶಾಲೆ, ಕೆನರಾ ಪದವಿ ಕಾಲೇಜು, ಕೆನರಾ ಪದವಿ ಪೂರ್ವ ಕಾಲೇಜು, ಇಲ್ಲಿ ದಿನಾಂಕ: 16-11-2014 ರಂದು ನಡೆದ ಲಿಖಿತ ಪರೀಕ್ಷೆಗಳನ್ನು ಅನೂರ್ಜಿತ ಮತ್ತು ಪರಿಣಾಮ ಶೂನ್ಯವೆಂದು ಪರಿಗಣಿಸಿ ಮಂಗಳೂರು ನಗರದ ವಿವಿಧ ಕಾಲೇಜುಗಳಾದ ಸೈಂಟ್ ಅಲೋಶಿಯಸ್ ಪದವಿ ಕಾಲೇಜು, ಸೈಂಟ್ ಅಲೋಶಿಯಸ್ ಪ್ರೌಢ ಶಾಲೆ, ಕೆನರಾ ಪದವಿ ಕಾಲೇಜು, ಕೆನರಾ ಪದವಿ ಪೂರ್ವ ಹಾಗೂ ಎಸ್ಡಿಎಂ ಕಾಲೇಜುಗಳಲ್ಲಿ ದಿನಾಂಕ:18-01-2015 ರಂದು ಮರು ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಲಿಖಿತ ಪರೀಕ್ಷೆಗೆ ಹಾಜರಾಗುವ ಆಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಸಹಿಷ್ಣುತೆ /ದೇಹದಾಢ್ರ್ಯತೆ ಪರೀಕ್ಷೆಯ ಫಲಿತಾಂಶ ಶೀಟ್, ಹಾಜರಾತಿ ಹಾಳೆ ಮತ್ತು ನಿಗದಿತ ಗುರುತಿನ ಚೀಟಿಯೊಂದಿಗೆ ಪರೀಕ್ಷೆಗೆ ಹಾಜರಾಗುವುದು.
ಲಿಖಿತ ಪರೀಕ್ಷೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಹಾಜರಾತಿ ಹಾಳೆಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ www.ksp.gov.in ನ್ನು ಪರಿಶೀಲಿಸಬಹುದಾಗಿದೆ.
No comments:
Post a Comment