ದಿನಾಂಕ 14.01.2015 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
1
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
1
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
4
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-01-2015ರಂದು ಬೆಳಿಗ್ಗೆ 9-00 ಗಂಟೆಗೆ ಎಂದಿನಂತೆ ಪಿರ್ಯಾದುದಾರರಾದ ಶ್ರೀ ಮೆಲ್ರಾಯ್ ಸಾವಿಯೋ ಡಿ'ಸೋಜಾ ರವರು ತನ್ನ ಬಾಬ್ತು ಕೆ.ಎ.19ಎಕ್ಸ್8910 ನೀಲಿ ಬಣ್ಣದ ಬಜಾಜ್ ಪಲ್ಸರ್ ಮೋಟಾರು ಸೈಕಲ್‌ನ್ನು ಹ್ಯಾಂಡ್ ಲಾಕ್ ಹಾಕದೇ, ಮಂಗಳೂರು ಮಹಾ ನಗರ ಪಾಲಿಕೆಯ ಎದುರು ಇರುವ ದ್ವಿಚಕ್ರ ಪಾರ್ಕಿಂಗ್ ಸ್ಥಳದಲ್ಲಿ ಇಟ್ಟು ಕಾಲೇಜಿಗೆ ಹೋಗಿ ವಾಪಾಸ್ಸು ಅದೇ ದಿನ ರಾತ್ರಿ 9-00 ಗಂಟೆಗೆ ಬಂದು ನೋಡಲಾಗಿ, ಸದ್ರಿ ಪಾರ್ಕ್ ಮಾಢಿದ ಸ್ಥಳದಲ್ಲಿ ಇಟ್ಟಿದ್ದ ಪಿರ್ಯಾದುದಾರರ ಮೋಟಾರು ಸೈಕಲ್ನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿರುವುದಾಗಿದೆ. ಸದ್ರಿ ಮೋಟಾರು ಸೈಕಲ್‌ನ ಮೌಲ್ಯ ಅಂದಾಜು ರೂ. 30000/- ಆಗಿದೆ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-01-2015 ರಂದು 10:30 ಗಂಟೆಯಿಂದ 11:00 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರಾದ ಆಸ್ಟ್ರೇಲಿಯಾ ದೇಶಿಯರಾದ ಶ್ರೀ ನಥನ್ ಬೀಗ್ ರವರು ಮಂಗಳೂರು ನಗರದ ಲಾಲ್ ಬಾಗ್ ರಾಮಕೃಷ್ಣ ಹಾಸ್ಟೇಲ್ ಬಳಿಯಲ್ಲಿ ತನ್ನ ಬಾಬ್ತು ಬ್ಯಾಗ್ ನ್ನು ನೆಲದ ಮೇಲೆ ಇಟ್ಟು, ರೋಡ್ ಮ್ಯಾಪ್ ನ್ನು ನೋಡುತ್ತಿರುವಾಗ, ಆರೋಪಿ ಅಪರಿಚಿತ ವ್ಯಕ್ತಿ ಸಹಾಯಕ್ಕಾಗಿ ಬಂದಂತೆ ನಟಿಸಿ, ಪಿರ್ಯಾದಿದಾರರ ಬ್ಯಾಗ್ ನ್ನು ಕದ್ದು ಕೊಂಡು ಹೋಗಿರುವುದಾಗಿದೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.01.2015 ರಂದು 3.00 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀ ಶಾಂತಪ್ಪ ಪೂಜಾರಿ ರವರು ಓಮ್ನಿ ಕಾರು KA-21N-4323 ಕಾರಿನಲ್ಲಿ ಸಂಬಂಧಿಕರಾದ ಮಲ್ಲಿಕಾ, ಅವರ ಗಂಡ ರಮೇಶ್ , ದೂಮಪ್ಪ ಹಾಗೂ ಅವರ ಹೆಂಡತಿಯೊಂದಿಗೆ ಬೆಳುವಾಯಿಗೆ ಹೋಗಿ ವಾಪಾಸು ಬೆಳ್ತಂಗಡಿಗೆ ಹೋಗುತ್ತಿರುವ ಸಮಯ ಮಾರೂರು ಜುಮ್ಮಾ ಮಸೀದಿಯ ಕ್ರಾಸ್ ಬಳಿ ಕಾರಿನ ಚಾಲಕ ಹರೀಶ್ ಎಂಬವರು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿಮಗುಚಿ ಬಿದ್ದ ಪರಿಣಾಮ ಪಿರ್ಯಾದಿಯ ಬಲಭುಜದ ಮೇಲೆ ತರಚಿದ ಗಾಯ, ಮಲ್ಲಿಕಾರವರಿಗೆ ಮೂಗಿಗೆ ಮತ್ತು ತಲೆಯ ಬಲಬದಿಗೆ ರಕ್ತಗಾಯ, ರಮೇಶ್ ರವರಿಗೆ ಮೈಕೈಗೆ ಅಲ್ಲಲ್ಲಿ ತರಚಿದ ಗಾಯ, ದೂಮಪ್ಪ ರವರಿಗೆ ಕೈಗೆ ರಕ್ತಗಾಯ ಜಾನಕಿರವರ ಹಣೆಗೆ ರಕ್ತಗಾಯವಾಗಿರುತ್ತದೆ. ಅ್ಲಲದೆ ಕಾರು ಚಾಲಕ ಹರೀಶ್ ರವರಿಗೆ ಎಡಕಿವಿಗೆ ರಕ್ತಗಾಯ, ಬಲತೊಡೆ ಮತ್ತು ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಮತ್ತು ಅಲ್ಲಿಂದ ಬೆಳ್ತಂಗಡಿಯ ಲಾಯಿಲಾದಲ್ಲಿರುವ ಜ್ಯೋತಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-01-2014 ರಂದು ಮುಂಜಾನೆ 02-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ರೂಪ್ ನಾರಾಯಣ ರಾಮ್ ರವರು ಅವರ ಸಹೋದ್ಯೋಗಿ ದಿಶಂಬರ್ ಕುಮಾರ್ ಪ್ರಸಾದ್ ಎಂಬವರೊಂದಿಗೆ ಒ.ಎಂ.ಪಿ.ಎಲ್. ಯಾರ್ಡಿನಲ್ಲಿ ಯುನಿಕ್ ಪ್ರೈ .ಸೆಕ್ಯುರಿಟಿ ಸಂಸ್ಥೆಯ ಬಾಬ್ತು ಸೆಕ್ಯುರಿಟಿ ಕೆಲಸದಲ್ಲಿರುವಾಗ ಒಂದು ಬಿಳಿ ಬಣ್ಣದ ಕಾರಿನಲ್ಲಿ ಸುಮಾರು 7-8 ಜನರು ಅವರ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಬೆನ್ನಟ್ಟಿದಾಗ ಕಲ್ಲುಗಳು ಪಿರ್ಯಾದಿ ಕಾಲಿಗೆ ಹಾಗೂ ಸೊಂಟಕ್ಕೆ ತಾಗಿದ್ದು ಆ ಸಮಯ ಅವರು ಬೊಬ್ಬೆ ಹೊಡೆಯುವುದನ್ನು ಕೇಳಿ ಆರೋಪಿಗಳು ಪರಾರಿಯಾಗಿದ್ದು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.01.2015 ರಂದು ಬೆಳಿಗ್ಗೆ ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಯಾಸಿನ್ ರವರು ತನ್ನ ಮನೆಯಿಂದ ತನ್ನ ಬಾಬ್ತು KA-19-EM-5166 ಆಕ್ಟಿವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ತನ್ನ ತಮ್ಮ ಜವಾದ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಕಾಲೇಜಿಗೆ ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 09:00 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಕಾಯರ್ಗೋಳಿ ಕಡೆಯಿಂದ ಮಾರುತಿ ಓಮ್ನಿ ಕಾರ್ ನಂಬ್ರ KA-19-P 6595ನೇಯದನ್ನು ಅದರ ಚಾಲಕ ಉಮ್ಮರ್ ಕುಂಞಿ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲದವಡೆಗೆ ಗಾಯವಾಗಿದ್ದು ಒಂದು ಹಲ್ಲು ಉದುರಿ ಹೋಗಿದ್ದು, ಅಲ್ಲದೇ ಬಲಕೈಗೆ, ಬಲಕಾಲಿನ ಪಾದಕ್ಕೆ ಗುದ್ದಿದ ನೋವಾಗಿರುತ್ತದೆ. ಸಹಸವಾರ ಜವಾದ್ನಿಗೆ ತರಚಿದ ಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಸಹಸವಾರ ಜವಾದ್ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ.
