Monday, March 4, 2013

Daily Crime Incidents of March 04, 2013


ಸುಲಿಗೆ ಪ್ರಕರಣ:

ಮಂ. ಪೂರ್ವ ಪೊಲೀಸ್ ಠಾಣೆ; 

  • ದಿನಾಂಕ 03-03-2013ರಂದು ಪಿರ್ಯಾದಿದಾರರು ಮನೆಯಿಂದ ಹೊರಟು ಅಪ್ಪರ್ ಬೆಂದೂರ್ನಲ್ಲಿರುವ ಸೈಂಟ್ ಸೇಬಾಸ್ಟೀಯನ್ ಚಚರ್್ಗೆ ತೆರಳಿ ಚಚರ್್ನಲ್ಲಿ ಪೂಜೆ ಮುಗಿಸಿ ವಾಪಾಸು ಮನೆಯ ಕಡೆಗೆ ನಡೆದುಕೊಂಡು ಕದ್ರಿ ಬಲ್ಲಾಳ್ ಗ್ಯಾರೇಜ್ನ ಪಕ್ಕದ ಕರಾವಳಿಲೈನ್ ಒಳರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಪಿರ್ಯಾದಿದಾರರ ಹಿಂದುಗಡೆಯಿಂದ ಬಂದ ದ್ಚಿಚಕ್ರ ವಾಹನ ಸವಾರರು ಪಿರ್ಯಾದಿದಾರರಿಂದ ಸ್ವಲ್ಪ ಮುಂದಕ್ಕೆ ಹೋಗಿ ದ್ಚಿಚಕ್ರ ವಾಹನವನ್ನು ತಿರುಗಿಸಿ ವಾಪಾಸು ಪಿರ್ಯಾದಿದಾರರ ಕಡೆಗೆ ಬಂದು ದ್ಚಿಚಕ್ರ ವಾಹನ ಪಿರ್ಯಾದಿದಾರರ ಹತ್ತಿರಕ್ಕೆ ತಲುಲಪಿದಾಗ ದ್ಚಿಚಕ್ರ ವಾಹನವನ್ನು ನಿಧಾನ ಮಾಡಿ ದ್ಚಿಚಕ್ರ ವಾಹನದಲ್ಲಿದ್ದ್ದ ಯುವಕರ ಪೈಕಿ ಹಿಂಬದಿ ಸವಾರ ಏಕಾಏಕಿಯಾಗಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 6 ಪವನಿನ ಚಿನ್ನದ ಸರವನ್ನು ಬಲಾತ್ಕಾರವಾಗಿ ಎಳೆದು ಲೂಟಿ ಮಾಡಿಕೊಂಡು ಮೈನ್ ರೋಡ್ ಕಡೆಗೆ ಪರಾರಿಯಾಗಿರುತ್ತಾರೆ. ಈ ಘಟನೆ ನಡೆಯುವಾಗ ಸಮಯ ಸುಮಾರು ಬೆಳಿಗ್ಗೆ 07-45 ಗಂಟೆಯಾಗಿರಬಹುದು. ಸರವನ್ನು ಸುಮಾರು 20 ವರ್ಷದ ಹಿಂದೆ 76000/-ರೂ ಕೊಟ್ಟು ಖರೀದಿಸಿರುವುದಾಗಿದೆ. ಸರವನ್ನು ಎಳೆದವರನ್ನು ಮುಂದಕ್ಕೆ ನೋಡಿದರೆ ಗುರುತಿಸಬಲ್ಲೆನು. ಎಂಬಿತ್ಯಾದಿ ಪಿರ್ಯಾದಿದಾರರಾದ .ಸೆಲಿನ್ ಡಿ'ಸೋಜಾ(68), ಗಂಡ:ಆರ್.ಎಲ್.ಡಿ'ಸೋಜಾ  ವಾಸ: 3-ಇ-17-14912, ಕರಾವಳಿ ಲೇನ್, ಕದ್ರಿ, ಮಂಗಳೂರು ರವರು ನೀಡಿದ ದೂರಿನಂತೆ ಮಂ. ಪೂರ್ವ ಪೊಲೀಸ್ ಠಾಣೆ ಅಪರಾದ ಕ್ರಮಾಂಕ . 29/2013 ಕಲಂ. 392 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;

