Friday, January 16, 2015

Daily Crime Report : 16-1-2015

ದಿನಾಂಕ 16.01.201514:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2015 ರಂದು ಪಿರ್ಯಾದಿದಾರರಾದ ಶ್ರೀ ಯಶವಂತ್ ರವರು ಹಾಗೂ ವೆಂಕಟೇಶ್ ರವರು ಮಂಗಳೂರು ತಾಲೂಕು ಮುಲ್ಕಿ ಸಪ್ತಗಿರಿ ಅಪಾರ್ಟ್ಮೆಂಟ್ ನಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, 2ನೇ ಮಹಡಿಯ ಶೇಡ್‌‌ನಲ್ಲಿ ನಿಂತುಕೊಂಡು ಪೈಂಟಿಂಗ್ ಮಾಡುತ್ತಿದ್ದ ವೆಂಕಟೇಶ್ ರವರು ಬೆಳಿಗ್ಗೆ ಸುಮಾರು 10-30 ಗಂಟೆಗೆ ಶೇಡ್ ಕುಸಿದು ಕೆಳಗಡೆ ಬಿದ್ದು, ತಲೆಗೆ, ಕೈಗೆ, ಬೆನ್ನಿಗೆ ತೀವ್ರ ಗಾಯಗೊಂಡು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು .ಜೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ 17-10 ಗಂಟೆಗೆ ವೆಂಕಟೇಶ್ ರವರು ಮೃತಪಟ್ಟಿರುತ್ತಾರೆ. ಪೈಂಟಿಂಗ್ ಕಾಂಟ್ರಾಕ್ಟರ್ ರತ್ನೋಜಿ, ಸಪ್ತಗಿರಿ ಅಪಾರ್ಟ್ಮೆಂಟಿನ ಸೊಸೈಟಿ  ಅಧ್ಯಕ್ಷರಾದ ಸದಾನಂದ ಕೋಟ್ಯಾನ್ ಮತ್ತು ಕಾರ್ಯದರ್ಶಿ ಜಗದೀಶ್ ಶೆಟ್ಟಿಯವರು ಪೈಂಟ್ ಮಾಡುವ ಸಮಯದಲ್ಲಿ ಕೆಲಸಗಾರರಿಗೆ ಸೊಂಟಕ್ಕೆ ಬೆಲ್ಟ್, ಹೆಲ್ಮೆಟ್ ಹಾಗೂ ಸುರಕ್ಷತಾ ನೆಟ್ ನೀಡದೆ ನಿರ್ಲಕ್ಷವಹಿಸಿರುವುದೇ ಘಟನೆಗೆ  ಕಾರಣವಾಗಿರುತ್ತದೆ.

 

2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-01-2015 ರಂದು 21-00 ಗಂಟೆಗೆ ಮಂಗಳೂರು ತಾಲೂಕು ಕುಂಜತ್ತಬೈಲು ಗ್ರಾಮದ ಅಂಬಿಕಾ ನಗರ ಮುರ ಎಂಬಲ್ಲಿರುವ ನೂರುಲ್ಲಾ ಮಸೀದಿಯ ಎದುರುಗಡೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ನಾಸೀರ್ ರವರು ಮತ್ತು ಅವರ ತಮ್ಮ ಜಬ್ಬಿರ್ ಎಂಬವರಿಗೆ ಆರೋಪಿತರಾದ ಖಲಂದರ್, ಬಶೀರ್, ಅಜೀಮ್ , ರಿಯಾಜ್, ಇಮ್ರಾನ್, ಜಬ್ಬಾರ್ ಎಂಬವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಮಸೀದಿಯ ಈದ್ ಮಿಲಾದ್ ಕಾರ್ಯಕ್ರಮದ ವಿಚಾರದಲ್ಲಿ ಆವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಲ್ಲದೇ ಬಿಡಿಸಲು ಬಂದ ಪಿರ್ಯಾದುದಾರರ ತಾಯಿ ಮತ್ತು ಅಣ್ಣನಿಗೂ ಕೈಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿದೆ,  ಗಾಯಗೊಂಡ ಪಿರ್ಯಾದುದಾರರು ಮತ್ತು ಮಹಮದ್ ಶರೀಪ್, ಮಹಮದ್ ನಜೀರ್ ಎಂಬವರುಗಳು ಚಿಕಿತ್ಸೆಯ ಬಗ್ಗೆ ಮಂಗಳೂರು ಐಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

 

3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-01-2015 ರಂದು 21-30 ಗಂಟೆಗೆ ಮಂಗಳೂರು ತಾಲೂಕು ಕುಂಜತ್ತಬೈಲು ಗ್ರಾಮದ ಅಂಬಿಕಾ ನಗರ ಮುರ ಎಂಬಲ್ಲಿರುವ ನೂರುಲ್ಲಾ ಮಸೀದಿಯ ಎದುರುಗಡೆ ಫಿರ್ಯಾದಿದಾರರಾದ ಇಮ್ರಾನ್ ರವರು ಮತ್ತು ಮಸೀದಿಯ ಇತರ ಸದಸ್ಯರು ಮಾತನಾಡುತ್ತಿರುವಾಗ ಆರೋಪಿಗಳಾದ ಮಹಮ್ಮದ್ ಮತ್ತು ಅವರ ಮಕ್ಕಳಾದ ನಾಸೀರ್, ಜಾಬೀರ್, ಷರೀಫ್ ಎಂಬವರು ಬಂದು ಮಸೀದಿಯ ಹಿರಿಯರಿಗೆ ಅವಾಚ್ಯ ಶಬ್ದಗಳಿಂದ ಬಯ್ದು ಮಸೀದಿಯ ಸದಸ್ಯರಿಗೆ ಹೊಡೆಯಲು ಬಂದಾಗ ಫಿರ್ಯಾದಿದಾರರು, ಅಬ್ದುಲ್ ರಿಯಾಬ್ ಮತ್ತು ಇತರರು ಹಲ್ಲೆ ಮಾಡದಂತೆ ತಡೆಯಲು ಹೋದಾಗ ಜಾಬೀರ್ ಮತ್ತು ಷರಿಫ್ ಎಂಬವರು ಫಿರ್ಯಾದಿದಾರರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು, ನಂತರ ಜಾಬೀರ್ ಕಲ್ಲೊಂದನ್ನು ಹೆಕ್ಕಿ ಫಿರ್ಯಾದಿದಾರರ ಬಲಕೈಗೆ ಹೊಡೆದು, ನಂತರ ಇಬ್ಬರೂ ಸೇರಿ ಫಿರ್ಯಾದಿದಾರರನ್ನು ನೆಲದ ಮೇಲೆ ಮಗುಚಿ ಹಾಕಿ ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುವುದಲ್ಲದೆ ಫಿರ್ಯಾದಿದಾರರೊಂದಿಗಿದ್ದ ಅಬ್ದುಲ್ ರಿಯಾಬ್ ರವರಿಗೂ ಕೂಡಾ ಮಹಮ್ಮದ್ ನಾಸೀರ್ ಮತ್ತು ಷರೀಫ್ ರವರು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿದ ಪರಿಣಾಮ ಗಾಯಗೊಂಡು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14/15-01-2015 ರಂದು ಬೆಳಿಗ್ಗಿನ  ಜಾವ  03.10 ಗಂಟೆಯಿಂದ 06.00 ಗಂಟೆಯ ನಡುವೆ ಯಾರೋ ಕಳ್ಳರು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಅಜೀಜ್ ರವರು ವಾಸವಾಗಿರುವ ಪುತ್ತಿಗೆ ಗ್ರಾಮದ ಕಾಯರ್ ಪುಂಡು ಮನೆ ಎಂಬಲ್ಲಿಯ ಅನಾಜ್ ಮೆನ್ಷನ್ ಎಂಬಲ್ಲಿರುವ ಅಮೀರುದ್ದೀನ್ ರಾಜಾ ಸಾಹೇಬ್ ಎಂಬವರ  ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಪಿಕ್ಕಾಸಿನ ಸಹಾಯದಿಂದ ತೆಗೆದು ಮನೆಯೊಳಗೆ ಪ್ರವೇಶ ಮಾಡಿ ಮಲಗುವ ಕೊಣೆಯ ಮಂಚದ ಬಳಿ ಇರಿಸಿದ್ದ ಪಿರ್ಯಾದಿದಾರರ ಬಾಬ್ತು ಬ್ರೀಫ್ ಕೇಸನ್ನು ಕಳವು ಮಾಡಿ ಮನೆಯ ವರ್ಕ ಎರಿಯಾಕ್ಕೆ ತೆಗೆದು ಕೊಂಡು ಹೋಗಿ ವರ್ಕ್ ಎರಿಯಾದಲ್ಲಿ ತೆರೆದು ಅದರೊಳಗಿದ್ದ ಸುಮಾರು 1,20,000 /- ರೂ ಮೌಲ್ಯದ  10 ಪವನ್ ತೂಕದ ಚಿನ್ನಾಭರಣ ಹಾಗೂ ನಗದು ಹಣ ರೂ 40,000/- ನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ 1,60,000/- ರೂ ಆಗಬಹುದು.