Sunday, March 31, 2013

Daily Crime Incidents for March 31, 2013


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ

  • ದಿನಾಂಕ: 30-03-2013 ರಂದು ಸಮಯ ಸುಮಾರು 18.30 ಗಂಟೆಗೆ ಬಸ್ಸು ನಂಬ್ರ ಏಂ-19 ಃ-6509 ನ್ನು ಅದರ ಚಾಲಕ ನಂದೀಶ ಎಂಬವರು ಕುಲಶೇಖರ ಕಲ್ಪನೆ ಕಡೆಯಿಂದ ಶಕ್ತಿನಗರ ಕ್ರಾಸ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕುಲಶೇಖರ - ಕಲ್ಪನೆ ಬಳಿ ನಿಮರ್ಾಣ ಹಂತದಲ್ಲಿರುವ ಪ್ಲಾಮಾ ಹೆಸರಿನ ಬಿಲ್ಡಿಂಗ್ ಎದುರು ತಲುಪುವಾಗ ಬಸ್ಸಿನ ವೇಗವನ್ನು ನಿಯಂತ್ರಿಸಲಾಗದೆ ಬಸ್ಸು ರಸ್ತೆಯ ಸಂಪೂರ್ಣ ಎಡಕ್ಕೆ ಚಲಿಸಿ ರಸ್ತೆಬದಿಯಲ್ಲಿದ್ದ  ಮಣ್ಣು ದಿಬ್ಬದ ಮೇಲೆ ಹತ್ತಿ ಬಲಭಾಗಕ್ಕೆ ಮಗುಚಿ ಬಿದ್ದ ಪರಿಣಾಮ ಚಾಲಕರಾಗಿದ್ದ ನಂದೀಶ್ ಎಂಬವರು ಸಕರ್ಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದು ಬಸ್ಸಿನಲ್ಲಿ ಪ್ರಯಾಣಿಕರಾಗಿದ್ದ ಪಿರ್ಯಾದುದಾರರಾದ ವಿಜಯ ಕುಮಾರ್  (45 ವರ್ಷ) ತಂದೆ: ಕಿಟ್ಟಣ್ಣ,   ವಾಸ: #10-65/17, ಲಕ್ಷ್ಮಿ ನಿವಾಸ, ಸಂಜಯನಗರ, ಶಕ್ತಿನಗರ,  ಮಂಗಳೂರು ರವರು ಮತ್ತು ತೇಜಶ್ವಿನಿ ಎಂಬವರಿಗೆ ಗುದ್ದಿದ ಗಾಯವಾಗಿ ಎ ಜೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಗಾಯಗೊಂಡು ನಗರದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಿರುತ್ತಾರೆ ಎಂಬುದಾಗಿ ವಿಜಯ ಕುಮಾರ್  ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 65/2013 279,337, 304(ಂ)  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕೊಣಾಜೆ ಠಾಣೆ

  • ದಿನಾಂಕ:29-03-2013 ರಂದು ಪಿರ್ಯಾದಿದಾರರಾದ  ನಾಗೇಂದ್ರ ಹಾಗು ತಿಪ್ಪಮ್ಮ ಪ್ರೇಮ, ವೆಂಕಟೇಶ, ಚಂದ್ರಪ್ಪ, ಕರಿಬಸಪ್ಪ, ಮೀನಾಕ್ಷಿ, ತಿಪ್ಪೇಸ್ವಾಮಿ, ರವರುಗಳು ಹರೇಕಳ ಗ್ರಾಮದ ಎಲಿಯಾರ್‌ಪದವು ರಾಜೀವ್‌ಗಾಂಧಿ ಎಂಬಲ್ಲಿನ ಸ್ಯೆಟ್‌ನಲ್ಲಿ ಕಾಂಕ್ರೀಟ್‌ ಕೆಲಸ ಮುಗಿಸಿ ಗೊತ್ತುಪಡಿಸಿದ ಆರೋಪಿ ಬಾಬ್ತು ಕೆಎ 26-ಎ1269 ನೇ ಟೆಂಪೋದಲ್ಲಿ ಎಲಿಯಾರು ಪದವಿನಿಂದ ತೊಕ್ಕೋಟ್ಟು ಕಡೆಗೆ ಹೊರಟು ಪ್ರಯಾಣಿಸಿ ಸಂಜೆ 6-00 ಗಂಟೆ ವೇಳೆಗೆ ಹರೇಕಳ ಗ್ರಾಮದ ಎಲಿಯಾರ್‌ಪದವು ರಾಜೀವ್‌ಗಾಂಧಿ ನಗರದ ತಲುಪುತ್ತಿದ್ದಂತೆ ತಿರುವು ರಸ್ತೆಯಲ್ಲಿ ಆರೋಪಿ ತನ್ನ ಬಾಬ್ತು ಟೆಂಪೋವನ್ನು ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ಒಮ್ಮಲೇ ಎಡಕ್ಕೆ ತಿರುಗಿಸಿದ ಪರಿಣಾಮ ಟೆಂಪೊ ನೀಯಂತ್ರಣ ತಪ್ಪಿ ಎಡಬದಿಗೆ ಮಗುಚಿ ಬಿದ್ದ ಪರಿಣಾಮ ಟೆಂಪೋದಲ್ಲಿದ್ದ  ಪಿರ್ಯಾದಿ ಹಾಗು ತಿಪ್ಪಮ್ಮ, ಪ್ರೇಮ, ವೆಂಕಟೇಶ, ಚಂದ್ರಪ್ಪ, ಕರಿಬಸಪ್ಪ, ಮೀನಾಕ್ಷಿ, ತಿಪ್ಪೇಸ್ವಾಮಿ,ರವರಿಗೆ ಗುದ್ದಿದ ಗಾಯ ಹಾಗು ರಕ್ತ ಗಾಯವಾಗಿರುವುದಾಗಿದೆ ಎಂಬುದಾಗಿ ನಾಗೇಂದ್ರ (26) ತಂದೆ: ದಿ|ವೀರಪ್ಪ ವಾಸ: ಬೆಳಿಚೋಡು ಆನೆಕಲ್‌ ಗ್ರಾಮ ಜಗಳೂರು, ದಾವಣಗೆರೆ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 81/2013 ಕಲಂ: 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ತೌಷಿಫ್ ಅಹಮದ್ ರವರು ದಿನಾಂಕ 29-03-2013 ರಂದು ಅವರ ಅಂಗಡಿ ಮಾಲಿಕರಾದ ನಿಯಾಜ್ ರವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ ಎ 19 ಎಸ್ 7609  ನೇದರಲ್ಲಿ ಸಹಸವಾರರನ್ನಾಗಿ ಮಹಮ್ಮದ್ ಅಕ್ಬರ್ ಎಂಬವರನ್ನು ಕುಳ್ಳಿರಿಸಿಕೊಂಡು ಸುರತ್ಕಲ್ ನಿಂದ ಕೋಡಿಕೆರೆ ಮಾರ್ಗವಾಗಿ ಬಜ್ಪೆ ಗೆ ಹೋಗುತ್ತಾ ಸಮಯ ಸುಮಾರು 14-30 ಗಂಟೆ ಗೆ ಕೋಡಿಕೆರೆ ಕ್ರಾಸ್ ಪೆಟ್ರೋಲ್ ಪಂಪ್ ನ ಸ್ವಲ್ಪ ಮುಂದೆ ಹೋಗುತ್ತಿರುವಾಗ ಆಪಾದಿತ ರಾಮಣ್ಣ ಶೆಟ್ಟಿಯವರು ಕೆ ಎ 19 ಎಮ್ ಸಿ 3909 ನೇ ರಿಟ್ಜ್  ಕಾರನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದು ಯಾವುದೇ ಮುನ್ಸೂಚನೆಯನ್ನು ನೀಡದೇ ಆಪಾದಿತರು ಕಾರನ್ನು ಬಲಕ್ಕೆ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಹಾಗೂ ಸಹ ಸವಾರ ಮೋಟಾರು  ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಇದರ ಪರಿಣಾಮ ಪಿರ್ಯಾದಿದಾರರಿಗೆ ಹಾಗೂ ಸಹಸವಾರರಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ತೌಷಿಫ್ ಅಹಮದ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 91/2013 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ

  • ದಿನಾಂಕ : 30-03-2013 ರಂದು ಬೆಳಿಗ್ಗೆ 04-00 ಗಂಟೆಗೆ ಪಿರ್ಯಾದಿದಾರರಾದ ಗ್ರೇಗೋರಿ ಮೊಂತೇರೊ ಪ್ರಾಯ 35 ವರ್ಷ, ತಂದೆ : ದಿ/ ಕಲಾನಿ ಮೊಂತೇರೊ, ವಾಸ : ದುರ್ಗಾದೇವಿ ಕಂಪೌಂಡ್‌, ಬೋಳಾರ,  ಮಂಗಳೂರು ತಾಲೂಕು ರವರು ಅವರ ಸ್ನೇಹಿತರಾದ ಸತೀಶ್‌  ಮತ್ತು ಚಾಲಕ ವಿನೋದ ಪೂಜಾರಿ ಎಂಬವರೊಂದಿಗೆ ಆಟೋರಿಕ್ಷಾ ನಂಬ್ರ ಕೆಎ 19 ಸಿ 9496 ನೇದರಲ್ಲಿ ಕೋಣಾಜೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಕಲ್ಸಂಕ ಎಂಬಲ್ಲಿ  ಆಟೋರಿಕ್ಷಾ ಚಾಲಕನು ತನ್ನ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತಗೆ ಹಾಕಿದ ಹಮ್ಸ್‌ನ ಬಳಿ ಒಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ ಆಟೋರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಎಡ ಮಗ್ಗುಲಾಗಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿಯ ಸ್ನೇಹಿತನಾದ ಸತೀಶ ಎಂಬವನು ಆಟೋರಿಕ್ಷಾದಿಂದ ಎಸೆಯಲ್ಪಟ್ಟು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆತನ ಎಡ ಕಣ್ಣಿನ ಹುಬ್ಬಿನಲ್ಲಿ ರಕ್ತಗಾಯವಾಗಿದ್ದು, ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಸತೀಶನನ್ನು 108 ನೇ ಅಂಬ್ಯುಲೆನ್ಸ್‌ನಲ್ಲಿ ಮೂಡಬಿದ್ರೆ ಆಳ್ವಾಸ್‌ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ದಾರಿಯ ಮಧ್ಯೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಗ್ರೇಗೋರಿ ಮೊಂತೇರೊ ರವರು ನೀಡಿದ ದೂರಿನಂತೆ ಮೂಡಬಿದ್ರೆ ಪೊಲೀಸು ಠಾಣೆ. ಅ.ಕ್ರ. 65/2013, ಕಲಂ : 279, 304 (ಎ) ಐಪಿಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ

  • ಪಿರ್ಯಾದಿದಾರರಾದ ಮಹಮ್ಮದ್ ರಜಾಕ್, ಪ್ರಾಯ 26 ವರ್ಷ, ತಂದೆ: ಮೊದೀನ್ ಹಮೀದ್, ವಾಸ: ಬೈತುಲ್ ಹಮೀದ್ ಕಂಪೌಂಡ್, ಸುಭಾಷ್ ನಗರ, ಮಂಗಳೂರು ಎಂಬವರು ಮಂಗಳೂರು ಅಳಕೆ ಬಳಿ ಇರುವ ಮಟನ್ ಸ್ಟಾಲ್ ನಲ್ಲಿ ಕೆಲಸವಾಗಿದ್ದು, ಈ ದಿನ ದಿನಾಂಕ 30-03-2013 ರಂದು ಪಿರ್ಯಾದಿದಾರರು ತನ್ನ ಸ್ನೇಹಿತನಾದ ಮಹಮ್ಮದ್ ನವಾಜ್ ಎಂಬವರ ಬಾಬ್ತು ಮಂಗಳೂರು ಬಂದರು ಜೆ.ಎಂ. ರಸ್ತೆಯ ಸಿಟಿ ಸ್ಟೀಲ್ ಆಫೀಸ್ ನಲ್ಲಿರುವಾಗ ಸುಮಾರು 14:30 ಗಂಟೆ ಸಮಯಕ್ಕೆ ಆರೋಪಿತರಾದ ನಯೀಮ್ ಮತ್ತು ಇತರ 3 ಜನ ಆರೋಪಿಗಳು ಸದ್ರಿ ಆಫಿಸ್ಗೆ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ "ಸೂಳೇ ಮಗನೆ, ನಮ್ಮ ಹಣದ ಸಟ್ಲಮೆಂಟ್ ಮಾಡುವುದಿಲ್ಲವೇ" ಎಂದು ಬೆದರಿಸಿ, ಪಿರ್ಯಾದಿದಾರರಿಗೆ ಎಡಬದಿಯ ಅಳ್ಳೆಗೆ, ಎಡಕೈ ಹೆಗಲಿಗೆ, ಮುಖಕ್ಕೆ ಕೈಯಿಂದ ಹೊಡೆದು, ಪಿರ್ಯಾದಿದಾರರ ಸ್ನೇಹಿತನಾದ ಮಹಮ್ಮದ್ ನವಾಜ್ ರವರ ಆಫಿಸ್ನ ಗ್ಲಾಸ್ನ್ನು ಕೈಯಿಂದ ಗುದ್ದಿ ಹುಡಿ ಮಾಡಿದ್ದು, ಆರೋಪಿತರ ಪೈಕಿ ಆರೋಪಿ ನಯೀಮ್ ಎಂಬವರು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದಿದ್ದು, ನಂತರ ಪರಸ್ಪರರಲ್ಲಿ ಉರುಡಾಟವಾಗಿ, ಪಿರ್ಯಾದಿದಾರರನ್ನು ಆರೋಪಿತರು ಆಫೀಸ್ನಿಂದ ಹೊರಗೆ ಎಳೆದು ಹಾಕಿದ್ದು, ಆರೋಪಿ ನಯೀಮ್ನು ಕೈಯಲ್ಲಿದ್ದ ಕಬ್ಬಿಣದ ರಾಡ್ನ್ನು ಅಲ್ಲಿಯೇ ಬಿಸಾಡಿ ಹೋಗಿದ್ದು, ಆರೋಪಿತರ ಪೈಕಿ ಒಬ್ಬನು ಚೈನ್ ಹಾಕಿಕೊಂಡಿದ್ದು, ಆರೋಪಿ ನಯೀಮ್ನು ಪಿರ್ಯಾದಿದಾರರಿಗೆ ಪರಿಚಯವಿದ್ದು, ಪಿರ್ಯಾದಿದಾರರು ಆರೋಪಿ ನಯೀಮ್ನಿಗೆ ಹಣದ ವಿಚಾರದಲ್ಲಿ ವ್ಯವಹಾರ ಇದ್ದು, ಹಣವನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸಿಲ್ಲ ಎಂಬುದಾಗಿ ಹಲ್ಲೆಗೆ ಕಾರಣವಾಗಿದ್ದು, ಹಲ್ಲೆಗೆ ಕಾರಣರಾದ ಆರೋಪಿತರಾದ ನಯೀಮ್ ಮತ್ತು ಇತರ ಮೂರು ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮಹಮ್ಮದ್ ರಜಾಕ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 73/2013 ಕಲಂ 448, 504, 506, 323, 427 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




No comments:

Post a Comment