Monday, January 19, 2015

Daily Crime Reports : 18-01-2015

ದಿನಾಂಕ 18.01.201512:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
3
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
1
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
3
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
2






















  








1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06.01.2015 ರಂದು ಪಿರ್ಯಾದಿದಾರರಾದ ಡಾ. ಅರವಿಂದ ರಾವ್ ರವರು ತನ್ನ ಬಾಬ್ತು ಕಾರು ನಂಬ್ರ ಕೆಎ. 19ಎಂಎ.6336ನೇದನ್ನು ಮಂಗಳೂರು ನಗರದ ಮಂಗಳಾ ಸ್ಟೇಡಿಯಂ ಈಜು ಕೊಳದ ಎದುರು ಚಲಾಯಿಸಿಕೊಂಡು ಬಂದು ಲೇಡಿಹಿಲ್ ಕಡೆಗೆ ಹೋಗುವರೇ ಕಾರ್ಪೊರೇಶನ್ ಬ್ಯಾಂಕ್  ಸಾರ್ವಜನಿಕ ಲೈಬ್ರೆರಿ ಎದುರು ಯು ಟರ್ನ್ ಹೊಡೆದು ಲೇಡಿಹಿಲ್ ಕಡೆಗೆ ಹೋಗುತ್ತಿರುವ ಸಮಯ ಆರೋಪಿ ಕಾರು ಚಾಲಕ ಚೆರಿಯನ್ ಎಂಬರು ಕಾರು ನಂಬ್ರ  ಕೆಎ.21.ಎನ್ 1454ನೇದನ್ನು  ನಗರದ ಮಣ್ಣಗುಡ್ಡೆ ಕಡೆಯಿಂದ ಲೇಡಿಹಿಲ್ ಕಡೆಗೆ ತೀರಾನಿರ್ಲಕ್ಷ್ಯ ಹಾಗೂ ಅಜಾಗರುಕತೆಯಿಂದ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಕಾರಿನ ಹಿಂದುಗಡೆ ಡಿಕ್ಕಿ ಹೊಡೆದ ಪರಿಣಾಮ  ಕಾರು ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಯಾಗಿರುದಾಗಿದೆ ಈ ಪರಿಣಾಮ ಪಿರ್ಯಾದಿದಾರರ ಕಾರಿನ ಮುಂದುಗಡೆ ಹಾಗೂ ಹಿಂದುಗಡೆ ಜಖಂ ಉಂಟಾಗಿರುವುದಾಗಿದೆ..  ಆರೋಪಿ ಕಾರು ಚಾಲಕ  ಚೆರಿಯನ್ ರವರು ಈ ವರೆಗೆ  ರಿಪೇರಿ ವೆಚ್ಚ ಭರಿಸುವುದಾಗಿ ತಿಳಿಸಿ ಇದೀಗಾ  ರಿಪೇರಿ ವೆಚ್ಚ ಭರಿಸುವರೇ ನಿರಾಕರಿಸಿರುವುದರಿಂದ ಈ ಪಿರ್ಯಾದಿ ನೀಡಲು  ತಡವಾಗಿರುತ್ತದೆ. ಈ ಅಪಘಾತ ದಿನಾಂಕ : 06.01.2015 ರಂದು ರಾತ್ರಿ  21.45 ಗಂಟೆಗೆ ಆಗಿರುತ್ತದೆ.

