ದೈನಂದಿನ ಅಪರಾದ ವರದಿ.
ದಿನಾಂಕ 26.01.2015 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
1
|
ರಸ್ತೆ ಅಪಘಾತ ಪ್ರಕರಣ
|
:
|
5
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
1
|
ಇತರ ಪ್ರಕರಣ
|
:
|
1
|
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಪ್ರಾಣೇಶ್ ರವರು ತಮ್ಮ ಧನಿಯವರಾದ ಪ್ರವೀಣ್ ಕುಮಾರ್ ಎಂಬವರ ಕಾರು ನಂಬ್ರ ಪಿ.ವೈ-01-ಬಿ.ಡಬ್ಲ್ಯು-9600 ನೇದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ: 25-01-2015 ರಂದು ಸದ್ರಿ ಕಾರನ್ನು ಮಂಗಳೂರು ನಗರದ ಬಳ್ಳಾಲ್ಬಾಗ್ನ ದಿ' ಲೋಕಯ್ಯ ಶೆಟ್ಟಿ ರಸ್ತೆಯಲ್ಲಿರುವ ಗುರ್ಜಿ ದೀಪೋತ್ಸವ ಕಟ್ಟಡದ ಎದುರಿಗೆ ಪಾರ್ಕ್ ಮಾಡಿದ್ದು, ಸಮಯ ರಾತ್ರಿ 9:30 ಗಂಟೆಗೆ ಬಳ್ಳಾಲ್‌ಬಾಗ್ ಕಡೆಯಿಂದ ಮಣ್ಣ ಗುಡ್ಡ ಕಡೆಗೆ ಆಟೋರಿಕ್ಷಾ ನಂಬ್ರ ಕೆ.ಎ-19-ಬಿ-4945 ನೇದನ್ನು ಅದರ ಚಾಲಕ ವಾಸು ಎಂಬವರು ವಿಪರೀತ ಅಮಲು ಪದಾರ್ಥ ಸೇವಿಸಿ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸದ್ರಿ ಕಾರಿನ ಎಡಬದಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನ ಮುಂದಿನ ಬಂಪರ್, ಬೋನೆಟ್, ಹೆಡ್‌ಲೈಟ್, ಗ್ಲೈಡರ್ ಮುಂತಾದ ಕಡೆಗಳಲ್ಲಿ ಜಖಂ ಉಂಟಾಗಿರುತ್ತದೆ.
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25-01-2015ರಂದು ಮದ್ಯಾಹ್ನ 2-15 ಗಂಟೆಗೆ ಕೆಎ-41- ಎ-705ನೇ ಟೆಂಪೋವನ್ನು ಅದರ ಚಾಲಕ ದಿಲೀಪ್ ಕುಮಾರ್ ಎಂಬಾತನು ಮೂಡಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಮಿಜಾರು ಎಂಬಲ್ಲಿ ಫಿರ್ಯಾದಿದಾರರಾದ ಶ್ರೀ ದಿನೇಶ್ ಪೂಜಾರಿ ರವರ ಮೋಟಾರ್ ಸೈಕಲನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಮಿಜಾರು ಕಡೆಯಿಂದ ಮೂಡಬಿದ್ರಿ ಕಡೆಗೆ ಬರುತ್ತಿದ್ದ ಕೆಎ-19-ಈಎಲ್-6776ನೇ ಸ್ಕೂಟರಿಗೆ ಢಿಕ್ಕಿ ಯನ್ನುಂ ಟು ಮಾಡಿದ ಪರಿಣಾಮ ಸ್ಕೂಟರಿನಲ್ಲಿದ್ದ ಸವಾರ ಉದಯ ಕುಮಾರನು ತಲೆಗೆ ಹಾಗೂ ಎದೆಗೆ ತೀವ್ರ ರೀತಿಯ ಗಾಯಗೊಂಡು ಮೃತ ಪಟ್ಟಿದ್ದು, ಸಹ ಸವಾರ ಕೇಶವ ಎಂಬಾತನು ಮುಖಕ್ಕೆ ಹಾಗೂ ತಲೆಗೆ ತೀವ್ರ ರೀತಿಯ ಗಾಯಗೊಂಡು ಆಳ್ವಾಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-01-2015 ರಂದು ಮಧ್ಯಾಹ್ನ 3:00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆಯ ರೆಂಜಾಡಿ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಹಮೀದ್ ಆರ್.