ದಿನಾಂಕ 09.01.2015 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
1
|
ಹಲ್ಲೆ ಪ್ರಕರಣ
|
:
|
1
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
3
|
ವಂಚನೆ ಪ್ರಕರಣ
|
:
|
1
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
1.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಯತೀರಾಜ್ ಡಿ ಸಾಲ್ಯಾನ್ ಎಮ್ ಆರ್ ಪಿ ಎಲ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್(ಆಡಳಿತ) ಆಗಿ ಕೆಲಸ ಮಾಡಿಕೊಂಡಿದ್ದು, ಮೊದಲನೆಯ ಆರೋಪಿಯಾದ ಕೆ ಲಕ್ಷ್ಮಿಪತಿ ರಾಜೇಶ್ವರಿ ಇನ್ ಪ್ರಾ ಪ್ರಾಜೇಕ್ಟ್ಸ್ ಕಂಪನಿಯ ಪಾಲುದಾರ ಹಾಗೂ ಕಾಂಟ್ರಾಕ್ಟರ್ ಆಗಿರುತ್ತಾರೆ. 2ನೇ ಆರೋಪಿಯಾದ ಎ, ವಿಂದ್ಯಾರಾಣಿ ಎಂಬವರು ರಾಧಿಕ ಎಂಟರ್ ಪ್ರೈಸಸ್ ಎಂಬ ಟ್ರಾನ್ಸ್ ಪೂರ್ಟ್ ಕಂಪನಿಯ ಮಾಲೀಕರಾಗಿರುತ್ತಾರೆ. 3ನೇ ಆರೋಪಿಯಾದ ತಾಫಾಸ್ ಜಾಹ ಎಂಬವರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಚೀಪ್ ಮ್ಯಾನೇಜರ್ ಆಗಿದ್ದು, 4ನೇ ಆರೋಪಿಯಾದ ಬಿ.ಬಿ ಮಲ್ಲಿಕ್ ಎಂಬವರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮ್ಯಾನೇಜರ್ ಆಗಿದ್ದು, .5ನೇ ಆರೋಪಿಯು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಆಗಿರುತ್ತಾರೆ. ದಿನಾಂಕ:24-10-2014 ರಂದು 1ನೇ ಆರೋಪಿಯು ಪಿರ್ಯಾದಿದಾರರು ಕೆಲಸಮಾಡಿಕೊಂಡಿರುವ ಎಮ್ ಆರ್ ಪಿ ಎಲ್ ಕಂಪನಿಯಿಂದ 300 ಮೆಟ್ರಿಕ್ ಟನ್ VG-30 VG-10 ಡಾಂಬರನ್ನು ಒದಗಿಸುವಂತೆ ಖರೀದಿ ಪತ್ರವನ್ನು ಲಿಖಿತವಾಗಿ ಸಲ್ಲಿಸಿ,ಅದರಂತೆ ಕಂಪನಿಯ ಷರತ್ತಿನ ಅನ್ವಯ 80 ಲಕ್ಷ ಮೌಲ್ಯದ ಬ್ಯಾಂಕ್ ಗ್ಯಾರಂಟಿಯನ್ನು ಆರೋಪಿಗಳಾದ 3 ಮತ್ತು 4ನೇ ಯವರು ಸಹಿ ಮಾಡಿ ನೀಡಿದ ಬ್ಯಾಂಕ್ ಗ್ಯಾರಂಟಿ ಬಾಂಡನ್ನು ಒದಗಿಸಿರುತ್ತಾರೆ. ಅದರಂತೆ ಆರೋಪಿ 1ನೇ ಯವರು ನೀಡಿದ ಪ್ರಸ್ತಾವನೆಗೆ ಕಂಪನಿಯು ಒಪ್ಪಿಗೆ ನೀಡಿ ಅದರನ್ವಯ 1ನೇ ಆರೋಪಿಯು ಸುಮಾರು 65,20.675 ರೂಪಾಯಿ ಮೌಲ್ಯದ ಡಾಂಬರನ್ನು ಹಣ ಪಾವತಿಸದೇ ದಿನಾಂಕ:25-10-2014 ರಿಂದ 10-11-2014 ರವರೆಗೆ 2ನೇ ಆರೋಪಿಯ ಟ್ರಾನ್ಸ್ ಪೂರ್ಟ್ ಕಂಪನಿಯ ಮುಖಾಂತರ ಸಾಗಾಟ ಮಾಡಿರುತ್ತಾರೆ. ಹೀಗಿರುವಾಗ 1ನೇ ಆರೋಪಿಯು ನೀಡಬೇಕಾಗಿದ್ದ ಮೊತ್ತವನ್ನು 3ನೇ ಆರೋಪಿಯವರಲ್ಲಿ ಕೇಳಿದಾಗ ಈ ಬಗ್ಗೆ ನಾವು ಜವಾಬ್ದಾರರಲ್ಲ ಅಲ್ಲದೇ ನಮ್ಮ ಬ್ಯಾಂಕಿನಿಂದ ಯಾವುದೇ ಬಾಂಡ್ ಗಳನ್ನು ನಾವು ನೀಡಿರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಅದರಂತೆ 1ನೇ ಆರೋಪಿಯವರಲ್ಲಿ ಕೇಳಿದಾಗ ಆರೋಪಿಯು ತಲಾ 20 ಲಕ್ಷ ರೂಪಾಯಿ ಮೌಲ್ಯದ 3 ಚಕ್ ಗಳನ್ನು ನೀಡಿರುತ್ತಾರೆ, ಸದ್ರಿ ಚಕ್ ಗಳನ್ನು ನಗದೀಕರಿಸಲು ಪಿರ್ಯಾದಿದಾರರು ಬ್ಯಾಂಕ್ ಗೆ ಹಾಕಿದ್ದಲ್ಲಿ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚಕ್ ಅಮಾನ್ಯ ಗೊಂಡಿರುತ್ತದೆ. ನಂತರ ಈ ಬಗ್ಗೆ ಕೋರಿಕೆ ಪತ್ರವೂಂದನ್ನು 5ನೇ ಆರೋಪಿಗೆ ಕಳುಹಿಸಿಕೊಟ್ಟಿದ್ದು, ಅದರಂತೆ ಅವರು 1ನೇ ಆರೋಪಿಯ ಹೆಸರಿನ ವ್ಯಕ್ತಿಗೆ ಹಾಗೂ ಕಂಪನಿಗೆ ನಮ್ಮ ಬ್ಯಾಂಕಿನಿಂದ ಯಾವುದೇ ಗ್ಯಾರಂಟಿ ನೀಡಿರುವುದಿಲ್ಲವಾಗಿ ಲಿಖಿತವಾಗಿ ಉತ್ತರ ನೀಡಿರುತ್ತಾರೆ. ಎಲ್ಲಾ ಆರೋಪಿಗಳು ಸೇರಿ ಸಮಾನ ಉದ್ದೇಶದಿಂದ ಒಳಸಂಚನ್ನು ರೂಪಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದನ್ನು ನಿಜವೆಂದು ನಂಬಿಸಿ ಪಿರ್ಯಾದಿದಾರರಿಗೆ ಹಾಗೂ ಕಂಪನಿಗೆ ನಷ್ಟವಾಗುವುದಾಗಿ ತಿಳಿದಿದ್ದರು ಸಹ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿರುವುದಾಗಿದೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-01-2015 ರಂದು ಪಿರ್ಯಾದಿದಾರರಾದ ಶ್ರೀಮತಿ ಉಷಾ ರವರು ಮಧ್ಯಾಹ್ನ ಸುಮಾರು 2:45 ಗಂಟೆ ಸಮಯಕ್ಕೆ ಪಜೀರು ಗ್ರಾಮದ ಬೆಂಗೋಡಿಪದವು ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಒಂದು ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಪಿರ್ಯಾದಿದಾರರಲ್ಲಿ ಗ್ಯಾಸ್ ಶೀನಣ್ಣನ ಮನೆ ಎಲ್ಲಿ ಎಂದು ಕೇಳಿ, ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 3.5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಸರದೊಂದಿಗೆ ಪರಾರಿಯಾಗಿರುತ್ತಾರೆ. ಆರೋಪಿಗಳು ಎಳೆದುಕೊಂಡ ಹೋದ ಕರಿಮಣಿ ಸರದ ಅಂದಾಜು ಮೌಲ್ಯ ರೂ 82,000/- ಆಗಬಹುದು.
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-01-2015 ರಂದು ಸಂಜೆ ಪಿರ್ಯಾದಿದಾರರಾದ ಶ್ರೀ ಅಭಿಲಾಷ್ ರವರು ಕೆಲಸದ ನಿಮಿತ್ತ ಪಿ.ವಿ.ಎಸ್ ಕಡೆಯಿಂದ ಬೆಸೆಂಟ್ ಜಂಕ್ಷನ್ ಕಡೆಗೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಸಂಜೆ ಸಮಯ 4:15 ಗಂಟೆಗೆ ನವನೀತ್ ಹೋಟೇಲ್ ಬಳಿ ತಲುಪಿದಾಗ, ಪಿರ್ಯಾದಿದಾರರ ಹಿಂದುಗಡೆಯಿಂದ ಬರುತ್ತಿದ್ದ ರೋಶನ್ ಎಂಬವರಿಗೆ ಸ್ಕೂಲ್ ಟ್ರಿಪ್ ವಾಹನ ನಂಬ್ರ ಕೆ.ಎ-21-1459 ನೇದನ್ನು ಅದರ ಚಾಲಕ ಅತೀವೇಗ ಮತ್ತು ತೀರಾ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದು, ಅವರು ಪಿರ್ಯಾದಿದಾರರನ್ನು ರಕ್ಷಿಸಲು ಎಡಬದಿಗೆ ತಳ್ಳಿದರು. ಆದರೆ ಸದ್ರಿ ಟೆಂಪೋವು ಪಿರ್ಯಾದಿದಾರರಿಗೂ ಡಿಕ್ಕಿ ಹೊಡೆದು, ಕೆಳಗೆ ಬಿದ್ದ ಪಿರ್ಯಾದಿದಾರರ ಎಡ ಕೈಯ ರಟ್ಟೆಯ ಮೇಲೆ ಟೆಂಪೋದ ಎಡಬದಿಯ ಮುಂಭಾಗ ಮತ್ತು ಹಿಂಭಾಗದ ಚಕ್ರಗಳು ಹಾದು ಹೋಗಿ, ಎಡಕೈಯ ರಟ್ಟೆಗೆ ಗಂಭೀರ ಗಾಯ ಮತ್ತು ಎಡಕಾಲಿನ ಮೊಣಗಂಟಿಗೆ ತರಚಿದ ಗಾಯ ಹಾಗೂ ರೋಶನ್ರವರಿಗೆ ಗಾಯ ಉಂಟು ಮಾಡಿದ್ದಲ್ಲದೇ, ಮುಂದುಗಡೆ ಇದ್ದ ಇನ್ನೊಂದು ಕೆ.ಎಲ್ ನೋಂದಣಿ ನಂಬ್ರದ ಕಾರಿಗೂ ಡಿಕ್ಕಿ ಹೊಡೆದು ತುಂಬಾ ಜಖಂ ಉಂಟಾಗಿರುತ್ತದೆ. ಅಪಘಾತ ಉಂಟು ಮಾಡಿದ ಟೆಂಪೋ ಚಾಲಕರು ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸದೇ ಇರುವುದರಿಂದ, ರೋಶನ್ರವರೇ ಒಂದು ಆಟೋರಿಕ್ಷಾದಲ್ಲಿ ಪಿರ್ಯಾದಿದಾರರನ್ನು ಚಿಕಿತ್ಸೆಗಾಗಿ ನಗರದ ಯೆನೆಪೋಯಾ ಆಸ್ಪತ್ರೆಗೆ ದಾಖಲಿಸಿ, ತಾವು ಸಹಾ ದಾಖಲಾಗಿರುವುದಾಗಿದೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:08.01.2015 ರಂದು ರಾತ್ರಿ ಸುಮಾರು 9.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಂಜಿತ್ ಕುಮಾರ್ ಎಂ.ಸಿ. ರವರು ತನ್ನ ಮನೆಗೆ ಅದ್ರಾಮ ಎಂಬವರ ಅಂಗಡಿಯಿಂದ ಸಕ್ಕರೆ ಖರೀದಿಸಿ ಮನೆ ಕಡೆಗೆ ಹೋಗುವಾಗ ಎದ್ರಿದಾರರುಗಳಾದ ಪುರುಶೋತ್ತಮ, ಪವನ್, ಮೋಹನ, ಸುನಿಲ್ ಎಂಬವರು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಪುರುಶೋತ್ತಮನು ಪಿರ್ಯಾದಿಯ ಕೆನ್ನೆಗೆ ಮತ್ತು ಬೆನ್ನಿಗೆ ಕೈಯಿಂದ ಹೊಡೆದು ಕಾಲರ್ ಪಟ್ಟಿ ಹಿಡಿದು ದೂಡಿದನು, ಆತನ ಜೊತೆಯಲ್ಲಿದ್ದ ಪವನ್, ಮೋಹನ್, ಸುನಿಲ್ ರವರು ಕೂಡ ಪಿರ್ಯಾದಿಗೆ ಕೈಯಿಗಳಿಂದ ಹೊಡೆದು ಕಾಲಿನಿಂದ ತುಳಿದರು. ಆಗ ಅಲ್ಲಿಗೆ ಬಂದ ಅಬ್ದುಲ್ ನಾಸೀರ್ ಮತ್ತು ಅಬ್ದುಲ್ ರವೂಫ್ ರವರು ಪಿರ್ಯಾದಿಗೆ ಹೊಡೆಯುವುದನ್ನು ತಡೆದಾಗ ಅವರಿಗೂ ಕೈಗಳಿಂದ ಹೊಡೆದು ಹಲ್ಲೆ ನಡೆಸಿದ್ದು, ಆ ಸಮಯ ಪಕ್ಕದ ಮಸೀದಿಯಿಂದ ಕೆಲವರು ಬಂದಾಗ ಆರೋಪಿಗಳು ಪಿರ್ಯಾದಿಗೆ ಇನ್ನು ಮುಂದಕ್ಕೆ ಮುಸ್ಲಿಂರ ಜೊತೆ ಸೇರಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಪಿರ್ಯಾದಿ ಹಾಗೂ ಅಬ್ದುಲ್ ನಾಸೀರ್ ಮತ್ತು ಅಬ್ದುಲ್ ರವೂಫ್ ರವರು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಫತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.
5.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಆನಂದ ರವರು ತನ್ನ ತಾಯಿ ಭವಾನಿಯವರೊಂದಿಗೆ ದಿನಾಂಕ 07-01-2015 ರಂದು ಸಂಜೆ 7-00 ಗಂಟೆಗೆ 10-ನೇ ತೋಕೂರು ರಸ್ತೆಯ ಲೈಟ್ ಹೌಸ್ ನ ಬಳಿ ತಲುಪಿದಾಗ ಪಕ್ಷಿಕೆರೆ ಕಡೆಯಿಂದ ಹಳೆಯಂಗಡಿಯ ಕಡೆಗೆ ಅಂದರೆ ಫಿರ್ಯಾದಿದಾರರ ಹಿಂದಿನಿಂದ ಕೆ ಎ-25 ಝೆಡ್- 3618 ನೇ ನಂಬ್ರದ ಟೆಂಪೋ ಟ್ರಾಕ್ಸ್ ವಾಹನವನ್ನು ಅದರ ಚಾಲಕ ಹರೀಶ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮುಂದಿನಿಂದ ನಡೆದುಕೊಂಡು ಹೋಗುತ್ತಿದ್ದ ಅವರ ತಾಯಿ ಭವಾನಿ ಎಂಬವರಿಗೆ ಡಿಕ್ಕಿಪಡಿಸಿರುತ್ತಾರೆ. ಈ ಅಪಘಾತದ ಪರಿಣಾಮ ರಸ್ತೆಗೆ ಬಿದ್ದ ಭವಾನಿಯವರಿಗೆ ಹಣೆಗೆ, ಎಡಕೈ ಮತ್ತು ಎಡಕಾಲಿಗೆ ಗಂಭೀರ ತರದ ರಕ್ತ ಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22-12-2014 ರಂದು ಸಮಯ ಸುಮಾರು 11-30 ಗಂಟೆಯಿಂದ 12-15 ಗಂಟೆಯ ಮಧ್ಯೆ ಮಂಗಳೂರು ನಗರದ ಪಂಪುವೆಲ್ ನಲ್ಲಿರುವ ಒಮೆಗಾ ಆಸ್ಪತ್ರೆಯ ಎದುರುಗಡೆ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರಾದ ಶ್ರೀ ಮಂಜುನಾಥ್ ನಾಯಕ್ ರವರ ಬಾಬ್ತು ಚಾಸೀಸ್ ನಂಬ್ರ: MBLHA10EL8GE61385, ಇಂಜಿನ್ ನಂಬ್ರ:HA10EB8GE71114ರ KA 19X 9861ನೇ ನೋಂದಣಿ ಸಂಖ್ಯೆಯ 2008ನೇ ಮೊಡೆಲಿನ ಅಂದಾಜು ಮೌಲ್ಯ 37000/- ರೂ ಬೆಲೆ ಬಾಳುವ ನೀಲಿ ಮತ್ತು ಕಪ್ಪು ಬಣ್ಣದ ಹೀರೋ ಹೋಂಡಾ ಪ್ಯಾಶನ್ ಪ್ಲಸ್ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ದ್ವಿಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಸುತ್ತಮುತ್ತ ಹಾಗೂ ನಗರದ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ದಿನಾಂಕ ರಂದು ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.
7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.01.2015 ರಂದು ಸಮಯ ಸುಮಾರು ಸಂಜೆ 04.20 ಗಂಟೆಗೆ ಪಿರ್ಯಾದುದಾರರಾದ ಶ್ರೀ ಅಬ್ದುಲ್ ಖಾದರ್ ರವರು ಕಾರು ನಂಬ್ರ KA19-MD-9384 ರಲ್ಲಿ ಚಾಲಕರಾಗಿದ್ದುಕೊಂಡು ಕದ್ರಿ ಕಡೆಯಿಂದ ನಾಗುರಿ ಕಡೆಗೆ ಹೋಗುವರೇ ನಂತೂರು ಸರ್ಕಲ್ ತಲುಪುತ್ತಿದ್ದಂತೆ ಮುಂದಿನಿಂದ ಹೋಗುತ್ತಿದ್ದ ಲಾರಿ ನಂಬ್ರ KA19-AA-6105 ನೇಯು ಕಬ್ಬಿಣದ ಪೈಪುಗಳನ್ನು ಬಾಡಿಯಿಂದ ಹೊರಗೆ ನೇತಾಡುವಂತೆ ತುಂಬಿಸಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ವಾಮಂಜೂರು ಕಡೆಗೆ ಹೋಗಲು ಟರ್ನ್ ಮಾಡುತ್ತಿರುವಾಗ ಲಾರಿಯ ಹಿಂಭಾಗದಲ್ಲಿದ್ದ ಕಬ್ಬಿಣದ ಪೈಪುಗಳು ಕಾರಿನ ಬಲಭಾಗಕ್ಕೆ ತಾಗಿ ಕಾರಿನ ಬಲಭಾಗದ ಹಿಂದಿನ ಬಾಗಿಲು ಮತ್ತು ಮುಂದಿನ ಬಾಗಿಲು ಹಾಗೂ ಬಲಭಾಗದ ಹಿಂದಿನ ಬಾಡಿ ಜಖಂ ಆಗಿರುತ್ತದೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಚಂದ್ರಹಾಸ ಜೆ. ರವರು ಮಂಗಳೂರು ತಾಲೂಕು ಪಡೀಲ್‌ನಲ್ಲಿರುವ ಅಮೃತಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ದಿನಾಂಕ: 08.01.2015 ರಂದು ಪಿರ್ಯಾದಿದಾರರು ಕಾಲೇಜಿಗೆ ಬಂದಾಗ ಕಾಲೇಜು ಕಟ್ಟಡದ ಎಡಬದಿ, ಬಲಬದಿ ಹಾಗೂ ಮುಂಭಾಗದ 6 ಕಿಟಕಿಯ ಗಾಜುಗಳು ಪುಡಿಯಾಗಿರುವುದು ಕಂಡು ಬಂದಿರುವುದರಿಂದ ಪಿರ್ಯಾದಿದಾರರು ಕೂಡಲೇ ಕಾಲೇಜಿನ ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ನೋಡಲಾಗಿ ದಿನಾಂಕ: 08.01.2015 ರಂದು ಮುಂಜಾನೆ 3.50 ಗಂಟೆಯಿಂದ 4.00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಮೋಟಾರ್ ಸೈಕಲ್‌ನಲ್ಲಿ ಬಂದು ಕಾಲೇಜು ಕಟ್ಟಡದ ಕಿಟಕಿಗಳಿಗೆ ಕಲ್ಲುಬಿಸಾಡುತ್ತಿರುವುದು ಕಂಡು ಬಂದಿದ್ದು ಆದರೆ ಸದ್ರಿ ಮೋಟಾರ್ ಸೈಕಲ್‌ನ ಗುರುತು, ಸಂಖ್ಯೆಯಾಗಲಿ ದೃಶ್ಯಾವಳಿಯಲ್ಲಿ ಕಂಡು ಬಂದಿರುವುದಿಲ್ಲ ಮತ್ತು ಮೋಟಾರ್ ಸೈಕಲ್ನಲ್ಲಿ ಬಂದ ವ್ಯಕ್ತಿಗಳ ಮುಖಪರಿಚಯ ಸಿಕ್ಕಿರುವುದಿಲ್ಲ ಸಾರ್ವಜನಿಕ ಸೊತ್ತಾದ ಅಮೃತಾ ಕಾಲೇಜಿನ ಕಿಟಕಿ ಗಾಜುಗಳನ್ನು ಪುಡಿಮಾಡಿ ರೂ 24000/- ದಷ್ಟು ನಷ್ಟ ಉಂಟು ಮಾಡಿರುವುದಾಗಿದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.01.2015 ರ ರಾತ್ರಿ ಸುಮಾರು 9.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ. ಮೋಹನ್ ರಾವ್, ತಹಶೀಲ್ದಾರರು, ಮಂಗಳೂರು ತಾಲ್ಲೂಕು ರವರು ಖಚಿತ ಮಾಹಿತಿ ಮೇರೆಗೆ ಕಛೇರಿ ಸಿಬ್ಬಂದಿಗಳೊಂದಿಗೆ ಅಡ್ಯಾರ ಗ್ರಾಮದ ಸಹ್ಯಾದ್ರಿ ಕಾಲೇಜಿನ ಹಿಂಬದಿ ಇರುವ ನಿಷೇದಿತ ಮರಳು ದಕ್ಕೆಯಿಂದ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ಕದ್ದು ಒಯ್ಯುತ್ತಿದ್ದ KL-14-K-2219 ನೇ ಕ್ರಮಾಂಕದ ಲಾರಿಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಂಡು ಸದ್ರಿ ಮರಳು ಸಹಿತ ಲಾರಿಯನ್ನು ಚಾಲಕ ಹನೀಫ್ ಹೆಚ್ ಜಿ ಎಂಬಾತನ ಸಮೇತ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವಶಕ್ಕೆ ಒಪ್ಪಿಸಿದ್ದಾಗಿರುತ್ತದೆ.
No comments:
Post a Comment