ದಿನಾಂಕ 12.01.2015 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 2 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10.01.2015 ರಂದು ಬೆಳಿಗ್ಗೆ ಸುಮಾರು 7 ಗಂಟೆ ಸಮಯಕ್ಕೆ ಪಿರ್ಯಾದಿದಾರಾದ ಶ್ರೀಮತಿ ಮಾರ್ಗರೇಟ್ ಪಿಂಟೋರವರು ತನ್ನ ಬಾಬ್ತು ಮಂಗಳೂರು ನಗರದ ಬಿಜೈ ಆನೆಗುಂಡಿ 2 ನೇ ಕ್ರಾಸ್ನಲ್ಲಿರುವ ಮನೆಯ ಹೊರಗಿನ ಗೇಟಿನ ಬೀಗ ತೆಗೆಯುವಾಗ ಪಿರ್ಯಾದಿದಾರರ ಪರಿಚಿತರಾದ ಉಮೇಶ ಮತ್ತು ನವೀನ ಎಂಬವರು ಪಿರ್ಯಾದಿಯನ್ನುದ್ದೇಶಿಸಿ "ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ, ನಿಮ್ಮ ಕೈಕಾಲು ಮುರಿಯುತ್ತೇನೆ" ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿದ್ದಲ್ಲದೆ ಪಿರ್ಯಾದಿದಾರರ ತಲೆಗೆ ನವೀನ ಎಂಬಾತನು ಬೆತ್ತದಿಂದ ಹೊಡೆದಿದ್ದು, ಪಿರ್ಯಾದಿದಾರರು ಹೆದರಿ ಒಳಗೆ ಹೋಗಿ ಮನೆಯ ಬಾಗಿಲ ಚಿಲಕ ಹಾಕಿದಾಗ ಆರೋಪಿಗಳು ಮನೆಯ ಹೊರಗಿನಿಂದ ಕಿಟಕಿ ಬಾಗಿಲುಗಳಿಗೆ ಕಲ್ಲು ಹೊಡೆದ ಪರಿಣಾಮ ಕಿಟಕಿ ಗಾಜುಗಳು ಒಡೆದು ಹೋಗಿ ಕಿಟಕಿಗಳಿಗೆ ಹಾನಿಯಾಗಿರುತ್ತದೆ, ಇದರಿಂದ ಪಿರ್ಯಾದಿದಾರರಿಗೆ ಸುಮಾರು ರೂ. 10,000/- ನಷ್ಟ ಉಂಟಾಗಿರುತ್ತದೆ.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11.01.2015ರಂದು ಸಂಜೆ ಸುಮಾರು 4.30 ಗಂಟೆಯ ವೇಳೆಗೆ ಪಿರ್ಯಾಧಿದಾರರಾದ ಶ್ರೀಮತಿ ರಾಜೀವಿ ಪೂಜಾರಿ ಪ್ರಾಯ 60 ವರ್ಷ ಎಂಬವರು ತನ್ನ ಸಂಬಂಧಿ ಸುಜಾತ ಎಂಬವರ ಜೊತೆ ಶಿಮಂತೂರು ಹಾಲಿನ ಸೊಸೈಟಿಗೆ ಹಾಲು ಕೊಟ್ಟು ಪುನಃ ಮನೆಯ ಕಡೆಗೆ ಹೋಗುತ್ತಾ ಶಿಮಂತೂರು ಗ್ರಾಮದ ಕುಬೆವೂರು ರಾಯರ ಮನೆ ಎಂಬಲ್ಲಿ ತಲುಪುವಾಗ್ಗೆ ಒಂದು ಕಪ್ಪು ಬಣ್ಣದ ಮೋಟಾರ್ ಸೈಕಲಿನಲ್ಲಿ ಬಂದ ಪ್ರಾಯ ಸುಮಾರು 30 ರಿಂದ 35 ವರ್ಷದ ಹೆಲ್ಮೆಟ್ ಧರಿಸಿದ್ದ ಒಬ್ಬ ಯುವಕನು ಪಿರ್ಯಾಧಿದಾರರ ಹಿಂದಿನಿಂದ ಬಂದು ಪಿರ್ಯಾಧಿದಾರರ ಕುತ್ತಿಗೆಯಲ್ಲಿದ್ದ ಸುಮಾರು 4 ಪವನು ತೂಕದ ರೂಪಾಯಿ 80,000/- ಮೌಲ್ಯದ ಬಂಗಾರದ ರೋಪ್ ಡಿಸೈನ್ ನ ಸರವನ್ನು ಎಳೆದುಕೊಂಡು ಹೋಗಿರುವುದಾಗಿದೆ.
