ದೈನಂದಿನ ಅಪರಾದ ವರದಿ.
ದಿನಾಂಕ 27.01.2015 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
1
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
1
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
1
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
4
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
1
|
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಪ್ರೀತ್ ರೈ ರವರು ಮಂಗಳೂರು ನಗರದ ಕರಂಗಲ್ಪಾಡಿ ಮಾರ್ಕೆಟ್ ನಲ್ಲಿ ರಾಜಲಕ್ಷ್ಮಿ ಟ್ರಾನ್ಸ್ ಪೋರ್ಟ್ ವ್ಯವಹಾರ ಮಾಡಿಕೊಂಡಿದ್ದು, ದಿನಾಂಕ 26-01-2015 ರಂದು ಮನೆಯಿಂದ ಕಾರು ನಂಬ್ರ KA-19 MD 4262 ರಲ್ಲಿ ಹೊರಟು ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿರುವ ರಾಜಲಕ್ಷ್ಮಿಟ್ರಾನ್ಸ್ ಪೋರ್ಟ್ ಆಫೀಸಿಗೆ ಬರುತ್ತಿದ್ದಾಗ ಸಮಯ ಸುಮಾರು 11-30 ಗಂಟೆಗೆ ನಂತೂರು ಜಂಕ್ಷನ್ ನಿಂದ ಸ್ವಲ್ಪ ಕೆಳಗೆ ಫರ್ನಿಚರ್ ಅಂಗಡಿಯ ಹತ್ತಿರ ಬಂದಾಗ ಎದುರಿನಿಂದ ಬಂದ ಓಮಿನಿ ಕಾರೋಂದು ಪಿರ್ಯಾದಿಯವರ ಕಾರನ್ನು ಮುಂದೆ ಹೋಗದಂತೆ ಅಡ್ಡ ಇಟ್ಟು ಕಾರಿನಲ್ಲಿದ್ದ ವ್ಯಕ್ತಿಯು ಕಾರಿನಿಂದ ಇಳಿದು ಪಿರ್ಯಾದಿಯವರ ಬಳಿ ಬಂದು ಕೈಯ್ಯಲಿದ್ದ ಚೂರಿಯಿಂದ ಪಿರ್ಯಾದಿಯವರಿಗೆ ತಿವಿಯಲು ಹೋದಾಗ ಪಿರ್ಯಾದಿಯವರು ತಪ್ಪಿಸಿಕೊಂಡಾಗ ಚೂರಿ ಡ್ರೈವಿಂಗ್ ಸೀಟಿಗೆ ತಾಗಿ ಸೀಟು ಹರಿದಿರುತ್ತದೆ ಅಷ್ಟರಲ್ಲಿ ಸ್ಥಳದಲ್ಲಿ ಜನರು ಸೇರಿದಾಗ ಸದ್ರಿ ವ್ಯಕ್ತಿಯು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ನಂತೂರು ಕಡಗೆ ಹೋಗಿದ್ದು, ಕಾರು ನಂಬ್ರ ನೋಡಲಾಗಿ KA-04 N 710 ನಂಬರಿನ ಬಿಳಿ ಬಣ್ಣದ ಓಮಿನಿ ಕಾರು ಆಗಿರುತ್ತದೆ, ಪಿರ್ಯಾದಿಯವರನ್ನು ಕೊಲೆ ಮಾಡಲು ಬಂದ ವ್ಯಕ್ತಿಯು ಸುಮಾರು 30-35 ವರ್ಷ ಪ್ರಾಯದವನಾಗಿರುತ್ತಾನೆ. ಪಿರ್ಯಾದಿಯವರಿಗೆ ಮತ್ತು ಶ್ರೀಮತಿ ಹರಿಣಾಕ್ಷಿ ಶೆಟ್ಟಿ ಎಂಬವರಿಗೆ ಜಾಗದ ವಿಚಾರದಲ್ಲಿ ತಕರಾರು ಇದ್ದು, ಇದೇ ದ್ವೇಷದಿಂದ ಕಾರನ್ನು ಅಡ್ಡ ಇಟ್ಟು ಚೂರಿಯಿಂದ ತಿವಿದು ಕೊಲೆ ಮಾಡಲು ಪ್ರಯತ್ನಿಸಿರುವುದಾಗಿದೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-01-2015 ರಂದು ಪಿರ್ಯಾದಿದಾರರಾದ ಶ್ರೀ ಮಣಿಕಂಠ ರವರು ಅವರ ಕಂಪೆನಿಯಲ್ಲಿ ಸಹದ್ಯೋಗಿಯಾಗಿರುವ ಆಸಿಫ್ ಖಾನ್‌ರವರನ್ನು ಲಾಲ್‌ಬಾಗ್‌ಗೆ ಬಿಡುವರೇ ಹೋಗಿದ್ದು, ಅಲ್ಲಿ ಅವರಿಗೆ ಮನೆಗೆ ಹೋಗಲು ಬಸ್ ತಪ್ಪಿದ್ದರಿಂದ ಲಾಲ್‌ಬಾಗ್‌ನಿಂದ ಲೇಡಿಹಿಲ್ಗೆ ಹೋಗುವರೇ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ರಾತ್ರಿ ಸಮಯ 11:45 ಗಂಟೆಗೆ ಪಬ್ಬಾಸ್ನ ಎದುರುಗಡೆ ತಲುಪಿದಾಗ, ಲಾಲ್‌ಬಾಗ್ ಕಡೆಯಿಂದ ಲೇಡಿಹಿಲ್ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆ.ಎ-19-ಆರ್-8883 ನೇದನ್ನು ಅದರ ಸವಾರ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸಹದ್ಯೋಗಿ ಆಸಿಫ್ ಖಾನ್‌ರವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಆಸಿಪ್ ಖಾನ್‌ರವರಿಗೆ ತಲೆಯ ಎಡ ಬದಿಗೆ, ದವಡೆಗೆ ಗಂಭೀರ ತರಹದ ರಕ್ತ ಗಾಯ ಮತ್ತು ಹೊಟ್ಟೆಯ ಕೆಳಭಾಗಕ್ಕೆ ಗುದ್ದಿದ ನೋವು ಉಂಟಾಗಿದ್ದು, ಆರೋಪಿ ಮೋಟಾರು ಸೈಕಲ್ ಸವಾರನಿಗೂ ಗಾಯವುಂಟಾಗಿರುತ್ತದೆ. ಬಳಿಕ ಗಾಯಾಳುಗಳಿಬ್ಬರನ್ನು ಚಿಕಿತ್ಸೆಯ ಬಗ್ಗೆ ನಗರದ ಸಿ.ಟಿ ಆಸ್ಪತ್ರೆಗೆ ಕೊಂಡೊಯ್ದು ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ, ಆರೋಪಿ ಮೋಟಾರು ಸೈಕಲ್ ಸವಾರನು ವಿಪರೀತ ಮದ್ಯಪಾನ ಮಾಡಿರುವಂತೆ ಕಂಡು ಬಂದಿರುವುದಾಗಿದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಮಮೂರ್ತಿ ರವರು ತಮ್ಮ ಹೆಂಡತಿಯ ಜೊತೆ ಅಂಡಮಾನ್ ಮತ್ತು ನಿಕೋಬಾರ್ ಸ್ಥಳಗಳಿಗೆ ಪ್ರವಾಸಕ್ಕೆ ದಿನಾಂಕ:16-01-2015 ರಂದು ಮಧ್ಯಾಹ್ನ 3.00 ಗಂಟೆಗೆ ಹೊರಟು ಪ್ರವಾಸ ಕಾರ್ಯ ಕ್ರಮವನ್ನು ಮುಗಿಸಿಕೊಂಡು ದಿನಾಂಕ: 26-01-2015 ರಂದು ಬೆಳಿಗ್ಗೆ 09.15 ಗಂಟೆಗೆ ತಮ್ಮ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲನ್ನು ಕಳ್ಳರು ಯಾವೂದೋ ಒಂದು ಸಾಧನದಿಂದ ಮೀಟಿ ಒಳ ಪ್ರವೇಶಿಸಿ, ಬೆಡ್ ರೂಮಿನ ಕಪಾಟಿನಲ್ಲಿದ್ದ 1)ಬೆಳ್ಳಿಯ ಹರಿವಾಣಗಳು-05 (2)ಬೆಳ್ಳಿಯ ಚೊಂಬುಗಳು-04 (3) ಬೆಳ್ಳಿಯ ಕಾಲುದೀಪಗಳು-20 (4) ಬೆಳ್ಳಿಯ ಪಂಚ ಪಾತ್ರೆ-06, (5) ಬೆಳ್ಳಿಯ ಪನ್ನೀರು ಹಾಕುವ ಸಲಕರಣೆ-01, (6) ಬೆಳ್ಳಿಯ ಅರಶಿಣ ಕುಂಕುಮ ಬಟ್ಟಲು-04 (7) ಬೆಳ್ಳಿಯ ಲೋಟಗಳು-06 ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಬೆಳ್ಳಿಯ ಸೊತ್ತುಗಳ ಅಂದಾಜು ತೂಕ-ಸುಮಾರು 5 ಕೆ.