ದೈನಂದಿನ ಅಪರಾದ ವರದಿ.
ದಿನಾಂಕ 28.01.2015 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
2
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
1
|
1.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-01-2015 ರ 19-45 ಗಂಟೆಯಿಂದ ದಿನಾಂಕ 27-01-2015 ರ 04-45 ಗಂಟೆಯ ಮಧ್ಯೆ ಮಂಗಳೂರು ನಗರದ ಪ್ಲಾಟಿನಂ ಥಿಯೇಟರ್ ಎದುರುಗಡೆ ಇರುವ ಗ್ರೇಸಿ ಗೋಲ್ ಕಾಂಪೌಂಡ್ ನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಪಿರ್ಯಾದಿದಾರರಾದ ಶ್ರೀ ಸಂಜೀವಿನಿ ರವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಯಾರೋ ಕಳ್ಳರು ಕಪಾಟಿನ ಒಳಗೆ ಇರಿಸಿದ್ದ ಸುಮಾರು 96,000/- ರೂ ಬೆಲೆಬಾಳುವ 48ಗ್ರಾಂ ವಿವಿಧ ನಮೂನೆಯ ಚಿನ್ನಾಭರಣ ಹಾಗೂ ನಗದು ರೂ, 25,000/- ವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,21,000/- ರೂ.ಗಳಾಗಬಹುದು.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-01-2015 ರಂದು ಪಿರ್ಯಾಧಿದಾರರಾದ ಶ್ರೀ ಬಾಲಕೃಷ್ಣ ಕುಲಾಲ್ ರವರು ತನ್ನ ಬಾಬ್ತು ಕೆಎ-19-ಸಿ-8733 ನಂಬ್ರದ ಆಟೋರಿಕ್ಷಾದಲ್ಲಿ ಕೆರೆಕಾಡಿನಿಂದ ಮುಕ್ಕಾಕ್ಕೆ ಚಂದ್ರಿಕಾ ಭಟ್ ಎಂಬವರನ್ನು ಪ್ರಯಾಣಿಕರಾಗಿ ಕುಳ್ಳಿರಿಸಿಕೊಂಡು ಕೆರೆ ಕಾಡು ಎಸ್ ಕೋಡಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಮಧ್ಯಾಹ್ನ ಸಮಯ ಸುಮಾರು 3:00 ಗಂಟೆಗೆ ಎಸ್ ಕೋಡಿ ದುರ್ಗಾಭವನ ಹೋಟೆಲ್ ಬಳಿಗೆ ತಲುಪಿದಾಗ ಎಸ್.ಕೋಡಿ ಕಡೆಯಿಂದ ಕೆರೆಕಾಡು ಕಡೆಗೆ ಕೆಎ-20-ಪಿ-3048 ನಂಬ್ರದ ನ್ಯಾನೋ ಕಾರೊಂದನ್ನು ಅದರ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಪಿರ್ಯಾಧಿದಾರರ ರಿಕ್ಷಾಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರ ಮುಖ ಬಲ ಕೈಗೆ, ಎಡ ಪಾದಕ್ಕೆ, ಎಡ ಕೈಗೆ ರಕ್ತ ಗಾಯವಾಗಿದ್ದು, ರಿಕ್ಷಾ ಪ್ರಯಾಣಿಕರಾದ ಚಂದ್ರಿಕಾ ಭಟ್ ರವರಿಗೆ ಹಣೆಗೆ, ಎಡ ಕೈಗೆ ತೀವ್ರ ತರದ ರಕ್ತ ಗಾಯವಾಗಿದ್ದಲ್ಲದೆ, ಎಡ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಈ ಬಗ್ಗೆ ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಾಗಿದ್ದು, ಕಾರಿನಲ್ಲಿದ್ದವರಿಗೂ ಕೂಡಾ ಗಾಯವಾಗಿರುತ್ತದೆ.
