Tuesday, March 5, 2013

Daily Crime Incidents for March 05, 2013


ಕಳವು ಪ್ರಕರಣ

ಉರ್ವ ಠಾಣೆ


  • ದಿನಾಂಕ:03-03-2013 ರ 18-00 ಗಂಟೆಯಿಂದ  ಈ ದಿನ ದಿನಾಂಕ:04-03-2013 ರ ಬೆಳಿಗ್ಗೆ 08-00 ಗಂಟೆಯ ಮಧ್ಯೆ  ಫಿರ್ಯಾದಿದಾರರು ಕೆಲಸ ಮಾಡಿಕೊಂಡಿದ್ದ  ಎಇಇಗಿಇಖ ಅಠಟಿಣಟಜಡಿ ಕಡಿತಚಿಣಜ ಐಣಜ  ಎಂಬ ಸವರ್ಿಸ್ ಸೆಂಟರಿನ ಶಟರಿನ ಬೀಗ ಮುರಿದು ಯಾರೋ ಕಳ್ಳರು ಒಳ ಪ್ರವೇಶಿಸಿ ಸವರ್ಿಸ್ ಸೆಂಟರಿನ ಒಳಗಡೆ ಇದ್ದ (1) ಈಗಓಂ 32 ಐಅಆ ಒಠಜಜಟ ಓಔ:32ಈಘ502/94 ಎಂದು ಬರೆದಿರುವ - ಐಅಆ ಖಿ.ಗಿ  ಒಂದು. ಇದರ ಅಂದಾಜು ಮೌಲ್ಯ ರೂ.21,000/- (2) ಖಿಊಔಖಊಃಂ 24 ಊಗಿ10ಚಇ ಎಂದು ಬರೆದಿರುವ ಐಅಆ ಖಿ.ಗಿ  ಒಂದು. ಇದರ ಅಂದಾಜು ಮೌಲ್ಯ ರೂ.14,000/- (3) ಖಿಊಔಖಊಃಂ 24 ಕಂ200ಚಇ ಎಂದು ಬರೆದಿರುವ ಐಅಆ ಖಿ.ಗಿ  ಒಂದು. ಇದರ ಅಂದಾಜು ಮೌಲ್ಯ ರೂ.14,000/-   (4) ಓಏಔಓ ಅಠಠಟಠಿಥ-ಐ23 (ಕಟಿಞ) ಎಂದು ಬರೆದಿರುವ ಅಚಿಟಚಿಡಿಚಿ  ಒಂದು. ಇದರ ಅಂದಾಜು ಮೌಲ್ಯ ರೂ.2,000/-   (5) ಖಿಊಔಖಊಃಂ ಕಂಪೆನಿಯಾ ಐಅಆ ಖಿ.ಗಿ  ಯ ರಿಮೋಟ್ ಎರಡು. ಇದರ ಅಂದಾಜು ಮೌಲ್ಯ ರೂ.1,000/-  (6) ಖಿಠಠಟ ಏಣ ಃಠಥ -1 ಇದರ ಅಂದಾಜು ಮೌಲ್ಯ ರೂ.1,500/- ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಸೊತ್ತುಗಳ ಒಟ್ಟು ಮೌಲ್ಯ ರೂ.53,500/- ಆಗಬಹುದು ಎಂಬುದಾಗಿ ದಿವಾಕರ ಶೆಟ್ಟಿ ಪ್ರಾಯ:44 ವರ್ಷ, ತಂದೆ:ದಿವಂಗತ ಶೀನ ಶೆಟ್ಟಿ, ವಾಸ:ಚೌಟರ ಮನೆ, ಮೂಡುಶೆಡ್ಡೆ ಪೋಸ್ಟ್ ಮತ್ತು ಗ್ರಾಮ,ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಉರ್ವ ಠಾಣೆ ಅಪರಾದ ಕ್ರಮಾಂಕ 08/2013  ಗ/ 457,380 ಕಅ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 


ವಾಹನ ಕಳವು ಪ್ರಕರಣ

ಮಂಗಳೂರು ಉತ್ತರ ಠಾಣೆ


  • ದಿನಾಂಕ 24-02-2013 ರಂದು ಸಂಜೆ 19-00ೆ ಸಮಯಕ್ಕೆ  ಫಿಯರ್ಾದಿದಾರರು ಕೆಎಸ್ ರಾವ್ ರಸ್ತೆ, ಪಾಪ್ಯುಲರ್ ಬಿಲ್ಡಿಂಗ್ ನಲ್ಲಿರುವ ಎಲ್.ಐ.ಸಿ. ಕಛೇರಿಯಲ್ಲಿ ಪ್ರಭಂಧಕರಾಗಿ ಸುಮಾರು 1 ವರ್ಷದಿಂದ ಕೆಲಸಮಾಡಿಕೊಂಡಿರುತ್ತಾರೆ. ಪಾಪ್ಯುಲರ್ ಬಿಲ್ಡಿಂಗ್ ಹಿಂಭಾಗದಲ್ಲಿರುವ ಎಲ್.ಐ.ಸಿ. ಸ್ಟಾಫ್ ಕ್ವಾಟ್ರಸ್ ಬಳಿ ಇರುವ ವಾಹನ ನಿಲುಗಡೆ ಸ್ಥಳದಲ್ಲಿ ಫಿಯರ್ಾದಿದಾರರು  ತನ್ನ ಬಾಬ್ತು ಟಿ.ವಿ.ಎಸ್. ಸುಜುಕಿ ಸಮುರಾಯ್ ಮೊಟಾರು ಸೈಕಲ್  ನಂಬ್ರ ಕೆಎ-19-ಕ್ಯೂ-2248 ನೇಯ ದನ್ನು ಪಾಕರ್್ ಮಾಡಿ ನಿಲ್ಲಿಸಿದ್ದು, ಬಳಿಕ ಕಾರನ್ನು ಉಪಯೋಗಿಸಿಕೊಂಡಿದ್ದು, ದಿನಾಂಕ 04-03-2013 ರಂದು ಸಂಜೆ 7:00 ಗಂಟೆಗೆ ತನ್ನ ಬಾಬ್ತು ಮೊಟಾರು ಸೈಕಲ್ ಪಾಕರ್್ ಮಾಡಿದ ಸ್ಥಳಕ್ಕೆ ಬಂದು ನೋಡಲಾಗಿ ಮೊಟಾರು ಸೈಕಲ್ ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಬಳಿಕ ಸದ್ರಿ ವಠಾರದಲ್ಲಿ ಮತ್ತು ಮಂಗಳೂರು ನಗರದಲ್ಲಿ ಈ ವರೆಗೆ ಹುಡುಕಾಡಿದಲ್ಲಿ ಮೊಟಾರು ಸೈಕಲ್ ಪತ್ತೆಯಾಗದೇ ಇದ್ದು, ಸದರಿ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಮೊಟಾರು ಸೈಕಲ್ನ ಅಂದಾಜು ಮೌಲ್ಯ ರೂ. 10,000/- ಆಗಬಹುದು. ಆದ್ದರಿಂದ ಕಳವಾದ ಮೊಟಾರು ಸೈಕಲನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬುದಾಗಿ ದೇವಪ್ಪ ನಾಯ್ಕ ತಂದೆ: ಗೋವಿಂದ ನಾಯ್ಕ ವಾಸ: ಪೊಪುಲರ್ ಕಟ್ಟಡದ ಹಿಂದುಗಡೆ ಕೆ.ಎಸ್ ರಾವ್ ರಸ್ತೆ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 32/2013 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಉಳ್ಳಾಲ ಠಾಣೆ


  • ದಿನಾಂಕ 01/03/2013 ರಂದು ಪಿಯರ್ಾದುದಾರರು ತನ್ನ ಮನೆಯಿಂದ ಕೊಲ್ಯಕ್ಕೆ ಹೊಗುವರೇ ಒಂಬುತ್ತುಕೆರೆ ರೋಡ್ ಮುಖಾಂತರ ನಡೆದುಕೊಂಡು ಹೋಗುತ್ತಾ ಅಂಬಿಕಾ ಕ್ರಾಸ್ ರೋಡ್ ಬಳಿ 15-30 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ, ಒಂಬತ್ತುಕರೆ ಕಡೆಯಿಂದ ಅಬ್ದುಲ್ ಸತ್ತಾರ್ ಎಂಬವರು ಏಂ 19 ಇಇ 1117 ನೇ ನಂಬ್ರದ ದ್ವಿಚಕ್ರ ವಾಹನವನ್ನು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿಯರ್ಾದಿ ಡಿಕ್ಕಿ ಹೊಡೆದಿರುತ್ತಾರೆ. ಇದರಿಂದ ರಸ್ತೆಗೆ ಬಿದ್ದ ಪಿಯರ್ಾದಿಯ ಕೈ, ಕಣ್ಣಿನ ಬಳಿ, ಬೆರಳುಗಳಿಗೆ, ಎರಡೂ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿಯರ್ಾದಿಯು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು, ಈ ಸಮಯ ಆರೋಪಿತ ದ್ವಿಚಕ್ರವಾಹನ ಸವಾರ ತಾನು ವೈದ್ಯಕೀಯ ಚಿಕಿತ್ಸೆಯ ಖರ್ಚನ್ನು ನೋಡಿಕೊಳ್ಳುತ್ತೇನೆಂದು ಒಪ್ಪಿದ್ದರಿಂದ ಪಿಯರ್ಾದಿಯು ಪೊಲೀಸ್ ಕಂಪ್ಲೇಂಟ್ ನೀಡದೇ ಇದ್ದು, ಇದೀಗ ಆರೋಪಿತ ಸವಾರ ವೈದ್ಯಕೀಯ ಚಿಕಿತ್ಸೆಯ ಖರ್ಚನ್ನು ನೀಡದೇ ಇದ್ದುದರಿಂದ ತಡವಾಗಿ ಪಿಯರ್ಾದುದಾರರು ದೂರು ನೀಡಿರುವುದಾಗಿದೆ ಎಂಬಿತ್ಯಾದಿಯಾಗಿ ಪಿಯರ್ಾದುದಾರರು ನೀಡಿದ ಲಿಖಿತ ಪಿಯರ್ಾದಿದಾರರಾದ ಸಂಜೀವ ಪ್ರಾಯ 75 ವರ್ಷ, ತಂದೆ ಕುಂಞ್ಞಪ್ಪ ಬೆಳ್ಚಡ, ವಾಸ; ಒಂಬತ್ತುಕೆರೆ, ಉಳ್ಳಾಲ ಗ್ರಾಮ, ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 62/2013 ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಭಾವಿಕ ಮರಣ ಪ್ರಕರಣ

ಮೂಲ್ಕಿ ಠಾಣೆ


  • ದಿನಾಂಕ: 03-03-2013 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ 04-03-2013ರ ಬಳಿಗ್ಗೆ 06-00 ಗಂಟೆಯ ಮದ್ಯೆ ಅವಧಿಯಲ್ಲಿ ಪಿರ್ಯಾದಿದಾರರ ಮಾವನ ಮನೆಯಾದ ಮಂಗಳೂರು ತಾಲೂಕು ಕವತ್ತಾರು ಗ್ರಾಮದ ಬಟ್ಟಬೆನ್ನಿಯ ಪ್ಯಾಟ್ರಿಕ್ ಡಿ'ಸೋಜಾ ರವರ ಮನೆಯಲ್ಲಿ ಮನೆಕೆಲಸಕ್ಕಿದ್ದ ಅಂಜಲಿನ್ ಡಿ'ಸೋಜಾ ರವರು ಯಾವುದೋ ವಿಷಯದಲ್ಲಿ ಬೇಸರಗೊಂಡು ಪ್ಯಾಟ್ರಿಕ್ ಡಿ'ಸೋಜಾ ರವರ ಮನೆಯ ಅಡುಗೆ ಕೋಣೆಯ ಮರದ ಜಂತಿಗೆ ಚೂಡಿದಾರ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ರಿಚಾಡರ್್ ಲೋಬೋ ಪ್ರಾಯ 40 ವರ್ಷ ತಂದೆ: ಆಂಟನಿ ಲೋಬೋ ವಾಸ: 'ಪ್ಲಾಟಿನಂ' , ಜಯರಾಮ ಪ್ರಸಾದ ಬಿಲ್ಡಿಂಗ್, ಪದವಿನಂಗಡಿ ಮಂಗಳೂರು ರವರು ನೀಡಿದ ದೂರಿನಂತೆ ಮೂಲ್ಕಿ ಠಾಣೆ ಯು.ಡಿ.ಆರ್ ನಂಬ್ರ 04/13 ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಗಂಡಸು ಕಾಣೆ

