ದಿನಾಂಕ 10.01.2015 ರ 14:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
3
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
1
|
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಕ್ಲೀಟಾ ಲೋಬೊ ರವರ ಪತಿ ಶ್ರೀ ಅಶೋಕ್ ಲೋಬೊ ಎಂಬವರು ದಿನಾಂಕ 01-01-2015 ರಂದು ಸಂಜೆ ಸುಮಾರು 16-00 ಗಂಟೆಗೆ ತನ್ನ ವಾಸದ ಮನೆಯಾದ ಮಂಗಳೂರು ನಗರದ ಉರ್ವ ಚಿಲಿಂಬಿ ಮಲರಾಯ ದೈವಸ್ಥಾನದ ರಸ್ತೆ "ವಿಲ್ಲ ಮರಿಯಾ "ಮನೆಯಿಂದ ಕೇರಳದ ಕೊಚ್ಚಿನ್ ಗೆ ಮೀಟಿಂಗ್ ಗೆಂದು ಹೋದವರು ಅಲ್ಲಿಗೂ ಹೋಗದೆ, ವಾಪಾಸು ಮನೆಗೂ ಬಾರದೆ, ಸಂಬಂಧಿಕರ ಮನೆಗೂ ಹೋಗದೆ, ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುತ್ತಾರೆ.
2.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ನಾಗವೇಣಿ ರವರು ತನ್ನ ಕುಟುಂಬಕ್ಕೆ ಸಂಬಂಧ ಪಟ್ಟ ಮಂಗಳೂರು ತಾಲೂಕು ತೆಂಕುಳಿಪಾಡಿ ಗ್ರಾಮದ ಕಾಜಿಲ ಎಂಬಲ್ಲಿರುವ ಜಾಗದ ಸರ್ವೇ ನಂಬ್ರ 67/3/ಪಿ 1 .0.28 ಸಂಟ್ಸ್ ಜಾಗದಲ್ಲಿ ಅಳವಡಿಸಿದ ತಂತಿ ಬೇಲಿಯನ್ನು ದಿನಾಂಕ 09/01/2015 ರಂದು ಬೆಳಿಗ್ಗೆ 6.00 ಗಂಟೆಗೆ ತಮ್ಮ ನೆರೆ ಮನೆಯ ನಿತ್ಯಾನಂದ ಮಲ್ಲಿ ಅವರ ಮಗ ಮನೋಜ್ ಮತ್ತು ಇನ್ನಿಬ್ಬರು ಬಂದು ಬಲಾತ್ಕರವಾಗಿ ಪಿರ್ಯಾದಿದಾರರು ಅಳವಡಿಸಿದ ತಂತಿ ಬೇಲಿಯ ಕಂಬವಂದನ್ನು ಮುರಿಯುದನ್ನು ಕಂಡು ಪಿರ್ಯಾದಿದಾರರು ವಿಚಾರಿಸಲೆಂದು ಹೋದಾಗ ಆರೋಪಿತರುಗಳು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೈಯಲ್ಲಿ ಕಲತ್ತಿ ಹಿಡಿದುಕೊಂಡು ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂಬಂತೆ ಜೀವ ಭಯದ ಬೆದರಿಕೆಯೊಡ್ಡಿರುವುದಾಗಿದೆ.
3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಝೀನತ್ ಬಾನು ರವರು ತನ್ನ ಗಂಡ ಹನೀಫ್ ರವರೊಂದಿಗೆ ಮಕ್ಕಳಾದ 07 ವರ್ಷದ ಹೈಪಾ ಮತ್ತು 03 ವರ್ಷದ ಹಾಹಾನರೊಂದಿಗೆ ಸಹಸವಾರರಾಗಿ ದಿನಾಂಕ 06-01-2015 ರಂದು ತನ್ನ ಗಂಡನ ಬಾಬ್ತು ಕೆ ಎ 19 ಈ ಎಲ್ 5894 ನೇ ಬೈಕಿನಲ್ಲಿ ಉಳ್ಳಾಲ ದರ್ಗಾಕ್ಕೆ ಹೋಗಿ ವಾಪಾಸು ಮನೆಗೆ ಹೋಗುವರೇ ಸಂಜೆ 5-00 ಗಂಟೆಗೆ ಕೆ ಐ ಒ ಸಿ ಎಲ್ ಗೇಟ್ ಬಳಿಗೆ ತಲುಪಿದಾಗ ಗೇಟ್ ಬಳಿಯಿಂದ ಪ್ರಧಾನ ರಸ್ತೆಗೆ ಬರುತ್ತಿರುವ ಲಾರಿಯೊಂದನ್ನು ನೋಡಿ ಗಲಿಬಿಲಿಗೊಂಡು ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಎಡಕ್ಕೆ ಚಲಾಯಿಸಿದ ಪರಿಣಾಮ ಸವಾರ ಹನೀಫರಿಗೆ ಬೈಕ್ ಮೇಲಿನ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದ ಪರಿಣಾಮ ಫಿರ್ಯಾದಿದಾರರ ಸೊಂಟಕ್ಕೆ ಗುದ್ದಿದ, ಕೈಗೆ ರಕ್ತ ಗಾಯವಾಗಿ, ಮಕ್ಕಳು ಹೈಪಾಳ ಮುಖ, ಕೈ, ಹೊಟ್ಟೆಗೆ ಮತ್ತು ಹಾಹಾನಳ ಕೈಗಳಿಗೆ ತರಚಿದ ಗಾಯವಾಗಿರುತ್ತದೆ. ಅಲ್ಲದೆ ಹನೀಫರಿಗೂ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-01-2015 ರಂದು ಸಂಜೆ 7-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸಂಪತ್ ಶೆಟ್ಟಿ ರವರು ತನ್ನ ಬಾಬ್ತು ಕೆ ಎ- 19 ಈ ಸಿ- 1627 ನೆ ನಂಬ್ರದ ಬೈಕಿನಲ್ಲಿ ಸುರತ್ಕಲ್ –ತಡಂಬೈಲ್ ರಾ.ಹೆ 66 ರ ಬದಿಯಲ್ಲಿನ ಸರ್ವೀಸ್ ರಸ್ತೆಯಲ್ಲಿ ಚಲಾಯಿಸಿಕೊಂಡು ಸುಪ್ರೀಮ್ ಹಾಲ್ ಬಳಿ ತಲುಪಿದಾಗ ಹಿಂದಿನಿಂದ ಯಾವುದೋ ನಂಬ್ರ ತಿಳಿಯಲಾಗದ ಮೋಟಾರ್ ಸೈಕಲ್ ಒಂದನ್ನು ಅದರ ಅಪರಿಚಿತ ಸವಾರ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದವರಿಗೆ ತಲೆಗೆ, ಎಡಭುಜಕ್ಕೆ ಗಂಭೀರ ರೀತಿಯ ರಕ್ತಗಾಯವಾಗಿದ್ದು, ಅಪಘಾತಪಡಿಸಿದ ಬೈಕ್ ಸವಾರನು ಸ್ಥಳದಲ್ಲಿ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಗಾಯಾಳು ಫಿರ್ಯಾದಿದಾರರನ್ನು ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಯುನಿಟಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
5.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-01-2015 ರಂದು ಮಧ್ಯಾಹ್ನ 03-45 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಆಯಿಷಾ ರವರು ತನ್ನ ತವರು ಮನೆಯಾದ ಉಳ್ಳಾಲಕ್ಕೆ ಜೊತೆಯಲ್ಲಿ ತನ್ನ 01 ವರ್ಷದ ಮಗ ಝಯಾನ್ ಜೊತೆಯಲ್ಲಿ ಕೆ ಎ- 19 ಸಿ- 3365 ನೇ ನಂಬ್ರದ ಬಸ್ಸಿನಲ್ಲಿ ಕೃಷ್ಣಾಪುರದಿಂದ ಹೊರಟು ರಾ.ಹೆ 66 ರಲ್ಲಿ ಪಣಂಬೂರು-ಕುದುರೆಮುಖ ಜಂಕ್ಷನ್ ತಲುಪಿದಾಗ ಬಸ್ ಚಾಲಕ ರಾಧಾಕೃಷ್ಣ ಎಂಬವರು ತನ್ನ ಬಸ್ಸನ್ನು ಹಾಗೂ ತಣ್ಣೀರುಬಾವಿ ಕಡೆಯಿಂದ ಜೋಕಟ್ಟೆ ಕಡೆಗೆ ಟಿಪ್ಪರ್ ನಂಬ್ರ ಕೆ ಎ- 19 ಬಿ-9004 ನೇಯದನ್ನು ಅದರ ಚಾಲಕ ಚೌದರಿ ಎಂಬವರು ಕೂಡ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ವಾಹನಗಳೆರಡೂ ಜಖಂಗೊಂಡು ಫಿರ್ಯಾದಿದಾರರಿಗೆ ಭುಜ ಮತ್ತು ಸೊಂಟಕ್ಕೆ ಗುದ್ದಿದ ಗಾಯವಾಗಿ ಬಸ್ಸಿನ್ಲಲಿದ್ದ ಇತರ ಪ್ರಯಾಣಿಕರಾದ ಮಮ್ತಾಜ್, ಅವರ ಮಗ ಮೊಹಮ್ಮದ್ ಶಹಾಜ್, ಆಶಿಯಾ ಮತ್ತು ಜೋಹಾರಾ ರವರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಎ ಜೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ದಾಖಲಾಗಿರುತ್ತಾರೆ.
No comments:
Post a Comment