Thursday, January 15, 2015

Daily Crime Report :15-1-2015

ದಿನಾಂಕ 15.01.201507:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

3

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಕುಮಾರಿ ಐರಿನ್ ರೆಬೆಲ್ಲೋ ಪ್ರಾಯ 45 ವರ್ಷ ರವರು ತನ್ನ ಹಿರಿಯರಿಗೆ ಸಂಬಂಧಿಸಿದ ಮನ್ನಬೆಟ್ಟು ಗ್ರಾಮದ ಸರ್ವೇ ನಂಬ್ರ 108/194ರಲ್ಲಿ 1.87 ಎಕ್ರೆ ಸ್ಥಳದಲ್ಲಿದ್ದ ಮನೆಯಲ್ಲಿ ತನ್ನ ಅಕ್ಕ ಮಾರ್ಗರೇಟ್ ರೋಡ್ರಿಗಸ್ ರವರೊಂದಿಗೆ ವಾಸ್ತವ್ಯವಿದ್ದು, ಇಬ್ಬರೂ ದನವನ್ನು ಸಾಕಿ ಹಾಲನ್ನು ಮಾರಿ ಜೀವನ ನಡೆಸುತ್ತಿದ್ದು, ದಿನಾಂಕ 11.01.2015ರಂದು ಮಧ್ಯಾಹ್ನ  3.00 ಗಂಟೆಯ ಸಮಯಕ್ಕೆ ಅವರ ತಮ್ಮ ನೋಬರ್ಟ್  ರೆಬೆಲ್ಲೊ ಕೆಲವು ಕೆಲಸಗಾರರನ್ನು ಕರೆದುಕೊಂಡು ಬಂದು ಬೆದರಿಸಿ ಹೊರಗೆ ಬರುವಂತೆ ಮಾಡಿ ವಾಸ್ತವ್ಯವಿರುವ ಮನೆಯ ಮಾಡಿನ ಮೇಲೆ ಹಾಕಿದ ಸಿಮೆಂಟ್ ಶೀಟನ್ನು ಎಳೆದು ಹಾಕಿ ಅಕ್ರಮ ಪ್ರವೇಶ ಮಾಡಿ ಪಕ್ಕಾಸು ಪೂರ್ತಿ ತೆಗೆದು ಹಾಕಿ ಮನೆಯೊಳಗಿನ ಸೊತ್ತುಗಳನ್ನು ಚಲ್ಲಾಪಿಲ್ಲಿ ಮಾಡಿ ಬ್ಯಾಗ್ ನಲ್ಲಿಟ್ಟಿದ್ದ ರೂ 15,000/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಲ್ಲದೆ ವೇಳೆಯಲ್ಲಿ  ನೋಬರ್ಟ್ ರೆಬೆಲ್ಲೊನೊಂದಿಗೆ ಆತನ ಹೆಂಡತಿ ಶ್ರೀಮತಿ ಡೈನಾ ರೆಬೆಲ್ಲೊ ಕೂಡಾ ಜೊತೆಯಲ್ಲಿದ್ದು ಸಹಕಾರಿಯಾಗಿರುತ್ತಾಳೆ.

 

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12-01-15 ಸಂಜೆ 06-00 ಗಂಟೆಯಿಂದ 13-01-2015 ಬೆಳಿಗ್ಗೆ 07-00 ಗಂಟೆಯ ಮಧ್ಯೆ ಪಣಂಬೂರು ಗ್ರಾಮದ ಮೀನಕಳಿಯ ಐತಾಳ್ ಕಂಪೌಂಡ್ 1ನೇ ಅಂತಸ್ತಿನ ಪಿರ್ಯಾದಿದಾರರಾದ ಶ್ರೀ ರಾಜೇಶ್ @ ರಾಜೇಶ್ ಕುಮಾರ್ ರವರ ಬಾಬ್ತು ವಾಸ್ತವ್ಯವಿರುವ ರೂಮ್ ನಂಬ್ರ - 6 ರಲ್ಲಿ ಪಿರ್ಯಾದಿ ಇಲ್ಲದ ಸಮಯ ನೋಡಿ ಯಾರೋ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಮನೆಯ ಬಾಗಿಲನ್ನು ದೂಡಿ ಒಳಹೊಕ್ಕಿ ಪಿರ್ಯಾದಿಯ ಪತ್ನಿ 25 ವರ್ಷ ಪ್ರಾಯದ ಶ್ರೀಮತಿ ಕಲ್ಪನಾಳ ಕುತ್ತಿಗೆಗೆ, ತಲೆಗೆ, ಮೈಕೈಗೆ ಕತ್ತಿಯಿಂದ ತೀವ್ರವಾಗಿ ಕಡಿದು, ದೊಡ್ಡ ಗಾತ್ರದ ಕಪ್ಪು ಕಲ್ಲನ್ನು ಎದೆಯ ಮೇಲೆ ಎತ್ತಿ ಹಾಕಿ ಕಬ್ಬಿಣದ ವಸ್ತುವಿನಿಂದ ಗುದ್ದಿ, ಕೊಲೆಗೈದು ಪರಾರಿಯಾಗಿರುವುದಾಗಿದೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12.01.2015 ರಂದು ಸಂಜೆ  3.30 ಗಂಟೆಯ ಸುಮಾರಿಗೆ ಪಿರ್ಯಾದಿದಾರರಾದ ಶ್ರೀಮತಿ ಲಲಿತಾ ರವರ ಮಗ ವಿಕಾಶ್ ಎಂಬವರು ಮೂಡಬಿದ್ರೆಯ ಒಂಟಿಕಟ್ಟೆ ಎಂಬಲ್ಲಿ  ನಡೆಯುವ ಅಯ್ಯಪ್ಪ ಸ್ವಾಮಿ ಪೂಜೆಯ ಬಗ್ಗೆ ಹೋಗುತ್ತಿರುವ ಸಮಯ ಮೂಡಬಿದ್ರೆ ಪೇಟೆಯ ಮಾರ್ಕೆಟ್ ಕಡೆಯಿಂದ ಕೆಎ 19-ಇಎಲ್ 3638 ಅದರ ಸವಾರ ಬೈಕ್ಕನ್ನು ಅತೀವೇಗ ಹಾಗೂ ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ಮಗನಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟಿದ್ದು ವಿಕಾಶ್ ಗೆ ಬಲಕಾಲಿನ ತೊಡಗೆ ಬಾರೀ ರಕ್ತ ಗಾಯಾಗಿದ್ದು, ಎರಡು ಭುಜಕ್ಕೆ ಎದೆಯಲ್ಲಿ ಮತ್ತು ಎಡಕಾಲಿನ ಮೊಣಾಗಂಟಿನಲ್ಲಿ ತರಚಿದ ಗಾಯ ವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಸ್ಪಂದನ  ಆಸ್ಪತ್ರೆಗೆ ಕರೆದು ಕೊಂಡು  ಒಳರೋಗಿಯಾಗಿ ದಾಖಲಿಸಿರುವುದಾಗಿದೆ.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮುನೀರ್ ರವರ ತಮ್ಮ ಮಹಮ್ಮದ್ ನಿಸಾರ್ 20 ವರ್ಷ ಎಂಬಾತನು ದಿನಾಂಕ: 05/01/2015 ರಂದು ಬೆಳಿಗ್ಗೆ 08.00 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಪೊರ್ಕೋಡಿ ಅಂಬೇಡ್ಕರ್ ನಗರ ಎಂಬಲ್ಲಿಂದ ಮೂಡಿಗೆರೆ ಜಾವಳ ಎಂಬಲ್ಲಿಗೆ ಕೆಲಸಕ್ಕೆಂದು ಹೋದವನು ಅಲ್ಲಿಗೂ ತಲುಪದೇ, ವರೆಗೆ ಪತ್ತೆಯಾಗದೇ ಕಾಣೆಯಾಗಿದ್ದು, ಆತನ ಎರಡೂ ಮೊಬೈಲ್ ಗಳು ಸ್ವಿಚ್ ಆಫ್ ಆಗಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ ವಿವರ: ಹೆಸರು : ಮಹಮ್ಮದ್ ನಿಸಾರ್, ಪ್ರಾಯ : 20 ವರ್ಷ, ಎತ್ತರ : 5 ಅಡಿ 4 ಇಂಚು, ಬಣ್ಣ : ಗೋಧಿ ಮೈಬಣ್ಣ, ಧರಿಸಿರುವ ಬಟ್ಟೆ : ಕಪ್ಪು ಪ್ಯಾಂಟ್ ಮತ್ತು ಕಂದು ಬಣ್ಣದ ಶರ್ಟ್, ಮಾತನಾಡುವ ಭಾಷೆ: ಕನ್ನಡ, ತುಳು, ಬ್ಯಾರಿ, ವಿದ್ಯಾಭ್ಯಾಸ : 9 ನೇ ತರಗತಿ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಿದ್ಯಾ ರವರ ಗಂಡ ಸಂತೋಷ್ ಕುಮಾರ್ ಎಂಬವರು ದಿನಾಂಕ 05/12/2014 ರಂದು ಸಾಯಂಕಾಲ 6.00 ಗಂಟೆಗೆ ಮಂಗಳೂರು ತಾಲೂಕು ಕೆಂಜಾರು ಗ್ರಾಮದ ನಾರಾಯಣ ಗುರು ನಗರ ಎಂಬಲ್ಲಿ ಪಿರ್ಯಾದಿದಾರರ ತಂದೆಯ ಮನೆಯಲ್ಲಿ ಪಿರ್ಯಾದಿ ಮತ್ತು ಮಗುವನ್ನು ಬಿಟ್ಟು ಕೆಲಸಕ್ಕೆಂದು ಹೋದವರು ತನಕ ಮನೆಗೆ ಬಾರದೇ ಕಾಣೆಯಾಗಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಕಾಣೆಯಾದವರ ಚಹರೆ ವಿವರ : ಹೆಸರು: ಸಂತೋಷ್ ಕುಮಾರ್, ಪ್ರಾಯ : ಎತ್ತರ : 5 ಅಡಿ 6 ಇಂಚು, ಬಣ್ಣ : ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ, ದಪ್ಪ ಮೀಸೆ, ಧರಿಸಿರುವ ಬಟ್ಟೆ : ಕಂದು ಬಣ್ಣದ ಪ್ಯಾಂಟ್, ಕ್ರೀಂ ಕಲರಿನ ಕಪ್ಪು ಗೆರೆಗಳಿರುವ ಅಂಗಿ ಧರಿಸಿದ್ದು, ಬಲ ಕಿವಿಯಲ್ಲಿ ಒಂದು ಟಿಕ್ಕಿ ಧರಿಸಿದ್ದು, ಕುತ್ತಿಗೆಯಲ್ಲಿ ಕೆಂಪು ಬಣ್ಣದ ನೂಲಿನಲ್ಲಿ ಚಿನ್ನದ ಸಾಯಿಬಾಬನ ಪದಕ ಧರಿಸಿರುತ್ತಾರೆ, ವಿದ್ಯಾಭ್ಯಾಸ : 7 ನೇ ತರಗತಿ, ಮಾತನಾಡುವ ಭಾಷೆ : ಕನ್ನಡ, ತುಳು, ಹಿಂದಿ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ನಳಿನಿ ರವರು ಬೆಳ್ತಂಗಡಿ ತಾಲೂಕಿನ ನಿವಾಸಿಯಾಗಿದ್ದು ದಿನಾಂಕ 08-06-2014 ರಂದು ಮಂಗಳೂರು ತಾಲೂಕಿನ ಉಳ್ಳಾಲದ ತಾಜ್‌‌‌ಮಹಲ್ಹಾಲ್‌‌‌ನಲ್ಲಿ ಕೊಲ್ಯ ಕನೀರತೋಟ ನಿವಾಸಿ ವಿನೋದ್ಕುಮಾರ್‌‌ ಎಂಬುವವರೊಂದಿಗೆ ಮದುವೆಯಾಗಿದ್ದು ಮದುವೆಯ ಸಂಧರ್ಭದಲ್ಲಿ ಫಿರ್ಯಾದಿದಾರರ ತಂದೆಯು 10 ಪವನ್ಚಿನ್ನ ಹಾಗೂ 50,000 ರೂ ವನ್ನು ವಿನೋದ್‌‌ಕುಮಾರ್ರವರಿಗೆ ನಿಡಿದ್ದು ಮದುವೆಯ ಬಳಿಕ ಫಿರ್ಯಾದಿದಾರರು ಗಂಡನ ಮನೆಯಲ್ಲಿ ವಾಸವಾಗಿದ್ದು ಮದುವೆಯಾದಾಗಿನಿಂದಲೂ ಫಿರ್ಯಾದಿದಾರರ ಗಂಡ ವಿನೋದ್ಕುಮಾರ್ವಿಪರೀತ ಮಧ್ಯಸೇವನೆ ಮಾಡುತ್ತಿದ್ದು ಗೆಳೆಯರ ಜೊತೆ ದಿನಾಲೂ ಮನೆಯಲ್ಲಿ ರಾತ್ರಿ 1 ಗಂಟೆಯವರೆಗೂ ಪಾರ್ಟಿ, ಮಾಡಿ ಗೆಳೆಯರ ಜೊತೆ ಮಧ್ಯಸೇವನೆ ಮಾಡುತ್ತಿದ್ದ ಸಂಧರ್ಭ ಫಿರ್ಯಾದಿಯವರಿಗೂ ಕಿರುಕುಳ ನೀಡುತ್ತಿದ್ದು ತನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಲ್ಲದೆ ಎಲ್ಲಾ ರೀತಿಯ ಹಿಂಸೆಯನ್ನು ಆರೋಪಿ ನೀಡುತ್ತಿದ್ದು  1 ತಿಂಗಳ ಬಳಿಕ ಫಿರ್ಯಾದಿದಾರರ ಗಂಡ ದುಬೈಗೆ ತೆರಳಿದ್ದು ಅಲ್ಲಿಹೋದ ಬಳಿಕ ಕೂಡ ಫಿರ್ಯಾದಿದಾರರಿಗೆ ಅಗತ್ಯ ಕರೆಗಳನ್ನು ಮಾತ್ರ ಮಾಡುತ್ತಿದ್ದು ಫಿರ್ಯಾದಿದಾರರ ಆರೋಗ್ಯ ಹಾಗೂ ಕಷ್ಟ ಸುಖದ ಬಗ್ಗೆ ವಿಚಾರಿಸಿಕೊಳ್ಳದೆ ಫಿರ್ಯಾದಿಯವರ ಚಾರಿತ್ರ್ಯದ ಬಗ್ಗೆ ಅಪನಂಬಿಕೆಯ ಮಾತುಗಳನ್ನಾಡಿ ತಾಯಿ ಮನೆಗೆ ನಡೀಬೇಕು ಎಂದೆಲ್ಲಾ ಹೇಳುತ್ತಿದ್ದು ಅಲ್ಲದೆ ಪಾಸ್ಪೋರ್ಟ ಮಾಡಿಸುವುದಾಗಿ ಹೇಳಿ ಎರಡು ಖಾಲಿ ಪೇಪರ್‌‌ ಗೆ ಎರಡು ಸಹಿ ಹಾಗೂ 2 ಫೋಟೊಗಳನ್ನು ಮ್ಯಾರೆಜ್ಸರ್ಟಿಫಿಕೆಟ್‌‌ ಗೆ ಅಂತ ಸುಳ್ಳು ಹೇಳಿ ಫಿರ್ಯಾದಿಯವರಿಂದ ತೆಗೆದುಕೊಂಡಿದ್ದು ದಿನಾಂಕ 25-11-2014 ರಂದು ಫಿರ್ಯಾದಿದಾರರ ಗಂಡ ಊರಿಗೆ ಬಂದಿದ್ದು ಮಧ್ಯಾಹ್ನ 2 ಗಂಟೆಗೆ ಮಂಗಳೂರು ವೈಧ್ಯರಲ್ಲಿಗೆ ಕರೆದುಕೊಂಡು ಹೋಗಿ ಇವಳು ಸರಿ ಇಲ್ಲ ಮಾನಸಿಕ ಅಂತ ಸುಳ್ಳು ಹೇಳಿ ಒತ್ತಾಯಪೂರ್ವಕವಾಗಿ ವೈಧ್ಯರಿಂದ 2 ಮಾತ್ರೆಗಳನ್ನು ಬರೆಸಿದ್ದು ದಿನಾಂಕ 26-11-2014 ರಂದು ಪಾಸ್ಪೋರ್ಟ ಮಾಡಲೆಂದು ಸುಳ್ಳು ಹೇಳಿ ಕಾರ್ನಲ್ಲಿ ಫಿರ್ಯಾದಿದಾರರ ತವರು ಮನೆಯ ಹತ್ತಿರ ದೂರದಲ್ಲಿ ಕಾರಿನಿಂದ ಬಲಾತ್ಕಾರವಾಗಿ ಇಳಿಸಿ ಹೋಗಿದ್ದು ಸುಮಾರು ಹತ್ತು ದಿನದ ಬಳಿಕ ಪಿರ್ಯಾದಿದಾರರು ಗಂಡನಿಗೆ ಫೋನ್ಮಾಡಿ ಕರೆದುಕೊಂಡು ಹೋಗುವಂತೆ ತಿಳಿಸಿದಾಗ ನೀನು ನನ್ನ ಮದುವೆಗೆ ಖರ್ಚಾಗಿದ್ದನ್ನು ಕೊಡು ಆಗ ಮಾತ್ರ ನಿನಗೆ ಪ್ರವೇಶ ಎಂದು ಹೇಳುತ್ತಿದ್ದು ಬಗ್ಗೆ ಯಾರಲ್ಲಾದರೂ ದೂರು ಕೊಟ್ಟರೆ ನಿನ್ನ ಹಾಗೂ ನಿನ್ನ ಮನೆಯವರನ್ನು ಜೀವಂತವಾಗಿ ಬಿಡುವುದಿಲ್ಲ ಅಲ್ಲದೆ ನೀನು ಹಾಗೂ ನಿನ್ನ ಮನೆಯವರನ್ನು ಮುಗಿಸಿಯೇ ದುಬೈಗೆ ತೆರಳುವುದಾಗಿ ಬೆದರಿಕೆ ಹಾಕುತ್ತಿದ್ದು ಫಿರ್ಯಾದಿದಾರರ ಗಂಡನ ತಂಗಿಯಾದ ವೀಣಾ ಎಂಬುವವರು ಕೂಡ ಸಂಸಾರದಲ್ಲಿ ಭಿನ್ನಾಭಿಪ್ರಾಯ ಮೂಡುವಂತೆ ಚಾಡಿ ಮಾತುಗಳನ್ನು ಹೇಳುತ್ತಿದ್ದರು. ಅತ್ತೆ ಚಂದ್ರಾವತಿಯಲ್ಲಿಯೂ ಕೂಡ ಇ್ಲಲಸಲ್ಲದ ಮಾತುಗಳನ್ನು ವೀಣಾ ಹೇಳಿಕೊಡುತ್ತಿದ್ದು,  ದಿನಾಂಕ 6-12-2014 ರಂದು ಫಿರ್ಯಾದಿದಾರರು ತನ್ನ ಮನೆಯವರ ಜೊತೆಯಲ್ಲಿ ಗಂಡನ ಮನೆಗೆ ಹೋದಾಗ ಮನೆಯಲ್ಲಿ ಗಂಡನಿಲ್ಲದ ಕಾರಣ ಫಿರ್ಯಾದಿದಾರರು ಗಂಡನಿಗೆ ಫೋನ್ಮಾಡಿದಾಗ ನಾನು ಬರುವತನಕ ನೀನು ಮನೆಯೊಳಗೆ ಹೋಗಬಾರದೆಂದು ತಿಳಿಸಿ ಸುಮಾರು 3-00 ಗಂಟೆಗೆ 10-15 ಮಂದಿ ಅಪರಿಚಿತ ವ್ಯಕ್ತಿಗಳೊಂದಿಗೆ ಫಿರ್ಯಾದಿದಾರರ ಗಂಡ ಬಂದಿದ್ದು ಅವರೆಲ್ಲರು ಪಾನಮುಕ್ತರಂತೆ ಕಂಡು ಬರುತ್ತಿದ್ದು ಫಿರ್ಯಾದಿದಾರರ ಗಂಡ ಮನೆಯ ಬಾಗಿಲನ್ನು ಹಾಕಿ ನೀವೆಲ್ಲ ಯಾಕೆ ಬಂದ್ದದ್ದು ಹಣವಿಲ್ಲದೆ ಬರುವುದು ಬೇಡ ನಿಮಗೆ ನನ್ನನ್ನು ಏನು ಮಾಡಲು ಸಾಧ್ಯ  ಎಂದು ಹೇಳಿದರು ಜೊತೆಯಲ್ಲಿದ್ದ ಇತರರು ಹಲ್ಲೆ ಮಾಡಲು ಮುಂದಾದಾಗ ಫಿರ್ಯಾದಿದಾರರ ತಾಯಿ, ಅಕ್ಕ ಹಾಗೂ ಭಾವನವರು ಭಯದಿಂದ ವಾಪಾಸು ಹೋಗಿರುವುದಾಗಿದೆ, ನಂತರವೂ ಫಿರ್ಯಾದಿದಾರರು ಗಂಡನಿಗೆ ಫೋನ್ಮಾಡಿದರೂ ಇನ್ನಷ್ಟು ಜೀವ ಬೆದರಿಕೆ ನೀಡಿದ್ದು ಪಾಸ್‌‌ಪೋರ್ಟ ಮಾಡಿಸುವುದಾಗಿ ಎಂದೆಲ್ಲಾ ಸುಳ್ಳು ಹೇಳಿ ಮೋಸ ಮಾಡಿರುವುದಾಗಿದೆ.

 

7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14/01/2015 ರಂದು 10:15 ಗಂಟೆಗೆ ಮಂಗಳೂರು ನಗರದ ಪದುವ ಸಿಂಡ್ಕೇಟ್ ಬ್ಯಾಂಕ್ಬಳಿ ಕೆಎ-25-ಇಇ-3489 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಗೌರವ್ಎಂಬಾತನು ನಂತೂರು ಕಡೆಯಿಂದ ಕೆಪಿಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ನೇ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆ ದಾಟಲು ನಿಂತಿದ್ದ ಶ್ರೀಮತಿ ಭಾರತಿ ಮತ್ತು ಅವರ ಮಗು ಪ್ರಕೃತಿ ಎಂಬವರಿಗೆ ಡಿಕ್ಕಿ ಪಡಿಸಿ ಮೋಟಾರು ಸೈಕಲ್ ಸಮೇತ ಸವಾರ ಗೌರವ್ಮತ್ತು ಸಹಸವಾರ ಕಾಲ್ಟನ್‌‌ ಸಿಕ್ವೇರಾರವರು ರಸ್ತೆಗೆ ಬಿದ್ದಿದ್ದು, ಗಾಯಾಳು ಶ್ರೀಮತಿ ಭಾರತಿ(30) ಎಂಬವರ ಹಣೆಗೆ, ಎಡಕಣ್ಣಿನ ಬಳಿ, ಎಡಕಾಲಿನ ಮೊಣಗಂಟಿಗೆ ಮತ್ತು ಬಲಕೈ ರಿಸ್ಟ್ಮತ್ತು ಮುಖಕ್ಕೆ ರಕ್ತಗಾಯವಾಗಿದ್ದು , ಮಗು ಪ್ರಕೃತಿ(3) ಎಂಬಾಕೆಯ ತಲೆಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಹಾಗೂ ಬೈಕ್ಸಹಸವಾರ ಕಾಲ್ಟನ್ಸಿಕ್ವೇರಾರವರ ತಲೆಯ ಹಿಂಬದಿಗೆ  ಬಲಕಿವಿಗೆ, ಬಲಕೈಮೊಣಗಂಟಿಗೆ ಮತ್ತು ಹಣೆಗೆ ರಕ್ತಗಾಯವಾಗಿದ್ದು, ಬೈಕ್ ಸವಾರ ಗೌರವ್‌‌ರವರ ಮುಖಕ್ಕೆ, ಬಲಕೈಗೆ ಮತ್ತು ಎಡಕಾಲಿಗೆ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರಿನ .ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-01-2015 ರಂದು ರಾತ್ರಿ ಸುಮಾರು 10-00 ಗಂಟೆಯಿಂದ ದಿನಾಂಕ 14-01-2015 ರಂದು ಬೆಳಿಗ್ಗೆ ಸುಮಾರು 07-00 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಉಚ್ಚಿಲ ಸೇತುವೆಯ ಬಳಿಯ ಪಿರ್ಯಾದಿದಾರರಾದ ಶ್ರೀ ವಿಜಯ ಕುಮಾರ್ಎಂಬವರ ಮನೆಯ ಬಳಿ ಇರುವ ದನದ ಹಟ್ಟಿಯಿಂದ ಸುಮಾರು ಐದು ವರ್ಷದ ಹೆಣ್ಣು ದನ ಮತ್ತು ಸುಮಾರು ಒಂದು ವರ್ಷದ ಕರುವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಎರಡು ದನಗಳ ಅಂದಾಜು ಮೌಲ್ಯ 15,000 ರೂಪಾಯಿ ಆಗಿದ್ದು, ರೀತಿಯ ದನದ ಕಳವು ಕೃತ್ಯವನ್ನು ದನ ಕಳ್ಳತನ ಚಾಳಿಯಾಗಿ ಮಾಡುವ ಗುಂಪಿನವರು ಮಾಡಿರುವ ಸಾಧ್ಯತೆ ಇರುವುದಾಗಿದೆ.

 

9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-01-2015 ರಂದು ಸಂಜೆ 06-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅನಿರುಲ್ ಶೇಖ್ ರವರು ತನ್ನ ಜೊತೆ ಅಕ್ಬರ್ ಶೇಖ್ ರವರೊಂದಿಗೆ ಮುಕ್ಕಾ ಜಂಕ್ಷನಲ್ಲಿರುವ ಶ್ರೀನಿವಾಸ ಆಸ್ಪತ್ರೆಯ ಎದುರುಗಡೆ ರಾ.ಹೆ 66 ನ್ನು ದಾಟುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆ 20 ಡಿ 687 ನೇ ಬಸ್ಸನ್ನು ಅದರ ಚಾಲಕ ಗಿರೀಶ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಅಕ್ಬರ್ ಶೇಖ್ ರವರಿಗೆ  ಡಿಕ್ಕಿಪಡಿಸಿದ ಪರಿಣಾಮ ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿರುತ್ತದೆ. ಮಾತನಾಡಲಾಗದ ಸ್ಥಿತಿಯಲ್ಲಿದ್ದ ಅಕ್ಬರ್ ಶೇಖ್ ರವರನ್ನು ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಅಪಘಾತಪಡಿಸಿದ ಬಸ್ಸಿನ ಚಾಲಕ ಗಿರೀಶ ಎಂಬಾತನು ತನ್ನ ಬಸ್ಸನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿರುತ್ತಾನೆ.

 

10.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-01-2015 ರಂದು ರಾತ್ರಿ 09-30 ಗಂಟೆಯ ಸಮಯ  ಪಿರ್ಯಾದಿದಾರರಾದ ಶ್ರೀ ತ್ರಿಲೋಕ್ ರವರ ಸ್ನೇಹಿತಾ  ಸೂರಜ್ ಶೆಟ್ಟಿ ಪ್ರಾಯ 21 ವಷ್  ಎಂಬುವರು ಆಕಾಶ ಭವನ ಕಡೆಯಿಂದ ಕುಂಟಿಕಾನ ಕಡೆಗೆ ಹೊಸ ನೋಂದಣಿ ನಂಬ್ರ ಬರೆಯದ ಮೋಟಾರು ಸೈಕಲನ್ನು ಮಾನವ ಜೀವಕ್ಕೆ ಅಪಾಯಕಾರಿಯಾಗುವ  ರೀತಿಯಲ್ಲಿ ಸವಾರಿ ಮಾಡುತ್ತಾ  ದೇರೆಬೈಲು ಮಾಹಾಕಾಳಿ ದೇವಸ್ಥಾನದ ಬಳಿ ತಲುಪಿದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು, ಸೂರಜ್ ಶೆಟ್ಟಿ ರವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಆಸ್ಪತ್ರೆಗೆ  ಸಾಗಿಸುವ ವೇಳೆ ರಾತ್ರಿ 10-20 ಗಂಟೆಯ ಸಮಯಕ್ಕೆ  ದಾರಿ ಮಧ್ಯ ಮೃತಪಟ್ಟಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸೀತಮ್ಮ ರವರ ಮೊಮ್ಮಗ ಪವನ್ರಾಜ್‌(20 ವರ್ಷ) ಎಂಬಾತನು ದಿನಾಂಕ: 05.01.2015 ರಂದು ಗರೋಡಿ ಜಾತ್ರೆಗೆ ಹೋಗುವುದಾಗಿ ಹೇಳಿ ಮನೆಯಿಂದ ಜಾತ್ರೆಗೆ ಬಂದು ಅಲ್ಲಿ ಹಣ್ಣು ಹಂಪಲು ಮಾರಾಟ ಮಾಡುವವರ ಜೊತೆ ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದನು ದಿನಾಂಕ: 06.01.2015 ರಂದು ಸಂಜೆ ಪಿರ್ಯಾದಿದಾರರು  ಗರೋಡಿ ದೇವಸ್ಥಾನದ ಬಳಿ ಪವನ್‌‌ರಾಜ್‌‌ನನ್ನು ನೋಡಿ ಮಾತನಾಡಿಸಿರುತ್ತಾರೆ. ದಿನಾಂಕ: 09.01.2015 ರಂದು ಬೆಳಿಗ್ಗೆ ಪಿರ್ಯಾದಿದಾರರು ಗರೋಡಿ ದೇವಸ್ಥಾನದ ಬಳಿ  ಸಂತೆ ಮಾರಾಟ ಮಾಡುವಲ್ಲಿಗೆ ಬಂದು ನೋಡಿದಾಗ ಎಲ್ಲಾ ಸಂತೆ ಮಾರಾಟ ಮಾಡುವವರು ಅಲ್ಲಿಂದ ಹೋಗಿದ್ದು  ಪಿರ್ಯಾದಿದಾರರ ಮೊಮ್ಮಗ ಪವನ್ರಾಜ್‌‌ ಕೂಡಾ ಅಲ್ಲಿ ಇರಲಿಲ್ಲ ಆತನ ಬಗ್ಗೆ ವರೆಗೆ ನೆರೆಕರೆಯಲ್ಲಿ ಮತ್ತು ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ.

 

12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13.01.2015 ರಂದು ಸಂಜೆ 7.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದಾಮೋದರ್ ಪಂಡಿತ್ ರವರು  ಡೀಸೆಲ್‌‌  ತರುವರೇ  ಕಪಿತಾನಿಯಾ ಶಾಲೆಯ ಎದುರುಗಡೆ  ಇರುವ K G ಭಟ್‌‌ ಇಂಡಿಯನ್‌‌ ಆಯಿಲ್‌‌ ಪೆಟ್ರೋಲ್‌‌ ಪಂಪ್ಕಡೆಗೆ  ಹೋಗಲು ಪೆಟ್ರೋಲ್‌‌ ಪಂಪ್‌‌ ಎದುರು ರಸ್ತೆಯಲ್ಲಿ ರಸ್ತೆ ದಾಟುತ್ತಿರುವಾಗ ಕಂಕನಾಡಿ ಕಡೆಯಿಂದ KA19X9663 ನೇ ಮೋಟಾರ್ ಸೈಕಲ್‌‌ವೊಂದನ್ನು ಅದರ ಸವಾರ ಬಸವರಾಜ್‌‌ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು  ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಡಾಂಬರು ರಸ್ತೆಗೆ ಬಿದ್ದು ಅವರ ಎಡಕಾಲಿನ ಕೋಲು ಕಾಲಿನ ಮೂಳೆ ಮುರಿತದ ತೀವ್ರ ಗಾಯವಾಗಿರುತ್ತದೆ ಮತ್ತು ಎದೆಯ ಎಡಭಾಗಕ್ಕೆ ಗುದ್ದಿದ ನೋವು ಹಾಗೂ ಕೈಕಾಲುಗಳಿಗೆ  ತರಚಿದ ಗಾಯ ಉಂಟಾಗಿರುತ್ತದೆ.

No comments:

Post a Comment