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15/01/2015 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪ್ರಿತೇಶ್ ರವರ ತಂದೆ ಗೋಪಾಲ ದೇವಾಡಿಗ 49 ವರ್ಷ ಎಂಬವರು ತನ್ನ ಬಾಬ್ತು ಸ್ಕೂಟರ್ ನಂಬ್ರ KA 19 EE 169 ನೇದರಲ್ಲಿ ಕೈಕಂಬ ಕಡೆಯಿಂದ ಗಂಜಿಮಠ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಕೈಕಂಬ ಪೆಟ್ರೋಲ್ ಪಂಪ್ ಬಳಿ ತಲುಪುತ್ತಿದ್ದಂತೆ ಸ್ಕೂಟರ್ ಸ್ಕಿಡ್ ಆಗಿ ಗೋಪಾಲ ದೇವಾಡಿಗ ರವರು ಸ್ಕೂಟರ್ ಸಮೇತರ ರಸ್ತೆಗೆ ಬಿದ್ದ ಪರಿಣಾಮ ಗೋಪಾಲ ದೇವಾಡಿಗ ರವರ ಮುಖದ ಬಲಭಾಗಕ್ಕೆ, ಬಲಭುಜ ಮತ್ತು ಬಲಕೈಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಕೈಕಂಬ ವಿಜಯ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದಾಗ ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2015 ರಂದು ಬೆಳಿಗ್ಗೆ 06.10 ಗಂಟೆಯ ಸಮಯ ಫಿರ್ಯಾದಿದಾರರಾದ ಶ್ರೀ ಮಾಧವ ರವರು ತನ್ನ ಮೋಟಾರ್ಸೈಕಲ್ನಲ್ಲಿ  ಇನ್ಪೋಸಿಸ್ಕೆಲಸಕ್ಕೆ ಹೋಗುತ್ತಿರುವಾಗ ತನ್ನ ಮುಂದಿನಿಂದ ಮೋಟಾರ್  ಸೈಕಲ್ನಂಬ್ರ ಕೆಎ.19.ಆರ್‌.3852 ನೇಯದಲ್ಲಿ ಇನ್ಪೋಸಿಸ್ಗೆ ಕೆಲಸಕ್ಕೆ ಹೋಗುತ್ತಿದ್ದ ಪ್ರದೀಪ್ ಕುಮಾರ್ ಎಂಬವರ ಮೋಟಾರ್ಸೈಕಲ್ಗೆ ಅವರ ಎದುರಿನಿಂದ ACE KA-19-A-5249 ನೇ ಟೆಂಪೋವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಇನ್ನೊಂದು ವಾಹನವನ್ನು ಓವರ್ಟೇಕ್ ಮಾಡಿಕೊಂಡು ರಸ್ತೆಯಲ್ಲಿ ತುರ್ತಾಗಿ ಅವರ ಬಲಬದಿಗೆ ಬಂದು ಪ್ರದೀಪ್ ಕುಮಾರ್ ಮೋಟಾರ್ಸೈಕಲಿಗೆ ಡಿಕ್ಕಿ ಹೊಡೆದುದರಿಂದ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪ್ರದೀಪ್ ಕುಮಾರ್ರಿಗೆ ಸೊಂಟ, ಬಲಕಾಲು, ಮೊಣ ಕೈಗೆ ಗಂಭೀರ ಗಾಯವನ್ನುಂಟು ಮಾಡಿರುತ್ತಾರೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಫಾತಿಮಾತ್ ಜೋಹರಾ ರವರ ಅಣ್ಣನಾದ ಮಹಮ್ಮದ್ ಇರ್ಷಾದ್ (19) ಎಂಬವನು ತೊಕ್ಕೊಟ್ಟು ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದವನು ಕೆಲಸ ಬಿಟ್ಟು ಮಸೀದಿಯಲ್ಲಿ ರಬಿಲಾವಲ್ ಕಲಿಯುತ್ತಿದ್ದವನು ದಿನಾಂಕ 10-01-2015 ರಂದು ಮಧ್ಯಾಹ್ನ 02.30 ಗಂಟೆ ಸಮಯ ಮನೆಯಿಂದ ನಮಾಜ್ಮಾಡಿ ಬರುತ್ತೇನೆಂದು ಹೋದವನು ವಾಪಾಸು ಬಾರದೆ ಹುಡುಕಾಡಿದರೂ ತನಕ ಪತ್ತೆಯಾಗದೆ ಕಾಣೆಯಾಗಿರುತ್ತಾನೆ. ಕಾಣೆಯಾದವರ ಚಹರೆ ವಿವರ: ಹೆಸರು : ಮಹಮ್ಮದ್ ಇರ್ಷಾದ್, ವಯಸ್ಸು:  19 ವರ್ಷ, ಎತ್ತರ  : 5.3, ಮೈ ಬಣ್ಣ: ಬಿಳಿ, ಧರಿಸಿದ ಬಟ್ಟೆ: ಬಿಳಿ ಬಣ್ಣದ ಉದ್ದ ಗೆರೆಗಳಿರುವ ತುಂಬು ತೋಳಿನ ಶರ್ಟ್‌, ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಮಾತನಾಡುವ ಭಾಷೆ: ಕನ್ನಡ, ಬ್ಯಾರಿ, ಮಲಿಯಾಳಂ.