  • ದಿನಾಂಕ: 02-03-2013 ರಂದು ಸಮಯ ಸುಮಾರು 17.00 ನಂಬ್ರ ತಿಳಿಯದ ಅಟೊರಿಕ್ಷಾವೊಂದನ್ನು ಅದರ ಚಾಲಕ ಹಾಟರ್ಿಕಲ್ಚರ್ ಜಂಕ್ಷನ್ ಕಡೆಯಿಂದ ಬಲ್ಮಠ ಕಡೆಗೆ   ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ   ಕುಮಾರ್ ಇಂಟರ್ನ್ಯಾಷನಲ್ ಹೋಟೆಲ್ ಎದುರು ತಲುಪುವಾಗ ಬೆಂದೂರ್ವೆಲ್ ಜಂಕ್ಷನ್ ಕಡೆಯಿಂದ ಹಾಟರ್ಿಕಲ್ಚರ್ ಜಂಕ್ಷನ್ ಕಡೆಗೆ ಪಿರ್ಯಾದುದಾರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಸಂತೊಷ್ ಕುಮಾರ್ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಏಂ-19 ಇಃ- 9652 ಕ್ಕೆ ಡಿಕ್ಕಿ ಮಾಡಿದ ಪರಿಣಾಮ, ಕುಮಾರ್ ಇಂಟರ್ನ್ಯಾಷನಲ್ ಹೋಟೆಲ್ ಎದುರು ನಿಲ್ಲಿಸಿದ್ದ  ಕಾರು ನಂಬ್ರ ಏಂ-19 ಚ-6004 ರ ಹಿಂಭಾಗದ ಗ್ಲಾಸ್ನ ಮೇಲೆ ಮೋಟಾರ್ ಸೈಕಲ್ ಬಿದ್ದು ಕಾರಿನ ಹಿಂಭಾಗದ ಗ್ಲಾಸ್ ಜಖಂಗೊಂಡಿರುತ್ತದೆ. ಮತ್ತು ಸಂತೋಷ್ಕುಮಾರ್ರವರ ಎಡಕೈ ಕಿರುಬೆರಳಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತದಿಂದ ಪಿರ್ಯಾದುದಾರರಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ ಎಂಬುದಾಗಿ ಭಜರಂಗ ಅಮೀನ್ (24) ತಂದೆ : ಲಾಲರಾಮ್ ರಾಹೀರ್,  ವಾಸ: ರಾಹೀರ್ ಗ್ರಾಮ, ಕರಣಪುರ ತಾಲೂಕು, ಕರೂಲ್ ಜಿಲ್ಲೆ, ರಾಜಸ್ಥಾನ ರಾಜ್ಯ.  ಹಾಲಿ ವಾಸ: ನಿಯರ್ ಸ್ಟೇಟ್ ಬ್ಯಾಂಕ್, ಬಂದರ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ 46/2013 279 , 337 ಐ.ಪಿ.ಸಿ.& 134(ಎ)(ಬಿ) ಮೋ.ವಾ. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಬಜಪೆ ಠಾಣೆ;