3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-01-2015 ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನ ನಂಬ್ರ ಕೆಎ 19 ಜಿ 628 ನೇದಲ್ಲಿ ಪಿರ್ಯಾದಿದಾರರಾದ ಶ್ರೀ ನರಸಿಂಹಮೂರ್ತಿ ಪಿ. ಪೊಲೀಸ್ ನಿರೀಕ್ಷಕರು ಬಜ್ಪೆ ಪೊಲೀಸ್ ಠಾಣೆ ರವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೊಗರು ಗ್ರಾಮದ ನಾರ್ಲಪದವು ಎಂಬಲ್ಲಿ ರೂಪೇಶ ಎಂಬವರು ಮನೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಉಳಾಯಿ-ಪಿದಾಯಿ ಎಂಬ ಅದೃಷ್ಠದ ಜುಗಾರಿ ಆಟ ಆಡುತ್ತಿರುವುದಾಗಿ ದೊರೆತ ಮಾಹಿತಿಯಂತೆ ಅಲ್ಲಿಗೆ ಸುಮಾರು 19-00 ಗಂಟೆಗೆ ತಲುಪಿದಾಗ 10-15 ಜನ ನೆಲದ ಮೇಲೆ ಟಪಾಲು ಹಾಸಿ ಅದರಲ್ಲಿ ವೃತ್ತಾಕಾರವಾಗಿ ಮದ್ಯದಲ್ಲಿ ಕ್ಯಾಂಡಲೊಂದನ್ನು ಹಚ್ಚಿ ಕುಳಿತು ಕೊಂಡಿದ್ದವರ ಪೈಕಿ ಓರ್ವ ವ್ಯಕ್ತಿ ಕೈಯಲ್ಲಿ ಇಸ್ಪೀಟು ಎಲೆಗಳನ್ನು ಹಿಡಿದುಕೊಂಡು ಒಂದೊಂದಾಗಿ ಎಸೆಯುತ್ತಾ ಒಮ್ಮೆ ಉಳಾಯಿ ಮತ್ತೋಮ್ಮೆ ಪಿದಾಯಿ ಎಂಬಂತೆ ಎಸೆಯುತ್ತಿದ್ದು ಆತನ ಸುತ್ತ ಕುಳಿತವರು ಉಳಾಯಿ 100 ಪಿದಾಯಿ 100 ಎಂಬಂತೆ ಹಣವನ್ನು ಪಣವಾಗಿ ಎಸೆಯುವುದನ್ನು ಕಂಡು ಅವರನ್ನು ಸುತ್ತುವರೆದಾಗ ಗುಂಪಿನಲ್ಲಿದ್ದವರು ಎದ್ದು ಓಡಿ ಹೋಗಿದ್ದು, 4 ಜನರು ಸಿಕ್ಕಿದ್ದು ಆತನ ಹೆಸರು ಕೇಳಲಾಗಿ 1) ವಿಲಿಯಂ ರೂಪೇಶ 2) ದಿನೇಶ್ 3) ಪ್ರವೀಣ ಡಿಸೋಜಾ 4) ಕುಮಾರ್ ಪೂಜಾರಿ ಎಂಬುದಾಗಿ ತಿಳಿಸಿದ್ದು ಇವರಲ್ಲಿ ಓಡಿ ಹೋದವರ ಹೆಸರು ವಿಳಾಸ ವಿಚಾರಿಸಿದಾಗ 1)ಶರೀಫ @ ದುನಿಯ ಮುಲ್ಲರ ಪಟ್ಣ 2) ದೇವು @ ಅಣ್ಣು ಗಂಜೀಮಠ, 3) ಪ್ರಭು 4)ಅಶೋಕ ಕೈಕಂಬ, 5) ಯೋಗೀಶ ಕೈಕಂಬ. 