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-01-2015  ರಂದು  ಪಿರ್ಯಾದಿದಾರರಾದ ಶ್ರೀಮತಿ ಗ್ರೇಸಿ ಬೆಲ್ಫೋರ್ಡ್ ರವರು  ಮನೆಗೆ ಬೇಕಾಗಿರುವ ಸಾಮಾನುಗಳನ್ನು ತರಲೆಂದು ತನ್ನ ಸ್ನೇಹಿತೆ ನೀನಾ ವಿ ಮಾಬೆನ್ರವರ ಜೊತೆಯಲ್ಲಿ  ಮಂಗಳೂರು ನಗರದ  ಬಂದರಿನ ಅಜಿಜುದ್ದೀನ್ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಾ ಸಮಯ ಮದ್ಯಾಹ್ನ 3:00 ಗಂಟೆಗೆ ವಿಷ್ಣು ಕ್ರಾಕರ್ಸ್ಎದುರುಗಡೆ ತಲುಪಿದಾಗ, ಲೋವರ್ಕಾರ್ಸ್ಟ್ರೀಟ್ಕಡೆಯಿಂದ ಮೋಟಾರು ಸೈಕಲ್ನಂಬ್ರ ಕೆ.-19-ಇಇ-1118 ನೇದನ್ನು ಅದರ ಸವಾರನು ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರ ಒಂದು ಹಲ್ಲು ಪೂರ್ತಿ ಕಿತ್ತು ಹೋಗಿ, ಇನ್ನೊಂದು ಹಲ್ಲು ಅರ್ಧ ತುಂಡಾಗಿದ್ದು, ಹಾಗೂ ಎಡ ಕಣ್ಣಿನ ಬಳಿ ರಕ್ತ ಗಾಯ ಮತ್ತು ಬಲಕೈಗೆ ಗುದ್ದಿದ ನೋವು ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ನಗರದ ಯೆನೆಪೋಯಾ ಆಸ್ಪತ್ರೆಗೆ ಕೊಂಡೊಯ್ದಲ್ಲಿ ಅಲ್ಲಿ ವೈದ್ಯರು ಉಪಚರಿಸಿ ಹೊರರೋಗಿಯಾಗಿ ದಾಖಲಿಸಿರುವುದಾಗಿದೆ.

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-1-2015 ರಂದು ರಾತ್ರಿ 8-00 ಗಂಟೆ ಸಮಯಕ್ಕೆ ಠಾಣೆಯಲ್ಲಿರುವ ಸಮಯ ಸುರತ್ಕಲ್‌‌ ಪೇಟೆಯ ಹರ್ಷ ಕಾಂಪ್ಲೇಕ್ಸ್ನಲ್ಲಿರುವ ಅವೆ ಮರಿಯ ಮೆಡಿಕಲ್‌‌ ಶಾಪ್‌‌ನಲ್ಲಿ ವೈದ್ಯರ ಸಲಹೆ ಇಲ್ಲದೆ ಯುವಕರಿಗೆ ಅಮಲು (ಮತ್ತು) ಬರುವಂತಹ ಸಿರಾಪ್ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಸುರತ್ಕಲ್ ಪೊಲೀಸ್ ಠಾಣಾ ಪೊಲಿಸ್ ನಿರೀಕ್ಷಕರಾದ ಎಂ.ಎ ನಟರಾಜ್ರವರಿಗೆ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರ ಮಾಡಿಕೊಂಡು ಠಾಣಾ ಸಿಬ್ಬಂದಿಗಳ ಜೊತೆ ಸುರತ್ಕಲ್‌‌  ಹರ್ಷ ಕಾಂಪ್ಲೇಕ್ಸ್‌‌ ನಲ್ಲಿರುವ ಅವೆ ಮರಿಯ ಮಡಿಕಲ್ ಶಾಫ್‌‌  ಬಳಿಗೆ ರಾತ್ರಿ 8-30 ಗಂಟೆಗೆ ಹೋದಾಗ 2 ಜನ ಯುವಕರು ಕೈಯಲ್ಲಿ ಸಿರಾಪ್ಬಾಟಲಿಗಳನ್ನು ಹಿಡಿದುಕೊಂಡಿದ್ದು, ಅವರನ್ನು ವಿಚಾರಿಸಲಾಗಿ ಒಬ್ಬನು ತನ್ನ ಹೆಸರು ಮಹಮ್ಮದ್ಶಾಹಿದ್‌‌‌ ಪ್ರಾಯ: 23 ವರ್ಷ, ತಂದೆ: ಸುಲೈಮಾನ್‌‌‌ ವಾಸ: 8 ನೇ ಬ್ಲಾಕ್‌‌, ಚೊಕ್ಕಬೆಟ್ಟು, ಕೃಷ್ಣಾಪುರ ಕಾಟಿಪಳ್ಳ ಮಂಗಳೂರು ಇನ್ನೊಬ್ಬನು ಮಹಮ್ಮದ್‌‌ ನಿಜಾಮುದ್ದಿನ್‌‌ ಪ್ರಾಯ: 21 ವರ್ಷ ತಂದೆ: ಸಿ.ಎಮ್‌‌ ಮುಸ್ತಾಪ, ವಾಸ: ಕಾಟಿಪಳ್ಳ 2 ನೇ ಬ್ಳಾಕ್‌‌ ಮಸೀದೀ ಹತ್ತಿರ ಕಾಟಿಪಳ್ಳ ಮಂಗಳೂರು ಎಂದು ತಿಳಿಸಿದ್ದು, ಅವರನ್ನು ವಿಚಾರಿಸಿದಾಗ ತಾನು ಅಮಲು ಬರುವುದಕ್ಕೆ 1 ಬಾಟಲ್‌‌‌ ಸಿರಾಪ್‌‌‌ ಸೇವಿಸಿರುವುದಾಗಿ ತಿಳಿಸಿ ಹಾಗು ಇನ್ನೊಂದು ಸಿರಾಪ್‌‌ ಬಾಟಲಿಯನ್ನು ಹಾಜರು ಪಡಿಸಿದ್ದು, ಇನ್ನೊಬ್ಬನು ಮಹಮ್ಮದ್‌‌ ನಿಜಾಮುದ್ದಿನ್‌‌ ತಾನು ಕೂಡ ಅಮಲು ಬರಲು ಸಿರಾಪ್ಕುಡಿಯಲು 2 ಬಾಟಲ್ ಸಿರಾಪ್ಇಟ್ಟುಕೊಂಡಿರುವುದಾಗಿ ತಿಳಿಸಿ ಅವರಿಬ್ಬರು  Codeine Phosphate and chlorpheniramine Maleate Syrup'  'CODISTAR' ಎಂದು ಬರೆದ ಮುಚ್ಚಳ ತೆರೆಯದ 2 ಸಿರಾಪ್‌‌ ಬಾಟಲಿಗಳನ್ನು ಹಾಜರು ಪಡಿಸಿದ್ದು, ಇದನ್ನು ಅವರಿಬ್ಬರು ಅವೆ ಮರಿಯ ಮೆಡಿಕಲ್ಶಾಫ್ನಿಂದ ಖರೀದಿ ಮಾಡಿರುವುದಾಗಿ ಇದನ್ನು ಖರೀದಿ ಮಾಡಲು ಯಾವುದೇ ವೈದ್ಯರ ಸಲಹೆ ಯಾಗಲೀ ಚೀಟಿಯಾಗಲೀ ಇರುವುದಿಲ್ಲ ಎಂದು ತಿಳಿಸಿ, ಅವೆ ಮರಿಯ ಮಡಿಕಲ್‌‌ನ್ನು ತೋರಿಸಿದ ಮೇರೆಗೆ ಅದರಂತೆ ಅವೆ ಮರಿಯ ಮೆಡಿಕಲ್‌‌‌ ಶಾಪ್‌‌‌ಗೆ ಹೋಗಿ ಅಲ್ಲಿನ ಮಾಲಕರನ್ನು ವಿಚಾರಿಸಿದಾಗ ಅವರ ಹೆಸರು ಎಡ್ವಿನ್‌‌ ಮಂತೋರೊ ಪ್ರಾಯ: 40 ವರ್ಷ ತಂದೆ: ರಾಬೋರ್ಟ ಮಂತೋರೋ, ವಾಸ: ಕಾನ ಜಂಕ್ಷಣ್‌‌‌ ಹೌಸ್‌‌, ಹಳೆ ಲಾನ್ಸ್ವೇ ಹತ್ತಿರ, ಇಡ್ಯಾ ಗ್ರಾಮ, ಸುರತ್ಕಲ್ಮಂಗಳೂರು ಎಂದು ತಿಳಿಸಿದ್ದು, ಯುವಕರಾದ  ಮಹಮ್ಮದ್ಶಾಹಿದ್‌‌‌ ಮತ್ತು ಮಹಮ್ಮದ್‌‌ ನಿಜಾಮುದ್ದಿನ್‌‌ ಇವರಿಗೆ ತನ್ನ ಮೆಡಿಕಲ್‌‌‌ ಶಾಫ್‌‌ನಿಂದ ಯಾವುದೇ ವೈದ್ಯರ ಚೀಟಿ ಇಲ್ಲದೇ 4 ಸಿರಾಪ್‌‌ ಬಾಟಲ್ಗಳನ್ನು ನೀಡಿರುವುದಾಗಿ ತಿಳಿಸಿರುತ್ತಾರೆ. ಸ್ಥಳದಲ್ಲಿ ಪಂಚರ ಸಮಕ್ಷಮದಲ್ಲಿ ಮಹಜರು ಬರೆದು Codeine Phosphate and chlorpheniramine Maleate Syrup'  'CODISTAR' ಎಂದು ಬರೆದ ಒಂದು ಖಾಲಿ ಸೀರಾಪ್ನ ಬಾಟಲಿ ಮತ್ತು ಮುಚ್ಚಳ ತೆಗೆಯದ 3 ಸಿರಾಫ್ಪುಲ್‌‌ ಬಾಟಲಿಗಳನ್ನು ಸ್ವಾಧೀನ ಪಡಿಸಿ, ಅವೆ ಮರಿಯ ಮೆಡಿಕಲ್‌‌ನ ಮಾಲಿಕರಾದ ಎಡ್ವಿನ್ಮಂತೋರೋ ಇವರನ್ನು  ರಾತ್ರಿ 10-00 ಗಂಟೆಗೆ ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ. .ಹಾಗೂ ಸಿರಪ್ ಸೇವಿಸಿದ ಮೊಹಮ್ಮದ್ ಸಾಹಿದ್ ಮತ್ತು ಮೊಹಮ್ಮದ್ ನಿಜಾಮುದ್ದೀನ್ ಇವರನ್ನು ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ ವಶಕ್ಕೆ ಪಡೆಯಲಾಗಿದೆ. ಅವೆ ಮರಿಯ ಮೆಡಿಕಲ್‌‌ನ ಮಾಲಿಕರಾದ ಎಡ್ವಿನ್ಮಂತೋರೋ ಇವರು ವೈದ್ಯರ ಸಲಹೆ ಇಲ್ಲದೆ ಯುವಕರಿಗೆ ಅಮಲು (ಮತ್ತು) ಬರುವಂತಹ ಸಿರಾಪ್ಗಳನ್ನು ಸೇವಿಸಲು ಕಾನೂನು ಬಾಹಿರವಾಗಿ ಮಾರಾಟ ಮಾಡುವ ಮೂಲಕ ಯುವಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೃತ್ಯದಲ್ಲಿ ಬಾಗಿಯಾಗಿರುವುದು ಕಂಡು  ಬಂದಿದ್ದು, ಅವರ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ.

4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರು ಶ್ರೀಮತಿ  ರಜ್ವೀನಾ  ರವರು ಸುಮಾರು ಎರಡುವರೆ  ವರ್ಷಗಳ ಹಿಂದೆ ಮಹಮ್ಮದ್ ರಸೀದ್  ಎಂಬುವರನ್ನು ಮದುವೆಯಾಗಿ ಬಜ್ಪೆಯ  ಗಂಡನ ಮನೆಯಲ್ಲಿ ವಾಸವಾಗಿದ್ದು. ಪ್ರಸ್ತುತ ಪಂಜಿಮೊಗೇರು ಮಸೀದಿಗೆ ಸೇರಿದ ಕಟ್ಟಡದಲ್ಲಿ ಬಾಡಿಗೆ  ದರದಲ್ಲಿ ಪಿರ್ಯಾದುದಾರರು ತನ್ನ ಗಂಡ  ಮತ್ತು ಮಗುವಿನೊಂದಿಗೆ  ವಾಸವಾಗಿರುವುದಾಗಿದೆಅವರ ಮದುವೆಯ ಸಮಯದಲ್ಲಿ  ಪಿರ್ಯಾದುದಾರರ ತಂದೆಯವರು   ರೋಪಿಗೆ 18  ಪವನ್  ಚಿನ್ನವನ್ನು  ನೀಡಿದ್ದು  ಅದನ್ನು  ಅದನ್ನು ಅವರು ಮಾರಾಟ ಮಾಡಿದ್ದು  ನಂತರ ಪುನ;  25 000 ಸಾವಿರ ಹಣ  ಬೇಕೆಂದು  ಪಿರ್ಯಾದುದಾರರಲ್ಲಿ  ಅವರ ತಂದೆಯಲ್ಲಿ ಕೇಳುವಂತೆ  ಒತ್ತಾಸುತ್ತಿದ್ದು  ದಿನಾಲೂ  ಪಿರ್ಯಾದಿದಾರರಿಗೆ ಕಿರುಕುಳ  ನೀಡಿ ಕೈಯಿಂದ  ಹಲ್ಲೆ ಮಾಡುತ್ತಿದ್ದರುದಿನಾಂಕ 15/01/2015 ರಂದು ರಾತ್ರಿ  ಸುಮಾರು 7 ಗಂಟೆ ಸಮಯಕ್ಕೆ  ಆರೋಪಿಯ  ಪಿರ್ಯಾದಿದಾರರು  ಮನೆಗೆ ಬಂದು  ಹಣದ ವಿಚಾರವಾಗಿ  ಗಲಾಟೆ  ಮಾಡಿದ್ದು  ಆಗ ಪಿರ್ಯಾದುದಾರರು ಆರೊಪಿಯಲ್ಲಿ ತನ್ನ ತಂದೆಯವರು ಹಣ ಕೊಡುವ ಸ್ಥಿತಿಯಲ್ಲಿ ಇಲ್ಲವೆಂದು  ತಿಳಿಸಿದಾಗ  ಕೊಪಗೊಂಡು  ಆರೋಪಿಯು ಕೈಯಿಂದ  ಬಲವಾಗಿ ಪಿರ್ಯಾದುದಾರರ ಕೆನ್ನೆಗೆ  ಹೊಡೆದು ನಂತರ  ಬೆನ್ನಿಗೆ  ಕೈಗೆ ಹಾಗೂ  ತೊಡೆಗೆ ಕೈಯಿಂದ  ಹೊಡೆದು  ಕಾಲಿನಿಂದ ತುಳಿದು ಗುದ್ದಿದ ಗಾಯವನ್ನುಂಟು  ಮಾಡಿದ್ದು ಪಿರ್ಯಾದಿದರರು ಚಿಕಿತ್ಸೆ ಬಗ್ಗೆ ತೊಕ್ಕಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-01-2015 ರಂದು ಸಂಜೆ 4.30 ಗಂಟೆಗೆ ಮರ್ಪಾಡಿ ಗ್ರಾಮದ ಸುವರ್ಣ ನಗರದಲ್ಲಿ ಹಯತ್ತುಲ್ ಮದ್ರಸದ ಮಿಲಾದುನ್ನೆಬಿಯ ದಿನಾಚರಣೆ ಪ್ರಯುಕ್ತ ಮಕ್ಕಳ ಕಾರ್ಯಕ್ರಮ ಇದ್ದು ಯಾವಾಗಲು ಆಡಿಗೆಯನ್ನು ಮದ್ರಸದ ಪಕ್ಕದಲ್ಲೇ ಮಾಡುತ್ತಿದ್ದು ,ಈ ಸಲ ಆಡಿಗೆ ಕೆಲಸವು ವಿಶಲ್ ನಗರದಲ್ಲಿ ಮಾಡುತ್ತಿದ್ದು ಫಿರ್ಯಾದಿದಾರರಾದ ಶ್ರೀ ಮುಸ್ತಫಾ ರವರು, ಈ ಸಲ ಇಲ್ಲಿ ಯಾಕೇ ಮಾಡುತ್ತಿರಿ ಎಂಬುವುದಾಗಿ ರಿಪಕ್ ಮತ್ತು ಉಸ್ಮಾನ್ ಎಂಬವರಲ್ಲಿ ಕೇಳಿದಕ್ಕೆ ಆಗ ಆರೋಪಿಗಳಾದ ರಿಪಕ್ ಮತ್ತು ಉಸ್ಮಾನ್ ಎಂಬವರು "ಈ ವಿಚಾರವನ್ನು ಕೇಳಲು ನೀನು ಯಾರು?"ಉಸ್ಮಾನ್ ಒಂದು ಮರದ ಕೋಲಿನಿಂದ ಪಿರ್ಯಾಧಿದಾರರ ಬಲಕಾಲಿಗೆ ಹೊಡೆದಿದ್ದು ರಿಪಕ್ ನು ಪಿರ್ಯಾದಿದಾರರ ಬಲ ಕಾಲಿನ ಪಾದವನ್ನು ಎಳೆದು ತಿರುಗಿಸಿದ ಅದ್ದು ಎಂಬಾತನು ಕೈಯಿಂದ ಹಲ್ಲೆ ನಡೆಸಿರುತ್ತಾನೆ ಇನ್ನೊಬ್ಬ ಆರೋಪಿಯಾದ ಇಕ್ಬಾಲ್ ಎಂಬಾತನ್ನು ಪಿರ್ಯಾಧಿದಾರರ ದೂರವಾಣಿಗೆ ಕರೆ ಮಾಡಿ ನೀನ್ ಆರ್ ಕೇಕುಡಾವುನಾಲ ಎಂಬುವುದಾಗಿ ಆವಾಚ್ಯ ಶಬ್ದಗಳಿಂದ ಬೈದು ನಿನ್ನನು ಕೊಲ್ಲದೇ ಬಿಡುವುದಿಲ್ಲ ಎಂಬುವುದಾಗಿ  ಬೆದರಿಕೆ ಹಾಕಿರುತ್ತಾರೆ ಪಿರ್ಯಾಧಿದಾರರು ಚಿಕಿತ್ಸೆಯ ಬಗ್ಗೆ ಮೂಡಬಿದ್ರಿ ಸರಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡಿರುತ್ತಾರೆ.

6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-01-2015 ರಂದು ಬೆಳಿಗ್ಗೆ 07-00 ಗಂಟೆ ಸಮಯ ರಾ.ಹೆ 66 ರ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಶಂಕರ ಎಂಬವರು ಸವಾರಿಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA- 20 EB- 9495 ರ ಬಲಭಾಗಕ್ಕೆ ಬಸ್ಸ ನಂಬ್ರ KA- 20 C- 3270 ನೇಯದನ್ನು ಅದರ ಚಾಲಕ ಗ್ಲಾಡಿಸನ್ ಎಂಬವರು ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಗಳು ಸೇರುವ ಸ್ಥಳ ಎಂಬುದನ್ನು ತಿಳಿದೂ ನಿರ್ಲಕ್ಷತನದಿಂದ ಚಲಾಯಿಸಿ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರರಾದ ಶಂಕರ ಎಂಬವರು ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಮೃತಪಟ್ಟಿರುವುದಾಗಿದೆ.

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಜೆಸನ್ ಡಿ'ಸೋಜಾ ರವರು ತಮ್ಮ  ಹೆಸರಿನಲ್ಲಿರುವ ಯಮಹಾ ಕಂಪೆನಿಯ ಎಫ್ಝೆಡ್‌‌ಎಸ್‌‌ ಕೆಎ 19 ಇಜೆ 8757 ನೇ ನಂಬ್ರದ ಮೋಟಾರು ಸೈಕಲ್‌‌‌ನ್ನು ದಿನಾಂಕ 11-01-2015 ರಂದು ರಾತ್ರಿ ಸಮಯ 8-30 ಮಂಗಳೂರು ತಾಲುಕು ಪೆರ್ಮನ್ನೂರು ಗ್ರಾಮದ ನಿತ್ಯಾಧರ ಆಂಗ್ಲ ಮಾಧ್ಯಮದ ಶಾಲೆಯ ಬಳಿ ನಿಲ್ಲಿಸಿ ಹೋದವರು ವಾಪಾಸು ರಾತ್ರಿ ಸುಮಾರು 10-30 ಗಂಟೆಗೆ ಬಂದು ನೋಡಿದಾಗ ಮೋಟಾರ್ಸೈಕಲ್ಕಾಣದೇ ಇದ್ದು ಅದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿದೆ. ಮೋಟಾರ್ಬೈಕ್ನಂಬರ್‌- ಕೆಎ 19 ಇಜೆ 8757, ಯಮಹಾ ಕಂಪೆನಿ ಮಾದರಿ-   ಎಫ್ಝೆಡ್‌‌ಎಸ್ಬಿಎಸ್‌ iii 09/2013, ಬಣ್ಣ- ಬ್ಯಾಟಲ್‌‌ ಗ್ರೀನ್‌‌ ಇಂಜಿನ್ನಂಬ್ರ – 21CJ008557, ಚಾಸಿಸ್‌‌ ನಂಬ್ರ- KA19H2173, ಮೌಲ್ಯ -48,000