  • ದಿನಾಂಕ:03/03/2013 ರಂದು ಸಂಜೆ 3-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ ಪೆಮರ್ುದೆಯ ಒ.ಎಂ.ಪಿ.ಎಲ್ ಗೇಟ್ ಬಳಿ ಕುಂಟಪದವು ಎಂಬಲ್ಲಿ ಆರೋಪಿಗಳು ಅಕ್ರಮ ಕೂಟ ಸೇರಿ ಕೈಯಲ್ಲಿ ಕಬ್ಬಿಣದ ಸರಳು ಹಿಡಿದು ಅಲ್ಲಿಗೆ ಇಷರ್ಾದ್ ಮತ್ತು ಸಫಾನ್ ಎಂಬವರು ಸೀಮೆಎಣ್ಣೆ ಮಾರಾಟ ಮಾಡಲು ಹೋದ ಸಮಯ ಅಲ್ಲಿ ಇವರಿಬ್ಬರಿಗೆ ಆರೋಪಿಗಳು ಹಲ್ಲೆ ಮಾಡಿದ್ದು ಈ ವಿಚಾರ ತಿಳಿದು ಅಲ್ಲಿಗೆ ಸಂಜೆ 3-45 ಗಂಟೆಗೆ ಹೋದ ಫಿರ್ಯಾದುದಾರರಿಗೆ ಮತ್ತು ಅನ್ವರ್ ರಿಗೆ ಕೂಡ ಆರೋಪಿಗಳು ಕೈಯಿಂದ ಮತ್ತು ಕಬ್ಬಿಣದ ಸರಳಿನಿಂದ ಹೊಡೆದು ಜಖಂ ಮಾಡಿದಲ್ಲದೇ ತಡೆದು ನಿಲ್ಲಿಸಿ ಅವರು ಹೋದಂತಹ ಮೋಟಾರು ಸೈಕಲ್ ನಂಬ್ರ ಕೆಎ-19ಇಎ-3481 ಮತ್ತು ಇತರ ಎರಡು ಮೋಟಾರು ಸೈಕಲಿಗೆ ಕೂಡ ಕಬ್ಬಿಣದ ಸರಳಿನಿಂದ ಹೊಡೆದು ಜಖಂ ಉಂಟು ಮಾಡಿರುವುದು ಎಂಬುದಾಗಿ ಮಹಮ್ಮದ್ ನಝೀರ್, ಪ್ರಾಯ: 30 ವರ್ಷ,  ತಂದೆ: ದಿ: ಬಿ.ಮಯ್ಯದ್ದಿ, ವಾಸ: ಬಿ.ಮಯ್ಯದ್ದಿ ಕಂಪೌಂಡ್, ಕೆ.ಪಿ.ನಗರ, ಬಜಪೆ, ಬಜಪೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 49/2013 ಕಲಂ: 143, 147, 148, 341, 323, 324, 427 ಖ/ಘ 149  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ:03/03/2013 ರಂದು ಮಧ್ಯಾಹ್ನ 3-00 ಗಂಟೆ ಹೊತ್ತಿಗೆ ಆರೋಪಿ ನಿಷರ್ಾದ್ ಎಂಬವರು ಮಂಗಳೂರು ತಾಲೂಕು ಪೆಮರ್ುದೆ ಗ್ರಾಮದ ಒ.ಎಂ.ಪಿ.ಎಲ್ ಗೇಟಿನ ಬಳಿ ಬಂದು ಹಿಂದಿಯವರಿಗೆ ಸೀಮೆ ಎಣ್ಣೆ ಬೇಕಾ, ಬೇಕಾ ಕೇಳುತ್ತಿದ್ದನ್ನು ಫಿರ್ಯಾದುದಾರರು ಮತ್ತು ಲಕ್ಷ್ಮೀಕಾಂತ್ ಆಕ್ಷೇಪಿಸಿದ್ದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಬೋಳಿ ಮಕ್ಕಳೇ ಎಂದು ಹೇಳಿ ಹೋದವನು ಮಧ್ಯಾಹ್ನ 3-45 ಗಂಟೆ ಹೊತ್ತಿಗೆ ಇತರ ಆರೋಪಿಗಳೊಂದಿಗೆ ಅಕ್ರಮಕೂಟ ಸೇರಿ ಕಬ್ಬಿಣದ ಸರಳಿನೊಂದಿಗೆ ಬಂದವರು ಲಕ್ಷ್ಮೀಕಾಂತ, ರವಿರಾಜ ಮತ್ತು ಅಶೋಕನಿಗೆ ಸರಳಿನಿಂದ ಮತ್ತು ಕೈಯಿಂದ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನವೀನ, ಪ್ರಾಯ: 28 ವರ್ಷ, ತಂದೆ: ಪದ್ಮನಾಭ, ವಾಸ: ಕುಂಟಪದವು, ಪೆಮರ್ುದೆ, ಮಂಗಳೂರು ತಾಲೂಕು ರವರು ನೀಿಡಿದ ದೂರಿನಂತೆ 50/2013 ಕಲಂ: 143, 147, 148, 323, 324, 504, 506 ಖ/ಘ 149 ರಂತೆ ಪ್ರಕರಣ ದಾಖಲಿಸಿ ತನಖೆ ಕೈಗೊಳ್ಳಲಾಗಿದೆ.

ಗಂಡಸು ಕಾಣೆ:

ಮಂಗಳೂರು ಉತ್ತರ  ಠಾಣೆ;

  • ದಿನಾಂಕ 28-02-2013 ರಂದು  ಫಿಯರ್ಾದಿದಾರರು ಸಲಾಂ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದು, ಈ ಬಗ್ಗೆ ನೊಂದಣಿ ಅಧಿಕಾರಿ ಕಛೇರಿಯಲ್ಲಿ ನೊಂದಣಿಯಾಗಿರುತ್ತದೆ. ಫಿಯರ್ಾದಿದಾರರ ಗಂಡ ಸಲಾಂ ರವರು ದಿನಾಂಕ 28-02-2013 ರಂದು ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು, ಆದೇ ದಿನದಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ ಪೋನ್ ಮಾಡಿ ತಾನು ಗೆಳೆಯನ ಜೊತೆಯಲ್ಲಿ ಇದ್ದೇನೆ ಸಂಜೆ ಬರುತ್ತೇನೆ ಎಂದು ತಿಳಿಸಿದ್ದು, ಬಳಿಕ ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, ಅಲ್ಲದೇ ಸಂಬಂಧಿಕರಲ್ಲಿ ಹಾಗೂ ಗೆಳೆಯರಲ್ಲಿ ವಿಚಾರಿಸಿದ್ದು, ಕಾಣೆಯಾದ ಸಲಾಂ ಎಂಬವರು ಎಲ್ಲೂ ಪತ್ತೆಯಾಗದೇ ಇದ್ದು, ಕಾಣೆಯಾದ ಸಲಾಂ ರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಪಿರ್ಯಾದಿ ರಮ್ಲಾತ್ ಗಂಡ: ಸಲಾಂ  ವಾಸ: ಹೈದರ್ ಪ್ಲಾಝ ಕಾರ್ ಸ್ಟ್ರೀಟ್ ಮಂಗಳೂರು ನೀಡಿದ ದೂರಿನಂತೆ ಮಂಗಳೂರು ಉತ್ತರ  ಠಾಣೆ ಅಪರಾದ ಕ್ರಮಾಂಕ 31/2013 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment