ದಿನಾಂಕ 05.01.2015 ರ 15:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-01-2015 ರಂದು ರಾತ್ರಿ 07:35 ಗಂಟೆಯ ಸಮಯ ಮಂಗಳೂರು ನಗರದ ಬೋಳೂರು ಗ್ರಾಮದ ಉರ್ವ ಮಾರ್ಕೇಟ್ ಬಳಿಯ ಕೊರ್ದಬ್ಬು ದೈವಸ್ಥಾನದ ಎದುರುಗಡೆ (ಐಡಿ ಆಸ್ಪತ್ರೆಯ ಬಳಿ) ಪಿರ್ಯಾಧಿದಾರರಾದ ಶ್ರೀ ದುರ್ಗೇಶ್ ಆರ್.ವಿ ಎಂಬವರು ಅಂಗಡಿಗೆ ಹೋಗುತ್ತಿರುವಾಗ ಆರೋಪಿ ಸುದರ್ಶನ್ ಎಂಬಾತನು ಪಿರ್ಯಾಧಿದಾರರ ಹಿಂದಿನಿಂದ ಬಂದು ಆವಾಚ್ಯ ಶಬ್ದಗಳಿಂದ ಬೈದು ಅವರ ತಲೆಯ ಹಿಂಭಾಗದ ನಡುಭಾಗಕ್ಕೆ ಮಂಡೆ ಕತ್ತಿಯಿಂದ ಕಡಿದು ಮೂಳೆ ಮುರಿತದ ಗಂಭಿರ ಗಾಯ ಉಂಟು ಮಾಡಿರುವುದಲ್ಲದೆ ಎದೆಯ ಎಡ ಭಾಗಕ್ಕೆ, ಎಡ ಕೈಯ ಹೆಬ್ಬೆರಳ ನಡು ಭಾಗಕ್ಕೆ ಕಡಿದು ಗಾಯಗೊಳಿಸಿ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಕೃತ್ಯಕ್ಕೆ ಕಾರಣ ವೇನೆಂದರೆ ದಿನಾಂಕ 04-01-2015 ರಂದು ಪೂರ್ವಹ್ನಾ 11:30 ಗಂಟೆಗೆ ಆರೋಪಿಯು ಪಿರ್ಯಾಧಿದಾರರ ತಂದೆಗೆ ಬೈದಿದ್ದನ್ನು ಪಿರ್ಯಾಧಿದಾರರು ಪ್ರಶ್ನಿಸಿದ್ದಕ್ಕೆ ಆದೇ ದ್ವೇಷದಿಂದ ಆರೋಪಿ ಈ ಕೃತ್ಯವನ್ನು ಮಾಡಿದ್ದುದಾಗಿರುತ್ತದೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದಿನೇಶ್ ರವರು ಬಾಳೆಪುಣಿ ಗ್ರಾಮದ ಹೆಚ್ ಕಲ್ಲು ಎಂಬಲ್ಲಿ ಮನೆ ನಿರ್ಮಾಣದ ಪಾಯದ ಕೆಲಸವನ್ನು ಮಾಡುತ್ತಿದ್ದು, ಸದ್ರಿಯವರು ಆರೋಪಿಯಿಂದ ಪಡೆದುಕೊಂಡ ಪಿಕಾಸನ್ನು ಆರೋಪಿಗೆ ವಾಪಾಸು ಕೊಡಲು ಹೋಗುತ್ತಿದ್ದಾಗ, ದಿನಾಂಕ:03.01.2015 ರಂದು ಮದ್ಯಾಹ್ನ ಸುಮಾರು 2.45 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಹೆಚ್ ಕಲ್ಲು ಎಂಬಲ್ಲಿ ಆರೋಪಿ ಹನೀಫ್ ಹೆಚ್. ಕಲ್ಲು ಎಂಬವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಪಿಕಾಸನ್ನು ಎಳೆದು ತೆಗೆದು, ಅಂಗಿಯ ಕಾಲರನ್ನು ಹಿಡಿದು ಕೈಯಿಂದ ಹಲ್ಲೆ ನಡೆಸಿ ನೆಲಕ್ಕೆ ದೂಡಿ ಹಾಕಿ, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜನರು ಬಂದು ಗಲಾಟೆಯನ್ನು ಬಿಡಿಸಿದಾಗ, "ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ" ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ.
