ದಿನಾಂಕ 19.01.2015 ರ 15:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
2
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
1
|
ಹಲ್ಲೆ ಪ್ರಕರಣ
|
:
|
2
|
ಮನೆ ಕಳವು ಪ್ರಕರಣ
|
:
|
1
|
ಸಾಮಾನ್ಯ ಕಳವು
|
:
|
2
|
ವಾಹನ ಕಳವು
|
:
|
1
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
10
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಇತರ ಪ್ರಕರಣ
|
:
|
2
|
1.ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ನಸೀಮಾ ರವರು ಈಗ್ಗೆ 16 ವರ್ಷಗಳ ಹಿಂದೆ ಸುಲೈಮಾನ್ ಎಂಬುವನೊಂದಿಗೆ ಮದುವೆಯಾಗಿದ್ದು 4 ಜನ ಮಕ್ಕಳಿರುತ್ತಾರೆ. ಗಾಯಾಳುವಿಗೆ ಆಕೆಯ ಗಂಡ ಸಂಶಯದಿಂದ ನೋಡುತ್ತಾ ಹೊಡೆದು ಬೈದು ತೊಂದರೆ ಮಾಡುತ್ತಿದ್ದು ಈಗ್ಗೆ 5 ವರ್ಷಗಳ ಹಿಂದೆ ಆಕೆಯ ಗಂಡ ದುಬೈಗೆ ಹೋಗಿದ್ದು 5-6 ತಿಂಗಳಿಗೊಮ್ಮೆ ಬಂದು ಅನುಮಾನ ಪಟ್ಟು ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದು ನಿನ್ನನ್ನು ಬಿಡುವುದಿಲ್ಲ ಸಾಯಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದರು. ಹೆದರಿದ ಗಾಯಾಳು ತಾಯಿ ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದು ದಿನಾಂಕ 17-01-2015 ರಂದು ಸಂಜೆ 3-00 ಗಂಟೆಗೆ ಪಿರ್ಯಾದಿದಾರರು ಸ್ಟೇಟ್ ಬ್ಯಾಂಕ್ ಬಳಿ ಶಾಪಿಂಗ್ ಗಾಗಿ ಬಂದಾಗ ಅತ್ತಾವರದಲ್ಲಿ ಕೆಲಸ ಮಾಡುತ್ತಿರುವ ಪಿರ್ಯಾದಿದಾರರ ತಾಯಿ ಹಾಗೂ ಚಿಕ್ಕಮ್ಮ ನವರು ಸಹ ಸ್ಟೇಟ್ ಬ್ಯಾಂಕ್ ಬಳಿ ಬಂದಿದ್ದು ಅವರುಗಳು ಮೀನು ಮಾರ್ಕೆಟ್ ಬಳಿಯಿರುವ ಒಂದು ಜ್ಯೂಸ್ ಅಂಗಡಿಗೆ ಹೋಗಿ ಜ್ಯೂಸ್ ಕುಡಿದು ಹೊರ ಬರುತ್ತಿರುವಾಗ ಗಾಯಾಳುವಿನ ಗಂಡ ಸಡಾನ್ ಆಗಿ ಬಂದು ಗಾಯಾಳುವಿನ ಹೊಟ್ಟೆಗೆ ಚೂರಿಯಿಂದ ತಿವಿಯಲು ಬಂದಾಗ ಕೂಡಲೆ ಗಾಯಾಳು ತನ್ನ ಎಡ ಗೈಯನ್ನು ಅಡ್ಡ ತಂದಾಗ ಗಾಯಾಳುವಿನ ಎಡಗೈಗೆ ತಿವಿದ ಗಾಯಾವಾಯಿತು ಗಾಯಾಳು ಹೆದರಿ ಜ್ಯೂಸ್ ಅಂಗಡಿಯ ಒಳಗೆ ಓಡಿದಾಗ ಅವನು ಗಾಯಾಳುವಿನ ಹಿಂದೆಯೆ ಓಡಿ ಬಂದು ಗಾಯಾಳುವಿನ ಬಲಭುಜದ ಹಿಂಬದಿ ಬೆನ್ನಿಗೆ ತಿವಿದು ಬಿಡಿಸಲು ಬಂದ ಗಾಯಾಳುವಿನ ತಾಯಿಗೆ ಕುತ್ತಿಗೆ ಮತ್ತು ಕೈಗೆ ಚೂರಿಯಿಂದ ತಿವಿದಿರುತ್ತಾನೆ ಆಗ ಸಮಯ ಸಂಜೆ ಸುಮಾರು 4-30 ಗಂಟೆಯಾಗಿರಬಹುದು.
2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ ದ.ಕ ಕಟೀಲು 4ನೇ ಮೇಳದ ಯಕ್ಷಗಾನ ಬಯಲಾಟವು ದಿನಾಂಕ:02-01-2015 ರಂದು ಕಿನ್ನಿಗೋಳಿಯ ರಾಮ ಭಜನ ಮಂದಿರದ ಬಳಿ ನಡೆಯಲಿಕ್ಕಿದ್ದು, ಸದ್ರಿ ಯಕ್ಷಗಾನದದ ಸಾಮಾನುಗಳನ್ನು ರಾಮ ಮಂದಿರದ ಒಳಗಡೆ ಇರುವ ಸಭಾಭವನದ ಒಳಗಡೆ ಇಟ್ಟು ಇದರ ಜೊತೆ ಕಾಣಿಕೆ ಡಬ್ಬಿಯನ್ನು ಕೆಲಸಗಾರರು ಸಮಯ 08-30 ಗಂಟೆಗೆ ಇಟ್ಟಿದ್ದು, ರಾತ್ರಿ ದೇವರ ಪೂಜಾ ಸಮಯ ರಾತ್ರಿ 20-30 ಗಂಟೆಗೆ ಕಾಣೆಕೆ ಡಬ್ಬಿಯನ್ನು ನೋಡಲಾಗಿ ಕಾಣದೆ ಎಲ್ಲ ಕಡೆ ಹುಡುಕಾಡಿ ಕೆಲಸಗಾರರಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಸದ್ರಿ ಕಾಣಿಕೆ ಡಬ್ಬಿಯನ್ನು ರಾಮ ಮಂದಿರದ ಸಭಾಭವದಲ್ಲಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಡಬ್ಬಿಯಲ್ಲಿ ಸುಮಾರು 11,000/- ರೂಪಾಯಿ ಇದ್ದಿರಬಹುದಾಗಿದೆ.
3.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-01-2015 ರಂದು ಸಂಜೆ ವೇಳೆಗೆ ಪಿರ್ಯಾದಿದಾರರಾದ ಶ್ರೀ ಕೆ. ವಾಸು ರವರು ಹಂಪನ್‌ಕಟ್ಟೆಯಿಂದ ಉರ್ವಾಸ್ಟೋರ್ ಕಡೆಗೆ ಹೋಗುವ ಬಸ್ ರೂಟ್ ನಂಬ್ರ 7 ನೇ ಪೋಪುಲ್ಲರ್ ಬಸ್ಸನ್ನು ಹತ್ತಿ, ಬಸ್ಸಿನ ಬಲಬದಿಯ ಹಿಂಬದಿಯ ಟಯರ್ ಮೇಲ್ಗಡೆಯ (ಗಾರ್ಡ್) ಸೀಟಿನಲ್ಲಿ ಕುಳಿತುಕೊಂಡಿದ್ದು, ಬಸ್ಸನ್ನು ಚಾಲಕರು ಅತೀ ವೇಗವಾಗಿ ಚಲಾಯಿಸುತ್ತಾ ಸಮಯ ಸಂಜೆ 5:20 ಗಂಟೆಗೆ ಚಿಲಿಂಬಿಯ ಸಾಯಿ ಮಂದಿರದ ಎದುರುಗಡೆ ರಸ್ತೆಗೆ ಅಳವಡಿಸಿರುವ ಹಂಪ್ಸ್ನ ಬಳಿ ಒಮ್ಮೆಲೆ ಬ್ರೇಕ್ ಹಾಕಿದಾಗ, ಪಿರ್ಯಾದಿದಾರರು ಕುಳಿತುಕೊಂಡಿದ್ದ ಸೀಟಿನ ಕೆಳಭಾಗದ ಟಯರ್ ಸ್ಪೋಟಗೊಂಡು, ಟಯರ್ ಮೇಲೆ ಅಳವಡಿಸಿದ ತಗಡು(ಗಾರ್ಡ್) ಮುರಿದು ಪಿರ್ಯಾದಿದಾರರ ಬಲಕಾಲು ತಗಡಿನ ಒಳಗೆ ಸಿಲುಕಿಕೊಂಡು, ಪಾದದ ಅಡಿಭಾಗಕ್ಕೆ ಮತ್ತು ಬಲಕಾಲಿನ ಹಿಮ್ಮಡಿಗೆ ತೀವ್ರ ತರಹದ ರಕ್ತ ಗಾಯ ಉಂಟಾದವರನ್ನು, ಬಸ್ಸಿನಲ್ಲಿದ್ದ ಆಕ್ಸೆಲ್ ಮತ್ತು ಲಿವರ್ನ ಸಹಾಯದಿಂದ ತಗಡನ್ನು ಅಗಲಗೊಳಿಸಿ ಪಿರ್ಯಾದಿದಾರರ ಕಾಲನ್ನು ಹೊರ ತೆಗೆದು ವಿಷಯವನ್ನು ಪಿರ್ಯಾದಿದಾರರ ಮಗನಾದ ಶ್ರೀಜಿತ್ನಿಗೆ ತಿಳಿಸಿ, ಅವರು ಬಂದ ಬಳಿಕ ಒಂದು ಆಂಬುಲೆನ್ಸ್ನಲ್ಲಿ ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಪಿರ್ಯಾದಿದಾರರು ಅಪಘಾತ ಉಂಟು ಮಾಡಿದ ಬಸ್ಸಿನ ನೋಂದಣಿ ನಂಬ್ರವನ್ನು ನೋಡಿರುವುದಿಲ್ಲ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ; 16-01-2015 ರಂದು ಬೆಳಗಿನ ಸಮಯ 11-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರವಿಚಂದ್ರ ರವರು ಕೆಲಸ ನಿಮಿತ್ತ ಹೋಗುವರೇ ಮನೆಯ ಗೇಟಿನ ಬಳಿ ತಲುಪಿದಾಗ, ಪಿರ್ಯಾದಿದಾರರ ಪರಿಚಯದ ಸೂರಜ್ ಮತ್ತು ಆತನ ಜೊತೆಯಲ್ಲಿದ್ದ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದು ಅವರ ಪೈಕಿ ಸೂರಜ್ ನು ಆತನ ಕೈಯಲ್ಲಿದ್ದ ಸ್ಟೀಲ್ ನ ಕಡಗದಿಂದ ಪಿರ್ಯಾದಿದಾರರ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮ ಪಿರ್ಯಾದಿದಾರರ ಮೂಗಿನ ಕೆಳಭಾಗ ರಕ್ತ ಗಾಯವಾಗಿ ಪ್ರಜ್ಞೆ ತಪ್ಪಿದಂತಾಗಿದ್ದು, ಆ ಸಮಯ ಸೂರಜ್ ನು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 39 ಗ್ರಾಂ ತೂಕದ ಬಂಗಾರದ ರೋಪ್ ಚೈನನ್ನು ಬಲಾತ್ಕಾರವಾಗಿ ಎಳೆದು ಪರಾರಿಯಾಗಿರುತ್ತಾರೆ. ಸದ್ರಿ ಸಮಯ ಪಿರ್ಯಾದಿದಾರರ ತಂದೆ ಊರಿನಲ್ಲಿ ಇಲ್ಲದೇ ಇದ್ದು, ಅಲ್ಲದೇ ಪಿರ್ಯಾದಿದಾರರು ತನಗೆ ಉಂಟಾದ ಗಾಯದ ನೋವಿನಿಂದ ಏನು ಮಾಡಬೇಕೆಂದು ತೋಚದೇ ಇದ್ದು, ದಿನಾಂಕ 17-012015 ರಂದು ಪಿರ್ಯಾದಿದಾರರು ತನ್ನ ತಂದೆಯೊಂದಿಗೆ ಚರ್ಚಿಸಿ ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14/01/2015 ರಂದು ಮದ್ಯಾಹ್ನ ಸುಮಾರು 12:00 ನಗರದ ಬಾಲ ಯೆಸು ಚರ್ಚ ದ್ವಾರದ ಎದುರು ಒಂದು ಜೀಪನ್ನು ಅದರ ಚಾಲಕ ಮರೋಳಿ ಕಡೆಯಿಂದ ನಂತೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕಜತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದುದಾರರಾದ ಶ್ರೀಮತಿ ಅನ್ನಿ ಅಗಷ್ಟಿನ್ ರವರ ಗಂಡ ವಿ ಸಿ ಅಗಸ್ಟಿನ್ ಎಂಬುವರಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿ ಸಿ ಅಗಸ್ಟಿನದ ಅವರ ಎಡಕಾಲಿನ ಹೆಬ್ಬೆರಳಿಗೆ ಎಡಕೈಗೆ ಎದೆಗೆ ಮತ್ತು ತಲೆಗೆ ಗಾಯವಾಗಿದ್ದು ಅಪಘಾತ ಪಡಿಸಿದ ಆರೋಪಿಯು ಅದೆ ಜೀಪಿನಲ್ಲಿ ಗಾಯಾಳುವನ್ನು ಸೀಟಿ ಆಸ್ಪತ್ರೆಗ ಸಾಗಿಸಿದ್ದು ಅಲ್ಲಿ ಸಣ್ಣ ಪ್ರಮಾಣದ ಗಾಯವೆಂದು ಪ್ರಥಮ ಚಿಕಿತ್ಸೆ ಪಡೆದು ಕೇಸು ಅಗತ್ಯವಿಲ್ಲ ಎಂದು ಮನೆಗೆ ತೆರಳಿದ್ದು, ದಿನಾಂಕ 16/01/2015 ರಂದು ರಾತ್ರಿ ಪಿರ್ಯಾದುದಾರರ ಗಂಡನಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಬಗ್ಗೆ ಎಸ್ ಸಿ ಎಸ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಪರಿಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದರಿಂದ ಪಿರ್ಯಾದುದಾರರು ದಿನಾಂಕ 17/01/2015 ರಂದು ದೂರು ನೀಡಿದ್ದಾಗಿದೆ. ಆರೋಪಿಯು ಅಪಘಾತದ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಿರುವುದಿಲ್ಲ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2015 ರಂದು ಬೆಳಗ್ಗಿನ ಜಾಗ 03-30 ಗಂಟೆಯಿಂದ 05-00 ಗಂಟೆ ಮದ್ಯೆ ಪಿರ್ಯಾದಿದಾರರಾದ ಶ್ರೀಮತಿ ಮಹಾದೇವಿ ರವರ ಮನೆಯ ಅಂಗಳದಿಂದ ಸುಮಾರು 3 ವರ್ಷ ಪ್ರಾಯದ ಸುಮಾರು 5000/- ರೂ ಬೆಲೆ ಬಾಳುವ ಕರು ಹಾಕಿದ ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಈ ಬಗ್ಗೆ ಕಾಣೆಯಾದ ದನವನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇರುವುದರಿಂದ ಪತ್ತೆ ಮಾಡಿಕೊಡುವರೇ ವಿಳಂಭವಾಗಿ ದೂರು ನೀಡಿರುವುದಾಗಿದೆ.
7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಸತೀಶ್ ಎಂಬವರು ಅವರ ಬಾಬ್ತು ಮೋಟಾರ್ ಸೈಕಲ್ ನಂ ಕೆ ಎ 19 ವೈ 8145 ನೇದರಲ್ಲಿ ತನ್ನ ಮನೆಯಿಂದ ಪಿರ್ಯಾದಿದಾರರು ಮತ್ತು ಹೆಂಡತಿ ವಿಜಯ, ಮಗ ಚರಣ್ ನೊಂದಿಗೆ ಕುಳ್ಳಿರಿಸಿಕೊಂಡು ಬೆಳುವಾಯಿ ಯಿಂದ ಮುಡಬಿದ್ರೆ ಗೆ ಹೋಗುವ ಸಮಯ ಮಾರ್ಪಡಿ ಗ್ರಾಮದ ಅಲಂಗಾರ್ ಅಬ್ಬಾಸ್ ಮಿಲ್ ಎಂಬಲ್ಲಿಗೆ ಮದ್ಯಾಹ್ನ 12.30 ಗಂಟೆಗೆ ತಲುಪಿದಾಗ ಒಳರಸ್ತೆಯಿಂದ ಕೆ ಎ 19 ಎಂ ಡಿ 2204 ಕಾರನ್ನು ಅತೀವೇಗ, ನಿರ್ಲಕ್ಷತೆಯಿಂದ ಚಲಾಯಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ರಸ್ತೆಗೆ ಬಿದ್ದು ಪಿರ್ಯಾದಿಯ ಬಲಕಾಲಿನ ಕೋಲು ಕಾಲಿಗೆ ಗುದ್ದಿದ ಗಾಯ ಬಲ ಬುಜಕ್ಕೆ ರಕ್ತಗಾಯ ಬಲಕೆನ್ನೆಯ ಮೇಲೆ ತರಚಿದ ಗಾಯ ವಾಗಿರುತ್ತದೆ ಪಿರ್ಯಾದಿದಾರರ ಹೆಂಡತಿಯ ಬಲ ಕಾಲಿನ ಮಣಿಗಂಟಿಗೆ ಗುದ್ದಿದ ಗಾಯವಾಗಿರುತ್ತದೆ ಪಿರ್ಯಾದಿದಾರರ ಮಗ ಚರಣ್ ಎಂಬವನಿಗೆ ಬಲ ಕಾಲಿಗೆ ಮತ್ತು ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ ,ಗಾಯಾಳುಗಳು ಎಜೆ ಅಸ್ಪತ್ರಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.
8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18/01/2015 ರಂದು ಸಮಯ ಸುಮಾರು ಮದ್ಯಾಹ್ನ 12:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಪಿ.ಎ. ಮುಬೀನ್ ರವರು ತಮ್ಮ ಬಾಬ್ತು ಕಾರು ನಂಬ್ರ KA-19-MD-6200 ನೇ ದರಲ್ಲಿ ಚಾಲಕರಾಗಿದ್ದುಕೊಂಡು ಮಂಗಳೂರು ನಗರದ AJ ಆಸ್ಪತ್ರೆ ಕಡೆಯಿಂದ ನಂತೂರು ಕಡೆಗೆ ಹೊಗುತ್ತ KPT ಜಂಕ್ಷನನಲ್ಲಿ ಕಾರು ನಂಬ್ರ KA-19-MC-6266 ನೇ ದನ್ನು ಅದರ ಚಾಲಕರು ಯೆಯ್ಯಾಡಿ ಕಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಎಡಬದಿಯ ಬಾಡಿ, ಬಂಪರ್, ಜಖಂಗೊಂಡಿರುತ್ತದೆ. ಈ ಅಫಘಾತದಿಂದ ಯಾವುದೆ ತರಹದ ಗಾಯಗಳಾಗಿರುವುದಿಲ್ಲ.
9.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-01-2015 ರಂದು ಸಂಜೆ 4-00 ಗಂಟೆಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ ಕೈಕಂಬ ಪೇಟೆಯಲ್ಲಿರುವ ಸಾರ್ವಜನಿಕ ಬಸ್ಸು ತಂಗುದಾಣದ ಎದುರು ತನ್ನ ಕಾರಿಗೆ ಸ್ಥಳಾವಕಾಶ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆರೋಪಿ ಸುಧೀರ್ ಎಂಬಾತನು ತಕರಾರು ಮಾಡಿ, ತನ್ನ ಕೆಎ 19 ಎಂಇ 4012 ನಂಬ್ರದ ಕಾರನ್ನು ಪಿರ್ಯಾದಿದಾರರಾದ ಶ್ರೀ ಹರ್ಷಲ್ ಮೊನಾಲ್ ರವರ ಕಾರಿಗೆ ಅಡ್ಡವಾಗಿ ತಂದು ನಿಲ್ಲಿಸಿ ತಡೆದಾಗ, ಅಲ್ಲಿಗೆ ಬಂದ ಆರೋಪಿ ವಾಮನ ಎಂಬಾತನೂ ಕೂಡಾ ಆತನೊಂದಿಗೆ ಸೇರಿ ನನಗೆ ಅವಾಚ್ಯವಾಗಿ ಬೈದು, ನಿನಗೆ ಭಾರೀ ಅಹಂಕಾರ ಉಂಟಾ? ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಸಿ ಹೋಗಿರುತ್ತಾರೆ.
10.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16.01.2015 ರಂದು ಸಂಜೆ ಸುಮಾರು 7:30 ಗಂಟೆಗೆ ಮಂಗಳೂರು ತಾಲೂಕು ತೋಡಾರು ಗ್ರಾಮದ ನೇರಳ ಕಟ್ಟೆ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಲತಾ ರವರ ಗಂಡ ಶ್ರೀನಿವಾಸ ಆಚಾರ್ಯ ಎಂಬವನು ವಿಪರೀತ ಶರಾಬು ಕುಡಿದು ಮನೆಗೆ ಬಂದು ಪಿರ್ಯಾದಿದಾರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಪಿರ್ಯಾದಿಯ ಜುಟ್ಟನ್ನು ಹಿಡಿದು ಬಗ್ಗಿಸಿ ಬೆನ್ನಿಗೆ ಗುದ್ದಿದಲ್ಲದೆ, ಮನೆಯ ಒಳಗೆ ಇದ್ದ ಕಸದ ಪೊರಕೆಯಿಂದ ಹೊಡೆದು ನಂತರ "ನೀನು ಬೇರೆಯವರ ಮಾತು ಕೇಳಿ ಪೊಲೀಸ್ ಕಂಪ್ಲೇಂಟ್ ಕೊಡುತ್ತಿಯಾ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ" ಎಂದು ಹೇಳಿ ಜೀವ ಬೆದರಿಕೆ ಹಾಕಿರುತ್ತಾರೆ.
12.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18/01/2015 ರಂದು ಸಮಯ ಸುಮಾರು ಮದ್ಯಾಹ್ನ 14:55 ಗಂಟೆಗೆ ಫಿರ್ಯಾದುಧಾರರಾದ ಶ್ರೀ ದೇವದಾಸ್ ಯು. ರವರು ತಮ್ಮ ಬಾಬ್ತು ಆಟೋ ರಿಕ್ಷಾ ನಂಬ್ರ KA-19-B-5973 ನೇ ದರಲ್ಲಿ ಚಾಲಕನಾಗಿ ಪ್ರಯಾಣಿಕ ಚಂದ್ರಶೇಖರ ಎಂಬುವರನ್ನು ಕುಳ್ಳಿರಿಸಿಕೊಂಡು ಬಲ್ಠಠದಿಂದ ಕೆಳಗೆ ಅಪ್ಪರ್ ಬೆಂದೂರ್ ಹಾರ್ಟಿಕಲ್ಚರ್ ಸರ್ಕಲ್ ಕಡೆಗೆ ಬರುತ್ತ ಮಾಂಡೋವಿ ಮೋಟಾರ್ಸ ಬಳಿ ತಲುಪಿದಾಗ ಕಾರು ನಂಬ್ರ KA-19-MA-4059 ನೇ ದನ್ನು ಅದರ ಚಾಲಕ ಗುರುರಾಜ ಉಪಾದ್ಯಾಯ ಎಂಬಾತನು ಬಲ್ಮಠ ಕಡೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂಧ ಚಲಾಯಿಸಿಕೊಂಡು ಬಂದು ಫಿರ್ಯಾದಾರರ ಆಟೋ ರಿಕ್ಷಾಕ್ಕೆ ಹಿಂಬದಿಗೆ ಡಿಕ್ಕಿ ಮಾಡಿದ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿ ಡಾಮಾರು ರಸ್ತೆಗೆ ಬಿದ್ದು ಪ್ರಯಾಣಿಕ ಚಂದ್ರಶೇಖರ ಅವರಿಗೆ ಎಡಕಾಲಿನ ಪಾದಕ್ಕೆ ರಕ್ತ ಗಾಯವಾಗಿದ್ದು ಹಾಗೂ ಎಡಕಾಲಿನ ಕಿರುಬೆರಳಿಗೆ ಮೂಳೆ ಮುರಿತದ ಗಾಯವಾಗಿ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ, ಫಿರ್ಯಾದುದಾರರಿಗೆ ಸಣ್ಣ ಪ್ರಮಾಣದ ಗಾಯವಾಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.
13.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-01-2014 ರಂದು ಸೂರಿಂಜೆಯ ಇಸ್ಮಾಯಿಲ್ ಎಂಬವರು ನೀರುಡೆ ಎಂಬಲ್ಲಿಂದ ಸಾಕಲು 3 ಜಾನುವಾರುಗಳನ್ನು ಖರೀದಿಸಿದ್ದು, ಅವುಗಳನ್ನು ತನ್ನ ಪರಿಚಯದ ರೋನಾಲ್ಡ್ ಡೀಸೋಜಾ ಎಂಬವರ ಬಾಬ್ತು ಟಾಟಾ ಮೊಬೈಲ್ ನಂ ಕೆಎ 19, 2799 ರ ಹಿಂದಿನ ತೆರೆದ ಗಾಡಿಯಲ್ಲಿ ರೋನಾಲ್ಡ್ ಡಿಸೋಜಾ ನ ಸಹಾಯದಿಂದ ಹಿಂಸಾತ್ಮಕವಾಗಿ ತುಂಬಿಸಿಕೊಂಡು ನೀರುಡೆಯಿಂದ ಸೂರಿಂಜೆಗೆ ಸಾಗಾಟ ಮಾಡುತ್ತಿದ್ದುದ್ದನ್ನು 16-30 ಗಂಟೆಗೆ ಎಕ್ಕಾರು ಎಂಬಲ್ಲಿ ಸಾರ್ವಜನಿಕರು ಸದ್ರಿ ವಾಹನವನ್ನು ತಡೆದು ನಿಲ್ಲಿಸಿರುವುದಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪಿರ್ಯಾದಿದಾರರಾದ ಬಜ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕ ಶ್ರೀ ರಮೇಶ್ ಹೆಚ್. ಹಾನಾಪುರ ರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ರೋನಾಲ್ಡ್ ಡಿಸೋಜಾ ಜಾನುವಾರು ಸಾಗಾಟ ಮಾಡಲು ತನ್ನ ಬಾಬ್ತು ವಾಹನಕ್ಕೆ ಯಾವುದೇ ಪರವಾನಗಿ ಹೊಂದದೇ ಇಸ್ಮಾಯಿಲ್ ಜೊತೆ ವಾಹನದ ಬಾಡಿಯಲ್ಲಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದುದ್ದಾಗಿದೆ.
14.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:18/01./2015 ರಂದು ಮಧ್ಯಾಹ್ನ 13:50 ಗಂಟೆಗೆ ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ದೂಮಾವತಿ ದ್ವಾರದ ಬಳಿ ಪಿರ್ಯಾದಿದಾರರಾದ ಶ್ರೀ ವಿನಯ್ ಎನ್. ರವರು ಮತ್ತು ಅವರ ಗೆಳತಿಯಾದ ಕವಿತಾ ಎಂಬವಳನ್ನು ಸಹಸವಾರರಾಗಿ ಕುಳ್ಳರಿಸಿ ಬಜಪೆ ಕಡೆಯಿಂದ ಕೈಕಂಬದ ಕಡೆಗೆ ಮೋಟರ್ ಸೈಕಲ್ ಕೆಎ 19 ಇಸಿ 1568 ನೇ ದರಲ್ಲಿ ಚಲಾಯಿಸಿಕೊಂಡು ಹೋಗುವಾಗ ಅವರ ಎದುರೆಗಡೆಯಿಂದ ಅಂದರೆ ಕೈಕಂಬದ ಕಡೆಯಿಂದ ಬಜಪೆ ಕಡೆಗೆ ಕಾರ್ ನಂಬ್ರ: ಕೆಎ 19 ಎಮ್ ಎ: 4967 ಅದರ ಚಾಲಕನು ಅತಿ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿ ಹಾಗೂ ತೀರ ಬಲ ಬದಿಗೆ ಬಂದು ನನ್ನ ಬೈಕಿಗೆ ಡಿಕ್ಕಿ ಹೊಡೆದುದರ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತರಚಿದ ಗಾಯವಾಗಿದ್ದು ಹಾಗು ಅವರ ಜೊತೆಯಲ್ಲಿದ್ದ ಕವಿತಾಳಿಗೆ ತೀವ್ರ ಸ್ವರೂಪದ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ರಕ್ತ ಬರುವ ಗಾಯವಾಗಿದ್ದು ಅಲ್ಲಿಯೇ ಇನ್ನೂಂದು ಬದಿಯಿಂದ ಬರುತ್ತಿದ್ದ ಮೋಟರ್ ಸೈಕಲ್ ನಂಬ್ರ: ಕೆಎ: 19 ಇಎಪ್ 7749 ನೇ ಸವಾರ ಹಾಗೂ ಸಹಸವಾರಾದ ರವಿ ಮತ್ತು ಸೀತಾರಾಮ ಎಂಬವರಿಗೆ ರಕ್ತ ಬರುವ ತೀವ್ರ ಸ್ವರೂಪದ ಗಾಯವಾಗಿದ್ದು ಕೂಡಲೇ ಅವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಕಾರೊಂದರಲ್ಲಿ ಮಂಗಳೂರು ಎ ಜೆ ಆಸ್ಪತ್ರೆಗೆ ಹೊರ ರೋಗಿ ಹಾಗೂ ಒಳರೋಗಿಯಾಗಿ ದಾಖಲು ಮಾಡಿದ್ದಾಗಿದೆ.
15.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಪಂಜಿಮುಂಡೇಲು ಹೌಸ್ ಎಂಬಲ್ಲಿ ವಾಸವಾಗಿರುವ ಫಿರ್ಯಾದಿದಾರರಾದ ಶ್ರೀ ಹರೀಶ್ ಶೆಟ್ಟಿ ರವರ ಮನೆಯ ಹಟ್ಟಿಯಲ್ಲಿ ಒಟ್ಟು 6 ದನಗಳಿದ್ದು, ಅದರಲ್ಲಿ ಒಂದು ದನಕ್ಕೆ ಸೌಖ್ಯವಿಲ್ಲದ ಕಾರಣ ದಿನಾಂಕ 16-01-2015 ರಂದು ರಾತ್ರಿ ಸುಮಾರು 11.30 ಗಂಟೆಗೆ ಔಷಧಿ ಕೊಡಲು ಹೋದಾಗ ಎಲ್ಲಾ ದನಗಳಿದ್ದು, ದಿನಾಂಕ 17-01-2015 ರಂದು ಬೆಳಿಗ್ಗೆ 4.00 ಗಂಟೆಗೆ ದನಗಳ ಹಾಲು ಕರೆಯಲು ಹಟ್ಟಿಗೆ ಹೋದಾಗ ಹಟ್ಟಿಯಲ್ಲಿ ಕಟ್ಟಲಾಗಿದ್ದ ಕಪ್ಪು ಬಿಳಿ ಬಣ್ಣದ ಸುಮಾರು 5 ವರ್ಷ ಪ್ರಾಯದ ದನವು ಕಾಣಿಸದೇ ಇದ್ದು, ಸದ್ರಿ ದನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ದನದ ಮೌಲ್ಯ ಸುಮಾರು 25,000/- ಆಗಿರುವುದಾಗಿದೆ.
16.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.01-2015 ರಂದು ಬೆಳಿಗ್ಗೆ ಸುಮಾರು 05.30 ಗಂಟೆಗೆ ಚೆಂಬುಗುಡ್ಡೆ ಕಡೆಯಿಂದ ಮಂಗಳೂರು ಕಡೆಗೆ ಮೋಟಾರ್ ಬೈಕ್ ನಂಬ್ರ ಕೆಎ-19-ಇಹೆಚ್-8007 ನೇಯದನ್ನು ಇಜಾಜ್ ರವರು ಸವಾರರಾಗಿಯೂ, ಪಿ.ಎಂ.ಹುಸ್ಮಾನ್ ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಚೆಂಬುಗುಡ್ಡೆ ಎಂಬಲ್ಲಿಗೆ ತಲುಪುತ್ತಿರುವಾಗ ತೊಕ್ಕೊಟ್ಟು ಕಡೆಯಿಂದ ಕೆಎ.-19-ಡಿ-6706ನೇ ಟಾಟಾ ಸುಮೋವನ್ನು ಅದರ ಚಾಲಕನು ಬೇರೊಂದು ವಾಹನವನ್ನು ಓವರ್ಟೇಕ್ ಮಾಡಿಕೊಂಡು ತೀರಾ ಬಲಬದಿಗೆ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಮಾಡಿದ ಪರಿಣಾಮ ಸವಾರ ಮತ್ತು ಸಹಸವಾರ ರಸ್ತೆಗೆ ಬಿದ್ದು, ಸಹಸವಾರನ ತಲೆಯ ಹಿಂಬದಿಗೆ ರಕ್ತಗಾಯ, ಎದೆಗೆ ಗುದ್ದಿದ ಗಾಯವಾಗಿರುತ್ತದೆ. ಮೋಟಾರ್ ಬೈಕ್ ಸವಾರ ಇಜಾಜ್‌ಗೆ ಎಂಬವನಿಗೆ ತಲೆಗೆ ತೀವೃತರದ ರಕ್ತ ಗಾಯ, ಕಣ್ಣಿನ ಎರಡೂ ಬದಿಗೆ, ದವಡೆಗೆ, ಎದೆಗೆ, ಹೊಟ್ಟೆಗೆ, ಕಾಲಿಗೆ ತೀವೃತರದ ರಕ್ತಗಾಯವಾಗಿರುತ್ತದೆ. ಕೆಎ-19-ಡಿ-6706ನೇದರ ಟಾಟಾ ಸುಮೋ ವಾಹನದ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದೇ ಈ ಅಪಘಾತಕ್ಕೆ ಕಾರಣವಾಗಿರುತ್ತದೆ.
17.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-01-2015 ರಂದು ಮದ್ಯಾಹ್ನ 03-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಸಂಕೋಳಿಗೆ ಕೂಡುವ ರಸ್ತೆಯ ಬಳಿ ತಲಪಾಡಿ ಕಡೆಯಿಂದ ತೊಕ್ಕೊಟ್ಟು ಕಡೆಗೆ ಕೆಎ-19-ಎಮ್‌ಎ-7554ನೇ ಕಾರಿನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಾದ ಶ್ರೀ ಇರ್ಷಾದ್ ಇಬ್ರಾಹಿಂ ಉಚ್ಚಿಲ ರವರು ಸವಾರಿ ಮಾಡಿಕೊಂಡು ಹೊಗುತ್ತಿದ್ದ ಕೆಎ-20-ಡಬ್ಲೂ-5581ನೇ ಮೊಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮೊಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡಗೈ ಮಣಿಗಂಟಿಗೆ ರಕ್ತಗಾಯ, ಎರಡೂ ಕಾಲಿನ ಮಣಿಗಂಟಿಗೆ ಗುದ್ದಿದ ನೋವು ಉಂಟಾಗಿದ್ದು ಈ ಬಗ್ಗೆ ಗಾಯಾಳು ಪಿರ್ಯಾದುದಾರರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಗಾಯಾಳುವಿನ ಚಿಕಿತ್ಸೆಯ ವೆಚ್ಚವನ್ನು ಬರಿಸುವುದಾಗಿ ಕಾರು ಚಾಲಕ ಒಪ್ಪಿಕೊಂಡಿದ್ದು ಆದರೆ ಆರೋಪಿ ಕಾರು ಚಾಲಕ ಚಿಕಿತ್ಸೆಯ ವೆಚ್ಚವನ್ನು ಭರಿಸದೇ ಇದ್ದುದರಿಂದ ಪಿರ್ಯಾದುದಾರರು ತಡವಾಗಿ ದೂರು ನೀಡಿರುವುದಾಗಿದೆ.
18.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-01-2015 ರಂದು ರಾತ್ರಿ 22-45 ಗಂಟೆಯ ಸಮಯ ಪಿರ್ಯಾದುದಾರರಾದ ಶ್ರೀ ಸುನಿಲ್ ರವರು ಮತ್ತು ಅವರ ಸ್ನೇಹಿತ ಮುಖೇಶ ನಾಯಕ್ ಎಂಬುವರು ಆಟೋ ರಿಕ್ಷಾದಲ್ಲಿ ತಮ್ಮ ಮನೆಗೆ ಹೋಗುತ್ತಿರುವಾಗ ಕುಂಪಳ ಕ್ರಾಸ್ ಬಳಿಯಲ್ಲಿ ಹಳೆಯ ದ್ವೇಷದ ಕಾರಣದಿಂದ ಮುಖೇಶ್ ಎಂಬುವವರನ್ನು ಮುಗಿಸಿ ಬಿಡುವ ಉದ್ದೇಶದಿಂದ ಬೀಯರ್ ಬಾಟ್ಲಿ, ಕಲ್ಲುಗಳನ್ನು ಹಿಡಿದುಕೊಂಡು ಅಕ್ರಮಕೂಟ ಸೇರಿದ್ದ ಆರೋಪಿಗಳಾದ ಕಿರಣ, ರಾಜೇಶ್ ಮತ್ತು ಇತರರು ಮುಖೇಶರವರ ತಲೆಗೆ ಕಲ್ಲುಗಳಿಂದ ಮತ್ತು ಬಿಯರ್ ಬಾಟ್ಲಿಯಿಂದ ಹೊಡೆದು, ಬಿಯರ್ ಬಾಟ್ಲಿಯಿಂದ ಹೊಟ್ಟೆಗೆ ತಿವಿದು ಗಂಬೀರ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೆ ತಡೆಯಲು ಹೋದ ಪಿರ್ಯಾದುದಾರರಿಗೆ ಕೈಯಿಂದ ಹೊಡೆದು ಗಾಯಗೊಳಿಸಿರುತ್ತಾರೆ.
19.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-01-2015 ರಂದು, ಮಂಗಳೂರು ತಾಲೂಕು ಮುನ್ನೂರು ಗ್ರಾಮದ ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಎದುರು ಪಿರ್ಯಾದುದಾರಾದ ಶ್ರೀ ಆಶೋಕ ಐನಾಫೂರ ಪಿಸಿ 566 ಮತ್ತು ಹೆಚ್ಜಿ 24 ಶ್ರೀ. ಖಾಲಿದ್ರವರು ಅದೇಶದಂತೆ ರಾತ್ರಿ ಬ್ಯಾರಿಕೇಡ್ ನಿರ್ಮಿಸಿ ವಾಹನ ತಪಾಸಣೆ ನಡೆಸುತ್ತಿರುವಾಗ ಮುಂಜಾನೆ 03-00 ಗಂಟೆ ಸಮಯಕ್ಕೆ ತೊಕ್ಕೊಟ್ಟು ಕಡೆಯಿಂದ KA 19 ED 1907 ನೇ ನಂಬ್ರದ ಮೋಟಾರು ಸೈಕಲ್ನ್ನು ಅದರ ಸವಾರ ಮಧುಷಾ ಎಂಬವರು ಅಮನ್ ಗೌತಮ್ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬರುತ್ತಿರುವುದನ್ನು ಕಂಡು ಪಿರ್ಯಾದುದಾರರು ಬೈಕ್ ಸವಾರಿನಿಗೆ ಬೈಕ್ ನಿಲ್ಲಿಸುವಂತೆ ಸೂಚನೆ ನೀಡಿದರೂ ಬೈಕ್ ಸವಾರ ಮಧುಷಾ ವೇಗವಾಗಿ ಬೈಕ್ನ್ನು ಬ್ಯಾರಿಕೇಡ್ ನಡುವೆ ತೂರಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಬೈಕ್ ಬ್ಯಾರಿಕೇಡ್ಗೆ ಬಡಿಯಿತು. ಇದರಿಂದಾಗಿ ಬೈಕ್ ಸಮೇತ ಸವಾರ ಮತ್ತು ಸಹಸವಾರ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಅವರಿಬ್ಬರು ಆ ರಸ್ತೆಯಾಗಿ ಬಂದ ಆಟೋ ಒಂದರಲ್ಲಿ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗಿರುತ್ತಾರೆ.
20.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಗೋಪಾಲ ಕಾಮತ್ & ಕಂಪನಿಯಲ್ಲಿ ಫಾರ್ಮಸ್ಯೂಟಿಕಲ್ ಡಿಸ್ಟ್ರಿಬ್ಯೂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಮ್ಮದ್ ಅಶ್ರಫ್ ಎಂಬವರು ಸದ್ರಿ ಕಂಪನಿಯ ಬಾಬ್ತು KA-19-Y-658ನೇ ನಂಬ್ರದ ಕೆಂಪು ಮತ್ತು ಕಪ್ಪು ಬಣ್ಣದ ಫ್ಯಾಶನ್ ಪ್ಲಸ್ ಮೋಟಾರ್ ಸೈಕಲ್ಲಿನಲ್ಲಿ ದಿನಾಂಕ: 15.01.2015 ರಂದು ಸಂಜೆ 7:00 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗುತ್ತಾ ಸುಮಾರು 7:30 ಗಂಟೆ ವೇಳೆಗೆ ಮಹಮ್ಮದ್ ಅಶ್ರಫ್ರು ಎಕ್ಕೂರಿನ ರಸ್ತೆಯ ಬದಿಯ ಅಂಗಡಿಯಲ್ಲಿ ಎಳನೀರು ಕುಡಿಯಲು ಸದ್ರಿ ಮೊಟಾರ್ ಸೈಕಲ್ಲನ್ನು ರಸ್ತೆ ಬದಿ ನಿಲ್ಲಿಸಿ ಅದರ ಕೀಯನ್ನು ಬೈಕ್ನಲ್ಲೇ ಮರೆತುಬಿಟ್ಟು ಅಂಗಡಿಗೆ ಹೋಗಿ ಎಳನೀರು ಕುಡಿದು ವಾಪಾಸು ಬೈಕ್ನ ಬಳಿ ಬಂದಾಗ ಬೈಕ್ ಕಾಣಿಸದೇ ಇದ್ದು, ಸದ್ರಿ ಮೋಟಾರ್ ಸೈಕಲ್ಲನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋಗಿದ್ದು, ಸದ್ರಿ ಮೊಟಾರ್ ಸೈಕಲ್ಲಿನ ಮೌಲ್ಯ ಸುಮಾರು ರೂ. 20000/- ಆಗಬಹುದು.
21.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17.01.2015 ರಂದು ಪಿರ್ಯಾದಿದಾರರಾದ ಶ್ರೀ ಅಶ್ವಿನ್ ರವರು ಬಾವುಟಗುಡ್ಡೆಯಲ್ಲಿರುವ ಸೈಟ್‌ನಲ್ಲಿ ಕೆಲಸ ಮುಗಿಸಿ ಸಂಜೆ ಹಿಂತಿರುವ ವೇಳೆ ಪಿರ್ಯಾದಿದಾರರ ಗೆಳೆಯ ಅಶೊಕ್ ರವರು ಅವರ ಮೊಬೈಲ್ ವಾಟ್ಸಾಪ್‌ಗೆ ಪಿರ್ಯಾದಿದಾರರ ಫೊಟೊ ಮತ್ತು ಬರವಣಿಗೆ ಇರುವ ಮೆಸೇಜ್ ಬಂದಿರುವುದನ್ನು ತೋರಿಸಿದ್ದು ಅದರಲ್ಲಿರುವ ಪಿರ್ಯಾದಿದಾರರ ಭಾವಚಿತ್ರವನ್ನು ಯಾರೋ ಫೇಸ್‌ಬುಕ್‌ನಿಂದ ತೆಗೆದು ಅದರಲ್ಲಿ ಪಿರ್ಯಾದಿದಾರರು ದಿನಾಂಕ: 16.01.2015 ರಂದು ಉಪ್ಪಿನಂಗಡಿಯಲ್ಲಿ ನಡೆದ ಕೋಮುಗಲಭೆಯಲ್ಲಿ ಮಸೀದಿಗೆ ದಾಳಿ ಮಾಡಿದ ಎಂಬ ಬರವಣಿಗೆ ಮತ್ತು ಭಾವಚಿತ್ರ ಇರುತ್ತದೆ ಹಾಗೂ ಪೊಲೀಸರಿಂದ ಸದ್ರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟಿರುತ್ತಾರೆಂಬ ವಾಟ್ಸ್‌ಆಪ್ ಸಂದೇಶವನ್ನು ಉಲಾಯಿಬೆಟ್ಟು ಪರಿಸರದಲ್ಲಿರುವ ಎಲ್ಲಾ ಮುಸ್ಲಿಂ ಭಾಂಧವರ ಮೊಬೈಲ್‌ಗಳಿಗೆ ಕಳುಹಿಸಿ ಪಿರ್ಯಾದಿದಾರರ ಬಗ್ಗೆ ಅಪಪ್ರಚಾರ ಮಾಡಿರುತ್ತಾರೆ.
No comments:
Post a Comment