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12.01.2015 ರಂದು ಸಂಜೆ 6:00 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಬಾಬು ಮೂಲ್ಯ ರವರು ಬಂಟ್ವಾಳ ತಾಲೂಕು, ಕೈರಂಗಳ ಗ್ರಾಮದ ಮೋಂಟುಗೋಳಿ ಸೈಟ್ ಎಂಬಲ್ಲಿಗೆ ನೀರು ಬಿಡುವರೇ ಬಂದಾಗ ಆರೋಪಿ ಶೇಖಬ್ಬ ಎಂಬಾತನು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ "ನಿನಗೆ ಸರಿಯಾಗಿ ನೀರು ಬಿಡಲು ಬರುವುದಿಲ್ಲವಾ?" ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಕೆನ್ನೆಗೆ ಹೊಡೆದುದಲ್ಲದೇ ಕೆಂಪುಕಲ್ಲಿನ ತುಂಡನ್ನು ತೆಗೆದು ಫಿರ್ಯಾದಿದಾರರ ಕಾಲಿಗೆ ಹಾಕಿದ್ದು, ಅಲ್ಲಿಗೆ ಇತರರು ಬಂದಾಗ ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಕೃತ್ಯಕ್ಕೆ ಕಾರಣವೇನೆಂದರೆ, ದಿನಾಂಕ 11.01.2015 ರಂದು ಫಿರ್ಯಾದಿದಾರರು ನೀರು ಬಿಡುವಾಗ ಆರೋಪಿಗೆ ನೀರು ಕಡಿಮೆಯಾಗಿದೆ ಎಂಬ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿದೆ.
7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-01-15 ರಂದು ಪಿರ್ಯಾದಿದಾರರಾದ ಶ್ರೀ ಶೈಲೇಶ್ ರವರು ಅವರ ಮಿತ್ರ ಸತೀಶ್ ರವರ ಮೋಟಾರು ಸೈಕಲ್ ನಂಬ್ರ ಕೆಎ 19 ಇಎಪ್ 8180 ನೇದರಲ್ಲಿ ಸವಾರರಾಗಿದ್ದುಕೊಂಡು ಸತೀಶ್ ರವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರಿನಲ್ಲಿ ಹೆಲ್ಮೆಟ್ ಖರೀದಿಸಿ ವಾಪಾಸು ಮನೆ ಕಡೆಗೆ ಎನ್ ಹೆಚ್ 66 ರಲ್ಲಿ ಬರುತ್ತಾ ಮದ್ಯಾಹ್ನ ಸುಮಾರು 2-45 ಗಂಟೆಗೆ ಹೊಸಬೆಟ್ಟು ಎಂಬಲ್ಲಿಗೆ ತಲುಪಿದಾಗ ನಜೀರ್ ಎಂಬವರು ಸುರತ್ಕಲ್ ಕಡೆಗೆ ಚಲಾಯಿಸುತ್ತಿದ್ದ ಕಾರು ನಂಬ್ರ ಕೆಎ 03 ಪಿ 2339 ನೇದನ್ನು ನಿರ್ಲಕ್ಷತನದಿಂದ ಯಾವುದೇ ಸೂಚನೆ ನೀಡದೆ ಮಾರ್ಗದ ಮದ್ಯದಲ್ಲಿ ಏಕಾಎಕಿ ನಿಲ್ಲಿಸಿದ ಪರಿಣಾಮ ಸಾಕಷ್ಟು ಅಂತರದಲ್ಲಿದ್ದ ಪಿರ್ಯಾಧಿದಾರರಿಗೆ ವಾಹನದ ಮೇಲಿನ ನಿಯಂತ್ರಣ ತಪ್ಪಿ ಬ್ರೇಕ್ ಹಾಕಿದರೂ ಮುಂದಕ್ಕೆ ಚಲಿಸಿ ಮೇಲ್ಕಾಣಿಸಿದ ಕಾರಿಗೆ ಡಿಕ್ಕಿಯಾಗಿ ಸವಾರರಿಬ್ಬರು ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗಾಲಿಗೆ ಮೂಳೆ ಮುರಿತದ ಗಾಯವಾಗಿ ಸಹಸವಾರ ಸತೀಶ್ ರವರಿಗೆ ಸಣ್ಣಪುಟ್ಟ ಗಾಯವಾಗಿ ಪಿರ್ಯಾದಿದಾರರು ಚಿಕತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-01-2015 ರಂದು ಪಿರ್ಯಾಧಿದಾರರಾದ ಶ್ರೀ ಶಿವ ಪ್ರಸಾದ್ ಆಚಾರ್ಯರವರು ಅವರ ಅತ್ತೆಯವರಾದ ಲಲಿತಾ ಭಟ್ ರವರರೊಂದಿಗೆ ಕುಳಾಯಿ ಬಳಿ ಎನ್.ಹೆಚ್-66ನ್ನು ಪೂರ್ವದಿಂದ ಪಶ್ಚಿಮದ ಕಡೆಗೆ ದಾಟಲು ನಿಂತಿದ್ದ ಸಮಯ ಸುಮಾರು 2 ಗಂಟೆಗೆ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆಎ-31-ಎಮ್-6300 ನಂಬ್ರದ ಕಾರನ್ನು ಅದರ ಚಾಲಕ ಅಬ್ದುಲ್ ಗಫೂರ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಬಲ ಬದಿ ನಿಂತಿದ್ದ ಲಲಿತಾ ಭಟ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರು ಮಣ್ಣು ರಸ್ತೆಗೆ ಬಿದ್ದು, ಅವರ ಎಡ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಅವರಿಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅನುಕೂಲ ದೃಷ್ಟಿಯಿಂದ ಹೆಚ್ಚಿನ ಚಿಕಿತ್ಸೆಗೆ ಉಡುಪಿಯಲ್ಲಿ ಮಿತ್ರ ಆಸ್ಪತ್ರೆಗೆ ದಾಖಲಿಸಲು ಕಳುಹಿಸಿರುವುದಾಗಿದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಅನಾದಿಕಾಲದಿಂದ ಮೇರ್ಲಪದವು ಬಸ್ಸು ತಂಗುದಾಣದ ಎದುರಿರುವ ರಸ್ತೆಗೆ ತಾಲುಕೂ ಪಂಚಾಯತ್ ಅನುದಾನದಿಂದ ಮೋರಿ ಹಾಗೂ ದುರಸ್ತಿ ಕಾರ್ಯವನ್ನು ಮಾಡಲಾಗಿದ್ದು ಆದರೆ ಅಪಾದಿತರಾದ ಶ್ರೀಮತಿ ಎಂಜಲಿನಾ ಹೆಸಿಂತಾ ಕ್ರಾಸ್ತಾ ಮತ್ತು ಇತರರು ಸದ್ರಿ ಸಾರ್ವಜನಿಕ ರಸ್ತೆಯ ಮಧ್ಯೆ ಭಾಗದಲ್ಲಿ ಕಣಿ ತಗೆದು ಸಾರ್ವಜನಿಕ ಸಂಚಾರಕ್ಕೆ ಅಕ್ರಮ ತಡೆ ಮಾಡಿರುತ್ತಾರಲ್ಲದೇ ಸಾರ್ವಜನಿಕ ರಸ್ತೆಯನ್ನು ಹಾಳುಗೆಡವಿ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುತ್ತಾರೆ ಎಂಬುದಾಗಿ ಮಂಗಳೂರು ನೀರುಮಾರ್ಗ, ಪಂಚಾಯತ್ ಪಿಡಿಒ ರವರಾದ ಶ್ರೀ ಲಿಂಗಪ್ಪ ರವರು ದೂರು ನೀಡಿರುವುದಾಗಿದೆ.
No comments:
Post a Comment