3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-01-2015 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಕೆ. ವಾಸುದೇವ ಪೈ ರವರು ಅವರ ಬಾಬ್ತು ಮಾರುತಿ ವ್ಯಾಗನ್ ಆರ್ ಕಾರು ನಂಬ್ರ KA 19 MA 7547 ನೇದರಲ್ಲಿ ಅವರ ಅಕ್ಕ ಶ್ರೀಮತಿ ಸರೋಜ ಪೈ ಹಾಗೂ ಕುಟುಂಬದೊಂದಿಗೆ ಮೂಲ್ಕಿ ವೆಂಕಟರಮಣ ದೇವಸ್ಥಾನಕ್ಕೆಂದು ಹೊರಟು ಬೆಳಿಗ್ಗೆ 11-30 ಗಂಟೆಗೆ ಕೋಲ್ನಾಡು ಎಂಬಲ್ಲಿ ಡಿವೈಡರ್ ಕೊನೆಗೊಂಡಲ್ಲಿ ಬಲಗಡೆ ತಿರುಗುವರೇ ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದ ಸಮಯ ಮಂಗಳೂರು ಕಡೆಯಿಂದ KA 20 A 8517ನೇ ಲಾರಿ ಚಾಲಕ ಸುರೇಶ ಎಂಬವನು ಅವರ ಬಾಬ್ತು ಸದ್ರಿ ಲಾರಿಯನ್ನು ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ವಾಹನವು 2 ಪಲ್ಟಿ ಆಗಿ ಲಾರಿನಡಿಗೆ ಸಿಲುಕಿ ಪಿರ್ಯಾದಿದಾರರಿಗೆ ಹಾಗೂ ಅವರ ಅಕ್ಕ ಸರೋಜರಿಗೆ ಗಾಯಗಾಗಿ ಈ ಬಗ್ಗೆ ಮೂಲ್ಕಿ ಚೇತನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹಚ್ಚಿನ ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಸರೋಜಾರವರು ಒಳರೋಗಿಯಾಗಿ ದಾಖಲಾಗಿರುವುದು
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03/01/2015 ರಂದು 09.30 ಗಂಟೆಗೆ ರೋನಾಲ್ಡ್ ಎಂಬವರು ಪಿರ್ಯಾದಿದಾರರಾದ ಶ್ರೀ ಸುಂದರ ಗೌಡ ರವರ ಮಗ ಗಿರೀಶ್ ನನ್ನು ಕಾಲು ನೋವಿನಿಂದ ಬಳಲುತ್ತಿರುವ ವಿಚಾರ ತಿಳಿದೂ ಒತ್ತಾಯ ಪೂರ್ವಕವಾಗಿ ತನ್ನ ಮನೆಯಾದ ಮಂಗಳೂರು ತಾಲೂಕು ಮುಚ್ಚೂರು ಗ್ರಾಮದ ಮಂರ್ಜಿಮೆ ಎಂಬಲ್ಲಿಗೆ ಕೆಲಸಕ್ಕೆಂದು ಕರೆದುಕೊಂಡು ಹೋಗಿ ತನ್ನ ತೋಟದ ತೆಂಗಿನ ಮರದ ತೆಂಗಿನ ಕಾಯಿಯನ್ನು ಕೀಳಲು ಯಾವುದೇ ಜೀವ ರಕ್ಷಕ ಸಲಕರಣೆಗಳನ್ನು ನೀಡದೇ, ಗಿರೀಶನನ್ನು ತೆಂಗಿನ ಮರಕ್ಕೆ ಹತ್ತಿಸಿ, ತೆಂಗಿನ ಕಾಯಿ ಕೀಳುವ ಸಮಯ ಬೆಳಿಗ್ಗೆ ಸುಮಾರು 09.30 ಗಂಟೆಗೆ ಗಿರೀಶನು ತೆಂಗಿನ ಮರದಿಂದ ಬಿದ್ದು, ಕಾಲು ಮುರಿತ ಮತ್ತು ಇತರ ಗಾಯವಾಗಿರುತ್ತದೆ. ಅಲ್ಲದೇ ಆರೋಪಿಯು ಈ ವಿಷಯವನ್ನು ಪಿರ್ಯಾದಿದಾರರಿಗಾಗಲೀ, ಅವರ ಮನೆಯವರಿಗಾಗಲೀ ತಿಳಿಸದೇ ಗಿರೀಶನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಸತ್ಯಾಂಶವನ್ನು ಮುಚ್ಚಿಟ್ಟಿರುವುದಾಗಿದೆ.