ದಕ್ಷಿಣ ಠಾಣೆ


  • ದಿನಾಂಕ 01-03-2013 ರಂದು ಬೆಳಿಗ್ಗೆ   10-00 ಗಂಟೆಗೆ ಫಿರ್ಯಾದುದಾರರ ತಮ್ಮನಾದ ಚಂದ್ರಶೇಖರ್ ರವರು ಕರುಳಿನ ತೊಂದರೆಯಿಂದ ಬಳಲುತ್ತಿದ್ದು, ಸುಮಾರು ಎರಡು ವಾರಗಳ ಹಿಂದೆ ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸದ್ರಿಯವರು ಸರಕಾರಿ ವೆನ್ಲಾಕ್ ಆಸ್ಪತ್ರೆಯಿಂದ ಡಿಶ್ಚಾಜರ್್ ಆಗಿ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಇವರ ಬಗ್ಗೆ ಸಂಬಂದಿಕರ ಮನೆಯಲ್ಲಿ ಹಾಗೂ ಇತರ ಕಡೆಗಳ್ಲಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ದೊರೆಯಲಿಲ್ಲ. ಆದುದರಿಂದ ಇವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 51/13 ಕಲಂ ಗಂಡಸು ಕಾಣೆ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 25-02-13 ರಂದು ಫಿರ್ಯಾದುದಾರರ ತಮ್ಮನಾದ ಹಮೀದ್, ಪ್ರಾಯ 40 ವರ್ಷ ಎಂಬವರು ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದು, ಆತನಿಗೆ ಅಪಸ್ಮಾರ ಕಾಯಿಲೆ ಉಲ್ಬಣಗೊಂಡಿದ್ದರಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ 108 ಅಂಬ್ಯುಲೆನ್ಸ್ ವಾಹನದಲ್ಲಿ ನೆರೆಕರೆಯವರು ಸೇರಿ ದಾಖಲು ಮಾಡಿರುತ್ತಾರೆ. ಈ ವಿಚಾರವನ್ನು ತಿಳಿದ ಫಿರ್ಯಾದುದಾರರು ದಿನಾಂಕ 26-02-13 ರಂದು ಬೆಳಿಗ್ಗೆ 09-00 ಗಂಟೆಗೆ ವೆನ್ಲಾಕ್ ಆಸ್ಪತ್ರೆಗೆ ಬಂದು ಹಮೀದ್ನ ಬಗ್ಗೆ ವಿಚಾರಿಸಿದಾಗ ಅಲ್ಲಿನ ದಾದಿಯರು ಆತನು ಹೇಳದೇ ಕೇಳದೆ ಬೆಳಗ್ಗಿನ ಜಾವ ಎಲ್ಲಿಗೋ ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ. ನಂತರ ಫಿರ್ಯಾದುದಾರರು ಮಂಗಳೂರಿನಲ್ಲಿ ಹಾಗೂ ಸಂಬಂದಿಕರ ಮನೆಯಲ್ಲಿ ವಿಚಾರಿಸಿದಾಗ ಹಮೀದ್ನ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಆದುದರಿಂದ ಕಾಣೆಯಾದ ಹಮೀದ್ನನ್ನು ಪತ್ತೆ ಮಾಡಿಕೊಡುವಂತೆ ಫಿರ್ಯಾದಿದಾರರಾದ ಅಬ್ದುಲ್ಲಾ ಪ್ರಾಯ 50 ವರ್ಷ, ತಂದೆ: ದಿ: ಅಬೂಬಕ್ಕರ್, ವಾಸ: ಮೇಗಿನ ಪೇಟೆ, ವಿಟ್ಲ ಪೋಸ್ಟ್, ಬಂಟ್ವಾಳ ತಾಲೂಕು, ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 5213 ಕಲಂ ಗಂಡಸು ಕಾಣೆ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment