Wednesday, March 20, 2013

Daily Crime Incidents for March 20, 2013


ವಾಹನ ಕಳವು ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಕುಮಾರಿ ಅನುಷಾ ಪ್ರಾಯ 22 ವರ್ಷ, ತಂದೆ: ಗೋಪಾಲ ಪಿ.ಕೆ. ನಂಬ್ರ 30 , ಎ.ಪಿ. ನಿಲಯ, 2ನೇ ಕ್ರಾಸ್, ಎಲ್.ಬಿ.ಶಾಸ್ತ್ರಿನಗರ್, ಹಾಲ್ ಪೋಸ್ಟ್, ಬೆಂಗಳೂರು ರವರು ವೈಧ್ಯಕೀಯ ವಿಧ್ಯಾಥರ್ಿನಿಯಾಗಿದ್ದು, ಇಂಟರ್ನ್ಶಿಪ್ ನಿಮಿತ್ತ, ದಿನಾಂಕ  15-03-2013 ರಂದು ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಆವರಣದಲ್ಲಿ  ತನ್ನ ಬಾಬ್ತು ಅಂದಾಜು ಬೆಲೆ ರೂ 22,000/- ಮೌಲ್ಯದ ಕೆ.ಎ 03 ಹೆಚ್ಸಿ 6260 ನೇ ಹೊಂಡಾ ಆ್ಯಕ್ಟಿವಾ ಸ್ಕೂಟರನ್ನು ಬೆಳಗ್ಗೆ   08-45 ಗಂಟೆಗೆ ಪಾಕರ್್ ಮಾಡಿ ನಂತರ ಆಸ್ಪತ್ರೆಗೆ ಹೋಗಿ ಮಧ್ಯಾಹ್ನ 13-00 ಗಂಟೆಗೆ ತಾನು ಪಾಕರ್್ ಮಾಡಿದ್ದ ಸ್ಕೂಟರ್ನ  ಬಳಿಗೆ ಬಂದಾಗ ಫಿಯರ್ಾದುದಾರರು ಪಾಕರ್್ ಮಾಡಿದ್ದ ಸ್ಕೂಟರ್ ಅಲ್ಲಿರದೇ ಇದ್ದು, ಸದ್ರಿ ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇತರ ವೈಧ್ಯಕೀಯ ತುತರ್ು ಕೆಲಸ ಇದ್ದುದರಿಂದ ಈ ದಿನ ದೂರು ನೀಡಿರುವುದು ಎಂಬುದಾಗಿ ಅನುಷಾ  ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅ.ಕ್ರ. 74/13 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ: 06.02.2013 ರಂದು ರಾತ್ರಿ ಸುಮಾರು 19:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ನಿತೀಶ್ ರವರು ತನ್ನ ಬಾಬ್ತು ಬಜಾಜ್ ಪಲ್ಸರ್ 180 ಮೋಟಾರ್ ಬೈಕ್ನ್ನು ಮಂಗಳೂರು ನಗರದ ಅಳಪೆ ಗ್ರಾಮದ ಪಡೀಲ್ ಎಂಬಲ್ಲಿ ಗುಡ್ಲೈಫ್ ಫನರ್ೀಚರ್ ಅಂಗಡಿಯ ಮುಂಭಾಗ ಮಣ್ಣು ರಸ್ತೆಯಲ್ಲಿ ಪಾಕರ್್ ಮಾಡಿ 19:45 ಗಂಟೆಗೆ ಬಂದು ನೋಡಿದಾಗ ಮೊಟಾರ್ ಬೈಕ್ ಕಾಣೆಯಾಗಿರುವುದಾಗಿಯೂ ಕಾಣೆೆಯಾದ ಮೋಟಾರ್ ಬೈಕನ್ನು ಅಂದಿನಿಂದ ಈ ತನಕ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದುದರಿಂದ ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಮೋಟಾರ್ ಬೈಕ್ನ ಅಮದಾಜು ಮೌಲ್ಯ ರೂಪಾಯಿ 45,000/- ಆಗಬಹುದು ಎಂಬುದಾಗಿ ದೂರಿನ ಸಾರಾಂಶದಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 73/13 ಕಲಂ : 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ದರೋಡೆ ಪ್ರಕರಣ

ಉರ್ವ ಪೊಲೀಸ್ ಠಾಣೆ


  • ದಿನಾಂಕ:19-03-2013 ರಂದು ಫಿರ್ಯಾದಿದಾರರಾದ ಶ್ರೀಮತಿ.ಪ್ರೇಮಾ ಪ್ರಾಯ:56 ವರ್ಷ, ಗಂಡ:ದಿವಂಗತ ರಾಮ ಸಾಳಿಯಾನ್, ವಾಸ:ವಿಘ್ನೇಶ್ ಇಂಡಸ್ಟ್ರೀಸ್ ಎದುರುಗಡೆ,ಕೋಡಿಕಲ್ ಪ್ರೈಮರಿ ಶಾಲೆಯ ಹತ್ತಿರ,ಕೋಡಿಕಲ್, ಮಂಗಳೂರು ರವರು ಎಂದಿನಂತೆ ಮನೆಯಲ್ಲಿ ಕಟ್ಟಿದ ಬೀಡಿಯನ್ನು ಉರ್ವಸ್ಟೋರಿನಲ್ಲಿರುವ ಬೀಡಿ ಬ್ರಾಂಚಿಗೆ ಕೊಟ್ಟು ವಾಪಸು ಕಲ್ಬಾವಿ ರಸ್ತೆಯ, ಕೋಡಿಕಲ್ ವಿಘ್ನೇಶ್ ಇಂಡಸ್ಟ್ರೀಸ್ ಎದುರಿನ ರಸ್ತೆಯಲ್ಲಿ  ನಡೆದುಕೊಂಡು ಮನೆಗೆ  ಬರುತ್ತಿರುವಾಗ, ಬೆಳಿಗ್ಗೆ ಸಮಯ ಸುಮಾರು 11-15 ಗಂಟೆಗೆ ಎದುರುಗಡೆಯಿಂದ ಕಪ್ಪು ಬಣ್ಣದ ಮೋಟಾರು ಸೈಕಲಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರ ಹತ್ತಿರಕ್ಕೆ ಮೋಟಾರು ಸೈಕಲನ್ನು ತಂದು ಹಿಂಬಾಗದಲ್ಲಿ ಕುಳಿತುಕೊಂಡಿದ್ದವನು  ಒಮ್ಮೇಲೆ ಫಿರ್ಯಾದಿದಾರರ ಕುತ್ತಿಗೆ ಕೈ ಹಾಕಿ  ಕುತ್ತಿಗೆಯಲ್ಲಿ ಧರಿಸಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿದೆ. ಸುಲಿಗೆಯಾದ ಚಿನ್ನದ ಅಂದಾಜು ಮೌಲ್ಯ ರೂ.50,000/- ಆಗಬಹುದು ಎಂಬುದಾಗಿ .ಪ್ರೇಮಾ ರವರು ನೀಡಿದ ದೂರಿನಂತೆ ಉವರ್ಾ ಪೊಲೀಸ್ ಠಾಣೆ ಅ.ಕ್ರ 18/2013 ಕಲಂ: 392 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 19-03-2013 ರಂದು ಸಮಯ ಸುಮಾರು 17-45 ಗಂಟೆಗೆ  ಪಿರ್ಯಾದುದಾರರಾದ ಸನತ್ ರೈ (19 ವರ್ಷ) ತಂದೆ: ವಿಠಲ ರೈ ವಾಸ: ಶ್ರೀ ಗುರೂಜೀ ನಿಲಯ, ಕಾಮರ್ಿಕ ಕಾಲೋನಿ, ಕಲ್ಪನೆ, ಮಂಗಳೂರು ರವರು ತನ್ನ ಬಾಬ್ತು ಮೊ,ಸೈಕಲ್ ನಂಬ್ರ ಏಂ- 19 ಇಉ- 5142 ನ್ನು  ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಜಿಮ್ಮಿ ಸೂಪರ್ ಮಾಕರ್ೆಟ್ ದಾಟಿ ಚೆಪ್ಸ್ ಹೋಟೆಲ್ ಎದುರು ತಲುಪಿದಾಗ ಹಿಂದಿನಿಂದ ಅಂದರೆ ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಬಸ್ ನಂಬ್ರ    ಏಂ- 19 -ಅ-5288 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ನ್ನು ಓವರ್ಟೇಕ್ ಮಾಡುವಾಗ ಪಿರ್ಯಾದುದಾರರ ಮೊ,ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕೈ ತೋಳಿಗೆ ತರಚಿದ ಗಾಯ, ಬಲಕಾಲ ಮೊಣ ಗಂಟಿಗೆ ರಕ್ತಗಾಯ ಹಾಗೂ ಸೊಂಟದ ಬಲಭಾಗಕ್ಕೆ ಗುದ್ದಿದ ಗಾಯ ಉಂಟಾಗಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸನತ್ ರೈ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 57/2013 279, 337  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮುಲ್ಕಿ ಪೊಲೀಸ್ ಠಾಣೆ