5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12-11-2014 ರಂದು, ದಿನಾಂಕ: 10-12-2014 ರಂದು, ದಿನಾಂಕ: 26-12-2014 ರಂದು ಹಾಗೂ ದಿನಾಂಕ: 04-01-2015 ರಂದು Unknown ನಂಬ್ರಗಳಿಂದ 18-00 ಗಂಟೆಯಿಂದ 20-00 ಗಂಟೆಯ ಮಧ್ಯೆ ಅವಧಿಯಲ್ಲಿ ಪಿರ್ಯಾದಿದಾರರಾದ ಶ್ರೀ ಎಂ. ವೆಂಕಟೇಶ್ ಪೈ ಎಂಬವರ ಮೊಬೈಲ್ ನಂಬ್ರ ಕ್ಕೆ ಬನ್ನಂಜೆ ರಾಜಾ ಎಂಬಾತನು ಹಪ್ತಾ ಹಣ ನೀಡುವಂತೆ ಬೆದರಿಕೆ ಕರೆಗಳನ್ನು ಮಾಡಿರುವುದಾಗಿದೆ.
6.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 4/1/2015 ರಂದು ಪ್ರಕರಣದ ಪಿರ್ಯಾದಿದಾರರಾದ ಶ್ರೀ ಪ್ಯೆಸಲ್ ಎಂಬವರು ರಿಜ್ವಾನ್ ಎಂಬವರೊಂದಿಗೆ ಮೋಟಾರ್ ಸ್ಯೆಕಲ್ ನಂ ಕೆಎ.20.ಇಇ -5271 ನೇ ದರಲ್ಲಿ ರಿಜ್ವಾನ್ ರವರು ಸವಾರರಾಗಿ ಸುರತ್ಕಲ್ ನಿಂದ ಕಾಟಿಪಳ್ಳ ಕಡೆಗೆ ಹೋಗುತ್ತಾ ಮಧ್ಯಾಹ್ನ 01.30 ಗಂಟೆಗೆ ಕ್ಯಪ್ಣಾಪುರ ಕಡೆಗೆ ತಲುಪಿದಾಗ 6 ನೇ ಬ್ಲಾಕ್ ಕ್ರಾಸ್ ರಸ್ತೆಯಿಂದ ಕೆಎ.19.ಇಜಿ .3852 ನಂಬ್ರದ ಹೋಂಡಾ ಆಕ್ಟೀವಾ ವನ್ನು ಅದರ ಸವಾರ ಶೇಖ್ ಅಬ್ದುಲಾ ರವರರ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯದಿದಾರರ ವಾಹನಕ್ಕೆ ಢಿಕ್ಕಿ ಪಡಿಸಿದ್ದ ಪರಿಣಾಮ ಎರಡು ವಾಹನದಲ್ಲಿದ್ದವರು ನೆಲಕ್ಕೆ ಬಿದ್ದು ರಿಜ್ವಾನ್ ರವರು ಭುಜ ಎದೆ ಸೊಂಟ ಕಾಲಿಗೆ ಗುದ್ದಿದ ರಕ್ತದ ಗಾಯವಾಗಿದ್ದು ಈ ಬಗ್ಗೆ ಚಿಕಿತ್ಸೆಗಾಗಿ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹ್ಯೆಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಶೇಖ್ ಅಬ್ದುಲ್ಲಾರವರು ಮಂಗಳೂರು ನರ್ಸಿಂಗ್ ಹೋಮ್ ನಲ್ಲಿ ದಾಖಲಾಗಿರುವುದಾಗಿದೆ.