ಜಿ ಹಾಗೂ ಅಂದಾಜು ಬೆಲೆ ರೂಪಾಯಿ ಒಂದು ಲಕ್ಷದ ಇಪ್ಪತ್ತು ಸಾವಿರ ಆಗಬಹುದು.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಹೇಮಾವತಿ ರವರ ತಮ್ಮ ನವೀನ ಎಂಬವರು ದಿನಾಂಕ 06-01-2015 ರಂದು ಬೆಳಿಗ್ಗೆ 08-00 ಗಂಟೆ ಸಮಯಕ್ಕೆ ಅವರ ವಾಸದ ಮನೆಯಾದ ಕುಳಾಯಿ ಗ್ರಾಮದ, ಪ್ರೇಮನಗರ, ಎಂಬಲ್ಲಿಂದ ಕೆಲಸಕ್ಕೆಂದು ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಕಾಣೆಯಾದ ನವೀನ್ ರವರ ಚಹರೆ:- ಎತ್ತರಃ 5 ಅಡಿ, ಎಣ್ಣೆ ಕಪ್ಪು ಮೈಬಣ್ಣ , ಗುಂಗುರು ಕೂದಲು ಹಲ್ಲು ಎದುರು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಕೆಂಪು ಬಣ್ಣದ ಚೆಕ್ಸ್ ಶರ್ಟ್ ಧರಿಸಿರುತ್ತಾರೆ, ಕನ್ನಡ ತುಳು ಮಾತನಾಡುತ್ತಿದ್ದು, 3ನೇ ತರಗತಿ ತನಕ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.01.2014 ರಂದು ಸಮಯ ಸುಮಾರು 10.15 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಬಿ. ರಮಾನಿ ರವರು ತಮ್ಮ ಬಾಬ್ತು ಸ್ಕೂಟರ್ ನಂಬ್ರ KA19-X-2437 ರಲ್ಲಿ ಸವಾರರಾಗಿದ್ದುಕೊಂಡು ಹಿಂಬದಿ ಸವಾರರಾಗಿ ತನ್ನ ಮಗಳು ಚೈತ್ರಳನ್ನು ಕುಳ್ಳಿರಿಸಿಕೊಂಡು ಕಂಕನಾಡಿ ಕಡೆಯಿಂದ ಹಂಪನಕಟ್ಟೆ ಕಡೆಗೆ ಹೋಗುತ್ತಾ ಪಳ್ನೀರ್ ಪೆಟ್ರೊಲ್ ಪಂಪ್ ಎದುರುಗಡೆ ರಸ್ತೆಯಲ್ಲಿ ತಲುಪುತ್ತಿದ್ದಂತೆ,ಹಂಫನಕಟ್ಟೆ ಕಡೆಯಿಂದ ಕಂಕನಾಡಿ ಕಡೆಗೆ ಆಕ್ಟಿವಾ ಹೊಂಡಾ ಸ್ಕೂಟರ್ ನಂಬ್ರ KA19-EL-0026 ರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಕೈ ಕಿರು ಬೆರಳು ಮತ್ತು ಉಂಗುರ ಬೆರಳಿಗೆ ಗುದ್ದಿದ ನೋವು ,ಬಲಕಾಲಿನ ಪಾದಕ್ಕೆ ಮತ್ತು ಬಲ ಕೈಗೆ ತರಚಿದ ಗಾಯ ಉಂಟಾಗಿ ಇಂದಿರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಮತ್ತು ಫಿರ್ಯಾದುದಾರರ ಮಗಳು ಚೈತ್ರ ರವರಿಗೆ ಬಲಕಾಲಿನ ಹೆಬ್ಬರಳಿಗೆ ಗುದ್ದಿದ ನೋವು ಉಂಟಾಗಿರುತ್ತದೆ.
6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-1-2015 ರಂದು ಫಿರ್ಯಾದುದಾರರಾದ ಶ್ರೀ ಮಥಾಯಿ ಕುರಿಯನ್ ರವರು ಅವರ ಪತ್ನಿ ಶ್ರೀಮತಿ ಆಲಿಯಮ್ಮ ಕುರಿಯನ್ ಜೊತೆ ಮಂಗಳೂರು ನಗರದ ಕಂಕನಾಡಿ ಫಾದರ್ ಮುಲ್ಲರ್ ಕಡೆಯಿಂದ ವೆಲೆನ್ಸಿಯಾ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಫಿರ್ಯಾದುದಾರ ಮಗ ಜೆಸನ್ ಮತ್ತು ಗೆಳೆಯ ವಿಕ್ರಮ್ ಇವರುಗಳು ಕೆಎ 19 ಎಮ್.ಸಿ 8423 ನಂಬ್ರದ ನ್ಯಾನೋ ಕಾರಿನಲ್ಲಿ ಬಂದು ಫಿರ್ಯಾದಿದಾರರನ್ನು ಅಡ್ಡಗಟ್ಟಿ ಜಗಳಕ್ಕೆ ನಿಂತು ಹಣ ನೀಡುವಂತೆ ಒತ್ತಾಯ ಮಾಡಿದ್ದು, ಫಿರ್ಯಾದಿದಾರರು ನಿರಾಕರಿಸಿದಾಗ ಒತ್ತಾಯ ಪೂರ್ವಕವಾಗಿ ಬೆದರಿಸಿ ಫಿರ್ಯಾದಿದಾರರಲ್ಲಿ ಇದ್ದ ಬರೋಡಾ ಬ್ಯಾಂಕಿನ ಚೆಕ್ ಗೆ ಸಹಿ ಮಾಡಿಸಿ, ಚೆಕ್ ನ್ನು ಒತ್ತಾಯದಿಂದ ಪಡೆದುಕೊಂಡಿರುವುದಾಗಿದೆ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2015 ರಂದು 16-20 ಗಂಟೆಗೆ ಪಿರ್ಯಾದುದಾರರಾದ ಶ್ರೀ ಕೃಷ್ಣಾ ರವರು ಮಳವೂರಿಗೆ ಹೋಗಿ ಸಾಮಾಗ್ರಿಗಳನ್ನು ತೆಗೆದುಕೊಂಡು ಕರಂಬಾರಿನ ಸುಂದರಣ್ಣನ ಅಂಗಡಿ ಎದುರು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಾ ಇರುವಾಗ ಬಜಪೆ ಕಡೆಯಿಂದ ಮಂಗಳೂರು ಕಡೆಗೆ ಪಿಕಪ್ ವಾಹನ ನಂಬ್ರ ಕೆಎ 19 ಎಎ 4823 ನೇದರ ಚಾಲಕನು ಪಿಕಪ್‌ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಎಡ ಸೊಂಟಕ್ಕೆ ಮೂಳೆ ಮುರಿತದ ಗಾಯವನ್ನುಂಟು ಮಾಡಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 24-1-2014 ರಂದು ರಾತ್ರಿ ಫಿರ್ಯಾದಿದಾರರಾದ ಶ್ರೀ ದಯಾನಂದ ಕುಮಾರ್ ರವರು ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆಗೆ ಹೋದವರು, ಅಲ್ಲಿ ಪೂಜೆ ಮುಗಿದ ಬಳಿಕ ಅಲ್ಲಿ ಕಾಣಸಿಕ್ಕಿದ ತನ್ನ ಪರಿಚಯದ ಉಳ್ಳಾಲ ಒಂಭತ್ತುಕೆರೆ ವಾಸಿ ಜನಾರ್ಧನ ಎಂಬವರನ್ನು ಮನೆಗೆ ಬಿಡುವ ಸಲುವಾಗಿ ಫಿರ್ಯಾದಿದಾರರು ತನ್ನ ಬಾಬ್ತು ಕೆಎ-19-ಇಎಲ್-9534 ನೇ ಮೋಟಾರು ಸೈಕಲಿನಲ್ಲಿ ಜನಾರ್ಧನ ಎಂಬವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಕೊಲ್ಯದಿಂದ ಉಳ್ಳಾಲ ಒಂಭತ್ತುಕೆರೆಗೆ ಬಂದು ಜನಾರ್ಧನ ಎಂಬವರ ಮನೆಯ ಎದುರುಗಡೆ ಮೋಟಾರು ಸೈಕಲ್ ನಿಲ್ಲಿಸಿ ಅವರನ್ನು ಮೋಟಾರು ಸೈಕಲಿನಿಂದ ಇಳಿಸಿದ ನಂತರ ಜನಾರ್ಧನ ರವರು ರಸ್ತೆಯ ಬದಿಯಲ್ಲಿ ನಿಂತಿದ್ದಾಗ ರಾತ್ರಿ ಸುಮಾರು 8-30 ಗಂಟೆಯ ಸಮಯಕ್ಕೆ ಸೋಮೇಶ್ವರ ಕಡೆಯಿಂದ ಉಳ್ಳಾಲ ಕಡೆಗೆ ಆರೋಪಿಯು ಕೆಎ-19-ಇಡಿ-3761 ನೇ ಮೋಟಾರು ಸೈಕಲನ್ನು ಅದರ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಜನಾರ್ಧನ ರವರಿಗೆ ಮೋಟಾರು ಸೈಕಲ್ ಢಿಕ್ಕಿ ಹೊಡೆದ ಪರಿಣಾಮ ಜನಾರ್ಧನ ರವರು ರಸ್ತೆಗೆ ಬಿದ್ದು ಅವರ ಎಡ ಕಾಲಿಗೆ ರಕ್ತ ಗಾಯ ಉಂಟಾಗಿರುತ್ತದೆ. ಗಾಯಾಳು ಜನಾರ್ಧನ ರವರು ತೊಕ್ಕೊಟು ನೇತಾಜಿ ಎಲ್ಲಪ್ಪ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದು, ಗಾಯಾಳುವಿನ ಚಿಕಿತ್ಸೆಯ ವೆಚ್ಚವನ್ನು ಆರೋಪಿಯು ಭರಿಸುವುದಾಗಿ ಒಪ್ಪಿಕೊಂಡಿದ್ದು, ಆದರೆ ಚಿಕಿತ್ಸೆಯ ವೆಚ್ಚವನ್ನು ಭರಿಸದೇ ಇದ್ದುದರಿಂದ ಫಿರ್ಯಾದಿದಾರರು ತಡವಾಗಿ ದಿನಾಂಕ. 26-5-2014 ರಂದು ದೂರು ನೀಡಿರುವುದಾಗಿದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:25/01/2015 ರಂದು ಫಿರ್ಯಾದಿದಾರರಾದ ಶ್ರೀ ಪ್ರೀತಮ್ ಪಿಂಟೋ ರವರು ತಾನು ಕೆಲಸ ಮಾಡಿದ ನೀರುಮಾರ್ಗ ಗ್ರಾಮದ ಒಂಟೆಮಾರ್ ಎಂಬಲ್ಲಿಗೆ ಪ್ರವೀಣ್ ರವರ ಗೃಹಪ್ರವೇಶ ಕಾರ್ಯಾಕ್ರಮಕ್ಕೆ ರಾತ್ರಿ ಸಮಯ ಹೋಗಿದ್ದು ಅಲ್ಲಿಗೆ ಫಿರ್ಯಾದಿದಾರರ ಸ್ನೇಹಿತ ನಿತೀಶ್ ಎಂಬವನು ಕೂಡ ಬಂದಿರುವುದಾಗಿಯೂ ಆತನೊಂದಿಗೆ ಫಿರ್ಯಾದಿದಾರರು ಒಳ್ಳೆಯ ರೀತಿಯಲ್ಲಿ ಮಾತಾನಾಡಿರುದಲ್ಲದೇ ಯುವಕರೆಲ್ಲಾ ಡ್ಯಾನ್ಸ್ ಮಾಡುತ್ತಾ ಫಿರ್ಯಾದಿದಾರರು ಕೂಡ ಡ್ಯಾನ್ಸ್ ಮಾಡುತ್ತಿದ್ದಂತೆ ದಿನಾಂಕ:26/01/2015 ರಂದು 00.30 ಗಂಟೆಗೆ ಫಿರ್ಯಾದಿದಾರರು ನಿತೀಶ್ ಎಂಬನಲ್ಲಿ ಏನು ಮಾರಾಯಾ ಎಂಬುದಾಗಿ ವಿಚಾರಿಸುತ್ತಿದ್ದಂತೆ ಆತನು ಏಕಾಏಕಿಯಾಗಿ ಕೈಯಲ್ಲಿದ್ದ ಗಾಜಿನ ಗ್ಲಾಸಿನಿಂದ ಫಿರ್ಯಾದಿದಾರರ ಎಡಕಿವಿಯ ಹಿಂಬದಿಗೆ ಬಲವಾಗಿ ಹೊಡೆದ ಪರಿಣಾಮ ಗಾಜಿನ ಗ್ಲಾಸ್ ಪುಡಿಯಾಗಿ ಫಿರ್ಯಾದಿದಾರರ ಎಡಕಿವಿಯ ಹಿಂಬದಿ ಮತ್ತು ಕುತ್ತಿಗೆಯ ಭಾಗಕ್ಕೆ ರಕ್ತ ಬರುವ ಗಾಯ ಉಂಟಾದವರನ್ನು ಚಿಕಿತ್ಸೆಯ ಸಲುವಾಗಿ ಆತನ ಜೊತೆಯಲ್ಲಿದ್ದವರು ಮಂಗಳೂರಿನ ಕೊಲಾಸೋ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲುಮಾಡಿರುವುದಾಗಿದೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೀತಾರಾಮ ಪೂಜಾರಿ ರವರಿಗೆ ಹಾಗೂ ಪಿರ್ಯಾದಿದಾರರ ತಾಯಿ ಮತ್ತು ಅಣ್ಣ ತಂಗಿಯವರಿಗೆ ಪಿರ್ಯಾದಿದಾರರ ತಂದೆಯವರ ಜಾಗದ ವಿಷಯದಲ್ಲಿ ತಕರಾರು ಇದ್ದು, ಸದ್ರಿ ತಕರಾರು ಇರುವ ಜಾಗದಲ್ಲಿ ಆರೋಪಿ ರಿಚರ್ಡ್ @ ರಿಚ್ಚ ಎಂಬವರು ಪೈಪುಗಳನ್ನು ಅಳವಡಿಸುವ ಕೆಲಸ ಮಾಡುತ್ತಿದ್ದಾಗ ಸಂಜೆ 6.30 ಗಂಟೆಗೆ ಸುಮಾರಿಗೆ ಪಿರ್ಯಾದಿದಾರರು ಆತನೊಡನೆ ನೀನು ಯಾರನ್ನು ಕೇಳಿ ಪೈಪು ಅಳವಡಿಸುವ ಕೆಲಸ ಮಾಡುತ್ತಿದ್ದಿ ಎಂದು ವಿಚಾರಿಸಿದಾಗ ಆರೋಪಿಯು ನಿನ್ನ ತಾಯಿ ಹೇಳಿದಂತೆ ಕೆಲಸ ಮಾಡುತ್ತಿದ್ದೇನೆ, ನಿನ್ನ ಅಪ್ಪ ಬಂದರೂ ಕೆಲಸ ನಿಲ್ಲಿಸುವುದಿಲ್ಲ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಕಬ್ಬಿಣದಂತಹ ವಸ್ತುವಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಗಾಯಗೊಳಿಸಿದಲ್ಲದೇ ನನ್ನ ಕೆಲಸಕ್ಕೆ ಅಡ್ಡಿ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿರುತ್ತಾನೆ, ಆರೋಪಿಯು ನಡೆಸಿದ ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರನ್ನು ಅವರ ಪತ್ನಿ ಚಿಕಿತ್ಸೆ ಬಗ್ಗೆ ತುಂಬೆ ಪಾಧರ್ ಮುಲ್ಲರ್ ಆಸ್ಪತ್ರೆಗೆ ಕರೆತಂದು ದಾಖಲಿಸಿರುತ್ತಾರೆ.
11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-01-2015 ರಂದು ಪಿರ್ಯಾದಿದಾರರಾದ ಶ್ರೀಮತಿ ವಿದ್ಯಾ ಡಿ. ರೈ ರವರು ತನ್ನ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಮಂಗಳೂರಿಗೆ ಕೊಡಿಯಾಲ್ ಬೈಲ್ ಲೊಯಲೋ ಹಾಲ್ ಗೆ ತನ್ನ ಮಗನೊಂದಿಗೆ ಬೆಳಿಗ್ಗೆ ಸುಮಾರು 11-00 ಗಂಟೆ ಬಂದಿದ್ದು. ಮದುವೆಯ ರಿಸೆಪ್ಷನ್ ಕೂಡಾ ರಾತ್ರಿಗೆ ಅದೇ ಹಾಲ್ ನಲ್ಲಿ ಇದ್ದುದರಿಂದ ಮನೆಯಿಂದ ಬರುವಾಗ ತನ್ನ ಚಿನ್ನದ ನೆಕ್ಲೆಸ್, ಸಣ್ಣ ಕರಿಮಣಿಸರ ಮತ್ತು ಒಂದು ಉಂಗುರವನ್ನು ಒಂದುಕಿಟ್ ಬಾಕ್ಸ್ ಮತ್ತು ಸೀರೆಯನ್ನು ಮತ್ತು ಒಂದು ಮೊಬೈಲ್ ಪೋನನ್ನು ಒಂದು ಬಟ್ಟೆ ಚೀಲದಲ್ಲಿ ಹಾಕಿಕೊಂಡು ಬಂದಿದ್ದವರು ಬೆಳಿಗ್ಗೆ ಸುಮಾರು 11-30 ಗಂಟೆಗೆ ಚಿನ್ನಾಭರಣದ ಕಿಟ್ ಬಾಕ್ಸ್ ಇದ್ದ ಬಟ್ಟೆಯ ಚೀಲ ವನ್ನು ಹಾಲ್ ನ ಮದುಮಗಳ ಡ್ರೆಸ್ಸಿಂಗ್ ರೂಮ್ ನಲ್ಲಿ ಇರಿಸಿ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೋಂಡವರು ಮಧ್ಯಾಹ್ನ ಸುಮಾರು 3-00 ಗಂಟೆಗೆ ರೂಮಿಗೆ ಹೋಗಿ ನೋಡಲಾಗಿ ಬಟ್ಟೆಯ ಚೀಲ ಚೆಲ್ಲಾಪಿಲ್ಲಿಯಾಗಿದ್ದು, ಚಿನ್ನಾಭರಣ ಇದ್ದ ಕಿಟ್ ಬಾಕ್ಸ್ ತೆರದಿದ್ದು, ಅದರಲ್ಲಿ ಇಟ್ಟಿದ್ದ ಸುಮಾರು 80,000/- ಮೌಲ್ಯದ 36 ಗ್ರಾಂ ತೂಕದ ಚಿನ್ನಾಭಾರಣವನ್ನು ಯಾರೋ ಕಳ್ಳರು ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
12.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2015 ರಂದು ಸಮಯ ಸುಮಾರು 3-45 ರಿಂದ 9-00 ಗಂಟೆಯ ಅವಧಿಯಲ್ಲಿ 5 ಜನ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಾದ ಶ್ರೀ ಫೈರೋಝ್ ಅಹಮ್ಮದ್ ಮತ್ತು ರಾಜೇಶ್ ಎಂಬವರನ್ನು ಕುನಿಲ್ ಕಾಂಪ್ಲೆಕ್ಸ್ ನ 3 ನೇ ಮಹಡಿಯಲ್ಲಿ ರುವ ರೂಂ 1 ರಲ್ಲಿ ಅಕ್ರಮವಾಗಿ ಕೂಡಿಹಾಕಿ ಅವಾಚ್ಯ ಶಬ್ದಗಳಿಂದ ಬೈದು ಚೂರಿ ತೋರಿಸಿ ಜೀವ ಬೇದರಿಕೆ ಒಡ್ಡಿ ಬಲತ್ಕಾರವಾಗಿ 1,0,1000-/ ರೂ ನಗದನ್ನು ದರೋಡೆ ಮಾಡಿದ್ದಲ್ಲದೆ , ಬಲತ್ಕಾರವಾಗಿ 75,000/- ರೂ ಗಳ ಚೆಕ್ ನ್ನು ಬರೆಯಿಸಿಕೊಂಡಿದ್ದಲ್ಲದೇ , ATM ಮೂಲಕ ಕೂಡ ಹಣವನ್ನು ಬಲತ್ಕಾರವಾಗಿ ತೆಗಿದಿರುವುದು, ಹಾಗೂ ಫಿರ್ಯಾಧಿದಾರರಿಗೆ ಮತ್ತು ರಾಜೇಶ್ ರಿಗೆ ಜೀವ ಬೆದರಿಕೆ ಹಾಕಿದ್ದಾಗಿದೆ.
No comments:
Post a Comment