5) ಪಕ್ಕು @ ಪ್ರಕಾಶ ಎಂಬುದಾಗಿ ತಿಳಿಸಿದ್ದು ಪ್ರಭು ಎಂಬಾತನು ನಡೆಸುತ್ತಿದ್ದು ಆತನೇ ಇಸ್ಪೀಟು ಎಲೆ ಎಸೆಯುತ್ತಿರುವುದಾಗಿ ತಿಳಿಸಿದ್ದು ಓಡಿ ಹೋದವರ ತಲಾಶೆ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಬೇಕಾದ್ದರಿಂದ ದೂರನ್ನು ಠಾಣೆಗೆ ರವಾನಿಸಿರುವುದಾಗಿದೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಶರತ್ಚಂದ್ರ ಶೆಟ್ಟಿ ಎಂಬವರ ಬಾಬ್ತು Firefox Cyclone 26 ಸೈಕಲನ್ನು ಯಾರೋ ಕಳ್ಳರು ದಿನಾಂಕ: 07-01-15 ರ ಬೆಳಿಗ್ಗೆ 8-30 ಗಂಟೆಯಿಂದ ದಿನಾಂಕ: 09-01-15 ರಂದು ಬೆಳಿಗ್ಗೆ 11-00 ಗಂಟೆಯ ಮಧ್ಯದ ಅವಧಿಯಲ್ಲಿ ಅವರ ಮನೆಯ ಸೈಕಲ್ ನಿಲ್ಲಿಸಿದ ಸ್ಥಳದಿಂದ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೈಕಲ್ ನ ಅಂದಾಜು ಮೌಲ್ಯ ಸುಮಾರು 13,990/- ರೂಪಾಯಿ ಆಗಬಹುದು.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-01-2015 ರಂದು ಪಿರ್ಯಾದಿದಾರರಾದ ಶ್ರೀ ಸಾಜೀದ್ ರವರು ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ.ಎ 19.ಇ.ಎನ್. 0998 ನೇದನ್ನು ಅಪರಾಹ್ನ 12-30 ಗಂಟೆ ಸಮಯಕ್ಕೆ ಅವರ ಮನೆಯ ಮುಂದುಗಡೆಯ ರಸ್ತೆಯಲ್ಲಿ ನಿಲ್ಲಿಸಿ ಲಾಕ್ ಮಡಿ ಊಟಕ್ಕೆಂದು ಮನೆಯೊಳಗಡೆ ಹೋಗಿ ಊಟ ಮುಗಿಸಿ ವಾಪಾಸು 12-45 ಗಂಟೆ ಸಮಯಕ್ಕೆ ಮೋಟಾರು ಸೈಕಲ್ ಇರುವ ಸ್ಥಳಕ್ಕೆ ಬಂದು ನೋಡಿದಾದ ಮೋಟಾರು ಸೈಕಲ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು ಈ ಬಗ್ಗೆ ಎಲ್ಲಾ ಕಡೆ ಹುಡುಕಿದರೂ ಪತ್ತೆ ಯಾಗದೇ ಇದ್ದುಪತ್ತೆ ಮಾಡಿಕೊಡುವರೇ ವಿಳಂಭವಾಗಿ ದೂರು ನೀಡಿರುವುದಾಗಿದೆ.
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.01.2015 ರಂದು ಫಿರ್ಯಾದಿದಾರರಾದ ಶ್ರೀಮತಿ ಮೀನಾಕ್ಷಿ ರವರು ಮಂಗಳೂರು ತಾಲೂಕು, ಬೆಳ್ಮ ಗ್ರಾಮ ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನಕ್ಕೆ ಪೂಜೆಯ ಬಗ್ಗೆ ಹೋಗಿದ್ದು, ಬಳಿಕ ವಾಪಾಸು ಮನೆಗೆ ಹೋಗುವರೇ ತಮ್ಮ ಮಗಳೊಂದಿಗೆ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಮದ್ಯಾಹ್ನ ಸುಮಾರು 1:45 ಗಂಟೆಗೆ ಕುತ್ತಾರು ಕಡೆಯಿಂದ ದೇರಳಕಟ್ಟೆ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎ-19ಇಎ-6644 ನೇಯದನ್ನು ಅದರ ಸವಾರ ಅಬ್ದುಲ್ ಅಜೀಜ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ನೆಲಕ್ಕೆ ಬಿದ್ದು ಅವರ ತಲೆಗೆ ರಕ್ತಗಾಯವಾಗಿದ್ದು, ಗಾಯಾಳು ಫಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ.
7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.01.2015 ರಂದು ಸಮಯ ಸುಮಾರು ಸಂಜೆ 7.00 ಗಂಟೆಗೆ ಬೈಕೊಂದನ್ನು ಅದರ ಸವಾರ ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ ಬಾಲಯೇಸು ಚರ್ಚಿನ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಾಲಯೇಸು ಚರ್ಚಿನ ಎದುರುಗಡೆ ಇರುವ ಮಹಾದ್ವಾರದ ಬಳಿ ರಸ್ತೆ ದಾಟುತ್ತಿದ್ದ ಪಿರ್ಯಾದುದಾರರಾದ ಶ್ರೀ ವಿನ್ಸೆಂಟ್ ಡಿ'ಸೋಜಾ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ಎಡಕೈಗೆ ಗಂಭೀರ ಸ್ವರೋಪದ ಮೂಳೆ ಮುರಿತದ ಗುದ್ದಿದ ನೋವು, ಎಡಕೋಲು ಕಾಲಿಗೆ ಅಂದರೆ ಮೊಣಗಂಟಿನ ಸ್ವಲ್ಪ ಮೇಲೆ ಮೂಳೆ ಮುರಿತದ ರಕ್ತಗಾಯ, ಹಾಗೂ ಎಡಕಾಲಿನ ಮೊಣಗಂಟಿಗೆ ಗುದ್ದಿದ ನೋವು ಮತ್ತು ಎಡಕಣ್ಣಿನ ಮೇಲ್ಭಾಗದಲ್ಲಿ ಹಾಗೂ ಮುಖದಲ್ಲಿ ರಕ್ತಗಾಯವುಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕೆತ್ಸೆಯಲ್ಲಿರುತ್ತಾರೆ.
8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-01-2015 ರಂದು ಬೆಳಿಗ್ಗೆ 11-15 ಗಂಟೆಯ ಸಮಯಕ್ಕೆ ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಮಿಲಾಗ್ರಿಸ್ ಚರ್ಚ್ ನಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಜೂಲಿಯಟ್ ಫರ್ನಾಂಡಿಸ್ ರವರ ತಮ್ಮ ಪ್ರವೀಣ್ ಫೆರ್ನಾಂಡಿಸ್ ಎಂಬವರ ಮದುವೆಯ ಕಾರ್ಯಕ್ರಮ ನಡೆಯುತ್ತಿದ್ದು, ಮದುಮಗಳು ಕುಮಾರಿ ಆಶಾ ಎಂಬಾಕೆಯ ಚಿನ್ನಾಭರಣಗಳನ್ನು ಪಿರ್ಯಾದಿದಾರರು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಹಿಡಿದುಕೊಂಡಿದ್ದವರು, ತಾನು ಕುಳಿತ್ತಿದ್ದ ಜಾಗದಲ್ಲಿ ಚಿನ್ನಾಭರಣಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಇಟ್ಟು ಮದುಮಕ್ಕಳನ್ನು ಹರಸಲೆಂದು ಹೋಗಿ ವಾಪಾಸು ಕುಳಿತ್ತಲ್ಲಿಗೆ ಬಂದು ನೋಡಿದಾಗ, ಚಿನ್ನಾಭರಣಗಳು ಇದ್ದ ಪ್ಲಾಸ್ಟಿಕ್ ಚೀಲವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ, ಕಳವಾದ ಚಿನ್ನಾಭರಣಗಳು ಸುಮಾರು ಹನ್ನೊಂದುವರೆ ಪವನು ತೂಕ ಇದ್ದು, ಅಂದಾಜು ಮೌಲ್ಯ ರೂಪಾಯಿ 1,90,000/- ಆಗಬಹುದು.
9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-01-2015 ರಂದು ಫಿರ್ಯಾದಿದಾರರಾದ ಶ್ರೀ ಸಚಿನ್ ದೇವಾಡಿಗ ರವರು ತನ್ನ ಸ್ನೇಹಿತರಾದ ರೂಬನ್ ಮತ್ತು ಅವಿನಾಶ್ ದೇವಾಡಿಗರೊಂದಿಗೆ ಮಂಗಳೂರು ನಗರದಲ್ಲಿ ಸುತ್ತಾಡಿ ರಾತ್ರಿ ಸುಮಾರು 11:30 ಗಂಟೆಗೆ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದಲ್ಲಿರುವ ನಂದಿನಿ ಮಿಲ್ಕ್ ಪಾರ್ಲರ್ ಹಿಂಬದಿಯಲ್ಲಿರುವ ಆಮ್ಲೆಟ್ ಅಂಗಡಿಗೆ ಹೋಗಿ ಆಮ್ಲೆಟ್ ಆರ್ಡರ್ ಮಾಡಿದ್ದು, ಆಮ್ಲೆಟ್ ತಯಾರಿಸಿ ನೀಡಲು ತಡವಾದಾಗ ಸಪ್ಲೈಯರ್ ನಲ್ಲಿ ಬೇಗ ಕೊಡುವಂತೆ ಕೇಳಿಕೊಂಡಾಗ ಸಫ್ಲೈಯರ್ ನಿಮಗಿಗ ಮೊದಲು ಬಂದ ಗಿರಾಕಿಗಳಿಗೆ ಕೊಟ್ಟ ನಂತರ ಕೊಡುತ್ತೇವೆ ಎಂದು ಹೇಳಿದಾಗ ಫಿರ್ಯಾದಿದಾರರಿಗೂ ಸಪ್ಲೈಯರ್ ಆಗಿರುವ ಪ್ರದೀಪ್ ಮತ್ತು ಸಂತೋಷ್ ಪೂಜಾರಿಯವರಿಗೂ ಮಾತಿಗೆ ಮಾತು ಬೆಳೆದು ಪ್ರದೀಪನು ಆಮ್ಲೆಟ್ ಮಾಡುವ ತಾವದಲ್ಲಿ ಫಿರ್ಯಾದಿದಾರರ ತಲೆಗೆ ಹೊಡೆದಿದ್ದು, ಸಂತೋಷ್ ಪೂಜಾರಿಯವರು ಮುಖಕ್ಕೆ ಬೆನ್ನಿಗೆ ಹೊಡೆದಿರುತ್ತಾರೆ. ತಲೆಗೆ ರಕ್ತ ಗಾಯವಾಗಿರುತ್ತದೆ. ನಂತರ ಅಲ್ಲಿದ್ದ ಸ್ನೇಹಿತರು ಹಾಗೂ ಇತರರು ಫಿರ್ಯಾದಿದಾರರನ್ನು ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
No comments:
Post a Comment