Wednesday, January 28, 2015

Daily Crime Reports : 25-01-2015

ದೈನಂದಿನ ಅಪರಾದ ವರದಿ.

ದಿನಾಂಕ 25.01.201510:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 23.01.2015 ರಂದು ಪಿರ್ಯಾದಿದಾರರಾದ ಶ್ರೀ ಲೋಕೇಶ್ ರವರ ಬಾವ ಸುನೀಲ್ ಪ್ರಾಯ 21 ವರ್ಷ ಎಂಬವರು ಕೋಡಿಕಲ್ ಮಂಜಪ್ಪ ಉಳ್ಳಾಲ ಕಂಪೌಂಡ್ ರಸ್ತೆಯಿಂದ ಕೋಡಿಕಲ್ ಕಡೆಗೆ ಹೋಗುವರೇ ಮೋಟಾರು ಸೈಕಲ್ ನಂಬ್ರ ಕೆಎ.19.ಈಜೆ.1625ನೇದರಲ್ಲಿ ಸಹವಾರರಾಗಿ  ಕುಳಿತುಕೊಂಡು ಹೋಗುತ್ತಾ ಮೋಟಾರು ಸೈಕಲ್ ಸವಾರ ಸುಧಾಕರ್ ರವರು ಮೋಟಾರು ಸೈಕಲನ್ನು ಕೋಡಿಕಲ್ ಮಂಜಪ್ಪ ಉಳ್ಳಾಲ ಕಂಪೌಂಡ್ ರಸ್ತೆಯಿಂದ ಕೋಡಿಕಲ್ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರು ಕತೆಯಿಂದ ಚಲಾಯಿಸಿ  ಜಿ ಎಸ್ ಬಿ ಕಾಲೋನಿ  ಬಳಿ ತಲುಪಿದ ಸಮಯ ರಾತ್ರಿ 19.30 ಗಂಟೆಗೆ  ಮೋಟಾರು ಸೈಕಲಿನ ಹತೋಟಿ ತಪ್ಪಿ  ರಸ್ತೆಗೆ ಬಿದ್ದ ಪರಿಣಾಮ ಸಹಸವಾರ ಸುನೀಲ್ ರವರು ಗಂಭೀರ ಸ್ವರೂಪದ ಗಾಯಗೊಂಡು ನಗರದ ಎ ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

 

2ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2015 ರಂದು  ಪಿರ್ಯಾದಿದಾರರಾದ ಶ್ರೀಮತಿ ವೀಣಾ ಟಿ. ರವರು ಅವರ ಮಗ ಪ್ರಮೋದ ಶಂಕರನ ಹಲ್ಲಿನ ಚಿಕಿತ್ಸೆಯ ಬಗ್ಗೆ ಲಾಲ್ಬಾಗ್ಗೆ ತೆರಳಲು ಪ್ರಮೋದನೊಂದಿಗೆ ಕೋಡಿಕಲ್ 5ನೇ ಕ್ರಾಸ್ ಬಳಿಯ ಬಸ್ಸ್ಟಾಪ್ನ ಅಂಗಡಿ ಜಗಲಿಯ ಬಳಿ ಇತರ ಪ್ರಯಾಣಿಕರೊಂದಿಗೆ ನಿಂತಿದ್ದ ವೇಳೆ ಸಮಯ ಸಂಜೆ ಸುಮಾರು 5:00 ಗಂಟೆಗೆ ಕೋಡಿಕಲ್ ಕ್ರಾಸ್ಕಡೆಯಿಂದ ಟೆಂಪೋ ನಂಬ್ರ ಕೆ.-19-ಸಿ-5222 ನೇದನ್ನು ಅದರ ಚಾಲಕ ದಯಾನಂದ ಎಂಬವರು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ಇದ್ದ  ಅವರ ಮಗ ಪ್ರಮೋದ್ಶಂಕರನಿಗೆ ಮತ್ತು ಬಸ್ಗೆ ಕಾಯುತ್ತಿದ್ದ ನಳಿನಿ ಎಂಬ ಮಹಿಳೆಗೂ ಡಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರ ಮಗ ಹಾಗೂ ನಳಿನಿಯವರು ಅಲ್ಲಿಯೇ ಬಿದ್ದು, ಪಿರ್ಯಾದಿದಾರರ ಮಗನ ಎಡಕಾಲಿನ ಮೊಣಗಂಟಿನ ಕೆಳಗೆ ಆಳವಾದ ರಕ್ತ ಗಾಯ ಮತ್ತು ಬಲಕೈ ಮೊಣಗಂಟಿಗೆ ತರಚಿದ ಗಾಯ ಹಾಗೂ ನಳಿನಿಯವರ ಸೊಂಟದ ಕೆಳಗೆ ಮತ್ತು ಕಾಲುಗಳಿಗೆ ತೀವ್ರ ತರಹದ ಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ.

 

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಿ. ಶೇಕುಂಜಾ ರವರ ಪಿಕ್ ಅಪ್ ವಾಹನ ನಂಬ್ರ KA 15 2178 ನೇದನ್ನು ಅದರ  ಚಾಲಕ ಅಬ್ದುಲ್ ಇಫ್ತಾರ್ ಎಂಬವರು ಚೊಕ್ಕೆಬೆಟ್ಟು 8ನೇ ಬ್ಲಾಕಿನ  ಅವರ ಮನೆಯ ಮುಂದುಗಡೆ ದಿನಾಂಕ 05-12-2014 ರಂದು ರಾತ್ರಿ 10-00 ಗಂಟೆಗೆ ನಿಲ್ಲಿಸಿ ದಿನಾಂಕ 06-12-2014 ರಂದು ಬೆಳಿಗ್ಗೆ 06-00 ಗಂಟೆಗೆ ನೋಡುವಾಗ ವಾಹನ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು , ಈ ಬಗ್ಗೆ ಕಾಣೆಯಾದ ವಾಹನವನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು ಸದ್ರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-01-2015 ರಂದು ಸಮಯ ಸುಮಾರು ಸಂಚೆ  6-30 ಗಂಟೆಗೆ ಪಿರ್ಯಾದುದಾರರಾದ ಎಸ್. ಲೂವಿಸ್ ಸೆರಾವೋ ರವರು  ಕೆಲಸ ಮುಗಿಸಿ ಮನೆಯಾದ ಕೋಡಿಕಲ್ ಕಡೆಗೆ ಹೋಗುವರೇ ಶಿವಭಾಗ ಬಸ್ಸು ನಿಲ್ದಾಣ ಬಳಿ ಬಸ್ಸಿಗಾಗಿ  ನಿಂತುಕೊಂಡಿರುವಾಗ ರೂಟ ನಂಬ್ರ 15  ಬಸ್ಸುನಂಬ್ರ KA19-AB-03 ನೇ ಬಸ್ಸು ಬಂದು ನಿಂತ್ತಿದ್ದು  ಸದ್ರಿ ಬಸ್ಸಿಗೆ ಹತ್ತುತ್ತಿರುವಾಗ  ಒಂದುಕಾಲನ್ನು ಬಸ್ಸಿನ ಮೆಟ್ಟಲಿಗೆ ಇಡುವಷ್ಟರಲ್ಲಿ ಬಸ್ಸು ಚಾಲಕ ಬಸ್ಸಿನ ನಿರ್ವಾಹಕನ ಸೂಚನೆಗೆ ಕಾಯದೇ ಒಮ್ಮಲೇ ದುಡುಕುತನದಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ  ಪಿರ್ಯಾದುದಾರರು ಬಸ್ಸಿನಿಂದ ಜಾರಿ ಡಾಂಬರ ರಸ್ತೆಗೆ ಬಿದ್ದು ತೆಲೆಯ ಹಿಂಭಾಗಕ್ಕೆ ರಕ್ತಗಾಯ, ಬೆನ್ನಿಗೆ ಹಾಗೂ ಕೈ ಕಾಲುಗಳಿಗೆ ಗುದ್ದಿದಂತಹ ನೋವು ಉಂಟಾಗಿ ಸಿ ಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.

 

5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2015 ರಂದು ಸಂಜೆ 7-30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಎಂ. ಶಕೂರ್ ರವರ ಮಗನಾದ ಶಾನವಾಜ್ ಎಂಬವರು ಮನೆಯಿಂದ ತನ್ನ ಬಾಬ್ತು ಗೋಲ್ಡನ್ ಬಣ್ಣದ ಹೊಂಡಾ ಸಿಟಿ ಕಾರು ನಂಬ್ರ MH 04 FA 7268 ನೇದರಲ್ಲಿ ಫಿರ್ಯದುದಾರರ ಹೆಂಡತಿ ಉಮೈ ಬಾನು ರವರಲ್ಲಿ ತಾನು ಹಾಸನದಲ್ಲಿರುವ  ತನ್ನ ಗೆಳೆಯನೊಂದಿಗೆ ಕೋಳಿ ವ್ಯಾಪಾರ ಮಾಡಲು ಹೋಗುವುದಾಗಿ ಹೇಳಿ ಹೋಗಿರುತ್ತಾನೆ. ದಿನಾಂಕ 17-01-2015 ರಂದು ರಾತ್ರಿ ಸುಮಾರು 10-00 ಗಂಟೆಗೆ ಆತನ ಮೊಬೈಲ್ ಗೆ ಕರೆ ಮಾಡಿದ್ದು ತಾನು ಹಾಸನಲ್ಲಿದ್ದು, 2 ದಿನದಲ್ಲಿ ಮನೆಗೆ ಬರುತ್ತೇನೆಂದು ತಿಳಿಸಿದ್ದು, ಆದರೆ ಈ ವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24/01/2015 ರಂದು ಪಿರ್ಯಾದಿದಾರರಾದ ಶ್ರೀ ಪ್ರವೀಣ್ ರವರ ಸ್ನೇಹಿತ ಸುಂದರ ಎಂಬವರು ತನ್ನ ಬಾಬ್ತು ಮೋಟಾರು ಸೈಕಲ್ ನಂ. KA 21 R 5519 ನೇದ್ದರಲ್ಲಿ ಎಡಪದವು ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ ಹಂಚಿನ ಕಾರ್ಖಾನೆ ಬಳಿ ಬೆಳಿಗ್ಗೆ ಸುಮಾರು 07.30 ಗಂಟೆಗೆ ತಲುಪುತ್ತಿದ್ದಂತೆ ಸುಂದರ ರವರ ಹಿಂದಿನಿಂದ ಬರುತ್ತಿದ್ದ ಕಾರು ನಂಬ್ರ KA 21 A 9236 ನೇದ್ದನ್ನು ಅದರ ಚಾಲಕ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಂದರ ರವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಸುಂದರ ರವರು ರಸ್ತೆಗೆ ಬಿದ್ದು, ಅವರ ತಲೆಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-01-2015 ರಂದು ರಾತ್ರಿ 08-45 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಪುಷ್ಪರಾಜ್ ರವರು ಮಾಡೂರು ಜಂಕ್ಷನ್ಬಳಿ ಇರುವ ಜಕ್ಸಾಂಟಿನ್ಎಂಬುವವರ ಹೊಟೆಲ್ಬಳಿ ನಿಂತಿದ್ದಾಗ ಪಿರ್ಯಾದುದಾರರಿಗೆ ಪರಿಚಯದವರಾದ ರಾಹುಲ್‌, ಆದರ್ಶ, ಅಜಯ್ಹಾಗೂ ಇತರ ಮೂರು ಜನರು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ಹೋಗದಂತೆ ನಿಲ್ಲಿಸಿ ನಂತರ ಕೈಯಿಂದ ಹೊಡೆದಿರುತ್ತಾರೆ ನಂತರ ಪಿರ್ಯಾದುದಾರರು ಬೊಬ್ಬೆ ಹಾಕಿದಾಗ ಎಲ್ಲರೂ ಓಡಿಹೋಗಿರುತ್ತಾರೆ.

 

8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2015 ರಂದು ಪಿರ್ಯಾದಿದಾರರಾದ ಶ್ರೀ ಪದ್ಮನಾಭ ರವರು ಪಿ.ಎಮ್ ರಸ್ತೆಯಲ್ಲಿರುವ ಸುರಭಿ ಕಮ್ಯೂನಿಕೇಷನ್ ಎಂಬ ಮೊಬೈಲ್ ಅಂಗಡಿಯಿಂದ ಸ್ಯಾಮ್ ಸಂಗ್ ಕಂಪೆನಿಯ G.T-19060 , MKD-MID NIGHT B.C.A. ಮಾದರಿಯ ಮೊಬೈಲ್ ಪೋನನ್ನು 13,850/- ರೂ ಗೆ ಖರೀದಿಸಿದ ಅದರಲ್ಲಿ ಏರಟೆಲ್ ಕಂಪೆನಿಯ ಸಿಮ್ ನ್ನು ಅಳವಡಿಸಿ ಉಪಯೋಗಿಸಿಕೊಂಡು ಬರುತ್ತಿದ್ದು, ದಿನಾಂಕ 23-01-2015 ರಂದು ಪಿರ್ಯಾದಿದಾರರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಜಾತ್ರೆಗೆ ಬಂದಿದ್ದು, ಆ ಸಮಯ ಅವರ ಷರ್ಟ್ ನ ಕಿಸೆಯಲ್ಲಿಟ್ಟಿದ್ದ ಸದ್ರಿ ಮೊಬೈಲ್ ಪೋನ್ ನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23.01.2015 ರಂದು ರಾತ್ರಿ 9.30 ಗಂಟೆ ಸಮಯಕ್ಕೆ ಪಿರ್ಯಾದಾರರಾದ ಶ್ರೀ ಮಹಮ್ಮದ್ ಸಾದಿಕ್ ರವರ ಬಾಬ್ತು ಬೈಕ ನಂಬ್ರ: ಕೆಎ-19-ಇಎಮ್‌-4204 ನೇ ನಂಬ್ರದ ಬೈಕನ್ನು ಕಬೀರ ಎಂಬವರು ಮಂಗಳೂರಿನಿಂಧ ರಾ.ಹೆ. 73 ರಲ್ಲಿ  ಕಣ್ಣೂರು ಕಡೆಗೆ ಸಹಸವಾರ ಇಮ್ರಾನನ್ನು ಕುಳ್ಳಿರಿಸಿಕೊಂಡು ಕೊಡೆಕಲ್ ಬಸ್ಸ್ ಸ್ಟಾಪ ಬಳಿ ತಲುಪಿದಾಗ ಬಿ.ಸಿ ರೋಡ್‌‌ನಿಂದ ಕೆಎ-19-ಇಕೆ-6438 ನೇ ನಂಬ್ರದ ಮೋಟಾರ ಸೈಕಲನ್ನು ಅದರ ಸವಾರ ಮಾನವ ಜೀವಕ್ಕೆ ಹಾನಿ ಆಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಕೆಎ-19-ಇಎಂ-4204 ನೇ ಬೈಕನ ಸವಾರ ಕಬೀರ ಮತ್ತು ಸಹಸವಾರನಾಗಿದ್ದ ಇಮ್ರಾನ ಎಂಬವರು ಬೈಕ್ ಸಮೇತವಾಗಿ ಎಡ್ಡಮಗ್ಗುಲಾಗಿ ಬಿದ್ದ ಪರಿಣಾಮ ಇಮ್ರಾನನ ಎಡ ಕಾಲಿಗೆ, ಮೊಣಗಂಟಿಗೆ ಮತ್ತು ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಕೈ ಬೆರಳಿಗೆ ತರಚಿದ ಗಾಯವಾಗಿರುತ್ತದೆ. ಇಮ್ರಾನನನ್ನು ಚಿಕಿತ್ಸೆ ಬಗ್ಗೆ ತೇಜಸ್ವಿನಿ ಆಸ್ಪತ್ರೆಗೆ ರಿಕ್ಷಾವೊಂದರಲ್ಲಿ ಕರೆದುಕೊಂಡು ಹೋದಾಗ ವೈಧ್ಯರು ಪರಿಕ್ಷೀಸಿ  ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. 

 

No comments:

Post a Comment