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 16-1-2015 ರಂದು ರಾತ್ರಿ 11-55 ಗಂಟೆಯ ಹೊತ್ತಿಗೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ತೊಕ್ಕೊಟು ಭಟ್ನಗರ ಎಂಬಲ್ಲಿರುವ ನೇತಾಜಿ ಎ. ಎಲ್ಲಪ್ಪ ಮೆಮೋರಿಯಲ್ ಆಸ್ಪತ್ರೆಗೆ ವಾಹನ ಅಪಘಾತದ ಗಾಯಾಳು ಚಿಕಿತ್ಸೆಗೆ ಬಂದ 3 ರೋಗಿಗಳ ಪೈಕಿ ಒಬ್ಬರಿಗೆ ತೀವ್ರ ತರದ ಗಾಯವಾಗಿರುವುದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಫಿರ್ಯಾದಿದಾರರಾದ ಡಾ. ಸುಜಯ್ ಪ್ರಭಾಕರ್ ರವರು ತಿಳುವಳಿಕೆ ನೀಡಿದಾಗ ಅಲ್ಲಿ ಹಾಜರಿದ್ದ ಪ್ರೇಮ್ಎಂಬ ವ್ಯಕ್ತಿಯು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯಶಬ್ದಗಳಿಂದ ಬೈದು, ಆಸ್ಪತ್ರೆಯ ಎದುರಿನ ಗಾಜಿಗೆ ಕಾಲಿನಿಂದ ತುಳಿದು, ಕೈಯಿಂದ ಹೊಡೆದು ಗಾಜನ್ನು ತುಂಡು ಮಾಡಿ ಸುಮಾರು 20,000/- ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ.

9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-01-2015 ರಂದು 12.30 ಗಂಟೆಗೆ ಆರೋಪಿ ಶೇಕ್ ಮಹಮ್ಮದ್ ಇರ್ಫಾನ್ ಎಂಬಾತನು ಮಂಗಳೂರು ನಗರದ ಅಜೀಜುದ್ದೀನ್ ರಸ್ತೆಯ ಎಂ.ಎಸ್.ಪೈ ಶಾಪಿನ ಎದುರು ಸಾರ್ವಜನಿಕರ ರಸ್ತೆಯಲ್ಲಿ ಪಿಕ್ ಅಪ್ ವಾಹನ ನಂಬ್ರ ಕೆಎ 19ಸಿ 4032 ರನ್ನು ಕೈ ಸನ್ನೆ ಮಾಡಿ ನಿಲ್ಲಿಸಿ ಯಾವುದೋ ಉದ್ದೇಶದಿಂದ ಅದರಲ್ಲಿ ಚಾಲಕರಾಗಿದ್ದ ನವೀನ್ ಶೆಟ್ಟಿ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದು ರಸ್ತೆಯ ಬದಿಯಲ್ಲಿದ್ದ ಕಲ್ಲನ್ನು ಹೆಕ್ಕಿ ಪಿರ್ಯಾದಿದಾರರ ಬಲ ಕೈಗೆ ಮತ್ತು ಬಲ ಭಜಕ್ಕೆ ಹೊಡೆದು ನೋವುಂಟು ಮಾಡಿದ್ದು ಗಾಯಾಳು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.

No comments:

Post a Comment