ಬಿ. ರವರ ಬಾಬ್ತು ಮನೆಯಲ್ಲಿ ಬಾಡಿಗೆಗೆ ವಾಸವಿರುವ ಆರೋಪಿಗಳ ಪೈಕಿ ಇಂತಿಯಾಜ್, ರಿಯಾಜ್ ಮತ್ತು ಸಿರಾಜ್ರವರು ಪಿರ್ಯಾದಿದಾರರ ಹೆಂಡತಿಯ ಜೊತೆ ಕೆಟ್ಟದ್ದಾಗಿ ಅಸಭ್ಯವಾಗಿ ವರ್ತಿಸಿ, ಕೈ ಸನ್ನೆ ಮಾಡಿ, ಪಿರ್ಯಾದಿದಾರರು ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ, "ನಿನ್ನ ಕುಟುಂಬವನ್ನು ಕಡಿದು ಹಾಕುತ್ತೇನೆ" ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಪಿರ್ಯಾದಿದಾರರ ಮಗನಿಗೆ ದೊಣ್ಣೆಯಿಂದ ಹೊಡೆದು, ಪಿರ್ಯಾದಿದಾರರ ಕೈಯನ್ನು ಮುರಿದು ಮುಖ ಮತ್ತು ಎದೆಗೆ ತುಳಿದಿದ್ದು, ಈ ಸಮಯದಲ್ಲಿ ಅಲ್ಲಿಯೇ ಇದ್ದ ಉಳಿದ ಆರೋಪಿಗಳೂ ಕೂಡಾ ಪಿರ್ಯಾದಿದಾರರಿಗೆ, ಅವರ ಹೆಂಡತಿ ಮತ್ತು ಮಗನಿಗೆ ಹೊಡೆದಿದ್ದು, ಆರೋಪಿಗಳೆಲ್ಲರೂ ಅವ್ಯಾಚ್ಯ ಶಬ್ದಗಳಿಂದ ಬೈದು, "ಮನೆಗೆ ಬೆಂಕಿ ಹಾಕಿ ಸುಡುತ್ತೇವೆ" ಎಂದು ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ದಿನಾಂಕ 24-01-2015 ರಂದೂ ಕೂಡಾ ರಾತ್ರಿ 8:00 ಗಂಟೆ ವೇಳೆಗೆ ಆರೋಪಿಗಳೆಲ್ಲರೂ ಪುನಃ ಪಿರ್ಯಾದಿದಾರರ ಮನೆಗೆ ಬಂದು ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಪಿರ್ಯಾದಿದಾರರ ಕಾರಿಗೂ ಹೊಡೆದಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2015 ರಂದು ಸಂಜೆ 7:30 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ನಡುಪದವು ಪಿ ಎ ಕಾಲೇಜಿನ ಗೇಟಿನ ಬಳಿ ಇರುವ ಹಾಸ್ಟೆಲ್ ನ ಪಕ್ಕದಲ್ಲಿರುವ ರಸ್ತೆಯಲ್ಲಿ ಅಪ್ರಾಪ್ತ ಬಾಲಕಿ ತನ್ನ ದೊಡ್ಡಪ್ಪನ ಮಗಳ ಜೊತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಆಶಿಷ್ ಮತ್ತು ಮದು ಎಂಬವರುಗಳು ಮೊಟಾರು ಸೈಕಲ್ ನಂಬ್ರ KA 19 EL 5076ರಲ್ಲಿ ಬಂದು ಅಪ್ರಾಪ್ತ ಬಾಲಕಿಯನ್ನು ಮತ್ತು ಅವರ ಜೊತೆಯಲ್ಲಿದ್ದ ಅವರ ದೊಡ್ಡಪ್ಪನ ಮಗಳನ್ನು ತಡೆದು ನಿಲ್ಲಿಸಿ ಮೊಬೈಲ್ ನಂಬರ ಇರುವ ಚೀಟಿಯನ್ನು ನೀಡಿ ಫೋನ್ ಮಾಡುವಂತೆ ಒತ್ತಾಯಿಸಿದ್ದು, ಅಲ್ಲದೇ ಹತ್ತಿರಕ್ಕೆ ಕರೆದಿದ್ದು ಅಪ್ರಾಪ್ರ ಬಾಲಕಿಯನ್ನು ಮಾನಭಂಗ ಮಾಡಲು ಪ್ರಯತ್ನಿಸಿರುವುದಾಗಿದೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24.01.2015 ರಂದು ರಾತ್ರಿ ಸಮಯ ಸುಮಾರು 11 ಗಂಟೆಗೆ ಫಿರ್ಯಾದುದಾರರಾದ ಶ್ರೀ ಸಾವುಲ್ ರವರು ತಮ್ಮ ಕಂಪನಿಯ ಬಾಬ್ತು ಕಾರು ನಂಬ್ರ KL 55-P-1690 ರಲ್ಲಿ ಚಾಲಕರಾಗಿದ್ದುಕೊಂಡು ಹಂಪನಕಟ್ಟೆ ಕಡೆಯಿಂದ ಮಾರ್ನಮಿಕಟ್ಟೆ ಕಡೆಗೆ ಹೋಗುವರೇ ಅತ್ತಾವರ ಚಕ್ರಪಾಣಿ ದೇವಸ್ತಾನದ ಎದುರು ತಲುಪಿದಾಗ ಜೆಪ್ಪು ಕಡೆಯಿಂದ ನಿಶಾನ್ ಮೈಕ್ರಾ ಕಾರ್ ನಂಭ್ರ HR-02-AA-9886 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಾರಿನ ಬಲಭಾಗದ ಎದುರಿನ ಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಎದುರಿನ ಗ್ಲಾಸು ಮತ್ತು ಬಲಭಾಗದ ಹೆಡ್ ಲೈಟ್ ಮತ್ತು ಬಲಭಾಗದ ಬಾಗಿಲು ಜಖಂ ಆಗಿರುತ್ತದೆ.ಈ ಅಪಘಾತದಿಂದ ಫಿರ್ಯಾದುದಾರರಿಗೆ ಯಾವುದೇ ತರಹದ ಗಾಯಗಳಾಗಿರುವುದಿಲ್ಲ ಮತ್ತು ಅಪಘಾತ ಮಾಡಿದ ಕಾರಿನ ಚಾಲಕ ಅಪಘಾತ ಸ್ಥಳದಿಂದ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ.
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2015ರಂದು ಪಿರ್ಯಾಧಿದಾರರಾದ ಶ್ರೀ ಗೌರವ್ ಕುಮಾರ್ ರವರು ಅವರ ತಾಯಿ ವೇದಾವತಿ ಮತ್ತು ಪರಿಚಯದ ಶರಣಮ್ಮ ಎಂಬವರೊಂದಿಗೆ ತಡಂಬೈಲು ವೀರಭದ್ರ ದೇವಸ್ಥಾನಕ್ಕೆ ಹೋಗಿ ಮನೆ ಕಡೆಗೆ ಬರುತ್ತಾ ಎನ್.ಹೆಚ್-66ನ್ನು ಸೂರಜ್ ಹೋಟೆಲ್ ಬಳಿ ಪಶ್ಚಿಮದಿಂದ ಪೂರ್ವಕ್ಕೆ ದಾಟಿ ರಸ್ತೆ ವಿಭಾಜಕದ ಬಳಿ ನಿಂತಿದ್ದ ಸಮಯ ಸಂಜೆ 6:30 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ದ್ವಿ ಚಕ್ರ ವಾಹನ ಕೆಎ-19-ಇಜಿ 5762ನೇದನ್ನು ಅದರ ಸವಾರ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ತಾಯಿಗೆ ಮತ್ತು ಶರಣಮ್ಮರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾಧಿದಾರರ ತಾಯಿ ವೇದಾವತಿಯವರಿಗೆ ಹಣೆ, ಮುಖ, ಕೈಗೆ ಗಾಯವಾಗಿದ್ದು, ಶರಣಮ್ಮರವರಿಗೆ ಮುಖ, ಹಣೆ, ಕೈಗೆ ಗಾಯವಾಗಿದ್ದು, ಗಾಯಗೊಂಡ ಅವರುಗಳನ್ನು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಶಶಿಧರ ರವರ ಮಾವನಾದ ಶೀನ ಪ್ರಾಯ 37 ವರ್ಷ ಎಂಬವರನ್ನು ಕ್ಷಯ ರೋಗದ ಬಗ್ಗೆ ಚಿಕಿತ್ಸೆ ಪಡೆಯಲು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಿನಾಂಕ 20-01-2015 ರಂದು ದಾಖಲು ಮಾಡಿರುತ್ತಾರೆ. ದಿನಾಂಕ 23-01-2015 ರಂದು ಸುಮಾರು ಬೆಳಗ್ಗಿನ ಜಾವ 4-40 ಗಂಟೆಗೆ ಚಿಕಿತ್ಸೆಯಲ್ಲಿದ್ದ ಶೀನರವರು ಆಸ್ಪತ್ರೆಯ ವಾರ್ಡ್ ನಂಬ್ರ 25-28 ರಿಂದ ಯಾರಿಗೂ ಹೇಳದೇ ಕೇಳದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಂಗಳೂರು ನಗರ ಹಾಗೂ ಫಿರ್ಯಾದುದಾರರ ಸಂಬಂದಿಕರ ಮನೆಗಳಲ್ಲಿ ಹುಡುಕಾಡಿದಲ್ಲಿ ಈ ವರೆಗೆ ಪತ್ತೆಯಾಗಿರುವುದಿಲ್ಲ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಭಾಗ್ಯ ಅವರ ಗಂಡ ದಿನಾಂಕ: 24/25-01-2015 ರಂದು ರಾತ್ರಿ 2-00 ಗಂಟೆಗೆ ಮನೆಯಿಂದ ಹೇಳದೇ ಹೋದವರು ದಿನಾಂಕ 25/01/2015 ರಂದು ಮದ್ಯಾಹ್ನ 12-20 ಗಂಟೆಗೆ ಆತನ ಬಾಡಿಗೆ ಮನೆಗೆ ಬರುತ್ತಿರುವಾಗ ಸಂಜೀವ ಶೆಟ್ಟಿ ಹಾಲಿನ ಎದುರುಗಡೆ ಬಜಪೆ ಕಡೆಯಿಂದ ಕೈಕಂಬ ಕಡೆಗೆ ಹೋಗುತ್ತಿದ್ದ ಕೆ.ಎ 19 ಎ.ಡಿ 0036 ನೇ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಗಂಡ ಬಾಳಪ್ಪ ನೆಲಕ್ಕೆ ಬಿದ್ದು ತಲೆಗೆ, ಕೈ ಕಾಲಿಗೆ ಏಟಾಗಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-01-2015 ರಂದು ಸುಮಾರು 17.00 ಗಂಟೆಗೆ ದೊರೆತ ಖಚಿತ ಮಾಹಿತಿಯಂತೆ ಉಳ್ಳಾಲ ಪೊಲೀಸ್ ನಿರೀಕ್ಷಕರ ಆದೇಶದಂತೆ ಪಿಎಸ್ಐ ಭಾರತಿ ರವರು ಇಲಾಖಾ ವಾಹನ ಕೆಎ-19-ಜಿ-694 ನೇ ವಾಹನದಲ್ಲಿ ಠಾಣಾ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು, ಜಪ್ಪಿನ ಮೊಗರು ಗ್ರಾಮದ ಹೊಯಿಗೆ ತೆಗೆಯುವ ಸ್ಥಳದ ನದಿ ತೀರಕ್ಕೆ ತಲುಪಿ, ಸದ್ರಿ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ-ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದು, ಓಡಿ ಹೋಗುತ್ತಿದ್ದವರನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲಾಗಿ ಆರೋಪಿಗಳಾದ ಸಂಜಯ್ (28), ಅಬ್ದುಲ್ ಸಲೀಂ (42), ಬ್ರಹ್ಮಾನಂದ (29), ದಶರಥ(20) ಇವರುಗಳನ್ನು ವಶಕ್ಕೆ ತೆಗೆದುಕೊಂಡು, ಇವರುಗಳು ಸದ್ರಿ ಆಟಕ್ಕೆ ಬಳಸಿದ ಹಣ ರೂ. 3,500/- ಹಾಗೂ ಆಟ ಆಡಲು ಉಪಯೋಗಿಸಿದ ಇಸ್ಪೀಟ್ ಎಲೆಗಳು- 52 ಮತ್ತು ದಿನ ಪತ್ರಿಕೆ – 2 ವಶಕ್ಕೆ ತೆಗೆದುಕೊಂಡು ಸೊತ್ತು ಹಾಗೂ ಆರೋಪಿಗಳೊಂದಿಗೆ ವಶಕ್ಕೆ ಪಡೆದುಕೊಳ್ಳಲಾಗಿದೆ.
No comments:
Post a Comment