  • ದಿನಾಂಕ  19.,03.2013  ರಂದು  15:30  ಗಂಟೆಗೆ  ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ  ಕೆರೆಕಾಡು ಕೆನರಾ ಲೈಟಿಂಗ್ಸ್ ಬಳಿ  ಕೆಎ-19-ಡಿ  -4882ನೇ ಟ್ಯಾಂಕರ್ ಚಾಲಕ  ರಾಜೇಶ್ ಎಂಬಾತನು ಕಿನ್ನಿಗೋಳಿ ಕಡೆಯಿಂದ ಮುಲ್ಕಿ  ಕಡೆಗೆ  ಅತಿವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಎದುರಿನಿಂದ ಪಿರ್ಯಾದಿದಾರರಾದ ಶ್ರೀಮತಿ ಸುಮತಿ ಸದಾನಂದ ಶೆಟ್ಟಿ  ಪ್ರಾಯ:  49 ವರ್ಷ  ಗಂಡ:  ಸದಾನಂದ ಶೆಟ್ಟಿ   ವಾಸ:  ಇ2 ಸೆಕ್ಟರ್ -19,  ಭೀಮಾ ಶಂಕರ್, ನೆರೋಲ್ ನವಿ, ಮುಂಬೈ, ಮಹಾರಾಷ್ಟ್ರ ರಾಜ್ಯ ರವರು ಪ್ರಯಾಣಿಸುತ್ತಿದ್ದ ಕುಮಾರ್ ಶೆಟ್ಟಿ  ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ  ಎಂ.ಹೆಚ್.-43-ಎಕ್ಸ್-3715 ನೇ ನಂಬ್ರದ ವ್ಯಾಗನರ್ ಕಾರಿಗೆ ಜಖಂ ಆಗಿದ್ದು ಕಾರಿನಲ್ಲಿದ್ದ ಪಿಯರ್ಾದಿದಾರರಿಗೆ ಹಣೆಯ ಬಲಬದಿಗೆ ಮತ್ತು ಗಲ್ಲಕ್ಕೆ ಗುದ್ದಿದ್ದ ಗಾಯವಾಗಿದ್ದು ಕುಮಾರ್ ಶೆಟ್ಟಿ (32), ರವರಿಗೆ ತಲೆಗೆ ,ಮೂಗಿಗೆ ಬಲಕೈಗೆ ರಕ್ತಗಾಯವಾಗಿದ್ದು, ಟ್ಯಾಂಕರ್ ಚಾಲಕ ರಾಜೇಶನಿಗೂ ಗಾಯವಾಗಿದ್ದು  ಗಾಯಾಳು ಕಿನ್ನಿಗೋಳಿ ಕನ್ಸೆಟ್ಟಾ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿ  ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುಮತಿ ಸದಾನಂದ ಶೆಟ್ಟಿ  ಯವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ  46/2013  ಕಲಂ : 279, 337 ಐಪಿಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

No comments:

Post a Comment