3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-01-2015 ರಂದು ಮದ್ಯಾಹ್ನ 1-30 ಗಂಟೆ ಸಮಯಕ್ಕೆ ಪ್ರಕರಣ ಫಿರ್ಯಾದಿದಾರರಾದ ಶ್ರೀ ಜಗದಿಶ್ ರವರು ತನ್ನ ಮನೆಯಲ್ಲಿ ಊಟ ಮಾಡಿ ಮಲಗಿರುವ ಸಮಯ ಅವರ ತಂಗಿಯ ಗಂಡನಾದ ಚೆನ್ನಪ್ಪನು ತಂಗಿ ಆಶಾ ರವರಲ್ಲಿ ಗಲಾಟೆ ಮಾಡುತ್ತಿದ್ದಾಗ ಫಿರ್ಯಾದುದಾರರು ಅವರಲ್ಲಿ ಯಾಕೆ ಗಲಾಟೆ ಮಾಡುವುದು ಎಂದು ಕೇಳಿದಾಗ ಆರೋಪಿ ಚೆನ್ನಪ್ಪನು ನೀನು ಯಾರು ಕೇಳಲು? ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಇದ್ದ ಮರದ ಬ್ಯಾಟ್ ನಿಂದ ಫಿರ್ಯಾದುದಾರರ ತಲೆಗೆ ಹೊಡೆದು ರಕ್ತಗಾಯ ಉಂಟು ಮಾಡಿದಲ್ಲದೇ ನಿನ್ನನ್ನು ಹಾಗೂ ನಿನ್ನ ತಂದೆಯನ್ನು ಕೊಂದು ಹಾಕುತ್ತೇನೆಂದು ಹೆದರಿಸಿದಾಗ ತಂಗಿ ಹಾಗೂ ತಂದೆ ಬೊಬ್ಬೆ ಹೊಡೆಯುವುದನ್ನು ಕಂಡು ಆರೋಪಿ ಚೆನ್ನಪ್ಪನು ಅಲ್ಲಿಂದ ಪರಾರಿಯಾಗಿರುತ್ತಾನೆ. ಫಿರ್ಯಾದುದಾರರು ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ.
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-01-2015 ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕಾಲೇಜಿನ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಮನೆಗೆ ತನ್ನ ಗೆಳತಿಯರೊಂದಿಗೆ ನಡೆದುಕೊಂಡು ಬಸ್ಸು ನಿಲ್ದಾಣಕ್ಕೆ ಬರುತ್ತಿರುವಾಗ ಮಂಗಳೂರು ತಾಲೂಕಿನ ಕೊಂಡೆ ಮೂಲ ಗ್ರಾಮದ ಕಟೀಲು ಎಂಬಲ್ಲಿ ಸದ್ರಿ ವಿದ್ಯಾರ್ಥಿನಿಯನ್ನು 20 ದಿನಗಳ ಹಿಂದೆ ಹಿಂಬಾಲಿಸಿ ಬರುತ್ತಿದ್ದ ವ್ಯಕ್ತಿ ಮಾತನಾಡಲು ಪ್ರಯತ್ನಿಸಿದ್ದಲ್ಲದೇ ಅವರು ಮಾತನಾಡದೇ ಇದ್ದಾಗ, ಆತನು ವಿದ್ಯಾರ್ಥಿನಿಯ ಗೆಳತಿಯರಲ್ಲಿ ಈಕೆ ನನ್ನ ಹೆಂಡತಿ ಎಂದು ಹೇಳಿ ತೊಂದರೆ ನೀಡಿದ್ದಲ್ಲದೇ ಇದೇ ವ್ಯಕ್ತಿ ಕಾಲೇಜಿಗೆ ಬಂದು, ಕಾಲೇಜಿನವರಲ್ಲಿ ಸದ್ರಿ ವಿದ್ಯಾರ್ಥಿನಿಯಲ್ಲಿ ಮಾತನಾಡಬೇಕೆಂದು ಕೇಳಿಕೊಂಡ ವ್ಯಕ್ತಿ ಈತನೇ ಆಗಿದ್ದು, ಈತನ ಹೆಸರು ಯೋಗೀಶ ಶೆಟ್ಟಿ ಎಂಬುದಾಗಿದೆ.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:26.01.2015 ರಂದು ರಾತ್ರಿ 9.00 ಗಂಟೆಗೆ ಕೆಎ-19-ಎಎ-5838 ನೇ ಕಾರಿನ ಚಾಲಕರು ಕೊಪ್ಪಲಕಾಡು ಕಡೆಯಿಂದ ಬಾಂದೊಟ್ಟು ಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ತನ್ನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಪ್ಪಲಕಾಡು ಗಣೇಶ್ ಬಂಗೇರ ರವರ ಮನೆ ಹತ್ತೀರ ರಸ್ತೆ ಬದಿಯಲ್ಲಿರುವ HT/LT ಲೈನ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದುದ್ದರಿಂದ ವಿದ್ಯುತ್ ಕಂಬವು ಸಂಪೂರ್ಣವಾಗಿ ತುಂಡಾಗಿ ಬಿದ್ದಿರುತ್ತದೆ. ಇದರಿಂದಾಗಿ ಮೆಸ್ಕಾಂ ಕಂಪನಿಗೆ ಸುಮಾರು 18000/- ರುಪಾಯಿ ನಷ್ಟ ಉಂಟಾಗಿರುತ್ತದೆ.
No comments:
Post a Comment