7.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-01-2015 ರಂದು ಪಿರ್ಯಾದಿದಾರರಾದ ಶ್ರೀ ಸುಶೀಲ್ ಸುವರ್ಣ ಎಂಬವರು ಮೋಟಾರ್ ಸ್ಯೆಕಲ್ ನಂಬ್ರ ಕೆಎ.19.ಇಎಫ್ -871 ನೇದರಲ್ಲಿ ತನ್ನ ಮಿತ್ರರಾದ ಲಾರೆನ್ಸ್ ಪಿರೇರ ಎಂಬವರನ್ನು ಸಹ-ಸವಾರನ್ನಾಗಿ ಕುಳ್ಳಿರಿಸಿಕೊಂಡು ತಾನು ಸವಾರರಾಗಿ ಕ್ಯಷ್ಣಾಪುರ ದಿಂದ ಸಸಿಹಿತ್ಲುವಿಗೆ ಹೋಗುತ್ತಾ ಸಂಜೆ ಸುಮಾರು 04.20 ಗಂಟೆಗೆ ಮಧ್ಯ ಶೀನಿವಾಸ್ ನಗರ ತಲುಪಿದಾಗ ಎನ್ ಐ ಟಿ ಕೆ ಕಡೆಯಿಂದ ಚೇಳ್ಯಾರು ಕಡೆಗೆ ಕೆಎ.20.ಸಿ.4279 ನಂಬ್ರದ ಬಸ್ ನ್ನು ಅದರ ಚಾಲಕ ದಯಪ್ರಸಾದ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಪಿರ್ಯಾದಿದಾರರ ಬ್ಯೆಕಿಗೆ ಢಿಕ್ಕಿಪಡಿಸಿದ ಪರಿಣಾಮ ಸದ್ರಿಯವರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಮುಖ ಬಲಕಾಲಿಗೆ ಎದೆಗೆ ರಕ್ತ ಗಾಯವಾಗಿ ಮೇಲಿನ ಹಲ್ಲುಗಳಿಗೂ ನೋವಾಗಿದ್ದು ಸಹ ಸವಾರ ಲಾರೆನ್ಸ್ ಪಿರೇರಾರವರ ಹಣೆ ಬಲಕಾಲಿಗೂ ರಕ್ತಗಾಯವಾಗಿದ್ದು ಚಿಕಿತ್ಸೆಗಾಗಿ ಮುಕ್ಕ ಶೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂದೀಪ್ ಹೆಗ್ಡೆ ರವರು ಅಡ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ಸದ್ರಿ ದೇವಸ್ಥಾನದಲ್ಲಿ ಗಣೇಶ್ ಭಟ್ ಎಂಬವರು ಅರ್ಚಕರಾಗಿದ್ದು ಸದ್ರಿಯವರು ದಿನಾಂಕ: 03.01.2015 ರಂದು ದೇವಸ್ಥಾನದಲ್ಲಿ ಪೂಜೆ ಮುಗಿಸಿ ರಾತ್ರಿ 9.00 ಗಂಟೆಗೆ ದೇವಸ್ಥಾನದ ಬಾಗಿಲು ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ: 04.01.2015 ರಂದು ಬೆಳಿಗ್ಗೆ 05.00 ಗಂಟೆಗೆ ಅರ್ಚಕರು ಬೀಗ ಹಾಕಿ ಹೋಗುತ್ತಿದ್ದ ಬದಿಯ ಬಾಗಿಲನ್ನು ತೆರೆದು ದೇವಸ್ಥಾನದ ಒಳಗೆ ಪ್ರವೇಶಿಸಿ ನೋಡಿದಾಗ ದೇವಸ್ಥಾನದ ಗರ್ಭಗುಡಿಯ ಭಾಗಿಲು ಮತ್ತು ಹಾಕಿದ್ದ ಕಬ್ಬಿಣದ ಗ್ರಿಲ್‌ನ ಬೀಗ ಮತ್ತು ನಾಗವಸವನ್ನು ಯಾರೋ ಕಳ್ಳರು ಮುರಿದು ಗರ್ಭಗುಡಿಯ ಒಳಗೆ ಪ್ರವೇಶಿಸಿ ಒಳಗಿದ್ದ ಈಶ್ವರ ದೇವರ ಪ್ರಭಾವಳಿ ಮತ್ತು ಪೂಜಾ ಸಾಮಾಗ್ರಿಗಳು ಕಳವುಮಾಡಿದ್ದಲ್ಲದೇ, ಅಲ್ಲೇ ಪಕ್ಕದಲ್ಲಿರುವ ಸಣ್ಣ ಗಣಪತಿ ದೇವಸ್ಥಾನದ ಬಾಗಿಲು ಬೀಗ ಮುರಿದು ಕಳ್ಳರು ಒಳಗೆ ನುಗ್ಗಿ ಒಂದು ಚಿಕ್ಕ ಬೆಳ್ಳಿಯ ಗಣಪತಿ ವಿಗ್ರಹ ಮತ್ತು ಬೆಳ್ಳಿಯ ಶಂಕ ಹಾಗೂ ದೇವಸ್ಥಾನದ ಕಚೇರಿ ಕೊಠಡಿಯಲ್ಲಿದ್ದ CC ಕ್ಯಾಮೆರಾದ DVR ರೆಕಾರ್ಡಿಂಗ್ ಸಿಸ್ಟಮ್ ನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ 89000/- ಆಗಬಹುದು.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಪಿಸಿ 114ನೇ ಎಮ್.ಪಿ ಕಾರ್ಯಪ್ಪ ಮತ್ತು ಹಾವೇರಿ ಜಿಲ್ಲೆಯ ಪೊಲೀಸ್ ಕಾನ್ಸ್ಟೇಬಲ್ ಪಿಸಿ 928ನೇ ಪಿ.ಎಫ್ ಮಾಕಲವರ ಎಂಬವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕುಳ ಚೆಕ್ ಪಾಯಿಂಟ್ನಲ್ಲಿ ದಿನಾಂಕ: 03.01.2015 ರಂದು ರಾತ್ರಿ 9:45 ಗಂಟೆ ಸಮಯಕ್ಕೆ ವಾಹನ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿರುವ ಸಮಯ ಫರಂಗಿಪೇಟೆ ಕಡೆಯಿಂದ ಮಂಗಳೂರು ಕಡೆಗೆ KA-19-EG-4357ನೇ ನಂಬ್ರದ ಸ್ಕೂಟರನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ವಾಹನ ತಪಾಸಣೆಗೆ ಅನುಕೂಲವಾಗುವಂತೆ ಇಟ್ಟಿದ್ದ ಬ್ಯಾರಿಕೇಡ್ಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಸ್ಕೂಟರ್ ಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಆತನ ತಲೆಯ ಹಿಂಬದಿಗೆ, ಮುಖಕ್ಕೆ ಗುದ್ದಿದ ಹಾಗೂ ರಕ್ತ ಬರುವ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನನ್ನು ಕರ್ತವ್ಯದಲ್ಲಿದ್ದ ಪೊಲೀಸರು ಚಿಕಿತ್ಸೆಯ ಬಗ್ಗೆ ಒಂದು ಆಟೋರಿಕ್ಷಾದಲ್ಲಿ ಕಳುಹಿಸಿಕೊಟ್ಟಿರುವುದಲ್ಲದೇ ಸದ್ರಿ ಅಪಘಾತದಿಂದ ಸ್ಕೂಟರ್ ಹಾಗೂ ಬ್ಯಾರಿಕೇಡ್ ಜಖಂಗೊಂಡಿರುವುದಾಗಿದೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02.01.2015 ರಂದು ರಾತ್ರಿ 8:30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಸುಹಾಸ್ ಬಿ.