 

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-09-2014 ರಂದು 20-00 ಗಂಟೆಯಿಂದ 22-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ  ಕಂಕನಾಡಿ ಪಾದರ್ ಮುಲ್ಲರ್ ಆಸ್ಪತ್ರೆಯ ದ್ಚಿಚಕ್ರ  ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಿರ್ಯಾದಿದಾರರಾದ ಶ್ರೀ ಶಿವಪ್ರಸಾದ್ ರವರ ಬಾಭ್ತು ಪಾರ್ಕ್ ಮಾಡಿದ್ದ 2005ನೇ ಮೋಡಲ್ , ಕಪ್ಪು-ವಾಯಿಲೆಟ್ ಬಣ್ಣದ ಅಂದಾಜು ರೂಪಾಯಿ 15000/- ಬೆಲೆ ಬಾಳುವ KA 19 U 2463 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸೂಪರ್ ಸ್ಲೈಂಡರ್ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು  ಕಳವಾದ ದ್ಚಿಚಕ್ರ ವಾಹನದ ಸೀಟ್ ಕೆಳಭಾಗದಲ್ಲಿರುವ ಟೂಲ್ಸ್ ಬಾಕ್ಸ್ ನಲ್ಲಿ ದ್ಚಿಚಕ್ರ ವಾಹನಕ್ಕೆ ಸಂಬಂಧಿಸಿದ ಆರ್. ಸಿ. ಜೆರಾಕ್ಸ್ ಪ್ರತಿ ಕೂಡ ಇರುತ್ತದೆ. ಕಳವಾದ ವಾಹನವನ್ನು ಕಳವಾದ ದಿನದಿಂದ ದಿನಾಂಕ 15-01-2015ರಂದು 10-00 ಗಂಟೆ ತನಕ ಹುಡುಕಾಡಿದಲ್ಲಿ  ಪತ್ತೆಯಾಗಿರುವುದಿಲ್ಲ.

 

9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನಾಸೀರ್ ಹುಸೈನ್ ರವರು ಮಂಗಳೂರು ನಗರದ ಬಂದರಿನ ಜೆ.ಎಂ ರಸ್ತೆಯ 3 ನೇ ಅಡ್ಡ ರಸ್ತೆಯಲ್ಲಿ ಪನಾಮ ಕೂಲಿಂಗ್ಸೊಲ್ಯೂಶನ್‌‌ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ದಿನಾಂಕ 15-01-2015 ರಂದು ಬೆಳಿಗ್ಗೆ ಸುಮಾರು 8-10 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಸಂಸ್ಥೆಯಲ್ಲಿರುವಾಗ ಆರೋಪಿಗಳಾದ ರಮ್ಲಾನ್‌ @ ಮಾಸ, ರಶೀದ್‌‌ ಮತ್ತು ಸಾಹೀಲ್ಎಂಬವರು ಪಿರ್ಯಾದಿದಾರರ ಸಂಸ್ಥೆಗೆ ಆಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರ ಕೆಲಸಗಾರರಾದ ಎಂಡಿ. ಆರೀಪ್‌, ಮಹಮ್ಮದ್ಇರ್ಫಾನ್ಮತ್ತು ಮಹಮ್ಮದ್‌‌ ಇರ್ಫಾನ್ಎಂಬವರನ್ನು ಆಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ರಮ್ಲಾನ್‌‌ ಎಂಬವನು ಎಂ.ಡಿ. ಆರೀಪ್‌‌ರವರ ಕುತ್ತಿಗೆಗೆ ಚಾಕುವಿನಿಂದ ತಿವಿಯಲು ಹೋದಾಗ ಅದನ್ನು ಅವರು ತಪ್ಪಿಸಲು ಪ್ರಯತ್ನಿಸಿದಾಗ ಎಂ.ಡಿ. ಆರೀಪ್‌‌ರವರ ಎದೆಯ ಎಡಭಾಗಕ್ಕೆ ಗಾಯವಾಗಿದ್ದು, ರಶೀದ್‌‌ ಎಂಬವನು ಕಬ್ಬಿಣದ ರಾಡ್‌‌ನಿಂದ ಮಹಮ್ಮದ್‌‌ ಇರ್ಫಾನ್ ತಲೆಯ ಭಾಗಕ್ಕೆ ಹೊಡೆದಾಗ ಅದನ್ನು ತಡೆದಾಗ ಬಲಕೈ ಮೊಣಗಂಟಿಗೆ, ಮತ್ತು ಮಹಮ್ಮದ್‌‌ ರಬ್ಬಾರ್‌‌ ಎಂಬವನಿಗೆ ಸಾಹಿಲ್ಎಂಬವನು  ರಾಡ್‌‌ನಿಂದ ಸೊಂಟದ ಭಾಗಕ್ಕೆ ಹೊಡೆಯುತ್ತಿದ್ದಾಗ  ಪಿರ್ಯಾದಿದಾರರು ಮತ್ತು ಇತರರು ಓಡಿ  ಬರುವುದನ್ನು ನೋಡಿದ ಆರೋಪಿಗಳು ನಿಮ್ಮನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆಂದು ಜೀವ ಬೆದರಿಕೆ ಹಾಕಿ ಅವರು ಬಂದಿದ್ದ ಮೋಟಾರು ಬೈಕಿನಲ್ಲಿ ಪರಾರಿಯಾಗಿರುತ್ತಾರೆ. ಕೂಡಲೇ ಪಿರ್ಯಾದಿದಾರರು ಮತ್ತು ರಿಜ್ವಾನ್ರವರು ಹಲ್ಲೆಗೊಳಗಾದ ಮೂವರನ್ನು ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್‌‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಹಾಜರುಪಡಿಸಿದಾಗ ವೈದ್ಯರು ಚಿಕಿತ್ಸೆ ಕೊಟ್ಟು  ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಪಿರ್ಯಾದಿದಾರರು ಹಲ್ಲೆಗೊಳಗಾದ ತನ್ನ ಕೆಲಸದವರಲ್ಲಿ ಕೃತ್ಯಕ್ಕೆ ಕಾರಣವೇನೆಂದು ಕೇಳಿದಾಗ ರಮ್ಲಾನ್‌‌ ಮತ್ತು ಅವನೊಂದಿಗೆ ಇದ್ದ ಇಬ್ಬರು ಯುವಕರು ಕೆಲಸದವರಲ್ಲಿ ಖರ್ಚಿಗೆ ಹಣ ಕೇಳಿದ್ದು, ಅವರು ಹಣವನ್ನು ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟುಗೊಂಡು ಮೂವರು ಸಮಾನ ಉದ್ದೇಶದಿಂದ ಕಬ್ಬಿಣದ ರಾಡ್‌‌ ಮತ್ತು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುತ್ತಾರೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.01.2015 ರಂದು ಬೆಳಿಗ್ಗೆ 11:30 ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಅರೀಸ್ ರವರು ತನ್ನ ಸಂಬಂಧಿಕರ ಬಾಬ್ತು KA-19-EB-7833ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಶ್ರೀನಿವಾಸ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಂಪ್ವೆಲ್ ಕಡೆಯಿಂದ ವೀರ ನಗರ ಕಡೆಗೆ ಹೋಗುವರೇ ಪಡೀಲ್ ರೈಲ್ವೇ ಓವರ್ ಬ್ರಿಡ್ಜ್ ಕೆಳಗಡೆ ರಸ್ತೆಯಲ್ಲಿ ಸವಾರಿಮಾಡಿಕೊಂಡು ಹೋಗುತ್ತಿರುವ ಸಮಯ ಎದುರುಗಡೆಯಿಂದ ಅಂದರೆ ಬಿ.ಸಿ ರೋಡ್ ಕಡೆಯಿಂದ KA-19-MA-5374ನೇ ನಂಬ್ರದ ಕಾರನ್ನು ಅದರ ಚಾಲಕರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಸದ್ರಿ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿ ಸವಾರ ಶ್ರೀನಿವಾಸ ರವರು ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದುದಾರರ ಎಡಕೈಗೆ, ಎಡಕಾಲಿಗೆ ಗುದ್ದಿದ ನೋವು ಹಾಗೂ ಶ್ರೀನಿವಾಸ ರವರ ಎದೆಗೆ ಹಾಗೂ ಬಲ ಭುಜಕ್ಕೆ ಗುದ್ದಿದ ನೋವುಂಟಾಗಿರುವುದಲ್ಲದೇ ಅಪಘಾತ ಉಂಟು ಮಾಡಿದ ಆರೋಪಿ ಕಾರು ಚಾಲಕ ಅಪಘಾತ ಸ್ಥಳದಿಂದ ಕಾರು ಸಮೇತ ಪರಾರಿಯಾಗಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಬಿ. ಅಶ್ವಥಮ್ ರಾವ್ ರವರ ಭಾವನವರಾದ ಡಾ. ಸಿ.ವಿ ಮೋಹನ್ ಎಂಬವರ ಬಾಬ್ತು ಕಪಿತಾನಿಯ ಕಮಲ ನಗರದಲ್ಲಿರುವ ತೇಜಸ್ ಎಂಬ ಮನೆಯು ಕಳೆದ ಒಂದುವರೆ ತಿಂಗಳಿನಿಂದ ಬೀಗ ಹಾಕಿದ್ದು, ದಿನಾಂಕ: 14.01.2015 ರಾತ್ರಿ ಯಾರೋ ಕಳ್ಳರು ಮನೆಯ ಮೇಲಂತಸ್ಥಿನ ಬಾಗಿಲು ಮುರಿದು ಒಳಪ್ರವೇಶಿಸಿ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ.

No comments:

Post a Comment