Friday, January 30, 2015

Daily Crime Reports 30-01-2015

ದೈನಂದಿನ ಅಪರಾದ ವರದಿ.
ದಿನಾಂಕ 30.01.201511:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
1
ಮನೆ ಕಳವು ಪ್ರಕರಣ
:
1
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
7
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
1
ಇತರ ಪ್ರಕರಣ
:
1
 
 
 
 
 
 
 
 
 
 
 
 
 
 
 
 
 
 
 
 
 
 
 
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-01-2015ರಂದು ಸಂಜೆ 5-30 ಗಂಟೆ ಸಮಯಕ್ಕೆ ಜಿಲ್ಲಾ ಕಾರಾಗೃಹದ ಎ ಬ್ಲಾಕಿನ ರೂಂ ನಂಬ್ರ 3ರಲ್ಲಿದ್ದ ಈ ಪ್ರಕರಣದ ಪಿರ್ಯಾದಿದಾರರಾದ ಮೊಹಮ್ಮದ್ ಅಶ್ರಫ್ (ವಿಚಾರಣಾಧೀನ  ಬಂಧಿ) ರವರು ಸ್ನಾನಕ್ಕೆಂದು ಕಾರಾಗೃಹದ 4ನೇ ರೂಮಿನ ಎದುರು ವರಾಂಡದಲ್ಲಿ ಹೋಗುತ್ತಿದ್ದಾಗ 4ನೇ ರೂಮಿನಲ್ಲಿದ್ದ ವಿಚಾರಣಾಧೀನ ಬಂಧಿಗಳಾದ ಆರೋಪಿ ಸತಾರ್, ಸಿರಾಜ್, ಉರ್ಫಾನ್ ಎಂಬವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರ ಕೈ ಹಿಡಿದೆಳೆದು ಅವರ ರೂಮಿನೊಳಗಡೆ ತಳ್ಳಿ ಕೈಗಳಿಂದ ಆತನ ಬೆನ್ನು, ಹೊಟ್ಟೆ, ಎದೆ ಭಾಗಕ್ಕೆ ಹೊಡೆದು, ಕಾಲುಗಳಿಂದ ತುಳಿದು, ತಲೆಯನ್ನು ಗೋಡೆಗೆ ಚಚ್ಚಿ ಹಲ್ಲೆ ಮಾಡಿದ್ದಾಗಿರುತ್ತದೆ. ಪಿರ್ಯಾದಿದಾರರು ಈ ಹಿಂದೆ ಆರೋಪಿತರುಗಳಿದ್ದ ರೂಮಿನಲ್ಲಿ ಅವರ ಜೊತೆ ಇದ್ದು, ಅವರುಗಳು ಈತನನ್ನು ಕೆಲಸಮಾಡುವಂತೆ ಒತ್ತಾಯಿಸುತ್ತಿದ್ದುದರಿಂದ ಆ ರೂಮನ್ನು ಬಿಟ್ಟು ರೂಂ ನಂಬ್ರ 3ಕ್ಕೆ ಬಂದಿದ್ದುದರಿಂದ ದ್ವೇಷಗೊಂಡ ಆರೋಪಿತರುಗಳು ಈ ಕೃತ್ಯವನ್ನು ವೆಸಗಿರುವುದಾಗಿದೆ.
 
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.01.2015 ರಂದು 17:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪ್ರಸಾದ್ ಶೆಟ್ಟಿ ರವರು ಮನೆಯ ಪಕ್ಕದಲ್ಲಿರುವ ಕಡಂದಲೆ ಬಿಲ್ಲವ ಸಂಘದಲ್ಲಿ ನಾಟಕ ಕಾರ್ಯಕ್ರಮಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿ ದಿನಾಂಕ 30.01.2015 ರಂದು 01:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದು ನೋಡಿದಾಗ ಪಿರ್ಯಾದಿದಾರರ  ಮನೆಯ ಅಡುಗೆ ಕೋಣೆಯ ಬಾಗಿಲ ಚಿಲಕವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಕಿತ್ತು ಬಾಗಿಲನ್ನು ತೆರೆದು, ಒಳಪ್ರವೇಶಿಸಿ ಪಿರ್ಯಾದಿದಾರರ ಹಾಗೂ ಅವರ ತಾಯಿಯವರ ಕೋಣೆಯಲ್ಲಿದ್ದ ಕಪಾಟಿನಲ್ಲಿದ್ದ, ಬಂಗಾರದ ಚೈನು-4, ಬಂಗಾರದ ಬ್ರಾಸ್ ಲೆಟ್ ಗಳು -2, ಲೇಡಿಸ್ ಉಂಗುರಗಳು -4, ಬಂಗಾರದ ನಾಣ್ಯ -1,  ಬಂಗಾರದ ಬಳೆಗಳು-2, ಒಟ್ಟು ಸುಮಾರು 3,50,000 ರೂಪಾಯಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
 
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 29-01-2015 ರಂದು ಮಧ್ಯಾಹ್ನ 12:00 ಗಂಟೆ ವೇಳೆಗೆ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಮುಡಿಪು ಇರಾ ಕ್ರಾಸ್ ಬಳಿಯಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರನ್ನು ಮಟ್ಕಾ ಜೂಜಾಟ ಆಡಲು ಕರೆಯುತ್ತಿದ್ದಾನೆ ಎಂಬುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕಾದ ಶ್ರೀ ರಾಘವ ಪಡೀಲ್ ರವರು ಸಿಬ್ಬಂದಿಗಳು ಹಾಗೂ ಪಂಚಾಯತುದಾರರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ-19-ಜಿ-309ನೇದರಲ್ಲಿ ಹೋಗಿ ಮುಡಿಪು -ಇರಾ ಕ್ರಾಸ್ ಬಳಿಯಲ್ಲಿ ಅವಿತು ಕುಳಿತಿದ್ದ ಆರೋಪಿ ಲೂವಿಸ್ ಪೇರಸ್ ಎಂಬವನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವಾಧೀನದಲ್ಲಿದ್ದ 6,570/- ರೂಪಾಯಿ ನಗದು ಹಣ, ನಂಬ್ರ ಬರೆಯುತ್ತಿದ್ದ ಚೀಟಿಗಳು-2, ಮೊಬೈಲ್ ಫೋನ್-2, ಬಿಳಿ ಪ್ಲಾಸ್ಟಿಕ್ ಚೀಲ-1, ಪೆನ್-1 ಮತ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಎಲ್-9495ನೇದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.
 
4.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 27-01-2015 ರಂದು ಬೆಳಿಗ್ಗೆ 11-15 ಗಂಟೆ ಸಮಯ ಕೂಳೂರು-ಜೋಕಟ್ಟೆ ರಸ್ತೆಯಲ್ಲಿ ಫಿರ್ಯಾದಿದಾರರಾದ ಶ್ರೀ ದೀಪಕ್ ಆರ್.ಎಲ್. ರವರು ತನ್ನ ಬಾಬ್ತು ಕೆ ಎ 19 ವೈ 1226 ನೇ ಬೈಕ್ ನ್ನು ಚಲಾಯಿಸಿಕೊಂಡು ಎಸ್ ಈ ಝೆಡ್ ಕಡೆಗೆ ಹೋಗುತ್ತಾ ಅದಾನಿ ಕಂಪನಿಯ ಬಳಿಗೆ ತಲುಪಿದಾಗ ಕೆ ಎ 19 ಎಮ್ ಎ 7730 ನೇ ನಂಬ್ರದ ಜೆ ಸಿ ಬಿ ವಾಹನವನ್ನು ಅದರ ಚಾಲಕ ಇಹ್ಸಾನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು; ಗಂಭೀರ ರೀತಿಯಲ್ಲಿ ಎಡಗಾಲಿಗೆ ಮೂಳೆಮುರಿತದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾರೆ ಸೂಚನಾ ಪತ್ರವು ಫಿರ್ಯಾದಿದಾರರ ಚಿಕ್ಕಪ್ಪನವರಾದ ಉಮೇಶ ಕೋಟ್ಯಾನ್ ರವರ ಕೈಯಲ್ಲಿದ್ದು, ತಡವಾಗಿ ಈ ದಿನ ದೂರು ನೀಡಿದ್ದಾಗಿದೆ. 
 
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಪಿರ್ಯಾದಿದಾರರಾದ ಶ್ರೀ ವೆಂಕಟರಮಣ ಭಟ್ ರವರು ತನ್ನ ಬಾಬ್ತು ಕಾರು ನಂ KA- 20 P-6252 ನ್ನು ಮಂಗಳೂರು ಕಡೆಯಿಂದ ಕಾರ್ಕಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತ ರಾತ್ರಿ 7-35 ಗಂಟೆಗೆ ಗುರುಪುರ ಪೇಟೆಯಿಂದ ಸ್ವಲ್ಪ ಮುಂದೆ ಹಂಪ್ಸನ ಬಳಿ ತಲುಪುವಾಗ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ TN -34 D-9043 ನೇ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರ ಬಲಬಾಗಕ್ಕೆ ಬಂದು ಪಿರ್ಯಾದಿದಾರರ ಕಾರಿನ ಎಡಬಾಗಕ್ಕೆ ಮತ್ತು ರಸ್ತೆಯ ಬದಿಯ ಕಾಲು ದಾರಿಯಲ್ಲಿದ್ದ ವಿದ್ಯುತ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರ ಕಾರಿಗೆ ಜಖಂ ಉಂಟಾಗಿದ್ದು, ವಿದ್ಯುತ ಕಂಬ ಮುರಿದು ಬಿದ್ದಿರುವದರಿಂದ ಮೆಸ್ಕಾಂ ಸಂಸ್ಥೆಗೆ ನಷ್ಟ ಉಂಟಾಗಿರುವುದಾಗಿದೆ.
 
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಸಾಯಂಕಾಲ 04-50 ಗಂಟೆ ಸಮಯ ಫಿರ್ಯಾದಿದಾರರಾದ ಶ್ರೀ ಜಯಪ್ರಕಾಶ್ ಆರ್. ರವರು ತನ್ನ ಬಾಬ್ತು ಕೆ ಎ 19 ಈ ಕೆ 9982 ನ್ನು ಚಲಾಯಿಸಿಕೊಂಡು ಸುರತ್ಕಲ್-ಚೊಕ್ಕಬೆಟ್ಟು ಕ್ರಾಸ್ ರಸ್ತೆಯ ಸ್ವಲ್ಪ ಮುಂದೆ ಹೋಗುತ್ತಿದ್ದಾಗ ತನ್ನ ಬಲಭಾಗದಿಂದ ಲಾರಿಯ ನಂಬ್ರ ಕೆ ಎ 19 ಎ ಸಿ 9563 ನೇ ಯನದನ್ನು ಅದರ ಚಾಲಕ ರಘುವೀರ್ ಎಂಬವರು ತನ್ನ ಲಾರಿಯನ್ನು ಏಕಾಏಕಿ ಎಡಕ್ಕೆ ತಿರುಗಿಸಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಬೈಕ್ ಲಾರಿಯ ಅಡಿಗೆ ಸಿಲುಕಿ, ಫಿರ್ಯಾದಿದಾರರ ಸೊಂಟಕ್ಕೆ ಗುದ್ದಿದ ಗಂಭೀರ ಗಾಯವಾಗಿರುತ್ತದೆ. ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿತ್ತಾರೆ.
 
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀಮತಿ ಶಶಿ ರವರ ತಮ್ಮ ಶಶಿಧರ ಪ್ರಾಯ 46 ವರ್ಷ ರವರು ದಿನಾಂಕ 014-10-2014 ರಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೊದವರು ಈ ತನಕ ಮನೆಗೆ ಬಂದಿರುವುದಿಲ್ಲ. ಆದರೆ ಸುಮಾರು 15 ದಿನಗಳ ತನಕ ಅವರ ಮೊಬೈಲ್ ಪೋನಿಗೆ ಕರೆ ಮಾಡಿದಲ್ಲಿ ಮಾತನಾಡುತ್ತಿದ್ದು, ಇತ್ತೀಚೆಗೆ 15 ದಿನಗಳಿಂದ ಮೊಬೈಲ್ ಕರೆಯನ್ನು ಸ್ವೀಕರಿಸದೇ ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.
 
8.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಸಾಯಂಕಾಲ 06-10 ಗಂಟೆ ಸಮಯ ಫಿರ್ಯಾದಿದಾರರಾದ ಶ್ರೀ ಕಪಿಲ್ ವಿ. ರವರು ತನ್ನ ಬಾಬ್ತು ಕೆ ಎ 19 ಎಮ್ ಬಿ 362 ನೇ ನಂಬ್ರದ ಕಾರಿನಲ್ಲಿ ಕೂಳೂರು 04-ನೇ ಮೈಲಿನಲ್ಲಿ ಹೋಗುತ್ತಿರುವಾಗ ಅವರ ಪರಿಚಯದ ಮುತ್ತುಕೃಷ್ಣ ಎಂಬವರು ನಡೆದುಕೊಂಡು ಹೋಗುತ್ತಿದ್ದು, ಫಿರ್ಯಾದಿದಾರರ ಕಾರಿನ ಎದುರಿನಿಂದ ಕೆ ಎ 19 ಬಿ 4215 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಲಕ್ಷ್ಮಣ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಮುತ್ತುಕೃಷ್ಣ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯವಾಗಿ ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಿತ್ತಾರೆ.
 
9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-01-2015 ರಂದು ಪಿರ್ಯಾದಿದಾರರಾದ ಶ್ರೀ ನಾಗೇಶ್ ಕುಲಾಲ್ ರವರು ಕಾರ್ ನಂಬ್ರ ಕೆಎ 19 ಎಮ್ ಡಿ 0702 ನ್ನು ಕುಳಾಯಿ ಕಡೆಯಿಂದ ಮುಲ್ಕಿ ಕಡೆಗೆ ಚಲಾಯಿಸಿಕೊಂಡು ಎನ್ ಹೆಚ್ 66 ರಲ್ಲಿ ಮುಕ್ಕ ಚೇಳ್ಯಾರು ಪದವು ಕ್ರಾಸ್ ಬಳಿ ಬರುತ್ತಿರುವಾಗ್ಗೆ ರಾತ್ರಿ 10-20 ಗಂಟೆ ಸಮಯಕ್ಕೆ ಟ್ಯಾಂಕರ್ ನಂಬ್ರ ಕೆಎ 21 1739 ನ್ನು ಅದರ ಚಾಲಕ ಮಾನವ ಜೀವಕ್ಕೆ ಅಪಾಯಕಾರಿಯದ ರೀತಿಯಲ್ಲಿ ಓವರ್ ಟೇಕ್ ಮಾಡಿ ಮುಂದಿನಿಂದ ಹೋಗುತ್ತಿದ್ದ ದ್ವಿ ಚಕ್ರ ವಾಹನ ನಂಬ್ರ ಕೆ ಎ 19 ಇಕೆ 7925 ರ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನವು ರಸ್ತೆಗೆ ಎಸೆಯಲ್ಪಟ್ಟು ಅದರ ಮೇಲೆ ಹಾಗೂ ಸವಾರ ದೀಪಕ್ ರವರ ತಲೆಯ ಮೇಲೆ ಹರಿದು ಹೋದ ಪರಿಣಾಮ ದೀಪಕ್ ಮೃತಪಟ್ಟಿದ್ದು ಟ್ಯಾಂಕರ್ ಚಾಲಕ ವಾಹನವನ್ನು ಮುಂದಕ್ಕೆ ನಿಲ್ಲಿಸಿ ಪರಾರಿಯಾಗಿರುವುದಾಗಿದೆ.
 
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28.01.2015 ರಂದು ರಾತ್ರಿ 8.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ನಾಗೇಶ್ ಆಚಾರ್ಯ ರವರು ಅವರ ಬಾಬ್ತು ಕೆಎ-19 ಯು-7892ನೇ ಮೋಟಾರ್ಸೈಕಲ್ನಲ್ಲಿ ಕುಲಶೇಖರ ಡೈರಿಯಿಂದ ಬಜಪೆ ಕಡೆಗೆ ಹೋಗುತ್ತಾ ಸಿಲ್ವರ್ಗೇಟ್ತಲುಪುತ್ತಿದ್ದಂತೆ ನಂತೂರು ಕಡೆಯಿಂದ ಮೋಟಾರ್ಸೈಕಲ್ನಂಬ್ರ ಕೆಎ-19 ಇಎಮ್‌-28 ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ ಎದರುನಿಂದ ಹೋಗುತ್ತಿದ್ದ ಒಂದು ಜೀಪನ್ನು ಓವರ್ಟೇಕ್ಮಾಡುವ ಪ್ರಯತ್ನದಲ್ಲಿ ರಸ್ತೆಯ ತೀರ ಬಲಬದಿಗೆ ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ಎಡ ಬುಜಕ್ಕೆ ಗುದ್ದಿದ ಗಾಯ ತಲೆಗೆ ರಕ್ತ ಗಾಯ ಹಾಗೂ ಬಲ ಕೈ ಕಿರುಬೆರಳಿಗೆ ಮೂಳೆ ಮುರಿತದ ಗಾಯಾವಾಗಿರುತ್ತದೆ.
 
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.01.2015 ರಂದು ಫಿರ್ಯಾದಿದಾರರಾದ ಶ್ರೀ ಅವಿನಾಶ್ ರವರ ಚಿಕ್ಕಮ್ಮನ ಮಗ ಹಂಸರಾಜ್ಎಂಬಾತನು ಮೋಟಾರ್ಸೈಕಲ್ನಂಬ್ರ: ಕೆ19 ಇಜೆ-9835 ನ್ನು ಅತೀವೇಗ ಹಾಗೂ ಅಜಾಗರೂತೆಯಿಂದ ಚಲಾಯಿಸುತ್ತಾ ಕುಲಶೇಖರ ದಿಂದ ಶಕ್ತಿನಗರ ಕಡೆ ಬರುತ್ತಾ ಶಕ್ತಿನಗರದ ಕೋರ್ಡೆಲ್ಎಂಬಲ್ಲಿ ಎದುರಿನಿಂದ ಬಂದ ಜೀಪೊಂದನ್ನು ಕಂಡು ನಿರ್ಲಕ್ಷತನದಿಂದ ಒಮ್ಮೇಲೆ ರಸ್ತೆಯ ಎಡಕ್ಕೆ ತಿರುಗಿಸಿ ರಸ್ತೆಯ ಬದಿಯ ಕಂಪೌಂಡ್ಗೋಡೆ ಗೆ ಡಿಕ್ಕಿ ಹೊಡೆದ ಪರಿಣಾಮ ಆತನ ತಲೆಗೆ ಗಂಬೀರ ಸ್ವರೂಪದ ಗಾಯ ಹಾಗೂ ಎದೆಗೆ ಮತ್ತು ಕೈಕಾಲುಗಳಿಗೆ  ಗಾಯಾವಾಗಿ ಪ್ರಜ್ಷಾಹೀನ ಸ್ಥಿತಿಯಲ್ಲಿರುತ್ತಾರೆ.
 

No comments:

Post a Comment