ಎಕ್ಸ್. ರವರು ತನ್ನ ಬಾಬ್ತು KA-21-S-9486ನೇ ನಂಬ್ರದ ಬಜಾಜ್ ಪಲ್ಸ್ರ್ ಬೈಕನ್ನು ಕಪಿತಾನಿಯೋದಲ್ಲಿರುವ ಅವರ ಮನೆಯ ಎದುರು ರಸ್ತೆಯಲ್ಲಿ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಮನೆಗೆ ಹೋಗಿದ್ದವರು ದಿನಾಂಕ: 03.01.2014 ರಂದು ಬೆಳಿಗ್ಗೆ 9:30 ಗಂಟೆ ಸಮಯಕ್ಕೆ ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಇಲ್ಲದೇ ಇದ್ದು, ಯಾರೋ ಕಳ್ಳರು ಸದ್ರಿ ಬೈಕಿನ ಹ್ಯಾಂಡ್ ಲಾಕ್ ಮುರಿದು ಬೈಕನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳವು ಮಾಡಿಕೊಂಡು ಹೋದ ಬೈಕಿನ ಅಂದಾಜು ಮೌಲ್ಯ ರೂ. 83,048/- ಆಗಬಹುದು.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ; 03.01.2015 ರಂದು ಫಿರ್ಯಾದಿದಾರರಾದ ಶ್ರೀ ಪ್ರಥ್ವಿರಾಜ್ ರವರು ಅವರ ಸ್ನೇಹಿತ ವಿನೀತ್ ಎಂಬವರನ್ನು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ; ಕೆಎ-19-ಇಲ್-9420 ನೇದರಲ್ಲಿ ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ವಳಚ್ಚಿಲ್ ಕಡೆಯಿಂದ ಮನೆ ಕಡೆಗೆ ಬರುತ್ತಾ ಮದ್ಯಾಹ್ನ ಸುಮಾರು 02;00 ಗಂಟೆ ಸಮಯಕ್ಕೆ ಕರಾವಳಿ ಕಾಲೇಜ್ ಹಾಗೂ ವಳಚ್ಚಿಲ್ ಪದವು ಶ್ರೀನಿವಾಸ್ ಕಾಲೇಜ್ ಕಡೆ ಹೋಗುವ ಮಾರ್ಗ ಕವಲೊಡೆದ ಸ್ಥಳಕ್ಕೆ ತಲುಪಿದಾಗ ಎದುರುನಿಂದ ಅಂದರೆ ನೀರುಮಾರ್ಗ ಕಡೆಯಿಂದ ವಳಚ್ಚಿಲ್ ಕಡೆಗೆ ಸುಮಾರು 100 ರಷ್ಟು ಮೋಟಾರ್ ಸೈಕಲ್‌ಗಳಲ್ಲಿ ಮುಸ್ಲಿಮ್ ಯುವಕರು ರ್ಯಾಲಿ ನಡೆಸುತ್ತಾ ಬರುತ್ತಿದ್ದು ಅವರಲ್ಲಿ ಒಬ್ಬ ದಪ್ಪಗಿನ ಕೆಂಪು ಬೈಕ್‌ನ ಸವಾರನು ತನ್ನ ಬಾಬ್ತು ಮೋಟಾರ್ ಸೈಕಲ್ನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿ ಹಾಗೂ ಸ್ನೇಹಿತ ಮೋಟಾರ್ ಸೈಕಲ್‌ನೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ಫಿರ್ಯಾದಿದಾರರಿಗೆ ಹಾಗೂ ಸ್ನೇಹಿತ ವಿನೀತನಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತವೆ. ಡಿಕ್ಕಿ ಆದ ಮೋಟಾರ್ ಸೈಕಲ್‌ನ ಸವಾರನು ಅಲ್ಲಿ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿರುತ್ತಾನೆ. ನೋವು ಜಾಸ್ತಿ ಆದ ಕಾರಣ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ತಡವಾಗಿ ಬಂದು ದೂರು ನೀಡಿದ್ದಾಗಿದೆ.
No comments:
Post a Comment